Tag: F.I.R.

  • ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಸ್ಪೋಟಕ ಟ್ವಿಸ್ಟ್

    ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಸ್ಪೋಟಕ ಟ್ವಿಸ್ಟ್

    ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagdish) ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ಈ ಕುರಿತಂತೆ ಮನೆಯಲ್ಲಿ ಡೆತ್ ನೋಟ್ ದೊರೆತದ್ದು. ಈ ಡೆತ್ ನೋಟ್ ಆಧರಿಸಿ ಸೌಂದರ್ಯ ಜದೀಶ್ ಅವರ ಬ್ಯುಸಿನೆಸ್ ಪಾರ್ಟನರ್ಸ್ ಮೇಲೆ ಎಫ್ ಐ ಆರ್ ದಾಖಲಾಗಿದೆ. ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ಎಂಬುವರ ಮೇಲೆ ಎಫ್‍್.ಐ.ಆ ರ್ ದಾಖಲಿಸಿದ್ದಾರೆ ಪೊಲೀಸರು.

    ಸೌಂದರ್ಯ ಜಗದೀಶ್ ಮನೆಯಲ್ಲಿ ಕೆಲವೇ ಸಾಲುಗಳು ಬರೆದಿದ್ದ ಡೆತ್ ನೋಟ್ ಪತ್ತೆಯಾಗಿದ್ದು, ಇದರಲ್ಲಿ  ಸೌಂದರ್ಯ ಕನ್ಸ್ಟ್ರಕ್ಷನ್ ಸಂಬಂಧ ಬ್ಯುಸಿನೆಸ್ ಲಾಸ್ ಬಗ್ಗೆ ಮಾಹಿತಿ ಇದೆ. ಸುಮಾರು 60 ಕೋಟಿ ನಷ್ಟವಾಗಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಈ ಡೆತ್ ನೋಟ್ ಅಧರಿಸಿ ಜಗದೀಶ್ ಪತ್ನಿ ಶಶಿರೇಖಾ ರಿಂದ ಮಹಾಲಕ್ಷ್ಮಿ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು.

    ಈ ಕುರಿತಂತೆ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ‘ರಿಸೆಂಟ್ ಆಗಿ ಡೆತ್ ನೋಟ್ ಸಿಕ್ತು.  ನಮ್ಮ ತಂದೆಗೆ ಬ್ಲಾಕ್ ಮೇಲ್ ಮಾಡಿ ಸುರೇಶ್ ಹಾಗೂ ಹೊಂಬಣ್ಣ ಖಾಲಿ ಚೆಕ್ ಗೆ ಸಹಿ ಹಾಕಿಸ್ಕೊಂಡಿದ್ರು. ದುಡ್ಡು ಹೋದ್ರೆ ಹೋಗ್ಲಿ ನಮ್ ತಂದೆನ ಯಾರ್ ತಂದು ಕೊಡ್ತಾರಾ? ನಮ್ ತಂದೆ ಅಂತವ್ರನ್ನೇ ಬೆಂಡ್ ಮಾಡಿದ್ದಾರೆ. ಇನ್ನ ನಮ್ಮನ್ನ ಸುಮ್ನೆ ಬಿಡ್ತಾರಾ ಅಂತಾ ನಮಗೆ ಭಯ ಇದೆ’ ಅಂತಾರೆ. ನಮ್ ತಂದೆ ಸಾವಿಗೆ ನ್ಯಾಯ ಸಿಗೋವರೆಗೂ ಬಿಡೊಲ್ಲ ಅನ್ನುವುದು ಸ್ನೇಹಿತ್ ಮಾತು.

    ಜಗದೀಶ್ ಪತ್ನಿ ಶಶಿರೇಖಾ ಕೂಡ ಈ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ‘ಒಂದು ವಾರದ ಹಿಂದೆ ನಮ್ ತಾಯಿ ತೀರಿಕೊಂಡಿದ್ರು. ಆದ್ಮೇಲೆ ಪತಿ ಹೀಗೆ ಮಾಡ್ಕೊಂಡ್ರು. ಸಡನ್ ಶಾಕ್ ತಡ್ಕೊಳ್ಳೋಕೆ ಆಗ್ಲಿಲ್ಲ. ಇದೇ 29ನೇ ತಾರೀಖು ಶ್ರೀರಂಗ ಪಟ್ಟಣದಲ್ಲಿ  ಅವ್ರ ಪೂಜೆ ಇದೆ. ಅವ್ರ ಹಳೆ ಬಟ್ಟೆ ತಗೊಳ್ಳೋಣ ಅಂತ ವಾರ್ಡ್ ರೋಬ್ ತೆಗೆದೆ. ಆ ಟೈಂನಲ್ಲಿ ಡೆತ್ ನೋಟ್ ಸಿಕ್ತು. ನಮ್ ಯಜಮಾನ್ರ ಸಾವಿಗೆ ಸುರೇಶ್ ಹೊಂಬಣ್ಣನೇ ಕಾರಣ. ಕೊನೆ ಕಾಲ್ ಕೊನೆ ಮೆಸೇಜ್ ಸುರೇಶ್ ದೆ ಬಂದಿದ್ದು. ತುಂಬಾ ಟಾರ್ಚರ್ ಕೊಡ್ತಿದ್ದಾರೆ ಅಂತ ಒಂದೊಂದು ಸಾರಿ ಹೇಳ್ತಿದ್ರು. ನಮ್ ಫ್ಯಾಮಿಲಿ ತುಂಬಾ ಚನ್ನಾಗಿತ್ತು. ಕಂಪ್ಲೇಂಟ್ ಕೊಟ್ಟಿದ್ದೀನಿ. ಕಾನೂನು ರೀತಿ ಹೋರಾಟ ಮಾಡ್ತೀನಿ’ ಅಂದಿದ್ದಾರೆ.

  • ಬಿಗ್ ಬಾಸ್ ವಿನ್ನರ್ ವಿರುದ್ಧ ED ಕೇಸ್ ದಾಖಲು

    ಬಿಗ್ ಬಾಸ್ ವಿನ್ನರ್ ವಿರುದ್ಧ ED ಕೇಸ್ ದಾಖಲು

    ಕ್ರಮವಾಗಿ ಹಣ ಸಾಗಾಣಿಕೆ ವಿಚಾರವಾಗಿ ಬಿಗ್ ಬಾಸ್ ಒಟಿಟಿ ವಿನ್ನರ್ ಎಲ್ವಿಶ್ ಯಾದವ್ (Elvish Yadav) ವಿರುದ್ಧ ಜಾರಿ ನಿರ್ದೇಶನಾಲಯವು (ED) ಕೇಸ್ ದಾಖಲಿಸಿದೆ. ಅಕ್ರಮ ಹಣ ವರ್ಗಾವಣೆ ಕುರಿತಂತೆ ಉತ್ತರ ಪ್ರದೇಶದ ಗೌತಮ್ ಬುದ್ಧನಗರ ಜಿಲ್ಲೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ದಾಖಲಾದ ಎಫ್.ಐ.ಆರ್ (FIR) ಮತ್ತು ಜಾರ್ಜ್ ಶೀಟ್ ಗಳ ಆಧಾರದಲ್ಲಿ ಇಡಿ ಪ್ರಕರಣವನ್ನು ದಾಖಲಿಸಿಕೊಂಡಿದೆ.

    ಈ ಹಿಂದೆ ಎಲ್ವಿಶ್ ಪಾರ್ಟಿಯೊಂದರಲ್ಲಿ ಹಾವಿನ ವಿಷ ಬಳಸಿದ ಪ್ರಕರಣದಲ್ಲಿ ನೋಯ್ಡಾ ಪೊಲೀಸರು ಬಂಧಿಸಿದ್ದರು. ಕೋರ್ಟ್‌ಗೆ ಹಾಜರು ಪಡಿಸಿದ್ದರು. ಪಾರ್ಟಿಯೊಂದರಲ್ಲಿ ಹಾವಿನ ವಿಷ ಬಳಸಿದ ಆರೋಪದ ಮೇಲೆ ಎಲ್ವಿಶ್ ಯಾದವ್ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಇವರ ಗ್ಯಾಂಗ್‌ನ ಐವರು ಸದಸ್ಯರನ್ನು ನೋಯ್ಡಾದಲ್ಲಿ ಬಂಧಿಸಲಾಗಿತ್ತು. ಸೆಕ್ಟರ್ 51ರ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಾವಿನ ವಿಷ ಲಭ್ಯವಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದರು.

    ರೇವ್ ಪಾರ್ಟಿಗಳಲ್ಲಿ ಭಾಗವಹಿಸಿದ್ದ ಕೆಲವರು ಹಾವಿನ ವಿಷವನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ವಿವಿಧ ಸ್ಥಳಗಳಿಂದ ಹಾವುಗಳನ್ನು ಹಿಡಿದು ಅವುಗಳ ವಿಷವನ್ನು ಹೊರತೆಗೆಯುತ್ತಿದ್ದರು, ಎಲ್ವಿಶ್ ಯಾದವ್ ಅವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರು. ಪಾರ್ಟಿಗಳಲ್ಲಿ ವಿಷವನ್ನು ಪೂರೈಸಲು ಅವರು ಭಾರಿ ಮೊತ್ತದ ಹಣವನ್ನು ಸಂಗ್ರಹಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು. ಪೊಲೀಸರು ಸಲ್ಲಿಸಿದ್ದ ಜಾರ್ಜ್ ಶೀಟ್ ನಲ್ಲಿ ಅಕ್ರಮ ಹಣದ ಕುರಿತಂತೆ ಉಲ್ಲೇಖವಾಗಿತ್ತು. ಹಾಗಾಗಿ ಈ ಪ್ರಕರಣಕ್ಕೆ ಇಡಿ ಎಂಟ್ರಿ ಕೊಟ್ಟಿದೆ.

  • ಲೈಂಗಿಕ ಕಿರುಕುಳ ಆರೋಪ: ಧಾರಾವಾಹಿ ನಿರ್ಮಾಪಕನ ಮೇಲೆ ಎಫ್.ಐ.ಆರ್ ದಾಖಲು

    ಲೈಂಗಿಕ ಕಿರುಕುಳ ಆರೋಪ: ಧಾರಾವಾಹಿ ನಿರ್ಮಾಪಕನ ಮೇಲೆ ಎಫ್.ಐ.ಆರ್ ದಾಖಲು

    ಳೆದ ತಿಂಗಳು ಹೆಸರಾಂತ ಧಾರಾವಾಹಿಯ ನಟಿಯೊಬ್ಬರು ಅದೇ ಧಾರಾವಾಹಿಯ ನಿರ್ಮಾಪಕನ (Producer) ವಿರುದ್ಧ ಲೈಂಗಿಕ ಕಿರುಕುಳದ (Sexual Harassment) ಆರೋಪ ಮಾಡಿದ್ದಾರೆ. ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ನಿರ್ಮಾಪಕ ಅಸಿತ್ ಮೋದಿ, ಆಪರೇಷನ್ ಹೆಡ್ ಸೊಹೈಲ್ ರಮಣಿ ಮತ್ತು ಕಾರ್ಯನಿರ್ವಾಹಕ ನಿರ್ಮಾಪಕ ಜತಿನ್ ಬಜಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಮತ್ತು 509ರ ಅಡಿಯಲ್ಲಿ ಎಫ್.ಐ.ಆರ್ (F.I.R) ದಾಖಲಿಸಿದ್ದಾರೆ.

    ಸತತ ಹದಿನೈದು ವರ್ಷಗಳಿಂದ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ’ (Tarak Mehta Ka Ulta Chashma) ಧಾರಾವಾಹಿಯ ನಿರ್ಮಾಪಕ ಅಸಿತ್ ಕುಮಾರ್ ಮೋದಿ (Asit Kumar Modi) ಹಾಗೂ ಮತ್ತಿಬ್ಬರು ತಮಗೆ ಲೈಂಗಿಕ ಕಿರುಕುಳ ಹಾಗೂ ತಮ್ಮೊಂದಿಗೆ ದುರ್ವತನೆ ತೋರಿದ್ದಾರೆ ಎಂದು ನಟಿ ಆರೋಪಿಸಿದ್ದರು. ಇದನ್ನೂ ಓದಿ:ರಾಮ್ ಚರಣ್ ಮಗುವಿಗೆ ‘ನಾಟು ನಾಟು’ ಗಾಯಕನಿಂದ ಸ್ಪೆಷಲ್ ಗಿಫ್ಟ್

    ಈ ಆರೋಪವನ್ನು ನಿರ್ಮಾಪಕಿ ಮೋದಿ ಅಲ್ಲಗಳೆದಿದ್ದು, ತಾವು ಯಾವತ್ತಿಗೂ ಯಾರೊಂದಿಗೆ ಆ ರೀತಿಯಲ್ಲಿ ವರ್ತನೆ ಮಾಡಿಲ್ಲವೆಂದು ಪ್ರತಿಕ್ರಿಯಿಸಿದ್ದಾರೆ. ತಮ್ಮ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ನಟಿ ಮುಂಬೈ ಪೊಲೀಸ್ ಹಾಗೂ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದು, ಆ ಪತ್ರದಲ್ಲಿ ನಿರ್ಮಾಪಕ ಅಸಿತ್ ಕುಮಾರ್ ಮೋದಿ, ಪ್ರಾಜೆಕ್ಟ್ ಹೆಡ್ ಸೋಹಾಲಿ ರೊಮಾನಿ ಹಾಗೂ ಕಾರ್ಯಕಾರಿ ನಿರ್ಮಾಪಕ ಜತಿನ್ ಬಜಾಜ್ ಹೆಸರನ್ನು ಉಲ್ಲೇಖಿಸಿದ್ದಾರೆ.

    ಈ ಧಾರಾವಾಹಿಯಲ್ಲಿ ನಟಿಯು ಮಾರ್ಚ್ 6ರಂದು ಕೊನೆಯ ಬಾರಿಗೆ ನಟಿಸಿದ್ದಾರೆ. ಮಾರ್ಚ್ 7 ರಂದು ಹೋಳಿಹಬ್ಬವಿದ್ದ ಕಾರಣದಿಂದಾಗಿ ಎರಡು ಗಂಟೆಗಳ ಕಾಲ ನಟಿ ಬ್ರೇಕ್ ಕೇಳಿದ್ದರಂತೆ. ಇತರ ನಟರಿಗೆ ಕೊಟ್ಟರೂ ತಮಗೆ ಕೊಡಲಿಲ್ಲ ಎನ್ನುವ ಕಾರಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಹೇಳಲಾಗುತ್ತಿದೆ. ಇದೇ ಕಾರಣದಿಂದಾಗಿ ನಿರ್ಮಾಪಕರಿಗೂ ನಟಿಗೂ ಜಗಳ ಆಗಿತ್ತು. ಅದನ್ನೆ ನೆಪವಾಗಿಟ್ಟುಕೊಂಡು ಲೈಂಗಿಕ ಆರೋಪ ಮಾಡಿದ್ದಾರೆ ಎನ್ನುವುದು ನಿರ್ಮಾಪಕರ ವಾದ.

     

    ಆದರೆ, ಆ ನಟಿ ಹೇಳುವುದು ಬೇರೆ. ಸುಖಾಸುಮ್ಮನೆ ಮೈಮುಟ್ಟಲು ಬರುತ್ತಿದ್ದರಂತೆ. ಸಿಂಗಾಪುರದಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ ರೂಮ್ ಗೆ ಆಹ್ವಾನ ಮಾಡಿದ್ದರಂತೆ. ಇದು ತಮ್ಮ ಅನುಭವ ಮಾತ್ರವಲ್ಲ, ಇತರ ನಟಿಯರಿಗೂ ಈ ರೀತಿ ಆಗಿದೆ ಎಂದು ಹೇಳಿದ್ದಾರೆ. ಈ ನಟಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.

  • ಪ್ರಿಯಾಂಕಾ ಗಾಂಧಿ ಪಿಎ ವಿರುದ್ಧ ಬಿಗ್ ಬಾಸ್ ಮಹಿಳಾ ಸ್ಪರ್ಧಿ ಗಂಭೀರ ಆರೋಪ

    ಪ್ರಿಯಾಂಕಾ ಗಾಂಧಿ ಪಿಎ ವಿರುದ್ಧ ಬಿಗ್ ಬಾಸ್ ಮಹಿಳಾ ಸ್ಪರ್ಧಿ ಗಂಭೀರ ಆರೋಪ

    ಬಿಗ್ ಬಾಸ್ (Bigg Boss) ಹಿಂದಿ ಸೀಸನ್ 16ರ ಟಾಪ್ ಕಂಟೆಸ್ಟಂಟ್ ಅರ್ಚನಾ ಗೌತಮ್ (Archana Gautam) , ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರ ಪಿಎ ಸಂದೀಪ್ ಸಿಂಗ್ (Sandeep Singh) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಅರ್ಚನಾ ಗೌತಮ್, ತಮ್ಮ ಪಕ್ಷದವರ ವಿರುದ್ಧವೇ ಗಂಭೀರ ಆರೋಪ ಮಾಡಿದ್ದು, ಪ್ರಿಯಾಂಕಾ ಅವರ ಪಿಎ ವಿರುದ್ಧ ಎಫ್.ಐ.ಆರ್ ಕೂಡ ದಾಖಲಾಗಿದೆ.

    ಕಾಂಗ್ರೆಸ್ ಸಮಾವೇಶಕ್ಕೆ ಸಂಬಂಧಿಸಿದಂತೆ ಅರ್ಚನಾಗೆ ಭೇಟಿಯಾಗುವಂತೆ ಪ್ರಿಯಾಂಕಾ ಗಾಂಧಿ ಆಹ್ವಾನ ನೀಡಿದ್ದರಂತೆ. ಈ ಆಹ್ವಾನದ ಹಿನ್ನೆಲೆಯಲ್ಲಿ ಅರ್ಚನಾ ರಾಯಪುರಕ್ಕೆ ತೆರಳಿದ್ದಾರೆ. ಪ್ರಿಯಾಂಕಾ ಅವರನ್ನು ಭೇಟಿ ಮಾಡಿಸಲು ಅವರ ಪಿಎಗೆ ಅರ್ಚನಾ ಕೇಳಿಕೊಂಡರಂತೆ. ಅವಕಾಶ ನೀಡಲಿಲ್ಲ ಎಂದು ಅರ್ಚನಾ ಅಸಮಾಧಾನಗೊಂಡಿದ್ದರೆ. ಈ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಪ್ರಿಯಾಂಕಾ ಪಿಎ ಕೆಟ್ಟ ಶಬ್ದಗಳಲ್ಲಿ ನಿಂದಿಸಿದ್ದಾರಂತೆ. ಅಲ್ಲದೇ, ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಅರ್ಚನಾ. ಇದನ್ನೂ ಓದಿ: Exclusive: ʻಯುವ’ ಚಿತ್ರಕ್ಕೆ ಸಪ್ತಮಿ ಗೌಡ ಸೆಲೆಕ್ಟ್ ಆಗಿದ್ದು ಹೇಗೆ?

    ಈ ಕುರಿತು ಅರ್ಚನಾ ತಂದೆ ಗೌತಮ್ ಬುದ್ಧ ದೂರು ನೀಡಿದ್ದು, ಆ ದೂರಿನಲ್ಲಿ ‘ನನ್ನ ಮಗಳ ವಿರುದ್ಧ ಜಾತಿನಿಂದನೆ ಮಾಡಲಾಗಿದೆ. ಕೆಟ್ಟ ಶಬ್ದಗಳಲ್ಲೂ ಸಂದೀಪ್ ಬೈದಿದ್ದಾರೆ. ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಕುರಿತಾಗಿ ಮೀರತ್ ನಲ್ಲಿ ದೂರು ದಾಖಲಿಸಿದ್ದೇವೆ’ ಅಂದಿದ್ದಾರೆ. ದೂರನ್ನು ಸ್ವೀಕರಿಸಿರುವ ಎಸ್‍.ಪಿ ಪಿಯುಷ್ ಸಿಂಗ್ ಎಫ್.ಐ.ಆರ್ ದಾಖಲಿಸಿದ್ದಾರೆ.

    ಅರ್ಚನಾ ಗೌತಮ್ ಒಬ್ಬ ಪ್ರತಿಷ್ಠಿತ ಮಾಡಲ್. ಈಗಾಗಲೇ ಮಿಸ್ ಬಿಕಿನಿ ಇಂಡಿಯಾ, ಮಿಸ್ ಉತ್ತರ ಪ್ರದೇಶ ಕಿರೀಟ ತೊಟ್ಟವರು. ಹಲವು ಚಿತ್ರಗಳಲ್ಲೂ ನಟಿಸಿದ್ದಾರೆ. ಹಿಂದಿ ಬಿಗ್ ಬಾಸ್ ಸೀಸನ್ 16ರಲ್ಲಿ ಟಾಪ್ ಲಿಸ್ಟ್ ನಲ್ಲೂ ಕಾಣಿಸಿಕೊಂಡಿದ್ದರು. ಮೂರನೇ ರನ್ನರ್ ಅಪ್ ಆದವರು. ಅಲ್ಲದೇ, ಮೂರು ವರ್ಷಗಳಿಂದ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. ಕಳೆದ ಬಾರಿ ಉತ್ತರ ಪ್ರದೇಶದಲ್ಲಿ ಚುನಾವಣೆಗೂ ಸ್ಪರ್ಧೆ ಮಾಡಿದ್ದರು.

  • ಮುಂದಿನ ವಾರ ವಿಚಾರಣೆಗೆ ಹಾಜರಾಗುತ್ತೇನೆ: ಪೊಲೀಸ್ ನೋಟಿಸ್ ಗೆ ದುನಿಯಾ ವಿಜಯ್ ಉತ್ತರ

    ಮುಂದಿನ ವಾರ ವಿಚಾರಣೆಗೆ ಹಾಜರಾಗುತ್ತೇನೆ: ಪೊಲೀಸ್ ನೋಟಿಸ್ ಗೆ ದುನಿಯಾ ವಿಜಯ್ ಉತ್ತರ

    ಪಾನಿಪುರಿ ಕಿಟ್ಟಿ ಗಲಾಟೆಗೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಸ್ಟೇಶನ್ ಗೆ ಬರುವಂತೆ ತಿಳಿಸಲಾಗಿತ್ತು. ಆದರೆ, ಈ ವಾರ ನಿಗಧಿತ ಚಿತ್ರೀಕರಣ ಇರುವುದರಿಂದ ಮುಂದಿನ ವಾರ ವಿಚಾರಣೆಗೆ ಬರುವುದಾಗಿ ವಿಜಯ್ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಭೀಮ ಸೇರಿದಂತೆ ಹಲವು ಸಿನಿಮಾಗಳ ಚಿತ್ರೀಕರಣದಲ್ಲಿ ವಿಜಯ್ ಭಾಗಿಯಾಗಿದ್ದಾರೆ. ಹಾಗಾಗಿ ಮುಂದಿನ ವಾರ ವಿಚಾರಣೆಗೆ ಹಾಜರಾಗುವುದಾಗಿ ಅವರು ತಿಳಿಸಿದ್ದಾರೆ.

    ಪಾನಿಪುರಿ ಕಿಟ್ಟಿ ಜೊತೆಗಿನ ಗಲಾಟೆಗೆ ಸಂಬಂಧಿಸಿದಂತೆ ಮೊನ್ನೆಯಷ್ಟೇ ಕಿಟ್ಟಿ ಮೇಲೆ ಎಫ್.ಐ.ಆರ್ ದಾಖಲಾಗಿತ್ತು. ಎಫ್.ಐ.ಆರ್ ದಾಖಲಾಗುತ್ತಿದ್ದಂತೆಯೇ ಕಿಟ್ಟಿ ಪೊಲೀಸ್ ಅಧಿಕಾರಿಯ ಮುಂದೆ ಹಾಜರು ಕೂಡ ಆಗಿದ್ದರು. ಇದೀಗ ಅದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ದುನಿಯಾ ವಿಜಯ್ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದರು. ವಿಚಾರಣೆಗೆ ಹಾಜರಾಗುವಂತೆ ಹೈಗ್ರೌಂಡ್ ಪೊಲೀಸರಿಂದ ನೋಟಿಸ್ ನಲ್ಲಿ ತಿಳಿಸಲಾಗಿದೆ.

    ಪಾನಿಪುರಿ ಕಿಟ್ಟಿ ವಿರುದ್ಧ ದುನಿಯಾ ವಿಜಯ್ ದೂರು ನೀಡಿದ್ದರು. ದೂರುದಾರ ಆಗಿರುವ ಹಿನ್ನೆಲೆಯಲ್ಲಿ ಈ  ನೋಟಿಸ್ ನೀಡಲಾಗಿದೆ. ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ಸೂಚಿಸಲಾಗಿದೆ. ಕಿಟ್ಟಿ ಮತ್ತು ದುನಿಯಾ ವಿಜಯ್ ಆಪ್ತ ಸ್ನೇಹಿತರು ಪ್ರಕರಣವೊಂದರಲ್ಲಿ ಇಬ್ಬರೂ ಬಡಿದಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಸ್ಪರ ಇಬ್ಬರೂ ದೂರು ದಾಖಲಿಸಿದ್ದರು. ಇದನ್ನೂ ಓದಿ: ಪುತ್ರಿ ಐಶ್ವರ್ಯ ಜೊತೆ ತಿರುಪತಿ ದೇವಸ್ಥಾನಕ್ಕೆ ರಜನಿಕಾಂತ್ ಭೇಟಿ

    2018ರಲ್ಲಿ ಬೆಂಗಳೂರಿನ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ದೇಹದಾರ್ಢ್ಯ ಸ್ಪರ್ಧೆ ನಡೆದಿತ್ತು. ಈ ಸಂದರ್ಭದಲ್ಲಿ  ಪಾನಿಪುರಿ ಕಿಟ್ಟಿ ಟೀಂಗೂ ಹಾಗೂ ದುನಿಯಾ ವಿಜಯ್ ಟೀಂ ಗೂ ಗಲಾಟೆ ನಡೆದಿತ್ತು. ಅಂದು ಸ್ಪರ್ಧೆ ಮಾಡಿದ್ದ ಪಾನಿಪುರಿ ಕಿಟ್ಟಿಯ ಸಹೋದರ ಮಾರುತಿ‌ ಗೌಡನನ್ನು ಗಲಾಟೆ ನಂತರ ದುನಿಯಾ ವಿಜಯ್ ಕಾರಿನಲ್ಲಿ ಕರೆದುಕೊಂಡು ಹೋಗಿ, ಹಿಗ್ಗಾ ಮುಗ್ಗ ಥಳಿಸಿದ್ದರು ಎಂದು ಆರೋಪಿಸಲಾಗಿತ್ತು. ನಂತರ ಮಧ್ಯರಾತ್ರಿ ಪೊಲೀಸರ ಕರೆ ಮೇರೆಗೆ ವಾಪಸ್ ಕರೆತಂದಿದ್ದೂ ಬಿಟ್ಟಿದ್ದರು ಎಂದು ಹೇಳಲಾಗಿತ್ತು. ತೀವ್ರ ಥಳಿತಕ್ಕೊಳಗಾಗಿದ್ದ ಮಾರುತಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದಿದ್ದರು.

    Live Tv
    [brid partner=56869869 player=32851 video=960834 autoplay=true]

  • ‘ಸೂಪರ್ ಸ್ಟಾರ್’ ಚಿತ್ರದ ನಿರ್ದೇಶಕನ ಮೇಲೆ ಎಫ್ಐಆರ್ : ಉಪೇಂದ್ರ ಸಹೋದರ ಪುತ್ರನ ಚಿತ್ರ

    ‘ಸೂಪರ್ ಸ್ಟಾರ್’ ಚಿತ್ರದ ನಿರ್ದೇಶಕನ ಮೇಲೆ ಎಫ್ಐಆರ್ : ಉಪೇಂದ್ರ ಸಹೋದರ ಪುತ್ರನ ಚಿತ್ರ

    ಟ ಉಪೇಂದ್ರ ಅವರ ಸಹೋದರನ ಪುತ್ರ ನಿರಂಜನ್ ಸುಧೀಂದ್ರ ನಟನೆಯ ಸೂಪರ್ ಸ್ಟಾರ್ ಚಿತ್ರದ ನಿರ್ದೇಶಕನಿಗೆ ಕಾನೂನು ಸಂಕಷ್ಟ ಎದುರಾಗಿದೆ. ವಂಚನೆ, ಪ್ರಾಣ ಬೆದರಿಕೆಯಂತಹ ಗಂಭೀರ ಪ್ರಕರಣಗಳು ಅವರ ಮೇಲೆ ದಾಖಲಾಗಿದ್ದು, ಈ ಚಿತ್ರದ ನಿರ್ಮಾಪಕರು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೋಟ್ಯಾಂತರ ರೂಪಾಯಿ ವಂಚನೆ ಮತ್ತು ತಮಗೆ ನಿರ್ದೇಶಕರು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ನಿರ್ಮಾಪಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಅಂದುಕೊಂಡಂತೆ ಆಗಿದ್ದರೆ ಸೂಪರ್ ಸ್ಟಾರ್ ಸಿನಿಮಾ ಶೂಟಿಂಗ್ ಮುಗಿಸಿ, ಇಷ್ಟೊತ್ತಿಗೆ ತೆರೆಗೆ ಬರಬೇಕಿತ್ತು. ಆದರೆ, ಚಿತ್ರತಂಡದಲ್ಲಿಯ ಬಿರುಕಿನಿಂದಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತುವಂತಾಗಿದೆ. ಈ ಸಿನಿಮಾದ ನಿರ್ದೇಶಕರು ತಮಗೆ 1 ಕೋಟಿ 10 ಲಕ್ಷ ವಂಚನೆ ಮಾಡಿದ್ದಾರೆ ಎಂದು  ನಿರ್ಮಾಪಕರು ಆರೋಪ ಮಾಡಿದ್ದು, ಸಿನಿಮಾ ಚೆನ್ನಾಗಿ ಓಡುತ್ತೆ ಎಂದು ನಿರ್ಮಾಪಕನಿಗೆ ನಿರ್ದೇಶಕರು ಪ್ರಚೋದನೆ ನೀಡಿದ್ದಾರಂತೆ. ಕಲಾವಿದರಿಗೂ ಹಣ ನೀಡದೆ ಸ್ವಂತಕ್ಕೆ ತಮ್ಮ ಹಣವನ್ನು ನಿರ್ದೇಶಕರು ಬಳಸಿಕೊಂಡಿದ್ದಾರಂತೆ. ನಿರ್ಮಾಪಕನ ಚಿತ್ರವನ್ನ ನಿರ್ಮಾಪಕನಿಗೆ ಗೊತ್ತಿಲ್ಲದೆ ಮಾರಾಟ ಮಾಡಿದ್ದಾರೆ ಎಂದು ನಿರ್ಮಾಪಕರು ಆರೋಪ ಮಾಡಿದ್ದಾರೆ.

    ಈ ಸಿನಿಮಾವನ್ನು ಆರ್.ವೆಂಕಟೇಶ್ ಬಾಬು ನಿರ್ದೇಶನ ಮಾಡಿದ್ದು, ಮೈಲಾರಿ ಎನ್ನುವವರು ನಿರ್ಮಾಣ ಮಾಡಿದ್ದರು. ನಂತರ ಚಿತ್ರತಂಡದಲ್ಲಿ ಹಲವಾರು ಬದಲಾವಣೆಗಳು ಆಗಿ ಸತ್ಯನಾರಾಯಣ ಮತ್ತು ರಮಾದೇವಿ ನಿರ್ಮಾಪಕರಾಗಿ ಬಂದಿದ್ದಾರೆ ಎನ್ನಲಾಗುತ್ತಿದೆ. ಇವರೆಲ್ಲರೂ ಸೇರಿ ತಮಗೆ ವಂಚನೆ ಮಾಡಿದ್ದಾರೆ ಎಂದು ನಿರ್ಮಾಪಕ ಮೈಲಾರಿ ಈ ಮೂವರ ಮೇಲೂ ದೂರು ನೀಡಿದ್ದಾರೆ. ಇದನ್ನೂ ಓದಿ:ಕಾಲಿವುಡ್‌ನತ್ತ ಕನ್ನಡದ ನಟ ಭರತ್ ಭೋಪಣ್ಣ

    ಈ ಸಿನಿಮಾ ಮಾತೃಶ್ರಿ ಎಂಟರ್ ಪ್ರೈಸಸ್ ಬ್ಯಾನರ್ ನಡಿ ಮೈಲಾರಿ ಸೂಪರ್ ಸ್ಟಾರ್ ಚಿತ್ರ ಮಾಡ್ತಿದ್ದರು. ಕೋವಿಡ್ ಹಿನ್ನಲೆ ಚಿತ್ರೀಕರಣ ಸ್ವಲ್ಪ ದಿನ ಸ್ಥಗಿತಗೊಂಡಿತ್ತು. ನಂತರ ಸತ್ಯನಾರಾಯಣ ಎಂಬುವವರ ಜೊತೆ ಸೇರಿ ಚಿತ್ರದ ಮಾಲೀಕತ್ವವನ್ನೇ ಬದಲಿಸಿದ ಆರೋಪ ನಿರ್ದೇಶಕರ ಮೇಲೆ ಕೇಳಿ ಬಂದಿದೆ. ಹೊಸ ನಿರ್ಮಾಪಕರಾಗಿ ರಮಾದೇವಿ ಹಾಗು ಸತ್ಯನಾರಾಯಣ ಅವರನ್ನ ಹಾಕಿಕೊಂಡ ನಿರ್ದೇಶಕ ವೆಂಕಟೇಶ್ ಬಾಬು ಈ ಚಿತ್ರ ಮಾಡಿದ್ದು, ಹಾಕಿದ ಬಂಡವಾಳ ವಾಪಾಸ್ ಕೇಳಲು ಹೋದಾಗ ಪ್ರಾಣಬೆದರಿಕೆ , ಧಮ್ಕಿ ಹಾಕಿದ್ದಾರೆ ಎಂದು ದೂರಿನಲ್ಲಿಉಲ್ಲೇಖವಾಗಿದೆ.

    Live Tv
    [brid partner=56869869 player=32851 video=960834 autoplay=true]