Tag: fake doctor

  • ಖಾಸಗಿ ವೈದ್ಯರ ಮುಷ್ಕರದ ಎಫೆಕ್ಟ್- ನಕಲಿ ವೈದ್ಯನ ಬಳಿ ಚಿಕಿತ್ಸೆಗೆ ಹೋದ ವ್ಯಕ್ತಿ ಸಾವು

    ಖಾಸಗಿ ವೈದ್ಯರ ಮುಷ್ಕರದ ಎಫೆಕ್ಟ್- ನಕಲಿ ವೈದ್ಯನ ಬಳಿ ಚಿಕಿತ್ಸೆಗೆ ಹೋದ ವ್ಯಕ್ತಿ ಸಾವು

    ಚಿಕ್ಕಬಳ್ಳಾಪುರ: ರಾಜ್ಯಾದ್ಯಾಂತ ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿರುವುದು ನಕಲಿ ವೈದ್ಯರಿಗೆ ವರ ಎಂಬಂತಾಗಿದೆ. ಚಿಕಿತ್ಸೆ ನೀಡುವ ಹೆಸರಿನಲ್ಲಿ ದುಡ್ಡು ಮಾಡೋಕೆ ಹೋದ ನಕಲಿ ವೈದ್ಯ ಅಮಾಯಕ ವ್ಯಕ್ತಿಯನ್ನು ಬಲಿ ಪಡೆದಿದ್ದಾನೆ.

    ಬಾಗೇಪಲ್ಲಿ ತಾಲೂಕು ಘಂಟವಾರಿಪಲ್ಲಿ ಗ್ರಾಮದ 40 ವರ್ಷದ ನರಸಪ್ಪ ಮೃತ ದುರ್ದೈವಿ. ಕೈಗೆ ಗಾಯವಾದ ಕಾರಣ ಪ್ರಾಥಮಿಕ ಚಿಕಿತ್ಸೆಗೆ ನರಸಪ್ಪ ಪಟ್ಟಣದ ಟಿಬಿ ಕ್ರಾಸ್ ನ ಅಶ್ವಿನಿ ಕ್ಲಿನಿಕ್ ತೆರಳಿದ್ದಾರೆ. ಕ್ಲಿನಿಕ್‍ನಲ್ಲಿ ಆಂಧ್ರ ಮೂಲದ ಆರ್‍ಎಂಪಿ ವೈದ್ಯ ಇನಾಯತ್ ಉಲ್ಲಾ ಎಂಬಾತ ಚಿಕಿತ್ಸೆ ನೀಡಿದ್ದಾನೆ. ಚಿಕಿತ್ಸೆ ಪಡೆದ ನಂತರ ನರಸಪ್ಪ ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ.

    ನರಸಪ್ಪ ಮೃತಪಟ್ಟ ಕೂಡಲೇ ಖುದ್ದು ನಕಲಿ ವೈದ್ಯ ಇನಾಯತ್ ಉಲ್ಲಾ ನರಸಪ್ಪ ರನ್ನು ತಾಲೂಕು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ನಾಟಕವಾಡಿದ್ದಾನೆ. ಆದರೆ ಅಷ್ಟರಲ್ಲಿ ವಿಷಯ ತಿಳಿದ ಮೃತನ ಸಂಬಂಧಿಕರು ಹಾಗೂ ಘಂಟವಾರಿಪಲ್ಲಿ ಗ್ರಾಮಸ್ಥರು ನಕಲಿ ವೈದ್ಯನನ್ನು ತರಾಟೆಗೆ ತೆಗೆದುಕೊಂಡು ಬಾಗೇಪಲ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಬಾಗೇಪಲ್ಲಿ ಪೊಲೀಸರು ಇನಾಯತ್ ಉಲ್ಲಾನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಚುಚ್ಚುಮದ್ದು ಸೋಂಕಿನಿಂದ ಬಿಎಸ್ಸಿ ಪದವೀಧರೆ ಸಾವು – ಕ್ಲಿನಿಕ್ ಮುಚ್ಚಿ ಡಾಕ್ಟರ್ ಪರಾರಿ

    ಚುಚ್ಚುಮದ್ದು ಸೋಂಕಿನಿಂದ ಬಿಎಸ್ಸಿ ಪದವೀಧರೆ ಸಾವು – ಕ್ಲಿನಿಕ್ ಮುಚ್ಚಿ ಡಾಕ್ಟರ್ ಪರಾರಿ

    ಮೈಸೂರು: ನಗರದಲ್ಲಿ ವೈದ್ಯನೊಬ್ಬನ ಚುಚ್ಚುಮದ್ದು ಸೋಂಕಿನಿಂದ ಬಿ.ಎಸ್‍ಸಿ ಪದವೀಧರೆಯೊಬ್ಬಳು ದಾರುಣವಾಗಿ ಮೃತಪಟ್ಟ ಘಟನೆ ಮೈಸೂರಿನ ಹೆಚ್‍ಡಿ ಕೋಟೆ ತಾಲೂಕಿನ ಕಾಳಿಹುಂಡಿ ಬಳಿ ನಡೆದಿದೆ.

    ಮೃತ ದುರ್ದೈವಿ ವಿದ್ಯಾರ್ಥಿನಿಯನ್ನು 21 ವರ್ಷದ ಅಂಕುಶ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿ ಅಂಕುಶಳಿಗೆ ವಾರದ ಹಿಂದೆ ಜ್ವರ ಬಂದಿತ್ತು. ಹೀಗಾಗಿ ಈಕೆ ತಾಲೂಕಿನಲ್ಲಿರೋ ಕ್ಲಿನಿಕ್‍ವೊಂದರಲ್ಲಿ ಚಿಕಿತ್ಸೆ ಪಡೆದಿದ್ದರು. ಅಂತೆಯೇ ಅಲ್ಲಿನ ವೈದ್ಯ ರಾಜು ಎಂಬಾತ ಅಂಕುಶಳಿಗೆ ಇಂಜೆಕ್ಷನ್ ನೀಡಿ ಚಿಕಿತ್ಸೆ ಕೊಟ್ಟಿದ್ದನು. ಮರುದಿನವೇ ಇಂಜೆಕ್ಷನ್ ನೀಡಿದ್ದ ಜಾಗದಲ್ಲಿ ಊತ ಆರಂಭವಾಗಿ ನೋವು ಕಾಣಿಸಿಕೊಂಡಿತ್ತು. ಅಲ್ಲದೇ ಆ ಜಾಗ ಗಂಟಾಗಿ ಕೀವು ತುಂಬಲು ಪ್ರಾರಂಭವಾಗಿತ್ತು.

    ಈ ಹಿನ್ನೆಲೆಯಲ್ಲಿ 2 ದಿನಗಳ ನಂತರ ರಾಜು ಬಳಿ ತೆರಳಿದಾಗ ವೈದ್ಯ ತಾನೇ ಮೈಸೂರಿನ ಖಾಸಗಿ ವೈದ್ಯರ ಬಳಿ ಕರೆದ್ಯೊಯ್ದು ಚಿಕಿತ್ಸೆ ಕೊಡಿಸಿದ್ದನು. ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ವೈದ್ಯ ಎಸ್ಕೇಪ್: ಇತ್ತ ಯುವತಿಯ ಸಾವಿನ ಮಾಹಿತಿ ತಿಳಿಯುತ್ತಿದ್ದಂತೆ ವೈದ್ಯ ರಾಜು ಕ್ಲಿನಿಕ್ ಬೋರ್ಡ್ ತೆಗೆದು ತಲೆಮರೆಸಿಕೊಂಡಿದ್ದಾನೆ. ಅಲ್ಲದೇ ಈ ಕುರಿತು ಅಂಕುಶ ಕುಟುಂಬಸ್ಥರು ಕೂಡ ಯಾವುದೇ ದೂರು ನೀಡದೆ ಅಂತ್ಯಕ್ರಿಯೆ ನಡೆಸಿದ್ದಾರೆ.

    ಆದ್ರೆ ಸ್ಥಳೀಯರು ಮಾತ್ರ ಡಾ ರಾಜು ಅಸಲಿ ವೈದ್ಯನೇ ಅಲ್ಲ ಅಂತ ಆರೋಪಿಸಿದ್ದು, ನಕಲಿ ವೈದ್ಯನ ಯಡವಟ್ಟಿನಿಂದ ಯುವತಿ ಬಲಿಯಾಗಿದ್ದಾಳೆ ಅನ್ನೋ ಅನುಮಾನ ವ್ಯಕ್ತಪಡಿಸಿದ್ದಾರೆ.

  • ನಾಡಿಮಿಡಿತ ನೋಡಿಯೇ ಬಿಪಿ, ಶುಗರ್ ಗೆ ಚಿಕಿತ್ಸೆ ನೀಡುತ್ತಿದ್ದ ಫೇಕ್ ಡಾಕ್ಟರ್ ಬಲೆಗೆ!

    ನಾಡಿಮಿಡಿತ ನೋಡಿಯೇ ಬಿಪಿ, ಶುಗರ್ ಗೆ ಚಿಕಿತ್ಸೆ ನೀಡುತ್ತಿದ್ದ ಫೇಕ್ ಡಾಕ್ಟರ್ ಬಲೆಗೆ!

    ಬಾಗಲಕೋಟೆ: ನಾಡಿ ಮಿಡಿತ ನೋಡಿಯೇ ಚಿಕಿತ್ಸೆ ಕೊಡುತ್ತಿದ್ದ ನಕಲಿ ವೈದ್ಯನೊಬ್ಬ ಇದೀಗ ಜಿಲ್ಲೆಯ ವೈದ್ಯಾಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.

    ಬಳ್ಳಾರಿ ಜಿಲ್ಲೆ ಹೋಸಪೇಟೆ ಮೂಲದ ಜನಾರ್ದನ್ ಸಿಕ್ಕಿಬಿದ್ದ ನಕಲಿ ವೈದ್ಯ. ಈತನಿಗೆ ವೈದ್ಯಕೀಯ ವೃತ್ತಿಯ ಎಬಿಸಿಡಿ ಗೊತ್ತಿಲ್ಲ. ಆದ್ರೆ ಜನರನ್ನು ಮರಳು ಮಾಡಿ ಹಣ ವಸೂಲಿ ಮಾಡುತ್ತಿದ್ದ. ಆಕ್ಯೂ ಪಂಕ್ಚರ್ ಚಿಕಿತ್ಸೆ ಎಂದು ರೋಗಿಗಳಿಗೆ ಟೋಪಿ ಹಾಕುತ್ತಿದ್ದ

    ಬಾಗಲಕೋಟೆ ತಾಲೂಕಿನ ಕೆಸನೂರು ಗ್ರಾಮದ ಮನೆಯೊಂದ್ರಲ್ಲಿ ನಕಲಿ ವೈದ್ಯಕೀಯ ದಾಖಲೆಗಳನ್ನ ಇಟ್ಟುಕೊಂಡು ಬಿಪಿ, ಸಕ್ಕರೆ ಕಾಯಿಲೆಯಂತಹ ಕ್ಲಿಷ್ಟ ರೋಗಗಳಿಗೆ ಕೇವಲ ನಾಡಿ ಮಿಡಿತ ಅರಿತು ರೋಗ ಗುಣ ಮಾಡ್ತೀನಿ ಅಂತಾ ಹೇಳುತ್ತಾ ತನ್ನ ಬಳಿ ಬರುವ ರೋಗಿಗಳಿಗೆ ಆಕ್ಯೂ ಪಂಕ್ಚರ್ ಚಿಕಿತ್ಸೆ ಎಂದು ಹೇಳಿಕೊಂಡು ಹಣ ವಸೂಲಿ ದಂಧೆಗೆ ಇಳಿದಿದ್ದ.

    ಮುಗ್ಧ ಗ್ರಾಮಸ್ಥರು ಇವನ ಮಾತಿಗೆ ಮರುಳಾಗಿ ಹಣ ಕೊಟ್ಟು ಚಿಕಿತ್ಸೆ ಪಡೆಯಲು ಬರುತ್ತಿದ್ದರು. ಊರಿನವರ ಸಹಾಯದಿಂದ ಈ ª ವಿಷಯ ಮಾಧ್ಯಮ ಮಂದಿಗೆ ತಿಳಿದಾಗ ಈ ನೀಚ ವೈದ್ಯನ ಬಣ್ಣ ಬಯಲಾಗಿದೆ.

  • ಕೋಲಾರ: ನಕಲಿ ವೈದ್ಯ ಕೊಟ್ಟ ಇಂಜೆಕ್ಷನ್‍ಗೆ SSLC ಯುವಕ ಬಲಿ

    ಕೋಲಾರ: ನಕಲಿ ವೈದ್ಯ ಕೊಟ್ಟ ಇಂಜೆಕ್ಷನ್‍ಗೆ SSLC ಯುವಕ ಬಲಿ

    ಕೋಲಾರ: ನಕಲಿ ವೈದ್ಯ ನೀಡಿರುವ ಚುಚ್ಚುಮದ್ದಿನಿಂದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೇತಮಂಗಲದಲ್ಲಿರುವ ಶಾರದಾ ಕ್ಲಿನಿಕ್‍ನಲ್ಲಿ ಬುಧವಾರದಂದು ಚಿಕಿತ್ಸೆ ಪಡೆದಿರುವ ವಡ್ಡಹಳ್ಳಿ ನಿವಾಸಿಯಾದ 16 ವರ್ಷದ ಅಭಿರಾಮ್ ಮೃತಪಟ್ಟಿದ್ದಾನೆ. ಕಿವಿ ನೋವಿಗೆಂದು ಶಾರದಾ ಕ್ಲಿನಿಕ್‍ನ ನಕಲಿ ವೈದ್ಯ ನವೀನ್ ಕುಮಾರ್ ಚುಚ್ಚು ಮದ್ದು ನೀಡಿದ್ದು, ಈ ವೇಳೆ ಅಭಿರಾಮ್ ತಕ್ಷಣವೇ ಕುಸಿದು ಬಿದ್ದಿದ್ದಾನೆ. ಅದಾದ ನಂತರ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿದ ನಂತರ ಬಾಲಕ ಮೃತಪಟ್ಟಿದ್ದಾನೆ. ಅಭಿರಾಮ್ ಮನೆಯಲ್ಲಿ ಈಗ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ವೈದ್ಯ ನವೀನ್ ಕುಮಾರ್ ನಿರ್ಲಕ್ಷ್ಯದಿಂದ ಬಾಲಕ ಸಾವನ್ನಪ್ಪಿದಾನೆ ಎಂದು ಮೃತ ಬಾಲಕನ ಪೋಷಕರು ಹಾಗೂ ಸಂಬಂಧಿಕರು ಆರೋಪಸಿದ್ದಾರೆ. ಈ ಕುರಿತು ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

    ಬೇತಮಂಗಲದಲ್ಲಿರುವ ಶಾರದಾ ಕ್ಲಿನಿಕ್‍ನಲ್ಲಿ ಡಾ. ನವೀನ್ ಕುಮಾರ್ ಎಂಡಿ, ಎಫ್‍ಎಜಿ ಎಂದು ಹಾಗೂ ಅತನ ಪತ್ನಿ ಶ್ವೇತ ನವೀನ್ ಕುಮಾರ್ ಎಂಬಿಬಿಎಸ್‍ಯೆಂದು ಫಲಕ ಹಾಕಿಕೊಂಡಿದ್ದಾರೆ.

     

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಚಿಕ್ಕಬಳ್ಳಾಪುರದ ನಕಲಿ ವೈದ್ಯನಿಗೆ ಶೋಕಾಸ್ ನೋಟಿಸ್ ಜಾರಿ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಚಿಕ್ಕಬಳ್ಳಾಪುರದ ನಕಲಿ ವೈದ್ಯನಿಗೆ ಶೋಕಾಸ್ ನೋಟಿಸ್ ಜಾರಿ

    ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲೂಕು ಆಚೇಪಲ್ಲಿ ಕ್ರಾಸ್ ಬಳಿಯ ಅಯ್ಯಪ್ಪ ಎಂಟರ್‍ಪ್ರೈಸಸ್ ಅಂಗಡಿಯಲ್ಲಿ ವೈದ್ಯಕೀಯ ಪರೀಕ್ಷೆ ಹಾಗೂ ಚಿಕಿತ್ಸೆಯನ್ನ ನೀಡುತ್ತಿದ್ದ ನಕಲಿ ವೈದ್ಯನಿಗೆ ಶೋಕಾಸ್ ನೋಟಿಸ್ ಜಾರಿಯಾಗಿದೆ.

    ವರದಿಯ ಫಲಶೃತಿಯಾಗಿ ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆಯಂತೆ ಸ್ಥಳಕ್ಕೆ ಭೇಟಿ ನೀಡಿದ್ದ ತಾಲೂಕು ಆರೋಗ್ಯಾಧಿಕಾರಿ ಸತ್ಯನಾರಾಯಣ್ ಅವರು ನಕಲಿ ವೈದ್ಯ ನರೇಶ್‍ಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.  ಒಂದು ವಾರದೊಳಗೆ ವಿಚಾರಣೆಗೆ ಖುದ್ದಾಗಿ ಹಾಜರಾಗಿ ಉತ್ತರ ನೀಡುವಂತೆ ನೋಟಿಸ್‍ನಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ರವಿ ಪ್ರಕಾಶ್ ನಕಲಿ ವೈದ್ಯರ ಕಡಿವಾಣಕ್ಕೆ ಕಾನೂನು ರೀತಿಯ  ಎಲ್ಲ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

    ನರೇಶ್ ಕಳೆದ ಮೂರು ವರ್ಷಗಳಿಂದ ಜನರಿಗೆ ಚಿಕಿತ್ಸೆ ನೀಡುತ್ತಿದ್ದನು. ಈ ಪ್ರಕರಣದ ಬೆನ್ನತ್ತಿದ್ದ ಪಬ್ಲಿಕ್ ರಹಸ್ಯ ಕಾರ್ಯಚರಣೆಯ ಮೂಲಕ ಪ್ರಕರಣವನ್ನು ಬಯಲು ಮಾಡಿತ್ತು.

    ಇದನ್ನೂ ಓದಿ: ಚಿಲ್ಲರೆ ಅಂಗಡಿಯಲ್ಲಿ ತಲೆ ಎತ್ತಿದೆ ಆಸ್ಪತ್ರೆ – ಅಂಗಡಿ ಮಾಲೀಕನೇ ಇಲ್ಲಿ ಡಾಕ್ಟರ್  

     

  • ಚಿಲ್ಲರೆ ಅಂಗಡಿಯಲ್ಲಿ ತಲೆ ಎತ್ತಿದೆ ಆಸ್ಪತ್ರೆ – ಅಂಗಡಿ ಮಾಲೀಕನೇ ಇಲ್ಲಿ ಡಾಕ್ಟರ್

    ಚಿಲ್ಲರೆ ಅಂಗಡಿಯಲ್ಲಿ ತಲೆ ಎತ್ತಿದೆ ಆಸ್ಪತ್ರೆ – ಅಂಗಡಿ ಮಾಲೀಕನೇ ಇಲ್ಲಿ ಡಾಕ್ಟರ್

    – ಬಾಗೇಪಲ್ಲಿ ಜನರ ಜೀವದ ಜೊತೆ ನಕಲಿ ವೈದ್ಯನ ಚೆಲ್ಲಾಟ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಮಿತಿ ಮೀರಿದ್ದು, ಇದಕ್ಕೆ ಸ್ಪಷ್ಟ ನಿದರ್ಶನ ಎಂಬಂತೆ ಚಿಲ್ಲರೆ ಅಂಗಡಿಯೊಂದರಲ್ಲಿ ಅಂಗಡಿ ಮಾಲೀಕ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವ ಘಟನೆ ಪಬ್ಲಿಕ್ ಟಿವಿ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಜಿಲ್ಲೆಯ ಬಾಗೇಪಲ್ಲಿ ತಾಲೂಕು ಆಚೇಪಲ್ಲಿ ಕ್ರಾಸ್ ಬಳಿಯ ಅಯ್ಯಪ್ಪ ಎಂಟರ್‍ಪ್ರೈಸಸ್ ಅಂಗಡಿಯಲ್ಲಿ ವೈದ್ಯಕೀಯ ಪರೀಕ್ಷೆ ಹಾಗೂ ಚಿಕಿತ್ಸೆಯನ್ನ ನೀಡಲಾಗ್ತಿದೆ. ಅಂಗಡಿ ಮಾಲೀಕ ನರೇಶ್ ಎಂಬಾತ ವೈದ್ಯಕೀಯ ಪರೀಕ್ಷೆ ಮಾಡಿ ಮಾತ್ರೆ ಹಾಗೂ ಇಂಜೆಕ್ಷನ್ ನೀಡುತ್ತಾ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾನೆ.

    ನಾನು ಆರ್‍ಎಂಪಿ ಡಾಕ್ಟರ್, ಕಳೆದ 3 ವರ್ಷಗಳಿಂದಲೂ ಇದೇ ರೀತಿ ಚಿಕಿತ್ಸೆ ನೀಡುತ್ತಿದ್ದೇನೆ ಎಂದು ಅಂಗಡಿ ಮಾಲೀಕ ನರೇಶ್ ಹೇಳಿದ್ದಾನೆ. 3 ವರ್ಷಗಳಿಂದಲೂ ಅಂಗಡಿ ಮಾಲೀಕ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ರೂ ಅಕ್ರಮಕ್ಕೆ ಕಡಿವಾಣ ಹಾಕಲು ಜಿಲ್ಲಾ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದೇ ವಿಫಲವಾಗಿರುವುದು ಸಾಬೀತಾಗಿದೆ.