Tag: eye donate

  • ಅಪಘಾತದಲ್ಲಿ ಯುವತಿ ದುರ್ಮರಣ -ಕಣ್ಣುದಾನ ಮಾಡಿ ಸಾವಿನಲ್ಲೂ ಸಾರ್ಥಕತೆ

    ಅಪಘಾತದಲ್ಲಿ ಯುವತಿ ದುರ್ಮರಣ -ಕಣ್ಣುದಾನ ಮಾಡಿ ಸಾವಿನಲ್ಲೂ ಸಾರ್ಥಕತೆ

    ಬೆಂಗಳೂರು: ಸ್ಕೂಟಿಗೆ ಕಾಂಕ್ರೀಟ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಲಾಲ್‍ಬಾಗ್ ಬಳಿ ಇಂದು ಸಂಭವಿಸಿದೆ.

    ಮೃತಳನ್ನು 19 ವರ್ಷದ ಪ್ರೀತಿ ಎಂದು ಗುರುತಿಸಲಾಗಿದೆ. ಪ್ರೀತಿ ಸುರಾನ ಕಾಲೇಜ್ ನಲ್ಲಿ ಫ್ರಥಮ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದರು. ಇಂದು ಪ್ರೀತಿ ಮತ್ತು ಲಾವಣ್ಯ ಸಹೋದರಿಯರಿಬ್ಬರು ಬೈಕಿನಲ್ಲಿ ಹೋಗುತ್ತಿದ್ದರು. ಲಾಲ್‍ಬಾಗ್ ಬಳಿ ಬರುತ್ತಿದ್ದಂತೆಯೇ ವೇಗವಾಗಿ ಬಂದ ಕಾಂಕ್ರೀಟ್ ಮಿಶ್ರಣ ಮಾಡುವ ಟ್ರಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪ್ರೀತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಈ ಅಪಘಾತದಿಂದ 24 ವರ್ಷದ ಲಾವಣ್ಯಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ತೀವ್ರತೆಗೆ ಸ್ಕೂಟಿ ಸಂಪೂರ್ಣ ಜಖಂ ಆಗಿದ್ದು, ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದೆ.

    ಪೋಷಕರು ಅಪಘಾತದಲ್ಲಿ ಸಾವನ್ನಪ್ಪಿದ್ದ ಪ್ರೀತಿಯ ಕಣ್ಣುದಾನ ಮಾಡಿದ್ದಾರೆ. ಈ ಮೂಲಕ ಪ್ರೀತಿ ಸಾವಿನಲ್ಲೂ ಕಣ್ಣುದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ವಿ.ವಿ. ಪುರಂ ಟ್ರಾಫಿಕ್ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಾವಿನಲ್ಲೂ ಸಾರ್ಥಕತೆ ಮೆರೆದ ನಿರೂಪಕ ಚಂದನ್ ಪುತ್ರ!

    ಸಾವಿನಲ್ಲೂ ಸಾರ್ಥಕತೆ ಮೆರೆದ ನಿರೂಪಕ ಚಂದನ್ ಪುತ್ರ!

    ಬೆಂಗಳೂರು: ಖಾಸಗಿ ವಾಹಿನಿ ನಿರೂಪಕ ಚಂದನ್ ಪತ್ನಿ ತಮ್ಮ ಮಗ ತುಷಾರ್ ನನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈಗ ತುಷಾರ್ ಕಣ್ಣನ್ನು ಕುಟುಂಬದವರು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾರೆ.

    ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯಲ್ಲಿ ಮೀನಾ ತನ್ನ 13 ವರ್ಷದ ಮಗ ತುಷಾರ್ ನ ಕತ್ತು ಕೊಯ್ದು ಕೊಲೆ ಮಾಡಿ, ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಂದನ್ ಮಗ ತುಷಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಚಂದನ್ ಸಾವಿನ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಪತ್ನಿ ಮೀನಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರವಾಗಿ ಮನನೊಂದಿದ್ದ ಮೀನಾ ಏನಾದ್ರೂ ಮಾಡಿಕೊಳ್ಳಬಹುದೆಂದು ಆಕೆಯ ಅಣ್ಣ ಮತ್ತು ತಂದೆ ಒಂದು ವಾರದಿಂದ ಕಾವಲು ಕಾಯುತ್ತಿದ್ದರು. ಆದರೆ ಇಂದು ಬೆಳಗ್ಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ಮೀನಾ ಮಗನನ್ನು ಕೊಲೆಗೈದಿದ್ದಾರೆ.

    ಸದ್ಯ ಮೀನಾ ಸ್ಥಿತಿ ಚಿಂತಾಜನಕವಾಗಿದ್ದು, ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈಗ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್‍ಗೆ ದಾಖಲಿಸಲಾಗಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಅಂಧರ ಬಾಳಿನ ಆಶಾಕಿರಣ- 7 ವರ್ಷಗಳಲ್ಲಿ 814 ಮಂದಿಯಿಂದ ನೇತ್ರದಾನ ಮಾಡಿಸಿರೋ ಗುರುದೇವ್

    ಅಂಧರ ಬಾಳಿನ ಆಶಾಕಿರಣ- 7 ವರ್ಷಗಳಲ್ಲಿ 814 ಮಂದಿಯಿಂದ ನೇತ್ರದಾನ ಮಾಡಿಸಿರೋ ಗುರುದೇವ್

    ಚಿಕ್ಕಬಳ್ಳಾಪುರ: ಎಲ್ಲಾ ದಾನಗಳಿಗಿಂತ ನೇತ್ರದಾದ ದೊಡ್ಡದು ಅಂತಾರೆ. ಹಾಗೇ ದೊಡ್ಡಬಳ್ಳಾಪುರದಲ್ಲಿ ಒಬ್ಬರು ನೇತ್ರದಾನದ ಅರಿವು ಮೂಡಿಸಿ ಈವರೆಗೂ 800ಕ್ಕೂ ಹೆಚ್ಚು ಮಂದಿಯಿಂದ ನೇತ್ರದಾನ ಮಾಡಿಸಿ ಅಂಧರ ಬಾಳಿನ ಬೆಳಕಾಗಿದ್ದಾರೆ.

    ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರು ಮತ್ತು ದೊಡ್ಡಬಳ್ಳಾಪುರದ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿರುವ ಗುರುದೇವ ಎಂ.ಬಿ. ಅವರು ಇವತ್ತಿನ ನಮ್ಮ ಪಬ್ಲಿಕ್ ಹೀರೋ. ದೊಡ್ಡಬಳ್ಳಾಪುರ ನಗರದಲ್ಲೇ ಬರೋಬ್ಬರಿ 14,000 ಜನರಿಂದ ನೇತ್ರದಾನ ಮಾಡುವ ಪ್ರತಿಜ್ಞೆ ಮಾಡಿದ್ದರು. 7 ವರ್ಷಗಳ ಹಿಂದೆ ದೊಡ್ಡಬಳ್ಳಾಪುರದಲ್ಲಿ ಅಭಿಷೇಕ್ ನೇತ್ರಾಲಯ ಶುರುವಾಗಿತ್ತು. ವೈದ್ಯರಾದ ಹರೀಶ್, ಗುರುದೇವ್ ಅವರ ಸಮಾಜಸೇವೆಗೆ ಸಾಥ್ ಕೊಟ್ಟಿದ್ದಾರೆ. ಇವರ ಜೊತೆ ಒಂದಿಷ್ಟು ವೈದ್ಯರು ಕೈಜೋಡಿಸಿ 7 ವರ್ಷಗಳಲ್ಲಿ 814 ಮಂದಿಯಿಂದ ನೇತ್ರದಾನ ಮಾಡಿಸಿ ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಯಾರಾದರೂ ಸತ್ತರೆ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ನೇತ್ರದಾನಕ್ಕೆ ಮನವೊಲಿಸುತ್ತಾರೆ.

    ಗುರುದೇವ್ ಅಂಡ್ ಟೀಂಗೆ ರಾಜ್‍ಕುಮಾರ್ ನೇತ್ರ ಭಂಡಾರ ಹಾಗೂ ನಾರಾಯಣ ನೇತ್ರಾಲಯದವರು ಸಾಥ್ ಕೊಟ್ಟಿದ್ದಾರೆ. ಬೆಂಗಳೂರಿನಿಂದ ಬಂದು ಅವರೇ ಕಣ್ಣುಗಳನ್ನ ತೆಗೆದುಕೊಂಡು ಹೋಗಿ, ಬಡವರಿಗೆ ಅಳವಡಿಸುತ್ತಾರೆ.

    7 ವರ್ಷಗಳಲ್ಲಿ 800ಕ್ಕೂ ಹೆಚ್ಚು ಮಂದಿಯಿಂದ ನೇತ್ರದಾನ ಮಾಡಿಸಿ, ತಾಲೂಕು ಮಟ್ಟದಲ್ಲೇ ಅತ್ಯಂತ ನೇತ್ರದಾನ ಮಾಡಿಸಿದ ಹೆಗ್ಗಳಿಕೆ ಗುರುದೇವ್ ತಂಡದ ಪಾಲಾಗಿದೆ.

  • ಸಂಪಿಗೆ ಬಿದ್ದು 18 ತಿಂಗಳ ಮಗು ಸಾವು: ಪೋಷಕರಿಂದ ಮಗನ ಕಣ್ಣು ದಾನ

    ಸಂಪಿಗೆ ಬಿದ್ದು 18 ತಿಂಗಳ ಮಗು ಸಾವು: ಪೋಷಕರಿಂದ ಮಗನ ಕಣ್ಣು ದಾನ

    ಹುಬ್ಬಳ್ಳಿ: 18 ತಿಂಗಳ ಮಗುವೊಂದು ಆಟವಾಡಲು ಹೋಗಿ ನೀರಿನ ಸಂಪಿನಲ್ಲಿ ಬಿದ್ದು ಸಾವನ್ನಪ್ಪಿರೋ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ನಗರದ ಘಂಟಿಕೇರಿ ನಿವಾಸಿಗಳಾದ ರಾಘವೇಂದ್ರ ಹಾಗೂ ರೂಪಾ ಕಟ್ಟಿಮನಿ ಎಂಬುವರ ನಿಶಾನ್ ನೀರಿನ ಸಂಪಿಗೆ ಬಿದ್ದು ಮೃತಪಟ್ಟಿದ್ದಾನೆ. ಆ ಮಗು ಸಾವನ್ನಪ್ಪಿದ ದುಃಖದಲ್ಲಿಯೂ ಕೂಡ ನೇತ್ರದಾನ ಮಾಡಿ ತಂದೆ ತಾಯಿಗಳು ಮಾನವೀಯತೆ ಮೆರೆದಿದ್ದಾರೆ.

    ಗುರುವಾರ ಸಂಜೆ ನೀರು ಬಂದ ಹಿನ್ನೆಲೆಯಲ್ಲಿ ಮನೆಮಂದಿಯಲ್ಲ ನೀರು ತುಂಬುವ ಕೆಲಸದಲ್ಲಿ ಮಗ್ನರಾಗಿದ್ದರು. ಆ ವೇಳೆ ನಿಶಾನ್ ಆಟವಾಡುತ್ತಾ ಮನೆ ಮುಂದೆ ಇರೋ ನೀರಿನ ಸಂಪಿಗೆ ಬಿದ್ದಿದ್ದಾನೆ.

    ಕುಟುಂಬಸ್ಥರು ಎಲ್ಲಾ ಕಡೇ ಹುಡುಕಾಡಿದರೂ ನಿಶಾನ್ ಪತ್ತೆಯಾಗಿರಲಿಲ್ಲ. ಹೀಗಾಗಿ ಅನುಮಾನಗೊಂಡು ಸಂಪ್ ನೋಡಿದಾಗ ಮಗುವನ್ನು ಕಂಡಿದ್ದಾರೆ. ಕೂಡಲೇ ಮಗುವನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರೂ ಅಷ್ಟರಲ್ಲೇ ನಿಶಾನ್ ಪ್ರಾಣ ಪಕ್ಷಿ ಹೋಗಿತ್ತು.