Tag: Fahadh Faasil

  • ರಜನಿಕಾಂತ್ ನಟನೆಯ ‘ಜೈಲರ್ 2’ ಸಿನಿಮಾದಲ್ಲಿ ಫಹಾದ್ ಫಾಸಿಲ್?

    ರಜನಿಕಾಂತ್ ನಟನೆಯ ‘ಜೈಲರ್ 2’ ಸಿನಿಮಾದಲ್ಲಿ ಫಹಾದ್ ಫಾಸಿಲ್?

    ಜನಿಕಾಂತ್ (Rajinikanth) ನಟನೆಯ ‘ಜೈಲರ್ 2’ (Jailer 2) ಸಿನಿಮಾದಲ್ಲಿ ಮಲ್ಟಿ ಸ್ಟಾರ್‌ಗಳು ನಟಿಸಲಿದ್ದಾರೆ. ಈ ಚಿತ್ರದಲ್ಲಿ ಮತ್ತೆ ಶಿವಣ್ಣ ನಟಿಸೋದು ಅಧಿಕೃತವಾಗಿದೆ. ಈ ಬೆನ್ನಲ್ಲೇ ಮಲಯಾಳಂ ನಟ ಫಹಾದ್ ಫಾಸಿಲ್ (Fahadh Faasil) ಕೂಡ ತಲೈವಾ ಜೊತೆ ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:ಪೊರಕೆ ಹಿಡಿದು ಹೊಸ ಅವತಾರದಲ್ಲಿ ಯುವ ಎಂಟ್ರಿ- ‘‌ಎಕ್ಕ’ ಚಿತ್ರದ ಟೀಸರ್‌ ಔಟ್

    ಕೇರಳದಲ್ಲಿ ‘ಜೈಲರ್ 2’ಗಾಗಿ ತಲೈವಾ ಟೀಮ್ ಕೆಲದಿನಗಳಿಂದ ಬೀಡು ಬಿಟ್ಟಿದೆ. ಸದ್ಯದಲ್ಲೇ ಶಿವಣ್ಣ ಕೂಡ ಈ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಹೀಗಿರುವಾಗ ಈ ಸಿನಿಮಾ ಬಗ್ಗೆ ಮತ್ತೊಂದು ಇಂಟ್ರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಈ ಸಿನಿಮಾದ ಪಾತ್ರವೊಂದಕ್ಕಾಗಿ ನಟಿಸಲು ಚಿತ್ರತಂಡ ‘ಪುಷ್ಪ 2’ (Pushpa 2) ಖ್ಯಾತಿಯ ಫಹಾದ್ ಫಾಸಿಲ್ ಅವರನ್ನು ಸಂಪರ್ಕಿಸಿದೆ ಎನ್ನಲಾಗಿದೆ. ಕಥೆ ಮತ್ತು ಪಾತ್ರದ ಬಗ್ಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಹರಿದಾಡುತ್ತಿರುವ ಈ ಸುದ್ದಿ ನಿಜನಾ, ಈ ಚಿತ್ರದಲ್ಲಿ ಅವರು ನಟಿಸುತ್ತಾರಾ ಎಂಬುದನ್ನು ಚಿತ್ರತಂಡವೇ ಅಫಿಷಿಯಲ್ ಆಗಿ ತಿಳಿಸಬೇಕಿದೆ. ಇದನ್ನೂ ಓದಿ:ಕೇರಳದಲ್ಲಿ ತಲೈವಾ- ನೆಚ್ಚಿನ ನಟನನ್ನು ನೋಡಿ ಫ್ಯಾನ್ಸ್ ಜೈಕಾರ

    ಈಗಾಗಲೇ ‘ವೆಟ್ಟೈಯಾನ್‌’ ಸಿನಿಮಾದಲ್ಲಿ ರಜನಿಕಾಂತ್ ಜೊತೆ ಫಹಾದ್ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇಬ್ಬರ ಕಾಂಬಿನೇಷನ್ ಚಿತ್ರದಲ್ಲಿ ಹೈಲೆಟ್ ಆಗಿತ್ತು. ಹಾಗಾಗಿ ‘ಜೈಲರ್ 2’ನಲ್ಲಿಯೂ ಫಹಾದ್ ನಟಿಸಲಿ ಎಂದು ಫ್ಯಾನ್ಸ್ ನಿರೀಕ್ಷಿಸುತ್ತಿದ್ದಾರೆ.

  • ‘ಪುಷ್ಪ 2’ ಸಕ್ಸಸ್‌ ನಂತರ ಬಾಲಿವುಡ್‌ನಲ್ಲಿ ಫಹಾದ್‌ ಫಾಸಿಲ್‌ಗೆ ಬಂಪರ್‌ ಆಫರ್‌

    ‘ಪುಷ್ಪ 2’ ಸಕ್ಸಸ್‌ ನಂತರ ಬಾಲಿವುಡ್‌ನಲ್ಲಿ ಫಹಾದ್‌ ಫಾಸಿಲ್‌ಗೆ ಬಂಪರ್‌ ಆಫರ್‌

    ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳನ್ನು ನೀಡೋದ್ರರಲ್ಲಿ ಮಲಯಾಳಂ ಸಿನಿಮಾರಂಗ ಯಾವಾಗಲೂ ಮುಂದು. ಹೀಗಿರುವಾಗ ಆವೇಶಂ, ಪುಷ್ಪ 2 (Pushpa 2) ಸಿನಿಮಾಗಳ ಮೂಲಕ ಸಕ್ಸಸ್ ಕಂಡಿರುವ ಪ್ರತಿಭಾನ್ವಿತ ನಟ ಫಹಾದ್ ಫಾಸಿಲ್ (Fahadh Faasil)  ಇದೀಗ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಬಾಲಿವುಡ್‌ನಿಂದ ನಟನಿಗೆ ಬಂಪರ್‌ ಆಫರ್‌ ಸಿಕ್ಕಿದೆ.

    ಇಮ್ತಿಯಾಜ್ ಅಲಿ ನಿರ್ದೇಶನದ ಸಿನಿಮಾದಲ್ಲಿ ಫಹಾದ್ ಫಾಸಿಲ್ ಹೀರೋ ಆಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾಗೆ `ಅನಿಮಲ್’ ಚಿತ್ರದ ‘ಬಾಬಿ 2’ ತೃಪ್ತಿ ದಿಮ್ರಿ ಹೀರೋಯಿನ್ ಆಗಿ ನಟಿಸಲಿದ್ದಾರೆ. ಇದನ್ನೂ ಓದಿ:ಡಿಗ್ನಿಫೈಡ್ ರಾಜಕಾರಣಿ, ಬೆಂಗಳೂರು ನಂ.1 ಆಗಲು ಎಸ್‌ಎಂಕೆ ಕಾರಣ: ಸುಮಲತಾ

    ಫಹಾದ್ ಮತ್ತು ತೃಪ್ತಿ ದಿಮ್ರಿ ಜೋಡಿಯನ್ನು ಹೈಲೆಟ್ ಮಾಡಿಕೊಂಡು ವಿಭಿನ್ನ ಕಥಾಹಂದರ ತೋರಿಸಲು ಹೊರಟಿದ್ದಾರೆ. ಸದ್ಯ ಫಹಾದ್ ಅವರು ಬಾಲಿವುಡ್‌ನಲ್ಲಿ ನಟಿಸಲಿರುವ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  • Pushpa 2 The Rule Trailer: ಪುಷ್ಪ ಅಂದ್ರೆ ಫೈಯರ್‌ ಅಲ್ಲ, ವೈಲ್ಡ್‌ ಫೈಯರ್‌ – ಟ್ರೇಲರ್‌ನಲ್ಲಿ ಅಲ್ಲು ಅರ್ಜುನ್‌ ಖದರ್‌

    Pushpa 2 The Rule Trailer: ಪುಷ್ಪ ಅಂದ್ರೆ ಫೈಯರ್‌ ಅಲ್ಲ, ವೈಲ್ಡ್‌ ಫೈಯರ್‌ – ಟ್ರೇಲರ್‌ನಲ್ಲಿ ಅಲ್ಲು ಅರ್ಜುನ್‌ ಖದರ್‌

    ಕೇವಲ ಟಾಲಿವುಡ್‌ ಮಾತ್ರವಲ್ಲ, ಇಡೀ ಭಾರತ ಚಿತ್ರರಂಗವೇ ಪುಷ್ಪ-2 (Pushpa 2) ಚಿತ್ರ ರಿಲೀಸ್‌ ಆಗುವ ದಿನಕ್ಕಾಗಿ ತುದಿಗಾಲಲ್ಲಿ ನಿಂತಿದೆ.

    ಪುಷ್ಪ ಮೊದಲ ಭಾಗದ ಯಶಸ್ಸಿನ ಬಳಿಕ ಈ ಸಿನಿಮಾ ಮೇಲೆ ಎಲ್ಲರಿಗೂ ಎಲ್ಲಿಲ್ಲದ ಕುತೂಹಲ ಹುಟ್ಟಿದೆ. ಪುಷ್ಪರಾಜ್‌ ಪಾತ್ರದಲ್ಲಿ ಅಲ್ಲು ಅರ್ಜುನ್‌ ಖದರ್‌ ಲುಕ್‌ಗಳು ಈಗಾಗಲೇ ಅಭಿಮಾನಿಗಳಲ್ಲಿ ಕ್ರೇಸ್‌ ಹೆಚ್ಚಿಸಿದೆ. ಇದೀಗ ʻಪುಷ್ಪ 2; ದಿ ರೂಲ್‌ʼ ಚಿತ್ರದ ಟ್ರೇಲರ್‌ (Pushpa 2 The Rule Trailer) ಬಿಡುಗಡೆ ಆಗಿದ್ದು, ಸಿನಿಮಾ ಮೇಲಿನ ಕುತೂಹಲಕ್ಕೆ ಮತ್ತಷ್ಟು ಒಗ್ಗರಣೆ ಹಾಕಿದಂತಿದೆ ಟ್ರೇಲರ್.‌

    ಇಂದು ಬಿಡುಗಡೆಯಾದ ಟ್ರೈಲರ್‌ನಲ್ಲಿ ಅಲ್ಲು ಅರ್ಜುನ್‌ (Allu Arjun) ಜೊತೆಗೆ ಫಹಾದ್ ಫಾಸಿಲ್ ಖದರ್‌ (Fahadh Faasil) ಲುಕ್‌ನಲ್ಲಿ ಕಾಣಿಸಿಕೊಂಡರೆ, ರಶ್ಮೀಕಾ ಮಂದಣ್ಣ ಕೂಡ ಶೈನ್‌ ಆಗಿದ್ದಾರೆ. ಇದನ್ನೂ ಓದಿ: ಅಲ್ಲು ಅರ್ಜುನ್‌ಗೆ ಸ್ಪೆಷಲ್ ಗಿಫ್ಟ್ ಕಳುಹಿಸಿದ ಶ್ರೀಲೀಲಾ

    ಕಾಡಾನೆಯ ಜೋರು ಸೌಂಡು, ಯಾರವನು? ಹಣ ಎಂದರೆ ಲೆಕ್ಕಕ್ಕಿಲ್ಲ. ಅಧಿಕಾರ ಅಂದ್ರೆ ಭಯ ಇಲ್ಲ ಎನ್ನುವ ಜಗಪತಿ ಬಾಬು ಡೈಲಾಗ್‌ನೊಂದಿಗೆ ಟ್ರೈಲರ್‌ ತೆರೆದುಕೊಳ್ಳುತ್ತದೆ. ಅಲ್ಲಿಂದ ಶುರುವಾಗುವ ಟ್ರೈಲರ್‌ ತನ್ನದೇ ಆದ ದೊಡ್ಡ ಸಾಮ್ರಾಜ್ಯವನ್ನೇ ಸೃಷ್ಟಿಸಿಕೊಂಡ ಪುಷ್ಪರಾಜ್‌ನ ಇನ್ನೊಂದು ಮುಖದ ಅನಾವರಣ ಮಾಡಿದ್ದಾರೆ ನಿರ್ದೇಶಕರು. ಪೊಲೀಸ್‌ ಇಲಾಖೆ ಮಾತ್ರವಲ್ಲದೆ, ರಾಜಕಾರಣಿಗಳಿಗೂ ಈ ಪುಷ್ಪರಾಜ್‌ ನಡುಕ ಹುಟ್ಟಿಸಿದ್ದಾನೆ. ಹೇಳಿ ಕೇಳಿ ಅಲ್ಲು ಅರ್ಜುನ್‌ ಮಾಸ್‌ ಹೀರೋ. ಆ ಪ್ರಭಾವಳಿಗೆ ತಕ್ಕಂತೆಯೇ ಅವರನ್ನೇ ಟ್ರೇಲರ್‌ನಲ್ಲಿ ಎತ್ತಿ ಮೆರೆಸಲಾಗಿದೆ.

    ಪುಷ್ಪರಾಜ್‌ನ ಬಾಲ್ಯದ ಕಹಿ ಅನುಭವಗಳನ್ನು ಸೀಕ್ವೆಲ್‌ನಲ್ಲಿ ಕೊಂಚ ಎಳೆದು ತಂದಿರುವ ನಿರ್ದೇಶಕ ಸುಕುಮಾರ್.‌ ಅದಕ್ಕೆ ತಕ್ಕಂತೆ, ‘ನಾಮ್ ಚೋಟಾ ಹೈ.. ಲೇಕಿನ್ ಸೌಂಡ್ ಬಡಾ ಹೈ’ ಎಂದು ಪುಷ್ಪರಾಜ್‌ ಹೇಳುವ ಎಲಿವೇಶನ್ ದೃಶ್ಯಗಳೂ ಟ್ರೇಲರ್‌ನಲ್ಲಿವೆ. ಇದೆಲ್ಲದರ ಜತೆಗೆ ಶ್ರೀವಲ್ಲಿ ಜತೆಗಿನ ದೃಶ್ಯಗಳು ಟ್ರೇಲರ್‌ನಲ್ಲಿವೆ. ಭನ್ವರ್‌ ಸಿಂಗ್‌ ಶೇಖಾವತ್‌ ಪಾತ್ರದಲ್ಲಿ ಫಹಾದ್‌ ಫಾಸಿಲ್‌ ಖದರ್‌ ಕ್ರೇಜಿಯಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಭಾಗದಲ್ಲಿದ್ದ ಅದೇ ಗತ್ತು ಎರಡನೇ ಭಾಗದಲ್ಲಿಯೂ ಮುಂದುವರಿದಿದೆ. ಇದನ್ನೂ ಓದಿ: ಸರಳವಾಗಿ ನಡೆಯಿತು ಡಾಲಿ ಧನಂಜಯ್, ಧನ್ಯತಾ ನಿಶ್ಚಿತಾರ್ಥ- ಫೆ.16ಕ್ಕೆ ಮದುವೆ

    ಮೊದಲ ಭಾಗಕ್ಕಿಂತ ದೊಡ್ಡ ಕ್ಯಾನ್ವಾಸ್‌ನಲ್ಲಿ ಪುಷ್ಪ 2 ಮೂಡಿಬಂದಿದೆ. ಅದಕ್ಕೆ ತಕ್ಕಂತೆ ಪುಷ್ಪರಾಜ್ ಬಾಯಿಂದ ಡೈಲಾಗ್‌ವೊಂದು ಹೊರಡಿದೆ. “ಈ ಪುಷ್ಪರಾಜ್‌ ನ್ಯಾಶನಲ್‌ ಅಲ್ಲ, ಇಂಟರ್‌ನ್ಯಾಶನಲ್” ಎಂದಿದ್ದಾನೆ. ಅಲ್ಲಿಗೆ ಅದೇ ಇಂಟರ್‌ನ್ಯಾಶನಲ್‌ ಮಟ್ಟದಲ್ಲಿಯೇ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸುಕುಮಾರ್.‌ ಇಡೀ ಟ್ರೇಲರ್‌ನಲ್ಲಿ ಸಾಹಸ ದೃಶ್ಯಗಳು ಮೇಳೈಸಿವೆ. ಮೈಚಳಿ ಬಿಟ್ಟು ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಅಲ್ಲು ಅರ್ಜುನ್.‌ ಕೊನೆಯಲ್ಲಿ ಅಲ್ಲು ಅರ್ಜುನ್‌ ಬೆಂಬಲಿಗರು ʻಪುಷ್ಪ ಅಂದ್ರೆ ಫ್ಲವರ್‌ ಅನ್ಕೊಂಡ್ರಾʼ ಎನ್ನುತ್ತಾರೆ? ಅದಕ್ಕೆ ಗನ್‌ ಸೌಂಡಿನೊಂದಿಗೆ ಫೈಯರ್‌ ಅಲ್ವಾ? ಎನ್ನುತ್ತಾರೆ ಫಾಸಿಲ್‌, ಅದಕ್ಕೆ ಪುಷ್ಪಾ ಬೆಂಬಲಿಗರು ʻಅಲ್ಲ ಅಲ್ಲ ಎನ್ನುತ್ತಿದ್ದಂತೆ ಅಲ್ಲು ಅರ್ಜುನ್‌ ವೈಲ್ಡ್‌ ಫೈಯರ್‌ʼ ಎನ್ನುವುದರೊಂದಿಗೆ ಟ್ರೈಲರ್‌ ಕೊನೆಗೊಳ್ಳುತ್ತದೆ.

    ಇಡೀ ಭಾರತವೇ ಎದುರು ನೋಡುತ್ತಿರುವ ʻಪುಷ್ಪ-2; ದಿರೂಲ್‌ʼ ಖದರ್‌ ಟ್ರೈಲ್‌ನೊಂದಿಗೆ ಭಾರಿ ಕುತೂಹಲ ಹೆಚ್ಚಿಸಿದೆ. ಸಿನಿಮಾ ಹೇಗೆ ಸೌಂಡು ಮಾಡುತ್ತದೆ ಎಂಬುದನ್ನ ಕಾಡುನೋಡ್ಬೇಕಿದೆ. ಇದನ್ನೂ ಓದಿ:  ಗುಡ್​ನ್ಯೂಸ್​​ – ʻಕಾಂತಾರ ಚಾಪ್ಟರ್-1ʼ ಸಿನಿಮಾ ಬಿಡುಗಡೆಗೆ ಡೇಟ್‌ ಫಿಕ್ಸ್‌

  • ತೆಲುಗಿಗೆ ರಿಮೇಕ್ ಆಗಲಿದೆ ‘ಆವೇಶಂ’ ಸಿನಿಮಾ- ಹೀರೋ ಯಾರು?

    ತೆಲುಗಿಗೆ ರಿಮೇಕ್ ಆಗಲಿದೆ ‘ಆವೇಶಂ’ ಸಿನಿಮಾ- ಹೀರೋ ಯಾರು?

    ಹಾದ್ ಫಾಸಿಲ್ (Fahadh Faasil)  ನಟನೆಯ ‘ಆವೇಶಂ’ (Aavesham) ಮಾಲಿವುಡ್‌ನಲ್ಲಿ ಸೂಪರ್ ಸಕ್ಸಸ್ ಕಂಡಿತ್ತು. ಇದೀಗ ಈ ಚಿತ್ರ ತೆಲುಗಿಗೆ ರಿಮೇಕ್ ಮಾಡಲು ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ತೆಲುಗು ‘ಆವೇಶಂ’ ಚಿತ್ರದಲ್ಲಿ ರವಿ ತೇಜ ಲೀಡ್ ರೋಲ್‌ನಲ್ಲಿ ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಯಶ್ ನಟನೆಯ ‘ರಾಮಾಯಣ’ ಚಿತ್ರದ ಮೊದಲ ಪೋಸ್ಟರ್ ರಿಲೀಸ್

    ‘ಆವೇಶಂ’ ಸಿನಿಮಾದ ತೆಲುಗು ರೀಮೇಕ್‌ನಲ್ಲಿ ರವಿತೇಜ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಫಹಾದ್ ಫಾಸಿಲ್ ನಟಿಸಿರುವ ರಂಗ ಪಾತ್ರದಲ್ಲಿ ರವಿ ತೇಜ (Ravi Teja) ನಟಿಸಲಿದ್ದು, ಕತೆಯಲ್ಲಿ ಕೆಲವು ಬದಲಾವಣೆಗಳನ್ನು ಸಹ ಮಾಡಿಕೊಡಿಕೊಂಡಿದೆಯಂತೆ ಚಿತ್ರತಂಡ. ಇದು ವಿಚಾರದ ಕುರಿತು ಅಧಿಕೃತ ಘೋಷಣೆ ಆಗುವವರೆಗೂ ಕಾದುನೋಡಬೇಕಿದೆ.

    ಬೆಂಗಳೂರಿನ ಒಬ್ಬ ರೌಡಿಯ ಕತೆಯನ್ನು ಒಳಗೊಂಡಿದ್ದ ಈ ಸಿನಿಮಾ ಕತೆ ಸರಳವಾಗಿದ್ದರು ನಟನೆ, ಕಾಮಿಡಿ ಮೂಲಕ ಜನರ ಮನಸ್ಸು ಗೆದ್ದಿತ್ತು. ಇದೀಗ ಈ ಸಿನಿಮಾ ತೆಲುಗಿಗೆ ರೀಮೇಕ್ ಆಗುತ್ತಿದೆ. ಮಲಯಾಳಂನಲ್ಲಿ ಗೆದ್ದಂತೆ ಟಾಲಿವುಡ್‌ನಲ್ಲೂ ಈ ಚಿತ್ರ ಗೆದ್ದು ಬೀಗುತ್ತಾ? ಕಾದುನೋಡಬೇಕಿದೆ.

  • ಲುಂಗಿಯುಟ್ಟು ಗನ್ ಹಿಡಿದು ಬಂದ ಫಹಾದ್ ಫಾಸಿಲ್- ‘ಪುಷ್ಪ 2’ ಪೋಸ್ಟರ್ ಔಟ್

    ಲುಂಗಿಯುಟ್ಟು ಗನ್ ಹಿಡಿದು ಬಂದ ಫಹಾದ್ ಫಾಸಿಲ್- ‘ಪುಷ್ಪ 2’ ಪೋಸ್ಟರ್ ಔಟ್

    ಸೌತ್‌ನ ಬಹುನಿರೀಕ್ಷಿತ ‘ಪುಷ್ಪ 2’ (Pushpa 2) ಸಿನಿಮಾ ಕೆಲಸ ಭರದಿಂದ ಸಾಗುತ್ತಿದೆ. ಇದೀಗ ‘ಪುಷ್ಪ 2’ ಚಿತ್ರದ ತಂಡದಿಂದ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ಲುಂಗಿಯುಟ್ಟು ಗನ್ ಹಿಡಿದು ಫಹಾದ್ ಫಾಸಿಲ್ (Fahadh faasil) ಎಂಟ್ರಿ ಕೊಟ್ಟಿರುವ ಪೋಸ್ಟರ್ ಅನ್ನು ರಿವೀಲ್ ಮಾಡಲಾಗಿದೆ. ಈ ಮೂಲಕ ನಟನ ಹುಟ್ಟುಹಬ್ಬಕ್ಕೆ ಚಿತ್ರತಂಡ ಸರ್ಪ್ರೈಸ್ ಕೊಟ್ಟಿದ್ದಾರೆ.

    ‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ಫಹಾದ್ ವಿಲನ್ ಆಗಿ ಘರ್ಜಿಸಿದ್ದಾರೆ. ಬನ್ವರ್ ಸಿಂಗ್ ಶೆಕಾವತ್ ಪಾತ್ರಕ್ಕೆ ನಟ ಜೀವ ತುಂಬಿದ್ದಾರೆ. ಲುಂಗಿಯುಟ್ಟು ಕೊಡಲಿ ಮತ್ತು ಗನ್ ಹಿಡಿದು ಸಖತ್ ಮಾಸ್ ಅವತಾರದಲ್ಲಿ ಫಹಾದ್ ಕಾಣಿಸಿಕೊಂಡಿದ್ದಾರೆ. ನಟನ ಲುಕ್‌ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:‘ನಾಗ ದೇವರ’ ಮಹಿಮೆ ಸಾರುವ ಕನ್ನಡದ ಸಿನಿಮಾಗಳು

     

    View this post on Instagram

     

    A post shared by Mythri Movie Makers (@mythriofficial)

    ಇನ್ನೂ ರಕ್ತಚಂದನ ಕಳ್ಳ ಸಾಗಣಿಕೆ ಕಥಾಹಂದರ ಹೊಂದಿರುವ ಸಿನಿಮಾ ಇದಾಗಿದೆ. ಮೊದಲ ಭಾಗದಲ್ಲಿ ಕೇವಲ ಕಾರ್ಮಿಕನಂತಿದ್ದ ಪುಷ್ಪರಾಜ್ ಈಗ ರಕ್ತಚಂದನದ ಕಳ್ಳಸಾಗಣೆಯಲ್ಲಿ ಆತನೇ ಕಿಂಗ್‌ಪಿನ್ ಆಗಿ ಬೆಳೆದಿರುತ್ತಾನೆ. ಮೊದಲ ಭಾಗದಲ್ಲಿ ವಿದೇಶದ ರೆಫರೆನ್ಸ್ ನೀಡಲಾಗಿತ್ತು. ರಕ್ತಚಂದನ ಜಪಾನ್‌ಗೆ ರಫ್ತಾಗಲಿದೆ ಎಂದು ತೋರಿಸಲಾಗಿತ್ತು. ಈಗ ಎರಡನೇ ಭಾಗದಲ್ಲಿ ಸಿನಿಮಾದ ಒಂದಷ್ಟು ಕಥೆ ವಿದೇಶದಲ್ಲೇ ಚಿತ್ರೀಕರಿಸಲಾಗಿದೆ. ಡಿ.6ರಂದು ಬಹುಭಾಷೆಗಳಲ್ಲಿ ‘ಪುಷ್ಪ 2’ ಸಿನಿಮಾ ರಿಲೀಸ್ ಆಗ್ತಿದೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ.

    ಈ ಚಿತ್ರದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun), ರಶ್ಮಿಕಾ ಮಂದಣ್ಣ (Rashmika Mandanna), ಡಾಲಿ ಧನಂಜಯ, ಅನಸೂಯ, ರಾವ್‌ ರಮೇಶ್ ಸೇರಿದಂತೆ ಹಲವು ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗ್ತಿದೆ.

  • ತಮಗಿರುವ ವಿಚಿತ್ರ ಕಾಯಿಲೆ ಬಗ್ಗೆ ಮೌನ ಮುರಿದ ಫಹಾದ್ ಫಾಸಿಲ್

    ತಮಗಿರುವ ವಿಚಿತ್ರ ಕಾಯಿಲೆ ಬಗ್ಗೆ ಮೌನ ಮುರಿದ ಫಹಾದ್ ಫಾಸಿಲ್

    ‘ಆವೇಶಂ’ ಸಿನಿಮಾದ ಸಕ್ಸಸ್ ಮೂಲಕ ಫಹಾದ್‌ ಫಾಸಿಲ್ (Fahadh Fasil) ಕೆರಿಯರ್‌ನಲ್ಲಿ ದೊಡ್ಡ ಗೆಲುವನ್ನು ಕಂಡಿದ್ದಾರೆ. ಈ ಸಿನಿಮಾದ ವಿಚಾರವಾಗಿ ಫಹಾದ್ ಸುದ್ದಿಯಲ್ಲಿದ್ದಾರೆ. ಇದರ ನಡುವೆ ಇತ್ತೀಚೆಗೆ ಫಹಾದ್ ತಮಗಿರುವ ವಿಚಿತ್ರ ಕಾಯಿಲೆ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

    ಇತ್ತೀಚಿಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕುತೂಹಲಕಾರಿ ವಿಚಾರದ ಬಗ್ಗೆ ಮಾತನಾಡಿದ್ದಾರೆ. ADHD ಅನ್ನೋದು ಈ ಕಾಯಿಲೆಯ ಹೆಸರು. ಇದು ನರಕ್ಕೆ ಸಂಬಂಧಪಟ್ಟಿದ್ದು. ಇದು ಮಿದುಳಿನ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಇದು ಮಕ್ಕಳಲ್ಲಿ ಸಾಮಾನ್ಯ ಸಮಸ್ಯೆ. ಆದರೆ, ದೊಡ್ಡವರಿಗೆ ಈ ರೋಗದಿಂದ ತೊಂದರೆ ಉಂಟಾಗುತ್ತದೆ ಎಂದು ನಟ ಮಾತನಾಡಿದ್ದಾರೆ.

    ಚಿಕ್ಕವಯಸ್ಸಿನಲ್ಲೇ ಕಾಣಿಸಿಕೊಂಡ್ರೆ ಇದು ವಾಸಿ ಆಗಬಹುದು. ಆದ್ರೆ ಇದು 41ನೇ ವಯಸ್ಸಿನಲ್ಲಿ ಪತ್ತೆಯಾಗಿದೆ. ಈ ವಯಸ್ಸಲ್ಲಿ ಗುಣಮುಖವಾಗೋದು ಕಡಿಮೆ ಎಂದು ನಟ ಹೇಳಿದ್ದಾರೆ.

    ಅಂದಹಾಗೆ, ‘ಪುಷ್ಪ 2’ನಲ್ಲಿ (Pushpa 2) ಫಹಾದ್ ಫಾಸಿಲ್ ವಿಲನ್ ಆಗಿ ನಟಿಸಿದ್ದಾರೆ. ಇದರ ಮಲಯಾಳಂ ಹಲವು ಸಿನಿಮಾಗಳು ಅವರ ಕೈಯಲ್ಲಿವೆ. ನಿರ್ಮಾಪಕನಾಗಿ ಫಹಾದ್ ಗುರುತಿಸಿಕೊಳ್ಳುತ್ತಿದ್ದಾರೆ.

  • ‘ಪುಷ್ಪ 2’ ಬಜೆಟ್ ಏರಿಕೆ: ಅಚ್ಚರಿ ಸಂಗತಿ ಹಂಚಿಕೊಂಡ ಡೈರೆಕ್ಟರ್

    ‘ಪುಷ್ಪ 2’ ಬಜೆಟ್ ಏರಿಕೆ: ಅಚ್ಚರಿ ಸಂಗತಿ ಹಂಚಿಕೊಂಡ ಡೈರೆಕ್ಟರ್

    ಲ್ಲು ಅರ್ಜುನ್ (Allu Arjun) ನಟನೆಯ ಪುಷ್ಪ 2 ಸಿನಿಮಾ ಕುರಿತಂತೆ ಅಚ್ಚರಿಯ ಸಂಗತಿಗಳು ಹೊರ ಬೀಳುತ್ತಲೇ ಇವೆ. ಪ್ರತಿ ಬಾರಿಯೂ ಅವುಗಳೆಲ್ಲ ಕಟ್ಟುಕಥೆಗಳೇ ಇರುತ್ತಿದ್ದವು. ಇದೀಗ ಸ್ವತಃ ಸಿನಿಮಾದ ನಿರ್ದೇಶಕ ಸುಕುಮಾರನ್ (Sukumaran)  ಮಾತನಾಡಿದ್ದಾರೆ. ಸಿನಿಮಾ ಕುರಿತಂತೆ ಹಲವಾರು ವಿಷಯಗಳನ್ನು ಅವರು ಹಂಚಿಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಚಿತ್ರ ಬಜೆಟ್ ಬಗ್ಗೆ ಮಾತನಾಡಿದ್ದಾರೆ.

    ಪುಷ್ಪ ಸಿನಿಮಾಗಿಂತ ಪುಷ್ಪ 2 ಸಿನಿಮಾದ ಬಜೆಟ್ ಡಬಲ್ ಆಗಿದೆಯಂತೆ. ಜೊತೆಗೆ ಅಷ್ಟೇ ಶ್ರೀಮಂತಿಕೆಯಿಂದ ಕೂಡಿದೆಯಂತೆ. ಫಹಾದ್ ಫಾಸಿಲ್ (Fahadh Faasil) ಮತ್ತು ಅಲ್ಲು ಅರ್ಜುನ್ ನಡುವಿನ ದೃಶ್ಯ ಮತ್ತೊಂದು ಲೆವಲ್ ನಲ್ಲಿ ಇದೆ ಎಂದಿದ್ದಾರೆ ನಿರ್ದೇಶಕ ಸುಕುಮಾರನ್. ಇಡೀ ಕಥೆಯನ್ನು ಈ ಇಬ್ಬರೂ ನಟರು ಹೇಗೆ ತೂಗಿಸಿಕೊಂಡು ಹೋಗಿದ್ದಾರೆ ಎನ್ನುವುದನ್ನು ವಿವರಿಸಿದ್ದಾರೆ.

    ಒಂದು ಕಡೆ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಇನ್ನೊಂದು ಕಡೆ ‘ಪುಷ್ಪ 2’ (Pushpa 2) ಸಿನಿಮಾದ ಆಡಿಯೋ (Audio) ಹಕ್ಕು (Right) ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆಯಂತೆ. ಈವರೆಗೂ ದಾಖಲಾಗಿದ್ದ ಎಲ್ಲ ಮೊತ್ತವನ್ನೂ ಅದು ಹಿಂದಿಕ್ಕಿದ್ದು ಟಿ ಸೀರಿಸ್ ಕಂಪೆನಿಯು 65 ಕೋಟಿ ರೂಪಾಯಿ ಹಣ ನೀಡಿ ಆಡಿಯೋ ಹಕ್ಕುಗಳನ್ನು ಖರೀದಿಸಿದೆ ಎಂದು ವರದಿಯಾಗಿದೆ. ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು ಸೇರಿದಂತೆ ರಿಲೀಸ್ ಆಗುವ ಅಷ್ಟು ಭಾಷೆಗಳಿಗೆ ಈ ಹಕ್ಕು ಅನ್ವಯಿಸಲಿದೆ.

     

    ಈ ಹಿಂದೆ ರಿಲೀಸ್ ಆಗಿರುವ ಬಾಹುಬಲಿ ಚಿತ್ರದ ಆಡಿಯೋ ಹಕ್ಕು ಹತ್ತು ಕೋಟಿ ಸೇಲ್ ಆಗಿತ್ತು. ಆರ್.ಆರ್.ಆರ್ ಆಡಿಯೋ ಹಕ್ಕು 25 ಕೋಟಿಗೆ ಬಿಕರಿ ಆಗಿತ್ತು. ಸಾಹೋ ಸಿನಿಮಾದ ಆಡಿಯೋ ಹಕ್ಕು ಕೂಡ 22 ಕೋಟಿಗೆ ಸೇಲ್ ಆಗಿತ್ತು. ಈ ಎಲ್ಲ ದಾಖಲೆಗಳನ್ನೂ ಪುಷ್ಪ 2 ಸಿನಿಮಾ ಮುರಿದಿದೆ. ಅಲ್ಲದೇ, ಓಟಿಟಿಗೂ ಭಾರೀ ಮೊತ್ತಕ್ಕೆ ಮಾತುಕತೆ ನಡೆಯುತ್ತಿದೆ ಎಂದು ವರದಿ ಆಗಿದೆ.

  • ಧೂಮಂ ಸಿನಿಮಾದಲ್ಲಿ ಅಪ್ಪು ನಟಿಸಬೇಕಿತ್ತು: ಆದರೆ…. ರಹಸ್ಯ ಬಯಲು

    ಧೂಮಂ ಸಿನಿಮಾದಲ್ಲಿ ಅಪ್ಪು ನಟಿಸಬೇಕಿತ್ತು: ಆದರೆ…. ರಹಸ್ಯ ಬಯಲು

    ವನ್ ಕುಮಾರ್ (Pawan Kumar) ನಿರ್ದೇಶನದ ‘ಧೂಮಂ’ (Dhoomam) ಫಹಾದ್ ಫಾಸಿಲ್  (Fahadh Faasil)ನಟಿಸಿದ ಸಿನಿಮಾದ ಈ ಕತೆ ಸಿಗರೇಟು, ತಂಬಾಕು ಈ ರೀತಿಯ ಸುತ್ತ ನಡೆಯುತ್ತದೆ. ಅದಕ್ಕೊಂದು ಸಿನಿಮ್ಯಾಟಿಕ್ ಟಚ್ ಕೊಟ್ಟಿದ್ದಾರೆ ಪವನ್. ಬಹುಶಃ ಸಿಗರೇಟು, ತಂಬಾಕು ಈ ವಿಷಯದಿಂದಲೇ ಇಮೇಜ್‌ಗೆ ಧಕ್ಕೆಯಾಗುತ್ತದೆಂದು ತಿಳಿದು ಅವರ ಆಪ್ತರು ನೋ ಎಂದಿದ್ದಾರೆ.

    ಅದೇನೆ ಇರಲಿ ಕೊನೆಗೂ ಅದೇ ಪವನ್ ಕತೆಯ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದರು ಅಪ್ಪು (Puneeth Rajkumar). ಹಾಗೆ ನೋಡಲು ಹೋದರೆ ಇದೂ ಮಲಯಾಳಂ ಹಾಗೂ ಕನ್ನಡದಲ್ಲಿ ತಯಾರಾಗಬೇಕಿತ್ತು. ಮಲಯಾಳಂನಲ್ಲಿ ಫಹಾದ್, ಕನ್ನಡದಲ್ಲಿ ಅಪ್ಪು ನಟಿಸಲು ಮಾತು ಕತೆ ಆಗಿತ್ತು ಎನ್ನುತ್ತದೆ ಒಂದು ಮೂಲ.

    ‘ಫಹಾದ್ ಮೊದಲು ನಟಿಸಲಿ. ಅವರು ಹೇಗೆ ನಟಿಸುತ್ತಾರೆಂದು ನೋಡಿ ಆಮೇಲೆ ನಮ್ಮ ಶೆಡ್ಯೂಲ್ ಪ್ಲಾನ್ ಮಾಡೋಣ. ಅವರಂತೆ ನಟಿಸಲು ನನಗೆ ಸಾಧ್ಯವೆ ಎನ್ನುವುದಷ್ಟೇ ನಂಗೆ ಬೇಕು’ ಎಂದು ವಿನೀತರಾಗಿ ಹೇಳಿದ್ದರು ಅಪ್ಪು. ಅದು ಅವರ ದೊಡ್ಡ ಗುಣ. ಇದನ್ನೂ ಓದಿ:ಲೈಂಗಿಕ ಕಿರುಕುಳ ಆರೋಪ: ಧಾರಾವಾಹಿ ನಿರ್ಮಾಪಕನ ಮೇಲೆ ಎಫ್.ಐ.ಆರ್ ದಾಖಲು

    ದ್ವಿತ್ವ ಚಿತ್ರಕ್ಕಾಗಿ ತಾರಾಗಣದಿಂದ ಹಿಡಿದು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದರು ಪವನ್. ಆದರೆ ಅರ್ಧ ಊಟ ಮುಗಿಸಿ ಅಪ್ಪು ಕೈ ತೊಳೆದುಕೊಂಡರು. ಆಗಲೇ ಪವನ್ ದ್ವಿತ್ವ ಕತೆಯನ್ನು ಅಲ್ಲಲ್ಲೇ ಇಟ್ಟರು. ಧೂಮಂ ಕೈಗೆತ್ತಿಕೊಂಡರು. ಫಹಾದ್ ನಟಿಸಿದ ಈ ಚಿತ್ರ ಕುತೂಹಲ ಮೂಡಿಸಿದೆ. ಅಕಸ್ಮಾತ್ ಅಪ್ಪು ಇದ್ದಿದ್ದರೆ ಮೊದಲ ದಿನ ಮೊದಲ ಶೋ ನೋಡುತ್ತಿದ್ದರೇನೊ ?

    ಒಬ್ಬ ಸ್ಟಾರ್ ಈ ರೀತಿ ಕಣ್ಣ ಮುಂದೆಯೇ ದೇವರ ದೀಪವಾದರೆ ಯರ‍್ಯಾರದೊ ಕನಸು? ಯಾರ‍್ಯಾರದೊ ಮನಸು ಒದ್ದಾಡುತ್ತದೆ. ಕಂಗಲಾಗುತ್ತದೆ. ಜನರನ್ನು ಪ್ರೀತಿಸುವ, ಸಿನಿಮಾಕ್ಕಾಗಿ ನಿದ್ದೆ ಕೆಡುವ, ಎಲ್ಲರಿಗೂ ಒಳಿತನ್ನೇ ಬಯಸುವ ಮನಸು ನಮಗೆ ಅನ್ಯಾಯ ಮಾಡಬಾರದಿತ್ತು. ಆದರೆ ದೇವರು ಮೊದಲೇ ಎಲ್ಲವನ್ನೂ ನಿರ್ಧರಿಸಿಬಿಟ್ಟಿದ್ದನೇನೊ? ಹಗಲು ಹೊತ್ತಲ್ಲೇ ನಂದಾದೀಪವನ್ನು ಹೊತ್ತುಕೊಂಡು ಹೋಗಿ ಬಿಟ್ಟ.

    ಇನ್ನು ಅನೇಕ ಸಿನಿಮಾ ಕನಸುಗಳನ್ನು ಕಂಡಿದ್ದರು ಅಪ್ಪು. ಅದೆಲ್ಲವನ್ನು ಪತ್ನಿ ಅಶ್ವಿನಿ ಮುಂದುವರೆಸಲು ಸಜ್ಜಾಗಿದ್ದಾರೆ. ಪಿಆರ್‌ಕೆ ಬ್ಯಾನರ್ ಮತ್ತೆ ಮೆರವಣಿಗೆ ಹೊರಡಲಿದೆ. ಅಪ್ಪು ಜೊತೆಜೊತೆಯಲ್ಲಿ ಇದ್ದೇ ಇರುತ್ತಾರೆ. ಅನವರತ.

  • ಮಲಯಾಳಂ ಜೊತೆ ಕನ್ನಡದಲ್ಲೂ ಧೂಮಂ ರಿಲೀಸ್: ಹೊಂಬಾಳೆ ಫಿಲ್ಮ್ಸ್ ಘೋಷಣೆ

    ಮಲಯಾಳಂ ಜೊತೆ ಕನ್ನಡದಲ್ಲೂ ಧೂಮಂ ರಿಲೀಸ್: ಹೊಂಬಾಳೆ ಫಿಲ್ಮ್ಸ್ ಘೋಷಣೆ

    ಲೂಸಿಯಾ ಪವನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಧೂಮಂ’ (Dhoomam) ಸಿನಿಮಾ ಇದೇ ಜೂನ್ 23 ರಂದು ದೇಶದಾದ್ಯಂತ ಬಿಡುಗಡೆ (Release) ಆಗುತ್ತಿದೆ. ಸಿನಿಮಾ ರಿಲೀಸ್ ಗೆ ಸಂಬಂಧಿಸಿದಂತೆ ಹಲವಾರು ಗೊಂದಲಗಳು ಇದ್ದವು. ಆ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ ಹೊಂಬಾಳೆ ಫಿಲ್ಮ್ಸ್ (Hombale Films). ಇದು ಮಲಯಾಳಂ ಸಿನಿಮಾವಾಗಿದ್ದರಿಂದ ಕೇವಲ ಮಲಯಾಳಂನಲ್ಲಿ ಮಾತ್ರ ಬಿಡುಗಡೆ ಆಗತ್ತಾ? ಅಥವಾ ಕನ್ನಡದಲ್ಲೂ ಡಬ್ ಆಗಿ ರಿಲೀಸ್ ಮಾಡಲಿದ್ದಾರಾ ಎನ್ನುವ ಪ್ರಶ್ನೆಯನ್ನು ಹಲವರು ಮಾಡಿದ್ದರು.

    ಸಿನಿಮಾ ರಿಲೀಸ್ ಗೆ ಸಂಬಂಧಿಸಿದಂತೆ ಹೊಂಬಾಳೆ ಫಿಲ್ಮ್ಸ್ ಪ್ರತಿಕ್ರಿಯೆ ನೀಡಿದ್ದು ಜೂನ್ 23 ರಂದು ಏಕಕಾಲದಲ್ಲೇ ಕನ್ನಡ ಮತ್ತು ಮಲಯಾಳಂ ಎರಡೂ ಭಾಷೆಯಲ್ಲೂ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಅವರು ಸ್ಪಷ್ಟ ಪಡಿಸಿದೆ. ಇತ್ತೀಚೆಗಷ್ಟೇ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನೂ ಓದಿ:ಮನುಷ್ಯರಂತೆ ವರ್ತಿಸಿ, ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ- ‘ಪುಷ್ಪ’ ನಟಿ ಅನಸೂಯಾ

    ವಿಜಯ್ ಕಿರಗಂದೂರು ನಿರ್ಮಾಣದ, ‘ಲೂಸಿಯಾ’ ಮತ್ತು ‘ಯೂ ಟರ್ನ್’ ಖ್ಯಾತಿಯ ಪವನ್ ಕುಮಾರ್ (Pawan Kumar) ನಿರ್ದೇಶನ ಈ ಚಿತ್ರದಲ್ಲಿ ಫಹಾದ್ ಫಾಸಿಲ್, ಅಪರ್ಣ ಬಾಲಮುರಳಿ (Aparna), ಅಚ್ಯುತ್ ಕುಮಾರ್, ರೋಶನ್ ಮ್ಯಾಥ್ಯೂ, ವಿನೀತ್ ರಾಧಾಕೃಷ್ಣನ್, ಅನು ಮೋಹನ್, ಜಾಯ್ ಮ್ಯಾಥ್ಯೂ, ನಂದು ಮುಂತಾದವರು ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಸುರೇಶ್ ಅವರ ಸಂಕಲನ ಮತ್ತು ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

    ಸಮಯದ ವಿರುದ್ಧದ ಓಟದಲ್ಲಿ ಸಿಕ್ಕಿರುವ ಅವಿ (ಫಹಾದ್ ಫಾಸಿಲ್) (Fahadh Faasil) ಮತ್ತು ದಿಯಾ (ಅಪರ್ಣ) ಸುತ್ತ ಈ ಚಿತ್ರ ಸುತ್ತುತ್ತದೆ. ಸುತ್ತ ಅಪಾಯ ಮತ್ತು ಮನಸ್ಸೊಳಗಿನ ಭಯವನ್ನು ಮೆಟ್ಟಿ ನಿಲ್ಲುವುದಕ್ಕೆ ಅವರಿಬ್ಬರೂ ಏನೆಲ್ಲಾ ತ್ಯಾಗಗಳನ್ನು ಮಾಡುತ್ತಾರೆ ಎಂಬುದೇ ಈ ಚಿತ್ರದ ಕಥೆ. ನಿರ್ದೇಶನದ ಜೊತೆಗೆ ಕಥೆ ಮತ್ತು ಚಿತ್ರಕಥೆಯನ್ನು ಪವನ್ ಅವರೇ ರಚಿಸಿದ್ದಾರೆ.

     

    ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಪವನ್ ಕುಮಾರ್, ‘ಕಳೆದ ಒಂದು ದಶಕದಿಂದ ಈ ಚಿತ್ರವನ್ನು ಮಾಡಬೇಕು ಎಂಬ ಪ್ರಯತ್ನದಲ್ಲಿದ್ದೆ ಹಾಗೂ ಒಂದು ಅದ್ಭುತ ಚಿತ್ರ ಮಾಡುವ ನಿಟ್ಟಿನಲ್ಲಿ ಚಿತ್ರಕಥೆಯನ್ನು ಹಲವು ಬಾರಿ ತಿದ್ದಿದ್ದೆ. ಒಂದು ದಶಕದ ನನ್ನ ಕನಸನ್ನು ಇದೀಗ ಹೊಂಬಾಳೆ ಪ್ರೊಡಕ್ಷನ್ಸ್ ಸಂಸ್ಥೆಯು ನನಸು ಮಾಡಿದೆ. ಒಂದು ವಿಭಿನ್ನವಾದ ಕಥೆಯನ್ನು ತೆರೆಯ ಮೇಲೆ ತರುವುದಕ್ಕೆ ಕೈ ಜೋಡಿಸಿದೆ. ಹಲವು ಪ್ರತಿಭಾವಂತರ ತಂಡವನ್ನು ನೀಡಿ ಒಂದೊಳ್ಳೆಯ ಚಿತ್ರ ನೀಡುವುದಕ್ಕೆ ಸಂಪೂರ್ಣ ಸಹಕಾರ ನೀಡಿದೆ. ಈ ಚಿತ್ರ ಮತ್ತು ಕಥೆಯನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ನನಗಿದೆ’ ಎನ್ನುತ್ತಾರೆ.

  • ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಧೂಮಂ’ ಚಿತ್ರದ ಟ್ರೇಲರ್ ರಿಲೀಸ್

    ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಧೂಮಂ’ ಚಿತ್ರದ ಟ್ರೇಲರ್ ರಿಲೀಸ್

    ನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್ (Hombale Films) , ‘ಧೂಮಂ’  ಎಂಬ ಚಿತ್ರವನ್ನು ನಿರ್ಮಿಸುವ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿರುವುದು ಗೊತ್ತೇ ಇದೆ. ಈ ಚಿತ್ರವು ಜೂನ್ 23ಕ್ಕೆ ಬಿಡುಗಡೆಯಾಗುತ್ತಿದ್ದು, ಇತ್ತೀಚೆಗೆ ಟ್ರೇಲರ್ ಬಿಡುಗಡೆಯಾಗಿದೆ.

    ವಿಜಯ್ ಕಿರಗಂದೂರು ನಿರ್ಮಾಣದ, ‘ಲೂಸಿಯಾ’ ಮತ್ತು ‘ಯೂ ಟರ್ನ್’ ಖ್ಯಾತಿಯ ಪವನ್ ಕುಮಾರ್ (Pawan Kumar) ನಿರ್ದೇಶನ ಈ ಚಿತ್ರದಲ್ಲಿ ಫಹಾದ್ ಫಾಸಿಲ್, ಅಪರ್ಣ ಬಾಲಮುರಳಿ, ಅಚ್ಯುತ್ ಕುಮಾರ್, ರೋಶನ್ ಮ್ಯಾಥ್ಯೂ, ವಿನೀತ್ ರಾಧಾಕೃಷ್ಣನ್, ಅನು ಮೋಹನ್, ಜಾಯ್ ಮ್ಯಾಥ್ಯೂ, ನಂದು ಮುಂತಾದವರು ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಸುರೇಶ್ ಅವರ ಸಂಕಲನ ಮತ್ತು ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.  ಇದನ್ನೂ ಓದಿ:ನಟ ಚಿರಂಜೀವಿ ಸರ್ಜಾ 3 ನೇ ವರ್ಷದ ಪುಣ್ಯತಿಥಿ

    ಸಮಯದ ವಿರುದ್ಧದ ಓಟದಲ್ಲಿ ಸಿಕ್ಕಿರುವ ಅವಿ (ಫಹಾದ್ ಫಾಸಿಲ್) (Fahadh Faasil) ಮತ್ತು ದಿಯಾ (ಅಪರ್ಣ) ಸುತ್ತ ಈ ಚಿತ್ರ ಸುತ್ತುತ್ತದೆ. ಸುತ್ತ ಅಪಾಯ ಮತ್ತು ಮನಸ್ಸೊಳಗಿನ ಭಯವನ್ನು ಮೆಟ್ಟಿ ನಿಲ್ಲುವುದಕ್ಕೆ ಅವರಿಬ್ಬರೂ ಏನೆಲ್ಲಾ ತ್ಯಾಗಗಳನ್ನು ಮಾಡುತ್ತಾರೆ ಎಂಬುದೇ ಈ ಚಿತ್ರದ ಕಥೆ. ನಿರ್ದೇಶನದ ಜೊತೆಗೆ ಕಥೆ ಮತ್ತು ಚಿತ್ರಕಥೆಯನ್ನು ಪವನ್ ಅವರೇ ರಚಿಸಿದ್ದಾರೆ.

    ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಪವನ್ ಕುಮಾರ್, ‘ಕಳೆದ ಒಂದು ದಶಕದಿಂದ ಈ ಚಿತ್ರವನ್ನು ಮಾಡಬೇಕು ಎಂಬ ಪ್ರಯತ್ನದಲ್ಲಿದ್ದೆ ಹಾಗೂ ಒಂದು ಅದ್ಭುತ ಚಿತ್ರ ಮಾಡುವ ನಿಟ್ಟಿನಲ್ಲಿ ಚಿತ್ರಕಥೆಯನ್ನು ಹಲವು ಬಾರಿ ತಿದ್ದಿದ್ದೆ. ಒಂದು ದಶಕದ ನನ್ನ ಕನಸನ್ನು ಇದೀಗ ಹೊಂಬಾಳೆ ಪ್ರೊಡಕ್ಷನ್ಸ್ ಸಂಸ್ಥೆಯು ನನಸು ಮಾಡಿದೆ. ಒಂದು ವಿಭಿನ್ನವಾದ ಕಥೆಯನ್ನು ತೆರೆಯ ಮೇಲೆ ತರುವುದಕ್ಕೆ ಕೈ ಜೋಡಿಸಿದೆ. ಹಲವು ಪ್ರತಿಭಾವಂತರ ತಂಡವನ್ನು ನೀಡಿ ಒಂದೊಳ್ಳೆಯ ಚಿತ್ರ ನೀಡುವುದಕ್ಕೆ ಸಂಪೂರ್ಣ ಸಹಕಾರ ನೀಡಿದೆ. ಈ ಚಿತ್ರ ಮತ್ತು ಕಥೆಯನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ನನಗಿದೆ’ ಎನ್ನುತ್ತಾರೆ.

     

    ‘ಧೂಮಂ’ ((Dhoomam)) ಚಿತ್ರದ ಟ್ರೇಲರ್ ಈಗಾಗಲೇ ಬಿಡಗುಡೆಯಾಗಿದ್ದು, ವೀಕ್ಷಕರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರವನ್ನು ಇದೇ ಜೂನ್ 23ರಂದು ಕೇರಳ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಉದ್ದೇಶಿಸಲಾಗಿದೆ.