Tag: eyes

  • `ಹೆಬ್ಬುಲಿ’ ನಾಯಕಿ ಅಮಲಾ ಪೌಲ್‍ರಿಂದ ನೇತ್ರದಾನ

    `ಹೆಬ್ಬುಲಿ’ ನಾಯಕಿ ಅಮಲಾ ಪೌಲ್‍ರಿಂದ ನೇತ್ರದಾನ

    ಪುದುಚೇರಿ: ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ.

    ಮಂಗಳವಾರ ನಗರದ ರಾಜೀವ್ ಗಾಂಧಿ ಸಿಗ್ನಲ್ ನಲ್ಲಿರೋ ಡಾ. ಅಗರ್ವಾಲ್ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಿದ ಬಳಿಕ ತಮ್ಮ ಕಣ್ಣುಗಳನ್ನು ದಾನ ಮಾಡುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: `ಹೆಬ್ಬುಲಿ’ ಸಿನಿಮಾದ ನಾಯಕಿ ಅಮಲಾ ಪೌಲ್ ವಿರುದ್ಧ FIR ದಾಖಲು

    “ಪಾಂಡಿಚೇರಿಯಲ್ಲಿ ಹೊಸ ಆಸ್ಪತ್ರೆ ಉದ್ಘಾಟನೆ ಮಾಡುತ್ತಿರುವುದು ನನಗೆ ಖುಷಿ ತಂದಿದೆ. ಈ ಮೂಲಕ ಭಾರತದಲ್ಲಿ ಕುರುಡತನವನ್ನು ನಿರ್ಮೂಲನೆ ಮಾಡಲಾಗುತ್ತಿರುವುದು ಸಂತಸದ ಸಂಗತಿ. ಈ ಸೌಲಭ್ಯ ಎಲ್ಲರಿಗೂ ತಲುಪುತ್ತದೆ ಎಬುವುದಾಗಿ ನಾನು ನಂಬಿದ್ದೇನೆ. ಅಲ್ಲದೇ 50ಕ್ಕೂ ಹೆಚ್ಚು ಮಂದಿಗೆ ಉಚಿತ ಕಣ್ಣಿನ ಸರ್ಜರಿ ಮಾಡಿದ ಈ ಆಸ್ಪತ್ರೆಗೆ ಧನ್ಯವಾದ ಹೇಳಲು ಬಯಸುತ್ತೇನೆ” ಅಂತಾ ತಮ್ಮ ಉದ್ಘಾಟನಾ ಭಾಷಣದಲ್ಲಿ ತಿಳಿಸಿದ್ದಾರೆ.

    ಈ ಹಿಂದೆ ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್, ಅಮಿರ್ ಖಾನ್, ಪ್ರಿಯಾಂಕ ಚೋಪ್ರಾ, ಐಶ್ವರ್ಯ ರೈ ಸೇರಿದಂತೆ ಹಲವು ನಟ-ನಟಿಯರು ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ. ಇದನ್ನೂ ಓದಿ: ನಟಿ ಅಮಲಾ ಪೌಲ್ – ವಿಜಯ್ ವಿಚ್ಛೇದನಕ್ಕೆ ಕೋರ್ಟ್ ಅಸ್ತು

    ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾ ಮಾಡಿದ್ದ ಅಮಲಾ ಪೌಲ್ ಅವರು `ಹೆಬ್ಬುಲಿ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಹೆಬ್ಬುಲಿಯಲ್ಲಿ ಕಿಚ್ಚ ಸುದೀಪ್ ಅವರಿಗೆ ನಾಯಕಿಯಾಗಿ ಅಭಿನಯಿಸಿದ್ದರು.

  • ಮಾಲೀಕನ ಹೆಂಡ್ತಿ ಜೊತೆ ಓಡಿಹೋಗಿದ್ದಕ್ಕೆ ವ್ಯಕ್ತಿಯ ಕಣ್ಣುಗಳಿಗೆ ಆ್ಯಸಿಡ್ ಇಂಜೆಕ್ಟ್ ಮಾಡಿದ್ರು!

    ಮಾಲೀಕನ ಹೆಂಡ್ತಿ ಜೊತೆ ಓಡಿಹೋಗಿದ್ದಕ್ಕೆ ವ್ಯಕ್ತಿಯ ಕಣ್ಣುಗಳಿಗೆ ಆ್ಯಸಿಡ್ ಇಂಜೆಕ್ಟ್ ಮಾಡಿದ್ರು!

    ಪಾಟ್ನಾ: ಕೆಲಸದ ಮಾಲೀಕನ ಹೆಂಡತಿ ಜೊತೆ ಓಡಿಹೋಗಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ಥಳಿಸಿ ಆತನ ಕಣ್ಣುಗಳಿಗೆ ಆ್ಯಸಿಡ್ ಇಂಜೆಕ್ಷನ್ ನೀಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ಇಲ್ಲಿನ ಪಿಪ್ರಾ ಚೌಕ್‍ನ ಉಪಹಾರಗೃಹವೊಂದರಲ್ಲಿ ಕಳೆದ ರಾತ್ರಿ ವ್ಯಕ್ತಿಯ ಮೇಲೆ ದಾಳಿ ನಡೆದಿದೆ. ವೃತ್ತಿಯಲ್ಲಿ ಚಾಲಕನಾಗಿರೋ 30 ವರ್ಷದ ವ್ಯಕ್ತಿಯ ಕಣ್ಣುಗಳಿಗೆ ಆ್ಯಸಿಡ್ ಇಂಜೆಕ್ಷನ್ ನೀಡಿದ್ರಿಂದ ಈಗ ಆತ ತನ್ನ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ಡಿಎಸ್‍ಪಿ ಬಿಕೆ ಸಿಂಗ್ ಹೇಳಿದ್ದಾರೆ.

    ಸಂತ್ರಸ್ತ ವ್ಯಕ್ತಿ ಮೂಲತಃ ಸಮಷ್ಟಿಪುರದವನು ಎಂದು ವರದಿಯಾಗಿದೆ. ನಾನು ತೇಗ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಬರೌನಿ ಗ್ರಾಮದಲ್ಲಿ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದೆ. ಅಲ್ಲಿ ಮಾಲೀಕನ ಹೆಂಡತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

    ಸಾಂದರ್ಭಿಕ ಚಿತ್ರ

    ಫೆಬ್ರವರಿ 6ರಂದು ಚಾಲಕ ತನ್ನ ಪ್ರಿಯತಮೆಯೊಂದಿಗೆ ಮನೆ ಬಿಟ್ಟು ಓಡಿಹೋಗಿದ್ದ. ಬಳಿಕ ಮಹಿಳೆಯ ಗಂಡ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು ಎಂದು ಡಿಎಸ್‍ಪಿ ಹೇಳಿದ್ದಾರೆ.

    ನಂತರ ಫೆಬ್ರವರಿ 16ರಂದು ಮಹಿಳೆ ತೇಗ್ರಾಗೆ ವಾಪಸ್ ಬಂದು ಸ್ಥಳೀಯ ಕೋರ್ಟ್‍ನಲ್ಲಿ ಆಕೆಯ ಹೇಳಿಕೆ ದಾಖಲಿಸಲಾಗಿತ್ತು. ಹೆಂಡತಿಯನ್ನ ಮನೆಗೆ ಕರೆದುಕೊಂಡು ಹೋಗುವಂತೆ ಕೋರ್ಟ್ ಮಹಿಳೆಯ ಗಂಡನಿಗೆ ಹೇಳಿತ್ತು. ಮಹಿಳೆ ಇದ್ದಕ್ಕಿದ್ದಂತೆ ವಾಪಸ್ ಬಂದಿದ್ದೇಕೆ ಹಾಗೂ ಆಕೆ ಕೋರ್ಟ್‍ನಲ್ಲಿ ನೀಡಿದ ಹೇಳಿಕೆ ಏನು ಎಂಬುದು ಸ್ಪಷ್ಟವಾಗಿಲ್ಲ.

    ಕಳೆದ ಸಂಜೆ ಮಹಿಳೆಯ ಸಂಬಂಧಿ ಚಾಲಕನಿಗೆ ಕರೆ ಮಾಡಿದ್ದು, ಮಹಿಳೆ ನಿನ್ನೊಂದಿಗೆ ಜೀವನ ನಡೆಸಲು ಬಯಸಿದ್ದಾಳೆ. ತೇಗ್ರಾ ಪೊಲೀಸ್ ಠಾಣೆಗೆ ಬಂದು ಆಕೆಯನ್ನ ಕರೆದುಕೊಂಡು ಹೋಗು ಅಂತ ಹೇಳಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸ್ ಠಾಣೆಗೆ ಸುಮಾರು 1 ಕಿ.ಮೀ ದೂರದಲ್ಲೇ 20 ಜನರ ತಂಡ ಚಲಕನನ್ನು ತಡೆದಿದ್ದು, ಉಪಹಾರಗೃಹಕ್ಕೆ ಕರೆದುಕೊಂಡು ಹೋಗಿ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಆತನ ಕಣ್ಣುಗಳಿಗೆ ಸಿರಿಂಜ್‍ನಿಂದ ಆ್ಯಸಿಡ್ ಇಂಜೆಕ್ಟ್ ಮಾಡಿದ್ದಾರೆ ಎಂದು ಡಿಎಸ್‍ಪಿ ತಿಳಿಸಿದ್ದಾರೆ.

    ಬಳಿಕ ಚಾಲಕನನ್ನು ಭಗವಾನ್‍ಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಹನಮಾನ್ ಚೌಕ್ ಬಳಿ ಎಸೆದು ಹೋಗಿದ್ದಾರೆ. ದಾರಿಹೋಕರೊಬ್ಬರು ಚಾಲಕನನ್ನ ಬೇಗುಸಾರೈನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.