Tag: Fake Currency note

  • ರಾಯಚೂರಿನಲ್ಲಿ ಹೆಚ್ಚಾಯ್ತು ನಕಲಿ ನೋಟುಗಳ ಹಾವಳಿ – ನಿಮ್ಮಲ್ಲಿನ 200 ರೂ.‌ ನೋಟು ಒಮ್ಮೆ ಚೆಕ್ ಮಾಡಿಕೊಳ್ಳಿ

    ರಾಯಚೂರಿನಲ್ಲಿ ಹೆಚ್ಚಾಯ್ತು ನಕಲಿ ನೋಟುಗಳ ಹಾವಳಿ – ನಿಮ್ಮಲ್ಲಿನ 200 ರೂ.‌ ನೋಟು ಒಮ್ಮೆ ಚೆಕ್ ಮಾಡಿಕೊಳ್ಳಿ

    ರಾಯಚೂರು: ಜಿಲ್ಲೆಯಲ್ಲಿ ನಕಲಿ ಕರೆನ್ಸಿ ನೋಟುಗಳ (Fake Currency Note) ಹಾವಳಿ ಹೆಚ್ಚಾಗುತ್ತಿದೆ. ಅಸಲಿ ನೋಟುಗಳ ಜೊತೆಗೆ ಆಗಾಗ ನಕಲಿ ನೋಟುಗಳು ಬರುತ್ತಿವೆ. ನಕಲಿ ನೋಟುಗಳ ಹಾವಳಿಗೆ ಸಣ್ಣ ವ್ಯಾಪಾರಿಗಳು ಸುಸ್ತಾಗಿದ್ದಾರೆ. 200 ರೂಪಾಯಿ ಮುಖಬೆಲೆಯ ಕಳ್ಳ ನೋಟುಗಳ ಚಲಾವಣೆ ನಡೆಯುತ್ತಿದೆ.

    ವ್ಯಾಪಾರಿಗಳು ಹಣ ಪಾವತಿಸಲು ಬ್ಯಾಂಕ್‌ಗೆ (Bank) ಹೋದಾಗ ನಕಲಿ ನೋಟುಗಳು ಪತ್ತೆಯಾಗುತ್ತಿವೆ. ಒಂದೊಂದು ಕಟ್ಟಿನಲ್ಲಿ ಒಂದು, ಎರಡು ನಕಲಿ ನೋಟುಗಳು ಪತ್ತೆಯಾಗುತ್ತಿದ್ದು, ಸಣ್ಣ ವ್ಯಾಪಾರಿಗಳಿಗೆ ನಕಲಿ ನೋಟುಗಳಿಂದ ನಷ್ಟ ಭೀತಿ ಎದುರಾಗಿದೆ.

    200 ರೂಪಾಯಿ ನೋಟುಗಳ ಕಲರ್ ಝೆರಾಕ್ಸ್ ದಂಧೆ ನಡೆಯುತ್ತಿರುವ ಅನುಮಾನ ವ್ಯಕ್ತವಾಗಿದೆ. ‌ ನಕಲಿ ನೋಟುಗಳನ್ನ ಕಲರ್ ಝೆರಾಕ್ಸ್ ಮೂಲಕ ತಯಾರಿಸಿ ಅಡ್ಡದಾರಿಯಲ್ಲಿ ಸಣ್ಣ ಪ್ರಮಾಣದಲ್ಲೇ ಚಲಾವಣೆ ನಡೆಸುತ್ತಿರುವ ಶಂಕೆ ವ್ಯಕ್ತವಾಗಿದೆ.  ಇದನ್ನೂ ಓದಿ: ದೀಪಾವಳಿಗೆ ಕರೆಂಟ್‌ ಕಳ್ಳತನ – ಬೆಸ್ಕಾಂ ನೋಟಿಸ್‌ ನೀಡಲಿ, ದಂಡ ಕಟ್ಟುತ್ತೇನೆ ಎಂದ ಹೆಚ್‌ಡಿಕೆ

    ನಕಲಿ ನೋಟುಗಳನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಅದರ ಅಸಲಿಯತ್ತು ಬಯಲಾಗುತ್ತದೆ. ಆದರೆ ಅವಸರಲ್ಲಿ ಹಣ ಪಡೆಯುವಾಗ ಅಸಲಿ ಜೊತೆ ನಕಲಿ ನೋಟು ಇರುವುದು ಗೊತ್ತಾಗುವುದಿಲ್ಲ. ವ್ಯಾಪಾರಿಗಳ ಕೈಗೆ ಸುಲಭವಾಗಿ ನಕಲಿ ನೋಟು ಸೇರುತ್ತಿದ್ದು, ಸ್ವಲ್ಪ ದಿನದಲ್ಲೇ ನಕಲಿ ನೋಟು ಮುದ್ದೆಯಾಗುತ್ತದೆ.

    ರಾಯಚೂರು ಜಿಲ್ಲೆಯಲ್ಲಿ ಈ ಹಿಂದೆ 500 ರೂ. ಮುಖಬೆಲೆಯ ಖೋಟಾ ನೋಟುಗಳು ಪತ್ತೆಯಾಗಿದ್ದವು. ಈಗ 200 ರೂಪಾಯಿ ಮುಖಬೆಲೆಯ ನಕಲಿ ನೋಟುಗಳು ಓಡಾಡುತ್ತಿವೆ. ಕೂಡಲೇ ಇದಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕಿದೆ.

     

  • ನಕಲಿ ನೋಟುಗಳನ್ನು ಜೆರಾಕ್ಸ್ ಮಾಡಿ ವಂಚನೆ ಮಾಡುತ್ತಿದ್ದ ಗ್ಯಾಂಗ್ ಅಂದರ್

    ನಕಲಿ ನೋಟುಗಳನ್ನು ಜೆರಾಕ್ಸ್ ಮಾಡಿ ವಂಚನೆ ಮಾಡುತ್ತಿದ್ದ ಗ್ಯಾಂಗ್ ಅಂದರ್

    – 6 ಕೋಟಿ ಮೌಲ್ಯದ ನಕಲಿ ನೋಟುಗಳು ವಶಕ್ಕೆ

    ಬೆಂಗಳೂರು: ನಿಷೇಧಗೊಂಡಿರುವ ನೋಟುಗಳ ಬದಲಾವಣೆ ಮಾಡುತ್ತೇವೆಂದು ಬ್ಲಾಕ್ ಅಂಡ್ ವೈಟ್ ದಂಧೆ ನಡೆಸುತ್ತಿದ್ದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 6 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಮೊದಲಿಗೆ 35 ಲಕ್ಷ ಅಸಲಿ ನೋಟುಗಳನ್ನು ತಂದು ಬ್ಲಾಕ್ ಅಂಡ್ ವೈಟ್ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, 1 ಸಾವಿರ 500 ಮುಖಬೆಲೆಯ 70 ಲಕ್ಷ ಅಸಲಿ ನೋಟುಗಳ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಮತ್ತಷ್ಟು ಹಣ ಕಾಸರಗೋಡಿನಲ್ಲಿದೆ ಎಂದು ಬಹಿರಂಗಪಡಿಸಿದ್ದಾರೆ. ಹೀಗಾಗಿ ಕಾಸರಗೋಡಿಗೆ ಹೊರಟ ಪೊಲೀಸರಿಗೆ 6 ಕೋಟಿ ಜೆರಾಕ್ಸ್ ನೋಟುಗಳು ಪತ್ತೆಯಾಗಿದೆ. ಜೊತೆಗೆ 16 ಮೂಟೆ ಪೇಪರ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಮಾರ್ಚ್ ಅಂತ್ಯದ ವೇಳೆಗೆ ಹುಬ್ಬಳ್ಳಿ ಸೇರಿ 13 ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಸಿದ್ಧತೆ

    ಈ ಪ್ರಕರಣ ಕುರಿತಂತೆ ಮಂಜುನಾಥ್, ದಯಾನಂದ ಸೇರಿ 7 ಮಂದಿ ಆರೋಪಿಗಳನ್ನು ಬಂಧಿಸಿ ಗೋವಿಂದಪುರ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇವರಲ್ಲಿ ಮತ್ತೋರ್ವ ಆರೋಪಿ ವೆಂಕಟೇಶ್ ಬಿಬಿಎಂಪಿಯಲ್ಲಿ ಸಬ್ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಎಂಬ ವಿಚಾರ ತಿಳಿದು ಬಂದಿದೆ. ಇದನ್ನೂ ಓದಿ: BJP, RSS ವಿರುದ್ಧ ಹೋರಾಡಲು ಪಕ್ಷದಲ್ಲಿ ಏಕತೆ ಇರಬೇಕು: ಸೋನಿಯಾ ಗಾಂಧಿ