Tag: Fahad Faasil

  • ಬಾಲಿವುಡ್‌ನತ್ತ ನಟ- ‘ಜಬ್ ವಿ ಮೆಟ್’ ನಿರ್ದೇಶಕನ ಸಿನಿಮಾದಲ್ಲಿ ಫಹಾದ್ ಫಾಸಿಲ್

    ಬಾಲಿವುಡ್‌ನತ್ತ ನಟ- ‘ಜಬ್ ವಿ ಮೆಟ್’ ನಿರ್ದೇಶಕನ ಸಿನಿಮಾದಲ್ಲಿ ಫಹಾದ್ ಫಾಸಿಲ್

    ಪುಷ್ಪ, ಆಮೇಶಂ ಸಿನಿಮಾಗಳ ಮೂಲಕ ಸಕ್ಸಸ್ ಕಂಡಿರುವ ಫಹಾದ್ ಫಾಸಿಲ್ (Fahadh Faasil) ಇದೀಗ ಬಾಲಿವುಡ್‌ನತ್ತ (Bollywood) ಮುಖ ಮಾಡಿದ್ದಾರೆ. ‘ಜಬ್ ವಿ ಮೆಟ್’ ಡೈರೆಕ್ಟರ್ ಇಮ್ತಿಯಾಜ್ ಅಲಿ ನಿರ್ದೇಶನದ ಹೊಸ ಸಿನಿಮಾದಲ್ಲಿ ಫಹಾದ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾದ ಸುದ್ದಿಯೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಬಹುಭಾಷಾ ನಟನಾಗಿ ಗುರುತಿಸಿಕೊಂಡಿರುವ ಮಾಲಿವುಡ್ ನಟ ಫಹಾದ್‌ಗೆ ಸದ್ಯ ಬಾಲಿವುಡ್‌ನಿಂದ ಬುಲಾವ್ ಬಂದಿದೆ. ರಾಕ್‌ಸ್ಟಾರ್, ಜಬ್ ವಿ ಮೆಟ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಇಮ್ತಿಯಾಜ್ (Imtiaz Ali) ಈಗ ಫಹಾದ್‌ಗೆ ನಿರ್ದೇಶನ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ನಿಮ್ಮನ್ನು ತಾಯಿಯಾಗಿ ಪಡೆದಿರುವುದು ನನ್ನ ಪುಣ್ಯ- ಜೈಲಿನಲ್ಲಿರುವ ಪವಿತ್ರಾರನ್ನು ನೆನೆದು ಮಗಳು ಭಾವುಕ ಪೋಸ್ಟ್

    ಇಮ್ತಿಯಾಜ್ ಅವರು ಚೆಂದದ ಲವ್ ಸ್ಟೋರಿಯೊಂದನ್ನು ಸಿದ್ಧಪಡಿಸಿದ್ದಾರೆ. ಅದಕ್ಕೆ ಫಹಾದ್ ಸೂಕ್ತ ನಾಯಕ ಎಂದೆನಿಸಿ ನಟನನ್ನು ಭೇಟಿಯಾಗಿ ಕಥೆ ಹೇಳಿದ್ದಾರೆ. ನಿರ್ದೇಶಕನ ಕಥೆಗೆ ಫಹಾದ್ ಕೂಡ ಓಕೆ ಎಂದಿದ್ದಾರೆ ಎನ್ನಲಾಗಿದೆ. ಅಧಿಕೃತ ಮಾಹಿತಿ ಸಿಗುವವರೆಗೂ ಕಾಯಬೇಕಿದೆ.

    ಇನ್ನೂ ಇದುವರೆಗೂ ಫಹಾದ್ ಬಾಲಿವುಡ್‌ನಲ್ಲಿ ನಟಿಸಿಲ್ಲ. ಆದರೆ ಅವರು ನಟಿಸಿರುವ ಸಿನಿಮಾಗಳು ಹಿಂದಿಯಲ್ಲಿ ಡಬ್ ಆಗಿ ಪ್ರೇಕ್ಷಕರ ಗಮನ ಸೆಳೆದಿದೆ. ಹಿಂದಿಯಲ್ಲೂ ಅಪಾರ ಅಭಿಮಾನಿಗಳನ್ನು ನಟ ಸಂಪಾದಿಸಿದ್ದಾರೆ. ಹಾಗಾಗಿ ಪೂರ್ಣ ಪ್ರಮಾಣದಲ್ಲಿ ಬಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ನಟ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಯಾವುದಕ್ಕೂ ನಟನ ಕಡೆಯಿಂದ ಗುಡ್ ನ್ಯೂಸ್ ಸಿಗವವರೆಗೂ ಕಾಯಬೇಕಿದೆ.

  • ಸಿನಿಮಾ ನೋಡೋದೇ ಜನರ ಉದ್ಯೋಗವಲ್ಲ: ಫಹಾದ್ ಫಾಸಿಲ್ ಅಚ್ಚರಿ ಹೇಳಿಕೆ

    ಸಿನಿಮಾ ನೋಡೋದೇ ಜನರ ಉದ್ಯೋಗವಲ್ಲ: ಫಹಾದ್ ಫಾಸಿಲ್ ಅಚ್ಚರಿ ಹೇಳಿಕೆ

    ಮ್ಮ ಸಿನಿಮಾವನ್ನು ತಪ್ಪದೇ ನೋಡಿ, ಮರೆಯಬೇಡಿ, ಮರೆತು ನಿರಾಸೆಯಾಗಬೇಡಿ ಎಂದು ಹೇಳುವುದರ ಜೊತೆಗೆ ಥಿಯೇಟರ್ ಗೆ ಜನರನ್ನು ಕರೆತರಲು ನಾನಾ ಕಸರತ್ತುಗಳನ್ನು ಮಾಡುತ್ತಾರೆ ಸಿನಿಮಾ ಮಂದಿ. ಅದರಲ್ಲೂ ನಟರು ತಮ್ಮ ಪಾತ್ರ, ಕಥೆ, ಸನ್ನಿವೇಶ ಹೀಗೆ ಸಾಕಷ್ಟು ವಿಷಯಗಳನ್ನು ಪ್ರಚಾರ ಮಾಡಿ, ಜನರಿಗೆ ಸಿನಿಮಾ ನೋಡಿ ಎಂದು ಹೇಳುತ್ತಾರೆ.

    ಆದರೆ, ದಕ್ಷಿಣದ ಹೆಸರಾಂತ ನಟ ಫಹಾದ್ ಫಾಸಿಲ್ (Fahad Faasil), ‘ಸಿನಿಮಾ ನೋಡುವುದೇ ಜನರ (Audience) ಉದ್ಯೋಗವಲ್ಲ. ಅವರಿಗೆ ಅವರದ್ದೇ ಆದ ಕೆಲಸವಿರುತ್ತದೆ’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಫಾಸಿಲ್ ಆಡಿದ ಈ ಮಾತು ಪರ ವಿರೋಧದ ಚರ್ಚೆಗೆ ಕಾರಣವಾಗಿದೆ. ಫಹಾದ್ ಈ ರೀತಿ ಹೇಳಬಾರದಿತ್ತು ಎಂದು ಇಂಡಸ್ಟ್ರಿಯವರು ಪ್ರತಿಕ್ರಿಯಿಸಿದ್ದಾರೆ.

    ಫಹಾದ್ ಹೀಗೆ ಮಾತನಾಡುವುದಕ್ಕೆ ಕಾರಣವಿದೆ. ಸಿನಿಮಾ ನೋಡಿದ ಮೇಲೆ, ಅದನ್ನು ಮನೆವರೆಗೂ ತಗೆದುಕೊಂಡು ಹೋಗಬಾರದು. ನಿಮಗೆ ನಿಮ್ಮದೇ ಆದ ಖಾಸಗಿ ಬದುಕಿದೆ. ಸಿನಿಮಾ ನೋಡಿದ ತಕ್ಷಣ ಅದರಿಂದ ಆಚೆ ಬಂದು ಬಿಡಬೇಕು. ಅಷ್ಟಕ್ಕೂ ಸಿನಿಮಾ ನೋಡೋದೇ ನಿಮ್ಮ ಉದ್ಯೋಗವಲ್ಲ ಎಂದಿದ್ದಾರೆ. ಈ ಮಾತನ್ನು ಬೇರೆ ರೀತಿಯಲ್ಲಿ ತಿರುಗಿಸಲಾಗುತ್ತಿದೆ.

  • ಫಹಾದ್ ಫಾಸಿಲ್ ಸಿನಿಮಾ ನೋಡಿ ಹೊಗಳಿದ ಸಮಂತಾ

    ಫಹಾದ್ ಫಾಸಿಲ್ ಸಿನಿಮಾ ನೋಡಿ ಹೊಗಳಿದ ಸಮಂತಾ

    ಟಾಲಿವುಡ್ ನಟಿ ಸಮಂತಾ (Samantha) ಸದ್ಯ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಫಹಾದ್ ಫಾಸಿಲ್ ನಟನೆಯ ‘ಆವೇಶಂ’ (Aavesham) ಸಿನಿಮಾವನ್ನು ಸಮಂತಾ ವೀಕ್ಷಿಸಿದ್ದಾರೆ. ಫಹಾದ್ (Fahadh Faasil) ಸಿನಿಮಾ ಮೆಚ್ಚಿ ಕೊಂಡಾಡಿದ್ದಾರೆ. ಇದನ್ನೂ ಓದಿ:ಜಸ್ಟ್ ಮ್ಯಾರೀಡ್: ಶೈನ್ ಶೆಟ್ಟಿ-ಅಂಕಿತಾ ಅಮರ್ ಫೋಟೋ ವೈರಲ್

    ಏ.11ರಂದು ರಿಲೀಸ್ ಆದ ಆವೇಶಂ ಚಿತ್ರದಲ್ಲಿ ಫಹಾದ್ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಬ್ಯುಸಿ ಶೆಡ್ಯೂಲ್ ನಡುವೆ ನಟಿ ‘ಆವೇಶಂ’ ಸಿನಿಮಾ ನೋಡಿ ಜಿನಿಯಸ್ ಎಂದು ಹೊಗಳಿದ್ದಾರೆ. ಸಿನಿಮಾದ ಹ್ಯಾಗ್ ಓವರ್‌ನಲ್ಲಿರುವುದಾಗಿ ಸ್ಯಾಮ್ ಪೋಸ್ಟ್ ಮಾಡಿದ್ದಾರೆ.

    ಇದೊಂದು ಗ್ಯಾಂಗ್‌ಸ್ಟರ್ ಕಾಮಿಡಿ ಚಿತ್ರವಾಗಿದ್ದು, ರಂಗ ಎಂಬ ಪಾತ್ರಕ್ಕೆ ಫಹಾದ್ ಜೀವ ತುಂಬಿದ್ದಾರೆ. ಪತಿಯ ಸಿನಿಮಾಗೆ ನಟಿ ನಜ್ರಿಯಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಕಥೆಗೆ ಸ್ಯಾಮ್ ಮಾತ್ರವಲ್ಲ. ಅನೇಕ ನಟ, ನಟಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಅಂದಹಾಗೆ, ವಿವಾದ, ಅನಾರೋಗ್ಯ, ಯಶಸ್ಸು ಎಲ್ಲವೂ ಅನುಭವಿಸಿರುವ ಜೀವ ಸಮಂತಾ. ನಾಗಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಸಮಂತಾ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಎಲ್ಲಾ ವಿಚಾರಕ್ಕೂ ಸಮಂತಾ ಕಡೆಯೇ ಬೆಟ್ಟು ಮಾಡಿ ತೋರಿಸುತ್ತಿದ್ದರು. ಸಹವಾಸವೇ ಬೇಡ ಅಂತ ವೃತ್ತಿರಂಗದಲ್ಲಿ ಬ್ಯುಸಿಯಾದರು. ‘ಪುಷ್ಪ’ (Pushpa) ಚಿತ್ರದಲ್ಲಿ ಸೊಂಟ ಬಳುಕಿಸಿದ ಮೇಲೆ ಸಮಂತಾ ಲಕ್ ಬದಲಾಯ್ತು.

    ಆದರೆ ‘ಯಶೋದ’ (Yashoda) ಮತ್ತು ‘ಖುಷಿ’ (Kushi) ಸಿನಿಮಾ ಆದ್ಮೇಲೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರಲಿಲ್ಲ. ಎರಡೂ ಹೀನಾಯವಾಗಿ ಸೋತ ಚಿತ್ರಗಳು. ಸೋಲಿನ ಹೊಡೆತಕ್ಕೆ ಅನಾರೋಗ್ಯದ ಆಘಾತ ಎರಡನ್ನೂ ಸಹಿಕೊಳ್ಳೋಕೆ ಸ್ಯಾಮ್‌ಗೆ 8 ತಿಂಗಳು ಹಿಡಿಯಿತು. ಇದೀಗ ಮತ್ತೆ ಕೆಲಸಕ್ಕೆ ಮರಳಿದ್ದಾರೆ. ವರುಣ್ ಧವನ್‌ಗೆ ನಾಯಕಿಯಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಹನಿ ಬನಿ ಮೂಲಕ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

  • ಮತ್ತೊಂದು ತಮಿಳು ಚಿತ್ರ ಒಪ್ಪಿಕೊಂಡ ಫಹಾದ್ ಫಾಸಿಲ್

    ಮತ್ತೊಂದು ತಮಿಳು ಚಿತ್ರ ಒಪ್ಪಿಕೊಂಡ ಫಹಾದ್ ಫಾಸಿಲ್

    ಲಯಾಳಂ ಸಿನಿಮಾ ರಂಗ ಕಂಡ ಹೆಸರಾಂತ ನಟ ಫಹಾದ್ ಫಾಸಿಲ್ (Fahad Faasil), ಇದೀಗ ಮತ್ತೊಂದು ತಮಿಳು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ಹಿಂದೆ ಮಾಮಣ್ಣಾನ್ ಸಿನಿಮಾದಲ್ಲಿ ವಡಿವೇಲು ಜೊತೆ ನಟಿಸಿದ್ದ ಫಹಾದ್, ಈ ಹೊಸ ಸಿನಿಮಾದಲ್ಲೂ ಮತ್ತೊಮ್ಮೆ ವಡಿವೇಲು ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಜೋಡಿಯ ಚಿತ್ರಕ್ಕೆ ಮಾರೀಸನ್ ಎಂದು ಟೈಟಲ್ ಇಡಲಾಗಿದೆ.

    ಮಾಮಣ್ಣಾನ್ ಸಿನಿಮಾದಲ್ಲಿ ವಡಿವೇಲು ತಮ್ಮ ಎಂದಿನಂತೆ ಹಾಸ್ಯ ಪಾತ್ರಬಿಟ್ಟು ಗಂಭೀರ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಕೀರ್ತಿ ಸುರೇಶ್, ಉದಯನಿಧಿ ಸ್ಟಾಲಿನ್ ಮುಖ್ಯ ಪಾತ್ರ ಮಾಡಿದ್ದರು. ಈ ಸಿನಿಮಾದಲ್ಲಿನ ಫಹಾದ್ ಪಾತ್ರ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಗೆಲುವಿನ ಬೆನ್ನಲ್ಲೇ ಫಹಾದ್ ಮಾರೀಸನ್ ಒಪ್ಪಿಕೊಂಡಿದ್ದಾರೆ.

    ಕೇರಳದ ಮೂಲದ ಸುಧೀಶ್ ಶಂಕರ್ ಹೊಸ ಚಿತ್ರದ ನಿರ್ದೇಶಕರು. ಸೂಪರ್ ಗುಡ್ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಯುವನ್ ಶಂಕರ್ ರಾಜಾ ಸಂಗೀತ ಸಂಯೋಜನೆ ಚಿತ್ರಕ್ಕೆ ಇರಲಿದೆ. ತಾರಾಗಣ ಇನ್ನೂ ಆಯ್ಕೆಯಾಗಿಲ್ಲವಾದರೂ, ಸಿನಿಮಾದ ಬಗ್ಗೆ ಈಗಾಗಲೇ ಕುತೂಹಲ ಶುರುವಾಗಿದೆ.

  • Hombale Films ನಿರ್ಮಾಣದ  ‘ಧೂಮಂ’ ಫಸ್ಟ್ ಲುಕ್ ಔಟ್

    Hombale Films ನಿರ್ಮಾಣದ ‘ಧೂಮಂ’ ಫಸ್ಟ್ ಲುಕ್ ಔಟ್

    ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್- ಫಹಾದ್ ಫಾಸಿಲ್ ಕಾಂಬಿನೇಷನ್ ‘ಧೂಮಂʼ ಸಿನಿಮಾ ಫಸ್ಟ್ ಲುಕ್ ಇದೀಗ ಹೊಂಬಾಳೆ ಫಿಲ್ಮ್ಸ್ (Hombale Films) ರಿವೀಲ್ ಮಾಡಿದೆ. ಪೋಸ್ಟರ್ ಲುಕ್‌ನಿಂದ ‘ಧೂಮಂ’ ಸಿನಿಮಾ ಗಮನ ಸೆಳೆಯುತ್ತಿದೆ.

    ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್‌ನಿರ್ಮಾಣದ ಕೆಜಿಎಫ್. ಕೆಜಿಎಫ್ 2, ಕಾಂತಾರ ಸಿನಿಮಾ ಸೇರಿದಂತೆ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡುವ ಮೂಲಕ ಸದ್ದು ಮಾಡ್ತಿದೆ. ಇದೀಗ ಮೊದಲ ಬಾರಿಗೆ ಮಲಯಾಳಂ ಚಿತ್ರ ‘ಧೂಮಂ’ (Dhoomam) ಸಿನಿಮಾಗೆ ಸಾಥ್ ನೀಡಿದೆ. ಈ ಚಿತ್ರವನ್ನ ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ಪವನ್‌ ಕುಮಾರ್ (Pawan Kumar) ಆ್ಯಕ್ಷನ್ ಕಟ್ ಹೇಳಿದ್ದಾರೆ.

    ಫಹಾದ್ ಫಾಸಿಲ್ – ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಅಪರ್ಣಾ ಬಾಲಮುರಳಿ (Aparna Balamurali) ನಟನೆಯ ‘ಧೂಮಂ’ ಸಿನಿಮಾದ ಫಸ್ಟ್ ಲುಕ್ ಏ.17ರಂದು ರಿವೀಲ್ ಆಗಿದೆ. ಡಿಫರೆಂಟ್ ಕಂಟೆಂಟ್‌ನಲ್ಲಿ ಸಿನಿಮಾ ಮೂಡಿ ಬಂದಿದೆ. ಮಲಯಾಳಂ ಸೇರಿದಂತೆ ಕನ್ನಡ, ತೆಲುಗು, ತಮಿಳು ಭಾಷೆಯಲ್ಲೂ ಚಿತ್ರ ಮೂಡಿ ಬಂದಿದೆ. ಇದನ್ನೂ ಓದಿ:ಬಿರುಕಿನ ಸಂಬಂಧಕ್ಕೆ ‘ಮಾವು-ಬೇವು’ ಸಿನಿಮಾ ಅಮೃತ ದಾರ

     

    View this post on Instagram

     

    A post shared by Hombale Films (@hombalefilms)

    ಪೋಸ್ಟರ್ ಫಸ್ಟ್ ಲುಕ್‌ನಲ್ಲಿ ನಟ ಫಹಾದ್, ಭಿನ್ನ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಮೊದಲ ಪೋಸ್ಟರ್ ಲುಕ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೆಂಕಿಯಿಲ್ಲದೇ ಹೊಗೆ ಇಲ್ಲ, ಇಲ್ಲಿ ಮೊದಲ ಕಿಡಿ ಎಂದು ಅಡಿಬರಹದೊಂದಿಗೆ ಚಿತ್ರದ ಲುಕ್ ರಿವೀಲ್ ಮಾಡಲಾಗಿದೆ.

    ಪವನ್ ಕುಮಾರ್ ಕೂಡ ವಿಭಿನ್ನ ಕಥೆಯನ್ನ ಫಹಾದ್- ಅಪರ್ಣಾ ಜೋಡಿಯೊಂದಿಗೆ ತೆರೆಯ ಮೇಲೆ ತೋರಿಸಲು ಹೊರಟಿದ್ದಾರೆ. ‘ಧೂಮಂʼ ಸಿನಿಮಾ ತೆರೆಯ ಮೇಲೆ ಅದೆಷ್ಟರ ಮಟ್ಟಿಗೆ ಕಮಾಲ್ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.

  • ಬಹುಭಾಷಾ ನಟ ಫಹಾದ್ ಫಾಸಿಲ್ ಇದೀಗ ಸಿಬಿಐ ಅಧಿಕಾರಿ

    ಬಹುಭಾಷಾ ನಟ ಫಹಾದ್ ಫಾಸಿಲ್ ಇದೀಗ ಸಿಬಿಐ ಅಧಿಕಾರಿ

    ಲಯಾಳಂ ಸೇರಿದಂತೆ ದಕ್ಷಿಣದ ಬಹುತೇಕ ಸಿನಿಮಾಗಳಲ್ಲಿ ನಟಿಸಿರುವ, ಪ್ರತಿಭಾವಂತ ಕಲಾವಿದ ಫಹಾದ್ ಫಾಸಿಲ್ (Fahad Faasil) ಇದೀಗ ಸಿಬಿಐ ಅಧಿಕಾರಿಯಾಗಿದ್ದಾರೆ. ಕನ್ನಡದ ಬಘೀರ (Bagheera)ಸಿನಿಮಾದಲ್ಲಿ ಅವರು ಇಂಥದ್ದೊಂದು ಪಾತ್ರ ನಿರ್ವಹಿಸಲಿದ್ದಾರೆ. ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ನಾಯಕನಾಗಿ ನಟಿಸಿರುವ ಈ ಚಿತ್ರವು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿದೆ. ಈಗಾಗಲೇ ಎರಡು ಹಂತದ ಚಿತ್ರೀಕರಣ ಕೂಡ ಮುಗಿಸಿದೆ.

    ಬಘೀರ್ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಗಾಯ ಮಾಡಿಕೊಂಡಿದ್ದ ಶ್ರೀಮುರಳಿ, ಆನಂತರ ಆಸ್ಪತ್ರೆ ಸೇರಿ ಗಾಯಕ್ಕೆ ಶಸ್ತ್ರ ಚಿಕಿತ್ಸೆಯನ್ನೂ ಮಾಡಿಕೊಂಡಿದ್ದಾರೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಸದ್ಯದಲ್ಲೇ ಚಿತ್ರೀಕರಣಕ್ಕೆ ಮರಳಲಿದ್ದು, ಆಗ ಫಹಾದ್ ಫಾಸಿಲ್ ಈ ತಂಡವನ್ನು ಸೇರಿಕೊಳ್ಳಲಿದ್ದಾರೆ. ಕಾಲಿವುಡ್ ವಿಕ್ರಮ್ ಸಿನಿಮಾ ಗೆಲುವಿನ ನಂತರ ಫಹಾದ್ ಗೆ ಭಾರೀ ಡಿಮಾಂಡ್ ಕ್ರಿಯೇಟ್ ಆಗಿದೆ. ಇದನ್ನೂ ಓದಿ: ವಿನಯ್ ರಾಜ್‌ಕುಮಾರ್‌ಗೆ ನಾಯಕಿಯಾದ `ವಿಕ್ರಮ್’ ನಟಿ ಸ್ವಾತಿಷ್ಟ ಕೃಷ್ಣನ್

    ಅಂದಹಾಗೆ ಬಘೀರ್ ಸಿನಿಮಾವನ್ನು ಡಾ.ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಲಕ್ಕಿ ಚಿತ್ರದ ನಂತರ ಸೂರಿ ಈ ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಈ ಸಿನಿಮಾದಲ್ಲಿ ಶ್ರೀಮುರಳಿ ಪೊಲೀಸ್ ಆಫೀಸರ್ ಪಾತ್ರ ಮಾಡುತ್ತಿದ್ದು, ಫಹಾದ್ ಸಿಬಿಐ ಅಧಿಕಾರಿಯಾಗಿ ಶ್ರೀಮುರಳಿಗೆ ಸಾಥ್ ನೀಡಲಿದ್ದಾರೆ. ಮಂಗಳೂರು ಸೇರಿದಂತೆ ಹಲವು ಕಡೆ ಈಗಾಗಲೇ ಹಲವು ಹಂತದ ಚಿತ್ರೀಕರಣ ನಡೆದಿದೆ. ಫೆಬ್ರವರಿಯಿಂದ ಮುಂದಿನ ಹಂತದ ಚಿತ್ರೀಕರಣ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k