Tag: fake appointment letter

  • ಹೈಕೋರ್ಟ್ ನಲ್ಲಿ ಕೆಲಸ ಗಿಟ್ಟಿಸಲು ಮೋದಿ ಸಹಿಯೇ ನಕಲಿ!

    ಹೈಕೋರ್ಟ್ ನಲ್ಲಿ ಕೆಲಸ ಗಿಟ್ಟಿಸಲು ಮೋದಿ ಸಹಿಯೇ ನಕಲಿ!

    – ಪೊಲೀಸ್ ಕೈಗೆ ಸಿಕ್ಕಿಬಿದ್ದ ಆರೋಪಿ

    ಬೆಂಗಳೂರು: ಹೈಕೋರ್ಟ್ ನಲ್ಲಿ ಕೆಲಸ ಗಿಟ್ಟಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರ ನಕಲಿ ಸಹಿಯ ಆದೇಶ ಪತ್ರ ನೀಡಿದ್ದ ಆರೋಪಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.

    ಸಂಜಯ್ ಕುಮಾರ್ ಬಂಧಿತ ಆರೋಪಿ. ಹೈಕೋರ್ಟ್ ನಲ್ಲಿ ಟೈಪಿಸ್ಟ್ ಹುದ್ದೆ ಗಿಟ್ಟಿಸಲು ಸಂಜಯ್ ಕುಮಾರ್ ಖತರ್ನಾಕ್ ಪ್ಲಾನ್ ಮಾಡಿದ್ದ. ಈ ಕುರಿತು ಹೈಕೋರ್ಟ್ ಸಿಬ್ಬಂದಿ ನೀಡಿದ್ದ ದೂರು ದಾಖಲಿಸಿಕೊಂಡ ಪೊಲೀಸರು ಇಂದು ಆರೋಪಿಯನ್ನು ಬಂಧಿಸಿದ್ದಾರೆ. ನಕಲಿ ಸಹಿಯ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.

    ಆರೋಪಿ ಪ್ಲಾನ್ ?:
    ಸಂಜಯ್ ಕುಮಾರ್ ಎಂಬ ವ್ಯಕ್ತಿಗೆ ಹೈಕೋರ್ಟ್ ನಲ್ಲಿ ಟೈಪಿಸ್ಟ್ ಹುದ್ದೆ ನೀಡಬೇಕು ಎಂಬ ಆದೇಶ ಪತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನಕಲಿ ಸಹಿ ಮಾಡಲಾಗಿತ್ತು. ಈ ಪತ್ರ ಹೈಕೋರ್ಟ್ ಡೆಪ್ಟಿ ಟೈಪಿಸ್ಟ್ ಅವರಿಗೆ ತಲುಪಿದ್ದು, ಅನುಮಾನ ವ್ಯಕ್ತಪಡಿಸಿ ಸಂಜಯ್ ಕುಮಾರ್ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ದೂರು ನೀಡಿದ್ದರು.

    ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆ ಒಳಪಡಿಸಲಾಗಿದೆ. ಆದರೆ ಆತನ ಮೂಲದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv