Tag: Fake

  • ಮೈಕಲ್ ಭವಿಷ್ಯ ನುಡಿದಂತೆ ಬಿಗ್ ಬಾಸ್ ಮನೆಯ ‘ಟಾಪ್ 5’ ಯಾರು?

    ಮೈಕಲ್ ಭವಿಷ್ಯ ನುಡಿದಂತೆ ಬಿಗ್ ಬಾಸ್ ಮನೆಯ ‘ಟಾಪ್ 5’ ಯಾರು?

    ವಾರ ಬಿಗ್ ಬಾಸ್ (Bigg Boss Kannada) ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಮೈಕಲ್ ಅಜಯ್ (Michael). ಹುಟ್ಟಿದ ಮನೆಗೆ ವಾಪಸ್ಸಾಗಿರುವ ಮೈಕಲ್ ತನ್ನ ಜರ್ನಿ ಮತ್ತು ಬಿಗ್ ಬಾಸ್ ಮನೆಯ ಟಾಪ್ 5 ಕಂಟೆಸ್ಟೆಂಟ್ ಗಳ ಬಗ್ಗೆ ಮಾತನಾಡಿದ್ದಾರೆ. ಯಾಕೆ ಅವರು ಟಾಪ್ ಅನ್ನುವ ವಿಚಾರವನ್ನೂ ಹಂಚಿಕೊಂಡಿದ್ದಾರೆ.

    ಮೈಕಲ್ ಟಾಪ್‌ 5 ಲೀಸ್ಟ್

    ನನ್ನ ಪ್ರಕಾರ ವಿನಯ್, ಸಂಗೀತಾ, ಕಾರ್ತಿಕ್ ಸಂಗೀತಾ, ತುಕಾಲಿ ಮತ್ತು ಪ್ರತಾಪ್ ಇವರು ಕೊನೆಯ ಹಂತದಲ್ಲಿರುತ್ತಾರೆ. ಸಂಗೀತಾ ವಿನ್ ಆಗಬಹುದು ಅಂತ ನನಗನಿಸುತ್ತದೆ.  ಮುಂದಿನ ವಾರ ತನಿಷಾ ಎಲಿಮಿನೇಟ್ ಆಗಬಹುದು. ಯಾಕೆಂದರೆ, ಅವಳು ಲೌಡ್ ಆಗಿದ್ದಾಳೆ. ಅದರೆ ಅವಳ ಗೇಮ್ ತುಂಬ ಸ್ಲೋ ಆಗಿ ಹೋಗುತ್ತಿದೆ.

    ಜಿಯೊ ಫನ್ ಫ್ರೈಡೆ

    ಜಿಯೊ ಫನ್ ಫ್ರೈಡೆ ಟಾಸ್ಕ್‌ಗಳು ನನಗೆ ಯಾವಾಗಲೂ ಇಷ್ಟ. ಚೆನ್ನಗಿರುತ್ತಿದ್ದವು. ಫ್ರೈಡೆ ಮಾಡಲಿಕ್ಕೆ ಹೆಚ್ಚೇನೂ ಇರುತ್ತಿರಲಿಲ್ಲ. ಹಾಗಾಗಿ ಫನ್ ಫ್ರೈಡೆಗಾಗಿ ನಾವೆಲ್ಲ ಕಾಯುತ್ತಿದ್ದೆವು. ಅದೇ ದೊಡ್ಡ ಎಂಟರ್‍ಟೈನ್ಮೆಂಟ್‌. ಯಾವಾಗಲೂ ಒಂದು ಎಂಟರ್‍ಟೈನಿಂಗ್ ಟಾಸ್ಕ್‌ ಆಗಿರುತ್ತಿತ್ತು.

    ನನಗೆ ತುಂಬ ದಿನಗಳವರೆಗೆ ಒಂದು ಫೀಲಿಂಗ್ ಇತ್ತು, ‘ಏನ್ ಗುರು, ನಾನು ಎಷ್ಟೆಲ್ಲ ಟಾಸ್ಕ್ ಗೆದ್ದಿದೀನಿ. ಕಿಚ್ಚನ ಚಪ್ಪಾಳೆ ತಗೊಂಡಿದೀನಿ. ಕ್ಯಾಪ್ಟನ್ ಆಗಿದ್ದೀನಿ. ಆದ್ರೆ ಜಿಯೊ ಟಾಸ್ಕ್ ಗೆದ್ದಿಲ್ಲವಲ್ಲ ಅಂತ. ಆದರೆ ಎರಡು ವಾರದ ಹಿಂದೆ  ಬ್ರೆಡ್ ತಿನ್ನುವ ಟಾಸ್ಕ್ ಬಂತು. ನನಗೋಸ್ಕರವೇ ಮಾಡಿದ ಟಾಸ್ಕ್ ಹಾಗಿತ್ತು ಅದು. ಅದನ್ನು ಗೆದ್ದೆ. ತುಂಬ ಖುಷಿಯಾಯ್ತು.

    ಬಿಗ್‌ಬಾಸ್‌ನಲ್ಲಿ ಮಿಸ್‌ ಮಾಡ್ಕೊಳ್ಳೋದೇನು?

    ಬೆಳಬೆಳಿಗ್ಗೆ ಹಾಡು ಹಾಕಿನಮ್ಮನ್ನು ಎಬ್ಬಿಸೋದನ್ನು ನಾನು ಮಿಸ್ ಮಾಡ್ತೀನಿ. ಬೆಳಿಗ್ಗೆ ಹಾಡು ಕೇಳಿ ಎದ್ದು, ಡಾನ್ಸ್ ಮಾಡಿ, ಕಾಫಿ ಕುಡಿದು, ವರ್ಕೌಟ್ ಮಾಡಿ ಹೋಗಿ ಪಾತ್ರೆ ತೊಳೆಯುವ ದಿನಚರಿಯನ್ನು ನಾನು ತುಂಬ ಮಿಸ್ ಮಾಡ್ಕೋತೀನಿ. 90 ದಿನಗಳ ಕಾಲ ಆ ದಿನಚರಿ ಮಾಡಿ ಸೆಟ್ ಆಗಿಬಿಟ್ಟಿದೆ ನನಗೆ. ಅದನ್ನು ಮಿಸ್ ಮಾಡ್ಕೋತೀನಿ.

     

    ಬಿಗ್‌ಬಾಸ್ ಜರ್ನಿ ತುಂಬ ಅಮೇಜಿಂಗ್ ಆಗಿತ್ತು. ಎರಡೇ ವಾರ ಇರ್ತೀನಿ ಅಂದುಕೊಂಡು ಹೋದವನು ನಾನು. ಆದರೆ ಈ ಹದಿಮೂರು ವಾರದಲ್ಲಿ ಹಲವು ಬಗೆಯ ಸಂದರ್ಭಗಳಲ್ಲಿ ಹಾದೂ ನಾನು ನಾನೇ ಆಗಿ ಇದ್ದೀನಿ. ಹಾಗಾಗಿ ಇನ್ನೂ ಸಾಕಷ್ಟು ಸಾಧನೆ ಮಾಡಬಹುದು ಎಂದು ನನಗೆ ವಿಶ್ವಾಸ ಹುಟ್ಟಿದೆ.  ಬರೀ ತೊಂಬತ್ತು ದಿನಗಳಲ್ಲಿ ಒಂದು ಭಾಷೆಯನ್ನು ತುಂಬ ಚೆನ್ನಾಗಿ ಕಲಿತುಕೊಂಡು ಮಣ್ಣಿನ ಮಗ ಆಗಬಹುದು ಎಂಬುದನ್ನೂ ಬಿಗ್‌ಬಾಸ್ ನನಗೆ ಮನವರಿಕೆ ಮಾಡಿಕೊಟ್ಟಿದೆ.

  • ಮನೆಯಲ್ಲಿ ಫೇಕ್ ಅಂತಿರೋದು ಸಂಗೀತಾ, ಪ್ರತಾಪ್ : ಮೈಕಲ್ ಫಸ್ಟ್ ರಿಯ್ಯಾಕ್ಷನ್

    ಮನೆಯಲ್ಲಿ ಫೇಕ್ ಅಂತಿರೋದು ಸಂಗೀತಾ, ಪ್ರತಾಪ್ : ಮೈಕಲ್ ಫಸ್ಟ್ ರಿಯ್ಯಾಕ್ಷನ್

    ಬಿಗ್‌ಬಾಸ್‌ ಕನ್ನಡ  (Bigg Boss Kannada) ಸೀಸನ್‌ 10ನ ಪ್ರಾರಂಭದ ದಿನ ಈ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಹಲವರ ಹುಬ್ಬುಗಳು ಮೇಲೇರಿದ್ದವು. ಯಾರಿದು ಮೈಕಲ್ ಅಜಯ್ (Michael) ಎಂಬ ಪ್ರಶ್ನೆ ಅವರ ಮನಸಲ್ಲಿ ಎದ್ದಿತ್ತು. ಹಿಂದಿಯ ರಿಯಾಲಿಟಿ ಷೋ ಒಂದರಲ್ಲಿ ಭಾಗವಹಿಸಿರುವ ವಿದೇಶದ ಪ್ರಜೆಯಾಗಿರುವ, ಕನ್ನಡದ ನೆಲದಲ್ಲಿ ಮೂಲಬೇರುಗಳ ಸಂಬಂಧ ಹೊಂದಿರುವ ಮೈಕಲ್‌, ಬಿಗ್‌ಬಾಸ್‌ ಮನೆಯೊಳಗೆ ಅಡಿಯಿಟ್ಟ ಮೇಲೆಯೂ ಅವರ ಬಗ್ಗೆ ಕುತೂಹಲ ತೋರಿದವರು ಕಡಿಮೆಯೇ. ಇವರ ಹೆಸರೇ ಕೇಳಿಲ್ಲ, ಕನ್ನಡವೂ ಬರುವುದಿಲ್ಲ. ಇವರು ಇಲ್ಲಿ ಹೆಚ್ಚು ದಿನ ಉಳಿದುಕೊಳ್ಳುವುದಿಲ್ಲ ಎಂದು ಉದಾಸೀನವಾಗಿ ನೋಡಿದವರೇ ಹೆಚ್ಚು. ಆದರೆ ಅಂಥವರೇ ಅಚ್ಚರಿ ಕಣ್ಣುಗಳಿಂದ, ಮೆಚ್ಚುಗೆಯ ಮನಸ್ಸಿಂದ ನೋಡುವಂತೆ ಮಾಡುವ ಹಾಗೆ ಬೆಳೆದರು, ಬಿಗ್‌ಬಾಸ್ ಮನೆಯಲ್ಲಿ ಬಹುಧೀರ್ಘಕಾಲದವರೆಗೆ, ಫಿನಾಲೆಯ ಕೆಲವೇ ಹೆಜ್ಜೆಗಳಷ್ಟು ದೂರದವರೆಗೆ ಕ್ರಮಿಸಿದರು ಮೈಕಲ್.

    ಬೇರೆಯವರು ಬಿಡಿ, ಸ್ವತಃ ಅವರಿಗೇ ಎರಡು ಮೂರು ವಾರಕ್ಕಿಂತ ಹೆಚ್ಚು ಇಲ್ಲಿರಲಾರೆ ಎಂದು ಅನಿಸಿತ್ತಂತೆ. ಎಲ್ಲರೊಂದಿಗೆ ಸ್ನೇಹದೊಂದಿಗೆ ವರ್ತಿಸುವ ಗುಣ, ಸತ್ಯಕ್ಕೆ, ಪ್ರಾಮಾಣಿಕತೆಗೆ ಅಂಟಿಕೊಂಡಿರುವ ಬದ್ಧತೆ, ಇದ್ದಿದ್ದನ್ನು ಇದ್ದ ಹಾಗೆ ನೇರವಾಗಿ ಹೇಳುವ ದಿಟ್ಟ ಸ್ವಭಾವದಿಂದಲೇ ಕನ್ನಡಿಗರ ಮೆಚ್ಚುಗೆ ಗಳಿಸಿಕೊಂಡಿದ್ದ ಮೈಕಲ್ ಅಜಯ್ ಈ ವಾರ ಮನೆಯಿಂದ ಹೊರಗೆ ಬಂದಿದ್ದಾರೆ. ಹೊರಬಂದ ಕೂಡಲೇ JioCinemaಗೆ ನೀಡಿರುವ ಎಕ್ಸ್‌ಕ್ಲ್ಯೂಸಿವ್ ಸಂದರ್ಶನದಲ್ಲಿ (Interview) ಅವರು ತಮ್ಮದೇ ಸ್ಟೈಲ್‌ನಲ್ಲಿ ಬಿಗ್‌ಬಾಸ್‌ ಕನ್ನಡದ ಅನುಭವವನ್ನು ಹಂಚಿಕೊಂಡಿದ್ದಾರೆ. ಅದರ ಅಕ್ಷರರೂಪ ಇಲ್ಲಿದೆ.

    ‘ಹಾಯ್, ನಾನು ನಿಮ್ಮ ಮಣ್ಣಿನ ಮಗ. ನಿಮ್ಮ ಕನ್ನಡದ ಕಂದ. ಬಿಗ್‌ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ಮೈಕಲ್ ಅಜಯ್. ತುಂಬ ಮಿಸ್ಸಿಂಗ್ ಫೀಲಿಂಗ್‌ನಲ್ಲಿದ್ದೀನಿ. ಆದರೆ ಈಗ ಹೊರಗಡೆ ಇರುವ ಜೀವನವನ್ನು ಅನುಭವಿಸಲು ಎಕ್ಸೈಟ್ ಆಗಿದ್ದೀನಿ. ನಾನು ಬಿಗ್‌ಬಾಸ್‌ ಮನೆಯೊಳಗೆ ಹೋದಾಗ, ಅಲ್ಲಿನ ವಾತಾವರಣ ನೋಡಿ ಎರಡು ಮೂರು ವಾರ ಇರಬಹುದಷ್ಟೇ ಎಂದುಕೊಂಡಿದ್ದೆ. ಆದರೆ ಹದಿಮೂರು ವಾರ ಉಳಿದೆ. ಈವತ್ತು ಎಲಿಮಿನೇಟ್ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಎಲ್ಲೋ ಒಂದು ಕಡೆ, ಇನ್ನೊಂದೆರಡು ವಾರ ಕಳೆದು ಫೈನಲ್‌ಗೂ ಹೋಗಬಹುದು ಎಂಬ ವಿಶ್ವಾಸವೂ ಇತ್ತು. ಆದರೆ ಬ್ಯಾಡ್‌ಲಕ್.

    ಕನ್ನಡ ಸುಂದರವಾದ ಭಾಷೆ

    ನಾನು ನನ್ನ ಬದುಕಿನಲ್ಲಿ ಕನ್ನಡ ಬಳಸಿದ್ದು ತುಂಬ ಕಡಿಮೆ. ಆದರೆ ಇಲ್ಲಿಗೆ ಬಂದು ಕನ್ನಡ ಎಂಥ ಸುಂದರವಾದ ಭಾಷೆ, ಅದರ ಲಿಪಿ ತುಂಬ ಸರಳ. ನಾನು ಐದಾರು ದಿನಗಳಲ್ಲಿಯೇ ಕನ್ನಡ ಲಿಪಿಗಳನ್ನೆಲ್ಲ ಕಲಿತುಕೊಂಡುಬಿಟ್ಟೆ. ಎಲ್ಲರ ಮೈಕ್‌ನ ನೇಮ್‌ಟ್ಯಾಗ್ ನೋಡಿ ನೋಡಿ ಅಕ್ಷರಗಳನ್ನು ಕಲಿಯುತ್ತಿದ್ದೆ. ಬಿಗ್‌ಬಾಸ್‌ ಎಂಬ ಫಲಕದಲ್ಲಿ ಬ ಮತ್ತು ಗ ಎಲ್ಲ ಗೊತ್ತಾಗುತ್ತಿತ್ತು. ಕನ್ನಡ ತುಂಬ ಸುಂದರವಾದ ಭಾಷೆ ಅಂತ ನನಗನಿಸಿತು. ಕಲಿಯುವುದೂ ಸುಲಭ. ಕರ್ನಾಟಕಕ್ಕೆ ಬೇರೆ ಕಡೆಯಿಂದ ಬರುವವರೆಲ್ಲ ಟ್ರೈ ಮಾಡಿದ್ರೆ ತುಂಬ ಸುಲಭವಾಗಿ ಕನ್ನಡ ಕಲಿಯಬಹುದು.

    ಆರಂಭದಲ್ಲಿಯೇ ಗಟ್ಟಿಯಾಗಿರಬೇಕಿತ್ತು. ಸ್ಟಾರ್ಟಿಂಗ್‌ನಲ್ಲಿ ತುಂಬ ಸ್ಲೋ ಆಗಿದ್ದೆ. ಅದೇ ನನ್ನನ್ನು ಕೊಂಚ ಹಿಂದಕ್ಕೆ ತಳ್ಳಿತು ಅನಿಸುತ್ತದೆ. ಆರಂಭದಿಂದಲೇ ಇನ್ನಷ್ಟು ಸ್ಟ್ರಾಂಗ್ ಆಗಿ ನಿಂತುಕೊಂಡಿದ್ದರೆ ಇನ್ನೂ ತುಸು ಮುಂದಕ್ಕೆ ಹೋಗಬಹುದಿತ್ತು ಅನಿಸುತ್ತದೆ. ಈಗೇನಾದ್ರೂ ಮತ್ತೆ ಪುನಃ ಮನೆಯೊಳಗೆ ಹೋಗಲು ಅವಕಾಶ ಸಿಕ್ಕರೆ ಮೊದಲ ದಿನದಿಂದಲೇ ಎಲ್ಲರ ಜೊತೆಯಲ್ಲಿ ಬೆರೆಯಲು ಶುರುಮಾಡುತ್ತಿದ್ದೆ.

    ವಿನಯ್ ಜೆನ್ಯೂನ್

    ಮನೆಯಲ್ಲಿ ವಿನಯ್‌ ತುಂಬ ಜೆನ್ಯೂನ್‌ ವ್ಯಕ್ತಿ. ಮೊದಲ ದಿನದಿಂದಲೇ ಅವರೊಂದಿಗೆ ಶುರುವಾದ ಸ್ನೇಹ, ಹೊರಗೆ ಬರುವ ದಿನದವರೆಗೆ ಮುಂದುವರಿದಿತ್ತು. ನಮ್ಮ ಮಧ್ಯ ತುಂಬ ಜಗಳಗಳಾಗಿವೆ. ಆದರೆ ಅವೆಲ್ಲವೂ ಟಾಸ್ಕ್‌ಗಳಿಗಾಗಿ. ಅದರಾಚೆಗೆ ನಮ್ಮ ಮಾತು, ಫ್ರೆಂಡ್‌ಷಿಪ್ ಎಲ್ಲ ಪ್ಯೂರ್ ಆಗಿವೆ. ಹಾಗಾಗಿ ವಿನಯ್ ತುಂಬ ಜೆನ್ಯೂನ್ ಅನಿಸುತ್ತಾರೆ.

     

    ನನ್ನ ಪ್ರಕಾರ ಮನೆಯಲ್ಲಿ ಫೇಕ್ ಆಗಿದ್ದಿದ್ದು ಇಬ್ಬರು. ಒಬ್ಬರು ಸಂಗೀತಾ ಇನ್ನೊಬ್ಬ ಪ್ರತಾಪ್. ಪ್ರತಾಪ್‌ ಹೇಗೆ ಅಂತ ಅರ್ಥನೇ ಆಗಿಲ್ಲ. ಅವನು ಕಂಪ್ಲೀಟ್ ಸಿಂಪತಿ ಕಾರ್ಡ್‌ ಪ್ಲೇ ಮಾಡಿ ಮುಂದೆ ಬಂದಿದಾನೆ. ಸಂಗೀತಾ ಕೂಡ ಬೇಡದಿರುವ ಕಡೆ ತನ್ನ ಅಭಿಪ್ರಾಯಗಳನ್ನು ಇಂಜೆಕ್ಟ್ ಮಾಡಿ, ಕಾರ್ಡ್‌ ಪ್ಲೇ ಮಾಡಿ ಮುಂದೆ ಹೋಗಿದಾಳೆ ಅನಿಸುತ್ತದೆ.

  • ‘ಚಾರ್ಲಿ’ ನಿರ್ದೇಶಕನ ಹೆಸರಲ್ಲಿ ಮಲಯಾಳಂ ನಟಿ ಮಾಲಾ ಪಾರ್ವತಿಗೆ ಕರೆ ಮಾಡಿದ ನಕಲಿ ನಿರ್ದೇಶಕ

    ‘ಚಾರ್ಲಿ’ ನಿರ್ದೇಶಕನ ಹೆಸರಲ್ಲಿ ಮಲಯಾಳಂ ನಟಿ ಮಾಲಾ ಪಾರ್ವತಿಗೆ ಕರೆ ಮಾಡಿದ ನಕಲಿ ನಿರ್ದೇಶಕ

    ಕೆಜಿಎಫ್ 2 ಸಿನಿಮಾದ ನಂತರ ಭಾರತೀಯ ಸಿನಿಮಾ ರಂಗದಲ್ಲಿ ಮತ್ತೊಂದು ಸದ್ದು ಮಾಡಿದ ಚಿತ್ರ ಚಾರ್ಲಿ 777. ಬಾಕ್ಸ್ ಆಫೀಸಿನಲ್ಲಿ ಅದು ಸಖತ್ ಕಮಾಯಿ ಮಾಡಿತು. ಚೊಚ್ಚಲು ಸಿನಿಮಾದ ಮೂಲಕ ನಿರ್ದೇಶಕ ಕಿರಣ್ ರಾಜ್, ಭಾರತೀಯ ಸಿನಿಮಾ ರಂಗಕ್ಕೆ ಪರಿಚಯವಾದರು. ಕಿರಣ್ ರಾಜ್ ಗೆ ಇದೀಗ ಎಲ್ಲಿಲ್ಲದ ಬೇಡಿಕೆ. ಹಾಗಾಗಿ ಇವರ ಹೆಸರನ್ನು ದುರುಪಯೋಗ ಪಡಿಸಿಕೊಂಡ ಘಟನೆ ನಡೆದಿದೆ. ನಕಲಿ ನಿರ್ದೇಶಕನೊಬ್ಬ ಕಿರಣ್ ರಾಜ್ ಹೆಸರನ್ನು ಬಳಸಿಕೊಂಡು, ಮಲಯಾಳಂ ನಟಿ ಮಾಲಾ ಪಾರ್ವತಿಗೆ ಕರೆ ಮಾಡಿದ್ದಾನೆ.

    ಮಲಯಾಳಂ ಖ್ಯಾತ ನಟಿ ಮಾಲಾ ಪಾರ್ವತಿಗೆ ಕರೆ ಮಾಡಿರುವ ನಕಲಿ ನಿರ್ದೇಶಕ, ತಾನು ಚಾರ್ಲಿ ಸಿನಿಮಾದ ಡೈರೆಕ್ಟರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ತನ್ನ ಮುಂದಿನ ಚಿತ್ರಕ್ಕೆ ತಮ್ಮ ಡೇಟ್ ಬೇಕಾಗಿತ್ತು ಎಂದು ಕೇಳಿದ್ದಾನೆ. ನಾಲ್ಕೈದು ಬಾರಿ ಕರೆ ಮಾಡಿದಾಗ ಮಾಲಾಗೆ ಅನುಮಾನ ಬಂದು, ತಮಗೆ ಪರಿಚಿತ ಚಾರ್ಲಿ ಸಿನಿಮಾದ ತಂತ್ರಜ್ಞರೊಬ್ಬರಿಗೆ ಕರೆ ಮಾಡಿದ್ದಾರೆ. ಅವರು ಕಿರಣ್ ಗೆ ಕರೆ ಮಾಡಿ ವಿಷಯ ತಿಳಿಸಿದಾಗ ಸ್ವತಃ ಅಚ್ಚರಿಗೊಂಡಿದ್ದಾರೆ ಕಿರಣ್. ಇದನ್ನೂ ಓದಿ:ಜಯಶ್ರೀ ಜೊತೆ ಸೋನು ಶ್ರೀನಿವಾಸ್ ಗೌಡ ಕಿರಿಕ್

    ಆ ನಕಲಿ ಡೈರೆಕ್ಟರ್ ನನ್ನು ಕಂಡು ಹಿಡಿಯಬೇಕು ಎಂದು ಮಾಲಾ ಅವರಿಗೆ, ನಕಲಿ ಡೈರೆಕ್ಟರ್ ಜೊತೆ ಕಾನ್ಫರೆನ್ಸ್ ಕಾಲ್ ಹಾಕಲು ಹೇಳಿದ್ದಾರೆ. ಮಾಲಾ ಅದೇ ರೀತಿ ಮಾಡಿದಾಗ ನಕಲಿ ಡೈರೆಕ್ಟರ್ ಬಣ್ಣ ಬಯಲಾಗಿದೆ. ಕೂಡಲೇ ಅವರು ಆ ವ್ಯಕ್ತಿಯ ಮೇಲೆ ಸೈಬರ್ ಠಾಣೆಗೆ ದೂರು ದಾಖಲಿಸಿದ್ದಾರೆ. ಅಲ್ಲದೇ, ಈ ಅನುಭವವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಇಂತಹ ವ್ಯಕ್ತಿಗಳಿಂದ ದೂರವಿರಿ ಎಂದು ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಕಿರಣ್ ರಾಜ್, ನಾನೆಂದೂ ಆ ರೀತಿ ಕೆಲಸ ಮಾಡುವವನು ಅಲ್ಲ. ಹಾಗಾಗಿ ನನ್ನ ಹೆಸರಿನಲ್ಲಿ ಈ ರೀತಿ ಕೆಲಸ ನಡೆದಿದೆ ಎಂದಾಗ ಶಾಕ್ ಆದೆ. ಆ ವ್ಯಕ್ತಿಗೆ ಪಾಠ ಕಲಿಸಲೇಬೇಕು ಎಂದು ಮಾಲಾ ಅವರಿಗೆ ತಿಳಿಸಿದೆ. ಅವರು ಕೂಡ ನಾನು ಹೇಳಿದಂತೆ ಮಾಡಿದರು. ಕೊನೆಗೂ ಆ ನಕಲಿ ಡೈರೆಕ್ಟರ್ ನನ್ನು ಕಂಡು ಹಿಡಿದೆವು. ಆದರೆ, ಈ ಘಟನೆ ನಂತರ ಅವನು ಮೊಬೈಲ್ ಆಫ್ ಮಾಡಿಕೊಂಡಿದ್ದಾನೆ ಎನ್ನುತ್ತಾರೆ ಕಿರಣ್.

    Live Tv
    [brid partner=56869869 player=32851 video=960834 autoplay=true]

  • ಲಾಕ್‍ಡೌನ್ ವೇಳೆ ನಕಲಿ ಪೊಲೀಸರ ಹಾವಳಿ – ವೆಹಿಕಲ್ ಚೆಕ್ಕಿಂಗ್  ನೆಪದಲ್ಲಿ ಬೈಕ್ ಕಳ್ಳತನ

    ಲಾಕ್‍ಡೌನ್ ವೇಳೆ ನಕಲಿ ಪೊಲೀಸರ ಹಾವಳಿ – ವೆಹಿಕಲ್ ಚೆಕ್ಕಿಂಗ್ ನೆಪದಲ್ಲಿ ಬೈಕ್ ಕಳ್ಳತನ

    ಬೆಂಗಳೂರು: ಕೆಲವರಿಗೆ ಈ ಲಾಕ್‍ಡೌನ್ ಬಂಡವಾಳವಾಗಿದೆ. ಪೊಲೀಸರ ಸೋಗಿನಲ್ಲಿ ವಾಹನ ತಪಾಸಣೆ ನಡೆಸಿದ ನಕಲಿಗಳು, ಬೈಕ್ ಪಡೆದು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಬಾರ್ ಬೈಂಡಿಂಗ್ ಕೆಲಸ ನಿಮಿತ್ತ ಮೇ 25 ರಂದು ನೈಸ್ ರಸ್ತೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ತಪನ್ ಬಿಸ್ವಾಸ್ ಅನ್ನೋರನ್ನ ತಡೆ ಹಾಕಿದ್ದ ನಕಲಿ ಪೊಲೀಸ್ರು ಬೈಕ್ ಅಡ್ಡಗಟ್ಟಿ ನಾವು ಪೊಲೀಸರು ಲಾಕ್‍ಡೌನ್ ನಲ್ಲಿ ಯಾಕೆ ಸುಮ್ಮನೆ ಓಡಾಡ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಬೈಕ್ ಸವಾರನ ಆಧಾರ್ ಕಾರ್ಡ್, ಗಾಡಿ ಡಾಕ್ಯುಮೆಂಟ್ ಪಡೆದು ದುಷ್ಕರ್ಮಿಗಳು ಬೈಕ್ ಜಪ್ತಿ ಮಾಡುವ ನಾಟಕವನ್ನಾಡಿದ್ದಾರೆ.

    ನಾಳೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಬಂದು ಬೈಕ್ ಪಡೆಯುವಂತೆ ಹೇಳಿ ಗಾಡಿ ಎತ್ಕೊಂಡು ಎಸ್ಕೇಪ್ ಆಗಿದ್ದಾರೆ. ಮರುದಿನ ಪೊಲೀಸ್ ಠಾಣೆಯಲ್ಲಿ ಬೈಕ್ ಕೇಳಿದ ತಪನ್ ಬಿಸ್ವಾಸ್‍ಗೆ ಶಾಕ್ ಕಾದಿತ್ತು. ಬೈಕ್ ನೋಂದಣಿ ಪರಿಶೀಲನೆ ನಡೆಸಿ ಬೈಕ್ ಇಲ್ಲಿ ಇಲ್ಲ ಎಂದು ಪೊಲೀಸರು ತಿಳಿಸಿದರು. ಬಳಿಕ ಮೂರ್ನಾಲ್ಕು ಪೊಲೀಸ್ ಠಾಣೆ ಸುತ್ತಾಡಿದರು ಎಲ್ಲೂ ಬೈಕ್ ಸಿಗಲಿಲ್ಲ. ಇದನ್ನೂ ಓದಿ: ಲಾಕ್‍ಡೌನ್ ಬಗ್ಗೆ ಜೂನ್ 5ರಂದು ಸಿಎಂ ತೀರ್ಮಾನ ಮಾಡ್ತಾರೆ: ಬೊಮ್ಮಾಯಿ

    ಕೊನೆಗೆ ಇದು ಡಕಾಯಿತರ ಕೃತ್ಯ ಎಂದು ಅರಿತುಕೊಂಡ ತಪನ್ ಬಿಸ್ವಾಸ್ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಪಡೆದು ತನಿಖೆ ನಡೆಸಿದ ಪೊಲೀಸರಿಂದ ತಪನ್ ಬಿಸ್ವಾಸ್ ಸ್ನೇಹಿತ ತಪನ್ ರಾಯ್, ಶರತ್ ಶೆಟ್ಟಿ, ಪೂರ್ವಿಕ್ ರಾಜ್ ಮತ್ತು ಮೋಹನ್ ಕುಮಾರ್‍ನ ಬಂಧನ ಮಾಡಲಾಗಿದೆ. ದೂರುದಾರ ತಪನ್ ಬಿಸ್ವಾಸ್ ಬಳಿ ಹಣ ಇದೆ ಎಂದು ಸ್ನೇಹಿತ ತಪನ್ ರಾಯ್ ಕೊಟ್ಟ ಪ್ಲಾನ್ ನಂತೆ ಬೈಕ್ ಕದಿಯುವ ಕೆಲಸ ಮಾಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ನಕಲಿ ಕಳ್ಳ ಪೊಲೀಸ್ ಆಟ ಬಾಯ್ಬಿಟ್ಟ ಆರೋಪಿಗಳಿಗೆ ಸರಿಯಾಗೆ ಬುದ್ದಿ ಕಲಿಸಿದ್ದಾರೆ.

  • ಡಿಸಿಪಿ ಕೈಗೆ ಸಿಕ್ಕಿಬಿದ್ದ ನಕಲಿ ಪತ್ರಕರ್ತ- ಬೈಕ್ ಸೀಜ್, ಕೇಸ್ ದಾಖಲು

    ಡಿಸಿಪಿ ಕೈಗೆ ಸಿಕ್ಕಿಬಿದ್ದ ನಕಲಿ ಪತ್ರಕರ್ತ- ಬೈಕ್ ಸೀಜ್, ಕೇಸ್ ದಾಖಲು

    ಹುಬ್ಬಳ್ಳಿ: ಲಾಕಡೌನ್ ವೇಳೆ ಬಂದ್ ಆಗಿರುವ ಟಿವಿ ಚಾನಲ್ ಐಡಿ ಕಾರ್ಡ ಬಳಸಿ ಪೊಲೀಸರನ್ನ ಯಮಾರಿಸುತ್ತಿದ್ದ ನಕಲಿ ಪತ್ರಕರ್ತನನ್ನ ಹುಬ್ಬಳ್ಳಿಯಲ್ಲಿ ಪೊಲೀಸರು ವಶಕ್ಕೆ ಪಡೆದು ಬೈಕ್ ಸೀಜ್ ಮಾಡಿದ್ದಾರೆ.

    ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್ ಬಳಿ  ಡಿಸಿಪಿ ರಾಮರಾಜನ್ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಇಂದು ಮುಂಜಾನೆ ಅನಗತ್ಯವಾಗಿ ಓಡಾಟ ಮಾಡುತ್ತಿದ್ದ ನಕಲಿ ಪತ್ರಕರ್ತನನ್ನು ಹಿಡಿದು ಬೈಕ್ ಸೀಜ್ ಮಾಡಿ ಪ್ರಕರಣ ದಾಖಲಿಸಿದ್ದಾರೆ.

    ಜಾನ್ ನಿಕೋಲಸ್ ಹಲವು ವರ್ಷಗಳ ಹಿಂದೇಯೇ ಬಂದ್ ಆಗಿರುವ ಟಿವಿ ಚಾನಲ್ ಐಡಿ ಕಾರ್ಡ ತೋರಿಸಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ. ಈ ವೇಳೆ ಐಡಿ ವಶಕ್ಕೆ ಪಡೆದ ಡಿಸಿಪಿ ರಾಮರಾಜನ್ ಸ್ಥಳದಲ್ಲಿದ್ದ ಇನ್ನೂಳಿದ ಪತ್ರಕರ್ತರ ಬಳಿ ಮಾಹಿತಿ ಪಡೆದ ಡಿಸಿಪಿ ರಾಮರಾಜನ್ ನಕಲಿ ಪತ್ರಕರ್ತನ ಬೈಕ್ ಸೀಜ್ ಮಾಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಸಿಬ್ಬಂದಿಗಳಿಗೆ ಆದೇಶ ನೀಡಿದ್ದಾರೆ. ಹುಬ್ಬಳ್ಳಿಯ ಉಪನಗರ ಪೊಲೀಸರು ನಕಲಿ ಪತ್ರಕರ್ತನ ಬೈಕ್ ಸೀಜ್ ಮಾಡಿ ಠಾಣೆಗೆ ಕರೆದೊಯ್ಯು ತನಿಖೆ ಮುಂದುವರೆಸಿದ್ದಾರೆ.

  • ಅತ್ತೆ ಮಕ್ಕಳಿಗೆ 17 ಲಕ್ಷ ರೂಪಾಯಿ ಟೋಪಿ ಹಾಕಿದ್ರಾ ಬಿಜೆಪಿ ಮುಖಂಡ!

    ಅತ್ತೆ ಮಕ್ಕಳಿಗೆ 17 ಲಕ್ಷ ರೂಪಾಯಿ ಟೋಪಿ ಹಾಕಿದ್ರಾ ಬಿಜೆಪಿ ಮುಖಂಡ!

    ಹುಬ್ಬಳ್ಳಿ: ಸೋದರ ಮಾವನ ಹೆಸರಿನಲ್ಲಿ ನಕಲಿ ಬಾಂಡ್ ಸೃಷ್ಟಿ ಮಾಡಿ ಮಾವನ ಮಕ್ಕಳಿಗೆ ತೊಂದರೆ ಕೊಡುತ್ತಿದ್ದಾರೆಂಬ ಆರೋಪವೊಂದು ಭಾರತೀಯ ಜನತಾ ಪಕ್ಷದ ಮುಖಂಡನ ವಿರುದ್ಧ ಕೇಳಿಬಂದಿದೆ.

    ಸಂಗಮೇಶ ಗೌರಕ್ಕನವರ್ ಆರೋಪ ಎದುರಿಸುತ್ತಿರುವ ಬಿಜೆಪಿ ಮುಖಂಡ. ಇವರು ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಮುಖಂಡರೊಂದಿಗೆ ಸಂಪರ್ಕ ಹೊಂದಿದ್ದು, ಇದೀಗ ತೊಂದರೆ ಕೊಡುತ್ತಿದ್ದಾರೆಂದು ಆರೋಪಿಸಿ ಅಳಿಯಂದಿರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಗಂಗಾಧರ ವಾಲಿ ಎಂಬವರ ಕುಟುಂಬಕ್ಕೆ ಸಂಗಮೇಶ್ ಅನ್ಯಾಯ ಮಾಡಿ 17 ಲಕ್ಷ 68 ಸಾವಿರ ಕೊಡುವಂತೆ ಪೀಡಿಸುತ್ತಿದ್ದಾರೆಂದು ವಾಲಿ ಪುತ್ರ ದೂರಿನಲ್ಲಿ ತಿಳಿಸಿದ್ದಾರೆ.

     

    ಗಂಗಾಧರ ವಾಲಿಯವರು ತೀರಿಕೊಳ್ಳುವ ಮುನ್ನವೇ ಬಾಂಡ್ ಒಂದನ್ನ ಮಾಡಿಕೊಂಡಿದ್ದು, ಅದರಲ್ಲಿ 10 ಲಕ್ಷ ರೂಪಾಯಿ ಕೈಗಡ ಎಂದು ಬರೆಯಲಾಗಿದೆ. ಆದರೆ ಒಂದು ವರ್ಷದಲ್ಲಿ ಅದರ ಬಡ್ಡಿ ಸಮೇತ 17 ಲಕ್ಷಕ್ಕೂ ಹೆಚ್ಚು ಹಣವನ್ನ ಕೊಡುವಂತೆ ಪೀಡಿಸುತ್ತಿರುವುದರಿಂದ ಪ್ರಕರಣ ಬೆಳಕಿಗೆ ಬಂದಿದೆ.

    ಸಂಗಮೇಶ ಗೌರಕ್ಕನವರ್ ಬಿಜೆಪಿ ಮುಖಂಡರ ಜೊತೆಗೂಡಿ ಇಂತಹ ದಂಧೆಗಳನ್ನ ಮಾಡುತ್ತಿದ್ದಾರೆಂದು ವಾಲಿ ಕುಟುಂಬದವರು ಆರೋಪ ಮಾಡುತ್ತಿದ್ದಾರೆ. ನಕಲಿ ಬಾಂಡ್‍ಗೆ ಮೃತ ರಾಘವೇಂದ್ರ ರಾಮದುರ್ಗ ಅವರ ಸಹಿ ಕೂಡಾ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸೋದರ ಮಾವನ ಮಕ್ಕಳು ಬಿಜೆಪಿ ಮುಖಂಡನ ಅಕ್ರಮದ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪೊಲೀಸರು ತನಿಖೆಯಿಂದ ಸತ್ಯ ತಿಳಿಯಲಿದೆ.

  • #IAmStillAlive ಎಂದು ಹೇಳಿದ ರಘು ದೀಕ್ಷಿತ್

    #IAmStillAlive ಎಂದು ಹೇಳಿದ ರಘು ದೀಕ್ಷಿತ್

    ಬೆಂಗಳೂರು: ಕನ್ನಡದ ಖ್ಯಾತ ಗಾಯಕ ರಘು ದೀಕ್ಷಿತ್ ಆತ್ಮಹತ್ಯೆ ಎಂಬ ಸುಳ್ಳುಸುದ್ದಿ ವೈರಲ್ ಆಗುತ್ತಿದ್ದಂತೆ ನಾನಿನ್ನೂ ಜೀವಂತವಾಗಿದ್ದೇನೆಂದು ರಘು ದೀಕ್ಷಿತ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.

    “ಖ್ಯಾತ ಗಾಯಕ ರಘು ದೀಕ್ಷಿತ್ ಆತ್ಮಹತ್ಯೆ! ಕಣ್ಣೀರಿನಲ್ಲಿ ಕನ್ನಡ ಚಿತ್ರರಂಗಕ್ಕೆ ಏನಾಯ್ತು?” ಹೆಡ್‍ಲೈನ್ ಹಾಕಿ ಯೂಟ್ಯೂಬ್‍ನಲ್ಲಿ ಒಂದು ವಿಡಿಯೋ ಅಪ್ಲೋಡ್ ಆಗಿತ್ತು.

    ಈ ವಿಡಿಯೋ ನೋಡಿದ ರಘು ದೀಕ್ಷಿತ್ ಸ್ವತಃ ತಾವೇ ದಂಗಾಗಿ ಆ ಸುದ್ದಿಯ ಸ್ಕ್ರೀನ್ ಶಾಟ್ ತೆಗದು ಹೀಗೂ ಉಂಟೇ!!! ನಾನೂ ಅನೇಕ ಕೆಟ್ಟ ಘಟನೆಗಳನ್ನು ಜೀವನದಲ್ಲಿ ಅನುಭವಿಸಿ ಅದನ್ನು ದಾಟಿ ಮುಂದೆ ಬಂದಿದ್ದೇನೆ, ಅದರೊಂದಿಗೆ ಇದನ್ನು ಕೂಡ ಕೇಕ್‍ನ ಒಂದು ಭಾಗವನ್ನು ತಿಂದಂತೆ ಸ್ವೀಕರಿಸಿದ್ದೇನೆ. ನಾನಿನ್ನೂ ಜೀವಂತವಾಗಿದ್ದೇನೆ ಎಂದು ಹೇಳಿದ್ದಾರೆ.

    ಇನ್‍ಸ್ಟಾದಲ್ಲಿ ಸ್ಟೋರಿ ಅಪ್ಲೋಡ್ ಮಾಡಿದ ಅವರು ಈ ಯೂಟ್ಯೂಬ್ ಖಾತೆಯನ್ನು ರಿಪೋರ್ಟ್ ಮಾಡಿ ಎಂದು ಕೇಳಿಕೊಂಡಿದ್ದಾರೆ.

    ಕನ್ನಡ, ಹಿಂದಿ, ಮಲೆಯಾಳಂ ತಮಿಳು ಭಾಷೆಗಳಲ್ಲಿ 15 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ರಘು ದೀಕ್ಷಿತ್ ಅವರಲ್ಲಿ ಅಭಿಮಾನಿಗಳು ಕೂಡಲೇ ನೀವು ಯೂಟ್ಯೂಬ್‍ಗೆ ಹೇಳಿ ಆ ಖಾತೆಯನ್ನು ಡಿಲೀಟ್ ಮಾಡಿಸಿ ಎಂದು ಸಲಹೆ ನೀಡಿದ್ದಾರೆ.

  • FACT CHECK: ಮಂಗಳೂರು ಪೊಲೀಸರಿಗೆ 10 ಲಕ್ಷ ರೂ. ಬಹುಮಾನ

    FACT CHECK: ಮಂಗಳೂರು ಪೊಲೀಸರಿಗೆ 10 ಲಕ್ಷ ರೂ. ಬಹುಮಾನ

    ಮಂಗಳೂರು: ಕಳೆದ ವಾರ ನಡೆದ ಗಲಭೆ ವೇಳೆ ಉತ್ತಮವಾಗಿ ಕಾರ್ಯನಿರ್ವಹಿಸಿದ ಮಂಗಳೂರಿನ 148 ಪೊಲೀಸರಿಗೆ 10 ಲಕ್ಷ ರೂ. ಬಹುಮಾನ ನೀಡಲಾಗಿದೆ ಎಂಬ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದೊಂದು ಸುಳ್ಳು ಸುದ್ದಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷ ಸ್ಪಷ್ಟಪಡಿಸಿದ್ದಾರೆ.

    ಈ ಸಂಬಂಧ ಹರ್ಷ ಅವರು, ಕೆಲ ಕಿಡಿಗೇಡಿಗಳು ಇಲಾಖೆಯ ಹೆಸರಿನಲ್ಲಿ ತಪ್ಪು ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಅಧಿಕೃತ ಸಂವಹನದಂತೆ ತಪ್ಪು ಮಾಹಿತಿಯನ್ನು ಕಳುಹಿಸಲಾಗುತ್ತದೆ. ಈ ಸುಳ್ಳು ಮಾಹಿತಿಗಳನ್ನು ಯಾರೂ ನಂಬಬೇಡಿ ಎಂದು ನಾನು ಜನರಲ್ಲಿ ಮನವಿ ಮಾಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಿಂದ ರಾಜ್ಯ ಪೊಲೀಸ್ ಮಹಾ ನಿರೀಕ್ಷರಿಗೆ ಪತ್ರವನ್ನು ಡಿ.25 ರಂದು ಬರೆಯಲಾಗಿದ್ದು, ಇದರಲ್ಲಿ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಅಧಿಕಾರಿ/ ಸಿಬ್ಬಂದಿಗೆ ನಗದು ಬಹುಮಾನ ನೀಡಿದ ಬಗ್ಗೆ ಉಲ್ಲೇಖವಿತ್ತು. ಕರ್ನಾಟಕ ಪೊಲೀಸ್ ಲೆಟರ್ ಹೆಡ್ ಇದ್ದ ಕಾರಣ ಇದು ಅಧಿಕೃತ ಪತ್ರವೆಂದೇ ತಿಳಿದು ಜನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

    ಪತ್ರದಲ್ಲಿ ಏನಿತ್ತು?
    ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದ ಸಿಎಬಿ ಮತ್ತು ಎನ್‌ಆರ್‌ಸಿ ಮಸೂದೆಯ ವಿರುದ್ಧವಾಗಿ ದಿನಾಂಕ ಡಿ.19 ರಂದು ಮಂಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ತೀವ್ರವಾಗಿ ಭಂಗ ಉಂಟಾಗಿದ್ದು, ಪ್ರತಿಭಟನಾ ನಿರತ ವ್ಯಕ್ತಿಗಳು ಪೊಲೀಸ್ ಅಧಿಕಾರಿ/ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ನಷ್ಟ ಉಂಟುಮಾಡಿರುತ್ತಾರೆ. ಆದ ಕಾರಣ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿರುತ್ತದೆ. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಹಾಗೂ ನಗರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಹಗಲು ರಾತ್ರಿ ಅವಿರತ ಪರಿಶ್ರಮ ನಡೆಸಿರುತ್ತಾರೆ. ಆದ್ದರಿಂದ ಈ ಕೆಳಕಂಡ ಅಧಿಕಾರಿ/ ಸಿಬ್ಬಂದಿ ಅವರ ಶ್ಲಾಘನೀಯ ಸೇವೆಯನ್ನು ಗುರುತಿಸಿ ನಗದು ಬಹುಮಾನವನ್ನು ನೀಡಲಾಗಿದೆ ಎಂಬ ವಿಷಯವನ್ನು ಮಾನ್ಯರ ಅವಗಾಹನೆಗೆ ಈ ಮೂಲಕ ತರುತ್ತಿದ್ದೇನೆ.

     

  • ಹಸಿ ಮಾಂಸದ ತಟ್ಟೆಯಿಂದ ಬಿತ್ತು ಕೋಳಿ – ವಿಡಿಯೋ ವೈರಲ್

    ಹಸಿ ಮಾಂಸದ ತಟ್ಟೆಯಿಂದ ಬಿತ್ತು ಕೋಳಿ – ವಿಡಿಯೋ ವೈರಲ್

    ಬೆಂಗಳೂರು: ಹಸಿ ಮಾಂಸ ಇರುವ ಪ್ಲೇಟಿನಿಂದ ಕೋಳಿ ಎಂದು ಹೇಳಲಾಗುತ್ತಿರುವ ಪ್ರಾಣಿ ತೆವಳುತ್ತಾ ನೆಲಕ್ಕೆ ಬೀಳುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವೈರಲ್ ಆಗಿರುವ ವಿಡಿಯೋ ಸತ್ಯವೋ ಸುಳ್ಳೋ ಎನ್ನುವುದರ ಬಗ್ಗೆ ಈಗ ಪ್ರಶ್ನೆ ಎದ್ದಿದೆ. ಕೆಲವರು ಇದು ನಿಜವಾಗಿ ನಡೆದಿದೆ ಎಂದು ಹೇಳಿದರೆ ಮತ್ತೆ ಕೆಲವರು ಎಡಿಟೆಡ್ ವಿಡಿಯೋ ಎಂದು ಹೇಳುತ್ತಿದ್ದಾರೆ.

    ಕೆಲವೊಂದು ಫ್ಯಾಕ್ಟ್ ಚೆಕ್ ವೆಬ್‍ಸೈಟ್ ಗಳು ಇದು ಮೊದಲ ಬಾರಿಗೆ ಜೂನ್ ತಿಂಗಳಿನಲ್ಲಿ ಚೀನಾದ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡಿದೆ ಎಂದು ಹೇಳಿದ್ದರೆ ಕೆಲ ಇಂಗ್ಲೀಷ್ ತಾಣಗಳು ಹಾಂಕಾಂಗ್ ನಲ್ಲಿ ಮೊದಲು ವಿಡಿಯೋ ಅಪ್ಲೋಡ್ ಆಗಿದೆ ಎಂದು ಹೇಳಿವೆ.

    https://twitter.com/lizardtoess/status/1154973048937832448

    ಪ್ರಾಣಿ ಶಾಸ್ತ್ರಜ್ಞರು ಇದು ಕೋಳಿಯೂ ಅಲ್ಲ ಕಪ್ಪೆಯೂ ಅಲ್ಲ. ಮೀನು ಆಗಿರುವ ಸಾಧ್ಯತೆಯಿದೆ. ತೆವಳುತ್ತಾ ಹಾರಬೇಕಾದರೆ ಮೀನು ಮಾತ್ರ ಆಗಿರಬೇಕು. ಚರ್ಮ ತೆಗೆದ ಮೀನು ಈ ರೀತಿ ಹಾರಿರಬಹುದು ಎಂದು ಹೇಳಿದ್ದಾರೆ.

    ಒಟ್ಟಿನಲ್ಲಿ ಇದು ನೈಜವೋ? ಎಡಿಟೆಡ್ ವಿಡಿಯೋ ಎನ್ನುವುದರ ಬಗ್ಗೆ ಗೊಂದಲವಿದೆ. ಈ ಸುದ್ದಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಮೆಂಟ್ ಮಾಡಿ ತಿಳಿಸಿ.