Tag: fake death certificate

  • ಜೀವಂತ ತಾಯಿಯ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ, ಜಮೀನು ಕಬಳಿಕೆ ಹುನ್ನಾರ – ಮಗನ ಬಂಧನ

    ಜೀವಂತ ತಾಯಿಯ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ, ಜಮೀನು ಕಬಳಿಕೆ ಹುನ್ನಾರ – ಮಗನ ಬಂಧನ

    ಹಾವೇರಿ: ತಾಯಿ ಜೀವಂತದಲ್ಲೇ ಇರುವಾಗಲೇ ನಕಲಿ ಮರಣ ಪ್ರಮಾಣ ಪತ್ರ (Fake Death Certificate) ಸೃಷ್ಟಿಸಿ, ಆಸ್ತಿ ಕಬಳಿಸಲು ಪ್ರಯತ್ನಿಸಿದ ಮಗ ಪೊಲೀಸರ ಅತಿಥಿಯಾದ ಘಟನೆ ಹಾವೇರಿ (Haveri) ಜಿಲ್ಲೆ ಶಿಗ್ಗಾಂವಿ ಪಟ್ಟಣದ ಖಾಜೇಖಾನ್ ಗಲ್ಲಿಯಲ್ಲಿ ನಡೆದಿದೆ.

    ಮಗ ಶೌಕತ್ ಅಲಿ ಮುಲ್ಕಿ (39) ಬಂಧಿತ ಆರೋಪಿ. 60 ವರ್ಷದ ವಯೋವೃದ್ಧೆ ಹೂರಾಂಬಿ ಮುಲ್ಕಿ ಒಂಟಿಯಾಗಿ ಜೀವನ ಮಾಡುತ್ತಿದ್ದರು. ಮಗ ಶೌಕತ್ ಅಲಿ, ತಾಯಿಯನ್ನು ತೊರೆದು ಹುಬ್ಬಳ್ಳಿಯಲ್ಲಿ ವಾಸವಾಗಿದ್ದ. ಕಳೆದ 2 ತಿಂಗಳ ಹಿಂದೆ ತಾಯಿ ನಿಧನ ಹೊಂದಿದ್ದಾಳೆ ಎಂದು ಶೌಕತ್ ಅಲಿಯು ಮರಣ ಪ್ರಮಾಣ ಪತ್ರ ಸೃಷ್ಟಿಸಿ 2 ಎಕ್ರೆ ಜಮೀನು ಕಬಳಿಸುವ ಹುನ್ನಾರ ನಡೆಸಿದ್ದ ಎನ್ನಲಾಗಿದೆ. ಇದನ್ನೂ ಓದಿ: 8 ಸೆಕೆಂಡ್ ನಂತ್ರ ವಿಮಾನ ಹಾರಾಟದಲ್ಲಿ ಅಸಹಜತೆ ಪತ್ತೆ; 7-12 ಸೆಕೆಂಡ್‌ ವರೆಗಿನ ಹಾರಾಟದ ಮೇಲೆ ತನಿಖೆ

    ಆ 2 ಎಕ್ರೆ ಜಮೀನು ತಾಯಿ ಹಾಗೂ ಮಗನ ಹೆಸರಿನಲ್ಲಿ ಜಂಟಿಯಾಗಿತ್ತು. ಶೌಕತ್ ಅಲಿಯು ಮರಣ ಪ್ರಮಾಣ ಪತ್ರ ಸೃಷ್ಟಿಸಿ ಜಮೀನು ಕಬಳಿಸಲು ಹೊನ್ನಾರ ನಡೆಸಿದ್ದು ಗೊತ್ತಾಗುತ್ತಿದ್ದಂತೆ ತಾಯಿ ಹೂರಾಂಬಿ ಪೊಲೀಸರಿಗೆ ದೂರು ದಾಖಲಿಸಿದ್ದರು. ಇದನ್ನೂ ಓದಿ: ನ್ಯಾಯಾಧೀಶರ ಮುಂದೆ ಹಾಜರಾದ ವಿನಯ್ ಕುಲಕರ್ಣಿ – ಶಾಸಕನನ್ನು ವಶಕ್ಕೆ ಪಡೆದ ಸಿಬಿಐ

    ಇದೀಗ ಶಿಗ್ಗಾಂವಿ ಪೊಲೀಸರು, ಆರೋಪಿ ಶೌಕತ್ ಅಲಿಯನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಾಲೀಕರು ಬದುಕಿದ್ದರೂ ಮರಣ ಪತ್ರ ಪಡೆದು ಜಮೀನು ಮಾರಿದ್ರು

    ಮಾಲೀಕರು ಬದುಕಿದ್ದರೂ ಮರಣ ಪತ್ರ ಪಡೆದು ಜಮೀನು ಮಾರಿದ್ರು

    ರಾಮನಗರ: ಜಮೀನಿನ ಮಾಲೀಕರು ಬದುಕಿದ್ದರೂ ಸಾವನ್ನಪ್ಪಿದ್ದಾರೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನನ್ನು ಮಾರಾಟ ಮಾಡಿರುವ ಘಟನೆ ರಾಮನಗರ ತಾಲೂಕಿನ ಭೈರಮಂಗಲದಲ್ಲಿ ನಡೆದಿದೆ.

    ಭೈರಮಂಗಲ ಗ್ರಾಮದ ಸಹೋದರರಾದ ಬಿಳಿಗಿರಿಯಪ್ಪ ಹಾಗೂ ಸ್ವಾಮಿ ವಂಚನೆಗೆ ಒಳಗಾದ ಮಾಲೀಕರು. ಅದೇ ಗ್ರಾಮದ ರಂಗಪ್ಪ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪಿ. 2001ರಲ್ಲಿ ಜಮೀನು ಮಾರಾಟವಾಗಿದ್ದರೂ ಮಾಲೀಕರಿಗೆ ತಡವಾಗಿ ಗೊತ್ತಾಗಿದೆ.

    ಬಿಳಿಗಿರಿಯಪ್ಪ ಹಾಗೂ ಸ್ವಾಮಿ ಅವರಿಗೆ ಸೇರಿದ್ದ 22 ಗುಂಟೆ ಜಮೀನನ್ನು ರಂಗಪ್ಪ ಮಾರಾಟ ಮಾಡಲು ಯತ್ನಿಸಿದ್ದ. ಈ ನಿಟ್ಟಿನಲ್ಲಿ ಆರೋಪಿ ರಂಗಪ್ಪ ಜಮೀನಿನ ಮಾಲೀಕರು ಮೃತಪಟ್ಟಿದ್ದಾರೆ ಎಂದು 2001ರಲ್ಲಿ ನಾಡ ಕಚೇರಿಯಲ್ಲಿ ಮರಣ ಪ್ರಮಾಣ ಪತ್ರವನ್ನು ಪಡೆದಿದ್ದ. ಬಳಿಕ ಜಮೀನನ್ನು ಮಾರಾಟ ಮಾಡಿದ್ದಾನೆ.

    ಸಹೋದರರು ಇತ್ತೀಚೆಗೆ ಜಮೀನಿನ ಬಗ್ಗೆ ದಾಖಲೆಗಳನ್ನು ಪಡೆಯಲು ತೆರಳಿದ್ದಾಗ ಜಮೀನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ನ್ಯಾಯಾಲಯದಲ್ಲೂ ಮೊಕದ್ದಮೆ ಹೂಡಿದ್ದು ಶುಕ್ರವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಹಣದಾಸೆಗೆ ಬದುಕಿರುವವರನ್ನೇ ಸತ್ತಿದ್ದಾರೆಂದು ಮರಣ ಪ್ರಮಾಣ ಪತ್ರ ನೀಡಿ ಜಮೀನು ಮಾರಾಟಕ್ಕೆ ಸಾಥ್ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.