Tag: Face Mask

  • 2 ವರ್ಷಗಳ ಬಳಿಕ ಮುಖ ತೋರಿಸಿದ ನಟಿ ಶಿಲ್ಪಾ ಶೆಟ್ಟಿ ಪತಿ

    2 ವರ್ಷಗಳ ಬಳಿಕ ಮುಖ ತೋರಿಸಿದ ನಟಿ ಶಿಲ್ಪಾ ಶೆಟ್ಟಿ ಪತಿ

    ತತ ಎರಡು ವರ್ಷಗಳಿಗೂ ಹೆಚ್ಚು ಕಾಲ ನಟಿ ಶಿಲ್ಪಾ ಶೆಟ್ಟಿ ಪತಿ, ನಿರ್ಮಾಪಕ ರಾಜ್ ಕುಂದ್ರ ಫೇಸ್ ಮಾಸ್ಕ್ (Face Mask) ಹಾಕಿಕೊಂಡು ಓಡಾಡುತ್ತಿದ್ದರು. ಅಶ್ಲೀಲ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಹೋಗಿ ಬಂದ ನಂತರ ಅವರು ಸಾರ್ವಜನಿಕವಾಗಿ ಯಾವತ್ತೂ ಮುಖ ತೋರಿಸಿರಲಿಲ್ಲ. ಸದಾ ಫೇಸ್ ಮಾಸ್ಕ್ ಹಾಕಿಕೊಂಡೇ ಮನೆಯಾಚೆ ಕಾಲಿಡುತ್ತಿದ್ದರು. ನಿನ್ನೆಯಷ್ಟೇ ಅವರು ತಮ್ಮ ಮುಖವನ್ನು ಕ್ಯಾಮೆರಾಗೆ ತೋರಿಸಿದ್ದಾರೆ.

    ಅವರದ್ದೇ ನಿರ್ಮಾಣದಲ್ಲಿ ಮೂಡಿ ಬಂದಿರುವ ಯುಟಿ 69 ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮೊದಲ ಬಾರಿಗೆ ಮುಖ ತೋರಿಸಿದ್ದಾರೆ. ಕಾರ್ಯಕ್ರಮಕ್ಕೆ ಫೇಸ್ ಮಾಸ್ಕ್ ಹಾಕಿಕೊಂಡು ಬಂದಿದ್ದರೂ, ಆನಂತರ ಅದನ್ನು ಕಳಚಿಟ್ಟರು. ತಮ್ಮ ನೋವಿನ ದಿನಗಳನ್ನು ಭಾವುಕರಾಗಿಯೇ ಹಂಚಿಕೊಂಡರು.

    ಅಶ್ಲೀಲ ಚಿತ್ರ ನಿರ್ಮಾಣದ ವಿಚಾರವಾಗಿ ಜೈಲಿಗೂ ಹೋಗಿ ಬಂದಿರುವ ಬಾಲಿವುಡ್ (Bollywood) ನಟಿ ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್ ಕುಂದ್ರಾ, ಜೈಲಿನಿಂದ ಆಚೆ ಬಂದ ಮೇಲೆ ಫೇಸ್ ಮಾಸ್ಕ್  ಹಾಕಿಕೊಂಡೇ ಓಡಾಡುತ್ತಿದ್ದರು. ಮನೆಯಿಂದ ಆಚೆ ಬಂದರೆ, ಅವರು ಫೇಸ್ ಮಾಸ್ಕ್ ಸಮೇತ ಬರುತ್ತಿದ್ದರು. ಆದಷ್ಟು ಮಾಧ್ಯಮಗಳಿಂದ ತಪ್ಪಿಸಿಕೊಳ್ಳುತ್ತಿದ್ದರು. ಕಳೆದ ಎರಡು ವರ್ಷದಿಂದ ಅವರು ಹಾಗೆಯೇ ಮಾಡುತ್ತಾ ಬಂದಿದ್ದಾರೆ.

    ಅವರು ಮುಖ ಮುಚ್ಚಿಕೊಂಡು ಓಡಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಟ್ರೋಲ್ ಆಗುತ್ತಿದ್ದವು. ಮುಖಮುಚ್ಚಿಕೊಂಡು ಓಡಾಡುವಂತಹ ಕೆಲಸ ಮಾಡಿದ್ದೀರಿ. ತಪ್ಪು ತಿದ್ದಿಕೊಂಡು ಚೆನ್ನಾಗಿ ಮುಖ ತೋರಿಸಿ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದರು. ಇದಕ್ಕೆ ಪ್ರತಿಯಾಗಿ ರಾಜ್ ಕುಂದ್ರಾ (Raj Kundra) ಟ್ರೋಲ್ ಮಾಡುವವರನ್ನು ನಿಂದಿಸಿದ್ದರು.

     

    ನೀವು ಫೇಮಸ್ ಅನ್ನುವ ಕಾರಣಕ್ಕಾಗಿ ಟ್ರೋಲ್ ಮಾಡಲಾಗುತ್ತಿದೆ. ನೀವು ಯಾರಿಗೂ ಗೊತ್ತೇ ಇಲ್ಲ ಅಂತಿದ್ದರೆ ಟ್ರೋಲ್ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಅದಕ್ಕೆ ಉತ್ತರಿಸಿದ್ದ ರಾಜ್ ಕುಂದ್ರಾ, ‘ನಾನು ಶಿಲ್ಪಾ ಶೆಟ್ಟಿ ಪತಿ ಅನ್ನುವುದೇ ನನಗೆ ನೆಗೆಟಿವ್ ಆಗಿದೆ. ಅವರಿಂದಾಗಿ ನಾನು ಮರ್ಯಾದೆ ಕಳೆದುಕೊಂಡೆ’ ಎಂದು ಪತಿಯ ಪಾಪ್ಯುಲಾರಿಟಿ ತಮಗೆ ಮುಳುವಾದ ಬಗ್ಗೆ ಉತ್ತರಿಸಿದ್ದರು. ಇದೀಗ ಎಲ್ಲದಕ್ಕೂ ಸುಖಾಂತ್ಯ ಹಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫೇಸ್ ಮಾಸ್ಕ್ ಟ್ರೋಲ್: ಪತ್ನಿ ಶಿಲ್ಪಾ ಶೆಟ್ಟಿ ಮೇಲೆಯೇ ನೇರ ಆರೋಪ ಮಾಡಿದ ರಾಜ್ ಕುಂದ್ರಾ

    ಫೇಸ್ ಮಾಸ್ಕ್ ಟ್ರೋಲ್: ಪತ್ನಿ ಶಿಲ್ಪಾ ಶೆಟ್ಟಿ ಮೇಲೆಯೇ ನೇರ ಆರೋಪ ಮಾಡಿದ ರಾಜ್ ಕುಂದ್ರಾ

    ಶ್ಲೀಲ ಚಿತ್ರ ನಿರ್ಮಾಣದ ವಿಚಾರವಾಗಿ ಜೈಲಿಗೂ ಹೋಗಿ ಬಂದಿರುವ ಬಾಲಿವುಡ್ (Bollywood) ನಟಿ ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್ ಕುಂದ್ರಾ, ಜೈಲಿನಿಂದ ಆಚೆ ಬಂದ ಮೇಲೆ ಫೇಸ್ ಮಾಸ್ಕ್ (Face Mask) ಹಾಕಿಕೊಂಡೇ ಓಡಾಡುತ್ತಿದ್ದಾರೆ. ಮನೆಯಿಂದ ಆಚೆ ಬಂದರೆ, ಅವರು ಫೇಸ್ ಮಾಸ್ಕ್ ಸಮೇತ ಬರುತ್ತಾರೆ. ಆದಷ್ಟು ಮಾಧ್ಯಮಗಳಿಂದ ತಪ್ಪಿಸಿಕೊಳ್ಳುತ್ತಾರೆ. ಕಳೆದ ಒಂದೂವರೆ ವರ್ಷದಿಂದ ಅವರು ಹಾಗೆಯೇ ಮಾಡುತ್ತಾ ಬಂದಿದ್ದಾರೆ.

    ಅವರು ಮುಖ ಮುಚ್ಚಿಕೊಂಡು ಓಡಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಟ್ರೋಲ್ ಆಗುತ್ತಿವೆ. ಮುಖಮುಚ್ಚಿಕೊಂಡು ಓಡಾಡುವಂತಹ ಕೆಲಸ ಮಾಡಿದ್ದೀರಿ. ತಪ್ಪು ತಿದ್ದಿಕೊಂಡು ಚೆನ್ನಾಗಿ ಮುಖ ತೋರಿಸಿ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಜ್ ಕುಂದ್ರಾ (Raj Kundra) ಟ್ರೋಲ್ ಮಾಡುವವರನ್ನು ನಿಂದಿಸಿದ್ದಾರೆ. ಅದಕ್ಕೆ ಮತ್ತೆ ಟ್ರೋಪಿಗರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ಇದನ್ನೂ ಓದಿ:ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್

    ನೀವು ಫೇಮಸ್ ಅನ್ನುವ ಕಾರಣಕ್ಕಾಗಿ ಟ್ರೋಲ್ ಮಾಡಲಾಗುತ್ತಿದೆ. ನೀವು ಯಾರಿಗೂ ಗೊತ್ತೇ ಇಲ್ಲ ಅಂತಿದ್ದರೆ ಟ್ರೋಲ್ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಉತ್ತರಿಸಿರುವ ರಾಜ್ ಕುಂದ್ರಾ, ‘ನಾನು ಶಿಲ್ಪಾ ಶೆಟ್ಟಿ ಪತಿ ಅನ್ನುವುದೇ ನನಗೆ ನೆಗೆಟಿವ್ ಆಗಿದೆ. ಅವರಿಂದಾಗಿ ನಾನು ಮರ್ಯಾದೆ ಕಳೆದುಕೊಂಡೆ’ ಎಂದು ಪತಿಯ ಪಾಪ್ಯುಲಾರಿಟಿ ತಮಗೆ ಮುಳುವಾದ ಬಗ್ಗೆ ಉತ್ತರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುಖ ಮುಚ್ಕೊಂಡೆ ಮನೆಗೆ ಗಣಪತಿ ಕರೆತಂದ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ

    ಮುಖ ಮುಚ್ಕೊಂಡೆ ಮನೆಗೆ ಗಣಪತಿ ಕರೆತಂದ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ

    ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಪೋರ್ನ್ ವಿಡಿಯೋ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಮೇಲೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ತೀರಾ ಅಪರೂಪವಾಗಿದೆ. ಕಾಣಿಸಿಕೊಂಡರೂ, ಅವರು ಪೂರ್ಣ ಮುಖ ಮುಚ್ಚಿಕೊಂಡೆ ಇರುತ್ತಾರೆ. ಜೈಲಿನಿಂದ ಆಚೆ ಬಂದ ಮೇಲೆ ಈವರೆಗೂ ಅವರು ತಮ್ಮ ಪೂರ್ಣ ಮುಖ ತೋರಿಸಿಲ್ಲ. ತೋರಿಸುವುದಕ್ಕೂ ಅವರು ಇಷ್ಟ ಪಡುತ್ತಿಲ್ಲ ಎನ್ನುತ್ತಾರೆ ಶಿಲ್ಪಾ ಶೆಟ್ಟಿ.

    ಪ್ರತಿ ವರ್ಷದಂತೆ ಈ ವರ್ಷವೂ ಶಿಲ್ಪಾ ಶೆಟ್ಟಿ ಮನೆಯಲ್ಲಿ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಹೀಗಾಗಿ ನಿನ್ನೆಯೇ ರಾಜ್ ಕುಂದ್ರಾ ಗಣಪತಿ ತರುವುದಕ್ಕಾಗಿ ಮಾರುಕಟ್ಟೆಗೆ ಹೋಗಿದ್ದರು. ಈ ಸಮಯದಲ್ಲೂ ಅವರು ತಮ್ಮ ಮುಖದ ಮಾಸ್ಕ್ ಹಾಕುವುದನ್ನು ಮರೆತಿಲ್ಲ. ಹಾಗೆಯೇ ಹೋಗಿ ಗಣಪತಿ ಮೂರ್ತಿಯನ್ನು ಮನೆಗೆ ತಂದಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಇದನ್ನೂ ಓದಿ:ಬಿಗ್ ಬಾಸ್: ಹೋಟೆಲ್ ಊಟದತ್ತ ವಾಲಿದ ಜಶ್ವಂತ್- ನಂದು ಕಣ್ಣೀರು

    ಏರ್ ಪೋರ್ಟ್ ಸೇರಿದಂತೆ ಯಾವುದೇ ಸ್ಥಳದಲ್ಲಿ ರಾಜ್ ಕುಂದ್ರಾ ಕಂಡರೂ, ಮುಖಕ್ಕೆ ಪೂರ್ತಿ ಮಾಸ್ಕ್ ಹಾಕಿಕೊಂಡೆ ಇರುತ್ತಾರೆ. ಕ್ಯಾಮೆರಾಗಳಿಂದ ಆದಷ್ಟು ದೂರ ಇರಲು ಬಯಸುತ್ತಾರೆ. ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ಅವರು ಬಂಧನವಾಗಿದ್ದರು. ಹಾಗೂ ಹಲವು ದಿನಗಳ ಕಾಲ ಜೈಲಿನಲ್ಲೂ ಇದ್ದರು. ಜೈಲಿನಿಂದ ಆಚೆ ಬಂದ ಮೇಲೆ ಅವರು ಈ ರೀತಿಯಾಗಿ ಬದಲಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 5 ಲಕ್ಷ ಬೆಲೆಬಾಳುವ ಚಿನ್ನದ ಮಾಸ್ಕ್ ತೊಟ್ಟ ಬಾಬಾ

    5 ಲಕ್ಷ ಬೆಲೆಬಾಳುವ ಚಿನ್ನದ ಮಾಸ್ಕ್ ತೊಟ್ಟ ಬಾಬಾ

    – ರಕ್ಷಣೆಗೆ ಇಬ್ಬರು ಅಂಗರಕ್ಷಕರ ನೇಮಕ

    ಲಕ್ನೋ: ದುಬಾರಿ ಬೆಲೆಯ ಚಿನ್ನದ ಮಾಸ್ಕ್ ಹಾಕಿಕೊಂಡ ಕಾನ್ಪುರದ ಬಾಬಾ ಸಖತ್ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ:  3.5 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ಧರಿಸಿ ಗಮನಸೆಳೆದ ಉದ್ಯಮಿ!

    ಗೋಲ್ಡನ್ ಬಾಬಾ ಎಂದೇ ಹೆಸರು ವಾಸಿಯಾಗಿರುವ ಮನೋಜ್ ಸೆಂಗರ್ ಚಿನ್ನದ ಮಾಸ್ಕ್ ಹಾಕಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕೊರೊನಾ ಸೋಂಕಿನಿಂದ ರಕ್ಷಣೆಯನ್ನು ಪಡೆಯಲು ಎನ್ 95, ಕ್ಲಾಥ್ ಮಾಸ್ಕ್, ಸರ್ಜಿಕಲ್ ಮಾಸ್ಕ್ ಹೀಗೆ ಹಲವು ರೀತಿಯ ಮಸ್ಕ್‍ಗಳನ್ನು ಹಾಕಿಕೊಳ್ಳುತ್ತಿರುವವರಲ್ಲಿ ಈ ಬಾಬಾ ಕೊಂಚ ವಿಭಿನ್ನವಾಗಿ ಚಿನ್ನದ ಮಾಸ್ಕ್ ಮಾಡಿಕೊಂಡಿದ್ದಾರೆ. ಬರೋಬ್ಬರಿ 5 ಲಕ್ಷ ಬೆಲೆ ಬಾಳುವ ಈ ಮಾಸ್ಕ್ ಮಾಡಿಕೊಂಡು ಸುದ್ದಿಯಾಗಿದ್ದಾರೆ. ಇದನ್ನೂ ಓದಿ:  2.89 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ತಯಾರಿಸಿ ಧರಿಸಿದ ವ್ಯಕ್ತಿ!

    ಈ ಗೋಲ್ಡನ್ ಮಾಸ್ಕ್ ಅನ್ನು ಸ್ಯಾನಿಟೈಸ್ ಮಾಡಿ 3 ವರ್ಷಗಳ ಕಾಲ ಬಳಸಬಹುದಾಗಿದೆ. ಶಿವ ಶರಣ್ ಮುಖವಾಡ ಎಂದು ಹೆಸರಿಲಾಗಿದೆ. ಮನೋಜ್ ಚಿನ್ನದ ಬಗ್ಗೆ ಒಲವು ಹೊಂದಿದ್ದಾರೆ. ಶಂಖ ಚಿಪ್ಪು, ಮೀನು ಮತ್ತು ಭಗವಾನ್ ಹನುಮನ ಲಾಕೆಟ್ ಹೀಗೆ ಹಲವು ಆಭರಣಗಳನ್ನು ಬಾಬಾ ಧರಿಸುತ್ತಾರೆ. ಸುಮಾರು ಎರಡು ಕಿಲೋಗ್ರಾಂ ತೂಕದ ಚಿನ್ನಾಭರಣಗಳನ್ನು ಬಾಬಾ ಧರಿಸುತ್ತಾರೆ. ಇದನ್ನೂ ಓದಿ: ಬೆಳ್ಳಿ, ಚಿನ್ನ ಆಯ್ತು- ಈಗ ಡೈಮಂಡ್ ಮಾಸ್ಕ್ ಮಾರಾಟ

    ಎಲ್ಲರೂ ಮಾಸ್ಕ್ ಧರಿಸಿ ಕೊರೊನಾ ನಿಯಮವನ್ನು ಪಾಲಿಸಿ. ಚಿನ್ನದ ಮೇಲಿನ ಪ್ರೀತಿ ತನಗೆ ಸಮಾಜ ವಿರೋಧಿ ಅಂಶಗಳಿಂದ ಬೆದರಿಕೆಗಳನ್ನು ತಂದುಕೊಟ್ಟಿದೆ. ನಾನು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇನೆ ಮತ್ತು ನನ್ನನ್ನು ಸಾರ್ವಕಾಲಿಕವಾಗಿ ರಕ್ಷಿಸಲು ಇಬ್ಬರು ಸಶಸ್ತ್ರ ಅಂಗರಕ್ಷಕರನ್ನು ಹೊಂದಿದ್ದೇನೆ ಎಂದು ಮನೋಜ್ ಸೆಂಗರ್ ಹೇಳಿದ್ದಾರೆ.  

  • ಗದಗ ಜಿಲ್ಲಾಡಳಿತದಿಂದ ಮುಂಚೂಣಿ ಕಾರ್ಯಕರ್ತರಿಗೆ ಮಾಸ್ಕ್, ಸ್ಯಾನಿಟೈಸರ್, ಕಿಟ್ ವಿತರಣೆ

    ಗದಗ ಜಿಲ್ಲಾಡಳಿತದಿಂದ ಮುಂಚೂಣಿ ಕಾರ್ಯಕರ್ತರಿಗೆ ಮಾಸ್ಕ್, ಸ್ಯಾನಿಟೈಸರ್, ಕಿಟ್ ವಿತರಣೆ

    ಗದಗ: ಜಿಲ್ಲಾಡಳಿತಕ್ಕೆ ದಾನಿಗಳು ನೆರವು ನೀಡಿದ ಮಾಸ್ಕ್, ಸ್ಯಾನಿಟೈಸರ್, ಫೇಸ್‍ಶೀಲ್ಡ್ ಹಾಗೂ ದಿನಸಿ ಕಿಟ್‍ಗಳನ್ನು ಆರೋಗ್ಯ ಇಲಾಖೆ ಸೇರಿದಂತೆ ಮುಂಚೂಣಿ ಕಾರ್ಯ ನಿರ್ವಹಿಸುವ ವಿವಿಧ ಇಲಾಖೆಗಳ ಸಿಬ್ಬಂದಿಗೆ ವಿತರಿಸಲಾಯಿತು.

    ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ನೇತೃತ್ವದಲ್ಲಿ ವಿತರಿಸಲಾಯಿತು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಂ.ಸುಂದರೇಶ್ ಬಾಬು ಮಾತನಾಡಿ, ಆರೋಗ್ಯ ಇಲಾಖೆ ಸೇರಿದಂತೆ ಸೋಂಕು ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ, ಹೋಮ್ ಗಾರ್ಡ್, ಮಹಿಳಾ ಮಕ್ಕಳ ಇಲಾಖೆ, ಸ್ಥಳೀಯ ಸಂಸ್ಥೆಗಳು, ಜಿಲ್ಲಾ ಪಂಚಾಯತ್, ತಾಲೂಕಾ ಆಡಳಿತಗಳು ಮುಂಚೂಣಿ ಸೇನಾನಿಗಳಾಗಿ ಶ್ರಮಿಸುತ್ತಿವೆ. ಇದನ್ನೂ ಓದಿ: ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ ನಟಿ ಪ್ರೇಮಾ

    ಅಧಿಕಾರಿಗಳು, ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್, ಫೇಸ್ ಶೀಲ್ಡ್, ಆಹಾರ ಸಾಮಗ್ರಿಗಳನ್ನು ನೀಡಲು ಇಲಾಖೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾಡಳಿತಕ್ಕೆ ದಾನಿಗಳ ಮುಖಾಂತರ ನೀಡಲಾದ ಕಿಟ್‍ಗಳನ್ನು ಹೆಚ್ಚುವರಿಯಾಗಿ ಇಂದು ನೀಡಲಾಗಿದೆ. ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸುರಕ್ಷತಾ ಕ್ರಮವಾಗಿ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಲು ಅವಕಾಶ ನೀಡಲಾಗಿದ್ದು ಲಸಿಕೆ ಪಡೆಯದವರು ಲಸಿಕೆ ಪಡೆಯಬೇಕು. ಎಲ್ಲರೂ ಸೋಂಕು ಹರಡುವಿಕೆ ತಡೆಗಟ್ಟುವ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದರೊಂದಿಗೆ ಇತರರಿಗೂ ಪಾಲಿಸಲು ತಿಳಿಸಬೇಕು ಎಂದರು. ಇದನ್ನೂ ಓದಿ:  ಪತ್ನಿಯನ್ನು ಕೊಂದ ಆರೋಪದ ಮೇಲೆ ಯೂಟ್ಯೂಬರ್ ಬಂಧನ


    ಜಿಲ್ಲಾಡಳಿತದಿಂದ ಪೊಲೀಸ್ ಇಲಾಖೆಗೆ 3 ಸಾವಿರ ಮಾಸ್ಕ್ , 30 ಲೀಟರ್ ಸ್ಯಾನಿಟೈಸರ್, ಗೃಹ ರಕ್ಷಕ ಇಲಾಖೆಗೆ 2 ಸಾವಿರ ಮಾಸ್ಕ್ , 5 ಲೀಟರ್ ಸ್ಯಾನಿಟೈಜರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 5 ಸಾವಿರ ಮಾಸ್ಕ್ , 25 ಲೀಟರ್ ಸ್ಯಾನಿಟೈಸರ್, ನಗರಸಭೆ ಗೆ 3 ಸಾವಿರ ಮಾಸ್ಕ್ , 5 ಲೀಟರ್ ಸ್ಯಾನಿಟೈಸರ್, ಜಿಲ್ಲಾ ಪಂಚಾಯತ್ ಗೆ 3 ಸಾವಿರ ಮಾಸ್ಕ್ , 30 ಲೀಟರ್ ಸ್ಯಾನಿಟೈಸರ್, ಆರೋಗ್ಯ ಇಲಾಖೆಗೆ 1 ಸಾವಿರ ಮಾಸ್ಕ್ , 25 ಲೀಟರ್ ಸ್ಯಾನಿಟೈಸರ್ , ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ ಕಚೇರಿಗಳಿಗೆ 3 ಸಾವಿರ ಮಾಸ್ಕ್ , 30 ಲೀಟರ್ ಸ್ಯಾನಿಟೈಸರ್ ಸೇರಿದಂತೆ ಫೇಸ್ ಶೀಲ್ಡ್, ದಿನಸಿ ಕಿಟ್ ವಿತರಣೆ ಮಾಡಲಾಯಿತು.


    ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಯತೀಶ್ ಎನ್, ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ, ಸೇರಿದಂತೆ ವಿವಿಧ ಇಲಾಖೆಯ ಮುಖ್ಯಸ್ಥರು ಹಾಜರಿದ್ದರು.

  • ಮಾಸ್ಕ್ ಧರಿಸದ್ದಕ್ಕೆ 10 ಸಾವಿರ ರೂ. ದಂಡ ಕಟ್ಟಿದ

    ಮಾಸ್ಕ್ ಧರಿಸದ್ದಕ್ಕೆ 10 ಸಾವಿರ ರೂ. ದಂಡ ಕಟ್ಟಿದ

    ನವದೆಹಲಿ: ಕೊರೊನಾ ನಿಯಮವನ್ನು ಉಲ್ಲಂಘಿಸಿದ ವ್ಯಕ್ತಿಯೊಬ್ಬ ಮಾಸ್ಕ್ ಧರಿಸದೆ 10 ಸಾವಿರ ರೂ. ದಂಡವನ್ನು ಕಟ್ಟುವ ಮೂಲಕವಾಗಿ ಸುದ್ದಿಯಾಗಿದ್ದಾನೆ.

    ದೆಹಲಿಯ ಡಿಯೋರಿಯಾ ಪ್ರದೇಶದ ಅಮರ್ಜಿತ್ ಯಾದವ್ ಮಾಸ್ಕ್ ಧರಿಸದೇ ಓಡಾಡುತ್ತಿದ್ದನು. ಯಾದವ್‍ನನ್ನು ಕಂಡ ಪೊಲೀಸರು ಎಚ್ಚರಿಕೆಯನ್ನು ನೀಡಿ ಒಂದು ಸಾವಿರ ರೂಪಾಯಿ ದಂಡವನ್ನು ಹಾಕಿ ಕಳುಸುಹಿದ್ದಾರೆ. ಆದರೆ ಅದೇ ವ್ಯಕ್ತಿ ಮತ್ತೆ ಮಾಸ್ಕ್ ಧರಿಸದೇ ಮತ್ತೆ ಓಡಾಡಿದ್ದಾನೆ.

    ಈ ವೇಳೆ ಸಿಕ್ಕಿಬಿದ್ದ ಯಾದವ್‍ಗೆ ಪೊಲೀಸರು 10 ಸಾವಿರ ರೂ. ದಂಡವನ್ನು ವಿಧಿಸಿ ರಸೀದಿ ನೀಡಿದ್ದಾರೆ. ಈ ಬಗ್ಗೆ ಸ್ಟೇಷನ್ ಹೌಸ್ ಅಧಿಕಾರಿ ಟಿ.ಜೆ ಸಿಂಗ್ ಮಾಹಿತಿ ನೀಡಿದ್ದಾರೆ. ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ಹಠಾತ್ ಏರಿಕೆಯಾಗಿದ್ದು, ಕೊರೊನಾ ನಿಯಂತ್ರಣಕ್ಕಾಗಿ ಹಲವು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡಿದೆ.

  • ಮಾಸ್ಕ್ ಹಾಕದವರಿಗೆ ದಂಡ ಪ್ರಯೋಗಕ್ಕೆ ತಾತ್ಕಾಲಿಕ ರಿಲೀಫ್

    ಮಾಸ್ಕ್ ಹಾಕದವರಿಗೆ ದಂಡ ಪ್ರಯೋಗಕ್ಕೆ ತಾತ್ಕಾಲಿಕ ರಿಲೀಫ್

    ಬೆಂಗಳೂರು: ಮಾಸ್ಕ್ ಧರಿಸದ ನೆಪದಲ್ಲಿ ಬಡವರು, ಶ್ರೀಸಾಮಾನ್ಯರಿಗೆ ಕೊರೊನಾ ಕಷ್ಟ ಕಾಲದಲ್ಲಿ 1,000 ರೂಪಾಯಿ ದಂಡ ವಿಧಿಸುತ್ತಿದ್ದ ಸರ್ಕಾರ ಸದ್ಯ ದಂಡದವನ್ನು ಇಳಿಸಿದೆ. ಆದರೆ ಇದರ ನಡುವೆಯೇ ಮಾಸ್ಕ್ ಹಾಕದವರಿಗೆ ದಂಡ ಪ್ರಯೋಗ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

    ಸದ್ಯ ದಂಡದ ಪ್ರಮಾಣವನ್ನು ನಗರ ಪ್ರದೇಶದಲ್ಲಿ ಈ ಮೊದಲು ವಿಧಿಸಲಾಗಿದ್ದ ಸಾವಿರ ರೂಪಾಯಿ ದಂಡವನ್ನು 250ಕ್ಕೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರೂಪಾಯಿ ದಂಡವನ್ನು 100ಕ್ಕೆ ಇಳಿಸಿತು. ತಕ್ಷಣದಿಂದಲೇ ಜಾರಿಯಾಗುವಂತೆ ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದರಿ. ಆದರೆ ದಂಡ ಇಳಿಕೆ ಪ್ರಮಾಣ ಸಿಸ್ಟಂ ಗಳಲ್ಲಿ ಅಪ್ ಡೇಟ್ ಆಗಬೇಕಾಗಿದ್ದು, ದುಬಾರಿ ದಂಡ ಹಾಕಲು ಆಗಲ್ಲ ಎಂಬ ಮಾಹಿತಿ ಲಭಿಸಿದೆ.

    ಬೆಂಗಳೂರು ನಗರದ ವಿವಿಧ ರಸ್ತೆಗಳಲ್ಲಿ ಈಗಾಗಲೇ ಮಾರ್ಷಲ್‍ಗಳು ಮಾಸ್ಕ್ ಧರಿಸದೆ ಓಡಾಡುತ್ತಿರುವ ಮಂದಿಗೆ ಬಿಸಿ ಮುಟ್ಟಿಸಲು ಫೀಲ್ಡ್ ಗೆ ಇಳಿದಿದ್ದಾರೆ. ಆದರೆ ದಂಡ ಇಳಿಕೆ ಪ್ರಮಾಣ ಸಿಸ್ಟಂ ಗಳಲ್ಲಿ ಅಪ್‍ಡೇಟ್ ಆಗಬೇಕಾಗಿದ್ದು, ಹೀಗಾಗಿ ನಗರದ ಎಲ್ಲೂ ದಂಡ ಪ್ರಯೋಗ ಸಾಧ್ಯಕ್ಕಿಲ್ಲ ಎಂದು ಮಾರ್ಷಲ್ ಮುಖ್ಯಸ್ಥ ರಾಜ್ ಬೀರ್ ಸಿಂಗ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಇಂದು ಮಧ್ಯಾಹ್ನ ಒಂದು ಗಂಟೆ ವೇಳೆಗೆ ದಂಡ ಇಳಿಕೆ ಪ್ರಮಾಣ ಸಿಸ್ಟಂ ಗಳಲ್ಲಿ ಅಪ್ ಡೇಟ್ ಮಾಡುವ ಸಾಧ್ಯತೆ ಇದ್ದು, ಆ ಬಳಿಕವೇ ಹೊಸ ನಿಯಮದ ಅನ್ವಯ ದಂಡ ವಿಧಿಸಲು ಸಾಧ್ಯವಾಗುತ್ತದೆ. ಆದರೆ ಸಿಸ್ಟಂ ಅಪ್‍ಡೇಟ್ ಹಾಗಬಿದ್ದರೂ ಮಾಸ್ಕ್ ಧರಿಸದೇ ಬರುವ ವ್ಯಕ್ತಿಗಳ ಸಾಕ್ಷಿಯನ್ನು ಸಂಗ್ರಹಿಸಿ ಸಿಸ್ಟಂ ಅಪ್‍ಡೇಟ್ ಆದ ಬಳಿಕ ವಿಧಿಸುವ ಸಾಧ್ಯತೆ ಇದೆ.

    ಸರ್ಕಾರ ದಂಡ ಕಡಿಮೆ ಮಾಡುವುದರೊಂದಿಗೆ ಕೊರೊನಾ ನಿಯಂತ್ರಣದ ಹೆಚ್ಚಿನ ಜವಾಬ್ದಾರಿ ಜನರ ಹೆಗಲೇರಿದೆ. ನಿಮ್ಮ ಜೀವ ನಿಮ್ಮ ಕೈಯಲ್ಲಿಯೇ ಇದೆ. ದಂಡ ಇಳಿಕೆಯಾಯ್ತು ಅಂತಾ ನೀವು ಮಾಸ್ಕ್ ಧರಿಸದೇ ಮೈಮರೆಯಬೇಡಿ. ಸದ್ಯದ ಮಟ್ಟಿಗೆ ಮಾಸ್ಕ್ ಒಂದೇ ಕೊರೋನಾಗೆ ಮದ್ದು, ಮಾಸ್ಕ್ ಧರಿಸಿ ಜೀವ ಉಳಿಸಿಕೊಳ್ಳಿ ಎಂಬುದು ಪಬ್ಲಿಕ್ ಟಿವಿಯ ಕಳಕಳಿಯ ಮನವಿಯಾಗಿದೆ.

    ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ. ಮಾಸ್ಕನ್ನು ಮೂಗಿನಿಂದ ಕೆಳಗೆ ಇಳಿಸಿಕೊಳ್ಳುವ ಅಭ್ಯಾಸ ಕೈಬಿಡಿ. ಸರಿಯಾಗಿ ಮಾಸ್ಕ್ ಧರಿಸಿ. ವಾಹನದಲ್ಲಿ ಸಂಚರಿಸುವಾಗ ಮಾಸ್ಕ್ ಯಾಕೆ ಭಾವನೆ ಬೇಡ. ವಾಹನದಲ್ಲಿ ಹೋಗುವಾಗಲೂ ಮಾಸ್ಕ್ ಧರಿಸಿ. ಮಾಸ್ಕ್ ತಪಾಸಣೆ ಬರುವ ಪೊಲೀಸರು, ಮಾರ್ಷಲ್‍ಗಳಿಗೆ ಸಹಕರಿಸಿ. ಮಾಸ್ಕ್ ಧರಿಸುವ ಜೊತೆಗೆ ಸಾಮಾಜಿಕ ಅಂತರದ ಬಗ್ಗೆಯೂ ಗಮನ ಹರಿಸಿ.