Tag: fake baba

  • ಉತ್ತರಾಖಂಡ ಸರ್ಕಾರದಿಂದ ‘ಆಪರೇಷನ್ ಕಾಲನೇಮಿ’ ಕಾರ್ಯಾಚರಣೆ – 82 ನಕಲಿ ಬಾಬಾಗಳ ಬಂಧನ

    ಉತ್ತರಾಖಂಡ ಸರ್ಕಾರದಿಂದ ‘ಆಪರೇಷನ್ ಕಾಲನೇಮಿ’ ಕಾರ್ಯಾಚರಣೆ – 82 ನಕಲಿ ಬಾಬಾಗಳ ಬಂಧನ

    ಡೆಹ್ರಾಡೂನ್: ಧಾರ್ಮಿಕ ಕ್ಷೇತ್ರಗಳಲ್ಲಿ ನಕಲಿ ಬಾಬಾಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಉತ್ತರಾಖಂಡ (Uttarakhand) ಸರ್ಕಾರ ʼಆಪರೇಷನ್ ಕಾಲನೇಮಿʼ (Operation Kalanemi) ಕಾರ್ಯಾಚರಣೆ ಆರಂಭಿಸಿದ್ದು, 82 ನಕಲಿ ಬಾಬಾಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಚಾರ್ ಧಾಮ್ ಯಾತ್ರೆ ಮತ್ತು ಕನ್ವರ್ ಯಾತ್ರೆ ಹಿನ್ನೆಲೆ ಧಾರ್ಮಿಕ ಕ್ಷೇತ್ರಗಳಲ್ಲಿ ನಕಲಿ ಬಾಬಾಗಳ ಸಂಖ್ಯೆ ಹೆಚ್ಚಿದೆ. ಕಳೆದ ಮೂರು ದಿನಗಳಲ್ಲಿ ಜಿಲ್ಲೆಯ ವಿವಿಧ ಪ್ರದೇಶಗಳಿಂದ ಒಟ್ಟು 82 ಮಂದಿ ನಕಲಿ ಬಾಬಾಗಳನ್ನು ಬಂಧಿಸಲಾಗಿದೆ. ಭಾನುವಾರ ಬಂಧಿಸಿದ 34 ಜನರ ಪೈಕಿ 23 ಮಂದಿ ಇತರ ರಾಜ್ಯಗಳ ನಿವಾಸಿಗಳಾಗಿದ್ದಾರೆ. ಇದನ್ನೂ ಓದಿ: ಶಿರಾಡಿಘಾಟ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಜಲಪಾತಕ್ಕೆ ಬಿದ್ದ ಕಾರು

    ಬಂಧಿತ ನಕಲಿ ಬಾಬಾಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸಂಬಂಧಿತ ವಿಭಾಗಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಜನರ ಭಾವನೆಗಳ ಜೊತೆ ಆಟವಾಡುವ ಇಂತಹ ವಂಚಕರನ್ನು ಸೆರೆಹಿಡಿಯಲು ತಂಡವನ್ನು ರಚಿಸಲಾಗಿದ್ದು, ನಕಲಿ ಬಾಬಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಎಸ್‌ಪಿ ಅಜಯ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಆಲ್ಕರಜ್‌ ಹ್ಯಾಟ್ರಿಕ್‌ ಕನಸು ಭಗ್ನ- ಚೊಚ್ಚಲ ವಿಂಬಲ್ಡನ್‌ ಗೆದ್ದ ಸಿನ್ನರ್‌ | ನಗದು ಬಹುಮಾನ ಎಷ್ಟು?

  • ಸಾಯಿಬಾಬಾನ 3ನೇ ಅವತಾರ ಅಂತ ಜನರಿಗೆ ವಂಚನೆ – ನಕಲಿ ಬಾಬಾ ವಿರುದ್ಧ FIR

    ಸಾಯಿಬಾಬಾನ 3ನೇ ಅವತಾರ ಅಂತ ಜನರಿಗೆ ವಂಚನೆ – ನಕಲಿ ಬಾಬಾ ವಿರುದ್ಧ FIR

    ರಾಮನಗರ: ಸಾಯಿಬಾಬಾನ 3ನೇ ಅವತಾರ ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದ ವ್ಯಕ್ತಿ ವಿರುದ್ಧ ರಾಮನಗರ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಅಕಾರಾಂ ಸರಗಾರ್ ಕಳೆದ 8 ತಿಂಗಳ ಹಿಂದೆ ಚನ್ನಪಟ್ಟಣಕ್ಕೆ ಬಂದಿದ್ದನು. ಈ ವೇಳೆ ತಾನು ಪ್ರೇಮ ಸಾಯಿ, ದೇವ ಮಾನವ ಎಲ್ಲರ ಸಮಸ್ಯೆಯನ್ನು ಪರಿಹರಿಸುತ್ತೇನೆ ಎಂದು ಹೇಳಿಕೊಂಡು ಜನರನ್ನು ನಂಬಿಸುತ್ತಿದ್ದನು. ಸಿಂಧೂ ಎಂಬುವವರ ತೋಟದ ಮನೆಯಲ್ಲಿ ಪ್ರತಿನಿತ್ಯ ಭಜನೆ, ಪೂಜೆ ಮಾಡಿ ಹಣ ವಸೂಲಿ ಮಾಡುತ್ತಿದ್ದನು.  ಇದನ್ನೂ ಓದಿ: ಹೆರಿಗೆ ಸಮಯದಲ್ಲಿ ಮಗು ಸಾವನ್ನಪ್ಪಿದರೆ ಸರ್ಕಾರಿ ಮಹಿಳಾ ನೌಕರರಿಗೆ 60 ದಿನ ವಿಶೇಷ ರಜೆ: ಕೇಂದ್ರ

    ಶ್ರೀ ಪ್ರೇಮ ಸ್ವರೂಪಿಣಿ ಸಾಯಿ ಸೇವಾ ಟ್ರಸ್ಟ್ ಹೆಸರಲ್ಲಿ ಇಲ್ಲಿಯವರೆಗೂ ಆರೋಪಿ ಸುಮಾರು 1.5 ಕೋಟಿ ರೂ. ಹಣ ವಂಚನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ತೋಟದ ಮನೆಯನ್ನೇ ತನ್ನ ಹೆಸರಿಗೆ ಬರೆದುಕೊಡುವಂತೆ ಸಿಂಧೂ ಅವರಿಗೆ ನಿತ್ಯ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತು ಮಹಿಳೆ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಿದ್ದು, ಪ್ರಕರಣ ಸಂಬಂಧ 7 ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

    ಸಚಿನ್ ಅಕಾರಾಂ ಸರಗಾರ್ ಸಹಕರಿಸುತ್ತಿದ್ದ ವಿನಾಯಕ ರಾಜ್, ಸಾಯಿರಾಜ್, ಜಯಂತ್, ಯಶೋದಮ್ಮ, ಉಮಾಶಂಕರ್, ಪ್ರಶಾಂತ್ ಎನ್ನುವರರ ವಿರುದ್ಧ ಕೂಡ ದೂರು ದಾಖಲಾಗಿದೆ. ಸದ್ಯ ಹಣದ ಜೊತೆಗೆ ಎಸ್ಕೇಪ್ ಆಗಿರುವ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಯುಕೆ ಹಿಂದಿಕ್ಕಿದ ಭಾರತ – ಈಗ ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆಯ ದೇಶ

    Live Tv
    [brid partner=56869869 player=32851 video=960834 autoplay=true]

  • ಡೋಂಗಿ ಬಾಬಾನ ಮೋಹದ ಬಲೆಗೆ ಬಿದ್ದ ವಿವಾಹಿತೆ – ಯಜಮಾನ ಬಲಿ

    ಡೋಂಗಿ ಬಾಬಾನ ಮೋಹದ ಬಲೆಗೆ ಬಿದ್ದ ವಿವಾಹಿತೆ – ಯಜಮಾನ ಬಲಿ

    ಚಾಮರಾಜನಗರ: ಆ ದಂಪತಿ ಚಿಕಿತ್ಸೆಗೆಂದು ಒಬ್ಬ ಬಾಬಾನ ಬಳಿಗೆ ತೆರಳಿದ್ದರು. ಚಿಕಿತ್ಸೆ ನೀಡಿ ಗುಣಪಡಿಸಿದ ಬಾಬಾನ ವಕ್ರದೃಷ್ಟಿ ಸುಂದರ ಸಂಸಾರದ ಮೇಲೆ ಬಿದ್ದಿತ್ತು. ಇದರಿಂದ ಸುಂದರವಾಗಿದ್ದ ಆ ಸಂಸಾರದಲ್ಲಿ ಬಿರುಗಾಳಿ ಬೀಸಿ ಮನೆಯ ಯಜಮಾನನೇ ಬಲಿಯಾಗಿದ್ದಾನೆ.

    ಮಹಮ್ಮದ್ ಅಫ್ಘನ್ ಮತ್ತು ತನ್ಜೀಯಾ ಕೌಸರ್ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಅಮೀರ್‌ಜಾನ್ ರೋಡ್‌ನ ನಿವಾಸಿಗಳು. ತನ್ಜೀಯಾ ಕೌಸರ್‌ಗೆ ಕಳೆದ ಕೆಲವು ತಿಂಗಳ ಹಿಂದೆ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಂಡಿತ್ತು. ಈ ವೇಳೆ ಮೈಸೂರಿನ ರಾಜೀವನಗರದ ಬಾಬಾ ಖುರ್ರಂ ಪಾಷಾನ ಬಳಿಗೆ ತೆರಳಿದ್ದರು. ಇದನ್ನೂ ಓದಿ: 6 ವರ್ಷದ ಮಗುವಿನೊಂದಿಗೆ ವೇಳಾಪಟ್ಟಿ ಒಪ್ಪಂದ ಮಾಡಿಕೊಂಡ ಅಪ್ಪ

    ನಾನು ದೇವರ ಪ್ರತಿರೂಪ ಎಂದು ಹೇಳಿಕೊಂಡ ಬಾಬಾ ಥೈರಾಯ್ಡ್ ಸಮಸ್ಯೆ ಬಗೆಹರಿಸಿದ್ದ. ಬಳಿಕ ತನ್ಜೀಯಾ ಜೊತೆ ಆತನ ಒಡನಾಟ ಜಾಸ್ತಿಯಾಗಿತ್ತು. ಇದರಿಂದ ದಂಪತಿಯ ಸಂಸಾರದಲ್ಲಿ ಬಿರುಗಾಳಿ ಬೀಸಿತ್ತು. ಸಾಕಷ್ಟು ಬಾರಿ ಜಗಳವೂ ನಡೆದಿತ್ತು. ಇದೆಲ್ಲದರಿಂದ ಮನನೊಂದಿದ್ದ ಅಫ್ಘನ್ ಗುರುವಾರ ರಾತ್ರಿ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಆತ ಬಾಬಾನಲ್ಲ. ಡೋಂಗಿ ಬಾಬಾನಿಂದ ಸಂಸಾರ ಹಾಳಾಗಿದೆ. ಬಾಬಾ ಖುರ್ರಂ ಪಾಷಾ ತನ್ಜೀಯಾಗೆ ಸಂಪೂರ್ಣ ಮೈಂಡ್ ವಾಷ್ ಮಾಡಿದ್ದ ಎಂಬುದು ಅಫ್ಗನ್ ಸಂಬಂಧಿಕರ ಆರೋಪ. ಬಾಬಾನ ಮಾತು ಕೇಳಿಕೊಂಡು ತನ್ಜೀಯಾ ತನ್ನ ತವರು ಮನೆ ಮೈಸೂರಿಗೆ ಹೋಗಿ ಸೇರಿಕೊಂಡಿದ್ದಳು. ಅಫ್ಘನ್ ಕರೆದರೂ ಆಕೆ ಗಂಡನ ಮನೆಗೆ ಬಂದಿರಲಿಲ್ಲ. ಇದನ್ನೂ ಓದಿ: ಮದುವೆ ಗಂಡು ಬರೋದು ತಡವಾಗಿದ್ದಕ್ಕೆ ಅದೇ ಮಂಟಪದಲ್ಲಿ ಇನ್ನೊಬ್ಬನನ್ನು ವರಿಸಿದ ವಧು

    ಇದೆಲ್ಲದರಿಂದ ಸಾಕಷ್ಟು ಮನನೊಂದಿದ್ದ ಅಫ್ಘನ್ ಡೆತ್‌ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ನನ್ನ ಸಾವಿಗೆ ಖುರ್ರಂ ಪಾಷಾ, ಅಬ್ದುಲ್ ರೆಹಮಾನ್, ಮಹಮದ್ ಅಜೀಂ, ಆಯೂಬ್ ಷರೀಪ್ ಕಾರಣ ಎಂದು ಬರೆದಿದ್ದಾರೆ. ಪ್ರಕರಣ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

  • ಪತ್ನಿಯಿಂದ್ಲೇ ನಕಲಿ ಬಾಬಾನ ರಹಸ್ಯ ಬಯಲು – ಹಲವರ ಜೊತೆ ಅಕ್ರಮ ಸಂಬಂಧ

    ಪತ್ನಿಯಿಂದ್ಲೇ ನಕಲಿ ಬಾಬಾನ ರಹಸ್ಯ ಬಯಲು – ಹಲವರ ಜೊತೆ ಅಕ್ರಮ ಸಂಬಂಧ

    – ಹೆಂಡ್ತಿ ಬರುತ್ತಿದ್ದಂತೆ ಬುಲೆಟ್ ಬಾಬಾ ಎಸ್ಕೇಪ್

    ಯಾದಗಿರಿ: ಜಿಲ್ಲೆಯ ಗುರುಮಠಕಲ್ ಸಮೀಪದ ಕೇಶ್ವಾರ ಗ್ರಾಮದ ಹೊರವಲಯದಲ್ಲಿ ಸ್ವಯಂ ಘೋಷಿತ ಬುಲೆಟ್ ಬಾಬಾನ ಅಸಲಿ ಮುಖ ಇದೀಗ ಆತನ ಪತ್ನಿಯಿಂದಲೇ ಬಯಲಾಗಿದೆ.

    ಬುಲೆಟ್ ಬಾಬಾ ಅಲಿಯಾಸ್ ಜಾನು ರಾಜು, ಶಿವಾರೆಡ್ಡಿ ಎಂಬ ನಾನಾ ಹೆಸರಿನ ಈತ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬುಲೆಟ್ ಬಾಬಾ ಎಂದೇ ಪ್ರಸಿದ್ಧಿ ಪಡೆದುಕೊಂಡಿದ್ದನು. ಬಾಬಾನ ಹತ್ತಿರ ಯಾವುದೇ ಪವಾಡ ನಡೆಸುವ ಶಕ್ತಿಯಿಲ್ಲ. ಆತನೊಬ್ಬ ಮೋಸಗಾರ ಎಂದು ಆತನ ಪತ್ನಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ.

    ಬುಲೆಟ್ ಬಾಬಾ ಅಲಿಯಾಸ್ ಶಿವಾರೆಡ್ಡಿ ಎಂದು ಹೆಸರು ಹೇಳಿಕೊಂಡು ಗ್ರಾಮಕ್ಕೆ ಎಂಟ್ರಿ ಕೊಟ್ಟಿದ್ದನು. ಈ ಬಾಬಾ ಮೊದಲಿಗೆ 5 ವರ್ಷಗಳ ಹಿಂದೆ ಯಾನಾಗುಂದಿಗೆ ಬಂದು ಅಲ್ಲಿಯೇ ಆಯುರ್ವೆದ ಔಷಧಿ ನೀಡುತ್ತಾ ಕೇಶ್ವಾರ ಗ್ರಾಮಸ್ಥರೊಬ್ಬರ ಮೂಲಕ ಗ್ರಾಮಕ್ಕೆ ಮಹಿಳೆಯೊಂದಿಗೆ ಬಂದು ವಾಸವಾಗಿದ್ದನು. ತದನಂತರ ಗ್ರಾಮದಲ್ಲಿ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ತಾವೊಬ್ಬ ಬಾಬಾ ಆಗಿದ್ದು, ತನ್ನಲ್ಲಿ ಶಕ್ತಿ ಇದೆ ಎಂದು ನಂಬಿಸುತ್ತಿದ್ದನು. ಆತನ ಜೊತೆಗೆ ಬಂದ ಮಹಿಳೆಯನ್ನು ತನ್ನ ಹೆಂಡತಿ ಎಂದು ಹೇಳಿಕೊಂಡಿದ್ದನು. ಅಲ್ಲದೇ ಹಲವರಿಂದ ಹಣ ವಸೂಲಿ ಮಾಡಿಕೊಂಡಿದ್ದಾನೆ ಎಂಬ ಆರೋಪಗಳಿವೆ.

    ಅಷ್ಟೇ ಅಲ್ಲದೇ ಗ್ರಾಮದಲ್ಲಿ ಒಬ್ಬರ ಹೊಲದಲ್ಲಿ ಮಂದಿರ ನಿರ್ಮಾಣ ಮಾಡುವುದಾಗಿ ಹೇಳಿ ಅವರ ಹೊಲದಲ್ಲಿಯೇ ಆಶ್ರಮ ನಿರ್ಮಾಣ ಮಾಡಿದ್ದಾನೆ. ನಿತ್ಯವು ಬುಲೆಟ್ ವಾಹನದಲ್ಲಿ ದಟ್ಟನೆಯ ಕೂದಲು ಬಿಟ್ಟು ಓಡಾಡುತ್ತಿದ್ದನು. ಹೀಗಾಗಿ ಈತ ಬುಲೆಟ್ ಬಾಬಾ ಎಂದು ಪ್ರಸಿದ್ಧಿಯಾಗಿದ್ದನು. ಈತನ ಬಗ್ಗೆ ತಿಳಿದ ಪತ್ನಿ ಇಲ್ಲಿಗೆ ಬಂದು ಗ್ರಾಮಸ್ಥರಿಗೆ ಎಲ್ಲವನ್ನು ಹೇಳಿದ್ದಾರೆ. ಆದರೆ ಪತ್ನಿ ಬರುತ್ತಿದ್ದಂತೆ ನಕಲಿ ಬಾಬಾ ಪರಾರಿಯಾಗಿದ್ದಾನೆ.

    ಹಲವರ ಜೊತೆ ಅಕ್ರಮ ಸಂಬಂಧ
    ಈ ಬಾಬಾ ಮೂಲತಃ ಆಂಧ್ರ ಪ್ರದೇಶದ ವರಂಗಲ್‍ನ ಲೇಬರ್ ಕಾಲೋನಿಯ ನಿವಾಸಿ. ಈತನ ಹೆಸರು ಜನ್ನು ರಾಜು. 2003ರಲ್ಲಿ ಯುವತಿಯೊಂದಿಗೆ ಅಂತರಜಾತಿ ವಿವಾಹವಾಗಿದ್ದ. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಸಹ ಇದ್ದರು. ಸಂಸಾರ ಸರಿಯಾಗಿ ಸಾಗುತ್ತಿರುವಾಗಲೇ ಬೇರೆ ಹೆಣ್ಣಿನ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದನು. ಇದರಿಂದ ಇಬ್ಬರ ಮಧ್ಯೆ ಜಗಳವಾಗಿದ್ದು, ಬಳಿಕ ಅಲ್ಲಿಂದ ಪರಾರಿಯಾಗಿದ್ದನು.

    ಈ ಕುರಿತು ಮೊದಲ ಪತ್ನಿ 2015ರಲ್ಲಿಯೇ ತೆಲಂಗಾಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆರೋಪಿ ಬಾಬಾ ಅನೇಕ ಮಹಿಳೆಯ ಜೊತೆ ಸಂಬಂಧ ಹೊಂದಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ. ನಂತರ 2016ರಲ್ಲಿ ಮತ್ತು 2019ರಲ್ಲಿಯೂ ಇತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನೊಂದು ಬರೋ ಮಹಿಳೆಯರಿಗೆ ಮಸಾಜ್ ಮಾಡಿ ಸಮಸ್ಯೆ ನಿವಾರಿಸುತ್ತಾನೆ ಫೇಕ್ ಬಾಬಾ – ವಿಡಿಯೋ

    ನೊಂದು ಬರೋ ಮಹಿಳೆಯರಿಗೆ ಮಸಾಜ್ ಮಾಡಿ ಸಮಸ್ಯೆ ನಿವಾರಿಸುತ್ತಾನೆ ಫೇಕ್ ಬಾಬಾ – ವಿಡಿಯೋ

    ಬೆಂಗಳೂರು: ಜೀವನದಲ್ಲಿ ಸಮಸ್ಯೆ ಇದೆ ಎಂದು ತನ್ನ ಬಳಿ ಬರುವ ಮಹಿಳೆಯರನ್ನ ಟಾರ್ಗೆಟ್ ಮಾಡಿಕೊಂಡು ಬಾಬಾ ವೇಷ ಹಾಕಿಕೊಂಡು ವ್ಯಕ್ತಿಯೊಬ್ಬ ಮೋಸ ಮಾಡುತ್ತಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ.

    ತನ್ನ ಬಳಿಗೆ ಬರುವ ಮಹಿಳೆಯರಿಗೆ ದೋಷ ನಿವಾರಣೆ ಮಾಡುತ್ತೇನೆ ಎಂದು ಹೇಳಿ ಕಳ್ಳ ಬಾಬಾ ಮಹಿಳೆಯರ ಅಂಗಾಂಗಳನ್ನು ಮುಟ್ಟಿ ಮಸಾಜ್ ಮಾಡಿ ಮೋಸ ಮಾಡುತ್ತಿದ್ದಾನೆ.

    ಕರಾವಳಿ ಭಾಗದಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಇರುವ ಬಾಬಾ ಯಾರು ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ನಿರಂಜನ್ ಕುಜ್ಜ ಎಂಬವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಆಪ್‍ಲೋಡ್ ಮಾಡಿದ್ದು, ಇಂತಹ ಸ್ವಾಮೀಜಿಗಳಿಂದ ಎಚ್ಚರವಾಗಿರುವಂತೆ ಸಂದೇಶ ನೀಡಿದ್ದಾರೆ.

    ಮಹಿಳೆಯರನ್ನ ಟಾರ್ಗೆಟ್ ಮಾಡಿ ಲೈಂಗಿಕವಾಗಿ ವರ್ತಿಸುವ ಈ ಕಳ್ಳ ಬಾಬಾನ ಬಗ್ಗೆ ಇದುವರೆಗೂ ಪೊಲೀಸರಿಗೆ ಯಾವುದೇ ದೂರುಬಂದಿಲ್ಲ. ಈ ಬಗ್ಗೆ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ವೈರಲ್ ಆಗುವ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿರುವುದು ಕೂಡ ತಿಳಿದಿದ್ದರೂ ಬಾಬಾ ತನ್ನ ಕೃತ್ಯವನ್ನು ನಡೆಸಿದ್ದಾನೆ.

    ಜೀವನದಲ್ಲಿ ಕಷ್ಟಗಳನ್ನು ಎದುರಿಸಿ ನೊಂದವರು ಆತನ ಗಾಳಕ್ಕೆ ಸಿಲುಕುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಬಾಬಾ ಮಹಿಳೆಯನ್ನು ತನ್ನ ಲೈಂಗಿಕ ಚಟ ತೀರಿಸಿಕೊಳ್ಳುತ್ತಿದ್ದಾನೆ. ತಮ್ಮ ಕಷ್ಟ ನಿವಾರಣೆ ಆದ್ರೆ ಸಾಕು ಎಂದು ಈತನ ಬಳಿ ತೆರಳುವ ಮಂದಿ ಕೂಡ ಈ ಬಗ್ಗೆ ಮಾತನಾಡುತ್ತಿಲ್ಲ ಎನ್ನಲಾಗಿದೆ.

    https://www.youtube.com/watch?v=XikTuMl_VIg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಯಸ್ಸು ಹೆಚ್ಚಿಸ್ತೀನಿ ಅಂತ 2 ಬಾರಿ ಯುವತಿ ಮೇಲೆ ಅತ್ಯಾಚಾರ ಮಾಡಿದ ನಕಲಿ ಬಾಬಾ

    ಮುಂಬೈ: ಆಯಸ್ಸು ಹೆಚ್ಚುಸುವುದಾಗಿ ಹೇಳಿ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದ ನಕಲಿ ಬಾಬಾನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಧನಂಜಯ್ ಮಿಶ್ರಾ ಎಂದು ಗುರುತಿಸಲಾಗಿದೆ ಈ ಘಟನೆ ಜನವರಿ 14 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಮಿಶ್ರಾ ದೂರುದಾರ ಯುವತಿ ತಂದೆಯ ಸ್ನೇಹಿತರ ಮನೆಯಲ್ಲಿ ನೆಲೆಸಿದ್ದ. ಜನವರಿಯ ಎರಡನೇ ವಾರದಲ್ಲಿ ಸಂತ್ರಸ್ತೆಯ ಮನೆಗೆ ಬಂದು ಎಲ್ಲರ ಅಂಗೈಗಳನ್ನು ನೋಡಿ ಹೋಗಿದ್ದ. ನಂತರ ಅವರ ಮನೆಗೆ ಒಂದೆರಡು ಬಾರಿ ಭೇಟಿ ಮಾಡಿದ್ದಾನೆ. ಜನವರಿ 14 ರಂದು ಮತ್ತೆ ಸಂತ್ರಸ್ತೆಯ ಮನೆಗೆ ಬಂದು ಆಯಸ್ಸು ಹೆಚ್ಚಿಸಲು ಪೂಜೆಯನ್ನು ಮಾಡಬೇಕು ಎಂದು ಹೇಳಿದ್ದಾನೆ.

    ಆರೋಪಿ ಮಿಶ್ರಾ ಹೇಳಿದಂತೆ ಪೂಜೆಗೆ ಬೇಕಾದ ಎಲ್ಲಾ ಅಗತ್ಯ ಸಾಮಾಗ್ರಿಗಳನ್ನು ಒಂದು ಕೋಣೆಯಲ್ಲಿ ಸಿದ್ಧಪಡಿಸುವಂತೆ ಯುವತಿಗೆ ಹೇಳಿದ್ದಾನೆ. ಬಳಿಕ ಎಲ್ಲಾ ವಸ್ತುಗಳನ್ನು ಇಟ್ಟ ಮೇಲೆ ರೂಮಿನ ಬಾಗಿಲು ಮತ್ತು ಕಿಟಕಿ ಮುಚ್ಚಲು ಹೇಳಿದ್ದಾನೆ. ನಕಲಿ ಬಾಬಾ ಹೇಳಿದಂತೆ ಮಾಡಿ ಸಂತ್ರಸ್ತೆ ಪೂಜೆಗೆ ಕುಳಿತಿದ್ದಾರೆ.

    ಸ್ವಲ್ಪ ಸಮಯದ ನಂತರ ಅವನು ನನ್ನನ್ನು ವಶೀಕರಣ ಮಾಡಿ ತನ್ನ ಎಲ್ಲಾ ಉಡುಪುಗಳನ್ನು ತೆಗೆದುಹಾಕಿದ. ಅದೇ ರೀತಿ ನನಗೂ ಮಾಡಲು ಹೇಳಿದ. ನಂತರ ಅವನ ತೊಡೆಯ ಮೇಲೆ ಕುಳಿತು ಮಂತ್ರವನ್ನು ಓದಬೇಕೆಂದು ಹೇಳಿದ ಎಂದು ಸಂತ್ರಸ್ತೆ ಪೊಲೀಸರಿಗೆ ಹೇಳಿದ್ದಾರೆ. ನಂತರ ಆರೋಪಿ ಮಿಶ್ರಾ ಸಂತ್ರಸ್ತೆ ಮೇಲೆ ಎರಡು ಬಾರಿ ಅತ್ಯಾಚಾರ ಮಾಡಿದ್ದಾನೆ. ಬಳಿಕ ಆಕೆಯ ಸಹೋದರಿಯನ್ನು ರೂಮಿಗೆ ಕಳುಹಿಸುವಂತೆ ಹೇಳಿದ್ದಾನೆ. ಆಕೆಯ ಸಹೋದರಿ ರೂಮಿಗೆ ಬಂದಾಗ ನಕಲಿ ಬಾಬಾ ನಗ್ನವಾಗಿ ಕುಳಿತಿದ್ದನ್ನು ನೋಡಿದ್ದಾರೆ. ಆಕೆಗೂ ಬಟ್ಟೆ ತೆಗೆದು ಹಾಕಿ ತೊಡೆಯ ಮೇಲೆ ಕುಳಿತುಕೊಳ್ಳುವಂತೆ ಹೇಳಿದ್ದಾನೆ. ಆದರೆ ಇದಕ್ಕೆ ಸಹೋದರಿ ನಿರಾಕರಿಸಿದ್ದಾರೆ. ಆಗ ನಕಲಿ ಬಾಬಾ ಆಕೆಗೆ ಶಾಪ ಹಾಕಿ, ನಾನು ಹೇಳಿದಂತೆ ಮಾಡದಿದ್ದರೆ ಶೀಘ್ರದಲ್ಲಿಯೇ ಸಾಯುತ್ತೀಯಾ ಎಂದು ಹೇಳಿದ್ದಾನೆ.

    ಇಬ್ಬರೂ ಯುವತಿಯರು ಜನವರಿ 18 ರಂದು ಪೋಷಕರಿಗೆ ವಿಚಾರವನ್ನು ತಿಳಿಸಿದ್ದಾರೆ. ನಂತರ ಅವರು ಆಂಟೋಪ್ ಹಿಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಐಪಿಸಿ ಸೆಕ್ಷನ್ 354, 376 ಮತ್ತು ಬ್ಲಾಕ್ ಮ್ಯಾಜಿಕ್ ಕಾಯ್ದೆಯ ವಿವಿಧ ಸೆಕ್ಷನ್‍ಗಳಡಿ ಎಫ್‍ಐಆರ್ ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಿದ ಬಳಿಕ ಪೊಲೀಸರು ಈತ ಇತರ ಹುಡುಗಿಯರು ಅಥವಾ ಮಹಿಳೆಯರೊಂದಿಗೂ ಈ ರೀತಿಯ ಕೃತ್ಯ ಎಸಗಿದ್ದನೆಯೇ ಎಂದು ತನಿಖೆ ನಡೆಸುತ್ತಿದ್ದಾರೆ.

  • ನೀವು ಬೇಡ, ನಿಮ್ಮ ಎಂಜಿನಿಯರ್ ಮಗಳು ಬೇಕು – ಮೈ ಮೇಲೆ ದೇವರು ಬಂದಿದೆ ಎಂದು ಡೋಂಗಿ ಬಾಬಾನ ಡ್ರಾಮಾ

    ನೀವು ಬೇಡ, ನಿಮ್ಮ ಎಂಜಿನಿಯರ್ ಮಗಳು ಬೇಕು – ಮೈ ಮೇಲೆ ದೇವರು ಬಂದಿದೆ ಎಂದು ಡೋಂಗಿ ಬಾಬಾನ ಡ್ರಾಮಾ

    ಚಿತ್ರದುರ್ಗ: ನನ್ನ ಮೇಲೆ ದೇವರು ಬಂದಿದ್ದಾನೆ. ನಿಮ್ಮ ಎಂಜಿನಿಯರ್ ಮಗಳನ್ನು ಕೇಳುತ್ತೆ ಎಂದು ಹೇಳಿದ ಡೋಂಗಿ ಬಾಬಾನಿಗೆ ಜನರು ಥಳಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕಂಚೀಪುರ ಗ್ರಾಮದಲ್ಲಿ ನಡೆದಿದೆ.

    ಕಂಚೀಪುರ ಗ್ರಾಮದ ಲೋಕೇಶ್ ಥಳಿತಕ್ಕೊಳಗಾದ ಡೋಂಗಿ ದೇವಮಾನವ. ಅರಸೀಕೆರೆ ನಿವಾಸಿ ಟೀಚರ್ ದಂಪತಿಗೆ ದೇವಮಾನವನಿಂದ ಕಿರುಕುಳದ ಆರೋಪ ಕೇಳಿಬಂದಿದ್ದು, ಸದ್ಯ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ನನ್ನ ಮೇಲೆ ಬರುವ ದೇವರು ಎಂಜಿನಿಯರ್ ಹುಡುಗಿಯರನ್ನೇ ಕೇಳುತ್ತೆ. ನೀವು ನಿಮ್ಮ ಮಗಳನ್ನು ಕೊಡಲಿಲ್ಲ ಎಂದರೆ ನಿಮಗೆ ತೊಂದರೆ ಆಗುತ್ತದೆ ಎಂದು ಡೋಂಗಿ ಬಾಬಾ ಡೈಲಾಗ್ ಹೊಡೆದಿದ್ದಾನೆ. ಪೂಜೆ ಮಾಡಿಕೊಡುವ ನೆಪದಲ್ಲಿ ಶಿಕ್ಷಕ ದಂಪತಿಗೆ ತನ್ನ ಮಗಳನ್ನು ಕೊಡುವಂತೆ ದೇವರು ಒತ್ತಾಯ ಮಾಡ್ತಾನೆ ಎಂದು ಹೇಳಿದ್ದಾನೆ.

    ದೇವಮಾನವ ಎಂದು ಮರ್ಯಾದೆ ಕೊಟ್ಟು ಮನೆ ಒಳಗೆ ಸೇರಿಸಿದ್ದರೆ ಮಗಳನ್ನೇ ಕೇಳಿದ್ದನ್ನು ನೋಡಿದ ಗ್ರಾಮಸ್ಥರು ಆಕ್ರೋಶಗೊಂಡು ಡೋಂಗಿ ಬಾಬಾನನ್ನು ಹಿಗ್ಗಾ ಮುಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.

  • ಕೊಪ್ಪಳದಲ್ಲಿ ಡೋಂಗಿ ಬಾಬಾ ಅರೆಸ್ಟ್: 56 ಲಕ್ಷ ರೂ. ಚಿನ್ನಾಭರಣ ವಶ

    ಕೊಪ್ಪಳದಲ್ಲಿ ಡೋಂಗಿ ಬಾಬಾ ಅರೆಸ್ಟ್: 56 ಲಕ್ಷ ರೂ. ಚಿನ್ನಾಭರಣ ವಶ

    ಕೊಪ್ಪಳ: ಅಮಾಯಕ ಜನರಿಗೆ ಮಂಕುಬೂದಿ ಎರಚಿ ವಂಚಿಸುತ್ತಿದ್ದ ಡೋಂಗಿ ಬಾಬಾನನ್ನ ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ.

    ಯಾರಬ್ ಬಂಧಿತ ಆರೋಪಿ. ಬಂಧಿತನಿಂದ ಪೊಲೀಸರು 56 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ನಿಮ್ಮ ಮನೆಯಲ್ಲಿ ನಿಧಿಯಿದ್ದು ಪೂಜೆ ಮಾಡಿ ತೆಗೆದು ಕೊಡುವುದಾಗಿ ಹೇಳಿ ಈತ ವಂಚನೆ ಮಾಡುತ್ತಿದ್ದ.

    ಗಂಗಾವತಿಯ ಹಿರೇಜಂತಕಲ್ ನಿವಾಸಿ ಜಾಮಿದ್ ಪಾಷಾ ಅವರಿಂದ ಈತ 13 ತೊಲೆ ಬಂಗಾರ ಪಡೆದು ವಂಚಿಸಿದ್ದ. ಜಾಮಿದ್ ಪಾಷಾ ದೂರಿನ ಅನ್ವಯ ಪೊಲೀಸರು ಈಗ ಬಾಬಾನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಬಂಧಿತ ಬಾಬಾನಿಂದ 1484 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸುತ್ತಿದ್ದ ಇನ್ನೋವಾ ಕಾರು, ಎರಡು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದ ಕೊಲಾರ, ಬಳ್ಳಾರಿ, ಬೆಂಗಳೂರು ಯಲಹಂಕ, ಬಂಗಾರಪೇಟೆ, ಹೊಸಪೇಟೆ ಭಾಗಗಳಲ್ಲಿ ಡೋಂಗಿ ಬಾಬಾ ವಂಚನೆ ಎಸಗಿದ್ದಾನೆ ಎಂದು ಕೊಪ್ಪಳ ಎಸ್ಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.

     

     

  • ಬಾಯಲ್ಲಿ ಚೊಂಬು ಇಟ್ಟು, ಪೇಪರ್‍ನಲ್ಲಿ ಬೆನ್ನು ಉಜ್ಜಿ ಹೊಟ್ಟೆಯಿಂದ ಏನಾದ್ರೂ ಬಿದ್ರೆ ಕಂಟಕ ಬಿಡ್ತು ಅಂತಾನೆ ಈ ಡೋಂಗಿ ಬಾಬಾ!

    ಬಾಯಲ್ಲಿ ಚೊಂಬು ಇಟ್ಟು, ಪೇಪರ್‍ನಲ್ಲಿ ಬೆನ್ನು ಉಜ್ಜಿ ಹೊಟ್ಟೆಯಿಂದ ಏನಾದ್ರೂ ಬಿದ್ರೆ ಕಂಟಕ ಬಿಡ್ತು ಅಂತಾನೆ ಈ ಡೋಂಗಿ ಬಾಬಾ!

    ವಿಜಯಪುರ: ಜಿಲ್ಲೆಯಲ್ಲೊಬ್ಬ ಮಾಟ ಮಂತ್ರ ಹೋಗಲಾಡಿಸುವ ಡೋಂಗಿ ಬಾಬಾನಿರುವ ಬಗ್ಗೆ ಬೆಳಕಿಗೆ ಬಂದಿದೆ. ಈತ ತಂಬಿಗೆ ಬಾಬಾ ಅಂತಾನೇ ಫೇಮಸ್ಸ್ ಆಗಿದ್ದಾನೆ.

    ಹೌದು. ವಿಜಯಪುರದ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ವಂದಾಲ ಗ್ರಾಮದ ಈ ಡೋಂಗಿ ಸ್ವಾಮಿಯ ಹೆಸರು ಧರ್ಮಣ್ಣ. ಇವನು ಬಾಯಲ್ಲಿ ಖಾಲಿ ತಂಬಿಗೆ ಇಟ್ಟು, ಬೆನ್ನಿನ ಮೇಲೆ ಪೇಪರ್‍ನಿಂದ ಸವರುತ್ತಾನೆ. ಆಗ ಮಾಟ ಮಂತ್ರಕ್ಕೆ ಒಳಗಾದ್ರೆ ಅವರ ಬಾಯಿಂದ ಕಸವೋ, ಕಡ್ಡಿಯೋ ಅಥವಾ ಕಾಳೋ ಇಲ್ಲವೇ ಹಿಟ್ಟಿನ ಉಂಡೆಯೋ ಬೀಳುತ್ತಂತೆ. ಹೀಗೆ ಬಾಯಿಂದ ಬಿದ್ದ ವಸ್ತು ರೂಪದಲ್ಲಿ ಮಾಟ ಮಂತ್ರ ಮಾಯವಾಗುತ್ತಂತೆ.

    ವಿಚಿತ್ರ ಅಂದ್ರೆ ತಲೆ ಹಾಗೂ ಬೆನ್ನಿನ ಮೇಲೆ ಕೂಡಾ ಪೇಪರ್ ಇಟ್ಟು ಪೆನ್ನಿನಿಂದ ಗೀಚುತ್ತಾನೆ. ತದನಂತರ ಬೇರೆ ಪೇಪರ್ ಕೊಟ್ಟು ಅದನ್ನು ಸೊಂಟದ ಮಧ್ಯೆ ಭಾಗ ಅಂದ್ರೆ ಕಿಬ್ಬೊಟ್ಟೆಯಲ್ಲಿ ಇಟ್ಟುಕೊಳ್ಬೇಕು ಅಂತ ಹೇಳುತ್ತಾನೆ. ಹೀಗೆ ಮಾಡುತ್ತಾ ಕಿಲಾಡಿ ಬಾಬಾ ಧರ್ಮಣ್ಣ ಇಬ್ಬರಿಂದ 200- 300 ರೂಪಾಯಿ ತೆಗೆದುಕೊಳ್ಳುತ್ತಾನೆ. ಅಲ್ಲದೇ ಈತನ ಪತ್ನಿಯ ಕೈಯಿಂದ ತಾಯ್ತ ಕೊಡಿಸಿ 50 ರೂಪಾಯಿ ವಸೂಲಿ ಮಾಡುತ್ತಿದ್ದಾನೆ ಅಂತ ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

  • ಕತ್ತಲ ಕೋಣೆಯಲ್ಲಿ ಬೆತ್ತಲಾಗುತ್ತಿದ್ದ ಡೋಂಗಿ ಬಾಬಾ ಇದೀಗ ಪೊಲೀಸರ ಅತಿಥಿ

    ಕತ್ತಲ ಕೋಣೆಯಲ್ಲಿ ಬೆತ್ತಲಾಗುತ್ತಿದ್ದ ಡೋಂಗಿ ಬಾಬಾ ಇದೀಗ ಪೊಲೀಸರ ಅತಿಥಿ

    ಮಡಿಕೇರಿ: ಮೂರು ತಿಂಗಳ ಹಿಂದೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೊಂಡಂಗೇರಿ ಗ್ರಾಮಕ್ಕೆ ಆಗಮಿಸಿದ ಡೋಂಗಿ ಬಾಬಾ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ಈ ಡೋಂಗಿ ಬಾಬಾ ಇಕ್ಬಾಲ್ ಬಾಬಾ ಎಂದು ತನ್ನನ್ನು ಪರಿಚಯ ಮಾಡಿಕೊಂಡು ಬಾಡಿಗೆ ಕಟ್ಟಡವೊಂದರಲ್ಲಿ ತನ್ನ ಕಾರ್ಯ ಚಟುವಟಿಕೆ ಪ್ರಾರಂಭಿಸಿದ್ದ. ಕತ್ತಲು ಕವಿದ ಅಮಾಯಕರ ಬಾಳಿನಲ್ಲಿ ಬೆಳಕು ಚೆಲ್ಲುತ್ತೇನೆಂದು ಬೊಗಳೆ ಬಿಡುತ್ತಾ ಕತ್ತಲ ಕೋಣೆಯೊಂದರಲ್ಲಿ ಕುಳಿತು ಮಂತ್ರ ಮತ್ತು ಮೈ ಸವರುವ ತಂತ್ರ ಶುರುವಚ್ಚಿಕೊಂಡಿದ್ದ. ಮಹಿಳಾ ಗಿರಾಕಿಗಳೇ ಹೆಚ್ಚಾಗಿರುವ ಬಾಬಾ ತನ್ನ ಕತ್ತಲ ಕೋಣೆಯಲ್ಲಿ ಬೆತ್ತಲಾಗುತ್ತಿದ್ದಾನೆ ಎಂಬುವುದನ್ನರಿತ ಕೊಂಡಂಗೇರಿ ನಿವಾಸಿಗಳು, ಆತನ ಅರಮನೆ ಒಳಹೊಕ್ಕಾಗ ಬಾಬಾನ ಬೆತ್ತಲೆ ರಹಸ್ಯ ಬಯಲಾಗಿದೆ. ಬಳಿಕ ಬಾಬಾನನ್ನು ಹಿಡಿದು ಹಿಗ್ಗಾ-ಮುಗ್ಗಾ ಥಳಿಸಿದ ಗ್ರಾಮಸ್ಥರು ಆತನನ್ನು ಸಿದ್ದಾಪುರ ಪೊಲೀಸರಿಗೆ ಒಪ್ಪಿಸಿದ್ದಾರೆ.

    ನಮ್ಮ ದೇಶದಲ್ಲಿ ಮೂಢ ನಂಬಿಕೆಗಳ ಬೇರು ಗಟ್ಟಿ ಇರುವವರೆಗೂ ಬಾಬಾ ರಾಮ-ರಹೀಮರಂತಹ ಕಾಮುಕ ಮರಗಳು ಬೃಹದಾಕಾರವಾಗಿ ಬೆಳೆಯುತ್ತಿರುತ್ತವೆ. ಆದ್ದರಿಂದ ಇಂತಹ ಬಾಬಾರನ್ನು ಮೊಳಕೆಯಲ್ಲಿಯೇ ಚಿವುಟಬೇಕಾದ ಅನಿವಾರ್ಯತೆ ಇದೆ. ಅದನ್ನು ಮಾಡಿಸಬೇಕು ಅಂತ ಕೊಂಡಂಗೇರಿ ಗ್ರಾಮಸ್ಥರು ಹೇಳಿದ್ದಾರೆ.

    ಸದ್ಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.