Tag: eye donate

  • ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ನಟಿ – ಅಣ್ಣಾವ್ರ ಹಾದಿಯಲ್ಲೇ ಸರೋಜಾದೇವಿ ನೇತ್ರದಾನ

    ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ನಟಿ – ಅಣ್ಣಾವ್ರ ಹಾದಿಯಲ್ಲೇ ಸರೋಜಾದೇವಿ ನೇತ್ರದಾನ

    ಅಭಿನಯ ಸರಸ್ವತಿ ಎಂದೇ ಖ್ಯಾತಿ ಪಡೆದಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ.ಸರೋಜಾ ದೇವಿ (B Saroja Devi) ಅವರಿಂದು ವಿಧಿವಶವಾಗಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ʻಮನುಷ್ಯನ ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖವಾದದ್ದು. ಕಣ್ಣು ದಾನ ಮಾಡುವ ಮೂಲಕ ಬೇರೊಬ್ಬರಿಗೆ ದೃಷ್ಟಿ ನೀಡಿ ಬಾಳು ಬೆಳಗಬೇಕು’ ಎನ್ನುವಂತೆ ಸರೋಜಾ ದೇವಿ ಅವರು ನೇತ್ರದಾನ (Eye Donate) ಮಾಡಿದ್ದಾರೆ.

    ಬೆಂಗಳೂರಿನ (Bengaluru) ನಾರಾಯಣ ನೇತ್ರಾಲಯಕ್ಕೆ ನೇತ್ರದಾನ ಮಾಡಿದ್ದರು. ಅದರಂತೆ ಇಂದು ಸರೋಜಾದೇವಿ ಅವರ ಕಣ್ಣುಗಳನ್ನು ಪಡೆಯಲಾಗುತ್ತಿದೆ. ವೈದ್ಯರ ತಂಡ ಮಲ್ಲೇಶ್ವರಂನಲ್ಲಿರುವ ಮೆನೆಗೆ ಆಗಮಿಸಿದ್ದು, ನೇತ್ರದಾನ ಪ್ರಕ್ರಿಯೆಯನ್ನ ಪೂರ್ಣಗೊಳಿಸಲಾಗುತ್ತಿದೆ. ನೇತ್ರದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂತಿಮ ದರ್ಶನ ಮತ್ತೆ ನಡೆಯಲಿದೆ. ಇದನ್ನೂ ಓದಿ: ಕೋವಿಡ್ ವೇಳೆ 2 ಲಕ್ಷ ಕೊಟ್ಟು ಯಾರಿಗಾದ್ರೂ ಸಹಾಯ ಮಾಡು ಅಂತ ಹೇಳಿದ್ರು – ಸಾಧು ಕೋಕಿಲಾ

    ಕನ್ನಡ ವರನಟ ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ (Puneeth Rajkumar) ಕೂಡ ನೇತ್ರದಾನ ಮಾಡಿದ್ದರು. ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣದ ನಂತರ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯದಲ್ಲಿ ಇಬ್ಬರು ಅಂಧರಿಗೆ ಅಳವಡಿಸಲಾಗಿದೆ. ಆ ಮೂಲಕ ಇಬ್ಬರ ಬಾಳಿಗೆ ಪುನೀತ್ ರಾಜ್‌ಕುಮಾರ್ ಬೆಳಕಾಗಿದ್ದಾರೆ. ಇದೀಗ ರಾಜ್‌ಕುಮಾರ್‌, ಪುನೀತ್‌ ಅವರ ಹಾದಿಯಾಗಿ ಸರೋಜಾದೇವಿ ಅವರೂ ನೇತ್ರದಾನ ಮಾಡಿದ್ದು, ಬದುಕಿನ ಪಯಣ ಮುಗಿಸಿದ್ದಾರೆ. ಇದನ್ನೂ ಓದಿ: ಸಿನಿಮಾದ ಸುವರ್ಣ ಯುಗವೊಂದು ಅಂತ್ಯವಾಗಿದೆ – ಸರೋಜಾದೇವಿ ನಿಧನಕ್ಕೆ ಕಂಬನಿ ಮಿಡಿದ ರಜನಿಕಾಂತ್‌, ಖುಷ್ಬು

    ಸರೋಜಾದೇವಿ ಎಂದಾಕ್ಷಣ ಕಿತ್ತೂರು ಚೆನ್ನಮ್ಮ, ಬಬ್ರುವಾಹನ, ಭಾಗ್ಯವಂತರು, ಅಣ್ಣತಂಗಿ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ. ಕನ್ನಡ ಚಿತ್ರರಂಗದ ಕಿತ್ತೂರು ರಾಣಿ ಚೆನ್ನಮ್ಮ ಅಂತಲೇ ಎಲ್ಲರ ಮನದಲ್ಲಿ ಮನೆ ಮಾಡಿದ್ದ ಸರೋಜಾದೇವಿ ಅವರು ತಮ್ಮ ನಿವಾಸದಲ್ಲಿ ಉಸಿರು ಚೆಲ್ಲಿದ್ದಾರೆ. ಹಿರಿಯ ನಟಿಯ ನಿಧನಕ್ಕೆ ಸಿನಿ ಗಣ್ಯರು, ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ಬಿ.ಸರೋಜಾದೇವಿಯವರ ಸಾವಿನಿಂದ ಕಲಾಜಗತ್ತು ಬಡವಾಗಿದೆ – ಸಿಎಂ ಸಂತಾಪ

  • ಸಾವಿನಲ್ಲೂ ಸಾರ್ಥಕತೆ ಮೆರೆದ ಕೂಲಿ ಕಾರ್ಮಿಕರು- ಮೃತಪಟ್ಟ 9 ಮಂದಿಯಲ್ಲಿ 6 ಜನರ ನೇತ್ರದಾನ

    ಸಾವಿನಲ್ಲೂ ಸಾರ್ಥಕತೆ ಮೆರೆದ ಕೂಲಿ ಕಾರ್ಮಿಕರು- ಮೃತಪಟ್ಟ 9 ಮಂದಿಯಲ್ಲಿ 6 ಜನರ ನೇತ್ರದಾನ

    ತುಮಕೂರು: ಶಿರಾ ಬಳಿ ನಡೆದ ಅಪಘಾತದಲ್ಲಿ 9 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೂಲಿ ಕಾರ್ಮಿಕರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

    ಹೌದು. ಅಪಘಾತದಲ್ಲಿ ಮೃತಪಟ್ಟ 9 ಮಂದಿಯಲ್ಲಿ 6 ಜನರು ನೇತ್ರದಾನ ಮಾಡಲು ಮುಂದಾಗಿದ್ದಾರೆ. ನೋವಿನ ಮಧ್ಯೆಯೂ ಕುಟುಂಬಸ್ಥರು ಮನೆ ಮಕ್ಕಳ ನೇತ್ರದಾನ ಮಾಡಿದ್ದಾರೆ. ಮೃತಪಟ್ಟ ಚಾಲಕ ಕೃಷ್ಣ, ಸಿದ್ದಯ್ಯಸ್ವಾಮಿ, ನಿಂಗಣ್ಣ, ಮೀನಾಕ್ಷಿ, ಸುಜಾತಾ, ಪ್ರಭುಸ್ವಾಮಿ ಎಂಬವರ ನೇತ್ರದಾನ ಮಾಡಲು ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ಶಿರಾ ತಾಲೂಕಾಸ್ಪತ್ರೆ ಮುಂದೆ ಮೃತರ ಸಂಬಂಧಿಕರ ಗೋಳಾಟ ಹೇಳತೀರದಂತಾಗಿದೆ.

    ಈ ಸಂಬಂಧ ಶಿರಾ ತಹಶಿಲ್ದಾರ್ ಮಮತಾ ಸುದ್ದಿಗಾರರೊಂದಿಗೆ ಮಾತನಾಡಿ, ಮೃತರ ಕುಟುಂಬಸ್ಥರು ಸಾರ್ಥಕ ಕೆಲಸ ಮಾಡಿದ್ದಾರೆ. ಐ ಡೊನೇಟ್ ಮಾಡಿ ಮಾನವೀಯತೆ ಮೆರೆದಿದ್ದಾರೆ. 6 ಜನರ ಕುಟುಂಬಸ್ಥರು ಸ್ವ-ಇಚ್ಛೆಯಿಂದ ಕಣ್ಣು ದಾನ ಮಾಡಲು ಒಪ್ಪಿಕೊಂಡಿದ್ದಾರೆ. ಇನ್ನೊಬ್ಬರ ಬಾಳಲ್ಲಿ ಬೆಳಕಾಗಲು ಬಯಸಿದ್ದಾರೆ. ಆ ಕುಟುಂಬಕ್ಕೆ ಒಳ್ಳೆಯದಾಗಲಿ. ಅಲ್ಲದೆ ದುಃಖ ಸಹಿಸುವ ಶಕ್ತಿ ಬರಲಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತುಮಕೂರಿನ ಭೀಕರ ರಸ್ತೆ ಅಪಘಾತಕ್ಕೆ ಪ್ರಧಾನಿ ಸಂತಾಪ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ

    ಇತ್ತ ನೇತ್ರದಾನದ ಬಳಿಕ ಮೃತ ಚಾಲಕ ಕೃಷ್ಣನ ತಂದೆ ತಿಪ್ಪಾರೆಡ್ಡಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನನ್ನ ಮಗನನ್ನು ಬೇರೆಯವರ ಕಣ್ಣಿನ ಮೂಲಕ ನೋಡಬೇಕು. ಹಾಗಾಗಿ ಕಣ್ಣು ದಾನ ಮಾಡಿದ್ದೇವೆ. ಕಣ್ಣು ದಾನದ ಮೂಲಕ ಮಗ ಜೀವಂತ ಆಗಿರಬೇಕು ಎಂದು ಬಯಸಿದ್ದೇವೆ. ಹಾಗಾಗಿ ಸ್ವ-ಇಚ್ಛೆಯಿಂದ ನೇತ್ರದಾನ ಮಾಡಿಸಿದ್ದೇವೆ ಎಂದು ಹೇಳಿದರು.

    ಸದ್ಯ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ. ಒಟ್ಟು 4 ಅಂಬುಲೆನ್ಸ್‍ನಲ್ಲಿ ಮೃತದೇಹವನ್ನು ರವಾನಿಸಲಾಗಿದೆ.  ಇದನ್ನೂ ಓದಿ: ತುಮಕೂರಿನ ಶಿರಾದಲ್ಲಿ ಭೀಕರ ಅಪಘಾತ – ಕ್ರೂಸರ್‌ ಚಕ್ರಕ್ಕೆ 9 ಮಂದಿ ಬಲಿ?

    Live Tv
    [brid partner=56869869 player=32851 video=960834 autoplay=true]

  • ಪುನೀತ್ ಪ್ರೇರಣೆ – ಚಾಮರಾಜನಗರದಲ್ಲಿ ಇದುವರೆಗೆ 9,500 ಮಂದಿ ನೇತ್ರದಾನಕ್ಕೆ ನೋಂದಣಿ

    ಪುನೀತ್ ಪ್ರೇರಣೆ – ಚಾಮರಾಜನಗರದಲ್ಲಿ ಇದುವರೆಗೆ 9,500 ಮಂದಿ ನೇತ್ರದಾನಕ್ಕೆ ನೋಂದಣಿ

    ಚಾಮರಾಜನಗರ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನವಾಗಿ ಇಂದಿಗೆ ಎರಡು ತಿಂಗಳಾಗಿದೆ. ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದ ಅವರಿಂದ ಸಾಕಷ್ಟು ಜನ ಪ್ರೇರಣೆಗೊಂಡು ನೇತ್ರದಾನ ನೋಂದಣಿಗೆ ಮುಂದಾಗುತ್ತಿದ್ದಾರೆ. ಪುನೀತ್ ಅವರ ತವರು ಜಿಲ್ಲೆ ಚಾಮರಾಜನಗರದಲ್ಲಿ ಎರಡು ತಿಂಗಳ ಅವಧಿಯಲ್ಲಿ 9,500ಕ್ಕೂ ಹೆಚ್ಚು ಜನರು ನೇತ್ರದಾನಕ್ಕೆ ನೋಂದಣಿ ಮಾಡಿಸಿದ್ದಾರೆ.

    ಪುನೀತ್ ಅವರ ನೇತ್ರದಾನದಿಂದ ಸ್ಫೂರ್ತಿಗೊಂಡ ತವರು ಜಿಲ್ಲೆಯ ಜನತೆ ನೇತ್ರದಾನ ನೋಂದಣಿಗೆ ಮುಂದಾಗುತ್ತಿದ್ದು, ನಿರೀಕ್ಷೆಗೂ ಮೀರಿ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. 46ನೇ ವಯಸ್ಸಿನಲ್ಲಿ ಅಪ್ಪು ನಿಧನ ಹಿನ್ನಲೆಯಲ್ಲಿ ಜಿಲ್ಲಾಡಳಿತ ಹಾಗೂ ರೆಡ್ ಕ್ರಾಸ್ ಸಂಸ್ಥೆ ಜಿಲ್ಲೆಯಾದ್ಯಂತ 46 ಸಾವಿರ ಜನರನ್ನು ನೇತ್ರದಾನಕ್ಕೆ ನೊಂದಾಯಿಸುವ ಗುರಿ ಹೊಂದಿದೆ. ಇದನ್ನೂ ಓದಿ: ವೀಡಿಯೋ: ಮೇಕಪ್ ಆರ್ಟ್‍ನಿಂದ ಶಾರೂಖ್ ಆಗಿ ರೂಪಾಂತರಗೊಂಡ ಯುವತಿ

    ಚಾಮರಾಜನಗರ ಸರ್ಕಾರಿ ಮೆಡಿಕಲ್ ಆಸ್ಪತ್ರೆಯಲ್ಲಿ ನೇತ್ರ ಸಂಗ್ರಹಣ ಕೇಂದ್ರ ಸ್ಥಾಪನೆಗೆ ನಿರ್ಧಾರ ಮಾಡಲಾಗಿದ್ದು, ನೇತ್ರ ಸಂಗ್ರಹಣಾ ಕಾರ್ಯಕ್ಕೆ ವೈದ್ಯರು ಸೇರಿದಂತೆ ಸ್ವಯಂ ಸೇವಾ ಸಂಘಟನೆಗಳ ಸದಸ್ಯರ ಸಮಿತಿ ರಚನೆಗೆ ತೀರ್ಮಾನಿಸಲಾಗಿದೆ. ಇದನ್ನೂ ಓದಿ:  ಮೊಬೈಲ್ ಕದ್ದಿದ್ದಕ್ಕೆ ಬಾಲಕಿಗೆ ಹಿಗ್ಗಾಮುಗ್ಗ ಥಳಿಸಿದ ಯುವಕರು

  • ಅಪ್ಪು ನೇತ್ರದಾನದಿಂದ ಇನ್ನೂ 10 ಮಂದಿಗೆ ದೃಷ್ಟಿ ನೀಡಲು ವೈದ್ಯರ ಪ್ರಯತ್ನ!

    ಅಪ್ಪು ನೇತ್ರದಾನದಿಂದ ಇನ್ನೂ 10 ಮಂದಿಗೆ ದೃಷ್ಟಿ ನೀಡಲು ವೈದ್ಯರ ಪ್ರಯತ್ನ!

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ದಿ. ಪುನೀತ್ ರಾಜ್ ಕುಮಾರ್ (Puneeth Raj Kumar) ಅವರ ನೇತ್ರದಾನದಿಂದ ಇನ್ನೂ 10 ಮಂದಿಗೆ ದೃಷ್ಟಿ ನೀಡಲು ವೈದ್ಯರು ಪ್ರಯತ್ನಿಸುತ್ತಿದ್ದಾರೆ.

    ಹೌದು. ಈಗಾಗಲೇ ನಾಲ್ಕು ಜನರ ಬಾಳಿಗೆ ಬೆಳಕಾಗಿರೋ ಪುನೀತ್ ರಾಜ್ ಕುಮಾರ್ ಅವರ ಕಣ್ಣಿನಿಂದ ಇನ್ನೂ 10 ಜನಕ್ಕೆ ದೃಷ್ಟಿ ನೀಡಲು ವೈದ್ಯರು ತಯಾರಿ ನಡೆಸುತ್ತಿದ್ದಾರೆ. ಈ ವಿನೂತನ ಪ್ರಯತ್ನಕ್ಕೆ ನಾರಾಯಣ ನೇತ್ರಾಲಯ ಮುಂದಾಗಿದೆ. ಇದೇ ಮೊದಲ ಬಾರಿಗೆ ಒಬ್ಬ ವ್ಯಕ್ತಿಯ ಕಾರ್ನಿಯಾ (Cornea) ಮತ್ತು ಸ್ಟೆಮ್ ಸೆಲ್ (Stem Cell) ಎರಡನ್ನು ಬಳಕೆ ಮಾಡಿಕೊಂಡು ದೃಷ್ಟಿ ನೀಡಲಾಗುತ್ತಿದೆ. ಇದನ್ನೂ ಓದಿ: ಇತಿಹಾಸ ಬರೆದ ಪವರ್ ಸ್ಟಾರ್ ಪುಣ್ಯಸ್ಮರಣೆ- ದಾಖಲೆ ಪ್ರಮಾಣದಲ್ಲಿ ನೇತ್ರದಾನಕ್ಕೆ ಅರ್ಜಿ

    ಪುನೀತ್ ರಾಜ್ ಕುಮಾರ್ ಸ್ಟೆಮ್ ಸೆಲ್ ಗಳ ಬಳಕೆಯಿಂದ ಅಂಧರಿಗೆ ದೃಷ್ಟಿ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ಸ್ಟೆಮ್ ಸೆಲ್ ಥೆರಪಿ ನಡೆಸಿ 10 ಮಂದಿಗೆ ದೃಷ್ಟಿ ನೀಡಲು ಮುಂದಾಗಿದೆ. ಅಪ್ಪು ಕಾರ್ನಿಯಾವನ್ನು ಬೇರೆಯವರಿಗೆ ಬಳಸಿ ದೃಷ್ಟಿ ನೀಡಲಾಗಿದೆ. ಈಗ ಪುನೀತ್ ಅವರ ಕಣ್ಣಿನ ರಿಮ್ ಭಾಗದಿಂದ ವೈದ್ಯರು ಸ್ಟೆಮ್ ಸೆಲ್ ಸಂಗ್ರಹಿಸಿದ್ದಾರೆ. ಈಗಾಗಲೇ ಸ್ಟೆಮ್ ಸೆಲ್ ಗಳು ಮಲ್ಟಿಪಲ್ ಆಗುತ್ತಿವೆ. ಮಲ್ಟಿಪಲ್ ಆಗಲು ಕಾಲಾವಧಿ ಬೇಕಾಗುತ್ತಿದೆ. ಮಲ್ಟಿಪಲ್ ಆದ ಮೇಲೆ ಸ್ಟೆಮ್ ಸೆಲ್ ಸಮಸ್ಯೆಯಿಂದ ಬಳಲುತ್ತಾ ಇರುವವರಿಗೆ ಕಸಿ ಮಾಡಬಹುದು. ಈಗ ಕಸಿ ಮಾಡಲು ನಾರಾಯಣ ನೇತ್ರಾಲಯ ವೈದ್ಯರು ಮುಂದಾಗಿದ್ದಾರೆ. ಇದನ್ನೂ ಓದಿ: ನೇತ್ರದಾನಕ್ಕೆ ಸ್ಫೂರ್ತಿಯಾದ ” ರಾಜರತ್ನ” – ಅಪ್ಪು ಬಳಿಕ ಹೆಚ್ಚಾಗ್ತಿದೆ ನೇತ್ರದಾನಿಗಳ ಸಂಖ್ಯೆ

    ಸ್ಟೆಮ್ ಸೆಲ್ ಥೆರಪಿ ಎಂದರೇನು ?
    ರೆಟಿನಾ (ಅಕ್ಷಿಪಟಲ) ಸಂಬಂಧಿ ಸಮಸ್ಯೆಗಳು ಹಾಗೂ ವಂಶವಾಹಿ ಗುಣಗಳಿಂದ ಬರುವ ಅನುವಂಶೀಯ ಖಾಯಿಲೆ ಬಳಲುತ್ತಿರುವರಿಗೆ ಅಂಧತ್ವ ನಿವಾರಿಸಬಹುದು. ಪಟಾಕಿ ಸಿಡಿತದಿಂದ ದೃಷ್ಟಿ ಹಾನಿಯಾಗಿದ್ದರೆ ನಿವಾರಿಸಲು ಸ್ಟೆಮ್ ಥೆರಪಿ ಮಾಡಿ ದೃಷ್ಟಿ ನೀಡುವುದೇ ಸ್ಟೆಮ್ ಥೆರಪಿ. ಸ್ಟೆಮ್ ಸೆಲ್ ಸಮಸ್ಯೆಯಿಂದಾಗಿ ಮ್ಯಾಕ್ಯೂಲರ್ ಡಿಜನರೇಶನ್ (Macular Degeneration), ರಿಟನೈಟಿಸ್ ಪಿಂಗಮೆಂಟೋಸ್ (Retinitis Pigmentosa) ನಂತಹ ಖಾಯಿಲೆಗಳಿಗೆ ಲಕ್ಷಾಂತರ ಮಂದಿ ಕುರುಡುರಾಗುತ್ತಿದ್ದಾರೆ. ಇದನ್ನೂ ಓದಿ: ಅಪ್ಪು ಪ್ರೇರಣೆ – ಒಂದೇ ಗ್ರಾಮದಲ್ಲಿ 60ಕ್ಕೂ ಹೆಚ್ಚು ಮಂದಿ ನೇತ್ರದಾನ

  • ಪುನೀತ್‍ಗೆ ಚಾಮರಾಜನಗರ ಜಿಲ್ಲೆಯ ಅಪೂರ್ವ ಗೌರವ – 46 ಸಾವಿರ ನೇತ್ರದಾನಕ್ಕೆ ಮಹಾಭಿಯಾನ

    ಪುನೀತ್‍ಗೆ ಚಾಮರಾಜನಗರ ಜಿಲ್ಲೆಯ ಅಪೂರ್ವ ಗೌರವ – 46 ಸಾವಿರ ನೇತ್ರದಾನಕ್ಕೆ ಮಹಾಭಿಯಾನ

    – ಕಣ್ಣಿನ ಆಸ್ಪತ್ರೆ ಸ್ಥಾಪನೆಗೂ ನಿರ್ಧಾರ

    ಚಾಮರಾಜನಗರ: ಕರುನಾಡಿನ ರಾಜರತ್ನ ಪುನೀತ್, ತಮ್ಮ ಎರಡು ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅಪ್ಪು ಪ್ರೇರಣೆಯಿಂದ ಅನೇಕ ಜನರು ನಮ್ಮ ನೇತ್ರಗಳನ್ನು ದಾನ ಮಾಡುತ್ತಿದ್ದಾರೆ. ಅಪ್ಪು ಆದರ್ಶಗಳನ್ನು ಇನ್ನಷ್ಟು ಸಾರ್ಥಕತೆಗೊಳಿಸಲು ಚಾಮರಾಜನಗರ ಜಿಲ್ಲಾಡಳಿತ ಮಹತ್ತರ ಅಭಿಯಾನವನ್ನು ಕೈಗೊಂಡಿದೆ.

    ಪವರ್‍ಸ್ಟಾರ್ ಪುನೀತ್ ರಾಜ್ ಕುಮಾರ್ ಆದರ್ಶಗಳು ಇಡೀ ಸಮಾಜಕ್ಕೆ ಮಾದರಿಯಾಗಿವೆ. ತವರು ಜಿಲ್ಲೆ ಚಾಮರಾಜನಗರದ ಪ್ರವಾಸೋದ್ಯಮ ಅಭಿವೃದ್ಧಿಗೆ ಅಪ್ಪು ರಾಯಭಾರಿಯಾಗಿದ್ರು. ಹೀಗಾಗಿ ಅಪ್ಪು ಆದರ್ಶಗಳನ್ನು ಮತ್ತಷ್ಟು ಸಾರ್ಥಕಗೊಳಿಸಲು ಚಾಮರಾಜನಗರ ಜಿಲ್ಲಾಡಳಿತ ಮಹತ್ವದ ಹೆಜ್ಜೆ ಇಟ್ಟಿದೆ. ಇದನ್ನೂ ಓದಿ: ಅಪ್ಪು ನಟನೆಯ ಚಿತ್ರದ ಶೀರ್ಷಿಕೆಗಳಲ್ಲೇ ಗೀತೆ ರಚನೆ ಮಾಡಿದ ತಂದೆ, ಜೀವ ತುಂಬಿದ ಮಗಳು

    ಈ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲಾಡಳಿತ ಅಪ್ಪುರವರ ನೇತ್ರದಾನದ ಆದರ್ಶ ಇಟ್ಟುಕೊಂಡು, ಮಹತ್ವದ ಅಭಿಯಾನಕ್ಕೆ ಅಡಿ ಇಟ್ಟಿದೆ. ಪುನೀತ್ 46ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಹೀಗಾಗಿ, ನವೆಂಬರ್ ಮಾಸಾಂತ್ಯದೊಳಗೆ 46 ಸಾವಿರ ಜನರನ್ನು ನೇತ್ರದಾನಕ್ಕೆ ನೋಂದಾಯಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ ರೆಡ್‍ಕ್ರಾಸ್ ಸಂಸ್ಥೆ ಹಾಗೂ ಜಿಲ್ಲಾಸ್ಪತ್ರೆ ಸಹಯೋಗದಲ್ಲಿ, ನೇತ್ರದಾನ ಶಿಬಿರಗಳನ್ನು ಆಯೋಜಿಸಲು ನಿರ್ಧರಿಸಿದೆ.

    ನೇತ್ರದಾನ ಅಭಿಯಾನವಷ್ಟೇ ಅಲ್ಲ, ಜಿಲ್ಲೆಯಲ್ಲಿ ನಿರ್ಮಿಸಲಾಗುವ ಕಣ್ಣಿನ ಅಸ್ಪತ್ರೆಗೆ ಪುನೀತ್ ರಾಜ್‍ಕುಮಾರ್ ಹೆಸರನ್ನೇ ಇಡುವ ಮೂಲಕ ಗೌರವ ಸಲ್ಲಿಸಲು ಜಿಲ್ಲಾಡಳಿತ ತೀಮಾನಿಸಿದೆ.

  • ಅಪ್ಪು ಪ್ರೇರಣೆ – ಸಪ್ತಪದಿಗೂ ಮುನ್ನವೇ ನವ ದಂಪತಿ ನೇತ್ರದಾನದ ಶಪಥ!

    ಅಪ್ಪು ಪ್ರೇರಣೆ – ಸಪ್ತಪದಿಗೂ ಮುನ್ನವೇ ನವ ದಂಪತಿ ನೇತ್ರದಾನದ ಶಪಥ!

    – ವಧು, ವರರ ಜೊತೆ 11 ಮಂದಿ ಐ ಡೊನೇಟ್‍ಗೆ ತೀರ್ಮಾನ

    ಹುಬ್ಬಳ್ಳಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮ ಮಧ್ಯೆ ಇಲ್ಲ. ಆದರೆ ಪುನೀತ್ ರಾಜ್ ಕುಮಾರ್ ಅವರ ಆದರ್ಶಗಳು ಇದೀಗ ನೂರಾರು ಜನರಿಗೆ ಮಾದರಿಯಾಗಿದೆ. ಅವರು ತಮ್ಮ ಕಣ್ಣುಗಳನ್ನ ದಾನ ಮಾಡಿ ನಾಲ್ವರ ಬಾಳಿಗೆ ಬೆಳಕಾಗಿದ್ದಾರೆ. ಹೀಗಾಗಿ ಅಪ್ಪು ನಿಧನದ ನಂತರ ಸಾವಿರಾರು ಜನರು ನೇತ್ರದಾನಕ್ಕೆ ಹೆಸರು ನೋಂದಾಯಿಸುತ್ತಿದ್ದಾರೆ. ಅದೇ ರೀತಿ ಹುಬ್ಬಳ್ಳಿಯಲ್ಲಿ ಹೊಸ ಜೀವನಕ್ಕೆ ಕಾಲ್ಟಿಟ್ಟ ನೂತನ ದಂಪತಿ ಸಪ್ತಪದಿಗೂ ಮುನ್ನ ನೇತ್ರದಾನದ ಶಪಥ ಮಾಡಿದ್ದು ವಿಶೇಷವಾಗಿದೆ.

    ಹುಬ್ಬಳ್ಳಿಯ ಅಂಗಡಿ ಕುಟುಂಬದ ಸುಚಿತ್ ಎಂ ಟೆಕ್ ಪದವೀಧರ. ಅಪ್ಪು ಅವರ ಕಟ್ಟಾ ಅಭಿಮಾನಿ. ಹೀಗಾಗಿ ಅಪ್ಪು ಅವರ ಆದರ್ಶಗಳೇ ಇವರಿಗೆ ಪ್ರೇರಣೆ. ಇತ್ತ ಬಿಇ ಪದವೀಧರೆ ಆಗಿರುವ ರಂಜನಿಯನ್ನ ಮದುವೆಯಾಗುವ ವೇಳೆ ಸುಚಿತ್ ಎಲ್ಲರಿಗೂ ಮಾದರಿಯಾಗುವಂತಹ ಕೆಲಸ ಮಾಡಿದ್ದಾರೆ. ಅದ್ದೂರಿಯಾಗಿ ಮದುವೆ ಆದರೂ ಸಪ್ತಪದಿಗೂ ಮುನ್ನ ದಂಪತಿ ನೇತ್ರದಾನ ಶಪಥ ಮಾಡಿ ಹೊಸ ಜೀವನಕ್ಕೆ ಕಾಲಿಟ್ಟಿರುವುದು ವಿಶೇಷವಾಗಿದೆ. ಇದನ್ನೂ ಓದಿ:ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಬಿರುಗಾಳಿ – ಹ್ಯಾರಿಸ್, ಲಮಾಣಿ ಪುತ್ರರ ಹೆಸರು ಹೇಳಿರೋ ಹ್ಯಾಕರ್ ಶ್ರೀಕಿ

    ಇದೂವರೆಗೂ ಹಲವು ಬಾರಿ ರಕ್ತದಾನ ಮಾಡಿ ಮಾದರಿಯಾಗಿದ್ದ ಸುಚಿತ್, ತಮ್ಮ ಮದುವೆಯ ದಿನವೇ ಮನೆಯವರನ್ನ ಒಪ್ಪಿಸಿ ನೇತ್ರದಾನಕ್ಕೆ ನೋಂದಣಿ ಮಾಡಿಸಿದ್ದಾರೆ. ಅಲ್ಲದೇ ಕುಟುಂಬದ ಸದಸ್ಯರು ಸಹ ನೇತ್ರದಾನ ಶಪಥ ಮಾಡುವ ಮೂಲಕ ವಿನೂತನವಾಗಿ ಮದುವೆ ಸಮಾರಂಭ ಮಾಡಿರುವುದು ವಿಶೇಷವಾಗಿದೆ. ಇದೇ ರೀತಿ ಯುವಕರು ನೇತ್ರದಾನ ಶಪಥ ಮಾಡಿದ್ರೆ ಪುನೀತ್ ರಾಜ್ ಕುಮಾರ್ ಅವರ ಕನಸಿನಂತೆ ಕಂಗಳು ಇಲ್ಲದಿರುವವರ ಬಾಳಲ್ಲಿ ಬೆಳಕಾಗಬಹುದು ಎಂದು ವೈದ್ಯರು ಹೇಳುತ್ತಾರೆ.

    ವಧು ವರರ ಜೊತೆ ಅಂಗಡಿ ಕುಟುಂಬದ 11 ಸದಸ್ಯರು ಮದುವೆ ದಿನದಂದೇ ನೇತ್ರದಾನಕ್ಕೆ ಹೆಸರು ನೋಂದಣಿ ಮಾಡಿಸಿದ್ರೆ. ನೂತನ ವಧು-ವರರಿಗೆ ಆರ್ಶಿವದಿಸಲು ಆಗಮಿಸಿದವರ ಪೈಕಿ 60 ಜನ ಸಹ ನೇತ್ರದಾನ ಶಪಥ ಮಾಡಿದ್ದಾರೆ. ಒಟ್ಟಿನಲ್ಲಿ ನಟ ಪುನೀತ್ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆದರ್ಶಗಳು ಸಾವಿರಾರು ಜನರಿಗೆ ಮಾದರಿಯಾಗಿರುವುದಂತೂ ಸುಳ್ಳಲ್ಲ.

  • ಅಪ್ಪು ಪ್ರೇರಣೆ – ಅಭಿಮಾನಿಗಳಿಂದ ನೇತ್ರದಾನದ ಜೊತೆಗೆ ದೇಹದಾನಕ್ಕೆ ನೋಂದಣಿ

    ಅಪ್ಪು ಪ್ರೇರಣೆ – ಅಭಿಮಾನಿಗಳಿಂದ ನೇತ್ರದಾನದ ಜೊತೆಗೆ ದೇಹದಾನಕ್ಕೆ ನೋಂದಣಿ

    ಯಾದಗಿರಿ: ನಟ ಪುನೀತ್ ರಾಜಕುಮಾರ್ ತಮ್ಮ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದರು. ನೇತ್ರದಾನ ಮಾಡಿದ ಅಪ್ಪು ತಮ್ಮ ಅಭಿಮಾನಿಗಳಿಗೆ ಮಾದರಿಯಾಗಿದ್ದು, ಈಗ ಅವರ ಅಭಿಮಾನಿ ದೇವರುಗಳು ಸಹ ಅಪ್ಪು ಮಾರ್ಗವನ್ನು ಅನುಸರಿಸಿದ್ದಾರೆ.

    ಯಾದಗಿರಿ ನಗರದ ಗಂಜ್ ಬಳಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರ ಅಪಾರ ಅಭಿಮಾನಿಗಳು ಕೇವಲ ನೇತ್ರದಾನ ಮಾಡುವುದು ಮಾತ್ರವಲ್ಲದೆ, ದೇಹ ದಾನ ಮಾಡುವುದಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಯಾದಗಿರಿ ನಗರದ ನಿವಾಸಿಗಳಾದ ಹನುಮಯ್ಯ ಹಾಗೂ ಮಲ್ಲಿಕಾರ್ಜುನ ದಂಪತಿ ದೇಹದಾನಕ್ಕೆ ನೊಂದಣಿ ಮಾಡಿಕೊಂಡಿದ್ದಾರೆ. 52 ಮಂದಿ ಅಪ್ಪು ಅಭಿಮಾನಿಗಳು ನೇತ್ರದಾನಕ್ಕೂ ಸಹ ನೋಂದಣಿ ಮಾಡಿಕೊಂಡಿದ್ದಾರೆ.

    ಅಪ್ಪು ಅಭಿಮಾನಿಗಳಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ರಾಯಚೂರಿನ ರಿಮ್ಸ್ ಆಸ್ಪತ್ರೆ ಸಹಯೋಗದಲ್ಲಿ ಅವರ ಅಭಿಮಾನಿಗಳು ಈ ಕಾರ್ಯ ಮಾಡಿದ್ದಾರೆ. ಇದನ್ನೂ ಓದಿ: ಅಪ್ಪು ಪ್ರೇರಣೆ – ಒಂದೇ ಗ್ರಾಮದಲ್ಲಿ 60ಕ್ಕೂ ಹೆಚ್ಚು ಮಂದಿ ನೇತ್ರದಾನ

  • ತಾಯಿಯ ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮಕ್ಕಳು

    ತಾಯಿಯ ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮಕ್ಕಳು

    ಹಾವೇರಿ: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಕಣ್ಣುಗಳು ಮಹತ್ವದ ಪಾತ್ರವಹಿಸುತ್ತವೆ. ಹೀಗಾಗಿ ಮರಣದ ನಂತರ ಎರಡು ಕಣ್ಣುಗಳನ್ನ ದಾನ ಮಾಡೋ ಮೂಲಕ ಹಾವೇರಿಯ ವೃದ್ಧೆಯೊಬ್ಬರ ಕುಟುಂಬ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.

    ಜಿಲ್ಲೆಯ ಹಾನಗಲ್ ಪಟ್ಟಣದ ನಿವಾಸಿ ಚಿನ್ನುಭಾಯಿ ನಾಮದೇವ ತಾಂದಳೆ(70) ನಿಧನರಾಗಿದ್ದರು. ಈ ನೋವಿನ ನಡುವೆಯೂ ವೃದ್ಧೆಯ ಎರಡು ಕಣ್ಣುಗಳನ್ನ ಕುಟುಂಬದ ಸದಸ್ಯರು ದಾನ ಮಾಡಿ ಈ ಸಾವಿಗೊಂದು ಅರ್ಥ ನೀಡಿದ್ದಾರೆ.

    ಹಾನಗಲ್ ಪಟ್ಟಣದ ಸಿಂಪಿಗಲ್ಲಿಯಲ್ಲಿ ಬೆಳಗ್ಗೆ ವಯೋಸಹಜವಾಗಿ ಚಿನ್ನುಭಾಯಿ ನಿಧನ ಹೊಂದಿದ್ದರು. ಕುಟುಂಬ ಸದಸ್ಯರು ಚರ್ಚೆ ನಡೆಸಿ ತಾಯಿಯ ಎರಡು ಕಣ್ಣುಗಳನ್ನ, ಶಿರಸಿಯ ರೋಟರಿ ಕ್ಲಬ್ ಕಣ್ಣಿನ ಆಸ್ಪತ್ರೆಗೆ ದಾನ ಮಾಡಿದ್ದಾರೆ. ತಾಯಿ ನಮ್ಮ ಜೊತೆಗಿಲ್ಲ, ಆದರೆ ಅವರ ಕಣ್ಣು ಇನ್ನೊಬ್ಬರ ಜೀವನಕ್ಕೆ ಬೆಳಕಾಗಲಿ ಎಂದು ಮಕ್ಕಳು ಈ ಅಮೂಲ್ಯ ಕಾರ್ಯ ಮಾಡಿ ಮಾದರಿಯಾಗಿದ್ದಾರೆ.

  • ಗೋಡೆ ಕುಸಿದು ಇಬ್ಬರು ಮಕ್ಕಳ ಸಾವು – ಕಣ್ಣು ದಾನ ಮಾಡಿ ಮಾನವೀಯತೆ ಮೆರೆದ ತಂದೆ

    ಗೋಡೆ ಕುಸಿದು ಇಬ್ಬರು ಮಕ್ಕಳ ಸಾವು – ಕಣ್ಣು ದಾನ ಮಾಡಿ ಮಾನವೀಯತೆ ಮೆರೆದ ತಂದೆ

    ಚೆನ್ನೈ: ತಮಿಳುನಾಡಿನ ಕೊಯಮತ್ತೂರಿನ ತಂದೆಯೊಬ್ಬರು ಗೋಡೆ ಕುಸಿದು ಮೃತಪಟ್ಟ ಇಬ್ಬರು ಮಕ್ಕಳ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಸೆಲ್ವರಾಜ್ ಅವರು ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸೆಲ್ವರಾಜ್ ಅವರಿಗೆ 15 ವರ್ಷದ ರಾಮನಾಥನ್ ಹಾಗೂ 18 ವರ್ಷದ ನಿವೇದಾ ಮಕ್ಕಳಿದ್ದರು. ಗೋಡೆ ಕುಸಿದು ಇಬ್ಬರು ಮೃತಪಟ್ಟ ಕಾರಣ ಸೆಲ್ವರಾಜ್ ಅವರ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಭಾರೀ ಮಳೆಗೆ 17 ಮಂದಿ ಬಲಿ

    ತಮಿಳುನಾಡಿನಲ್ಲಿ ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ನಡೆದ ಅನೇಕ ಘಟನೆಯಲ್ಲಿ 25 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 17 ಮಂದಿ ಕೊಯಮತ್ತೂರಿನಲ್ಲಿ ಗೋಡೆ ಕುಸಿದು ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳು ತಮ್ಮ ಚಿಕ್ಕಮ್ಮನ ಮನೆಯಲ್ಲಿ ಮಲಗಿದ್ದಾಗ ಗೋಡೆ ಕುಸಿದಿದೆ. ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.

    ನನ್ನ ಮಕ್ಕಳ ಮೃತದೇಹ ಮಣ್ಣಿನಲ್ಲಿ ಸೇರುತ್ತದೆ ಅಥವಾ ಸುಟ್ಟು ಹೋಗುತ್ತದೆ. ಆದರೆ ಅವರ ಕಣ್ಣುಗಳು ಇಬ್ಬರಿಗೆ ಉಪಯೋಗವಾಗುತ್ತದೆ. ಇದು ಒಳ್ಳೆಯ ಕೆಲಸ ಅಲ್ಲವೇ ಎಂದು ಪ್ರಶ್ನಿಸುವ ಮೂಲಕ ಸೆಲ್ವರಾಜ್ ಅವರು ಪ್ರತಿಕ್ರಿಯಿಸಿದ್ದಾರೆ.

    ಕೆಲವು ವರ್ಷಗಳ ಹಿಂದೆ ಸೆಲ್ವರಾಜ್ ಅವರ ಪತ್ನಿ ಲಕ್ಷ್ಮಿ ನಿಧನರಾಗಿದ್ದರು. ಆಗ ಸೆಲ್ವರಾಜ್ ಅವರೊಬ್ಬರೇ ತಮ್ಮ ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ನಿವೇದಾ ಬಿ.ಕಾಂ ಓದುತ್ತಿದ್ದರೆ, ರಾಮ್‍ನಾಥ್ 10ನೇ ತರಗತಿ ಓದುತ್ತಿದ್ದನು.

    ನನ್ನ ಮಗಳು ವಿದ್ಯಾಭ್ಯಾಸ ಮಾಡಿ ಪೊಲೀಸ್ ಅಧಿಕಾರಿ ಆಗಬೇಕು ಎಂದು ಕನಸು ಕಂಡಿದ್ದಳು. ಆಕೆ ಓದಿನಲ್ಲಿ ತುಂಬಾ ಮುಂದಿದ್ದಳು. ನನ್ನ ಮಕ್ಕಳ ಕಣ್ಣುಗಳು ಜಗತ್ತಿನ ಬೇರೆ ವ್ಯಕ್ತಿಗಳಿಗೆ ಬೆಳಗಾಗಿರುವುದು ನನಗೆ ತುಂಬಾ ಖುಷಿಯಿದೆ ಎಂದು ಹೇಳುವ ಮೂಲಕ ಸೆಲ್ವರಾಜ್ ಭಾವುಕರಾಗಿದ್ದರು.

  • ಸಾಮೂಹಿಕ ವಿವಾಹದಲ್ಲಿ ಜಗತ್ತೆ ಮೆಚ್ಚುವ ಕೆಲಸ ಮಾಡಿದ 51 ಜೋಡಿಗಳು

    ಸಾಮೂಹಿಕ ವಿವಾಹದಲ್ಲಿ ಜಗತ್ತೆ ಮೆಚ್ಚುವ ಕೆಲಸ ಮಾಡಿದ 51 ಜೋಡಿಗಳು

    ಕೊಪ್ಪಳ: ಮದುವೆ ಎನ್ನುವುದು ಎಲ್ಲರಿಗೂ ಮರೆಯಲಾಗದ ದಿನವಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಮದುವೆ ದಿನ ಕುಣಿದು ಕುಪ್ಪಳಿಸ್ತಾರೆ. ಆದರೆ ಕೊಪ್ಪಳದಲ್ಲಿ ಸಾಮೂಹಿಕ ವಿವಾಹದಲ್ಲಿ 51 ಜೋಡಿಗಳು ಜಗತ್ತೆ ಮೆಚ್ಚುವ ಕೆಲಸ ಮಾಡಿದ್ದಾರೆ.

    ಎಲ್ಲರ ಜೀವನದಲ್ಲೂ ಮದುವೆ ಎನ್ನುವುದು ಒಂದು ಸಂತಸದ ಕ್ಷಣ. ಮದುವೆಯ ಆ ಕ್ಷಣ ನೆನಪಿನಲ್ಲಿ ಉಳಿಯೋಕೆ ಕೆಲವರು ದಾಮ್ ದುಮ್ ಎಂದು ಖರ್ಚು ಮಾಡಿ ಮದುವೆ ಮಾಡಿಕೊಳ್ಳುತ್ತಾರೆ. ಆದರೆ ಕೊಪ್ಪಳದ ತಾಲೂಕಿನ ಗುಳದಳ್ಳಿ ಗ್ರಾಮದಲ್ಲಿ ನೆಡೆದ ಸಾಮೂಹಿಕ ಮದುವೆ ಎಲ್ಲರ ಗಮನ ಸೆಳೆಯಿತು. ಭಾನುವಾರ ಬರೋಬ್ಬರಿ 51 ನವ ಜೋಡಿಗಳು ಹಸೆಮಣೆ ಎರಿದರು. ಈ ವೇಳೆ ನವ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳು ಸಾಮೂಹಿಕವಾಗಿ ನೇತ್ರದಾನದ ಶಪಥ ಮಾಡಿದರು.

    ಅಂಧರ ಬಾಳಿಗೆ ಬೆಳಕು ಕೊಡುವುದಕ್ಕೆ ನಿರ್ಧಾರ ಮಾಡಿದ ನವ ಜೋಡಿಗಳು ಮದುವೆಯ ಸಂದರ್ಭದಲ್ಲೆ ಇಂತಹದೊಂದು ನಿರ್ಣಯ ತೆಗೆದುಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇನ್ನೂ ನಾವು ಸತ್ತ ಮೇಲೂ ಜಗತ್ತನ್ನೂ ನೋಡಬೇಕು ಅಂದರೆ ನೇತ್ರದಾನ ಮಾಡಬೇಕು ಎಂದು ನವ ಜಿವನಕ್ಕೆ ಕಾಲಿಟ್ಟ ವಧು ಹೇಳಿದ್ದರು.

    ಅಂಬೇಡ್ಕರ್ ಜಯಂತಿ ಅಂಗವಾಗಿ ನಡೆದ ಸಾಮೂಹಿಕ ವಿವಾಹದಲ್ಲಿ ನವಜೋಡಿಗಳು ನೇತ್ರದಾನ ಶಪಥ ಮಾಡಿದ್ದಾರೆ. ಡಾ. ಬಿ.ಆರ್ ಅಂಬೇಡ್ಕರ್ ಯುವಕ ಸಂಘ, ಸಮರ್ಪಣಾ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ 51 ಜೋಡಿಗಳ ಸರಳ ಸಾಮೂಹಿಕ ವಿವಾಹದಲ್ಲಿ ಅಂಧರ ಬಾಳಿಗೆ ಬೆಳಕಾಗಲು ಮುಂದಾಗಿದ್ದಾರೆ. ದಾನದಲ್ಲಿ ಶ್ರೇಷ್ಠದಾನ ನೇತ್ರದಾನ, ಇಂತಹ ನೇತ್ರದಾನ ಮಾಡುವ ಮೂಲಕ ಈ ನವ ದಂಪತಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ. ಪ್ರತಿ ವರ್ಷ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳುವ ಅಂಬೇಡ್ಕರ್ ಯುವಕ ಸಂಘ ಈ ಬಾರಿ ತುಸು ವಿಭಿನ್ನವಾಗಿ ಸಾಮಾಜಿಕ ಜಾಗೃತಿ ಕಾರ್ಯಕ್ರಮದ ಮೂಲಕ ಮದುವೆ ಮಾಡಿಕೊಟ್ಟರು. ಮದುವೆಯಾದ 51 ಜೋಡಿಗಳಿಗೆ ಸಸಿ ವಿತರಣೆ ಮಾಡಿ ಮದುವೆಯಲ್ಲಿ ಪರಿಸರ ಕಾಳಜಿ ಮೆರೆದಿದ್ದಾರೆ.