Tag: failure

  • ‘ಲೈಗರ್’ ಸಿನಿಮಾ ಸೋಲು: ನಿರ್ಮಾಪಕರಿಗೆ ಸಂಭಾವನೆ ಹಿಂದಿರುಗಿಸಿದ ವಿಜಯ್ ದೇವರಕೊಂಡ

    ‘ಲೈಗರ್’ ಸಿನಿಮಾ ಸೋಲು: ನಿರ್ಮಾಪಕರಿಗೆ ಸಂಭಾವನೆ ಹಿಂದಿರುಗಿಸಿದ ವಿಜಯ್ ದೇವರಕೊಂಡ

    ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಲೈಗರ್ ಸಿನಿಮಾ ಹೀನಾಯವಾಗಿ ಸೋಲು ಅನುಭವಿಸಿದೆ. ಬಾಯ್ಕಟ್ ಸೇರಿದಂತೆ, ಸಿನಿಮಾ ನಟನ ದರ್ಪವೇ ಸಿನಿಮಾ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಅದರಲ್ಲೂ ಹಿಂದಿ ಸಿನಿಮಾ ರಂಗ ವಿಮರ್ಶಕರು ಕೂಡ ಸಿನಿಮಾ ಚೆನ್ನಾಗಿಲ್ಲವೆಂದು ಕಾಮೆಂಟ್ ಮಾಡಿದ್ದರು. ಹಾಗಾಗಿ ಬಾಕ್ಸ್ ಆಫೀಸಿನಲ್ಲಿ ಸಿನಿಮಾ ಗೆಲ್ಲಲಿಲ್ಲ. ಈ ಸೋಲಿನ ಹೊಣೆಯನ್ನು ಸ್ವತಃ ವಿಜಯ್ ದೇವರಕೊಂಡ ಹೊತ್ತಿದ್ದಾರೆ.

    ಮೂಲಗಳ ಪ್ರಕಾರ, ಲೈಗರ್ ಸಿನಿಮಾದ ಸೋಲಿನ ಹೊಣೆಯನ್ನು ತಾವೇ ಹೊತ್ತುಕೊಂಡಿರುವ ವಿಜಯ್ ದೇವರಕೊಂಡ ತಾವು ಪಡೆದಿದ್ದು ಕೋಟಿ ಕೋಟಿ ಸಂಭಾವನೆಯನ್ನು ವಾಪಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾಗೆ ಅವರು 25 ಕೋಟಿ ಸಂಭಾವನೆ ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಅಷ್ಟೂ ಹಣವನ್ನು ಚಾರ್ಮಿ ಕೌರ್ ಮತ್ತು ಪುರಿ ಜಗನ್ನಾಥ್ ಅವರಿಗೆ ವಾಪಸ್ಸು ಮಾಡಿದ್ದಾರೆ ಎಂದು ವರದಿ ಆಗಿದೆ. ಇದನ್ನೂ ಓದಿ: ರಿಯಲ್ ಪ್ರೇಮಿಗಳು ‘ಬಿಗ್ ಬಾಸ್’ ಮನೆಯಲ್ಲಿ ಬೇರೆ ಬೇರೆ ಆಗ್ತಾರಾ?: ದೂರಾಗುವ ಕುರಿತು ಮಾತನಾಡಿದ ನಂದಿನಿ

    ಲೈಗರ್ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಈ ಸಿನಿಮಾ ನೂರಾರು ಕೋಟಿ ಗಳಿಸಲಿದೆ ಎಂಬ ಲೆಕ್ಕಾಚಾರ ಕೂಡ ನಡೆದಿತ್ತು. ದಕ್ಷಿಣದ ಹೀರೋ ಬಾಲಿವುಡ್ ನಲ್ಲಿ ಮತ್ತೊಂದು ದಾಖಲೆ ನಿರ್ಮಿಸುತ್ತಾರೆ ಎಂದೇ ಹೇಳಲಾಗಿತ್ತು. ಆದರೆ, ಎಲ್ಲ ಲೆಕ್ಕಾಚಾರ ತಲೆಕೆಳಗಾಗಿವೆ. ಹಾಕಿದ ಬಂಡವಾಳವೂ ಬಾರದೇ ಇರುವಷ್ಟು ಸಿನಿಮಾ ಮುಗ್ಗರಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಹಿನ್ನೆಲೆಗೆ ಹೋಗ್ಬೇಡಿ ಮುನ್ನೆಲೆಗೆ ಬನ್ನಿ – ಮೋದಿಗೆ ರಾಹುಲ್ ಸವಾಲ್

    ಹಿನ್ನೆಲೆಗೆ ಹೋಗ್ಬೇಡಿ ಮುನ್ನೆಲೆಗೆ ಬನ್ನಿ – ಮೋದಿಗೆ ರಾಹುಲ್ ಸವಾಲ್

    – ಲಾಕ್‍ಡೌನ್ ಸಂಪೂರ್ಣ ವಿಫಲವಾಗಿದೆ

    ನವದೆಹಲಿ: ಲಾಕ್‍ಡೌನ್ ವಿಫಲವಾದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಿಂದೆ ಸರಿದಿದ್ದು, ಈ ನಡುವೆ ಅವರು ಎಲ್ಲೂ ಮುನ್ನೆಲೆಯಲ್ಲಿ ಕಾಣುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಕುಟುಕಿದ್ದಾರೆ. ಲಾಕ್‍ಡೌನ್ ಅವಧಿಯಲ್ಲಿ ಸರಣಿ ಸುದ್ದಿಗೋಷ್ಠಿ ನಡೆಸುತ್ತಿರುವ ಅವರು, ಇಂದಿನ ಸುದ್ದಿಗೋಷ್ಠಿಯಲ್ಲೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ಭಾರತದಲ್ಲಿ ಲಾಕ್‍ಡೌನ್ ಸಂಪೂರ್ಣ ವಿಫಲವಾಗಿದೆ. ಲಾಕ್‍ಡೌನ್ ಬಳಿಕವೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಏಕೈಕ ದೇಶ ಭಾರತ. ಇಲ್ಲಿ ಲಾಕ್‍ಡೌನ್ ಗುರಿ ಮತ್ತು ಉದ್ದೇಶ ಈಡೇರದೆ ವಿಫಲವಾಗಿದೆ. ವಿಫಲವಾದ ಲಾಕ್‍ಡೌನ್ ಫಲಿತಾಂಶವನ್ನು ಸದ್ಯ ಭಾರತ ಎದುರಿಸುತ್ತಿದ್ದು, ಸೋಂಕಿನ ಪ್ರಮಾಣ ಗಣನೀಯ ಏರಿಕೆ ಕಾಣುತ್ತಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

    ಲಾಕ್‍ಡೌನ್ ಆರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುನ್ನೆಲೆಯಲ್ಲಿದ್ದರು ಲಾಕ್‍ಡೌನ್ ವಿಫಲವಾಗುತ್ತಿದ್ದಂತೆ ಹಿನ್ನಲೆಗೆ ಸರಿದಿದ್ದಾರೆ. ವಿಪಕ್ಷವಾಗಿ ನಾವು ಅವರಿಗೆ ಮನವಿ ಮಾಡುತ್ತೇವೆ ಮತ್ತೆ ದೇಶದ ಮುನ್ನೆಲೆಗೆ ಬಂದು ಮಾತನಾಡಬೇಕು. ಲಾಕ್‍ಡೌನ್ ಬಳಿಕ ಸರ್ಕಾರದ ಮುಂದಿನ ನಡೆ ಏನು ಎಂದು ಸ್ಪಷ್ಟಪಡಿಸಬೇಕು. ಲಾಕ್‍ಡೌನ್ ವಿಫಲವಾಗಿದೆ ಸರ್ಕಾರದ ನಿರ್ಧಾರ ಏನು ಎನ್ನುವುದು ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.

    ಕೇಂದ್ರ ಸರ್ಕಾರದ ಇಪ್ಪತ್ತು ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ನಿಂದ ಏನು ಲಾಭ ಇಲ್ಲ. ಆರ್ಥಿಕ ಚೇತರಿಕೆಗೆ ನಗದು ಹಣ ವರ್ಗಾವಣೆ ಮಾಡದೆ ಬೇರೆ ಪರಿಹಾರ ಇಲ್ಲ. ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಬಲಿಷ್ಠಗೊಳಿಸಿ. ಶೇ.50 ಬಡ ಜನರಿಗೆ 7,500 ಹಣ ವರ್ಗಾವಣೆ ಮಾಡಿ ಇಲ್ಲದಿದ್ದರೆ ದೊಡ್ಡ ಆರ್ಥಿಕ ಮುಗ್ಗಟ್ಟು ದೇಶ ಎದುರಿಸಲಿದೆ ಎಂದು ಎಚ್ಚರಿಸಿದರು.

    ವಿದೇಶಗಳ ಬಗ್ಗೆ ಸರ್ಕಾರ ಯೋಚನೆ ಮಾಡವುದಲ್ಲ, ನಾವು ಮೊದಲು ನಮ್ಮ ದೇಶದ ಜನರನ್ನು ರಕ್ಷಿಸಬೇಕು. ಬಡವರು ಬದುಕು ಕಟ್ಟಿಕೊಳ್ಳಲು ಸರ್ಕಾರ ಏನು ಮಾಡಲಿದೆ ತಿಳಿಸಲಿ. ಕೊರೊನಾ ಹೋರಾಟಕ್ಕೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ನೆರವು ಸಿಗುತ್ತಿಲ್ಲ. ಆರ್ಥಿಕ ಪ್ಯಾಕೇಜ್‍ನ ಅವಶ್ಯಕತೆ ಇದೆ ಆದರೆ ಮೋದಿ ಸರ್ಕಾರ ಈ ಮನವಿ ಪರಿಗಣಿಸುತ್ತಿಲ್ಲ. ಇದು ಮತ್ತಷ್ಟು ಸಂಕಷ್ಟಕ್ಕೆ ಕಾರಣವಾಗಲಿದೆ. ಕೊರೊನಾ ನಿಯಂತ್ರಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ನಾನು ಮಾರ್ಕ್ಸ್ ನೀಡುವುದಿಲ್ಲ, ಮಾರ್ಕ್ಸ್ ನೀಡಲು ನಾನು ಪ್ರೊಫೆಸರ್ ಅಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.

  • ಗೋವಾ ಹಾಲಿ ಸಿಎಂ ಲಕ್ಷ್ಮೀಕಾಂತ್ ಪೆರ್ಸೆಕರ್‍ಗೆ ಭಾರೀ ಮುಖಭಂಗ

    ಗೋವಾ ಹಾಲಿ ಸಿಎಂ ಲಕ್ಷ್ಮೀಕಾಂತ್ ಪೆರ್ಸೆಕರ್‍ಗೆ ಭಾರೀ ಮುಖಭಂಗ

    ನವದೆಹಲಿ: ಗೋವಾ ಹಾಲಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಭಾರೀ ಮುಖಭಂಗವಾಗಿದೆ.

    ಮಾಂಡ್ರೆಮ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪರ್ಸೇಕರ್ ಕಾಂಗ್ರೆಸ್ ಅಭ್ಯರ್ಥಿ ದಯಾನಂದ್ ರಘುನಾಥ್ ವಿರುದ್ಧ ಸೋಲು ಅನುಭವಿಸಿದ್ದಾರೆ.

    ಗೋವಾ ರಾಜ್ಯದ ಫಲಿತಾಂಶದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಒಟ್ಟು 40 ಸ್ಥಾನಗಳಲ್ಲಿ ಕಾಂಗ್ರೆಸ್ 11 ರಲ್ಲಿ ಮುನ್ನಡೆ ನಡೆಯುತ್ತಿದೆ. ಇನ್ನು 8 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಪಕ್ಷೇತರ ಅಭ್ಯರ್ಥಿಗಳು 5 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದ್ದಾರೆ. ಗೋವಾದಲ್ಲಿ ಸರ್ಕಾರ ರಚಿಸಲು ಬಹುಮತಕ್ಕೆ 21 ಕ್ಷೇತ್ರಗಳಲ್ಲಿ ಗೆಲವು ಕಾಣಬೇಕಿದೆ.

    2012 ರ ವಿಧಾನಸಭಾ ಚುನಾವಣೆಯಲ್ಲಿ ಲಕ್ಷ್ಮೀಕಾಂತ್ ಪರ್ಸೆಕರ್ ಇದೇ ಮಾಂಡ್ರೆಮ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಅಂದು ಕಾಂಗ್ರೆಸ್ ಅಭ್ಯರ್ಥಿ ದಯಾನಂದ್ ರಘುನಾಥ್ ಅವರ ವಿರುದ್ಧ 3,435 ಮತಗಳ ಅಂತರದಲ್ಲಿ ಜಯಭೇರಿ ಸಾಧಿಸಿದ್ದರು.