Tag: extortion

  • ಪಾರ್ಟಿ ಮಾಡಲು ಪಬ್‌ಗೆ ಕರೆದು ಸ್ನೇಹಿತನಿಂದಲೇ ಸುಲಿಗೆ – ನಾಲ್ವರ ಬಂಧನ

    ಪಾರ್ಟಿ ಮಾಡಲು ಪಬ್‌ಗೆ ಕರೆದು ಸ್ನೇಹಿತನಿಂದಲೇ ಸುಲಿಗೆ – ನಾಲ್ವರ ಬಂಧನ

    ಬೆಂಗಳೂರು: ಪಬ್‌ಗೆ ಪಾರ್ಟಿಗೆ ಕರೆದ ಸ್ನೇಹಿತರೇ ಸುಲಿಗೆ ಮಾಡಿಸಿದ್ದ ಪ್ರಕರಣದಲ್ಲಿ ಬೆಂಗಳೂರಿನ (Bengaluru) ಚಿಕ್ಕಜಾಲ (Chikkajala) ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

    ಜೆಪಿ ನಗರ ನಿವಾಸಿ ಚಂದನ್ ಎನ್ನುವ ಯುವಕನಿಗೆ ಪವನ್ ಮತ್ತು ಅಚಲ್ ಎಂಬಿಬ್ಬರು ಸ್ನೇಹಿತರಿದ್ದರು. ಚಂದನ್ ಅರ್ಥಿಕವಾಗಿ ಚನ್ನಾಗಿದ್ದ. ಕಳೆದ ಮೇ 1 ರಂದು ಚಂದನ್‌ಗೆ ಕರೆ ಮಾಡಿ ಚಿಕ್ಕಜಾಲ ಬಳಿಯ ಪಬ್‌ಗೆ ಬರುವಂತೆ ಹೇಳಿದ್ದರು. ಇದನ್ನೂ ಓದಿ: ರೈಲ್ವೇ ಟ್ರ್ಯಾಕ್‌ನಲ್ಲಿ ನವವಿವಾಹಿತೆ ಶವ ಪತ್ತೆ ಕೇಸ್ – ಪತಿ ಮನೆ ಮುಂದೆ ಮೃತದೇಹವಿಟ್ಟು ಪ್ರತಿಭಟನೆ

    ತಡರಾತ್ರಿ ತನಕ ಅಚಲ್ ಮತ್ತು ಪವನ್, ಚಂದನ್ ಮೂವರು ಪಾರ್ಟಿ ಮಾಡಿದ್ದರು. ನಂತರ ಜಾಲಿ ರೈಡ್ ಹೋಗೋಣ ಅಂತಾ ಚಂದನ್ ಕಾರಿನಲ್ಲೇ ಏರ್ಪೋರ್ಟ್ ಕಡೆಗೆ ಹೊರಟಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಕಾರಿನಲ್ಲಿದ್ದ ಮೂವರ ಮೇಲೂ ಹಲ್ಲೆ ಮಾಡಿ ಚಂದನ್ ಬಳಿಯಿದ್ದ ಮೂರು ಲಕ್ಷ ಮೌಲ್ಯದ ಚಿನ್ನ, ನಗದು ದೋಚಿ ಎಸ್ಕೇಪ್ ಆಗಿದ್ದರು. ಈ ವೇಳೆ ಜೊತೆಗಿದ್ದ ಅಚಲ್ ಮತ್ತು ಪವನ್ ಪೊಲೀಸರಿಗೆ ದೂರು ನೀಡೋದು ಬೇಡ ಅಂತಾ ಚಂದನ್‌ಗೆ ಮನವೊಲಿಸಿದ್ದರು.

    ಇದಾದ ಒಂದು ವಾರದ ನಂತರದ ಘಟನೆ ಬಗ್ಗೆ ಅನುಮಾನಗೊಂಡ ಚಂದನ್ ಪೊಲೀಸರಿಗೆ ದೂರು ನೀಡಿದ್ದ. ತನಿಖೆಯಲ್ಲಿ ಜೊತೆಗಿದ್ದ ಸ್ನೇಹಿತರೇ ಸುಲಿಗೆಕೋರರಿಗೆ ಸುಪಾರಿ ನೀಡಿ ಸುಲಿಗೆ ಮಾಡಿರುವುದು ಗೊತ್ತಾಗಿತ್ತು. ಸದ್ಯ ಪವನ್, ಪ್ರೇಮ್ ಶೆಟ್ಟಿ, ಅಚಲ್, ತರುಣ್ ಎಂಬವರನ್ನು ಬಂಧಿಲಾಗಿದೆ. ಇದನ್ನೂ ಓದಿ: ಪ್ರೀತಿ ವಿಚಾರಕ್ಕೆ ಕಿರಿಕ್ – ಶಿಕ್ಷಕಿಗೆ ಚಾಕು ಇರಿದು ಕೊಂದ ಯುವಕ

  • ರೈತನ ಬಳಿ ಹಣ ಕಸಿದು ನಂದಿಬೆಟ್ಟಕ್ಕೆ ಹೋಗಿ ಮಜಾ ಮಾಡಿದ್ದ ಯುವಕರು ಅರೆಸ್ಟ್

    ರೈತನ ಬಳಿ ಹಣ ಕಸಿದು ನಂದಿಬೆಟ್ಟಕ್ಕೆ ಹೋಗಿ ಮಜಾ ಮಾಡಿದ್ದ ಯುವಕರು ಅರೆಸ್ಟ್

    ಚಿಕ್ಕಬಳ್ಳಾಪುರ: ರೈತನ ಬಳಿ ಹಣ ಕಸಿದು ನಂದಿಬೆಟ್ಟಕ್ಕೆ ಹೋಗಿ ಮಜಾ ಮಾಡಿದ್ದ ಯುವಕರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

    ನಂದಿಬೆಟ್ಟ ನೋಡಬೇಕು ಅಂತ ಬೆಂಗಳೂರಿನಿಂದ ಬೈಕ್ ಏರಿ ನಂದಿಬೆಟ್ಟಕ್ಕೆ ಬಂದಿದ್ದ ಯುವಕರು ಚೆಕ್ ಪೋಸ್ಟ್‌ನಲ್ಲಿ ಟಿಕೆಟ್ ಖರೀದಿ ಮಾಡಲು ಹಣ ಇಲ್ಲದೆ, ರೈತರೊಬ್ಬರ ಬಳಿ ಹಣ ಹಾಗೂ ಮೊಬೈಲ್ ಸುಲಿಗೆ ಮಾಡಿ ನಂದಿಬೆಟ್ಟಕ್ಕೆ ಹೋಗಿ ಮೋಜು ಮಸ್ತಿ ಮಾಡಿರುವ ಘಟನೆ ಈ ಹಿಂದೆ ನಡೆದಿತ್ತು.

    ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಈಗ ಬಂಧಿಸಿದ್ದಾರೆ. ಬೆಂಗಳೂರಿನ ನಾಗವಾರದ ಗೋವಿಂದಪುರದ ಸಯ್ಯದ್ ಸಲೀಂ, ಸಯ್ಯದ್ ಅಬೀಬ್ ಉಲ್ಲಾ ಬಂಧಿತ ಆರೋಪಿಗಳು. ಇದನ್ನೂ ಓದಿ: ಮುಳಬಾಗಿಲು ಗಂಗಮ್ಮ ದೇವಾಲಯ ಮುಂಭಾಗವೇ ಕೈ ನಗರಸಭೆ ಸದಸ್ಯನ ಬರ್ಬರ ಕೊಲೆ

    BRIBE

    ಗೋವಿಂದಪುರದ 7 ಮಂದಿ ಆರೋಪಿಗಳು ಏಪ್ರಿಲ್ 29 ರಂದು ಬೆಳ್ಳಂಬೆಳಗ್ಗೆ ನಂದಿಬೆಟ್ಟಕ್ಕೆ ಬಂದಿದ್ದರು. ಚೆಕ್ ಪೋಸ್ಟ್ ಬಳಿ ಟಿಕೆಟ್ ಖರೀದಿ ಮಾಡೋಕು ದುಡ್ಡಿಲ್ಲದೆ ವಾಪಾಸ್ಸಾಗಿದ್ದಾರೆ. ಆದರೆ ಈ ವೇಳೆ ದೊಡ್ಡಬಳ್ಳಾಪುರ ಮಾರ್ಗದ ಕಡೆಗೆ ಬಂದ ಮೂವರು ಯುವಕರು ಮೇಳೆಕೋಟೆ ಕ್ರಾಸ್ ಬಳಿ ಮೇಳೆಕೋಟೆ ಗ್ರಾಮದ ರೈತ ರಾಜಣ್ಣ ನನ್ನ ಬೆದರಿಸಿ ರಾಜಣ್ಣನ ಬಳಿ ಇದ್ದ ಮೊಬೈಲ್ ಹಾಗೂ 25,200 ರೂಪಾಯಿ ಹಣ ಕಸಿದು ಪರಾರಿಯಾದ್ದರು. ಇದನ್ನೂ ಓದಿ: ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಯುವಕ ನೇಣಿಗೆ ಶರಣು

    ಕದ್ದ ಹಣದಿಂದ ಮತ್ತೆ ನಂದಿಬೆಟ್ಟಕ್ಕೆ ಹೋಗಿ ಮಸ್ತ್ ಮಜಾ ಮಾಡಿದ್ದಲ್ಲದೇ ನಂದಿಬೆಟ್ಟದಿಂದ ವಾಪಸ್ ಬಂದು ಮದ್ಯ, ಚಿಕನ್ ಮಟನ್ ಪಾರ್ಟಿ ಅಂತ ಹಣ ಖರ್ಚು ಮಾಡಿದ್ದಾರೆ. ಆದರೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬೆಂಗಳೂರು ಮೂಲದ ಇಬ್ಬರು ಯುವಕನರನ್ನು ಬಂಧಿಸಿದ್ದೇವೆ ಅಂತ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಎಸ್ಪಿ ಕೋನವಂಶಿ ಕೃಷ್ಣ ತಿಳಿಸಿದರು.

    ಏಪ್ರಿಲ್ 29 ರಂದು ರೈತ ರಾಜಣ್ಣ ತಾನು ಬೆಳೆದಿದ್ದ ಬೀನ್ಸ್‌ನ್ನು ದೊಡ್ಡಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಗೆ ಹಾಕಿ ಬಂದು 25,200 ರೂಪಾಯಿ ಹಣ ಜೇಬಲ್ಲಿ ಇಟ್ಟು ಕೊಂಡು ತನ್ನದೇ ಸ್ಕೂಟಿಯಲ್ಲಿ ಸ್ವಗ್ರಾಮ ಮೇಳೆಕೋಟಗೆ ಬರುತ್ತಿದ್ದರು. ಈ ವೇಳೆ ಮೇಳೆಕೋಟೆ ಕ್ರಾಸ್‍ನಿಂದ ಮೇಳೆಕೋಟೆ ಗ್ರಾಮದ ಕಡೆಯು ರಸ್ತೆ ಮಧ್ಯೆ ಬಂದ ಈ ಸಯ್ಯದ್ ಸಲೀಂ, ಹಾಗೂ ಸಯ್ಯದ್ ಅಬೀಬ್ ಉಲ್ಲಾ ಹಾಗೂ ಮತ್ತೋರ್ವ ಯುವಕ ಘಾಟಿ ದೇವಾಲಯಕ್ಕೆ ಹೇಗೆ ಹೋಗಬೇಕು ಅಂತ ಅಡ್ರೆಸ್ ಕೇಳೋ ನೆಪದಲ್ಲಿ ಅಡಗಟ್ಟಿದ್ದರು.

    ರಾಜಣ್ಣ ಸ್ಕೂಟಿ ನಿಲ್ಲಿಸಿ ಅಡ್ರೆಸ್ ಹೇಳುತ್ತಿದ್ದರೆ ಇತ್ತ ಮೂವರು ಯುವಕರು ಚಾಕು ಹಿಡಿದು ರಾಜಣ್ಣನಿಗೆ ಕುತ್ತಿಗೆ ಹೊಟ್ಟೆ ಬೆನ್ನಿಗೆ ಚುಚ್ಚಿ ಹಿಡಿದಿದ್ದಾರೆ. ಈ ವೇಳೆ ಯುವಕರೇ ಕೈ ಹಾಕಿ ರಾಜಣ್ಣ ಜೇಬಿನಲ್ಲಿದ್ದ ಹಣ ಹಾಗೂ ಮೊಬೈಲ್ ತೆಗೆದುಕೊಂಡು ಎಸ್ಕೇಪ್ ಆಗಿದ್ದರು. ರೈತ ರಾಜಣ್ಣ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು 2 ತಿಂಗಳ ನಂತರ ಕದ್ದಿದ್ದ ಮೊಬೈಲ್ ಲೋಕೇಷನ್ ಪತ್ತೆ ಹಚ್ಚಿ ಇಬ್ಬರು ಯುವಕರನ್ನ ಬಂಧಿಸಿದ್ದಾರೆ. ಬಂಧಿತರಿಂದ 10,000 ರೂ. ನಗದು ಒಂದು ಮೊಬೈಲ್ ವಶಪಡಿಸಿಕೊಂಡು ಉಳಿದವರಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.

  • ಸುಂಟಿಕೊಪ್ಪ ಸುಲಿಗೆ ಪ್ರಕರಣದಲ್ಲಿ 3 ಆರೋಪಿಗಳು ಅಂದರ್- 5.2 ಲಕ್ಷ ಹಣ, ಕಾರು, ಬೈಕ್ ವಶ

    ಸುಂಟಿಕೊಪ್ಪ ಸುಲಿಗೆ ಪ್ರಕರಣದಲ್ಲಿ 3 ಆರೋಪಿಗಳು ಅಂದರ್- 5.2 ಲಕ್ಷ ಹಣ, ಕಾರು, ಬೈಕ್ ವಶ

    ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮದ ಗುಂಡುಕುಟ್ಟಿ ಎಸ್ಟೇಟ್ ಸಮೀಪ ನಡೆಸಿದ್ದ ಸುಲಿಗೆ ಪ್ರಕರಣ ಮೂವರು ಆರೋಪಗಳನ್ನು ಬಂಧಿಸಿವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್ ತಿಳಿಸಿದರು.

    ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಣಗಾಲ್ ನಿವಾಸಿ ಟಿ.ವಿ.ಹರೀಶ್ (57), ಸುಂಟಿಕೊಪ್ಪದ ವಿಜಯನಗರ ನಿವಾಸಿ ಕುಮರೇಶ್ (42) ಹಾಗೆಯೇ ಸುಲಿಗೆಯ ಮಾಸ್ಟರ್ ಮೈಂಡ್ ಇದಕ್ಕೂ ಮೊದಲು ಎಸ್ಟೇಟ್‍ನಲ್ಲಿ ರೈಟರ್ ಕೆಲಸ ಮಾಡಿಕೊಂಡಿದ್ದ ಇಗ್ಗೋಡ್ಲು ಗ್ರಾಮದ ಜಗ್ಗರಂಡ ಕಾವೇರಪ್ಪ (56) ಆರೋಪಗಳನ್ನು ಬಂಧಿಸಿ, ಅವರಿಂದ 5.2 ಲಕ್ಷ ಹಣ ಹಾಗೂ ಕಾರು, ಬೈಕ್ ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ದರೋಡೆಗೂ ಮೊದಲೇ ಪೂರ್ವ ನಿಯೋಜಿತ ಸಂಚು ರೂಪಿಸಿದ್ದ ಖದೀಮರು ರೈಟರ್ ವಿಜಯ್ ಕುಮಾರ್ ಕಳ್ಳತನ ಮಾಡಿದ್ದಾನೆ ಎಂದು ಸುಳ್ಳು ವದಂತಿಗಳನ್ನು ವ್ಯವಸ್ಥಿತವಾಗಿ ಹಬ್ಬಿಸಿದ್ದರು. 2014 ರವರೆಗೆ ಜೈಲಿನಲ್ಲೇ ಇದ್ದು ಬಿಡುಗಡೆಯಾಗಿದ್ದ ಈ ಕೃತ್ಯದ ಎ(1) ಆರೋಪಿ ಹರೀಶ್ 2004 ರಲ್ಲಿ ಸೋಮವಾರಪೇಟೆಯಲ್ಲಿ ಬಂದೂಕು ಕಳವು ಪ್ರಕರಣ, ಸುಂಟಿಕೊಪ್ಪದಲ್ಲಿ ಟ್ಯಾಕ್ಸಿ ಡ್ರೈವರ್ ಒಬ್ಬರನ್ನು ಕೊಲೆ ಆರೋಪ, ಹಾಗೆಯೇ ಸೆಂಟ್ರಲ್ ಬ್ಯಾಂಕ್ ದರೋಡೆ ಸೇರಿದಂತೆ ಕುಶಾಲನಗರದ ಜೋಸ್ಕೊ ಜ್ಯುವೆಲರಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಮತ್ತೊರ್ವ ಆರೋಪಿ ಕುಮಾರೇಶ್ ವಿರುದ್ಧವೂ ಹೆಬ್ಬಾಲೆಯಲ್ಲಿ ನಡೆದಿದ್ದ ಕೊಲೆ ಸುಫಾರಿ, ಬಿಜಾಪುರದಲ್ಲಿ ದರೋಡೆ ಪ್ರಕರಣ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿಸಿರು.

    ಏನಿದು ಪ್ರಕರಣ: ಮೇ 5 ರಂದು ಗುಂಡುಕುಟ್ಟಿ ಎಸ್ಟೇಟ್‍ನಲ್ಲಿ ಮಾಲೀಕರಾದ ಕರ್ನಲ್ ಕುಮಾರ್ ತೋಟದ ಕಾರ್ಮಿಕರಿಗೆ ಹಣವನ್ನು ಬಟವಾಡೆ ಮಾಡಲು ರೈಟರ್ ವಿಜಯ್ ಕುಮಾರ್ ಅವರಿಗೆ ಚೆಕ್ಕುಗಳನ್ನು ನೀಡಿ ಕಳುಹಿಸಿದ್ದರು. ಅದರಂತೆ ಸುಂಟಿಕೊಪ್ಪದ ಕೆನರಾ ಬ್ಯಾಂಕ್‍ನಲ್ಲಿ ಹಣ ಡ್ರಾ ಮಾಡಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಗುಂಡುಕುಟ್ಟಿ ಎಸ್ಟೇಟ್ ಸಮೀಪ ಅಡ್ಡಗಟ್ಟಿದ ಖದೀಮರು ವಿಜಯ್ ಕುಮಾರ್‍ಗೆ ಮಾರಣಾಂತಿಕ ಹಲ್ಲೆ ಮಾಡಿ ಹಣ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  • ದರೋಡೆಕೋರರ ಬಂಧನ- 13 ದಿನಗಳಲ್ಲಿ ಪ್ರಕರಣ ಬೇಧಿಸಿದ ಪೊಲೀಸರು

    ದರೋಡೆಕೋರರ ಬಂಧನ- 13 ದಿನಗಳಲ್ಲಿ ಪ್ರಕರಣ ಬೇಧಿಸಿದ ಪೊಲೀಸರು

    ಕೊಡಗು: ಐದು ಜಿಲ್ಲೆಗಳಲ್ಲಿ 10 ದರೋಡೆ ಮಾಡಿದ್ದ ಅಂತರ್ ಜಿಲ್ಲೆ ದರೋಡೆಕೋರರನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದು, ಕೇವಲ 13 ದಿನಗಳಲ್ಲಿ ಪ್ರಕರಣ ಬೇಧಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಜೂನ್ 17ರಂದು ನಡೆದ ಹೆಬ್ಬಾಲೆಯ ಎಆರ್ ಪೆಟ್ರೋಲ್ ಬಂಕ್ ದರೋಡೆ ಮಾಡಿದ್ದ ಪ್ರಕರಣವನ್ನು ಪೊಲೀಸರು ಬೆನ್ನತ್ತಿದ್ದರು. ಈ ವೇಳೆ 5 ಜಿಲ್ಲೆಗಳ 10 ಪ್ರಕರಣಗಳು ಬಯಲಿಗೆ ಬಂದಿದ್ದು, ಅಂತರ್ ಜಿಲ್ಲೆ ಸುಲಿಗೆಕೋರರ ತಂಡವನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ರಾಮನಗರ, ಹಾಸನ, ಮೈಸೂರು ಮೂಲದ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಲಕ್ಷಾಂತರ ರೂ. ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

    ಲಾಂಗ್ ತೋರಿಸಿ ಹಲ್ಲೆ ಮಾಡಿ ಹಣ, ಮೊಬೈಲ್ ದೋಚಿ ಸುಲಿಗೆಕೋರರು ಪರಾರಿಯಾಗುತ್ತಿದ್ದರು. ಐಪಿಸಿ ಸೆಕ್ಷನ್ 420, 394, 427 ಅಡಿ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಡಗು ಎಸ್‍ಪಿ ಡಾ.ಸುಮನ್.ಡಿ.ಪನ್ನೇಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಸಿಸಿಟಿವಿ ಫೂಟೇಜ್, ಬೆರಳಚ್ಚಿನ ಆಧಾರದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ರಾಮನಗರದ ಪ್ರವೀಣ್(25), ಹಾಸನದ ಗಣೇಶ್(30), ಮೈಸೂರಿನ ಕುಮಾರ್(33) ಮತ್ತು ಅಭಿಷೇಕ್(23) ಎಂದು ಗುರುತಿಸಲಾಗಿದೆ.

    ಒಂಟಿ ಮನೆ, ಪೆಟ್ರೋಲ್ ಬಂಕ್‍ಗಳೇ ಇವರು ಟಾರ್ಗೆಟ್ ಮಾಡಿಕೊಳ್ಳುತ್ತಿದ್ದರು. ರಾಮನಗರ, ಮಂಡ್ಯ, ಮೈಸೂರು, ಹಾಸನ ಹಾಗೂ ಕೊಡಗಿನಲ್ಲಿ ಈ ಆರೋಪಿಗಳ ವಿರುದ್ಧ ದರೋಡೆ ಪ್ರಕರಣ ದಾಖಲಾಗಿವೆ. ಬಂಧಿತರಿಂದ ಒಟ್ಟು 2.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, 2 ಬೈಕ್, 2 ಲಾಂಗ್, 10ಕ್ಕೂ ಅಧಿಕ ಮೊಬೈಲ್, ಟಿವಿ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಪ್ರವೀಣ್ ಮೇಲೆ ಶನಿವಾರಸಂತೆ ಠಾಣೆಯಲ್ಲಿ ಈ ಹಿಂದೆ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ 13 ದಿನಗಳಲ್ಲಿ ಕೊಡಗು ಪೊಲೀಸರು ಪ್ರಕರಣ ಬೇಧಿಸಿದ್ದು, ಕೊಡಗು ಎಸ್‍ಪಿ ಡಾ.ಸುಮನ್.ಡಿ.ಪನ್ನೇಕರ್ ಅವರು ತನಿಖಾ ತಂಡಕ್ಕೆ ನಗದು ಬಹುಮಾನ ಘೋಷಿಸಿದ್ದಾರೆ.

  • ಬಿಜೆಪಿ ಸಚಿವರ ಸೆಕ್ಸ್ ಸಿಡಿ ಇಟ್ಕೊಂಡು ಬ್ಲಾಕ್‍ಮೇಲ್ ಮಾಡಿದ ಆರೋಪ- ಪತ್ರಕರ್ತ ವರ್ಮಾ ಬಂಧನ

    ಬಿಜೆಪಿ ಸಚಿವರ ಸೆಕ್ಸ್ ಸಿಡಿ ಇಟ್ಕೊಂಡು ಬ್ಲಾಕ್‍ಮೇಲ್ ಮಾಡಿದ ಆರೋಪ- ಪತ್ರಕರ್ತ ವರ್ಮಾ ಬಂಧನ

    ರಾಯ್ಪುರ್: ಬಿಜೆಪಿ ಸಚಿವರ ಸೆಕ್ಸ್ ಸಿಡಿ ಇಟ್ಟುಕೊಂಡು ಬ್ಲಾಕ್‍ಮೇಲ್ ಮಾಡಿದ ಆರೋಪದ ಮೇಲೆ ಮಾಜಿ ಬಿಬಿಸಿ ಪತ್ರಕರ್ತ ವಿನೋದ್ ವರ್ಮಾ ಅವರನ್ನು ಛತ್ತೀಸ್‍ಗಢ ಪೊಲೀಸರು ಶುಕ್ರವಾರ ಬೆಳಗ್ಗೆ ಬಂಧಿಸಿದ್ದಾರೆ.

    ಛತ್ತೀಸ್‍ಗಢದ ರಾಯ್ಪುರ್ ಜಿಲ್ಲೆಯಲ್ಲಿನ ಪಂಡಾರಿ ಪೊಲೀಸ್ ಠಾಣೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪ್ರಕಾಶ್ ಬಜಾಜ್ ದೂರು ದಾಖಲಿಸಿದ 12 ಗಂಟೆಗಳೊಳಗೆ ವರ್ಮಾ ಅವರ ಬಂಧನವಾಗಿದೆ. ವರ್ಮಾ ವಿರುದ್ಧ ಐಪಿಸಿ ಸೆಕ್ಷನ್ 384 ಹಾಗೂ 507ರ ಅಡಿ ಸುಲಿಗೆ ಹಾಗೂ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನ ಕ್ರೈ ಬ್ರಾಂಚ್ ಎಸ್‍ಪಿ ಅಜಾತಶತ್ರು ಬಹೂದೂರ್ ಸಿಂಗ್ ಅವರಿಗೆ ಹಸ್ತಾಂತರಿಸಲಾಗಿದೆ.

    ವರ್ಮಾ ಅವರನ್ನು ಇಂದಿರಾಪುರಂ ನಿವಾಸದಿಂದ ಛತ್ತೀಸ್‍ಗಢ ಪೊಲೀಸರು ಬಂಧಿಸಿದ್ದಾರೆ. ಅವರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಪಂಡಾರಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಛತ್ತೀಸ್‍ಗಢದ ಬಿಜೆಪಿ ಸಚಿವರೊಬ್ಬರ ಸೆಕ್ಸ್ ಸಿಡಿ ಹೊಂದಿದ್ದು, ಸುಲಿಗೆ ಮಾಡಲು ಯತ್ನಿಸಿದ ಕಾರಣ ವಿನೋದ್ ವರ್ಮಾ ಅವರ ಬಂಧನವಾಗಿದೆ ಎಂದು ಮೂಲಗಳು ತಿಳಿಸಿವೆ. ಇದೇ ವಾರ ವರ್ಮಾ, ಬಿಜೆಪಿ ಸಚಿವರ ಆಪ್ತರೊಬ್ಬರಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ.

    ಸಿಡಿ ವಶ: ಬಜಾಜ್ ಅವರು ದೂರು ದಾಖಲಿಸಿದ ನಂತರ ಛತ್ತೀಸ್‍ಗಢ ಪೊಲೀಸರು ದೆಹಲಿಯ ಅಂಗಡಿಯೊಂದರ ಮೇಲೆ ದಾಳಿ ಮಾಡಿ ಆರೋಪ ಕೇಳಿಬಂದಿರುವ ಸೆಕ್ಸ್ ಸಿಡಿಯ 1000 ಪ್ರತಿಗಳನ್ನು ವಶಪಡಿಸಿಕೊಂಡಿದ್ದಾರೆ. ಅಂಗಡಿ ಮಾಲೀಕನ ವಿಚಾರಣೆ ಬಳಿಕ ಪೊಲೀಸರು ವರ್ಮಾ ಅವರ ಮನೆ ಮೇಲೆ ದಾಳಿ ಮಾಡಿ ಹೆಚ್ಚಿನ ಸಂಖ್ಯೆಯ ಸಿಡಿಗಳು, ವರ್ಮಾ ಅವರ ಲ್ಯಾಪ್‍ಟಾಪ್ ಹಾಗೂ ಪೆನ್‍ಡ್ರೈವ್ ವಶಪಡಿಸಿಕೊಂಡಿದ್ದಾರೆ.

    ವಶಪಡಿಸಿಕೊಳ್ಳಲಾಗಿರುವ ಸಿಡಿಗಳಿಂದ ವ್ಯಕ್ತಿಯ ಪ್ರತಿಷ್ಠೆಗೆ ಧಕ್ಕೆಯಾಗಬಹುದಾದ ಕಾರಣ ಶೀಘ್ರವೇ ಬಂಧನ ಮಾಡಲಾಯ್ತು ಎಂದು ರಾಯ್ಪುರ್ ಐಜಿಪಿ ಪ್ರದೀಪ್ ಗುಪ್ತಾ ವರದಿಗಾರರಿಗೆ ಹೇಳಿದ್ದಾರೆ.

    ಗುರುವಾರ ಮಧ್ಯಾಹ್ನ ಎಫ್‍ಐಆರ್ ದಾಖಲಾಗಿದೆ. ಎಫ್‍ಐಆರ್‍ನಲ್ಲಿ ವಿನೋದ್ ವರ್ಮಾ ಅವರನ್ನು ಆರೋಪಿ ಎಂದು ಉಲ್ಲೇಖಿಸಿಲ್ಲ. ಆದ್ರೆ ಸಿಡಿಗಳು ವರ್ಮಾ ಅವರ ಬಳಿ ಇದ್ದವು. ಅವರನ್ನು ರಾಯ್ಪುರಕ್ಕೆ ಕರೆತರಲು ವಶಕ್ಕೆ ಕೋರಿದ್ದೇವೆ ಎಂದು ಗುಪ್ತಾ ಹೇಳಿದ್ದಾರೆ.

    ಸಿಡಿಯ ಮರುಮುದ್ರಣಕ್ಕೆ ಆರ್ಡರ್?:  ಯಾರೋ ಒಬ್ಬರು ಲ್ಯಾಂಡ್‍ಲೈನ್ ನಂಬರ್‍ಗೆ ಕರೆ ಮಾಡಿ ತನ್ನ ಬಾಸ್‍ನ ಸೆಕ್ಸ್ ಸಿಡಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ರು ಎಂದು ಪ್ರಕಾಶ್ ಬಜಾಜ್ ಅವರು ನಮಗೆ ದೂರು ನೀಡಿದ್ರು. ಕಾಲ್ ಟ್ರೇಸ್ ಮಾಡಿದಾಗ ದೆಹಲಿ ಅಂಗಡಿಯ ವಿಳಾಸ ಸಿಕ್ಕಿದ್ದು, ನಂತರ ದಾಳಿ ನಡೆಯಿತು. ವರ್ಮಾ ಅವರು ಸಿಡಿಯ ಮರುಮುದ್ರಣಕ್ಕೆ ಆರ್ಡರ್ ಮಾಡಿದ್ದರು ಎನ್ನಲಾಗಿದೆ. ಕರೆ ಮಾಡಿದ್ದು ವರ್ಮಾ ಅವರೇನಾ ಅಥವಾ ಬೇರೆ ವ್ಯಕ್ತಿಯಾ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ತನಿಖೆಯಿಂದ ಗೊತ್ತಾಗಲಿದೆ ಅಂತ ಗುಪ್ತಾ ತಿಳಿಸಿದ್ದಾರೆ.

    ವರ್ಮಾ ಬಂಧನವನ್ನ ಇಲ್ಲಿನ ವಿರೋಧ ಪಕ್ಷದ ನಾಯಕರು ಖಂಡಿಸಿದ್ದಾರೆ. ಛತ್ತೀಸ್‍ಗಢ ಬಿಜೆಪಿ ವಕ್ತಾರರಾದ ಶ್ರೀಚಂದ್ ಸುಂದರಾಣಿ ಪ್ರತಿಕ್ರಿಯಿಸಿ, ಇಂತಹ ವಿವಾದಗಳಿಂದ ಬಿಜೆಪಿಯ ಮೇಲೆ ಪರಿಣಾಮ ಬೀರುವುದಿಲ್ಲ. ಈ ಬಗ್ಗೆ ತನಿಖೆಗೆ ಪಕ್ಷ ಸಿದ್ಧವಾಗಿದೆ. ಇದೆಲ್ಲಾ ಕಾಂಗ್ರೆಸ್‍ನವರ ಪಿತೂರಿ ಎಂದು ಹೇಳಿದ್ದಾರೆ.

    ಸೆಕ್ಸ್ ಸಿಡಿ ನನ್ನ ಬಳಿ ಇದೆ: ಸಚಿವ ರಾಕೇಶ್ ಮುನಾತ್ ಅವರ ಸೆಕ್ಸ್ ಸಿಡಿ ನನ್ನ ಬಳಿ ಇದೆ. ಛತ್ತೀಸ್‍ಗಢ ಸರ್ಕಾರಕ್ಕೆ ಇದು ಇಷ್ಟವಿಲ್ಲ. ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗ್ತಿದೆ ಎಂದು ವಿನೋದ್ ವರ್ಮಾ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದಾರೆ.