ಬೆಂಗಳೂರು: ಆಟದ ಮೈದಾನದಲ್ಲಿ ಗೇಟ್ ಮುರಿದು ಮೈಮೇಲೆ ಬಿದ್ದು ಸಾವನ್ನಪ್ಪಿದ ಬಾಲಕನ ನೇತ್ರದಾನಕ್ಕೆ ಪೋಷಕರು ಮುಂದಾಗಿದ್ದಾರೆ. ಪುತ್ರನ ಸಾವಿನ ನೋವಿನಲ್ಲೂ ಪೋಷಕರು ಮಾನವೀಯತೆ ಮೆರೆದಿದ್ದಾರೆ.
ಮೃತ ನಿರಂಜನ್ ಕಣ್ಣುಗಳನ್ನು ಲಯನ್ಸ್ ಇಂಟರ್‌ನ್ಯಾಷನಲ್ ಐ ಬ್ಯಾಂಕ್‌ಗೆ ದಾನ ಮಾಡಲು ಆತನ ತಂದೆ ವಿಜಯ್ ಪವಾರ್ ಮುಂದಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗುವುದು. ಇದನ್ನೂ ಓದಿ: ಬೆಂಗಳೂರಲ್ಲಿ ಮೈದಾನದ ಗೇಟ್ ಬಿದ್ದು ಬಾಲಕ ದುರ್ಮರಣ
ಮೃತ ಬಾಲಕನ ತಂದೆ ಸ್ನೇಹಿತ ಮಾತನಾಡಿ, ನಿರಂಜನ್ ಕಳೆದುಕೊಂಡು ಅವರ ತಂದೆ ದುಃಖದಲ್ಲಿದ್ದಾರೆ. ನಿನ್ನೆ ಸಚಿವ ದಿನೇಶ್ ಗುಂಡೂರಾವ್ ಅವರು ಬಾಲಕನ ಪೋಷಕರನ್ನು ಭೇಟಿ ಮಾಡಿ ಸಂತೈಸಿದ್ದಾರೆ. ನಾವು ನಿರಂಜನ್‌ನನ್ನು ಕಳೆದುಕೊಂಡಿದ್ದೇವೆ. ಬೇರೆಯವರಿಗೆ ಉಪಯೋಗವಾಗಲಿ ಎಂದು ಆತನ ಕಣ್ಣುಗಳನ್ನು ದಾನ ಮಾಡಲು ಬಾಲಕನ ಪೋಷಕರು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮೈದಾನದ ಗೇಟ್ ಮುರಿದು ತಲೆಗೆ ಬಿದ್ದು ಬಾಲಕ ಸಾವಿಗೀಡಾದ ಘಟನೆ ಮಲ್ಲೇಶ್ವರಂ ಬಿಬಿಎಂಪಿ ಗ್ರೌಂಡ್‌ನಲ್ಲಿ ಭಾನುವಾರ ನಡೆದಿತ್ತು. ಘಟನೆಯಲ್ಲಿ ನಿರಂಜನ್ (10) ಮೃತಪಟ್ಟಿದ್ದ. ಆಟ ಆಡಲು ಬಾಲಕ ಮೈದಾನಕ್ಕೆ ಬಂದಿದ್ದ. ಈ ವೇಳೆ ಬಾಲಕ ಗೇಟ್ ಬಳಿಯೇ ನಿಂತಿದ್ದ. ಗೇಟ್ ತೆರೆಯುತ್ತಿದ್ದಂತೆ ಆತನ ತಲೆ ಮೇಲೆ ಮುರಿದು ಬಿದ್ದಿತ್ತು. ಪರಿಣಾಮವಾಗಿ ತಲೆಗೆ ತೀವ್ರ ಗಾಯವಾಗಿ ಬಾಲಕ ಮೃತಪಟ್ಟಿದ್ದ. ಇದನ್ನೂ ಓದಿ: ಬೆಂಗಳೂರಲ್ಲಿ ಮಹಿಳೆಯ ಬರ್ಬರ ಹತ್ಯೆ- ಪಶ್ಚಿಮ ಬಂಗಾಳದಲ್ಲಿ ಹಂತಕ ತಲೆಮರೆಸಿಕೊಂಡಿರೋ ಶಂಕೆ
ಯಶ್ ನಟನೆಯ ಕಿರಾತಕ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಖಳನಟರಾಗಿ ನಟಿಸಿರುವ ಡೇನಿಯಲ್ ಬಾಲಾಜಿ ಅವರ ಕಣ್ಣುಗಳನ್ನು ದಾನ ಮಾಡಲು ಅವರ ಕುಟುಂಬ ನಿರ್ಧರಿಸಿದೆ. ಕಣ್ಣುದಾನ ಮಾಡಬೇಕು ಎನ್ನುವುದು ನಟನ ಅಪೇಕ್ಷೆ ಕೂಡ ಆಗಿತ್ತಂತೆ. ಹಾಗಾಗಿ ಬಾಲಾಜಿ ನಿಧನಾ ನಂತರ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ.
ನಟ ಡೇನಿಯಲ್ ಬಾಲಾಜಿ ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪ್ರಮುಖವಾಗಿ ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿದ್ದ ನಟ ಡೇನಿಯಲ್ ಬಾಲಾಜಿ ನಿನ್ನೆ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎದೆನೋವಿನಿಂದ ಬಳಲುತ್ತಿದ್ದ ನಟನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂದು ವರದಿಯಾಗಿದೆ.
48 ವರ್ಷದ ನಟನ ಹಠಾತ್ ಸಾವು ತಮಿಳು ಚಿತ್ರರಂಗ ಮತ್ತು ಅವರ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದೆ. ಬಾಲಾಜಿ ಅವರ ನಿಧನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಲಾಗುತ್ತಿದೆ. ಡೇನಿಯಲ್ ಬಾಲಾಜಿ ಅವರು ಕಮಲ್ ಹಾಸನ್ ಅವರ ಅಪೂರ್ಣ ‘ಮರುದುನಾಯಗಂ’ನಲ್ಲಿ ಯುನಿಟ್ ಪ್ರೊಡಕ್ಷನ್ ಮ್ಯಾನೇಜರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು ರಾಧಿಕಾ ಶರತ್‌ಕುಮಾರ್ ಅವರ ‘ಚಿತ್ತಿ’ ಯೊಂದಿಗೆ ದೂರದರ್ಶನಕ್ಕೆ ತೆರಳಿದರು. ಅಲ್ಲಿನ ಪಾತ್ರದ ಮೂಲಕ ಡೇನಿಯಲ್ ಎಂದು ಜನಪ್ರಿಯತೆ ಗಳಿಸಿದರು.
‘ಕಾಕ್ಕ ಕಾಕ್ಕ’ ಮತ್ತು ‘ವೆಟ್ಟಾಯಡು ವಿಲಾಯಡು’ ಚಿತ್ರಗಳಲ್ಲಿನ ಮರೆಯಲಾಗದ ನಟನೆಯು ಸಿನಿ ಜಗತ್ತಿನಲ್ಲಿ ಅವರ ಜನಪ್ರಿಯತೆಗೆ ಕಾರಣವಾಯಿತು. ನಟ ಡೇನಿಯಲ್ ಬಾಲಾಜಿ ಅವರು ಮಲಯಾಳಂ, ತೆಲುಗು ಮತ್ತು ಕನ್ನಡ ಚಲನಚಿತ್ರಗಳಲ್ಲೂ ನಟಿಸಿದ್ದಾರೆ. ಅವರು ಅಭಿನಯಿಸಿದ ಕೊನೆಯ ಚಿತ್ರ ‘ಅರಿಯವನ್’.
ಚಿಕ್ಕಬಳ್ಳಾಪುರ: ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಎಪಿಎಂಸಿ ಬಳಿ ಕಳೆದ ಗುರುವಾರ ಸಂಭವಿಸಿದ್ದ ಅಪಘಾತದಲ್ಲಿ (Accident) ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಕುಟುಂಬಸ್ಥರು ಸಾವಿನ ನೋವಿನಲ್ಲೂ ಆಕೆಯ ಕಣ್ಣುಗಳನ್ನು ದಾನ (Eye Donation) ಮಾಡುವ ಮೂಲಕ ಮಾನವೀಯತೆ, ಸಾರ್ಥಕತೆ ಭಾವ ಮೆರೆದಿದ್ದಾರೆ.
ಆಗಸ್ಟ್ 10ರಂದು ಮಗಳನ್ನು ಶಾಲೆಗೆ ಬಿಡಲು ಬೈಕ್‌ನಲ್ಲಿ ಹೊರಟಿದ್ದ ಮುದ್ದನಾಯಕನಹಳ್ಳಿ ನಿವಾಸಿ ವೆಂಕಟೇಶ್ (42) ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮಗಳು ಯಶಸ್ವಿನಿಗೆ (16) ಬೆಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ 6 ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಶಸ್ವಿನಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಕೊನೆಯುಸಿರೆಳಿದ್ದಾಳೆ. ಇದನ್ನೂ ಓದಿ: ಬಿಎಂಟಿಸಿ ಬಸ್ ಹರಿದು 4ರ ಬಾಲಕಿ ಸಾವು
ಕಳೆದ ಗುರುವಾರ ದಾಬಸ್‌ಪೇಟೆ ಕಡೆಯಿಂದ ಬಂದ ಟಿಪ್ಪರ್ ಎದುರುಗಡೆಯಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಟಿಪ್ಪರ್ ಚಕ್ರಕ್ಕೆ ಸಿಕ್ಕಿ ಸ್ಥಳದಲ್ಲೇ ವೆಂಕಟೇಶ್ ಮೃತಪಟ್ಟಿದ್ದರು. ಮುಂಬದಿ ಚಕ್ರಕ್ಕೆ ಸಿಲುಕಿದ ಯಶಸ್ವಿನಿಯ ಕೈ ತುಂಡಾಗಿತ್ತು. ನಗರದ ರಂಗಪ್ಪ ವೃತ್ತದಲ್ಲಿನ ಖಾಸಗಿ ಡ್ರೈವಿಂಗ್ ಶಾಲೆಯಲ್ಲಿ ವಾಹನ ತರಬೇತುದಾರರಾಗಿದ್ದ ವೆಂಕಟೇಶ್ ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. ಬಸವಭವನ ಸಮೀಪದ ಖಾಸಗಿ ಶಾಲೆಗೆ ಮಗಳನ್ನು ಪ್ರತಿದಿನ ಅವರೇ ಬೈಕ್‌ನಲ್ಲಿ ಬಿಟ್ಟು, ಕರೆತರುತ್ತಿದ್ದರು. ಇದನ್ನೂ ಓದಿ: ಗೆಳೆಯನಿಗಾಗಿ ಆತನ ಮಗನನ್ನೇ ಕೊಂದು ಮಂಚದಡಿಯಲ್ಲಿ ಬಚ್ಚಿಟ್ಟಳು!
ಅಪಘಾತದ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಧಿಕಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಲಕಿಯ ಒಂದು ಕೈ ತುಂಡಾಗಿ ರಸ್ತೆಯಲ್ಲಿ ಬಿದ್ದಿದ್ದು, ಲಾರಿ ಚಕ್ರದ ಅಡಿಯಲ್ಲಿ ಸಿಲುಕಿರುವ ಬಾಲಕಿಯ ಆಕ್ರಂದನದ ದೃಶ್ಯಗಳು ಮನಕಲುಕುವಂತಿತ್ತು. ಯಶಸ್ವಿನಿ ಗುಣಮುಖರಾಗಲೆಂದು ತಾಲೂಕಿನ ಜನತೆ ನೆರವು ನೀಡಿ, ಪ್ರಾರ್ಥನೆ ಸಲ್ಲಿಸಿದ್ದರು. ಆದರೆ, ಪ್ರಾರ್ಥನೆ ಫಲಿಸದೆ ಯಶಸ್ವಿನಿ ಇದೀಗ ಚಿರನಿದ್ರೆಗೆ ಜಾರಿದ್ದಾಳೆ. ಇದನ್ನೂ ಓದಿ: ಎದೆ ಹಾಲು ಕುಡಿದು ಮಲಗಿದ್ದ 3 ತಿಂಗಳ ಪುಟ್ಟ ಕಂದಮ್ಮ ದುರ್ಮರಣ
ವರನಟ ಡಾ.ರಾಜ್ ಕುಮಾರ್ (Dr. Rajkumar) ಕುಟುಂಬದೊಂದಿಗೆ ಆತ್ಮೀಯ ಬಾಂಧವ್ಯ ಇಟ್ಟುಕೊಂಡಿದ್ದರು ನಿರ್ದೇಶಕ ಎಸ್.ಕೆ.ಭಗವಾನ್ (Bhagavan). ಅಣ್ಣಾವ್ರು ಎಲ್ಲಿರುತ್ತಿದ್ದರೋ ಅಲ್ಲಿ ಭಗವಾನ್ ಇರಲೇಬೇಕಿತ್ತು. ಅಷ್ಟರ ಮಟ್ಟಿಗೆ ಡಾ.ರಾಜ್ ಕುಮಾರ್ ಜೊತೆ ಭಗವಾನ್ ಹೊಂದಿಕೊಂಡಿದ್ದರು. ಇದೀಗ ಭಗವಾನ್ ಅವರು ಅಣ್ಣಾವ್ರ ಹಾದಿಯನ್ನೇ ತುಳಿದಿದ್ದಾರೆ. ಡಾ.ರಾಜ್ ಕುಮಾರ್, ಪುನೀತ್ ರಾಜಕುಮಾರ್ (Puneeth Rajkumar) ರೀತಿಯಲ್ಲೇ ಭಗವಾನ್ ಕೂಡ ನೇತ್ರದಾನ (eye donation) ಮಾಡಿದ್ದಾರೆ.
ರಾಜಕುಮಾರ್ ಅವರು ನೇತ್ರದಾನಕ್ಕೆ ನೋಂದಣಿ ಮಾಡಿಸಿದ ಸಂದರ್ಭದಲ್ಲೇ ಭಗವಾನ್ ಕೂಡ ತಮ್ಮ ಹೆಸರನ್ನು ನೋಂದಾಯಿಸಿದ್ದರಂತೆ. ಹಾಗಾಗಿ ಇಂದು ಅವರ ಮರಣಾನಂತರ ಕಣ್ಣಿನ ಕಾರ್ನಿಯಾವನ್ನು ತೆಗೆಯಲಾಗಿದೆ. ನಾರಾಯಣ ನೇತ್ರಾಲಯದ ಐ ಬ್ಯಾಂಕ್ ಮ್ಯಾನೇಜರ್ ವೀರೇಶ್ ಕಣ್ಣು ತೆಗೆದ ನಂತರ ಮಾತನಾಡಿ, ‘ಭಗವಾನ್ ಅವರ ಕಾರ್ನಿಯಾ ಆರೋಗ್ಯವಾಗಿದೆ. ಕಣ್ಣಿಗೆ ಯಾವುದೇ ಸಮಸ್ಯೆ ಇರಲಿಲ್ಲವಾದ್ದರಿಂದ ನಾಲ್ಕೈದು ಜನರಿಗೆ ದೃಷ್ಟಿ ಸಿಗಬಹುದು’ ಎಂದಿದ್ದಾರೆ. ಇದನ್ನೂ ಓದಿ:ನಟ ನಂದಮೂರಿ ತಾರಕ ರತ್ನ ಇನ್ನಿಲ್ಲ
1966ರಲ್ಲಿ ತೆರೆಕಂಡ ಸಂಧ್ಯಾರಾಗ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ಭಡ್ತಿ ಪಡೆದ ಭಗವಾನ್, ನಂತರ ನಿರ್ದೇಶಕ ದೊರೈರಾಜ್ ಜೊತೆಗೂಡಿ ಸ್ವತಂತ್ರ ನಿರ್ದೇಶಕರಾದವರು. 1993ರಲ್ಲಿ ದೊರೈರಾಜ್ ನಿಧನದ ನಂತರ ಒಂಟಿಯಾದರು ಭಗವಾನ್. ಬರೋಬ್ಬರಿ 49 ಸಿನಿಮಾಗಳನ್ನು ಈ ಜೋಡಿ ನಿರ್ದೇಶನ ಮಾಡಿದ್ದು ವಿಶೇಷ. ಈ ಜೋಡಿಯ ಮತ್ತೊಂದು ದಾಖಲೆಯೆಂದರೆ 24 ಕಾದಂಬರಿ ಆಧರಿಸಿದ ಸಿನಿಮಾಗಳನ್ನು ಈ ಜೋಡಿ ನಿರ್ದೇಶನ ಮಾಡಿದೆ.
ಕನ್ನಡದ ಅಷ್ಟೂ ಸೂಪರ್ ಸ್ಟಾರ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ ಹೆಗ್ಗಳಿಕೆ ಈ ಜೋಡಿಯದ್ದು. ಜೇಡರ ಬಲೆ, ಕಸ್ತೂರಿ ನಿವಾಸ, ಎರಡು ಕನಸು, ಬಯಲು ದಾರಿ, ಗಿರಿಕನ್ಯೆ, ಚಂದನದ ಗೊಂಬೆ, ಜೀವನ ಚೈತ್ರ, ಒಡಹುಟ್ಟಿದವರು, ಯಾರಿವನು, ಮುನಿಯನ ಮಾದರಿ ಹೀಗೆ ಅಷ್ಟೂ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.
LIVE TV
[brid partner=56869869 player=32851 video=960834 autoplay=true]
ಚಿಕ್ಕಮಗಳೂರು: ಹೃದಯಾಘಾತದಿಂದ (Heart Attack) 9ನೇ ತರಗತಿಯ ಬಾಲಕಿ (School Girl) ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ. ಬಾಲಕಿ ಸಾವನ್ನಪ್ಪುತ್ತಿದ್ದಂತೆ ಆಕೆಯ ಪೋಷಕರು ಕೂಡಲೇ ಆಕೆಯ ಕಣ್ಣುಗಳನ್ನು ದಾನ (Eye Donation) ಮಾಡಲು ಮುಂದಾಗಿದ್ದಾರೆ.
ಮೃತ ವಿದ್ಯಾರ್ಥಿನಿಯನ್ನು ವೈಷ್ಣವಿ (14) ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ 7:30ರ ಸುಮಾರಿಗೆ ಬಾಲಕಿ ಸಾವನ್ನಪ್ಪಿದ್ದು, ಆಕೆಯ ನೇತ್ರದಾನ ವಿಚಾರವನ್ನು ಸ್ಥಳೀಯರು ಚಿಕ್ಕಮಗಳೂರು (Chikkamagaluru) ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಅಧಿಕಾರಿಗಳು ಬರುತ್ತೇವೆ, ಬರುತ್ತೇವೆ ಎಂದು ಹೇಳಿ ರಾತ್ರಿ 12 ಗಂಟೆಯಾದರೂ ಸ್ಥಳವನ್ನು ತಲುಪಿಲ್ಲ.
ಮೃತ ವೈಷ್ಣವಿ ಪೋಷಕರು ಮಗಳ ಸಾವಿನ ನೋವಿನಲ್ಲೂ ಕಣ್ಣುಗಳನ್ನು ದಾನ ಮಾಡಿ, ಮತ್ತೊಬ್ಬರ ದೇಹ ಸೇರಿ ಜಗತ್ತನ್ನು ನೋಡಲು ಕಾರಣಕರ್ತರಾಗಿ, ಸಾರ್ಥಕತೆ ಮೆರೆದಿದ್ದಾರೆ. ಮೃತ ಬಾಲಕಿಯ ಕುಟುಂಬದವರು ಮೂಲತಃ ಉತ್ತರ ಭಾರತದವರಾಗಿದ್ದು, ಆಕೆಯ ಪೋಷಕರು ಮೂಡಿಗೆಯಲ್ಲಿ ಬದುಕು ಕಟ್ಟಿಕೊಂಡಿದ್ದರು. ಬಾಲಕಿಯ ಮೃತದೇಹವನ್ನು ತಮ್ಮ ಊರಿಗೆ ಕೊಂಡೊಯ್ದಿದ್ದಾರೆ. ಇದನ್ನೂ ಓದಿ: 50ಕ್ಕೂ ಹೆಚ್ಚು ಜನರನ್ನು ಹೊತ್ತು ಹಳ್ಳದಾಟುತ್ತಿದ್ದಾಗ ಸಿಲುಕಿದ ಲಾರಿ
Live Tv
[brid partner=56869869 player=32851 video=960834 autoplay=true]
ಇಂದು ಬೆಳಗ್ಗೆ ನಿಧನರಾದ ಹಾಸ್ಯ ನಟ ಮೋಹನ್ ಜುನೇಜ ಅವರ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮರೆದಿದ್ದಾರೆ ಮೋಹನ್ ಕುಟುಂಬ. ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರನ್ನು ಪ್ರೇರಣೆಯಾಗಿ ತಗೆದುಕೊಂಡಿದ್ದ ಇವರು, ನೇತ್ರದಾನಕ್ಕೆ ಒಲವು ತೋರಿದ್ದರಂತೆ. ಹಾಗಾಗಿ ಮೋಹನ್ ಅವರ ಕಣ್ಣುಗಳನ್ನು ದಾನ ಮಾಡುವ ಮೂಲಕ ಅವರ ಆಸೆಯನ್ನು ಕುಟುಂಬ ಈಡೇರಿಸಿದೆ. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?
ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಈ ಅನಾರೋಗ್ಯದ ನಡುವೆಯೂ ಅವರು ಉಪೇಂದ್ರ ನಟನೆಯ ಕಬ್ಜ ಸೇರಿದಂತೆ ನಾಲ್ಕೈದು ಚಿತ್ರಗಳಲ್ಲಿ ನಟಿಸುತ್ತಿದ್ದರು. ಜೀ ಕನ್ನಡ ವಾಹಿನಿಯ ಹೆಸರಾಂತ ಧಾರಾವಾಹಿ ಹಿಟ್ಲರ್ ಕಲ್ಯಾಣದಲ್ಲೂ ಅವರು ಪಾತ್ರ ನಿರ್ವಹಿಸುತ್ತಿದ್ದರು. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್
ಕೆಜಿಎಫ್ ಚಾಪ್ಟರ್ ಒಂದು ಮತ್ತು ಎರಡರಲ್ಲೂ ಮೋಹನ್ ಜುನೇಜಾ ವಿಶೇಷ ಪಾತ್ರ ಮಾಡಿದ್ದರು. ಹಾಗಾಗಿ ಹೊಂಬಾಳೆ ಫಿಲ್ಮಸ್ ಮನೋಜ್ ಸೇವೆಯನ್ನು ನೆನಪಿಸಿಕೊಂಡಿದೆ. ‘ಕನ್ನಡದ ಖ್ಯಾತ ಹಾಸ್ಯ ನಟರಾದ ಮೋಹನ್ ಜುನೇಜಾ ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಮ್ಮ ಕೆಜಿಎಫ್ ಚಿತ್ರತಂಡದ ಜತೆಗಿನ ಅವರ ಅವಿನಾಭಾವ ಸಂಬಂಧ ಮರೆಯಲಾರೆವು’ ಎಂದು ಟ್ವಿಟ್ ಮಾಡಿದೆ. ಇದನ್ನೂ ಓದಿ : ಹೆಸರಾಂತ ಹಾಸ್ಯ ಕಲಾವಿದ ಮೋಹನ್ ಜೂನೇಜ ಇನ್ನಿಲ್ಲ
ವಾಲ್ ಪೋಸ್ಟರ್ ಸಿನಿಮಾದ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ಅವರು ಗಣೇಶ್ ನಟನೆಯ ಚೆಲ್ಲಾಟ ಚಿತ್ರದಿಂದ ಫೇಮಸ್ ಆದರು. ಜೋಗಿ, ಕಬ್ಜ, ಜೇಮ್ಸ್ ಹೀಗೆ ಐನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ ಕೆಜಿಎಫ್ ಚಿತ್ರದಲ್ಲೂ ಅವರು ಗುರುತಿಸಿಕೊಳ್ಳುವಂತಹ ಪಾತ್ರ ಮಾಡಿದ್ದರು. ಕಿರುತೆರೆ ಮತ್ತು ಸಿನಿಮಾ ಎರಡೂ ರಂಗದಲ್ಲೂ ಸಕ್ರೀಯರಾಗಿದ್ದರು.
ಕಾರವಾರ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನದ ಬಳಿಕ ತಮ್ಮ ಕಣ್ಣುಗಳನ್ನು ದಾನ ಮಾಡಿ ಅಂದರ ಬಾಳಿಗೆ ಬೆಳಕಾಗಿದ್ದಾರೆ. ಈ ಸಮಾಜಮುಖಿ ಕಾರ್ಯದಿಂದ ಅಭಿಮಾನಿಗಳು ಅವರ ಹಾದಿಯಲ್ಲೇ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾದರಿಯಾಗುತ್ತಿದ್ದಾರೆ. ಇದೀಗ ನವದಂಪತಿ ಪುನೀತ್ ಹೆಸರಿನಲ್ಲಿ ನೇತ್ರ ದಾನ ಮಾಡಿ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಮಂಜಗುಣಿ ಗ್ರಾಮದಲ್ಲಿ ಪುನೀತ್ ಅಭಿಮಾನಿಗಳು ಅವರ ಪುತ್ಥಳಿ ನಿರ್ಮಿಸಿದ್ದು, 50ಕ್ಕೂ ಅಧಿಕ ಜನರು ನೇತ್ರದಾನ ಮಾಡಿದ್ದಾರೆ. ಅಭಿಮಾನಿಗಳಿಂದ ನಿರ್ಮಿಸಲಾಗಿರುವ ಪುತ್ಥಳಿಗೆ ನವದಂಪತಿ ಮಣಿಕಂಠ ನಾಯ್ಕ ಹಾಗೂ ಸಿಂಧು ಮಾಲಾರ್ಪಣೆ ಮಾಡಿ ನೇತ್ರದಾನ ಮಾಡಿದ್ದಾರೆ. ಇದನ್ನೂ ಓದಿ: UAEನಿಂದ ಗೋಲ್ಡನ್ ವೀಸಾ ಪಡೆದ ಪ್ರಣಿತಾ!
ಭಟ್ಕಳದಲ್ಲಿ ವಿವಾಹವಾಗಿದ್ದ ನವದಂಪತಿಗೆ ಪುನೀತ್ ಎಂದರೆ ಪಂಚಪ್ರಾಣ. ಹೀಗಾಗಿ ತಾವು ಹೊಸ ಜೀವನಕ್ಕೆ ಕಾಲಿಡುವಾಗ ಪುನೀತ್‍ರಂತೆ ಕಾರ್ಯ ಮಾಡಬೇಕು ಎಂಬ ಹಂಬಲದಿಂದ ನೇತ್ರದಾನ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ. ಇದನ್ನೂ ಓದಿ: ಹಿಜಬ್ ಬಗ್ಗೆ ಕೊನೆಗೂ ಮೌನ ಮುರಿದ ಅಮಿತ್ ಶಾ
ಬೆಂಗಳೂರು: ಹೃದಯಾಘಾತದಿಂದ ನಿಧನರಾದ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರ ತಂದೆ ರೇವನಾಥ್ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ.
ರೇವನಾಥ್ (78) ಅವರು ಪುನೀತ್ ಅವರ ನಿಧನ ನಂತರ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಇಂದು ಹೃದರ್ಯಾಘಾತದಿಂದ ಸಾವನ್ನಪಿದ್ದಾರೆ. ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರೇವಾನಾಥ್ ನಿಧನ ಹಿನ್ನೆಲೆ ಕುಟುಂಬಸ್ಥರು ಅವರ ಕಣ್ಣುಗಳನ್ನು ದಾನ ಮಾಡಿದ್ಧಾರೆ.
ರೇವನಾಥ್ ಕಣ್ಣು ದಾನ ಪಡೆದು ತೆರಳಿದ ರಾಜ್‍ಕುಮಾರ್ ನೇತ್ರದಾನ ಕೇಂದ್ರದ ಸಿಬ್ಬಂದಿ. ನಾರಾಯಣ್ ನೇತ್ರಾಲಯಕ್ಕೆ ಕಣ್ಣುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅಳಿಯ ಪುನೀತ್ ರಾಜ್‍ಕುಮಾರ್ ಅವರು ಹಾದಿಯಲ್ಲೆ ರೇವನಾಥ್ ಕೂಡ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಎಂಎಸ್ ರಾಮಯ್ಯ ಆಸ್ಪತ್ರೆಗೆ ನಟ ಶ್ರೀ ಮುರುಳಿ, ಶಿವರಾಜ್‌ಕುಮಾರ್ ಹಾಗೂ ಕುಟುಂಬಸ್ಥರು ಬಂದಿದ್ದಾರೆ. ಮೃತದೇಹ ಅಂತಿಮ ದರ್ಶನ ಪಡೆದು ಆಸ್ಪತ್ರೆಯಿಂದ ತೆರಳಿದ್ದಾರೆ. ಇದನ್ನೂ ಓದಿ:ಅಶ್ವಿನಿ ಪುನೀತ್ ರಾಜ್‍ಕುಮಾರ್ ತಂದೆ ಹೃದಯಾಘಾತದಿಂದ ನಿಧನ
ನಟ ಪುನೀತ್ ರಾಜ್‍ಕುಮಾರ್ ದೇಹ ಮಣ್ಣಲ್ಲಿ ಮಣ್ಣಾಗಿರಬಹುದು. ಆದರೆ ಅಪ್ಪು ಎರಡು ನೇತ್ರಗಳು ನಾಲ್ವ ಜೀವಕ್ಕೆ ಬೆಳಕು ನೀಡಿವೆ. ಡಾ. ರಾಜ್ ಕುಮಾರ್ ಅವರ ಹಾದಿಯಂತೆ ಪುನೀತ್ ದಾನ ಮಾಡಿದ ಎರಡು ಕಣ್ಣುಗಳಿಂದ ನಾರಾಯಣ ನೇತ್ರಾಲಯ ನಾಲ್ವರು ದೃಷ್ಟಿ ವಿಕಲಚೇತನರಿಗೆ ಬೆಳಕು ಕೊಡಿಸಿದೆ. ನಟ ಪುನೀತ್ ನಾಲ್ವರ ಕಣ್ಣಲ್ಲಿ ಇರಲಿದ್ದಾರೆ. ಅಪ್ಪು ಎರಡು ನೇತ್ರ ನಾಲ್ವರಿಗೆ ದೃಷ್ಟಿ ನೀಡುವ ಮೂಲಕ ಸಾವಿನಲ್ಲೂ ದಾಖಲೆ ಬರೆದಿದ್ದಾರೆ. ಇವರ ಹಾದಿಯಲ್ಲಿಯೇ ಪುನೀತ್ ರಾಜ್‍ಕುಮಾರ್ ಅವರ ಮಾವ ರೇವನಾಥ್ ಕೂಡಾ ಸಾರ್ಥಕತೆ ಮೆರೆದಿದ್ದಾರೆ.
ಬೆಂಗಳೂರು: ನಮ್ಮ ಸಾವಿನ ನಂತರ ನಮ್ಮ ಕಣ್ಣುಗಳಿಂದ ಇನ್ನೊಬ್ಬರಿಗೆ ದೃಷ್ಟಿ ಬರುತ್ತದೆ ಅಂದರೆ ಅದಕ್ಕಿಂತ ಸಾಕ್ಷಾತ್ಕಾರ ಇನ್ನೊಂದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಬೆಂಗಳೂರಿನ ಇಂದಿರಾನಗರದಲ್ಲಿ ಡಾಕ್ಟರ್. ಅಗರ್ ವಾಲ್ಸ್ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಧತ್ವ ಬಹಳ ನೋವಿನ ಸಂಗತಿ. ಯಾರೇ ಇರಲಿ, ಭಗವಂತ ಸೃಷ್ಟಿ ಮಾಡಿರುವ ಪ್ರಕೃತಿಯನ್ನು ನೋಡಲು ಸಾಧ್ಯವಾಗುವುದು ನಮ್ಮ ಕಣ್ಣುಗಳಿಂದ. ಆದರೆ ಕಣ್ಣೇ ಇಲ್ಲದಿದ್ದರೆ ಈ ಸುಂದರ ಪ್ರಕೃತಿಯನ್ನು ಸವಿಯಲು ಅಸಾಧ್ಯ. ವಿಶ್ವದಲ್ಲಿ 4 ಕೋಟಿಗೂ ಹೆಚ್ಚು ಜನರಿಗೆ ಅಂಧತ್ವ ಇದೆ. ಭಾರತದಲ್ಲಿ ಪ್ರತಿವರ್ಷ 1 ಲಕ್ಷ ನೇತ್ರದಾನಿಗಳ ಅವಶ್ಯಕತೆ ಇದೆ. ಆದರೆ ನಮಗೆ ಸಿಗುತ್ತಿರುವ ದಾನಿಗಳ ಪ್ರಮಾಣ ಕೇವಲ 5% ಮಾತ್ರ. ಕಣ್ಣಿನ ದಾನಿಗಳ ಕೊರತೆ ನಮ್ಮನ್ನು ಕಾಡುತ್ತಿದೆ. ದೇಶದಲ್ಲಿ 10.8 ಲಕ್ಷ ಮಕ್ಕಳು ಅಂಧತ್ವಕ್ಕೆ ಒಳಗಾಗಿದ್ದಾರೆ ಎಂದರು.
ಕೋವಿಡ್ ಸಮಯದಲ್ಲಿ ನೇತ್ರದಾನ ಪ್ರಮಾಣ ಮತ್ತಷ್ಟು ಕಡಿಮೆಯಾಗಿದೆ. ಕಣ್ಣಿನ ದಾನ ಮಹಾದಾನವಾದರೂ ಈ ಬಗ್ಗೆ ಕೆಲ ಮೂಢನಂಬಿಕೆಗಳು ಇವೆ. ಶವದಿಂದ ಕಣ್ಣನ್ನು ತೆಗೆದರೆ ಮುಖ ವಿಕಾರವಾಗುತ್ತದೆ ಎಂಬ ತಪ್ಪು ತಿಳಿವಳಿಕೆ ಇದೆ. ಆದರೆ ಇದು ಸುಳ್ಳು. ಕನ್ನಡದ ವರನಟ ಡಾ.ರಾಜ್ ಕುಮಾರ್, ಇತ್ತೀಚೆಗೆ ಅಕಾಲಿಕ ಮರಣ ಹೊಂದಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಂತಹ ಮಹಾನ್ ವ್ಯಕ್ತಿಗಳು ಕಣ್ಣು ದಾನ ಮಾಡಿದ್ದರು. ಲಕ್ಷಾಂತರ ಜನರು ಅವರ ಪಾರ್ಥಿವ ಶರೀರ ನೋಡಿದ್ದಾರೆ. ಆದರೆ ಯಾವುದೇ ವಿಕಾರ ಕಂಡಿಲ್ಲ. ಹೀಗಾಗಿ ನೇತ್ರದಾನ ಎಲ್ಲರೂ ಮಾಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸುದೀಪ್ ಕುಟುಂಬ ಸಮೇತರಾಗಿ ಭೇಟಿ
ಆರೋಗ್ಯ ಇರಲಿ ಅಥವಾ ನೇತ್ರದಾನದ ವಿಚಾರವೇ ಆಗಿರಲಿ ಕರ್ನಾಟಕ ದೇಶದ ಎಲ್ಲಾ ರಾಜ್ಯಗಳಿಗೂ ಮಾದರಿಯಾಗಿದೆ. ಹೆಲ್ತ್ ಕೇರ್ ಉದ್ಯಮಿಗಳಿಂದ ಇದೆಲ್ಲಾ ಸಾಧ್ಯವಾಗಿದೆ. ಪ್ರತಿಯೊಬ್ಬರಿಗೂ ಕೈ ಗೆಟಕುವ ರೀತಿಯಲ್ಲಿ ಹೇಲ್ತ್ ಕೇರ್ ಇಂಡಸ್ಟ್ರಿ ಕರ್ನಾಟಕದಲ್ಲಿ ಬೆಳೆದಿದೆ ಎಂದು ಹೇಳಿದರು.
ಆಯುಷ್ಮಾನ್ ಭಾರತ್ ನಿಂದ ಎಲ್ಲರಿಗೂ ಲಾಭವಾಗುತ್ತಿದೆ. ಸಮಾಜದ ಎಲ್ಲಾ ವರ್ಗಗಳಿಗೆ ಇದರ ಉಪಯೋಗ ಆಗುತ್ತಿದೆ. ನಾವು ಎಲ್ಲಾ ಕನ್ನಡಿಗರಿಗೂ ಸಹಾಯವಾಗುವಂತೆ ಹೆಲ್ತ್ ಕೇರ್ ಫೆಸಿಲಿಟಿ ವ್ಯವಸ್ಥೆ ಮಾಡಿದ್ದೇವೆ. ಸರ್ಕಾರಿ ಇರಲಿ, ಖಾಸಗಿ ಇರಲಿ ಎಲ್ಲಾ ಕಡೆಯೂ ಇನ್ನೂ ಹೆಚ್ಚಿನ ಸೌಕರ್ಯ ಒದಗಿಸುವ ಯೋಜನೆ ರೂಪಿಸಲಾಗಿದೆ ಎಂದರು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಜಾರಿ ಸರಿಯಿದೆ: ಬಿವೈ ರಾಘವೇಂದ್ರ
ನೇತ್ರದಾನದ ಮಹತ್ವ ತಿಳಿಸಿ:
ರಾಜ್ಯದಲ್ಲಿರುವ 21 ಮೆಡಿಕಲ್ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಇನ್ನಷ್ಟು ಹೆಚ್ಚಿಸುವ ಯೋಜನೆ ರೂಪಿಸಿದ್ದೇವೆ. ಖಾಸಗಿ ಆಸ್ಪತ್ರೆಗಳು ದೊಡ್ಡಮಟ್ಟದಲ್ಲಿ ನೇತ್ರದಾನದ ಮಹತ್ವವನ್ನು ಸಮಾಜಕ್ಕೆ ತಿಳಿಸಿಕೊಡಬೇಕು. ಗ್ರಾಮೀಣ ಭಾಗದಲ್ಲಿ ಐ ಕ್ಯಾಂಪ್ ಗಳನ್ನು ಮಾಡಬೇಕು ಎಂದು ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಪ್ರಜಾಪ್ರಭುತ್ವ ಹಾಗೂ ಭಾರತದ ಅಭಿವೃದ್ಧಿಯ ಹರಿಕಾರ. ಹಾಗೆಯೇ ಡಾ.ಎಂ.ಸಿ.ಮೋದಿಯವರು ಕಣ್ಣಿನ ಆಸ್ಪತ್ರೆಗಳನ್ನು ಕಟ್ಟಿಸಿ ಎಲ್ಲರಿಗೂ ದೃಷ್ಟಿ ಸಿಗಬೇಕು ಅನ್ನುವ ಕನಸು ಕಂಡಿದ್ದರು. ತನ್ನ 40 ವರ್ಷಗಳ ಸೇವೆಯಲ್ಲಿ ಹಲವು ಸರ್ಜರಿಗಳನ್ನು ಅವರು ಮಾಡಿದ್ದರು. ಲಕ್ಷಾಂತರ ಕಣ್ಣಿನ ಸಮಸ್ಯೆಗಳನ್ನು ಪರಿಹರಿಸಿದರು. ಡಾ.ಎಂ.ಸಿ.ಮೋದಿಯವರ ಸೇವೆ ಮಾದರಿ ಎಂದರು.
ಅಪ್ಪು ಅನೇಕ ಜನರಿಗೆ ಸಹಾಯ ಮಾಡಿದ್ದಲ್ಲದೇ ಕಣ್ಣು ದಾನ ಮಾಡಿದ್ದರು. ಅವರು ನೇತ್ರದಾನ ಮಾಡಿದಕ್ಕೆ ಅವರ ದಾರಿಯಲ್ಲಿಯೇ ಅವರ ಅಭಿಮಾನಿಗಳು ಕಣ್ಣನ್ನು ದಾನ ಮಾಡುವ ಮೂಲಕ ಬೇರೆಯವರಿಗೆ ಆದರ್ಶರಾಗಿದ್ದಾರೆ. ಒಟ್ಟಾರೆ ಈ ಸಾಮಾಜಿಕ ಕಾರ್ಯ ಮಾಡುವ ಮೂಲಕ ಚಟ್ಟೋಬನಹಳ್ಳಿ ತಾಂಡ ರಾಜ್ಯಕ್ಕೆ ಮಾದರಿಯಾಗಿದೆ.