Tag: Fake Doctors

  • ರಾಜ್ಯಸಭೆಯಲ್ಲಿ ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಈರಣ್ಣ ಕಡಾಡಿ

    ರಾಜ್ಯಸಭೆಯಲ್ಲಿ ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಈರಣ್ಣ ಕಡಾಡಿ

    ನವದೆಹಲಿ: ಅರ್ಹತೆ ಮತ್ತು ತರಬೇತಿ ಇಲ್ಲದ ವೈದ್ಯಕೀಯ ವೃತ್ತಿಪರರು, ನಕಲಿ ವೈದ್ಯರು (Fake Doctors) ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಜನರ ಜೀವಕ್ಕೆ ಗಂಭೀರ ಅಪಾಯವನ್ನುಂಟು ಮಾಡುತ್ತಿದ್ದಾರೆ. ಸಮಸ್ಯೆಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಅನಧಿಕೃತ ವೈದ್ಯರು ಮತ್ತು ಚಿಕಿತ್ಸಾಲಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಈರಣ್ಣ ಕಡಾಡಿ (Iranna Kadadi) ಒತ್ತಾಯಿಸಿದ್ದಾರೆ.

    ರಾಜ್ಯಸಭೆಯಲ್ಲಿ (Rajya Sabha) ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಹೆಚ್ಚುತ್ತಿರುವ ನಕಲಿ ಚಿಕಿತ್ಸಾ ಪ್ರಕರಣಗಳ ಕುರಿತು ಸರ್ಕಾರದ ಗಮನ ಸೆಳೆದು, ನಕಲಿ ಶಸ್ತ್ರಚಿಕಿತ್ಸೆಗಳನ್ನು ತಡೆಗಟ್ಟಲು ಆಸ್ಪತ್ರೆಗ ನಿಯಮಿತ ಲೆಕ್ಕಪರಿಶೋಧನೆಯನ್ನು ಕಡ್ಡಾಯಗೊಳಿಸಬೇಕೆಂದು ಆಗ್ರಹಿಸಿದರು.

    ಶತಮಾನಗಳಿಂದ ಜನ ಸಾಮಾನ್ಯರು ವೈದ್ಯರಿಗೆ ದೇವರ ಸ್ಥಾನಮಾನ ನೀಡಿದ್ದಾರೆ. ಆದರೆ ಇಂದು ವೈದ್ಯಕೀಯ ಕ್ಷೇತ್ರದಲ್ಲಿನ ಅತಿಯಾದ ವಾಣಿಜ್ಯೀಕರಣವು ಈ ವೃತ್ತಿಯ ಘನತೆಯನ್ನು ಅಪಾಯಕ್ಕೆ ಸಿಲುಕಿಸಿದೆ. ಮೊದಲು ವೈದ್ಯ ವೃತ್ತಿ ಸೇವೆಯಾಗಿತ್ತು. ಆದರೆ ಈಗ ಅದು ಲಾಭ-ಆಧಾರಿತ ಉದ್ಯಮವಾಗಿದೆ. ವೈದ್ಯಕೀಯ ಕಾಲೇಜುಗಳ ಹೆಚ್ಚಿನ ಶುಲ್ಕಗಳು, ಖಾಸಗಿ ಆಸ್ಪತ್ರೆಗಳ ಸಂಖ್ಯೆಯಲ್ಲಿನ ಹೆಚ್ಚಳ ಮತ್ತು ಆರೋಗ್ಯ ಸೇವೆಗಳ ಖಾಸಗೀಕರಣವು ಅದನ್ನು ಮಾರುಕಟ್ಟೆ ಆಧಾರಿತ ವ್ಯವಸ್ಥೆಯಾಗಿ ಪರಿವರ್ತನೆಗೊಂಡಿದೆ . ಇದನ್ನೂ ಓದಿ: ಸೂಲಿಬೆಲೆ ವಿರುದ್ಧ ಉಳ್ಳಾಲದಲ್ಲಿ ಎಫ್‌ಐಆರ್‌ ದಾಖಲು

    ವಿಮಾ ಮೊತ್ತದ ಲಾಭ ಪಡೆಯಲು ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಪಿತ್ತಕೋಶ ತೆಗೆಯುವಿಕೆ, ಆಂಜಿಯೋಪ್ಲ್ಯಾಸ್ಟಿ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯಂತಹ ವಿಧಾನಗಳನ್ನು ಈಗ ಅನೇಕ ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ಅನೇಕ ಆಸ್ಪತ್ರೆಗಳಲ್ಲಿ, ವೈದ್ಯರ ಆದಾಯವು ಅವರು ಮಾಡುವ ಶಸ್ತ್ರಚಿಕಿತ್ಸೆಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ ಮತ್ತು ಅವರಿಗೆ ಗುರಿಗಳನ್ನು ನೀಡಲಾಗುತ್ತದೆ. ಇದರಿಂದಾಗಿ ರೋಗಿಗಳು ಅನಗತ್ಯ ಶಸ್ತ್ರಚಿಕಿತ್ಸೆಗಳಿಗೆ ತಳ್ಳಲ್ಪಡುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಇದನ್ನೂ ಓದಿ: ನಿಲ್ಲಿಸಿದ್ದ ಕ್ರೇಟಾ ಕಾರಿನ ನಾಲ್ಕು ಚಕ್ರ ಕದ್ದ ಖದೀಮರು – ಕಳ್ಳರ ಕರಾಮತ್ತಿನ ವಿಡಿಯೋ ಸೆರೆ

    ಕೇಂದ್ರ ಸರ್ಕಾರ ಬಡವರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಆಯುಷ್ಮಾನ್ ಭಾರತ್‌ನಂತಹ ಯೋಜನೆಗಳನ್ನು ಪ್ರಾರಂಭಿಸಿತು. ಆದರೆ ಈಗ ನಕಲಿ ಶಸ್ತ್ರಚಿಕಿತ್ಸೆಗಳ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದು ರೋಗಿಗಳ ಸುರಕ್ಷತೆ ಮತ್ತು ಸರ್ಕಾರಿ ಯೋಜನೆಗಳ ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರುತ್ತಿದೆ. ರೋಗಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ವೈದ್ಯಕೀಯ ವೃತ್ತಿಯ ಘನತೆಯನ್ನು ಕಾಪಾಡಿಕೊಳ್ಳಲು ಸರ್ಕಾರಿ ಆರೋಗ್ಯ ಯೋಜನೆಗಳಲ್ಲಿ ವಂಚನೆಯನ್ನು ತಡೆಗಟ್ಟಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ಇದನ್ನೂ ಓದಿ: 67 ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಪಟ್ಟಿ ನವೀಕರಿಸಿದ ಗೃಹ ಸಚಿವಾಲಯ

  • ಸಾರ್ವಜನಿಕರೇ ಬೀ ಕೇರ್‌ಫುಲ್ – ರಾಜ್ಯದಲ್ಲಿ ಇದ್ದಾರೆ ಬರೋಬ್ಬರಿ 1,436 ನಕಲಿ ವೈದ್ಯರು

    ಸಾರ್ವಜನಿಕರೇ ಬೀ ಕೇರ್‌ಫುಲ್ – ರಾಜ್ಯದಲ್ಲಿ ಇದ್ದಾರೆ ಬರೋಬ್ಬರಿ 1,436 ನಕಲಿ ವೈದ್ಯರು

    ಬೆಂಗಳೂರು: ಭ್ರೂಣ ಹತ್ಯೆ ಮಧ್ಯೆ ನಕಲಿ ವೈದ್ಯರ (Fake Doctors) ಹಾವಳಿ ಹೆಚ್ಚಾಗುತ್ತಿದೆ. ಸದನದಲ್ಲಿ ಕೂಡ ನಕಲಿ ವೈದ್ಯರ ವಿಚಾರವಾಗಿ ಆರೋಗ್ಯ ಇಲಾಖೆಯನ್ನು (Health Department) ಪ್ರಶ್ನಿಸುತ್ತಾ ಇದ್ದಾರೆ. ಸ್ಕ್ಯಾನಿಂಗ್ ಸೆಂಟರ್‌ಗಳ ಜೊತೆ ನಕಲಿ ವೈದ್ಯರಿಗೆ ಆರೋಗ್ಯ ಇಲಾಖೆ ಬಲೆ ಬೀಸಿದೆ.

    ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಭ್ರೂಣ ಹತ್ಯೆ ಮತ್ತು ನಕಲಿ ವೈದ್ಯರ ವಿಷಯ ಚರ್ಚೆ ಆಗುತ್ತಿದೆ. ಭ್ರೂಣ ಹತ್ಯೆ ಮತ್ತು ನಕಲಿ ವೈದ್ಯರಿಗೆ ಕಡಿವಾಣ ಹಾಕಲ್ಲ ಎಂದು ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಹರಿಹಾಯುತ್ತಿದ್ದಾರೆ. ಹೀಗಾಗಿ ಎಚ್ಚೆತ್ತಿರುವ ಆರೋಗ್ಯ ಇಲಾಖೆ ಸ್ಕ್ಯಾನಿಂಗ್ ಸೆಂಟರ್ ಮತ್ತು ನಕಲಿ ವೈದ್ಯರ ಮೇಲೆ ದಾಳಿ ಮಾಡಿ ಡಿಸೆಂಬರ್ 32ರ ಒಳಗಡೆ ವರದಿ ಸಲ್ಲಿಸಲು ಸೂಚಿಸಿದೆ. ಈಗಾಗಲೇ ರಾಜ್ಯದಲ್ಲಿ ನಕಲಿ ವೈದ್ಯರ ಬಗ್ಗೆ ಆರೋಗ್ಯ ಇಲಾಖೆ ವರದಿ ಕಲೆ ಹಾಕಿದ್ದು, ರಾಜ್ಯದ 31 ಜಿಲ್ಲೆಗಳಲ್ಲೂ ಬರೋಬ್ಬರಿ 1,436 ನಕಲಿ ವೈದ್ಯರು ಇದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಕರ್ನಾಟಕದಿಂದ ಘಂಟೆ, ಪೂಜಾ ಸಾಮಾಗ್ರಿ ಸಮರ್ಪಣೆ

    ಇನ್ನೂ ಸಾರ್ವಜನಿಕರೇ ನಕಲಿ ವೈದ್ಯರನ್ನು ಪತ್ತೆ ಹಚ್ಚುವಲ್ಲಿ ಸಹಕಾರ ಕೊಡಬೇಕು ಎನ್ನುತ್ತಾರೆ. ಬೇರೆ ಬೇರೆ ರಾಜ್ಯಗಳಿಂದ ಬೈಕ್‌ಗಳಲ್ಲಿ ಬಂದು ಇಂಜೆಕ್ಷನ್ ಕೊಟ್ಟು ಹೋಗುತ್ತಾರೆ. ಈ ರೀತಿಯ ಜಾಲ ಇದ್ದು, ಅಂತಹ ನಕಲಿ ವೈದ್ಯರನ್ನು ಪಟ್ಟಿ ಮಾಡಿದ್ದಾರೆ. 31 ಜಿಲ್ಲೆಗಳಲ್ಲಿ ಒಟ್ಟು 1,436 ನಕಲಿ ವೈದ್ಯರಿದ್ದು, ಯಾವ ಜಿಲ್ಲೆಯಲ್ಲಿ ಹೆಚ್ಚು ನಕಲಿ ವೈದ್ಯರಿದ್ದಾರೆ ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ. ಇದನ್ನೂ ಓದಿ: ಸ್ಮಾರ್ಟ್‌ಕಾರ್ಡ್‌ಗೆ ಗ್ರಹಣ – ಸಾಫ್ಟ್‌ವೇರ್ ಅಪ್ಡೇಟ್ ನೆಪದಿಂದ ಜನ ಹೈರಾಣು

    ಯಾವ ಜಿಲ್ಲೆಯಲ್ಲಿ ಎಷ್ಟು ನಕಲಿ ವೈದ್ಯರು?
    ಬೀದರ್ – 423
    ಕೋಲಾರ – 179
    ಬೆಳಗಾವಿ – 170
    ಶಿವಮೊಗ್ಗ – 74
    ಬೆಂಗಳೂರು ನಗರ – 67
    ಧಾರವಾಡ – 70
    ಕಲಬುರಗಿ – 81
    ಮಂಡ್ಯ – 33
    ಮೈಸೂರು – 2
    ಕೊಪ್ಪಳ – 33
    ಚಾಮರಾಜನಗರ – 51
    ಚಿಕ್ಕಬಳ್ಳಾಪುರ – 45

    ಬರೀ 1,436 ನಕಲಿ ವೈದ್ಯರು ಅಷ್ಟೇ ಇಲ್ಲ ಇನ್ನೂ ಹೆಚ್ಚಿದ್ದಾರೆ. ಕೆಲವೊಂದಿಷ್ಟು ಜನ ತಪ್ಪಿಸಿಕೊಂಡಿದ್ದಾರೆ. ಕೂಡಲೇ ಅವರನ್ನ ಪತ್ತೆ ಮಾಡುವಂತಹ ಕೆಲಸ ಮಾಡುತ್ತಿದ್ದು, ಡಿಸೆಂಬರ್ 31ರ ಒಳಗೆ ಇನ್ನಷ್ಟು ನಕಲಿ ವೈದ್ಯರು ಬೆಳಕಿಗೆ ಬರುತ್ತಾರ ಎಂದು ಕಾದುನೋಡಬೇಕಿದೆ. ಇದನ್ನೂ ಓದಿ: ಸರ್ಕಾರಿ ಅಂಗನವಾಡಿಗಳ ಕರೆಂಟ್ ಬಿಲ್ ಕಟ್ಟಲು ದುಡ್ಡಿಲ್ಲ – ಫ್ಯೂಸ್ ಕಿತ್ತ ಬೆಸ್ಕಾಂ

  • ನಕಲಿ ವೈದ್ಯರನ್ನ ದೂರವಿಟ್ಟಾಗ ಮಾತ್ರ ನಾಟಿ ವೈದ್ಯ ಪದ್ಧತಿ ಮುಖ್ಯವಾಹಿನಿಗೆ ಬರಲು ಸಾಧ್ಯ: ದಿನೇಶ್ ಗುಂಡೂರಾವ್

    ನಕಲಿ ವೈದ್ಯರನ್ನ ದೂರವಿಟ್ಟಾಗ ಮಾತ್ರ ನಾಟಿ ವೈದ್ಯ ಪದ್ಧತಿ ಮುಖ್ಯವಾಹಿನಿಗೆ ಬರಲು ಸಾಧ್ಯ: ದಿನೇಶ್ ಗುಂಡೂರಾವ್

    ಬೆಂಗಳೂರು: ಆಧುನಿಕ ವೈದ್ಯಕೀಯದ ಜೊತೆಗೆ ಪಾರಂಪರಿಕ ವೈದ್ಯ ಪದ್ದತಿಯನ್ನ ನಾವು ಮುಖ್ಯವಾಹಿನಿಗೆ ತರಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದರು.

    ನಾಗಮಂಗಲ ಆದಿಚುಂಚನಗಿರಿ ಸಂಸ್ಥಾನದಲ್ಲಿ ಇಂದು (ಗುರುವಾರ) ರಾಷ್ಟ್ರೀಯ ಪಾರಂಪರಿಕ ವೈದ್ಯರ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,‌ ಬೆಳೆಯುತ್ತಿರುವ ವಿಜ್ಞಾನ-ತಂತ್ರಜ್ಞಾನದ ಯುಗದಲ್ಲಿ ಬಹುತೇಕರು ನಾಟಿ ವೈದ್ಯ ಪದ್ದತಿಯನ್ನ ನಂಬಲ್ಲ. ಆದರೆ ಅಲೋಪತಿ ಬರುವ ಮುನ್ನ ನಮ್ಮ ರಾಜ ಮಹಾರಾಜರಿಗೆ ಚಿಕಿತ್ಸೆ ನೀಡಿ, ಕಾಯಿಲೆಗಳನ್ನ ವಾಸಿಮಾಡುತ್ತಿದ್ದುದು ನಮ್ಮ ಗಿಡಮೂಲಿಕೆಗಳ ಔಷಧಿಯ ನಾಟಿ ಪದ್ದತಿ ಎಂಬುದನ್ನ ಮರೆಯಬಾರದು ಎಂದರು.‌ ಇದನ್ನೂ ಓದಿ: ಕಬ್ಬು ಬೆಳೆಯುವ ಉತ್ಸಾಹ – 20 ವರ್ಷಗಳಿಂದ ಮುಚ್ಚಿದ ಸಕ್ಕರೆ ಫ್ಯಾಕ್ಟರಿಯನ್ನು ತೆರೆಯಲು ಸರ್ಕಾರದ ಬೆನ್ನತ್ತಿದ ರೈತರು

    ಗಿಡಮೂಲಿಕೆಗಳ ಚಿಕಿತ್ಸೆ, ಪಾರಂಪರಿಕ ವೈದ್ಯ ಪದ್ದತಿ ಮುಖ್ಯವಾಹಿನಿಗೆ ತರಬೇಕು. ಆದರೆ ತರಲಾಗುತ್ತಿಲ್ಲ.‌ ಅದಕ್ಕೆ ಮುಖ್ಯ ಕಾರಣ ನಕಲಿ ವೈದ್ಯರ ಹಾವಳಿ. ನಕಲಿ ವೈದ್ಯರ ಹಾವಳಿಯಿಂದಾಗಿಯೇ ನಾಟಿ ವೈದ್ಯ ಪದ್ದತಿ ಮುಖ್ಯವಾಹಿನಿಗೆ ಬರದೇ ಮರೆಮಾಚಿ ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಗ್ರಾಮೀಣ ಪ್ರದೇಶದಲ್ಲಿ ಬಡಜನರಿಗೆ ಕಡಿಮೆ ಖರ್ಚಿನಲ್ಲಿ ಆರೋಗ್ಯ ಒದಗಿಸುವಲ್ಲಿ ಪಾರಂಪರಿಕ ವೈದ್ಯರ ಕೊಡುಗೆ ಖಂಡಿತವಾಗಿಯೂ ಇದೆ. ಇವತ್ತಿಗೂ ಅನೇಕರು ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚದ ಚಿಕಿತ್ಸೆ ಹೇಳಿದಾಗ, ನಾಟಿ ಔಷಧಿಯ ಮೇಲೆ ನಂಬಿಕೆಯಿಟ್ಟು ಚಿಕಿತ್ಸೆ ಪಡೆಯುತ್ತಾರೆ.‌ ಗಿಡಮೂಲಿಕೆ ಔಷಧಿ ಉಪಚಾರಗಳಿಂದ ಅತಿ ಕಡಿಮೆ ಖರ್ಚಿನಲ್ಲಿ ಬಡವರಿಗೆ ಆರೋಗ್ಯ ಸೇವೆ ಒದಗಿಸಬಹುದು. ಈ ನಿಟ್ಟಿನಲ್ಲಿ ನಮ್ಮ ಪಾರಂಪರಿಕ ವೈದ್ಯ ಪದ್ದತಿ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು. ಇದನ್ನೂ ಓದಿ: ಮೊದ್ಲು ಕುಮಾರಸ್ವಾಮಿ ಪ್ರಮಾಣ ಮಾಡ್ಲಿ, ಆಮೇಲೆ ಮಾತಾಡ್ತೀನಿ: ದರ್ಶನಾಪುರ

    ಸರ್ಕಾರಕ್ಕೆ ನಿಜವಾದ ನಾಟಿ ವೈದ್ಯರ ಮೇಲೆ ನಂಬಿಕೆಯಿದ್ದರೂ, ನಕಲಿ ವೈದ್ಯರಿಂದಾಗಿ ಈ ಪದ್ದತಿಯನ್ನ ಪ್ರೋತ್ಸಾಹಿಸಲು ಸಾಧ್ಯವಾಗುತ್ತಿಲ್ಲ. ನೈಜ ನಾಟಿ ವೈದ್ಯರನ್ನ ಗುರುತಿಸುವುದು ಒಂದು ಸವಾಲು. ಹೀಗಾಗಿ ಒಂದು ಫ್ರೆಮ್‌ವರ್ಕ್ ಮುಖ್ಯ. ನಿಯಮಾವಳಿಗಳೊಂದಿಗೆ ನಾಟಿ ವೈದ್ಯರನ್ನ ಗುರುತಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚರ್ಚಿಸಿ ತೀರ್ಮಾನಗಳನ್ನ ತೆಗೆದುಕೊಳ್ಳಲು ಮುಕ್ತ ಮನಸ್ಸು ಹೊಂದಿದೆ. ಈ ನಿಟ್ಟಿನಲ್ಲಿ ನಾಟಿ ವೈದ್ಯರ ಔಷಧಿ ವಿಧಾನಗಳು, ಗಿಡಮೂಲಿಕೆಗಳ ಬಗ್ಗೆ ವಿಸ್ತ್ರತವಾಗಿ ವರದಿಯೊಂದಿಗೆ ಮನವಿ ಸಲ್ಲಿಸುವಂತೆ ಪಾರಂಪರಿಕ ವೈದ್ಯರ ಪರಿಷತ್‌ಗೆ ಸಚಿವರು ಸೂಚನೆ ನೀಡಿದರು.

    ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಆರೋಗ್ಯ ಕ್ಷೇತ್ರದಲ್ಲಿ ಹಳೇ ಬೇರು ಹೊಸ ಚಿಗುರು ಎರಡು ಮುಖ್ಯ. ನಾಟಿ ವೈದ್ಯ ಪದ್ದತಿಯನ್ನ ನಿರ್ಲಕ್ಷಿಸಲು ಸಾಧ್ಯವಿಲ್ಲ. ಋಷಿಮುನಿಗಳಿಂದ ಪರಂಪರಾಗತವಾಗಿ ಬಂದಿರುವ ಭಾರತೀಯ ವೈದ್ಯ ಪದ್ದತಿಯನ್ನ ನಾವು ಉಳಿಸಿಕೊಂಡು ಹೋಗಬೇಕು. ಹಲವು ಗಿಡಮೂಲಿಕೆಗಳು ಅವಸಾನದ ಅಂಚಿನಲ್ಲಿವೆ. ಗಿಡಮೂಲಿಕೆ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಿಜಕ್ಕೂ ಆಸಕ್ತಿ ತೋರಿಸಿ ಸಮ್ಮೇಳನಕ್ಕೆ ಬಂದಿದ್ದಾರೆ ಎಂದು ಶ್ರೀಗಳು ಶ್ಲಾಘನೆ ವ್ಯಕ್ತಪಡಿಸಿದರು. ಇದನ್ನೂ ಓದಿ: ನಕಲಿ ಹುಲಿ ಉಗುರು ಧರಿಸದಂತೆ ಈಶ್ವರ್ ಖಂಡ್ರೆ ಮನವಿ – ಸರ್ಕಾರಕ್ಕೆ ಮರಳಿಸಲು ಅವಕಾಶಕ್ಕೆ ಚಿಂತನೆ

    ನಾಟಿ ವೈದ್ಯರ ಸಮ್ಮೇಳನದಲ್ಲಿ‌ ಮೊದಲ ಬಾರಿಗೆ ಸರ್ಕಾರದ ಆರೋಗ್ಯ ಸಚಿವರು ಪಾಲ್ಗೊಂಡಿರುವುದು ನಿಜಕ್ಕೂ ಸಂತಸದ ಸಂಗತಿ.‌ ಏನಾದರೂ ಒಂದು ಪರಿಹಾರ ಕಂಡುಕೊಳ್ಳಬೇಕು ಎಂಬ ದೃಷ್ಟಿಕೋನವನ್ನ ದಿನೇಶ್ ಗುಂಡೂರಾವ್ ಹೊಂದಿದ್ದಾರೆ. ಈ ಹಿಂದೆ ಆಯುಷ್ ಕಾಲೇಜುಗಳಲ್ಲಿ ಪ್ರವೇಶಾತಿ ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಯಿತ್ತು. ಸಮಸ್ಯೆಯನ್ನ ಸಚಿವರ ಗಮನಕ್ಕೆ ತಂದ 10 ದಿನಗಳಲ್ಲಿ ಪರಿಹಾರವನ್ನ ಸಚಿವ ದಿನೇಶ್ ಗುಂಡೂರಾವ್ ನೀಡಿದರು. ಸಮಾಜಕ್ಕೆ ಒಳ್ಳೆಯದನ್ನ ಮಾಡಬೇಕು ಎಂಬುದನ್ನ ನಿಶ್ಚಯಿಸಿಕೊಂಡು ಗುಂಡೂರಾವ್ ಮುಂದೆ ಸಾಗುತ್ತಿದ್ದಾರೆ ಎಂದು ನಿರ್ಮಲಾನಂದನಾಥ ಶ್ರೀಗಳು ಆರೋಗ್ಯ ಸಚಿವರನ್ನು ಶ್ಲಾಘಿಸಿದರು.‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರಲ್ಲಿ ಹೆಚ್ಚಾಗ್ತಿದೆ ನಕಲಿ ವೈದ್ಯರ ಹಾವಳಿ – ಸಾವಿರಕ್ಕೂ ಹೆಚ್ಚು ಡೂಪ್ಲಿಕೇಟ್ ಡಾಕ್ಟರ್ಸ್!

    ಬೆಂಗಳೂರಲ್ಲಿ ಹೆಚ್ಚಾಗ್ತಿದೆ ನಕಲಿ ವೈದ್ಯರ ಹಾವಳಿ – ಸಾವಿರಕ್ಕೂ ಹೆಚ್ಚು ಡೂಪ್ಲಿಕೇಟ್ ಡಾಕ್ಟರ್ಸ್!

    ಬೆಂಗಳೂರು: ಜನರೇ ಎಚ್ಚರ, ಎಚ್ಚರ. ಬೆಂಗಳೂರಿನಲ್ಲಿ (Bengaluru) ಬೀಡು ಬಿಟ್ಟಿದ್ದಾರೆ ನಕಲಿ ವೈದ್ಯರು. ರಾಜ್ ಗೋಪಾಲ್ ನಗರ ನಕಲಿ ವೈದ್ಯರ ಘಟನೆ ಮಾಸುವ ಮುನ್ನವೇ ಮತ್ತೊಂದು ಆತಂಕಕಾರಿ ವಿಚಾರ ಬಯಲಾಗಿದೆ. ನಗರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ನಕಲಿ ವೈದ್ಯರು (Fake Doctors) ಇರೋದಾಗಿ ಐಎಂಎ, ಫನಾ (ಭಾರತೀಯ ಮೆಡಿಕಲ್ ಅಸೋಸಿಯೇಶನ್ ಮತ್ತು ಖಾಸಗಿ ಆಸ್ಪತ್ರೆಗಳ ಒಕ್ಕೂಟ) ಸರ್ವೆಯಲ್ಲಿ ಬಯಲಾಗಿದೆ.

    ಬೆಂಗಳೂರಿನಲ್ಲಿ ಕಳೆದೆರಡು ದಿನಗಳ ಹಿಂದಷ್ಟೇ ನಕಲಿ ವೈದ್ಯನ ಚಿಕಿತ್ಸೆಯಿಂದಾಗಿ ಹೆಗ್ಗನಹಳ್ಳಿಯ ಜ್ಯೋತಿ ಎಂಬಾಕೆ ಕಾಲು ಕಳೆದುಕೊಂಡು ನರಕಯಾತನೆ ಅನುಭವಿಸಿದ ಬಗ್ಗೆ ವಿಸ್ತೃತ ವರದಿ ಮಾಡಿದ್ದೆವು. ಈ ಘಟನೆ ಮಾಸುವ ಮುನ್ನವೇ ಭಾರತೀಯ ಮೆಡಿಕಲ್ ಅಸೋಸಿಯೇಶನ್ ಮತ್ತು ಖಾಸಗಿ ಆಸ್ಪತ್ರೆಗಳ ಒಕ್ಕೂಟ ಆತಂಕಕಾರಿ ವಿಚಾರ ಬಿಚ್ಚಿಟ್ಟಿದೆ. ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿ ಅಧಿಕಾರಿಗಳಿಗೆ ಮಚ್ಚು ತೋರಿಸಿದ ಪ್ರಕರಣ – ದಂಪತಿ ವಿರುದ್ಧ ರೌಡಿಶೀಟರ್ ಕೇಸ್ ಹಾಕಿ ಅರೆಸ್ಟ್

    ಬೆಂಗಳೂರಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ನಕಲಿ ವೈದ್ಯರು ಇರೋದಾಗಿ ಐಎಂಎ, ಫನಾ ಅಭಿಪ್ರಾಯ ವ್ಯಕ್ತಪಡಿಸಿವೆ. ನಗರದಾದ್ಯಂತ ಐಎಂಎ ಮತ್ತು ಫನಾ ನಕಲಿ ವೈದ್ಯರ ಬಗ್ಗೆ ಸರ್ವೆ ನಡೆಸ್ತಿದ್ದು, ಅದರಲ್ಲಿ ಸರ್ಟಿಫಿಕೇಟ್ ಇಲ್ಲದೇ, ರಿಜಿಸ್ಟ್ರೇಷನ್ ಮಾಡಿಸಿಕೊಳ್ಳದೇ ವೈದ್ಯ ಪದವಿ, ತರಬೇತಿಯನ್ನೂ ಪಡೆಯದೇ ಕ್ಲಿನಿಕ್‍ಗಳನ್ನು ತೆರೆದು ಜನರಿಗೆ ಚಿಕಿತ್ಸೆ ನೀಡ್ತಿರೋದು ಬೆಳಕಿಗೆ ಬಂದಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಿ ಕೆಪಿಎಂ ಆಕ್ಟ್ ಪ್ರಕಾರ ಕ್ರಮ ಕೈಗೊಳ್ಳಲು ಆಗ್ರಹಿಸ್ತಿದ್ದಾರೆ. ಇದನ್ನೂ ಓದಿ: ಕುರಿಕೋಟಾ ಸೇತುವೆ ಬಳಿ ಯುವತಿ ಶವ ಪತ್ತೆ – ಆತ್ಮಹತ್ಯೆ ಶಂಕೆ?

    ಇಂತಹ ನಕಲಿ ವೈದ್ಯರಿಂದ ಚಿಕಿತ್ಸೆ ಪಡೆದು ಅನಾರೋಗ್ಯಕ್ಕೀಡಾಗುತ್ತಿರುವ ರೋಗಿಗಳ ಸಂಖ್ಯೆ ಕೂಡ ಹೆಚ್ಚಾಗ್ತಿದೆ. ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳಿಗೆ ಇಂತಹ ರೋಗಿಗಳು ಬರ್ತಿದ್ದು, ಸಮಸ್ಯೆಗಳು ಉಲ್ಬಣಿಸುತ್ತಿದೆ. ಫನಾಗೆ ಇಂತಹ ದೂರುಗಳು ಹೆಚ್ಚು ಬರ್ತಿವೆಯಂತೆ. ಸರ್ಕಾರ ಕೂಡ ಇಂತಹವರ ವಿರುದ್ಧ ಕ್ರಮವಹಿಸಲು ಹಿಂದೇಟು ಹಾಕ್ತಿದೆ. ಸರ್ಕಾರ ಇಂತಹವರ ಪರ ನಿಲ್ಲಬಾರದು ಸೂಕ್ತ ಕಾನೂನು ಕ್ರಮವಹಿಸಬೇಕು. ಆರೋಗ್ಯ ಆಯುಕ್ತರನ್ನು ಭೇಟಿ ಮಾಡಿ ಇದರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇವೆ ಎಂದು ಫನಾ ಸ್ಪಷ್ಟಪಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ನಕಲಿ ವೈದ್ಯರ ವಿರುದ್ಧ ಜಿಲ್ಲಾಡಳಿತ ಸಮರ- ಕ್ಲಿನಿಕ್ ಮೇಲೆ ದಾಳಿ

    ನಕಲಿ ವೈದ್ಯರ ವಿರುದ್ಧ ಜಿಲ್ಲಾಡಳಿತ ಸಮರ- ಕ್ಲಿನಿಕ್ ಮೇಲೆ ದಾಳಿ

    ಯಾದಗಿರಿ: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ನಿರ್ಧಾರ ಕೈಗೊಂಡಿರುವ ಯಾದಗಿರಿ ಜಿಲ್ಲಾಡಳಿತ ನಕಲಿ ವೈದ್ಯರ ವಿರುದ್ಧ ಸಮರಸಾರಿದ್ದು, ಆರ್‍ಎಂಪಿ (ಗ್ರಾಮೀಣ ವೈದ್ಯಕೀಯ ವೈದ್ಯರು) ವೈದ್ಯರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದೆ.

    ಕೊರೊನಾ ಎರಡನೇ ಅಲೆ ಯಾದಗಿರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಇದಕ್ಕೆ ಪರೋಕ್ಷವಾಗಿ ನಕಲಿ ವೈದ್ಯರ ಹಾವಳಿ ಕಾರಣವಾಗಿದೆ. ಜಿಲ್ಲೆಯ ಎಲ್ಲಾ ತಾಲೂಕಿನ ಮತ್ತು ಗ್ರಾಮಗಳ ಜನ ನಕಲಿ ವೈದ್ಯರನ್ನು ನೆಚ್ಚಿಕೊಂಡಿದ್ದಾರೆ. ಬಂಡವಾಳ ಮಾಡಿಕೊಂಡಿರುವ ನಕಲಿ ವೈದ್ಯರು ಜನರಿಗೆ ಕೊರೊನಾ ಇದ್ದರೂ, ಅದನ್ನು ಅವರಿಗೆ ತಿಳಿಸದೆ ಸಾಮಾನ್ಯ ಚಿಕಿತ್ಸೆ ನೀಡುತ್ತಿದ್ದಾರೆ. ಜನರಿಗೆ ಆರೋಗ್ಯ ತೀರಾ ಆರೋಗ್ಯ ಹದಗೆಟ್ಟಾಗ, ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸುತ್ತಿದ್ದಾರೆ.

    ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಕೆಂಡಾಮಂಡಲವಾಗಿ ಡಿಸಿ ರಾಗಪ್ರಿಯ ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ತಂಡಗಳನ್ನು ರಚಿಸಿದ್ದು, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ತಹಶಿಲ್ದಾರ ಚನ್ನಮಲ್ಲಪ್ಪ, ಜನಗನಾಥ್ ರೆಡ್ಡಿ ಸೇರಿದಂತೆ ವಿವಿಧ ಅಧಿಕಾರಿಗಳು ನಕಲಿ ಕ್ಲಿನಿಕ್ ಮೇಲೆ ದಾಳಿ ಮಾಡಿ, ವೈದ್ಯರನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.

  • ಬೆಂಗಳೂರಿನಲ್ಲಿ ನಕಲಿ ಡೆಂಟಲ್ ಡಾಕ್ಟರ್ಸ್ ಹಾವಳಿ!

    ಬೆಂಗಳೂರಿನಲ್ಲಿ ನಕಲಿ ಡೆಂಟಲ್ ಡಾಕ್ಟರ್ಸ್ ಹಾವಳಿ!

    – ಬೀದಿಬದಿಯೇ ಕೊಡ್ತಾರೆ ಟ್ರೀಟ್‍ಮೆಂಟ್
    – ಐದೇ ನಿಮಿಷದಲ್ಲಿ ಜೋಡಣೆಯಾಗುತ್ತೆ ಹಲ್ಲು

    ಬೆಂಗಳೂರು: ರಾಜಧಾನಿಯಲ್ಲಿ ನಕಲಿ ದಂತ ವೈದ್ಯರ ಹಾವಳಿ ತಾಂಡವವಾಡುತ್ತಿದ್ದು, ಮಾತಲ್ಲೇ ಮರುಳು ಮಾಡಿ ಕಡಿಮೆ ಬೆಲೆಗೆ ಹಲ್ಲು ಜೋಡಿಸುತ್ತಾರೆ. ಸ್ವಲ್ಪ ಯಾಮಾರಿದರೂ ಈ ನಕಲಿ ಡೆಂಟಲ್ ಡಾಕ್ಟರ್ಸ್ ಸಾಯಿಸಿಬಿಡುತ್ತಾರೆ. ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ನಕಲಿ ವೈದ್ಯರ ಕರ್ಮಕಾಂಡ ಬೆಳಕಿಗೆ ಬಂದಿದೆ.

    ಯಾವುದೇ ಇಲಾಖೆಯ ಅನುಮತಿ ಪಡೆಯದೇ ಈ ನಕಲಿ ಡಾಕ್ಟರ್ಸ್ ಫುಟ್ ಪಾತ್‍ನಲ್ಲೇ ಚಿಕಿತ್ಸೆ ಕೊಡುತ್ತಿದ್ದಾರೆ. ನಗರದ ಕೆ.ಆರ್ ಮಾರ್ಕೆಟ್ ನಲ್ಲಿ ಡೆಂಟಲ್ ಕ್ಲಿನಿಕ್ ಗಳನ್ನು ನಡೆಸುತ್ತಿದ್ದಾರೆ. ಇದನ್ನೆಲ್ಲ ಕುಲ ಕಸುಬನ್ನಾಗಿ ಮಾಡಿಕೊಂಡಿರುವ ಕೆಲ ಆಸಾಮಿಗಳು ಫುಟ್ ಪಾತ್ ನಲ್ಲೇ ವ್ಯಾಪಾರ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿ ಪ್ರತಿನಿಧಿ ನಕಲಿ ದಂತವೈದ್ಯರೊಂದಿಗೆ ನಡೆಸಿದ ಸಂಭಾಷಣೆ ಇಂತಿದೆ.
    ಪ್ರತಿನಿಧಿ: ರೆಗ್ಯೂಲರ್ ಇರ್ತಿರಾ
    ನಕಲಿ ಡಾಕ್ಟರ್: ಕಾರ್ಡ್ ತೊಗೊಂಡ್ರಾ..
    ಪ್ರತಿನಿಧಿ: ಲಾಸ್ಟ್ ಟೈಮ್ ಮಾಡ್ಸಿದ್ದೆ. ಬಿಚ್ಚೋಗಿತ್ತು
    ನಕಲಿ ಡಾಕ್ಟರ್: ಅದು ಕೆಲ್ಸ ಇದೆ ಮಾಡ್ಬೇಕು. ಅರ್ಧ ಘಂಟೆಯಲ್ಲಿ ಮಾಡ್ತೀನಿ. ಒಳಗಡೆ ಕಂಬಿ ಲಾಕ್ ಮಾಡಿ ಕೊಡ್ತೀನಿ
    ಪ್ರತಿನಿಧಿ: ಎಷ್ಟಾಗುತ್ತೆ ಅಂತ ಹೇಳಿದ್ರಿ
    ನಕಲಿ ಡಾಕ್ಟರ್: ಸಾವಿರ ರೂಪಾಯಿ
    ಪ್ರತಿನಿಧಿ: ಬರೀ ಕ್ಯಾಪ್ ಅಷ್ಟೆ
    ನಕಲಿ ಡಾಕ್ಟರ್: ಹಲ್ಲು ನೋಡಿಲ್ಲ ನಿಮ್ಗೆ. ಬರೀ ಹೋಲ್ಸ್ ಗೆ ಅಂತ. ಈ ಹಲ್ಲಿಗೆ ಫುಲ್ ಉಜ್ಜು ಬಿಟ್ಟು ಹಾಕಿಕೊಡ್ತೀನಿ
    ಪ್ರತಿನಿಧಿ: ಕೊಡಿ.. ಯಾವುದು ಇದು
    ನಕಲಿ ಡಾಕ್ಟರ್: ಸಿರಾಮಿಕ್ ಹಲ್ಲು. 28 ಹಲ್ಲು ಬರುತ್ತೆ.
    ಪ್ರತಿನಿಧಿ: ನೀವು ಎಲ್ಲಿಂದ ತರ್ತೀರಿ
    ನಕಲಿ ಡಾಕ್ಟರ್: ನಾವು ತರ್ಸೋದು ಅಣ್ಣ
    ಪ್ರತಿನಿಧಿ: ಡೆಂಟಲ್ ಆಸ್ಪತ್ರೆಗೆ ಹೋದ್ರೆ
    ನಕಲಿ ಡಾಕ್ಟರ್: ಅಲ್ಲಿ ನಿಮಗೆ ಸ್ಟೀಲ್ ಕ್ಯಾಪ್ ಹಾಕ್ತಾರೆ
    ಪ್ರತಿನಿಧಿ: ನೀವು ಯಾವ ಪೌಡರ್ ಹಾಕ್ತೀರಿ.
    ನಕಲಿ ಡಾಕ್ಟರ್: ನಮ್ದು ಏನಿದ್ರೂ ಅಶ್ವಿನಿ ಲಿಕ್ವಿಡ್ ಪೌಡರ್
    ನಕಲಿ ಡಾಕ್ಟರ್: ನಾವು ನಿಮ್ಗೆ ಚೆನ್ನಾಗಿ ಮಾಡಿದ್ರೆ, ಬೇರೆಯವ್ರನ್ನ ಕಳಿಸ್ತೀರಾ. ಕೊಲ್ಕತ್ತಾದಿಂದ ಹುಡ್ಕೊಂಡು ಬರ್ತಾರೆ ನನ್ನ
    ಪ್ರತಿನಿಧಿ: ಹೌದಾ..ಮೆಟರಿಯಲ್ ಬೇರೆ ಕಡೆಯಿಂದ ತರ್ತೀರಾ
    ನಕಲಿ ಡಾಕ್ಟರ್: ನಾನೇ ಹೋಗಿ ತೊಗೊಂಡು ಬರ್ತೀನಿ. ಒಂದು ಕಡೆ ಬರುತ್ತೆ
    ಪ್ರತಿನಿಧಿ: ಆಸ್ಪತ್ರೆಗಳಿಂದ ನಿಮಗೆ ಅನುಮತಿ ಇರುತ್ತಾ. ಅವ್ರಿಗೆ ನಿಮಗೆ ಪರಿಚಯ
    ನಕಲಿ ಡಾಕ್ಟರ್: ಆ ರೀತಿ ಏನೂ ಇಲ್ಲ. ಅರ್ಜೆಂಟ್ ಮದುವೆ, ಸಮಾರಂಭಗಳಿಗೆ ಹೋಗಬೇಕಾದಾಗ ಹಾಕಿ, ತೆಗೆಯೋದು ಫಿಟ್ಟಿಂಗ್ ಮಾಡಿಕೊಡ್ತೀನಿ
    ಪ್ರತಿನಿಧಿ: ನಾನು ಎರಡು ಸಲ ಮೋಸ ಹೋಗಿದ್ದೀನಿ ಭಾಯ್
    ನಕಲಿ ಡಾಕ್ಟರ್: ಕುಂತು ಮಾಡೋಕೆ ಐದು ನಿಮಿಷನೂ ಆಗಲ್ಲ. ನಾನು ಕಾಸುಗೆ ಯೋಚನೆ ಮಾಡಿದ್ರೆ, ಯಾವಾಗೋ ಕಳಿಸಿದ್ದೆ ನಿಮಗೆ
    ಪ್ರತಿನಿಧಿ: ನಿಮ್ಮ ಕೆಲಸದಲ್ಲಿ ನಂಬಿಕೆ ಅಷ್ಟೆ, ಎಟಿಎಂ ಗೆ ಹೋಗು ಬರೋಣ
    ನಕಲಿ ಡಾಕ್ಟರ್: ಬನ್ನಿ ಸಾರ್. ಯಾವಾಗ ಟೈಮ್ ಇರುತ್ತೆ ಆಗ ಬನ್ನಿ.
    ಪ್ರತಿನಿಧಿ: ಹುಮ್.
    ನಕಲಿ ಡಾಕ್ಟರ್: ನಾಲ್ಕೈದು ಜನ ಇದ್ರೆ ನಿಮ್ ಮನೆಗೂ ಬರ್ತಿನಿ. ನಾಲ್ಕೈದು ಜನ ಲೇಡಿಸ್ ಇದ್ರುನೂ ಮನೆ ಹತ್ರನೇ ಬಂದು ಮಾಡಿ ಹೋಗ್ತೀನಿ
    ಪ್ರತಿನಿಧಿ: ಎಕ್ಸ್ಟ್ರಾ ಚಾರ್ಜ್ ತೊಗೊತೀರಾ
    ನಕಲಿ ಡಾಕ್ಟರ್: ಎಲ್ಲಾ ಲೆಕ್ಕ ಅಷ್ಟೆ. ಮೂರು ನೂರು, ನಾಲ್ಕು ನೂರು, ಐನೂರು. ಬನ್ನಿ ಅಣ್ಣ ಮಾಡಿಕೊಡ್ತೀನಿ
    ಪ್ರತಿನಿಧಿ: ಸರಿ. ನಂಬರ್ ಇದೆ ಕಾಲ್ ಮಾಡ್ತೀನಿ

    ಕೇವಲ ಫುಟ್ ಪಾತ್ ಮಾತ್ರವಲ್ಲದೇ ಮನೆಗೂ ಬಂದು ಚಿಕಿತ್ಸೆ ನೀಡುತ್ತೇವೆ ಎಂದು ನಕಲಿ ಡಾಕ್ಟರ್ಸ್ ಹೇಳುತ್ತಿದ್ದು, ನಾಲ್ಕೈದು ಜನ ಇದ್ದರೆ ಹೋಮ್ ಡೆಲಿವರಿ ಕೂಡ ಮಾಡ್ತಾರಂತೆ. ಒಬ್ಬರ ಬಾಯಿಗೆ ಇಟ್ಟಿರುವ ಸಲಕರಣೆಗಳನ್ನು ಸರಿಯಾಗಿ ಶುಚಿ ಮಾಡದೆ, ಮತ್ತೊಬ್ಬರ ಬಾಯಿಗೆ ಇಟ್ಟು ಹಲ್ಲು ಜೋಡಿಸುತ್ತಾರೆ. ಹೀಗೆ ಮಾಡುವುದರಿಂದ ಹೆಚ್‍ಐವಿ ಕೂಡ ಬರುವ ಸಾಧ್ಯತೆಗಳಿರುತ್ತೆ ಎಂದು ತಜ್ಞ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

    ಇಲ್ಲಿ ಚಿಕಿತ್ಸೆ ನೀಡುವವರು ಕುಲ ಕಸುಬನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದು, ಯಾವುದೇ ಮೆಡಿಕಲ್ ಶಿಕ್ಷಣವನ್ನು ಪಡೆದಿಲ್ಲ. ಮುಖ್ಯವಾಗಿ ಕರ್ನಾಟಕ ಸ್ಟೇಟ್ ಡೆಂಟಲ್ ಕೌನ್ಸಿಲ್ ನಲ್ಲಿ ಅನುಮತಿ ಪಡೆದು ಡೆಂಟಲ್ ಕ್ಲಿನಿಕನ್ನು ಓಪನ್ ಮಾಡಬೇಕಾಗುತ್ತೆ. ಆದರೆ ಈ ಡಾಕ್ಟರ್ಸ್ ಯಾರ ಅನುಮತಿಯನ್ನೂ ಪಡೆದಿಲ್ಲ. ಆದ್ರೂ ರಾಜರೋಷವಾಗಿ ಬ್ಯೂಸಿನೆಸ್ ಮಾಡುತ್ತಿದ್ದಾರೆ. ನಗರದ ಕೆ.ಆರ್.ಮಾರ್ಕೆಟ್‍ನಲ್ಲಿರುವ ಮತ್ತೊಂದು ಡೆಂಟಲ್ ಕ್ಲಿನಿಕ್‍ನ ನಕಲಿ ಡೆಂಟಲ್ ಡಾಕ್ಟರ್ಸ್ ಮಾತು ಇಂತಿದೆ.

    ಪ್ರತಿನಿಧಿ: ಹಲ್ಲು ಸ್ಪೇಸ್ ಇದೆ. ಹಾಕಿ ಕೊಡ್ತೀರಾ
    ನಕಲಿ ಡಾಕ್ಟರ್: ಯಾರಿಗೆ
    ಪ್ರತಿನಿಧಿ: ನಮ್ಗಲ್ಲ. ನಮ್ ಹುಡ್ಗನಿಗೆ
    ನಕಲಿ ಡಾಕ್ಟರ್: ಎಲ್ಲಿದ್ದಾರೆ..?
    ಪ್ರತಿನಿಧಿ: ಆ ಹುಡ್ಗ ಇಲ್ಲ. ಕರ್ಕೊಂಡು ಬರುತ್ತೀವಿ. ಎಷ್ಟಾಗುತ್ತೆ..?
    ನಕಲಿ ಡಾಕ್ಟರ್: ಇನ್ನೂರು, ಮುನ್ನೂರು, ನಾನ್ನೂರು ಅಷ್ಟೆ.
    ಪ್ರತಿನಿಧಿ: ನೀವೇ ಕೊಡುತ್ತೀರಾ..?
    ನಕಲಿ ಡಾಕ್ಟರ್: ಕರ್ಕೊಂಡು ಬನ್ನಿ. ಮಾಡಿ ಕೊಡ್ತೀನಿ..

    ಹಲ್ಲು ಜೋಡಿಸುವಾಗ, ತೆಗೆಯುವಾಗ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿಲ್ಲ. ಸ್ವಲ್ಪ ಎಡವಟ್ಟು ಆದ್ರು, ಹಲ್ಲಿನ ಚಿಗುರೇ ಛಿದ್ರ ಛಿದ್ರವಾಗುವ ಸಾಧ್ಯತೆಗಳಿವೆ. ಸಾಮಾನ್ಯವಾಗಿ ಅನುಮತಿ ಪಡೆದು ನಡೆಸುವ ಡೆಂಟಲ್ ಆಸ್ಪತ್ರೆಗಳಲ್ಲಿ ಹಲ್ಲು ಜೋಡಿಸುವಾಗ, ತೆಗೆಯುವಾಗ, ಅದರ ಮಾಪನ, ಅಳತೆಯನ್ನು ಲ್ಯಾಬ್‍ಗೆ ಕಳುಹಿಸಿ ಚಿಕಿತ್ಸೆ ಶುರು ಮಾಡುತ್ತಾರೆ. ಆದರೆ ಇಲ್ಲಿ ಮಾತ್ರ ಬರೀ ಐದೇ ನಿಮಿಷದಲ್ಲಿ ಗಮ್ ಲಿಕ್ವಿಡ್ ಹಾಕಿ ಹಲ್ಲು ಜೋಡಿಸಿ ಕೊಡುತ್ತಾರೆ. ಇದು ಅಕ್ರಮ ಅಂತ ಗೊತ್ತಿದ್ದರು ಸಂಬಂಧಪಟ್ಟ ಪಾಲಿಕೆಯ ಆರೋಗ್ಯಧಿಕಾರಿಗಳು ಮಾತ್ರ ಗಾಢ ನಿದ್ರೆಯಲ್ಲಿದ್ದಾರೆ. ಈ ನಕಲಿ ವೈದ್ಯರು ಪೊಲೀಸರಿಗೆ ಪ್ರತಿದಿನ ಮಾಮೂಲು ನೀಡಿ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪಕೊಳ್ಳಿ ಬಂದಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಲು ಎಚ್ಚೆತ್ತುಕೊಂಡು ಶಿಸ್ತು ಕ್ರಮ ಕೈಗೊಳ್ಳಬೇಕಿದೆ.

  • ನಕಲಿ ವೈದ್ಯರ ಹಾವಳಿ- ಕ್ಲಿನಿಕ್ ಸೀಜ್ ಮಾಡಿದ ತಹಶೀಲ್ದಾರ್

    ನಕಲಿ ವೈದ್ಯರ ಹಾವಳಿ- ಕ್ಲಿನಿಕ್ ಸೀಜ್ ಮಾಡಿದ ತಹಶೀಲ್ದಾರ್

    ಹುಬ್ಬಳ್ಳಿ: ನಕಲಿ ವೈದ್ಯರ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಈ ಅಕ್ರಮಕ್ಕೆ ಬ್ರೇಕ್ ಹಾಕಲು ಮುಂದಾದ ಅಧಿಕಾರಿಗಳು ಕ್ಲಿನಿಕ್ ಒಂದನ್ನು ಸೀಜ್ ಮಾಡಿದ್ದಾರೆ.

    ಕುಂದಗೋಳ ತಾಲೂಕಿನಾದ್ಯಂತ ನಕಲಿ ವೈದ್ಯರ ಕ್ಲಿನಿಕ್‍ಗಳ ಮೇಲೆ ತಹಶೀಲ್ದಾರ್ ಹಾಗೂ ಇನ್ಸ್‌ಪೆಕ್ಟರ್ ದಾಳಿ ನಡೆಸಿದ್ದಾರೆ. ಕುಂದಗೋಳದ ಹಲವು ಗ್ರಾಮಗಳಲ್ಲಿ ಏಕಕಾಲಕ್ಕೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತಹಶೀಲ್ದಾರ್ ಬಸವರಾಜ ಮೆಳವಂಕಿ ಹಾಗೂ ಕುಂದಗೋಳ ಇನ್ಸ್‌ಪೆಕ್ಟರ್ ನವೀನ್ ಜಕ್ಕಲಿ ನೇತೃತ್ವದಲ್ಲಿ ದಾಳಿ ಮಾಡಲಾಯಿತು.

    ಈ ವೇಳೆ ವೈದ್ಯನೆಂದು ಹೇಳಿಕೊಂಡು ಕ್ಲಿನಿಕ್ ನಡೆಸುತ್ತಿದ್ದ ಅಬ್ದುಲ್ ನಜೀಮ್ ಮುಲ್ಲಾ ಎಂಬಾತನ ಕ್ಲಿನಿಕ್ ಅನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ದಾಳಿ ನಡೆಸಿದಾಗ ನಜೀಮ್ ಮುಲ್ಲಾ ನಕಲಿ ವೈದ್ಯ ಎಂದು ಪತ್ತೆಯಾಗಿದ್ದು, ಆತನ ಬಳಿ ಯಾವುದೇ ವೈದ್ಯಕೀಯ ದಾಖಲೆಗಳಿಲ್ಲ ಹಾಗೂ ಕ್ಲಿನಿಕ್‍ಗೆ ಸಂಬಂಧಿಸಿದಂತೆಯೂ ಯಾವುದೇ ದಾಖಲೆಗಳು ಇಲ್ಲದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದಾರೆ.