Tag: Factory

  • ಪೇಯಿಂಟ್ ಮಿಕ್ಸರ್‌ಗೆ ಕೂದಲು ಸಿಲುಕಿ ಮಹಿಳೆ ಸಾವು

    ಪೇಯಿಂಟ್ ಮಿಕ್ಸರ್‌ಗೆ ಕೂದಲು ಸಿಲುಕಿ ಮಹಿಳೆ ಸಾವು

    ಬೆಂಗಳೂರು: ಬಣ್ಣ ಬೆರೆಸುವ ಪೇಯಿಂಟ್ ಮಿಕ್ಸರ್‌ಗೆ (Paint Mixer) ಕೂದಲು (Hair) ಸಿಲುಕಿ ಮಹಿಳೆ (Woman) ದಾರುಣವಾಗಿ ಸಾವನ್ನಪ್ಪಿದ ಘಟನೆ ನೆಲಗದರನಹಳ್ಳಿಯ ಕಾರ್ಖಾನೆಯೊಂದರಲ್ಲಿ (Factory) ನಡೆದಿದೆ.

    ಶ್ವೇತಾ (34) ಸಾವನ್ನಪ್ಪಿದ ಮಹಿಳೆ. ಗಂಡ ಮತ್ತು ಮಗನ ಜೊತೆ ಶ್ವೇತಾ ಮಲ್ಲತ್ತಹಳ್ಳಿಯಲ್ಲಿ ವಾಸವಾಗಿದ್ದರು. ಕಾರ್ಖಾನೆಯಲ್ಲಿ ಕೆಲಸ ಮಾಡುವ ವೇಳೆ ಬಣ್ಣ ಬೆರೆಸುವ ಮಿಕ್ಸರ್‌ಗೆ ಜಡೆ ಸಿಲುಕಿ ಘಟನೆ ನಡೆದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರೌಡಿಶೀಟರ್‌ ಬರ್ಬರ ಹತ್ಯೆ

    ಬಣ್ಣ ಗಟ್ಟಿಯಾಗುತ್ತಿದ್ದರಿಂದ ಪರಿಶೀಲಿಸಲು ಮಿಕ್ಸರ್ ಬಳಿ ಬಂದು ಬಗ್ಗಿದಾಗ ಈ ಅವಘಡ ಸಂಭವಿಸಿದೆ. ಜಡೆ ಸಿಲುಕಿದಾಗ ಮಹಿಳೆ ಕೂಗಿಕೊಂಡರೂ ಮಿಕ್ಸರ್ ಶಬ್ದದಿಂದಾಗಿ ಯಾರಿಗೂ ಕೇಳಿಸಿಲ್ಲ. ಬಳಿಕ ಉಳಿದ ಕೆಲಸಗಾರರು ಮಿಕ್ಸರ್ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಪೀಣ್ಯ (Peenya) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹನಿಟ್ರ್ಯಾಪ್ – ನಾಪತ್ತೆಯಾಗಿದ್ದ ನಿವೃತ್ತ ಯೋಧನ ಮೃತದೇಹ ಪಂಪಿನ ಕೆರೆಯಲ್ಲಿ ಪತ್ತೆ

  • ಕಾಂಚೀಪುರಂನ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಬೆಂಕಿ ಅವಘಡ – 8 ಜನ ಸಜೀವದಹನ

    ಕಾಂಚೀಪುರಂನ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಬೆಂಕಿ ಅವಘಡ – 8 ಜನ ಸಜೀವದಹನ

    – 19 ಜನರಿಗೆ ಗಾಯ

    ಚೆನ್ನೈ: ಪಟಾಕಿ ಕಾರ್ಖಾನೆಯಲ್ಲಿ (Firecracker Factory) ಭೀಕರ ಬೆಂಕಿ (Fire) ಅವಘಡ ಉಂಟಾಗಿ 8 ಜನರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ (Tamil Nadu) ಕಾಂಚೀಪುರಂನಲ್ಲಿ (Kancheepuram) ನಡೆದಿದೆ.

    ಬುಧವಾರ ಮಧ್ಯಾಹ್ನದ ವೇಳೆ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರ್ಖಾನೆಯಲ್ಲಿ ಸುಮಾರು 25 ಜನರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ವರದಿಗಳ ಪ್ರಕಾರ ಪಟಾಕಿಗಳನ್ನು ಒಣಗಲು ಬಿಸಿಲಿಗೆ ಹಾಕಿದ್ದಾಗ ಬೆಂಕಿ ಹುಟ್ಟಿಕೊಂಡಿದೆ. ಬಳಿಕ ಬೆಂಕಿ ಇಡೀ ಕಾರ್ಖಾನೆಗೆ ಹರಡಿಕೊಂಡಿದೆ. ಈ ವೇಳೆ ಕಾರ್ಮಿಕರು ಕಾರ್ಖಾನೆಯೊಳಗೆ ಸಿಲುಕಿಕೊಂಡಿದ್ದು, ಹಲವರ ಸಾವು ಸಂಭವಿಸಿದೆ. ಇದನ್ನೂ ಓದಿ:  ಉಕ್ರೇನ್‌ ಶಾಲೆ ಮೇಲೆ ರಷ್ಯಾ ಡ್ರೋನ್‌ ದಾಳಿ – 3 ಸಾವು

    ಘಟನೆಗೆ ಸಂಬಂಧಪಟ್ಟಂತೆ ಅಗ್ನಿಶಾಮಕ ದಳಕ್ಕೆ ಮಾಹಿತಿ ಸಿಗುತ್ತಲೇ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆಯಲ್ಲಿ 19 ಜನರಿಗೆ ಸುಟ್ಟ ಗಾಯಗಳಗಿದ್ದು, ಅವರ ಪೈಕಿ 11 ಜನರನ್ನು ಕಾಂಚೀಪುರಂನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ 8 ಗಾಯಾಳುಗಳನ್ನು ಬೇರೆ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಇದನ್ನೂ ಓದಿ: ಭೂಕಂಪನದ ಮಧ್ಯೆಯೇ ವೈದ್ಯರು ಹೆರಿಗೆ ಮಾಡಿಸಿ ತಾಯಿ, ಮಗುವಿನ ಜೀವ ಉಳಿಸಿದ್ರು!

    ಇದೀಗ ಬೆಂಕಿಯನ್ನು ಹತೋಟಿಗೆ ತರಲಾಗಿದ್ದು, ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • 2 ಫ್ಯಾಕ್ಟರಿಗಳ ಮೇಲೆ ದಾಳಿ – 2,000 ಕೆಜಿ ಕಲಬೆರಕೆ ಪನೀರ್ ವಶ

    2 ಫ್ಯಾಕ್ಟರಿಗಳ ಮೇಲೆ ದಾಳಿ – 2,000 ಕೆಜಿ ಕಲಬೆರಕೆ ಪನೀರ್ ವಶ

    ಮುಂಬೈ: ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ(FDA) ಅಧಿಕಾರಿಗಳು ಪುಣೆ(Pune) ನಗರದಲ್ಲಿ ಡೈರಿ ಉತ್ಪನ್ನಗಳ 2 ಕಾರ್ಖಾನೆಗಳ(Factory) ಮೇಲೆ ದಾಳಿ ನಡೆಸಿ 2,000 ಕೆಜಿ ಕಲಬೆರಕೆ ಪನೀರ್(Adulterated Paneer) ಮತ್ತು ಕೆನೆರಹಿತ ಹಾಲಿನ ಪುಡಿಯನ್ನು ವಶಪಡಿಸಿಕೊಂಡಿದ್ದಾರೆ.

    ಕೊಂಡ್ವಾ ಮತ್ತು ವಾನ್ವಾಡಿ ಪ್ರದೇಶದಲ್ಲಿರುವ ಕಾರ್ಖಾನೆಗಳಲ್ಲಿ ತೈಲ ಮತ್ತು ಹಾಲಿನ ಪುಡಿಯನ್ನು ಬಳಸಿ ಕಲಬೆರಕೆ ಪನೀರ್ ಅನ್ನು ತಯಾರಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಣಿ ಎಲಿಜಬೆತ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ ದ್ರೌಪದಿ ಮುರ್ಮು

    ಇದು ಸೆಪ್ಟೆಂಬರ್ 5ರ ಬಳಿಕ ನಡೆಸಲಾದ 3ನೇ ದಾಳಿಯಾಗಿದೆ. ದಾಳಿಯಲ್ಲಿ ಕಲಬೆರಕೆ ಪನೀರ್ ಮತ್ತು ಇತರ ಡೈರಿ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಂದು ನಡೆಸಲಾಗಿರುವ ದಾಳಿಯಲ್ಲಿ 2 ಫ್ಯಾಕ್ಟರಿಗಳಿಂದ 2,000 ಕೆಜಿ ಕಲಬೆರೆಕೆ ಪನೀರ್ ವಶಪಡಿಸಿಕೊಳ್ಳಲಾಗಿದೆ. ಇದು ಸುಮಾರು 25 ಲಕ್ಷ ಮೌಲ್ಯದ್ದಾಗಿದೆ ಎಂದು ಎಫ್‌ಡಿಎ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಟೇಕ್ ಆಫ್ ಆಗುವ ಮೊದಲೇ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಇಂಜಿನ್‍ನಲ್ಲಿ ಬೆಂಕಿ

    ಅವುಗಳ ಮಾದರಿಗಳನ್ನು ಪರೀಕ್ಷೆಗಾಗಿ ಎಫ್‌ಡಿಎ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮುಂದಿನ ಆದೇಶದವರೆಗೆ ವ್ಯಾಪಾರವನ್ನು ನಿಲ್ಲಿಸುವಂತೆ ನಾವು ಎರಡೂ ಡೈರಿಗಳಿಗೆ ನೋಟಿಸ್ ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪುನರಾರಂಭಗೊಂಡ ಮೈಶುಗರ್ ಸಕ್ಕರೆ ಕಾರ್ಖಾನೆ – ರೈತರ ಮುಖದಲ್ಲಿ ಮಂದಹಾಸ

    ಪುನರಾರಂಭಗೊಂಡ ಮೈಶುಗರ್ ಸಕ್ಕರೆ ಕಾರ್ಖಾನೆ – ರೈತರ ಮುಖದಲ್ಲಿ ಮಂದಹಾಸ

    ಮಂಡ್ಯ: ಕನ್ನಂಬಾಡಿ ಕಟ್ಟೆ ಹೇಗೆ ಹಳೆ ಮೈಸೂರು ಭಾಗದ ಜೀವನಾಡಿ, ಹಾಗೆ ಮಂಡ್ಯದ ಜನರಿಗೆ ಮೈ ಶುಗರ್ ಸಕ್ಕರೆ ಕಾರ್ಖಾನೆ ಜೀವನಾಡಿ. ಕಳೆದ ನಾಲ್ಕು ವರ್ಷಗಳಿಂದ ಬಂದ್ ಆಗಿದ್ದ ಈ ಕಾರ್ಖಾನೆ ಇದೀಗ ಮತ್ತೆ ಪುನರಾರಂಭಗೊಂಡಿದೆ. ಈ ಮೂಲಕ ಸಕ್ಕರೆ ನಾಡಿನ ಜನರಿಗೆ ರಾಜ್ಯ ಸರ್ಕಾರ ಗೌರಿ-ಗಣೇಶ ಹಬ್ಬದ ಗಿಫ್ಟ್ ನೀಡಿದೆ.

    ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಅಂದ್ರೆ ಅದು ಮಂಡ್ಯದ ಮೈಶುಗರ್ ಕಾರ್ಖಾನೆ. ಒಂದು ಕಾಲದಲ್ಲಿ ಗತವೈಭವಕ್ಕೆ ಕಾರಣವಾಗಿದ್ದ ಈ ಕಾರ್ಖಾನೆ ಕೊಡುವ ದರವೇ ಇಡೀ ರಾಜ್ಯದ ಕಬ್ಬಿನ ದರವನ್ನು ನಿರ್ಧಾರ ಮಾಡ್ತಿತ್ತು. ಅಂತಹ ಇತಿಹಾಸ ಪ್ರಸಿದ್ಧ ಕಾರ್ಖಾನೆ ಅವ್ಯಾಹತ ಭ್ರಷ್ಟಾಚಾರ, ರಾಜಕೀಯ ಹಪಾಹಪಿಗೆ ಸಿಲುಕಿ ನಶಿಸುವ ಹಂತ ತಲುಪಿತ್ತು. ಕಳೆದ ನಾಲ್ಕು ವರ್ಷಗಳಿಂದ ಈ ಕಾರ್ಖಾನೆ ಸಂಪೂರ್ಣ ಸ್ತಬ್ಧವಾಗಿತ್ತು. ಕಾರ್ಖಾನೆ ಸ್ಥಗಿತದಿಂದ ಇಡೀ ಮಂಡ್ಯ ಜಿಲ್ಲೆಯ ಆರ್ಥಿಕ ಸ್ಥಿತಿ ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿದ್ರು. ಈ ಕಾರ್ಖಾನೆ ಆರಂಭಕ್ಕೆ ನಿರಂತರವಾಗಿ, ಸಾಕಷ್ಟು ಹೋರಾಟಗಳು ನಡೆದಿದ್ವು. ಕಾಲಕಳೆದಂತೆ ಮೈಶುಗರ್ ವಿಚಾರವಾಗಿ ನಡೆಯುತ್ತಿದ್ದ ಹೋರಾಟಗಳು ಕೂಡ ಕವಲೊಡೆದು ಗೊಂದಲದ ಗೂಡಾಗಿತ್ತು. ಕೆಲವರು ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಆರಂಭಕ್ಕೆ ಪಟ್ಟು ಹಿಡಿದ್ರೆ. ಇನ್ನು ಕೆಲವರು ಖಾಸಗಿಯಾದರೂ ಸರಿ, ಓ ಅಂಡ್ ಎಂ ಆದ್ರೂ ಸರಿ. ಹೇಗಾದ್ರೂ ಆಗ್ಲೀ ಮೊದಲು ಕಾರ್ಖಾನೆ ಆರಂಭವಾಗ್ಲೀ ಅಂತಾ ಒತ್ತಾಯಿಸಿದ್ರು. ಇದು ಸರ್ಕಾರಕ್ಕೂ ತಲೆನೋವಾಗಿ ಪರಿಣಮಿಸಿತ್ತು. ಈ ಹಿಂದಿನ ಸಿಎಂ ಆಗಿದ್ದ ಯಡಿಯೂರಪ್ಪ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಪುನರಾರಂಭಿಸುವಂತೆ ಹೇಳಲಾಗಿತ್ತು. ಅದಕ್ಕೆ ಪೂರಕ ಎಂಬಂತೆ ಪುನಾರಂಭವಾಗಿದೆ. ಇದನ್ನೂ ಓದಿ: 4 ವರ್ಷದ ಬಳಿಕ ಆರಂಭವಾಯಿತು ಮೈಶುಗರ್ ಕಾರ್ಖಾನೆ

    ಸಚಿವ ಸಂಪುಟ ಸಭೆ ನಿರ್ಣಯದಂತೆ ಹಾಗೂ ಸರ್ಕಾರದ ಭರವಸೆಯಂತೆ ಮೈಶುಗರ್ ಕಾರ್ಖಾನೆ ಪುನರಾರಂಭಕ್ಕೆ ಇದೀಗ ಮುನ್ನುಡಿ ಬರೆಯಲಾಗಿದೆ. ಕಳೆದ ತಿಂಗಳು ಬಾಯ್ಲರ್‌ಗೆ ಬೆಂಕಿ ಹಾಕುವ ಮೂಲಕ ಕಾರ್ಖಾನೆ ಪ್ರಾರಂಭಕ್ಕೆ ಆರಂಭಿಕ ಹೆಜ್ಜೆ ಹಾಕಲಾಗಿತ್ತು. ಇದೀಗ ಕಾರ್ಖಾನೆಯಲ್ಲಿ ಕಬ್ಬಿನ ಕ್ರಷರ್ ಮಿಷನ್‍ಗೆ ಪೂಜೆ ಸಲ್ಲಿಸಿ ಪ್ರಾರಂಭಗೊಳಿಸಲಾಗಿದೆ. ಇನ್ನೂ ಸೆ.10ಕ್ಕೆ ಸಿಎಂ ಬಸವರಾಜ ಬೊಮ್ಮಯಿ ಅವರು ಆಗಮಿಸಲಿದ್ದು, ಮೈಶುಗರ್ ಆರಂಭದ ಬಗ್ಗೆ ಬಿಜೆಪಿ ಸರ್ಕಾರ ಕಾರ್ಯ ಕ್ಷಮತೆಯ ಬಗ್ಗೆ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೈಶುಗರ್ ಪುನರಾಂಭದ ಮೂಲಕ ಈ ಬಾರಿಯ ಗೌರಿ-ಗಣೇಶ ಹಬ್ಬದ ಉಡುಗೊರೆಯನ್ನು ಮಂಡ್ಯದ ಜನರಿಗೆ ರಾಜ್ಯ ಸರ್ಕಾರ ನೀಡಲು ನಿರ್ಧರಿಸಿದೆ.

    ಕಾರ್ಖಾನೆ ಪುನರಾರಂಭಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿತ್ತು. 20 ಕೋಟಿ ರೂ. ವೆಚ್ಚದಲ್ಲಿ ಕಾರ್ಖಾನೆಯ ಯಂತ್ರೋಪಕರಣಗಳನ್ನು ದುರಸ್ತಿ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 4 ಲಕ್ಷ ಟನ್ ಕಬ್ಬು ನುರಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಸರ್ಕಾರದ ಈ ನಿರ್ಧಾರ ರೈತರಲ್ಲಿ ಮಂದಹಾಸ ಮೂಡಿಸಿದ್ದು, ಎಷ್ಟೋತ್ತಿಗೆ ಫ್ಯಾಕ್ಟರಿ ಚಿಲುಮೆಯಲ್ಲಿ ಹೊಗೆ ನೋಡಬಹುದು ಎಂದು ಕಾತುರದಲ್ಲಿ ಇದ್ದಾರೆ. ಸರ್ಕಾರ ಈ ಕಾರ್ಖಾನೆಯ ಬಾಗಿಲು ಮತ್ತೆ ಮುಚ್ಚದಂತೆ ನೋಡಿಕೊಳ್ಳಬೇಕಾಗಿದೆ. ಮೈ ಶುಗರ್ ಕೇವಲ ರೈತರಿಗೆ ಮಾತ್ರವಲ್ಲ ಮಂಡ್ಯದ ಜನರ ಭಾವನಾತ್ಮಕ ಸಂಬಂಧವಾಗಿದೆ. ಹೀಗಾಗಿ ಕಾರ್ಖಾನೆಯ ಅಭಿವೃದ್ಧಿಗೆ ಸರ್ಕಾರ ಶ್ರಮಿಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ. ಅಲ್ಲದೇ ಸಂಸದೆ ಸುಮಲತಾ ಅಂಬರೀಶ್ ಅವರು ಕಾರ್ಖಾನೆಯ ಪುನಾರಂಭಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಗಸ್ಟ್‌ ಜಿಎಸ್‌ಟಿ ಶೇ.28 ಏರಿಕೆ – 1.43 ಲಕ್ಷ ಕೋಟಿ ರೂ.ನಲ್ಲಿ ಯಾವ ರಾಜ್ಯದ ಪಾಲು ಎಷ್ಟು?

    ಒಟ್ಟಾರೆ ನಾಲ್ಕು ವರ್ಷಗಳ ಕಾಲ ಮೈ ಶುಗರ್ ಕಾರ್ಖಾನೆಗೆ ಹಿಡಿದಿದ್ದ ಗ್ರಹಣ ಇದೀಗ ಅಂತ್ಯಗೊಂಡಿದೆ. ಸರ್ಕಾರ ಸಕ್ಕರೆ ನಾಡಿನ ಜನರಿಗೆ ಗೌರಿ-ಗಣೇಶ ಹಬ್ಬದ ಪ್ರಯುಕ್ತ ನೀಡಿರುವ ಈ ಬಂಪರ್ ಉಡುಗೊರೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

    Live Tv
    [brid partner=56869869 player=32851 video=960834 autoplay=true]

  • 4 ವರ್ಷದ ಬಳಿಕ ಆರಂಭವಾಯಿತು ಮೈಶುಗರ್ ಕಾರ್ಖಾನೆ

    4 ವರ್ಷದ ಬಳಿಕ ಆರಂಭವಾಯಿತು ಮೈಶುಗರ್ ಕಾರ್ಖಾನೆ

    ಮಂಡ್ಯ: ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಮಂಡ್ಯದ ಮೈಶುಗರ್ 4 ವರ್ಷದ ಬಳಿಕ ಆರಂಭವಾಗಿದೆ. ಸಚಿವ ಸಂಪುಟ ಸಭೆ ನಿರ್ಣಯದಂತೆ ಹಾಗೂ ಸರ್ಕಾರದ ಭರವಸೆಯಂತೆ ಮೈಶುಗರ್ ಕಾರ್ಖಾನೆ ಪುನರಾರಂಭಕ್ಕೆ ಇಂದು ಮುನ್ನುಡಿ ಬರೆಯಲಾಯಿತು.

    ಸಂಪ್ರದಾಯದಂತೆ ಪೂಜೆ, ಗಣಪತಿ ಹೋಮದ ಮೂಲಕ ಕಾರ್ಖಾನೆ ಬಾಯ್ಲರ್‍ಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಇದಕ್ಕಾಗಿ ಕಾರ್ಖಾನೆಯನ್ನು ಶುದ್ಧಿ ಮಾಡಿ, ಹೂವು, ತಳಿರು-ತೋರಣ ಕಟ್ಟಿ, ನವ ವಧುವಿನಂತೆ ಸಿಂಗಾರ ಮಾಡಲಾಗಿತ್ತು. ಸಚಿವರಾದ ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣ ಗೌಡ, ಸಂಸದೆ ಸುಮಲತಾ, ಜಿಲ್ಲಾಡಳಿತದ ಅಧಿಕಾರಿಗಳು, ರೈತರು, ರೈತ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನೌಕರರು ಭಾಗಿಯಾಗಿದ್ದರು.

    ಬಂದ್ ಆಗಿದ್ದು ಯಾಕೆ?
    ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಅಂದರೆ ಅದು ಮಂಡ್ಯದ ಮೈಶುಗರ್ ಕಾರ್ಖಾನೆ. ಒಂದು ಕಾಲದಲ್ಲಿ ಗತವೈಭವಕ್ಕೆ ಕಾರಣವಾಗಿದ್ದ ಈ ಕಾರ್ಖಾನೆ ಕೊಡುವ ದರವೇ ಇಡೀ ರಾಜ್ಯದ ಕಬ್ಬಿನ ದರವನ್ನು ನಿರ್ಧಾರ ಮಾಡುತ್ತಿತ್ತು. ಅಂತಹ ಇತಿಹಾಸ ಪ್ರಸಿದ್ಧ ಕಾರ್ಖಾನೆ ಅವ್ಯಾಹತ ಭ್ರಷ್ಟಾಚಾರ, ರಾಜಕೀಯ ಹಪಾಹಪಿಗೆ ನಶಿಸುವ ಹಂತ ತಲುಪಿತ್ತು. ಕಳೆದ ನಾಲ್ಕು ವರ್ಷಗಳಿಂದ ಈ ಕಾರ್ಖಾನೆ ಸಂಪೂರ್ಣ ಸ್ಥಬ್ಧವಾಗಿತ್ತು. ಇದನ್ನೂ ಓದಿ: ಪ್ರವೀಣ್ ಹತ್ಯೆಗೈದ ಆರೋಪಿಗಳ ಬಂಧನ- ಪೊಲೀಸ್ ಇಲಾಖೆಗೆ ಕುಟುಂಬಸ್ಥರು ಧನ್ಯವಾದ

    ಕಾರ್ಖಾನೆ ಸ್ಥಗಿತದಿಂದ ಇಡೀ ಮಂಡ್ಯ ಜಿಲ್ಲೆಯ ಆರ್ಥಿಕ ಸ್ಥಿತಿ ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಕಾರ್ಖಾನೆ ಆರಂಭಕ್ಕೆ ನಿರಂತರವಾಗಿ, ಸಾಕಷ್ಟು ಹೋರಾಟಗಳು ನಡೆದಿದ್ವು. ಕಾಲಕಳೆದಂತೆ ಮೈಶುಗರ್ ವಿಚಾರವಾಗಿ ನಡೆಯುತ್ತಿದ್ದ ಹೋರಾಟಗಳು ಕೂಡ ಕವಲೊಡೆದು ಗೊಂದಲದ ಗೂಡಾಗಿತ್ತು. ಕೆಲವರು ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಆರಂಭಕ್ಕೆ ಪಟ್ಟು ಹಿಡಿದಿದ್ದರೆ, ಮತ್ತೆ ಕೆಲವರು ಖಾಸಗಿಯಾದರೂ ಸರಿ, ಓ ಅಂಡ್ ಎಂ ಆದರೂ ಸರಿ. ಹೇಗಾದರೂ ಆಗಲಿ ಮೊದಲು ಕಾರ್ಖಾನೆ ಆರಂಭವಾಗಲಿ ಅಂತ ಒತ್ತಾಯಿಸಿದ್ದರು. ಇದು ಸರ್ಕಾರಕ್ಕೂ ತಲೆ ನೋವಾಗಿ ಪರಿಣಮಿಸಿತ್ತು. ಈ ಹಿಂದಿನ ಸಿಎಂ ಆಗಿದ್ದ ಯಡಿಯೂರಪ್ಪ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಪುನರಾರಂಭಿಸುವ ನಿರ್ಧಾರ ಮಾಡಿದ್ದರು.

    ಕಾರ್ಖಾನೆ ಪುನರಾರಂಭಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿತ್ತು. 20 ಕೋಟಿ ವೆಚ್ಚದಲ್ಲಿ ಕಾರ್ಖಾನೆಯ ಯಂತ್ರೋಪಕರಣಗಳನ್ನು ದುರಸ್ತಿ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 4 ಲಕ್ಷ ಟನ್ ಕಬ್ಬು ನುರಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಇನ್ನು 10 ದಿನದೊಳಗೆ ಪ್ರಾಯೋಗಿಕವಾಗಿ ಕಬ್ಬು ನುರಿಸುವ ಕಾರ್ಯ ಆರಂಭಿಸಲಾಗುತ್ತದೆ. ಸಣ್ಣಪುಟ್ಟ ತಾಂತ್ರಿಕ ದೋಷ ಸರಿಪಡಿಸಿಕೊಂಡು 15-20 ದಿನಗಳಲ್ಲಿ ಸಿಎಂ ಮೂಲಕವೇ ಅಧಿಕೃತವಾಗಿ ಕಾರ್ಖಾನೆ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ಕೊಟ್ಟು ಪುನರಾರಂಭ ಮಾಡಲಾಗುತ್ತದೆ ಅಂತ ಸಚಿವರು ಭರವಸೆ ನೀಡಿದ್ದರು. ಇದನ್ನೂ ಓದಿ: ಉಜ್ಜಯಿನಿ ಮಹಾಕಾಳೇಶ್ವರ ಮಂದಿರದಲ್ಲಿ ಸಂಸದ ತೇಜಸ್ವಿ ಸೂರ್ಯ ಬೆಂಬಲಿಗರ ಗಲಾಟೆ

    ಮೈಶುಗರ್ ಕಾರ್ಖಾನೆಯಲ್ಲಿ ನಡೆದ ಪೂಜೆಯಿಂದ ಜಿಲ್ಲೆಯ ಜನಪ್ರತಿನಿಧಿಗಳು, ರೈತರಲ್ಲಿ ಸಂತಸ ಮನೆ ಮಾಡಿದೆ. ಹೇಗಾದರೂ ಮಾಡಿ ಕಾರ್ಖಾನೆ ಆರಂಭಕ್ಕೆ ನಡೆಸಿದ್ದ ಹೋರಾಟಕ್ಕೆ ಜಯ ಸಿಕ್ಕಿದೆ. ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಋಣಿಯಾರುತ್ತೇನೆ. ನಾನು ಸಂಸದೆಯಾಗಿ 3 ವರ್ಷ ಆದರೂ, ಇಂದಿನ ಸಂತಸದ ದಿನ ಯಾವತ್ತೂ ಇಲ್ಲ ಅಂತಾ ಸಂಸದೆ ಸುಮಲತಾ ಅಂಬರೀಶ್ ಹೇಳಿದರೆ, ರೈತ ನಾಯಕಿ ಸುನಂದ ಜಯರಾಂ ಮಾತ್ರ ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದೆವು. ಸರ್ಕಾರ ಕೊಟ್ಟ ಭರವಸೆಯಂತೆ ಕಾರ್ಖಾನೆ ಆರಂಭಕ್ಕೆ ಮುಂದಾಗಿದೆ. ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಪುನರಾರಂಭಿಸಿರುವುದು ಸ್ವಾಗತಾರ್ಹ. ಸರ್ಕಾರದ ನಿರ್ಧಾರಕ್ಕೆ ಅಭಿನಂದಿಸುತ್ತೇವೆ ಅಂತಾ ಸಂತಸ ವ್ಯಕ್ತಪಡಿಸಿದರು. ಮಂಡ್ಯ ಜನರ ಬಹು ದಿನಗಳ ಕನಸು ಈಡೇರುವ ಕಾಲಕ್ಕೆ ಕ್ಷಣಗಣನೆ ಆರಂಭವಾಗಿದೆ

    Live Tv
    [brid partner=56869869 player=32851 video=960834 autoplay=true]

  • ಹುಬ್ಬಳ್ಳಿ ಕಾರ್ಖಾನೆ ಬ್ಲಾಸ್ಟ್: ಮಾಲೀಕ ಬಂಧನ

    ಹುಬ್ಬಳ್ಳಿ ಕಾರ್ಖಾನೆ ಬ್ಲಾಸ್ಟ್: ಮಾಲೀಕ ಬಂಧನ

    ಹುಬ್ಬಳ್ಳಿ: ನಗರದ ತಾರಿಹಾಳ ಕೈಗಾರಿಕಾ ವಲಯದಲ್ಲಿ ಬರ್ತ್‍ಡೆ ಸ್ಪಾರ್ಕ್ ತಯಾರಿಕಾ ಘಟಕ ಬ್ಲಾಸ್ಟ್‌ಗೆ ಸಂಬಂಧಿಸಿದಂತೆ ಫ್ಯಾಕ್ಟರಿಯ ಮಾಲೀಕ ಕೊನೆಗೂ ಪೊಲೀಸರಿಗೆ ಶರಣಾಗಿದ್ದಾನೆ.

    ಅಬ್ದುಲ್ ಖಾದರ ಶೇಖ್‌ ಅಲಿಯಾಸ ಶಿರಟ್ಟಿ ಪೊಲೀಸರಿಗೆ ಶರಣಾಗಿರುವ ಫ್ಯಾಕ್ಟರಿ ಮಾಲೀಕ. ಯಾವುದೇ ಇಲಾಖೆ ಅನುಮತಿ ಪಡೆಯದೆ ಕಾನೂನು ಬಾಹಿರವಾಗಿ ಫ್ಯಾಕ್ಟರಿ ತೆರೆದು ನಾಲ್ಕು ಅಮಾಯಕ ಜೀವಗಳನ್ನು ಬಲಿ ಪಡೆದಿದ್ದ ಅಬ್ದುಲ್ ಖಾದರ್ ಘಟನೆ ನಡೆದ ದಿನದಿಂದ ತಲೆ ಮರೆಸಿಕೊಂಡಿದ್ದ.

    ಮಾಲೀಕ ಶೀಘ್ರವಾಗಿ ಬಂಧಿಸುವಂತೆ ಸಾರ್ವಜನಿಕ ಜೊತೆಗೆ ಶಾಸಕರ ಮತ್ತು ಸಚಿವ ಒತ್ತಡ ಪೊಲೀಸರಿಗಿತ್ತು. ಹೀಗಾಗಿ ತಲೆ ಮರೆಸಿಕೊಂಡಿದ್ದ ಅಬ್ದುಲ್‍ಗಾಗಿ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಮೂರು ತಂಡವಾಗಿ ಹುಡುಕಾಟ ನಡೆಸಿದ್ದರು. ಇದೀಗ ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಆ.4ರವರೆಗೆ ಇಡಿ ವಶಕ್ಕೆ ಸಂಜಯ್ ರಾವತ್

    ಈ ಬಗ್ಗೆ ಧಾರವಾಡ ಎಸ್‍ಪಿ ಲೋಕೇಶ್ ಪ್ರತಿಕ್ರಿಯೆ ನೀಡಿದ್ದು, ಕಳೆದ ವಾರ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ನಡೆದಿತ್ತು. ತನಿಖೆ ಮಾಡಿದಾಗ ಸುಮಾರು ಪರವಾನಿಗೆ ಇಲ್ಲದೇ ಕೆಮಿಕಲ್ಸ್ ಅಲ್ಲಿ ಇಡಲಾಗಿತ್ತು. ಕಾರ್ಮಿಕರ ಜೀವ ಹಾನಿ ಆಗುವಂತೆ ಕಾರ್ಖಾನೆ ನಡೆಸುತ್ತಿದ್ದರು. ಯಾವುದೇ ಸೆಫ್ಟಿ ಇರಲಿಲ್ಲ. ಇದರಿಂದಾಗಿ ಗಾಯಾಳುಗಳಲ್ಲಿ ನಾಲ್ಕು ಜನ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಖಾಸಗಿ ಬಸ್ – ಕಾರ್ ನಡುವೆ ಭೀಕರ ಅಪಘಾತ – ಓರ್ವ ಸಾವು, 6 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಹುಬ್ಬಳ್ಳಿ ಫ್ಯಾಕ್ಟರಿ ಸ್ಫೋಟ – 4 ದಿನ ಕಳೆದರೂ ಪತ್ತೆಯಾಗದ ಮಾಲೀಕ

    ಹುಬ್ಬಳ್ಳಿ ಫ್ಯಾಕ್ಟರಿ ಸ್ಫೋಟ – 4 ದಿನ ಕಳೆದರೂ ಪತ್ತೆಯಾಗದ ಮಾಲೀಕ

    ಹುಬ್ಬಳ್ಳಿ: ಸ್ಪಾರ್ಕ್ ಕ್ಯಾಂಡಲ್ ತಯಾರಿಕಾ ಫ್ಯಾಕ್ಟರಿ ಸ್ಫೋಟಕ್ಕೆ ಸಂಬಂಧಿಸಿದಂತೆ ಇನ್ನೂ ಸಹ ಮಾಲೀಕ ಪತ್ತೆಯಾಗಿಲ್ಲ. ಯಾವುದೇ ಮುನ್ನೆಚ್ಚರಿಕೆ ಕ್ರಮಗಳಿಲ್ಲದೆ ಅನಧಿಕೃತವಾಗಿ ಫ್ಯಾಕ್ಟರಿ ಆರಂಭಿಸಿ 3 ಜೀವಗಳನ್ನು ಬಲಿಪಡೆದು, ಇದೀಗ ತಲೆ ಮರೆಸಿಕೊಂಡಿರುವ ಮಾಲೀಕ ಅಬ್ದುಲ್ಲ ಖಾದೀರ್ ಶೇಕ್‌ಗಾಗಿ ತೀವ್ರ ಹುಡುಕಾಟ ನಡೆದಿದೆ. ಈ ಕಾರ್ಯಾಚರಣೆಗೆ 3 ಪೊಲೀಸ್ ತಂಡಗಳು ರಚನೆಯಾಗಿವೆ. ಇದನ್ನೂ ಓದಿ: ಗೋಮಾಂಸ ಪ್ರಕರಣವನ್ನು ಪ್ರಸ್ತಾಪಿಸಿ ಸಿದ್ದುವನ್ನು ಸಿಂಹ ಎಂದು ಕೊಂಡಾಡಿದ ಜಮೀರ್

    ಮೃತ ವಿಜಯಲಕ್ಷ್ಮಿ ಪತಿ ವೀರಭದ್ರ ದೂರಿನ ಆಧಾರದ ಮೇಲೆ ಐಪಿಸಿ 286, 337, 338, 304, ಎಕ್ಸ್‌ಪ್ಲೋಸಿವ್ ಆ್ಯಕ್ಟ್ 1908 ಅಡಿ ಕೇಸ್ ದಾಖಲಿಸಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಫ್ಯಾಕ್ಟರಿ ಮ್ಯಾನೇಜರ್ ಮಂಜುನಾಥ್‌ನನ್ನು ಈಗಾಗಲೇ ಬಂಧನ ಮಾಡಿದ್ದಾರೆ. ತಲೆ ಮರೆಸಿಕೊಂಡಿರುವ ಮಾಲೀಕ ಅಬ್ದುಲ್ಲ ಖಾದೀರ್ ಶೇಕ್‌ಗಾಗಿ ತೀವ್ರ ಹುಡುಕಾಟ ನಡೆದಿದ್ದು, ಈ ಕಾರ್ಯಾಚರಣೆಗೆ 3 ಪೊಲೀಸ್ ತಂಡಗಳು ರಚನೆಯಾಗಿವೆ. ಇದನ್ನೂ ಓದಿ: ಬೆಸ್ಕಾಂನಿಂದ ಗ್ರಾಹಕ ಸ್ನೇಹಿ ಡಿಜಿಟಲ್ ಮೀಟರ್ ಅಳವಡಿಕೆ

    ಘಟನೆ ನಡೆದು 4 ದಿನಗಳಾದರೂ ಪ್ರಕರಣದ ಪ್ರಮುಖ ಆರೋಪಿ ಮಾಲೀಕ ಅಬ್ದುಲ್ಲ ಖಾದೀರ್ ಶೇಕ್ ಇನ್ನೂ ಬಂಧನವಾಗಿಲ್ಲ. ಹೀಗಾಗಿ ಮೃತರ ಕುಟುಂಬಸ್ಥರು, ಗಾಯಾಳುಗಳ ಕುಟುಂಬಸ್ಥರು ಸೇರಿ ಫ್ಯಾಕ್ಟರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಪ್ರಾಪ್ತೆ ಮೇಲೆ ಅತ್ಯಾಚಾರ- ಆ್ಯಸಿಡ್ ಕುಡಿಸಿ ಕೊಲೆಗೆ ಯತ್ನ

    ನವದೆಹಲಿ: ಅಪ್ರಾಪ್ತೆ ಮೇಲೆ ಆಕೆ ಕೆಲಸ ಮಾಡುತ್ತಿದ್ದ ಕಾರ್ಖಾನೆಯೊಂದರ ಮ್ಯಾನೇಜರ್ ಅತ್ಯಾಚಾರವೆಸಗಿ ಬಲವಂತವಾಗಿ ಆ್ಯಸಿಡ್ ಕುಡಿಸಿದ ಘಟನೆ ನವದೆಹಲಿಯಲ್ಲಿ ನಡೆದಿದೆ.

    ಕಾರ್ಖಾನೆಯ ಮ್ಯಾನೇಜರ್ ಜೈಪ್ರಕಾಶ್(31) ಬಂಧಿತ ಆರೋಪಿ. 15 ವರ್ಷದ ಬಾಲಕಿಯೊಬ್ಬಳು ಶೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿನ ಮ್ಯಾನೇಜರ್ ಆಗಿ ಜೈಪ್ರಕಾಶ್ ಕೆಲಸ ಮಾಡುತ್ತಿದ್ದ. ಈತ ಆಕೆಯ ಬಳಿ ಬಂದು ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯನ್ನು ಭೇಟಿ ಮಾಡಿಸುತ್ತೇನೆ ಎಂದು ನೆಪ ಹೇಳಿದ. ಇದನ್ನು ನಂಬಿದ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಷ್ಟೇ ಅಲ್ಲದೇ ಯಾರಿಗೂ ಹೇಳದಂತೆ ಬೆದರಿಕೆಯನ್ನು ಹಾಕಿದ್ದಾನೆ.

    POLICE JEEP

    ಇದಾದ ಬಳಿಕ ಮನೆಗೆ ಹೋಗುತ್ತಿದ್ದ ರಸ್ತೆಯಲ್ಲಿ ಆಕೆಯನ್ನು ಜೈಪ್ರಕಾಶ್ ತಡೆದಿದ್ದಾನೆ. ರಸ್ತೆಯಲ್ಲೇ ಆಕೆಗೆ ಬಲವಂತವಾಗಿ ಆ್ಯಸಿಡ್‍ನ್ನು ಕುಡಿಸಿದ್ದಾನೆ. ಇದರಿಂದಾಗಿ ಆಕೆ ಮನೆಗೆ ತಲುಪುತ್ತಿದ್ದಂತೆ ಪ್ರಜ್ಞಾಹೀನಳಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಗಂಭೀರ ಸ್ಥಿತಿಯಲ್ಲಿದ್ದರಿಂದ ಎಮ್ಸ್‌ಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಭಾರೀ ಮಳೆಗೆ ಬೆಳಗಾವಿಯ 13 ಸೇತುವೆಗಳು ಜಲಾವೃತ – ಮತ್ತೆ ಪ್ರವಾಹ ಭೀತಿ

    ಈ ಸಂಬಂಧ ದೆಹಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಜೈಪ್ರಕಾಶ್‍ನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ – ಇಲಿ ಪಾಷಾಣ ಸೇವಿಸಿ ಗೃಹಿಣಿ ಆತ್ಮಹತ್ಯೆ

    Live Tv
    [brid partner=56869869 player=32851 video=960834 autoplay=true]

  • ಬ್ಯಾಕ್ಟೀರಿಯಾ ಪತ್ತೆ- ವಿಶ್ವದ ಅತಿ ದೊಡ್ಡ ಚಾಕೊಲೇಟ್ ಫ್ಯಾಕ್ಟರಿ ಸ್ಥಗಿತ

    ಬ್ಯಾಕ್ಟೀರಿಯಾ ಪತ್ತೆ- ವಿಶ್ವದ ಅತಿ ದೊಡ್ಡ ಚಾಕೊಲೇಟ್ ಫ್ಯಾಕ್ಟರಿ ಸ್ಥಗಿತ

    ಬ್ರಸೆಲ್ಸ್: ವಿಶ್ವದ ಅತಿ ದೊಡ್ಡ ಚಾಕೊಲೇಟ್ ಫ್ಯಾಕ್ಟರಿಯಲ್ಲಿ ಸಲ್ಮೊನೆಲ್ಲಾ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಸದ್ಯ ಚಾಕೊಲೇಟ್ ಫ್ಯಾಕ್ಟರಿಯಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.

    ಬೆಲ್ಜಿಯಂನ ವೈಜ್ ನಗರದಲ್ಲಿರುವ ಸ್ವಿಸ್ ದೈತ್ಯ ಬ್ಯಾರಿ ಕ್ಯಾಲೆಬಾಟ್ ನಡೆಸುತ್ತಿರುವ ಚಾಕೊಲೇಟ್ ಫ್ಯಾಕ್ಟರಿ ವಿಶ್ವದಲ್ಲೇ ಅತ್ಯಂತ ದೊಡ್ಡ ಫ್ಯಾಕ್ಟರಿಯಾಗಿದೆ. ಅದರಲ್ಲಿ ಸಲ್ಮೊನೆಲ್ಲಾ ಬ್ಯಾಕ್ಟೀರಿಯಾ ಪತ್ತೆಯಾಗಿರುವುದು ಚಾಕೊಲೇಟ್ ಪ್ರಿಯರಿಗೆ ಆಘಾತ ತಂದಿದೆ. ಸದ್ಯ ಕಾರ್ಖಾನೆಯಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಿಲಾಗಿದೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಪ್ರವಾಹದಿಂದ ರಕ್ಷಿಸಿಕೊಳ್ಳಲು ತೇಲುವ ಮನೆ ನಿರ್ಮಿಸಿದ ಜಪಾನ್ – ಏನಿದರ ವಿಶೇಷತೆ?

    ಈ ಬಗ್ಗೆ ಮಾಹಿತಿ ನೀಡಿರುವ ಕಂಪನಿ ವಕ್ತಾರ ಕಾರ್ನೀಲ್ ವಾರ್ಲೋಪ್, ಪರೀಕ್ಷೆಯ ಬಳಿಕ ತಯಾರಿಸಲಾದ ಎಲ್ಲಾ ಉತ್ಪನ್ನಗಳನ್ನು ನಿರ್ಬಂಧಿಸಲಾಗಿದೆ. ಬ್ಯಾಕ್ಟೀರಿಯಾ ಕಂಡುಬಂದಂತೆ ಉತ್ಪನ್ನಗಳನ್ನು ಪಡೆದಿರುವ ಎಲ್ಲಾ ಗ್ರಾಹಕರನ್ನು ಸಂಪರ್ಕಿಸಲಾಗುತ್ತಿದೆ. ಮುಂದಿನ ಸೂಚನೆ ಬರುವವರೆಗೂ ಚಾಕೊಲೇಟ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

    ಬ್ಯಾಕ್ಟೀರಿಯಾ ಪತ್ತೆಯಾದ ಬಳಿಕದ ಹೆಚ್ಚಿನ ಉತ್ಪನ್ನಗಳು ಮಾರಾಟವಾಗಿಲ್ಲ. ಆದರೂ ಗ್ರಾಹಕರನ್ನು ಸಂಪರ್ಕಿಸಲಾಗುತ್ತಿದೆ. ಜೂನ್ 25ರಿಂದ ತಯಾರಿಸಲಾದ ಉತ್ಪನ್ನಗಳನ್ನು ರವಾನಿಸದಂತೆ ಕೇಳಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಂಗರ್ ಕೆಲ್ಲಿಗೆ 30 ವರ್ಷ ಜೈಲು ಶಿಕ್ಷೆ: 9 ಆರೋಪ ಸಾಬೀತು

    ವಿಶ್ವದ ನಂ.1 ಚಾಕೊಲೇಟ್ ತಯಾರಿಕಾ ಕಂಪನಿ ಇದಾಗಿದ್ದು, 2020-2021 ಹಣಕಾಸು ವರ್ಷದಲ್ಲಿ 2 ಕೋಟಿ ಟನ್‌ಗಳಷ್ಟು ಉತ್ಪನ್ನಗಳು ಮಾರಾಟವಾಗಿವೆ. ಕಂಪನಿಯಲ್ಲಿ 13,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದು, ಪ್ರಪಂಚದಾದ್ಯಂತ 60ಕ್ಕೂ ಹೆಚ್ಚು ಉತ್ಪಾದನಾ ಘಟಕಗಳಿವೆ.

    Live Tv

  • ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ – ದುಷ್ಕರ್ಮಿ ಗುಂಡಿಗೆ ಮೂವರು ಬಲಿ

    ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ – ದುಷ್ಕರ್ಮಿ ಗುಂಡಿಗೆ ಮೂವರು ಬಲಿ

    ವಾಷಿಂಗ್ಟನ್: ಅಮೇರಿಕಾದ ಉತ್ತರ ಮೇರಿಲ್ಯಾಂಡ್‍ನ ಕಾರ್ಖಾನೆಯೊಂದರಲ್ಲಿ ಬಂದೂಕುಧಾರಿಯೋರ್ವ ಗುಂಡಿನ ದಾಳಿ ನಡೆಸಿದ್ದು, ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಸೈನಿಕರೊಂದಿಗೆ ಗುಂಡಿನ ಚಕಮಕಿ ನಡೆಸುತ್ತಿದ್ದಾಗ ಬಂದೂಕುಧಾರಿಯನ್ನು ತಕ್ಷಣಕ್ಕೆ ಗುರುತಿಸಲಾಗಲಿಲ್ಲ. ಆದರೆ ನಂತರ ಗುಂಡೇಟಿನಿಂದ ಗಾಯಗೊಂಡ ದುಷ್ಕರ್ಮಿ ಹಾಗೂ ಸೈನಿಕರೊಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ವಾಷಿಂಗ್ಟನ್ ಕೌಂಟಿ ಶೆರಿಫ್ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಕೈ ಶಾಸಕರನ್ನು ಸೆಳೆಯದಂತೆ ಇಂಟರ್‌ನೆಟ್ ಸೇವೆಯನ್ನೇ ಸ್ಥಗಿತಗೊಳಿಸಿದ ರಾಜಸ್ಥಾನ

    ಈ ಘಟನೆಯ ಹಿಂದಿನ ಕಾರಣವೇನು ಎಂಬುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಯಾವುದೇ ಬೆದರಿಕೆಗಳನ್ನು ಕೂಡ ಹಾಕಲಾಗಿರಲಿಲ್ಲ. ಸದ್ಯ ದಾಳಿ ವೇಳೆ ಮೂವರು ಸಾವನ್ನಪ್ಪಿದ್ದಾರೆ. ಜೊತೆಗೆ ಬಂದೂಕುಧಾರಿ ಸೈನಿಕರೊಬ್ಬರ ಮೇಲೂ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಹೇಳಿದ್ದಾರೆ.

    crime

    ಈ ಕಾರ್ಖಾನೆಯು ಸುಮಾರು 100ಕ್ಕೂ ಹೆಚ್ಚು ದೇಶಗಳಿಗೆ ಕಾಂಕ್ರೀಟ್ ಉತ್ಪಾದನಾ ಸಾಧನಗಳನ್ನು ಪೂರೈಸುತ್ತದೆ. ಸದ್ಯ ಘಟನೆ ವೇಳೆ ಎಷ್ಟು ಮಂದಿ ಉದ್ಯೋಗಿಗಳಿದ್ದರು ಎಂಬ ಮಾಹಿತಿಯನ್ನು ಕಲೆಹಾಕುತ್ತಿದ್ದು, ಇದೀಗ ಈ ಸಂಬಂಧ ಸಮಗ್ರವಾಗಿ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಗೋಲ್ಡೀ ಬ್ರಾರ್‌ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ – ಸಿಧು ಹತ್ಯೆ ಕೇಸ್‌ನಲ್ಲಿ ಅಲ್ಲ