Tag: Extremists

  • JDS, ಕಾಂಗ್ರೆಸ್ ಉಗ್ರಗಾಮಿಗಳ ಪರ ನಿಂತಿವೆ – ಮೋದಿ ಗಂಭೀರ ಆರೋಪ

    JDS, ಕಾಂಗ್ರೆಸ್ ಉಗ್ರಗಾಮಿಗಳ ಪರ ನಿಂತಿವೆ – ಮೋದಿ ಗಂಭೀರ ಆರೋಪ

    ಬೆಂಗಳೂರು/ಚಿತ್ರದುರ್ಗ: ಬಿಜೆಪಿಗೆ (BJP) ಬೂಸ್ಟ್ ಕೊಡಲು ಮತ್ತೊಮ್ಮೆ ರಾಜ್ಯಕ್ಕೆ ಎಂಟ್ರಿ ಕೊಟ್ಟ ಪ್ರಧಾನಿ ಮೋದಿ (Narendra Modi), ಚಿತ್ರದುರ್ಗ, ಹೊಸಪೇಟೆ, ಸಿಂಧನೂರಿನಲ್ಲಿ ಆಯೋಜಿಸಿದ್ದ ಸಮಾವೇಶಗಳಲ್ಲಿ ಪಾಲ್ಗೊಂಡು ಮತಬೇಟೆ ನಡೆಸಿದರು.

    ಇದೇ ವೇಳೆ ಕಾಂಗ್ರೆಸ್ (Congress), ಜೆಡಿಎಸ್ (JDS) ಉಗ್ರವಾದಿಗಳ ಪರವಿದೆ ಎಂಬ ಗಂಭೀರ ಆರೋಪ ಮಾಡಿದರು. ಸರ್ಜಿಕಲ್ ಸ್ಟ್ರೈಕ್‌ ನಡೆದಾಗ ಕಾಂಗ್ರೆಸ್‌ನವರು ಹೆಮ್ಮೆ ಪಡುವ ಬದಲು ಅಪಮಾನ ಮಾಡಿದರು ಎಂದು ದೂಷಿಸಿದ್ರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಬಡವರಿಗೆ ತಲುಪುವ ಯೋಜನೆಗಳು ನಿಲ್ಲುತ್ತವೆ. ಆದ್ದರಿಂದ ಕರ್ನಾಟಕದ ಅಭಿವೃದ್ಧಿಗಾಗಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ತರಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಬಿಜೆಪಿ ಜನರ ಆಶೀರ್ವಾದದಿಂದಲ್ಲ ಕಳ್ಳತನ ಮಾಡಿದ ಸರ್ಕಾರ, ಕಾಂಗ್ರೆಸ್‍ಗೆ ಪೂರ್ಣ ಬಹುಮತ ಕೊಡಿ: ರಾಹುಲ್ ಮನವಿ

    ಕಾಂಗ್ರೆಸ್ ಇತಿಹಾಸ ಅವರ ಚಿಂತನೆಗಳನ್ನು ಮರೆಯಬಾರದು. ಆತಂಕ ಸೃಷ್ಟಿಸುವುದು ಕಾಂಗ್ರೆಸ್ ಇತಿಹಾಸ. ಕರ್ನಾಟಕದಲ್ಲಿ ಉಗ್ರ ಕೃತ್ಯಗಳು ನಡೆದಾಗ ಕಾಂಗ್ರೆಸ್ ಅವರ ಪರನಿಂತಿತು. ಜೆಡಿಎಸ್, ಕಾಂಗ್ರೆಸ್ ಎರಡೂ ಪಕ್ಷಗಳು ಉಗ್ರಗಾಮಿಗಳ (Extremists) ಪರ ನಿಂತಿವೆ. ಆದ್ರೆ ಬಿಜೆಪಿ ಆತಂಕವಾದಿಗಳು ಹಾಗೂ ಉಗ್ರವಾದಿಗಳನ್ನ ಶಮನಗೊಳಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಲಿಂಗಸುಗೂರು, ಮಾನ್ವಿಯಲ್ಲಿ HDK ಭರ್ಜರಿ ಮತಬೇಟೆ; ಕುಮಾರಸ್ವಾಮಿಗೆ ಟಗರು ಮರಿ ಗಿಫ್ಟ್‌

    ಇದೇ ವೇಳೆ `ವಿಷಸರ್ಪ’ ಎಂದ ಮಲ್ಲಿಕಾರ್ಜುನ ಖರ್ಗೆ, ನಾಲಾಯಕ್ ಮಗ ಎಂದ ಪ್ರಿಯಾಂಕ್ ಖರ್ಗೆಯನ್ನು ಲಾಯಕ್ ಎನ್ನುತ್ತಲೇ ಮೋದಿ ಕಾಲೆಳೆದರು.

  • ಒಂದೇ ದಿನ 644 ಉಗ್ರರ ಶರಣಾಗತಿ

    ಒಂದೇ ದಿನ 644 ಉಗ್ರರ ಶರಣಾಗತಿ

    – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಾಪಸ್
    – ಶರಣಾದ ವ್ಯಕ್ತಿಗಳಿಗೆ ಪುನರ್ವಸತಿ ಕ್ರಮ

    ಗುವಾಹಟಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಅಸ್ಸಾಂನಲ್ಲಿ ನಿಷೇಧಕ್ಕೆ ಒಳಗಾದ ಉಗ್ರ ಸಂಘಟನೆಗಳ ಒಟ್ಟು 644 ಸದಸ್ಯರು ಸರ್ಕಾರಕ್ಕೆ ಶರಣಾಗಿ, ಸಮಾಜದ ಮುಖ್ಯ ವಾಹಿನಿಗೆ ಬರುವ ನಿರ್ಧಾರ ಕೈಗೊಂಡಿದ್ದಾರೆ.

    ದೇಶದಲ್ಲೆ ಅಶಾಂತಿ ಸೃಷ್ಟಿಗೆ ಭಯೋತ್ಪಾದಕರು ತೀವ್ರ ಪ್ರಯತ್ನ ನಡೆಸುತ್ತಿರುವ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಉಗ್ರರು ಶರಣಾಗಿರುವುದು ವಿಶೇಷ. ಇಷ್ಟು ಪ್ರಮಾಣದ ಉಗ್ರರು ಉಗ್ರವಾದವನ್ನು ತ್ಯಜಿಸಿ ಒಂದೇ ದಿನದಲ್ಲಿ ಶರಣಾಗುವುದು ಇದೆ ಮೊದಲು ಎಂದು ವರದಿಯಾಗಿದೆ.

    ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಸಮ್ಮುಖದಲ್ಲಿ ನಿಷೇಧಿತ ಎನ್‍ಡಿಎಫ್‍ಡಿ, ಯುಎಲ್‍ಎಫ್‍ಎ, ಕೆಎಲ್‍ಒ, ಸಿಪಿಐ(ನಕ್ಸಲ್), ಎನ್‍ಎಸ್‍ಎಲ್‍ಎ, ಎಡಿಎಫ್ ಹಾಗೂ ಎನ್‍ಎಲ್‍ಎಫ್‍ಬಿ ಬಂಡುಕೋರ ಸಂಘಟನೆಗಳ 644 ಸದಸ್ಯರು ತಮ್ಮ ಸಂಘಟನೆಗಳನ್ನು ತೊರೆದು ಶರಣಾದರು.

    ಈ ಸಂದರ್ಭದಲ್ಲಿ ಉಗ್ರರು 177 ಶಸ್ತ್ರಾಸ್ತ್ರಗಳು, 58 ಸಿಡಿಮದ್ದುಗಳು, 1.93 ಕೆಜಿ ತೂಕದ ಸ್ಫೋಟಕಗಳು, 52 ಗ್ರೆನೇಡ್‍ಗಳು, 71 ಬಾಂಬ್‍ಗಳು, 3 ರಾಕೆಟ್ ಲಾಂಚರ್ ಗಳು 306 ಸ್ಫೋಟಕ ಸಾಧನಗಳು ಹಾಗೂ 15 ಚೂಪಾದ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಿದ್ದಾರೆ.

    ಮುಖ್ಯಮಂತ್ರಿ ಸೋನೊವಾಲ್ ಈ ಕಾರ್ಯಕ್ರಮದಲ್ಲಿ ಮಾತನಾಡಿ, ಶರಣಾದ ವ್ಯಕ್ತಿಗಳಿಗೆ ಸರ್ಕಾರದಲ್ಲಿರುವ ಯೋಜನೆಗಳಡಿ ಪುನರ್ವಸತಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಅಸ್ಸಾಂ ಅಭಿವೃದ್ಧಿಗಾಗಿ ಸಮಾಜದ ಮುಖ್ಯವಾಹಿನಿಗೆ ವಾಪಸ್ಸಾದ ನಿಮ್ಮ ಬಗ್ಗೆ ಜನ ಹೆಮ್ಮೆ ಪಡುತ್ತಾರೆ. ಇದೇ ರೀತಿಯಾಗಿ ಮತ್ತಷ್ಟು ವ್ಯಕ್ತಿಗಳು ಶರಣಾಗಿ ಭಾರತದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.