Tag: Facebook Survey

  • ಎಸ್‍ಎಸ್‍ಎಲ್‍ಸಿ ಪರೀಕ್ಷೆ, ಪಬ್ಲಿಕ್ ಟಿವಿ ಎಫ್‍ಬಿ ಸಮೀಕ್ಷೆ – 1.05 ಲಕ್ಷ ಮಂದಿ ವೋಟ್

    ಎಸ್‍ಎಸ್‍ಎಲ್‍ಸಿ ಪರೀಕ್ಷೆ, ಪಬ್ಲಿಕ್ ಟಿವಿ ಎಫ್‍ಬಿ ಸಮೀಕ್ಷೆ – 1.05 ಲಕ್ಷ ಮಂದಿ ವೋಟ್

    ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಬೇಕೇ ಎಂದು ಪಬ್ಲಿಕ್ ಟಿವಿ ಫೇಸ್‍ಬುಕ್‍ನಲ್ಲಿ ನಡೆಸಿದ ಸಮೀಕ್ಷೆಗೆ 1.05 ಲಕ್ಷ ಜನ ವೋಟ್ ಮಾಡಿದ್ದಾರೆ.

    ಮಂಗಳವಾರ ಮಧ್ಯಾಹ್ನ ಕ್ರಿಯೆಟ್ ಮಾಡಿದ್ದ ಈ ಪೋಲ್‍ಗೆ 24 ಗಂಟೆಯಲ್ಲಿ 1.05 ಲಕ್ಷ ಜನ ವೋಟ್ ಮಾಡಿದ್ದರೆ 8 ಸಾವಿರಕ್ಕೂ ಅಧಿಕ ಮಂದಿ ಕಮೆಂಟ್ ಮಾಡಿದ್ದಾರೆ. ಶೇ.57 ರಷ್ಟು ಮಂದಿ ಪರೀಕ್ಷೆ ಬೇಡ ಎಂದು ಅಭಿಪ್ರಾಯಪಟ್ಟರೆ ಶೇ.43 ಮಂದಿ ಪರೀಕ್ಷೆ ನಡೆಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

    https://www.facebook.com/publictv/posts/4369546059729779

    ಪಬ್ಲಿಕ್ ಟಿವಿ ಇಲ್ಲಿಯವರೆಗೆ ನಡೆಸಿದ ಪೋಲ್ ಪೈಕಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಈ ಸಮೀಕ್ಷೆಗೆ ಬಿದ್ದಿದೆ. ಮಕ್ಕಳ ಜೀವಂತವಾಗಿದ್ದರೆ ಯಾವ ಪರೀಕ್ಷೆ ಬೇಕಾದರೂ ಬರೆಯಬಹುದು. ಮಕ್ಕಳ ಆರೋಗ್ಯವೇ ನಮಗೆ ಮುಖ್ಯ ಎಂದು ಪರೀಕ್ಷೆ ಬೇಡ ಎಂದು ಹೇಳುವ ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪರೀಕ್ಷೆ ನಡೆಸದೇ ಇದ್ದರೆ ಲಕ್ಷಾಂತರ ಮಂದಿ ಪಿಯುಸಿಗೆ ಸೇರುತ್ತಾರೆ. ಎಲ್ಲರಿಗೂ ಸೀಟ್ ಸಿಗುವುದು ಕಷ್ಟವಾಗಬಹುದು. 10ನೇ ತರಗತಿ ಪರೀಕ್ಷೆ ಮಾಡದೇ ಇದ್ದರೂ ಕಾಲೇಜುಗಳು ಪರೀಕ್ಷೆ ನಡೆಸಬಹುದು. ಇದರಿಂದಾಗಿ ಗೊಂದಲ ಮತ್ತಷ್ಟು ಜಾಸ್ತಿಯಾಗುತ್ತದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತೆ. ಹೀಗಾಗಿ ಪರೀಕ್ಷೆ ನಡೆಸಲೇಬೇಕು ಎಂದು ಜನರು ಕಮೆಂಟ್ ಮಾಡಿದ್ದಾರೆ.