Tag: Face 2 Face

  • ಅರವಿಂದ್ ಕೈಯಿಂದ ಅವಾರ್ಡ್ ಪಡೆದ ಡಿಯು

    ಅರವಿಂದ್ ಕೈಯಿಂದ ಅವಾರ್ಡ್ ಪಡೆದ ಡಿಯು

    ಬೆಂಗಳೂರು: ಬಿಗ್ ಸೀಸನ್ -8 ಸ್ಪರ್ಧಿ ದಿವ್ಯಾ ಉರುಡುಗ ಫೇಸ್ ಟೂ ಫೇಸ್ ಚಿತ್ರಕ್ಕಾಗಿ ವಿಮಶರ್ಕರ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿಯನ್ನು ಕೆ.ಪಿ ಅರವಿಂದ್ ಕೈಯಿಂದ ಪಡೆದಿದ್ದಾರೆ.

    aravind divya

    ಬಿಗ್‍ಬಾಸ್ ಸೀಸನ್-8 ಕ್ಯೂಟ್ ಕಪಲ್ ಎಂದೇ ಫೇಮಸ್ ಆಗಿದ್ದ ಅರವಿಂದ್ ಹಾಗೂ ದಿವ್ಯಾ ಉರುಡುಗ ಮಂಗಳವಾರ ಹೈದರಾಬಾದ್‍ಗೆ ಒಟ್ಟಿಗೆ ಫ್ಲೈಟ್‍ನಲ್ಲಿ ಹಾರಿದ್ದರು. ಇದೀಗ ಇಬ್ಬರು ಸಂತೋಷಮ್ ಸೌತ್ ಇಂಡಿಯನ್ ಫಿಲ್ಮ್ ಅವಾರ್ಡ್ಸ್ ‌ ಕಾರ್ಯಕ್ರಮದಲ್ಲಿ  ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.  ಇದನ್ನೂ ಓದಿ: ಹೈದರಾಬಾದ್‍ಗೆ ಹಾರಿದ ಅರ್ವಿಯಾ ಜೋಡಿ

    ಹೌದು ಫೇಸ್ ಟೂ ಫೇಸ್ ಚಿತ್ರಕ್ಕಾಗಿ ನಟಿ ದಿವ್ಯಾ ಉರುಡುಗಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ವಿಶೇಷವೆಂದರೆ ಈ ಅವಾರ್ಡ್ ಅನ್ನು ದಿವ್ಯಾ ಉರುಡುಗ ಕೆ. ಪಿ ಅರವಿಂದ್ ಅವರ ಕೈಯಿಂದ ಸ್ವೀಕರಿಸಿದ್ದಾರೆ. ಸದ್ಯ ಈ ಫೋಟೋವನ್ನು ದಿವ್ಯಾ ಉರುಡುಗ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು ಸಂತಸ ವ್ಯಕ್ತಪಡಿಸಿದ್ದಾರೆ.

     

    ಫೋಟೋ ಜೊತೆಗೆ, ಸಂತೋಷಮ್ ಸೌತ್ ಇಂಡಿಯನ್ ಫಿಲ್ಮ್ ಅವಾರ್ಡ್ಸ್ ನಲ್ಲಿ ಫೇಸ್ 2 ಫೇಸ್ ಚಲನಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಸ್ವೀಕರಿಸಲು ತುಂಬಾ ಸಂತೋಷವಾಗುತ್ತಿದೆ ಮತ್ತು ರಾಷ್ಟ್ರದ ಹೆಮ್ಮೆಯ ವ್ಯಕ್ತಿಯಿಂದ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇನೆ, ಅವರನ್ನು ನಾನು ಹೆಚ್ಚು ಗೌರವಿಸುತ್ತೇನೆ ಮತ್ತು ಆರಾಧಿಸುತ್ತೇನೆ. ಕೆಪಿ ಅರವಿಂದ್ ಅನೇಕರಿಗೆ ಸ್ಫೂರ್ತಿ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಿಗ್‌ಬಾಸ್ ಲವ್ ಬರ್ಡ್ಸ್ ಭೇಟಿಯಾದ ಶುಭಾ ಪೂಂಜಾ

     

    View this post on Instagram

     

    A post shared by Divya Uruduga (@divya_uruduga)

    ಜೊತೆಗೆ ನನ್ನ ನಿರ್ದೇಶಕ ಜನಾರ್ಧನ್ ಮತ್ತು ನನ್ನ ಸಹನಟರಾದ ರೋಹಿತ್, ಪೂರ್ವಿಜೋಶಿ ಮತ್ತು ಇಡೀ ತಂಡಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನಗೆ ಬೆಂಬಲವಾಗಿ ನಿಂತ ನನ್ನ ಕುಟುಂಬ, ಸ್ನೇಹಿತರು, ಅವಿ ಅವರಿಗೆ ಧನ್ಯವಾದಗಳು ಮತ್ತು ನನಗೆ ಬೆಂಬಲ ನೀಡಿದ ಎಲ್ಲಾ ಅಭಿಮಾನಿಗಳಿಗೆ ಮತ್ತು ಹಿತೈಷಿಗಳಿಗೆ ವಿಶೇಷವಾಗಿ ಧನ್ಯವಾದಗಳು. ನೀವೆಲ್ಲರು ಇಲ್ಲದೇ ಇದು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

  • ಫೇಸ್ ಟು ಫೇಸ್ ಅಖಾಡಕ್ಕಿಳಿಯುವಂತೆ ಮಾಡಿದ್ದ ಅಮ್ಮನ ಅಕ್ಕರೆ!

    ಫೇಸ್ ಟು ಫೇಸ್ ಅಖಾಡಕ್ಕಿಳಿಯುವಂತೆ ಮಾಡಿದ್ದ ಅಮ್ಮನ ಅಕ್ಕರೆ!

    ಬೆಂಗಳೂರು: ಅದೆಂಥಾ ಕನಸೇ ಆಗಿದ್ದರೂ ಸರಿಯಾದ ಪೋಷಣೆ ಸಿಗದಿದ್ದಾಗ ಕಮರಿ ಹೋಗೋ ಅಪಾಯವಿದೆ. ಫೇಸ್ ಟು ಫೇಸ್ ಚಿತ್ರದ ನಿರ್ದೇಶಕ ಸಂದೀಪ್ ಜನಾರ್ಧನ್ ಕೂಡಾ ವರ್ಷಾಂತರಗಳ ಕಾಲ ಸಿನಿಮಾ ನಿರ್ದೇಶನ ಮಾಡಬೇಕೆಂದಿದ್ದ ಕನಸು ಕಮರುವ ಅಂಚಿನಲ್ಲಿದ್ದರು. ಒಂದು ಚೆಂದದ ಕಥೆ ರೆಡಿ ಮಾಡಿಕೊಂಡು, ಎಲ್ಲ ರೂಪುರೇಷೆ ಪಕ್ಕಾ ಇದ್ದರೂ ನಿರ್ಮಾಪಕರನ್ನು ಹುಡುಕೋದೇ ದೊಡ್ಡ ತಲೆ ನೋವಾಗಿತ್ತು.

    ಪ್ರತಿಭಾವಂತ ನಿರ್ದೇಶಕರೆಲ್ಲರೂ ಒಂದಲ್ಲ ಒಂದು ಹಂತದಲ್ಲಿ ಇಂಥಾ ಸ್ಥಿತಿಯನ್ನು ದಾಟಿಕೊಂಡೇ ಬಂದಿರುತ್ತಾರೆ. ನವ ನಿರ್ದೇಶಕರೆಂದ ಮೇಲೆ ನಿರ್ಮಾಪಕರ ಸಮಸ್ಯೆ ಹುಟ್ಟಿಕೊಳ್ಳೋದು ಮಾಮೂಲು. ಅದೆಷ್ಟೋ ವರ್ಷಗಳ ಕಾಲ ನಿರ್ದೇಶನ ವಿಭಾಗದಲ್ಲಿ ಸೈಕಲ್ಲು ಹೊಡೆಯುತ್ತಿದ್ದ ಮಗನ ಒಳತೋಟಿಯನ್ನು ಅರ್ಥ ಮಾಡಿಕೊಂಡು ಸಂದೀಪ್ ಅವರ ತಾಯಿ ಆಗಮಿಸದೇ ಹೋಗಿದ್ದರೆ ಫೇಸ್ ಟು ಫೇಸ್ ಇಷ್ಟು ಬೇಗ ಟೇಕಾಫ್ ಆಗುತ್ತಿರಲಿಲ್ಲ.

    ಹಾಗೆ ಮಗನ ಕನಸಿಗೆ ನಿರ್ಮಾಪಕಿಯಾಗಿ ಒತ್ತಾಸೆಯಾದವರು ಅವರ ತಾಯಿ ಸುಮಿತ್ರಾ ಜನಾರ್ಧನ್. ಇವರ ಪಾಲಿಗೆ ನಿರ್ಮಾಣ ಹೊಸದು. ಆದರೆ ಮಗನ ಮೂಲಕವೇ ಸಿನಿಮಾ ಕ್ಷೇತ್ರವನ್ನು ಪರಿಚಯ ಮಾಡಿಕೊಂಡಿರೋ ಅವರು ಕೂಡಾ ಅಂತಿಮವಾಗಿ ಚಿತ್ರ ಮೂಡಿ ಬಂದಿರೋ ರೀತಿ ಕಂಡು ಖುಷಿಯಾಗಿದ್ದಾರಂತೆ. ಸಂದೀಪ್ ಪಾಲಿಗೆ ಅಮ್ಮನ ಖುಷಿಯಲ್ಲಿಯೇ ಗೆಲುವೊಂದು ಕಣ್ಣು ಮಿಟುಕಿಸಿದಂತೆ ಭಾಸವಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv