Tag: fake doctor

  • ಕುಡಿತದ ಚಟ ಬಿಡಿಸೋ ನಾಟಿ ಔಷಧಿ ಸೇವಿಸಿ ನಾಲ್ವರು ಸಾವು – ನಕಲಿ ವೈದ್ಯ ಅರೆಸ್ಟ್

    ಕುಡಿತದ ಚಟ ಬಿಡಿಸೋ ನಾಟಿ ಔಷಧಿ ಸೇವಿಸಿ ನಾಲ್ವರು ಸಾವು – ನಕಲಿ ವೈದ್ಯ ಅರೆಸ್ಟ್

    ಕಲಬುರಗಿ: ಕುಡಿತದ ಚಟ ಬಿಡಿಸಲು ನಕಲಿ ವೈದ್ಯನಿಂದ (Fake Doctor) ಚಿಕಿತ್ಸೆ ಪಡೆದು ನಾಲ್ವರು ಮೃತಪಟ್ಟಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆ ಸೇಡಂ (Sedam) ಪಟ್ಟಣದಲ್ಲಿ ನಡೆದಿದೆ.

    ಬಂಧಿತ ನಕಲಿ ವೈದ್ಯ

    ಲಕ್ಷ್ಮಿ, ಗಣೇಶ್ ರಾಠೋಡ್, ನಾಗೇಶ್ ಹಾಗೂ ಮನೋಹರ್ ಮೃತ ದುರ್ದೈವಿಗಳು. ನಕಲಿ ವೈದ್ಯ ಸಾಯಪ್ಪ ಮುತ್ಯಾ ಅಲಿಯಾಸ್ ಫಕೀರಪ್ಪ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ನನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾರೆಂದು ಗೊತ್ತಿಲ್ಲ: ಡಾ.ಸುಧಾಕರ್ ರಿಯಾಕ್ಷನ್

    ಮದ್ಯವ್ಯಸನಿಗಳಾಗಿದ್ದ ಲಕ್ಷ್ಮಿ, ಗಣೇಶ್ ರಾಠೋಡ್, ನಾಗೇಶ್ ಹಾಗೂ ಮನೋಹರ್ ತಮ್ಮ ಕುಟುಂಬಸ್ಥರೊಂದಿಗೆ ಸೇಡಂ ತಾಲೂಕಿನ ಇಮಡಾಪುರ ಗ್ರಾಮಕ್ಕೆ ಬಂದಿದ್ದರು. ಇಮಡಾಪುರ ಗ್ರಾಮದ ಸಾಯಪ್ಪ ಮುತ್ಯಾ ಅಲಿಯಾಸ್ ಫಕೀರಪ್ಪ ಎಂಬ ವ್ಯಕ್ತಿ ಮದ್ಯವ್ಯಸನಿಗಳಿಗೆ ಕುಡಿತದ ಚಟ ಬಿಡಿಸೋಕೆ ನಾಟಿ ಔಷಧಿ ನೀಡುತ್ತಿದ್ದ. ಕಳೆದ ಹಲವು ವರ್ಷಗಳಿಂದ ನಾಟಿ ಔಷಧಿ ನೀಡುತ್ತಾ ಫೇಮಸ್ ಆಗಿದ್ದ. ಇದನ್ನೂ ಓದಿ: ಘಾನಾದಲ್ಲಿ ಹೆಲಿಕಾಪ್ಟರ್ ಪತನ – ಇಬ್ಬರು ಸಚಿವರು ಸೇರಿ 8 ಮಂದಿ ಸಾವು

    ಹೀಗಾಗಿ, ಆ. 6ರಂದು ಶಹಬಾದ ಪಟ್ಟಣದ ಗಣೇಶ್ ರಾಠೋಡ್, ನಾಗೇಶ್, ಚಿತ್ತಾಪುರ ತಾಲೂಕಿನ ಭೀಮನಹಳ್ಳಿ ತಾಂಡಾ ನಿವಾಸಿ ಮನೋಹರ್ ಮತ್ತು ಸೇಡಂ ತಾಲೂಕಿನ ಬುರಗಪಳ್ಳಿ ಗ್ರಾಮದ ನಿವಾಸಿ ಲಕ್ಷ್ಮೀ, ತನ್ನ ಪುತ್ರ ನಿಂಗಪ್ಪನೊಂದಿಗೆ ಬಂದಿದ್ದರು. ಸಾಯಪ್ಪ ಔಷಧಿಯನ್ನು ಮೂಗಿಗೆ ಹಾಕುತ್ತಿದ್ದಂತೆ ಎಲ್ಲರಿಗೂ ವಾಂತಿ ಶುರುವಾಗಿತ್ತು. ತಕ್ಷಣವೇ ಸಮೀಪದ ಆಸ್ಪತ್ರೆಗೆ ಸೇರಿದ್ದರು. ಆದರೆ ಅಷ್ಟರಲ್ಲಾಗಲೇ ಲಕ್ಷ್ಮೀ ಮತ್ತು ಗಣೇಶ್ ರಾಠೋಡ್, ನಾಗೇಶ್ ಹಾಗೂ ಮನೋಹರ್ ಮೃತಪಟ್ಟಿದ್ದಾರೆ. ವಾಂತಿಯಿಂದ ತೀವ್ರವಾಗಿ ಬಳಲುತ್ತಿದ್ದ ನಿಂಗಪ್ಪನನ್ನ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಚಿಕಿತ್ಸೆ ಪಡೆಯುತ್ತಿದ್ದ ನಿಂಗಪ್ಪ ಹಾಗೂ ಕುಟುಂಬಸ್ಥರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಇನ್ನೂ ಘಟನೆ ಬಳಿಕ ತೆಲಂಗಾಣದ ತಂಗಿಯ ಮನೆಯಲ್ಲಿ ತಲೆಮರೆಸಿಕೊಂಡಿದ್ದ ಸಾಯಪ್ಪನನ್ನು ಸೇಡಂ ಪೊಲೀಸರು (Sedam Police) ಬಂಧಿಸಿದ್ದಾರೆ. ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರಸಿದ್ಧ ವಿದೇಶಿ ವೈದ್ಯರಂತೆ ನಟಿಸಿ ಹಾರ್ಟ್‌ ಆಪರೇಷನ್‌ – ನಕಲಿ ವೈದ್ಯನ ಹುಚ್ಚಾಟಕ್ಕೆ 7 ಜನ ಬಲಿ

    ಪ್ರಸಿದ್ಧ ವಿದೇಶಿ ವೈದ್ಯರಂತೆ ನಟಿಸಿ ಹಾರ್ಟ್‌ ಆಪರೇಷನ್‌ – ನಕಲಿ ವೈದ್ಯನ ಹುಚ್ಚಾಟಕ್ಕೆ 7 ಜನ ಬಲಿ

    ಭೋಪಾಲ್‌: ಮಧ್ಯಪ್ರದೇಶದ (Madhya Pradesh) ಆಸ್ಪತ್ರೆಯೊಂದರಲ್ಲಿ (Hospital) ನಕಲಿ ವೈದ್ಯನೊಬ್ಬ ಸುಮಾರು 7 ಜನರಿಗೆ ಹೃದಯ (Heart) ಶಸ್ತ್ರಚಿಕಿತ್ಸೆ ಮಾಡಿದ್ದು, ರೋಗಿಗಳ ಸಾವಿಗೆ ಕಾರಣನಾಗಿದ್ದಾನೆ.

    ದಾಮೋಹ್ ನಗರದ ಖಾಸಗಿ ಮಿಷನರಿ ಆಸ್ಪತ್ರೆಯಲ್ಲಿ ಒಂದು ತಿಂಗಳೊಳಗೆ 7 ಜನರ ಸಾವುಗಳ ವರದಿಯಾಗಿತ್ತು. ಇದು ಈ ಪ್ರದೇಶದಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ವೈದ್ಯನನ್ನು ಅಧಿಕಾರಿಗಳು ವಿಚಾರಿಸಿದಾಗ ಆತ ನಕಲಿ ವೈದ್ಯ ಎಂದು ತಿಳಿದು ಬಂದಿದೆ.

    ಎನ್ ಜಾನ್ ಕೆಮ್ ಎಂಬ ವ್ಯಕ್ತಿ ಕ್ರಿಶ್ಚಿಯನ್ ಮಿಷನರಿ ಆಸ್ಪತ್ರೆಯಲ್ಲಿ ಬ್ರಿಟಿಷ್ ವೈದ್ಯನಂತೆ ನಟಿಸಿ ಕೆಲಸ ಮಾಡುತ್ತಿದ್ದ. ಹೆಚ್ಚಿನ ತನಿಖೆಯ ನಂತರ, ಆರೋಪಿಯ ನಿಜವಾದ ಹೆಸರು ನರೇಂದ್ರ ವಿಕ್ರಮಾದಿತ್ಯ ಯಾದವ್ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪತ್ನಿಗೆ ಅಕ್ರಮ ಸಂಬಂಧ ಶಂಕೆ – ಸುತ್ತಿಗೆಯಿಂದ ಇಂಜಿನಿಯರ್‌ ತಲೆ ಒಡೆದು ಹತ್ಯೆಗೈದ ಪತಿ

    ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಮಕ್ಕಳ ಕಲ್ಯಾಣ ಸಮಿತಿಯ ಜಿಲ್ಲಾ ಅಧ್ಯಕ್ಷ ಮತ್ತು ವಕೀಲ ದೀಪಕ್ ತಿವಾರಿ, ಅಧಿಕೃತ ಸಾವಿನ ಸಂಖ್ಯೆ 7 ಆಗಿದ್ದರೂ, ನಿಜವಾದ ಸಂಖ್ಯೆ ಇನ್ನೂ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ. ಈ ವೈದ್ಯನ ವಿರುದ್ಧ ನಾನು ಈ ಹಿಂದೆ ದಾಮೋಹ್ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ದೂರು ನೀಡಿದ್ದೆ ಎಂದು ತಿಳಿಸಿದ್ದಾರೆ.

    ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಪ್ರಿಯಾಂಕ್ ಕನೂಂಗೊ ಈ ಬಗ್ಗೆ ಪ್ರತಿಕ್ರಿಯಿಸಿ, ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಮಿಷನರಿ ಆಸ್ಪತ್ರೆ ಸರ್ಕಾರದಿಂದ ಹಣವನ್ನು ಪಡೆಯುತ್ತಿದೆ ಎಂದು ಹೇಳಿದ್ದಾರೆ.

    ಈ ಪ್ರಕರಣದ ಬಳಿಕ ತನಿಖಾ ತಂಡವು ಆಸ್ಪತ್ರೆಯಿಂದ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಂಡಿದೆ. ತನಿಖೆಯ ಸಮಯದಲ್ಲಿ, ವಂಚಕ ಪ್ರಸಿದ್ಧ ಬ್ರಿಟಿಷ್ ವೈದ್ಯರಂತೆಯೇ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾನೆ ಎಂದು ತಿಳಿದುಬಂದಿದೆ. ಆತನ ವಿರುದ್ಧ ಈ ಹಿಂದೆ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕಾರವಾರ | ಹಿಂದೂ ಮಹಾಸಾಗರದಲ್ಲಿ 9 ಮಿತ್ರ ರಾಷ್ಟ್ರಗಳೊಂದಿಗೆ IOS ಸಾಗರ ಹೆಸರಿನ ಕಾರ್ಯಾಚರಣೆಗೆ ಚಾಲನೆ

  • ನಕಲಿ ಡಾಕ್ಟರ್ ವಿರುದ್ದ ಸರ್ಕಾರದಿಂದ ಕಠಿಣ ಕ್ರ‌ಮ : ದಿನೇಶ್ ಗುಂಡೂರಾವ್

    ನಕಲಿ ಡಾಕ್ಟರ್ ವಿರುದ್ದ ಸರ್ಕಾರದಿಂದ ಕಠಿಣ ಕ್ರ‌ಮ : ದಿನೇಶ್ ಗುಂಡೂರಾವ್

    ಬೆಂಗಳೂರು: ರಾಜ್ಯದಲ್ಲಿ ನಕಲಿ ಡಾಕ್ಟರ್ (Fake Doctor) ಹಾವಳಿ ಹೆಚ್ಚಾಗಿದ್ದು, ನಕಲಿ ವೈದ್ಯರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದ್ದಾರೆ.

    ವಿಧಾ‌ನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ತಿಪ್ಪಣ್ಣ ಕಮಕನೂರು ಅವರು, ಕಲಬುರಗಿಯಲ್ಲಿ ನಕಲಿ ವೈದ್ಯರ ಹಾವಳಿ ಜಾಸ್ತಿಯಾಗಿದೆ. ನೂರಾರು ಜನ ನಕಲಿ ವೈದ್ಯರ ಚಿಕಿತ್ಸೆಯಿಂದ ಸತ್ತು ಹೋಗಿದ್ದಾರೆ. ಕಲಬುರಗಿ ಡಿಹೆಚ್‌ಒ ಶಾಮೀಲಾಗಿದ್ದಾರೆ. ಹೀಗಾಗಿ ಕೂಡಲೇ ಸಮಿತಿ ರಚನೆ ಮಾಡಿ ನಕಲಿ ವೈದ್ಯರ ಪತ್ತೆ ಹಚ್ಚಿ ಶಿಕ್ಷೆ ಕೊಡಿ ಎಂದು ಒತ್ತಾಯಿಸಿದರು.

     

    ಈ ಪ್ರಶ್ನೆಗೆ ದಿನೇಶ್ ಗುಂಡೂರಾವ್ ಉತ್ತರ ನೀಡಿ, ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಜಾಸ್ತಿಯಿದೆ. ನಕಲಿ ವೈದ್ಯರನ್ನ ಹುಡುಕಿ ಅವರ ಕ್ಲಿನಿಕ್‌ ಬಂದ್‌ ಮಾಡಿಸುವ ಕೆಲಸ‌ ಮತ್ತು ಅವರ ವಿರುದ್ದ ಕ್ರಮ ಕೈಗೊಳ್ಳುವ ಕೆಲಸ ಮಾಡಿದ್ದೇವೆ. ಇದಲ್ಲದೆ ಅಯುಷ್ ವೈದ್ಯರು ಕ್ಲಿನಿಕ್ ಮುಂದೆ ಗ್ರೀನ್ ಬೋರ್ಡ್ ಹಾಕೋದು ಕಡ್ಡಾಯ ಮಾಡಲಾಗಿದೆ ಎಂದರು.  ಇದನ್ನೂ ಓದಿ: ರಾಜ್ಯದ ಎಲ್ಲಾ ಮಾಲ್‌ಗಳಿಗೂ ಮಾರ್ಗಸೂಚಿ: ಡಿಕೆಶಿ ಘೋಷಣೆ

    ಇಂಗ್ಲಿಷ್ ‌ಔಷಧಿ ನೀಡುವ ಕ್ಲಿನಿಕ್‌ನವರು ನೀಲಿ ಬೋರ್ಡ್ ಹಾಕಲು ಕಡ್ಡಾಯವಾಗಿ ಸೂಚನೆ ನೀಡಲಾಗಿದೆ. ನಕಲಿ ವೈದ್ಯರಿಗೆ 3 ವರ್ಷ ಜೈಲು ಶಿಕ್ಷೆಯೂ ನಿಯಮದಲ್ಲಿ ಇದೆ.1 ಲಕ್ಷ ರೂ. ದಂಡ ವಿಧಿಸುವ ನಿಯಮ ‌ಇದೆ. ನಕಲಿ ವೈದ್ಯರ ಬಂಧನ ಮಾಡಿದಾಗ ಅವರ ಪರವಾಗಿ ರಾಜಕಾರಣಿಗಳೇ ಅವರನ್ನ ಬಿಡಿಸಿ ಬರುತ್ತಾರೆ. ನಕಲಿ ವೈದ್ಯರ ಹಾವಳಿ ಕಡಿವಾಣಕ್ಕೆ ಮತ್ತಷ್ಟು ಕ್ರಮಗಳನ್ನ ಸರ್ಕಾರ ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು.

     

  • ಓದಿದ್ದು 10ನೇ ತರಗತಿ ಮಾಡುವುದು ಡಾಕ್ಟರ್ ವೃತ್ತಿ- ಬಾಗಲಕೋಟೆಯಲ್ಲಿದ್ದಾರೆ 384 ನಕಲಿ ವೈದ್ಯರು

    ಓದಿದ್ದು 10ನೇ ತರಗತಿ ಮಾಡುವುದು ಡಾಕ್ಟರ್ ವೃತ್ತಿ- ಬಾಗಲಕೋಟೆಯಲ್ಲಿದ್ದಾರೆ 384 ನಕಲಿ ವೈದ್ಯರು

    ಬಾಗಲಕೋಟೆ: ಜಿಲ್ಲೆಯಲ್ಲಿ ನಕಲಿ ವೈದ್ಯರ (Fake Doctor) ಹಾವಳಿ ಹೆಚ್ಚಾಗಿದೆ. ನಕಲಿ ವೈದ್ಯರ ಆಚಾತುರ್ಯಕ್ಕೆ ಒಂದು ಜೀವ ಬಲಿ ಆಗಿದೆ. ಪೊಲೀಸರ ಪರಿಶೀಲನೆ ವೇಳೆ ಬಾಗಲಕೋಟೆ ಜಿಲ್ಲೆಯಲ್ಲಿ (Bagalkot District) 384 ಜನರು ನಕಲಿ ವೈದ್ಯರು ಇರುವುದು ಪತ್ತೆಯಾಗಿದೆ.

    ಅಚ್ಚರಿ ಅಂದರೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಬಿಎ, ಬಿಕಾಂ ಓದಿದವರು ವೈದ್ಯರಾಗಿದ್ದಾರೆ. ಇದು ಜಿಲ್ಲೆಯಲ್ಲಿನ ಆರೋಗ್ಯ ಇಲಾಖೆ ಎಷ್ಟು ನಿರ್ಲಕ್ಷ್ಯ ವಹಿಸಿದೆ ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ.

     
    ಎಲ್ಲೆಲ್ಲಿ ಎಷ್ಟೆಷ್ಟು ನಕಲಿ ವೈದ್ಯರು?
    ಜಮಖಂಡಿ – 60
    ಬೀಳಗಿ – 39
    ಮುಧೋಳ – 37
    ಕಲಾದಗಿ – 29 ಇದನ್ನೂ ಓದಿ: ಮೆದುಳು ತಿನ್ನುವ ಅಮೀಬಾ ಸೋಂಕು – ಕೇರಳದಲ್ಲಿ 4ನೇ ಪ್ರಕರಣ ಪತ್ತೆ

    50ಕ್ಕೂ ಹೆಚ್ಚು ಜನ ಬಿಎಎಂಎಸ್ ಓದಿದವರು ಅಲೋಪಥಿ ಚಿಕಿತ್ಸೆ ನೀಡುತ್ತಿದ್ದಾರೆ. ಒಟ್ಟಾರೆ 384 ಜನ ನಕಲಿ ವೈದ್ಯರ ಪಟ್ಟಿ ಕೈ ಸೇರಿದೆ. ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದ ಕವಿತಾ ಎಂಬುವರು ಪಿಯುಸಿ ಓದಿದ್ದು ಗರ್ಭಪಾತ ದಂಧೆ ಮಾಡುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.

    ಜೂನ್ 18ರಂದು ಜಮಖಂಡಿಯಲ್ಲಿ ಸುರೇಖಾ ಚರಕಿ ಎಂಬ ನಕಲಿ ವೈದ್ಯೆ ಸಿಕ್ಕಿಬಿದ್ದಿದ್ದಾಳೆ. ಈಕೆಯ ಆಸ್ಪತ್ರೆಯಲ್ಲಿ ಗರ್ಭಪಾತ ದಂಧೆಗೆ ಬಳಸುವ ವಸ್ತುಗಳು ಸಿಕ್ಕಿವೆ. ಈಕೆ ಓದಿದ್ದು ಎಸ್‌ಎಸ್‌ಎಲ್‌ಸಿ ಮಾತ್ರ. ಆದರೆ ಮಾಡುತ್ತಿದ್ದನ್ನು ವೈದ್ಯ ವೃತ್ತಿ. ಗರ್ಭಪಾತ ಮಹಿಳೆ ಸಾವಿನ ನಂತರ ನಕಲಿ ವೈದ್ಯರ ಬಣ್ಣ ಬಯಲಾಗುತ್ತಿದೆ. ಪೊಲೀಸರು ಕೊಟ್ಟ ವರದಿ ಪ್ರಕಾರ ಆರೋಗ್ಯ ಇಲಾಖೆ ನಕಲಿ ವೈದ್ಯರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳಬೇಕಿದೆ.

  • ನಕಲಿ ವೈದ್ಯರಿಗೆ ಶಾಕ್ ನೀಡಿದ ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು

    ನಕಲಿ ವೈದ್ಯರಿಗೆ ಶಾಕ್ ನೀಡಿದ ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು

    ಬೀದರ್: ಗಡಿ ಜಿಲ್ಲೆ ಬೀದರ್‌ನಲ್ಲಿ (Bidar) ನಕಲಿ ವೈದ್ಯರ (Fake Doctor) ಹಾವಳಿ ಹಿನ್ನೆಲೆಯಲ್ಲಿ ಇಂದು (ಬುಧವಾರ) ಕಮಲನಗರ ತಾಲೂಕಿನ ಒಟ್ಟು 6 ನಕಲಿ ಕ್ಲಿನಿಕ್‌ಗಳ (Clinic) ಮೇಲೆ ದಿಢೀರ್ ದಾಳಿ (Raid) ಮಾಡಿ ವೈದ್ಯಾಧಿಕಾರಿಗಳು ನಕಲಿ ವೈದ್ಯರಿಗೆ ಶಾಕ್ ನೀಡಿದ್ದಾರೆ.

    ನಕಲಿ ಕ್ಲಿನಿಕ್‌ಗಳಾದ ಡಾ. ಬಿಹಾರಿ ಕ್ಲಿನಿಕ್, ಲಕ್ಷ್ಮೀ ಕ್ಲಿನಿಕ್ ಸೇರಿದಂತೆ ಒಟ್ಟು 6 ಕ್ಲಿನಿಕ್‌ಗಳ ಮೇಲೆ ತಾಲೂಕಿನ ಆರೋಗ್ಯಾಧಿಕಾರಿ ಡಾ. ಗಾಯತ್ರಿ ವಿಜಯಕುಮಾರ್ ಮತ್ತು ತಂಡದಿಂದ ದಾಳಿ ಮಾಡಲಾಗಿದೆ. ಇದನ್ನೂ ಓದಿ: ಡಾಲಿ ‘ಲಿಡ್ಕರ್’ಗೆ ರಾಯಭಾರಿ: ಸಿಎಂ ಅಧಿಕೃತ ಘೋಷಣೆ

    ದಾಳಿ ಮಾಡಿ ನಕಲಿ ವೈದ್ಯರ ಮೇಲೆ ಪ್ರಕರಣ ದಾಖಲಿಸಿದ ಜಿಲ್ಲಾ ಆರೋಗ್ಯಾಧಿಕಾರಿಗಳು ಲಕ್ಷಾಂತರ ಮೌಲ್ಯದ ಔಷಧಿಗಳನ್ನು ಜಪ್ತಿ ಮಾಡಿದ್ದಾರೆ. ಜೊತೆಗೆ ಯಾವುದೇ ಪರವಾನಿಗೆ ಇಲ್ಲದ ಕಮಲನಗರ ಗ್ರಾಮೀಣ ಭಾಗದ 2 ಕ್ಲಿನಿಕ್ ಹಾಗೂ ಪಟ್ಟಣದಲ್ಲಿ 4 ನಕಲಿ ಕ್ಲಿನಿಕ್‌ಗಳಿಗೆ ಬೀಗ ಹಾಕಲಾಗಿದೆ.

    ಸಾರ್ವಜನಿಕರು ನಕಲಿ ವೈದ್ಯರ ಹತ್ತಿರ ಚಿಕಿತ್ಸೆ ಪಡೆಯದೆ ನೊಂದಾಯಿತ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು ಎಂದು ಟಿಎಚ್‌ಒ ಮನವಿ ಮಾಡಿದ್ದಾರೆ. ಇದನ್ನೂ ಓದಿ: ‘ಮಿಚಾಂಗ್’‌ ಎಫೆಕ್ಟ್‌; 5,060 ಕೋಟಿ ಪರಿಹಾರ ನೀಡಿ – ಪ್ರಧಾನಿಗೆ ತ.ನಾಡು ಸಿಎಂ ಪತ್ರ

  • ಜ್ವರಕ್ಕೆ ಚುಚ್ಚು ಮದ್ದು ತೆಗೆದುಕೊಂಡ ಬಾಲಕ ಸಾವು – ನಕಲಿ ವೈದ್ಯ ಅರೆಸ್ಟ್

    ಜ್ವರಕ್ಕೆ ಚುಚ್ಚು ಮದ್ದು ತೆಗೆದುಕೊಂಡ ಬಾಲಕ ಸಾವು – ನಕಲಿ ವೈದ್ಯ ಅರೆಸ್ಟ್

    ಚೆನ್ನೈ: ನಕಲಿ ವೈದ್ಯನೊಬ್ಬ (Fake Doctor) ಚುಚ್ಚುಮದ್ದು (Injection) ನೀಡಿದ್ದರಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ 6 ವರ್ಷದ ಬಾಲಕ (Boy) ಸಾವನ್ನಪ್ಪಿರುವ ಘಟನೆ ತಮಿಳುನಾಡಿನ (Tamilnadu) ವಿರುದುನಗರದಲ್ಲಿ ನಡೆದಿದೆ.

    ವರದಿಗಳ ಪ್ರಕಾರ ಬಾಲಕ ಕವಿ ದೇವನಾಥನ್‌ಗೆ ನವೆಂಬರ್ 4 ರಂದು ಅನಾರೋಗ್ಯ ಕಾಣಿಸಿಕೊಂಡಿತ್ತು. ಆತನನ್ನು ತಂದೆ ಮಹೇಶ್ವರನ್ ಸ್ಥಳೀಯವಾಗಿ ಕ್ಲಿನಿಕ್ ನಡೆಸುತ್ತಿದ್ದ ನಕಲಿ ವೈದ್ಯ ಕ್ಯಾಥರೀನ್ ಬಳಿಗೆ ಕರೆದುಕೊಂಡು ಬಂದಿದ್ದರು. ಬಾಲಕನಿಗೆ ನಕಲಿ ವೈದ್ಯ ಜ್ವರಕ್ಕಾಗಿ ಚುಚ್ಚುಮದ್ದನ್ನು ನೀಡಿದ್ದು, ಮನೆಗೆ ಹಿಂದಿರುಗಿದಾಗ ಬಾಲಕನ ಕಾಲುಗಳು ಊದಿಕೊಳ್ಳಲು ಪ್ರಾರಂಭಿಸಿತ್ತು.

    ಬಳಿಕ ಬಾಲಕನನ್ನು ಮಹೇಶ್ವರನ್ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ವೈದ್ಯರು ಮಹೇಶ್ವರನ್ ಅವರ ಮನವಿಯ ಮೇರೆಗೆ ಪ್ಯಾರಸಿಟಮಾಲ್ ಚುಚ್ಚುಮದ್ದನ್ನು ನೀಡಿದರು. ಆದರೆ ಬಾಲಕನನ್ನು ಮನೆಗೆ ವಾಪಸ್ ಕರೆದುಕೊಂಡು ಹೋದಾಗ ಆತ ಕುಸಿದು ಬಿದ್ದಿದ್ದಾನೆ. ಇದನ್ನೂ ಓದಿ: ಬಾಲಕಿಯ ಗುಪ್ತಾಂಗದ ಮೇಲೆ ಮೇಣದ ಬತ್ತಿ ಇಟ್ಟು ಅತ್ಯಾಚಾರ- ಬಂಧನ ಭೀತಿಗೆ ವಿಷ ಸೇವಿಸಿದ ವೃದ್ಧ

    ತಕ್ಷಣ ಬಾಲಕನನ್ನು ರಾಜಪಾಳ್ಯಂ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಬಾಲಕ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬಳಿಕ ಮಹೇಶ್ವರನ್ ಅವರು ನೀಡಿರುವ ದೂರಿನ ಆಧಾರದ ಮೇಲೆ ಆರೋಗ್ಯ ಇಲಾಖೆ ಹಾಗೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ತನಿಖಾ ತಂಡ ಕ್ಯಾಥರೀನ್‌ನ ಕ್ಲಿನಿಕ್ ಅನ್ನು ತಲುಪಿದಾಗ ಅಲ್ಲಿ ಆತ ನಕಲಿ ವೈದ್ಯ ಎಂಬುದು ತಿಳಿದುಬಂದಿದೆ. ಆತನ ಬಳಿ ವೈದ್ಯಕೀಯ ವೃತ್ತಿಗೆ ಸಂಬಂಧಿಸಿದಂತೆ ಅರ್ಹ ದಾಖಲೆಗಳು ಲಭ್ಯವಾಗಿಲ್ಲ ಎಂಬುದನ್ನು ತಿಳಿದ ಬಾಲಕನ ಕುಟುಂಬ ಆಘಾತಕ್ಕೊಳಗಾಗಿದೆ. ತನಿಖಾ ತಂಡ ಬಳಿಕ ನಕಲಿ ವೈದ್ಯನ ಕ್ಲಿನಿಕ್‌ನಲ್ಲಿದ್ದ ಹಲವಾರು ಔಷಧ ಹಾಗೂ ಚುಚ್ಚುಮದ್ದುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಕ್ಯಾಥರೀನ್‌ನನ್ನು ಬಂಧಿಸಲಾಗಿದೆ. ಇದನ್ನೂ ಓದಿ: 79ರ ವೃದ್ಧನನ್ನು ನಗ್ನಗೊಳಿಸಿ ಫೋಟೋ ಕ್ಲಿಕ್ಕಿಸಿಕೊಂಡ್ಲು – ಹನಿಟ್ರ್ಯಾಪ್‍ಗೆ ಯತ್ನಿಸಿದ ಖತರ್ನಾಕ್ ಆಂಟಿ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ನಕಲಿ ವೈದ್ಯನ ಎಡವಟ್ಟಿಗೆ ಗರ್ಭಧರಿಸಿದ್ದ ಎಮ್ಮೆ ಸಾವು

    ನಕಲಿ ವೈದ್ಯನ ಎಡವಟ್ಟಿಗೆ ಗರ್ಭಧರಿಸಿದ್ದ ಎಮ್ಮೆ ಸಾವು

    ಬಾಗಲಕೋಟೆ: ನಕಲಿ ವೈದ್ಯನ ಎಡವಟ್ಟಿನಿಂದ ಗರ್ಭಧರಿಸಿದ್ದ ಎಮ್ಮೆ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕನಸಗೇರಿ ಗ್ರಾಮದಲ್ಲಿ ನಡೆದಿದೆ.

    ಜುಲೈ 26ರಂದು ಈ ಘಟನೆ ನಡೆದಿದ್ದು, ಬಂಧಿತ ನಕಲಿ ವೈದ್ಯನನ್ನು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಳಗಲಿ ಗ್ರಾಮದ ಶಿವಾನಂದ ಮಲ್ಲಪ್ಪ ರುದ್ರಪ್ಪ ಎಂದು ಗುರುತಿಸಲಾಗಿದೆ. 10 ತಿಂಗಳ ಎಮ್ಮೆಗೆ ಶಿವಾನಂದ ಮಲ್ಲಪ್ಪ ರುದ್ರಪ್ಪ ಬ್ಲೇಡ್‍ನಿಂದ ಶಸ್ತ್ರಚಿಕಿತ್ಸೆ ಮಾಡಿದ್ದನು. ಇದರಿಂದ ತೀವ್ರ ರಕ್ತಸ್ರಾವ ಉಂಟಾಗಿದ್ದು ಎಮ್ಮೆ ಮತ್ತು ಕರು ದುರ್ಮರಣ ಹೊಂದಿತ್ತು. ಇದನ್ನೂ ಓದಿ: ಗಂಗೆಗೂ ಜಲ ದಿಗ್ಬಂಧನ – ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದಲ್ಲಿ ವಿಸ್ಮಯ ರೀತಿಯಲ್ಲಿ ಜಲೋಧ್ಬವ

    ಇದೀಗ ಘಟನೆ ಬಹಿರಂಗಗೊಂಡ ಹಿನ್ನೆಲೆ ನಕಲಿ ವೈದ್ಯನ ವಿರುದ್ಧ ಮುಧೋಳ ಪಶು ವೈದ್ಯಾಧಿಕಾರಿಗಳು ಲೋಕಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದ್ಯ ಆರೋಪಿ ಶಿವಾನಂದ ಮಲ್ಲಪ್ಪ ರುದ್ರಪ್ಪನ್ನು ಲೋಕಾಪುರ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಪತ್ನಿ ಸಂಬಂಧಿ ಜೊತೆ ಲವ್ವಿ-ಡವ್ವಿ, ವೇಶ್ಯೆ ಪ್ರೀತಿಗೆ ಬಿದ್ದು ಆದ ಸೈಕೋ ಕಿಲ್ಲರ್ – ಮಂಡ್ಯದಲ್ಲೊಂದು ಮರ್ಡರ್ ಮಿಸ್ಟ್ರಿ

    Live Tv
    [brid partner=56869869 player=32851 video=960834 autoplay=true]

  • ನಕಲಿ ವೈದ್ಯರಿಂದ ಬಂಜೆತನದ ಔಷಧಿ ಸೇವಿಸಿದ ಮಹಿಳೆ ಸಾವು

    ನಕಲಿ ವೈದ್ಯರಿಂದ ಬಂಜೆತನದ ಔಷಧಿ ಸೇವಿಸಿದ ಮಹಿಳೆ ಸಾವು

    ತುಮಕೂರು: ಮಕ್ಕಳಿಲ್ಲದ ದಂಪತಿಗೆ ಮಕ್ಕಳ ಭಾಗ್ಯ ಕಲ್ಪಿಸುವುದಾಗಿ ಹಣ ಪಡೆದು ನಕಲಿ ವೈದ್ಯ ದಂಪತಿ ನೀಡಿದ್ದ ನಕಲಿ ಐವಿಎಫ್ ಚಿಕಿತ್ಸೆಗೆ ಮಹಿಳೆಯೊಬ್ಬಳು ಬಲಿಯಾಗಿದ್ದಾರೆ.

    ತಿಪಟೂರು ತಾಲೂಕಿನ ಬೆಳಗರಹಳ್ಳಿ ಗ್ರಾಮದ ಮಮತಾ(32) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮಮತಾಗೆ ಮಲ್ಲಿಕಾರ್ಜುನ್ ಜೊತೆ ಕಳೆದ 15 ವರ್ಷಗಳ ಹಿಂದೆ ಮದುವೆಯಾಗಿತ್ತು. ಮಕ್ಕಳಾಗದ ಕಾರಣ ಹಲವು ಆಸ್ಪತ್ರೆ ಸುತ್ತಾಡಿ ತಪಾಸಣೆ ನಡೆಸಿ ಮಕ್ಕಳಾಗುವುದಿಲ್ಲವೆಂದು ನೊಂದಿದ್ದರು. ಇದೇ ಸಮಯದಲ್ಲಿ ಮಂಡ್ಯ ಮೂಲದ ಮಂಜುನಾಥ್ ಹಾಗೂ ಉಡುಪಿ ಮೂಲದ ವಾಣಿ ಎಂಬ ನಕಲಿ ವೈದ್ಯದಂಪತಿ, ಮಮತಾ ಹಾಗೂ ಮಲ್ಲಿಕಾರ್ಜುನ್ ಅವರನ್ನ ಸಂಪರ್ಕಿಸಿ ಮಕ್ಕಳಾಗುವಂತೆ ಐವಿಎಫ್ ಚಿಕಿತ್ಸೆ ನೀಡುತ್ತೇವೆ ಎಂದು ನಂಬಿಸಿದ್ದಾರೆ.

    ಅಲ್ಲದೆ ದಂಪತಿಯಿಂದ 4 ಲಕ್ಷ ಹಣ ಪಡೆದು 4 ತಿಂಗಳ ಕಾಲ ಅವೈಜ್ಞಾನಿಕವಾಗಿ ನಕಲಿ ಐವಿಎಫ್ ಚಿಕಿತ್ಸೆ ನೀಡಿದ್ದಾರೆ. ನಂತರ ನಿಮ್ಮ ಗರ್ಭದಲ್ಲಿ ಮಗು ಬೆಳೆಯುತ್ತಿದೆ ಎಂದು ನಂಬಿಸಿ ಮತ್ತಷ್ಟು ಹಣ ಪಡೆದಿದ್ದಾರೆ. ಆದರೆ ಕೆಲ ದಿನಗಳ ಬಳಿಕ ಮಮತಾ ಹೊಟ್ಟೆ ನೋವಿಗೆ ಒಳಗಾಗಿ ಆಸ್ಪತ್ರೆ ದಾಖಲಾದಾಗ ನಕಲಿಗಳ ಅಸಲಿ ಸತ್ಯ ಬಯಲಾಗಿದ್ದು ಮಮತಾ ಗರ್ಭಿಣಿಯಾಗಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.

    ನಂತರ ತೀವ್ರ ಅನಾರೋಗ್ಯಕ್ಕೆ ಒಳಗಾದ ಮಮತಾ ನಕಲಿ ಚಿಕಿತ್ಸೆಯ ಪರಿಣಾಮವಾಗಿ ಗರ್ಭಕೋಶ, ಕಿಡ್ನಿ, ಹೃದಯ ಹಾಗೂ ಮೆದುಳು ಸಂಬಂಧಿಸಿದ ಖಾಯಿಲೆಗೆ ತುತ್ತಾಗಿದ್ದು ಬೆಂಗಳೂರು ಸೆಂಟ್ ಜಾನ್ ಆಸ್ಪತ್ರೆ, ತುಮಕೂರಿನ ಶ್ರೀದೇವಿ ಆಸ್ಪತ್ರೆಯಲ್ಲಿ ಸತತ ಮೂರು ತಿಂಗಳು ಸುಮಾರು 23ಲಕ್ಷ ಹಣ ಖರ್ಚು ಮಾಡಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಬೇಸತ್ತ ಪತಿ, ಮಮತಾಳನ್ನ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು. ಇಂದು ಬೆಳಗ್ಗೆ ಮಮತಾ ಮೃತಪಟ್ಟಿದ್ದಾರೆ. ಇದನ್ನೂ ಓದಿ: 50 KG ನಿಂಬೆಹಣ್ಣನ್ನೇ ಹೊತ್ತೊಯ್ದ ಖತರ್ನಾಕ್ ಕಳ್ಳನ ವೀಡಿಯೋ ವೈರಲ್

    ಮಕ್ಕಳಾಸೆಗೆ ನಕಲಿ ವೈದ್ಯ ದಂಪತಿಯ ಮೋಸದ ಜಾಲಕ್ಕೆ ಬಿದ್ದ ಪತಿ ಮಲ್ಲಿಕಾರ್ಜುನ್ ಹಣ ಹಾಗೂ ಪತ್ನಿಯನ್ನ ಕಳೆದು ಕೊಂಡು ಕಣ್ಣಿರಿಡುತ್ತಿದ್ದಾರೆ. ಈ ನಕಲಿ ವೈದ್ಯ ದಂಪತಿ ತಿಪಟೂರು, ತುರುವೇಕೆರೆ ಅರಸೀಕೆರೆ ಭಾಗದ ಹಲವಾರು ಗ್ರಾಮಗಳಲ್ಲಿ ಮಕ್ಕಳಿಲ್ಲದ ದಂಪತಿಯಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ನಕಲಿ ಚಿಕಿತ್ಸೆ ನೀಡಿದ್ದು, ಈ ಬಗ್ಗೆ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಜನವರಿ 19 ರಂದು ನಕಲಿ ವೈದ್ಯರಾದ ವಾಣಿ ಮತ್ತು ಮಂಜುನಾಥ್ ವೈದ್ಯದಂಪತಿ ಮೇಲೆ ವಂಚನೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ವಾಣಿ ಮತ್ತು ಮಂಜುನಾಥ್ ಕೇವಲ ಎಸ್‍ಎಸ್‍ಎಲ್‍ಸಿ ಪಾಸಾಗಿದ್ದು ಯಾವುದೇ ವೈದ್ಯಕೀಯ ಪದವಿ ಪಡೆದಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

    ನಕಲಿ ವೈದ್ಯರನ್ನ ಬಂಧಿಸಿದ್ದ ಪೊಲೀಸರು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಮೃತ ಮಮತಾ ಜೊತೆ ಇದೇ ಗ್ರಾಮದ ಹಲವು ದಂಪತಿ ಈ ನಕಲಿ ವೈದ್ಯರಿಂದ ಐವಿಎಫ್ ಚಿಕಿತ್ಸೆ ಪಡೆದ ಮಹಿಳೆಯರು ಆತಂಕ್ಕೆ ಒಳಗಾಗಿದ್ದು, ತಜ್ಞ ವೈದ್ಯರ ಮೊರೆಹೋಗಿದ್ದಾರೆ. ಮಮತಾ ಸಾವಿನ ಬಳಿಕ ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆಯನ್ನ ಚುರುಕುಗೊಳಿಸಿದ್ದಾರೆ. ಇದನ್ನೂ ಓದಿ: ಟಿಕ್‍ಟಾಕ್, ಪಬ್‍ಜಿ ಯುವಕರ ದಾರಿ ತಪ್ಪಿಸುತ್ತೆ – ಬ್ಯಾನ್ ಮಾಡಿದ ತಾಲಿಬಾನ್

  • ಇನ್‍ಸ್ಟಾಗ್ರಾಂನಲ್ಲಿ ಪರಿಚಯ- ನಕಲಿ ವೈದ್ಯನಿಂದ ಮಹಿಳೆಗೆ 80 ಲಕ್ಷ ದೋಖಾ

    ಇನ್‍ಸ್ಟಾಗ್ರಾಂನಲ್ಲಿ ಪರಿಚಯ- ನಕಲಿ ವೈದ್ಯನಿಂದ ಮಹಿಳೆಗೆ 80 ಲಕ್ಷ ದೋಖಾ

    ಬೆಂಗಳೂರು: ಇನ್‍ಸ್ಟಾಗ್ರಾಂ ನಲ್ಲಿ ಹೃದಯ ತಜ್ಞ ಅಂತ ಹೇಳಿಕೊಂಡು, ನಕಲಿ ವೈದ್ಯನೊಬ್ಬ ಮಹಿಳೆಗೆ 80 ಲಕ್ಷ ರೂ. ವಂಚಿಸಿರುವ ಘಟನೆ ನಗರದ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    50 ವರ್ಷದ ವಿಧವೆ ಮಹಿಳೆ, ಇನ್‍ಸ್ಟಾಗ್ರಾಂ ನಲ್ಲಿ ಹೃದಯ ತಜ್ಞರನ್ನು ಹುಡುಕುವಾಗ ಆರೋಪಿ ಮಾರ್ಬಿಸ್ ಹಾರ್ಮನ್ ಪರಿಚಯವಾಗಿದೆ. ಮಹಿಳೆಗೆ ಹೃದಯ ಸಂಬಂಧ ಖಾಯಿಲೆ ಇದ್ದಿದ್ದರಿಂದ ಇನ್‍ಸ್ಟಾಗ್ರಾಂ ನಲ್ಲಿ ಡಾಕ್ಟರ್ ಹುಡುಕುವಾಗ, ಹಾರ್ಮನ್ ಪ್ರೋಫೈಲ್ ಸಿಕ್ಕಿದೆ. ನಂತರ ವಾಟ್ವಪ್ ಗೆ ಕನೆಕ್ಟ್ ಆಗಿ, ಸಲಹೆ ನೀಡುತ್ತೇನೆ ಎಂದು ನಕಲಿ ವೈದ್ಯ ಮಹಿಳೆಗೆ ನಂಬಿಸಿದ್ದ. ಇದನ್ನೂ ಓದಿ: ಪತಿಯ ಮರ್ಮಾಂಗ ಕತ್ತರಿಸಿ, ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿದ್ಳು!

    ಕೆಲ ದಿನಗಳ ನಂತರ ವಿಧವೆ ಮಹಿಳೆಗೆ ಈ ನಕಲಿ ಡಾಕ್ಟರ್ ಯುಕೆಯಿಂದ ಕರೆನ್ಸಿ ಹಾಗೂ ಗಿಫ್ಟ್ ಕಳಿಸಿದ್ದ. ಎರಡು ದಿನಗಳ ನಂತರ ಕಸ್ಟಮ್ಸ್ ಅಧಿಕಾರಿಗಳು ಎಂದು ಹೇಳಿ ಮಹಿಳೆಗೆ ಕರೆ ಹೋಗಿದೆ. ನೀವು ಗಿಫ್ಟ್ ಸ್ವೀಕರಿಸಿಲ್ಲ, ವಿತ್ತ ಸಚಿವಾಲಯದಿಂದ ನೋಟಿಸ್ ಬಂದಿದೆ ಎಂದು ಫೇಕ್ ಕಸ್ಟಮ್ಸ್ ಅಧಿಕಾರಿಗಳು ನಕಲಿ ಲೆಟರ್ ತೋರಿಸಿದ್ದಾರೆ. ಬಳಿಕ ಮಹಿಳೆ ಬಳಿ 80 ಲಕ್ಷ ರೂಪಾಯಿಯನ್ನು ಪೀಕಿದ್ದಾರೆ. ಸದ್ಯ ಬನಶಂಕರಿ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

  • ಕೊರೊನಾವನ್ನೇ ಬಂಡವಾಳ ಮಾಡಿಕೊಂಡಿದ್ದ ನಕಲಿ ವೈದ್ಯ ಡಿಸಿ ಬಲೆಗೆ

    ಕೊರೊನಾವನ್ನೇ ಬಂಡವಾಳ ಮಾಡಿಕೊಂಡಿದ್ದ ನಕಲಿ ವೈದ್ಯ ಡಿಸಿ ಬಲೆಗೆ

    ದಾವಣಗೆರೆ: ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನ ಸಹ ಭಯಭೀತರಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ನಕಲಿ ವೈದ್ಯರು, ಜನರಿಗೆ ಇಲ್ಲಸಲ್ಲದ ಚಿಕಿತ್ಸೆ ನೀಡಿ ಹಣ ವಸೂಲಿ ಮಾಡುತ್ತಿದ್ದಾರೆ. ಅಂತಹ ನಕಲಿ ವೈದ್ಯರ ಮೇಲೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ದಾಳಿ ನಡೆಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

    ಜಿಲ್ಲೆಯ ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ನಕಲಿ ವೈದ್ಯರು ಕೊರೊನಾಗೆ ಔಷಧಿ ನೀಡುತ್ತಿದ್ದಾರೆ ಎಂದು ಗ್ರಾಮದ ಯುವಕರು ಜಿಲ್ಲಾಧಿಕಾರಿಗಳ ವಾಟ್ಸಾಪ್ ಗೆ ನೀಡಿದ ಮಾಹಿತಿ ಮೇರೆಗೆ ದಾಳಿ ಮಾಡಿ, ನಕಲಿ ವೈದ್ಯನನ್ನು ವಶಕ್ಕೆ ಪಡೆದಿದ್ದಾರೆ. ಈ ವೈದ್ಯ ಯಾವುದೇ ಪದವಿ ಪಡೆದಿಲ್ಲ. ಕೆಎಂಪಿಇಯಲ್ಲಿಯೂ ನೋಂದಣಿಯಾಗಿಲ್ಲ. ಆದರೂ ಕುಂಬಳೂರು ಗ್ರಾಮದ ಮನೆಯಲ್ಲಿ ಎಲ್ಲ ವೈದ್ಯಕೀಯ ಉಪಕರಣ ಇಟ್ಟುಕೊಂಡು ಚಿಕಿತ್ಸೆ ನೀಡುತ್ತಿದ್ದ. ಇದರಿಂದ ಕೊರೊನಾದಿಂದ ಬದುಕಬೇಕಾದ ಒಂದಿಬ್ಬರು ಸತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ಮಾಡಿ, ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ವಿನ ವಿಚಾರಣೆ ನಡೆಸುತ್ತಿದ್ದಾರೆ.

    ಜಿಲ್ಲೆಯಲ್ಲಿರುವ ನಕಲಿ ವೈದ್ಯರು ಕೊರೊನಾಗೆ ಚಿಕಿತ್ಸೆ ನೀಡುವುದಾಗಿ ವಂಚಿಸುತ್ತಿದ್ದು, ಇಂಥ ನಕಲಿ ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹತೇಶ್ ಬಿಳಗಿ ಎಚ್ಚರಿಕೆ ನೀಡಿದ್ದಾರೆ. ಗ್ರಾಮೀಣ ಭಾಗದ ಜನರು ನಕಲಿ ವೈದ್ಯರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕು. ಕೊರೊನಾ ಲಕ್ಷಣ ಬಂದ ತಕ್ಷಣ ಚಿಕಿತ್ಸೆ ಪಡೆಯಬೇಕು. ನಕಲಿ ವೈದ್ಯರ ಬಳಿ ತೆರಳಿ ಮೋಸ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ನಕಲಿ ವೈದ್ಯರ ಬಗ್ಗೆ ಪಟ್ಟಿ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಂಥವರ ವಿರುದ್ಧ ಕೆಎಂಪಿಇ ಮತ್ತು ಕೊರೊನಾ ವಿಪತ್ತು ಕಾಯ್ದೆ ಅಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಕಲಿ ವೈದ್ಯರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.