Tag: Expulsion

  • ಉಚ್ಚಾಟನೆಯನ್ನು ನಿರೀಕ್ಷಿಸಿದ್ದೆವು, ಒಳ್ಳೆಯದಾಯ್ತು: ಎಸ್‌ಟಿ ಸೋಮಶೇಖರ್

    ಉಚ್ಚಾಟನೆಯನ್ನು ನಿರೀಕ್ಷಿಸಿದ್ದೆವು, ಒಳ್ಳೆಯದಾಯ್ತು: ಎಸ್‌ಟಿ ಸೋಮಶೇಖರ್

    ಬೆಂಗಳೂರು: ಬಿಜೆಪಿಯಲ್ಲಿ ರೇಪ್ ಮಾಡಿದವರನ್ನು ಉಚ್ಚಾಟನೆ ಮಾಡುವುದಿಲ್ಲ. ನಮ್ಮಂತವರನ್ನು ಉಚ್ಚಾಟನೆ ಮಾಡ್ತಾರೆ ಎಂದು ಯಶವಂತಪುರದ ಬಿಜೆಪಿಯ ಉಚ್ಚಾಟಿತ ಶಾಸಕ ಎಸ್‌ಟಿ ಸೋಮಶೇಖರ್ (S T Somashekar) ಹೇಳಿದರು.

    ಬಿಜೆಪಿಯ (BJP) ಯಶವಂತಪುರದ ಶಾಸಕ ಎಸ್‌ಟಿ ಸೋಮಶೇಖರ್ ಹಾಗೂ ಯಲ್ಲಾಪುರದ ಶಾಸಕ ಶಿವರಾಂ ಹೆಬ್ಬಾರ್ (Shivaram Hebbar) ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ. ಈ ಬಗ್ಗೆ `ಪಬ್ಲಿಕ್ ಟಿವಿ’ಗೆ ಪ್ರತಿಕ್ರಿಯೆ ನೀಡಿದ ಎಸ್‌ಟಿ ಸೋಮಶೇಖರ್ ಅವರು, ಉಚ್ಚಾಟನೆಯನ್ನು ನಿರೀಕ್ಷಿಸಿದ್ದೆವು. ಒಳ್ಳೆಯದಾಯ್ತು ಎಂದರು. ಇದನ್ನೂ ಓದಿ: ಸಾಲು ಸಾಲು ಉಚ್ಛಾಟನೆ, ತಾಂತ್ರಿಕವಾಗಿ ಬಿಜೆಪಿ ಬಲಾಬಲ ಕುಸಿತ

    1% ಸಹ ಬೇಸರ, ಅಸಮಾಧಾನ ಇಲ್ಲ. ಉಚ್ಚಾಟನೆ ಮಾಡಿದ್ದು ಖುಷಿ ಇದೆ. ಬಿಜೆಪಿಯಲ್ಲಿ ನನ್ನ ಪರವಾಗಿ ಮಾತನಾಡಲು ಯಾರಿಗೂ ಧೈರ್ಯ ಇಲ್ಲ. ಬಿಜೆಪಿಯಲ್ಲಿ ಮಾಡಬಾರದ್ದನ್ನ ಮಾಡಿರೋರು ಯರ‍್ಯಾರೋ ಇದ್ದಾರೆ. ಅತ್ಯಾಚಾರದ ಆರೋಪ ಹೊತ್ತಿರೋರು ಇದ್ದಾರೆ. ಅವರೆಲ್ಲರನ್ನೂ ಬಿಟ್ಟು ನನ್ನ ಉಚ್ಛಾಟನೆ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಯಿಂದ ಎಸ್‌ಟಿ ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಉಚ್ಚಾಟನೆ

    ಉಚ್ಚಾಟನೆ ಯಾಕೆ ಮಾಡಿದ್ದೀರಿ ಅಂತಾನೂ ಕೇಳೋದಿಲ್ಲ. ನಾನು ಈಗ ಫ್ರೀ ಬರ್ಡ್ ಆಗಿದ್ದೀನಿ. ಇನ್ನು ಫ್ರೀ ಬರ್ಡ್ ಆಗಿ ಓಡಾಡುತ್ತೇನೆ. ಕಾಂಗ್ರೆಸ್ ಇಲ್ಲ, ಬಿಜೆಪಿ ಇಲ್ಲ ಆರಾಮಾಗಿ ಇದ್ದೇವೆ. ಮುಂದಿನ ನಡೆ ಬಗ್ಗೆ ಈಗ ಯೋಚನೆ ಮಾಡಿಲ್ಲ ಎಂದರು.

  • ಯತ್ನಾಳ್ ಉಚ್ಚಾಟನೆಯನ್ನು ರಾಷ್ಟ್ರೀಯ ನಾಯಕರು ಮರುಪರಿಶೀಲಿಸಿದ್ರೆ ಪಕ್ಷಕ್ಕೆ ಲಾಭ – ಶ್ರೀರಾಮುಲು

    ಯತ್ನಾಳ್ ಉಚ್ಚಾಟನೆಯನ್ನು ರಾಷ್ಟ್ರೀಯ ನಾಯಕರು ಮರುಪರಿಶೀಲಿಸಿದ್ರೆ ಪಕ್ಷಕ್ಕೆ ಲಾಭ – ಶ್ರೀರಾಮುಲು

    -ಲಿಂಗಾಯತ ಸಮುದಾಯ ಬಿಜೆಪಿ ಜೊತೆಗಿದೆ, ಈ ನಿರ್ಧಾರದಿಂದ ಪಕ್ಷಕ್ಕೆ ಹಿನ್ನಡೆ ಎಂದ ಮಾಜಿ ಸಚಿವ

    ಬಳ್ಳಾರಿ: ಯತ್ನಾಳ್ (Basanagouda Patil Yatnal) ಉಚ್ಚಾಟನೆಯನ್ನು ರಾಷ್ಟ್ರೀಯ ನಾಯಕರು ಮರುಪರಿಶೀಲಿಸಿದರೆ ಪಕ್ಷಕ್ಕೆ ಲಾಭ ಆಗುತ್ತದೆ. ಇಡೀ ಲಿಂಗಾಯತ (Lingayat) ಸಮುದಾಯ ಬಿಜೆಪಿ (BJP) ಜೊತೆಗಿದೆ. ಆದ್ರೆ ಈ ನಿರ್ಧಾರದಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂದು ಮಾಜಿ ಸಚಿವ ಶ್ರೀರಾಮುಲು (Sriramulu) ಅವರು ಬಸನಗೌಡ ಪಾಟೀಲ್ ಯತ್ನಾಳ್ ಪರ ಬ್ಯಾಟಿಂಗ್ ಮಾಡಿದ್ದಾರೆ.

    ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಹಾಗೂ ಲಿಂಗಾಯತ ಸಮುದಾಯ 20-24 ರಷ್ಟಿದೆ. ಈ ಸಮುದಾಯದಿಂದ 1970-1980ರ ತನಕ ನಿಜಲಿಂಗಪ್ಪ ಅವರು ಸಿಎಂ ಆಗಿದ್ದರು. ಅದಾದ ಬಳಿಕ ವೀರೇಂದ್ರ ಪಾಟೀಲ್‌ರನ್ನ ಸಿಎಂ ಮಾಡುತ್ತೇವೆ ಎಂದಾಗ 177 ಶಾಸಕರು ಗೆದ್ದಿದ್ದರು. ಆದರೆ ಬೇರೆ ಬೇರೆ ಕಾರಣದಿಂದ ವೀರೇಂದ್ರ ಪಾಟೀಲ್‌ರನ್ನ ಕೆಳಗಿಳಿಸಲು ಕಾಂಗ್ರೆಸ್ (Congress) ನಾಯಕರು ನಿರ್ಧರಿಸಿದ್ದರು. ಆಗ ಆ ಸಂಪೂರ್ಣ ಸಮುದಾಯ ಜನಾತದಳದ ಕಡೆ ವಾಲಿತ್ತು. ಪುನಃ 1994ರಲ್ಲಿ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಅವರು ಪರಿಶ್ರಮ ಪಟ್ಟು ಲಿಂಗಾಯತ ಸಮುದಾಯದವರ ಪ್ರೀತಿ, ವಿಶ್ವಾಸದಿಂದ ಬಿಜೆಪಿಗೆ ಬಂದರು. ಆದರೆ ಇದೀಗ ಪಂಚಮಸಾಲಿಯ (Panchamasali) ಪ್ರಬಲ ನಾಯಕ ಬಸನಗೌಡ ಯತ್ನಾಳ್ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ:ರಾಮ್ ಚರಣ್ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ ಶಿವಣ್ಣ

     

    ನಾನು ಸಾಕಷ್ಟು ಸಾರಿ ಯತ್ನಾಳ್ ಅವರಿಗೆ ಹೇಳಿದ್ದೆ. ನೀವು ನೇರ ನಿಷ್ಠುರವಾದಿ, ಹಿಂದುತ್ವವಾದಿ. ನಿಮಗೆ ತೊಂದರೆ ಆಗುತ್ತೆ ಎಂದರೆ ನೀವು ನಿಷ್ಠುರ ಆಗುತ್ತೀರಿ ಎಂದಿದ್ದೆ ಆದರೆ ಇದೀಗ ಅವರನ್ನು ಉಚ್ಚಾಟನೆ ಮಾಡಿದ್ದಾರೆ. ಅಮಿತ್ ಶಾ, ನಡ್ಡಾ ಹಾಗೂ ಪ್ರಧಾನಿ ಮೋದಿ ಅವರು ಮರುಪರಿಶೀಲನೆ ಮಾಡಬೇಕು. ಇಡೀ ಪಂಚಮಸಾಲಿ ಸಮುದಾಯ ಬಿಜೆಪಿ ಜೊತೆಗಿದೆ. ಆ ಸಮುದಾಯಕ್ಕೆ ನೋವಾಗಬಾರದು. ಆ ಸಮುದಾಯವನ್ನು ದೂರ ಮಾಡಿಕೊಂಡ್ವಿ ಎಂದು ನೋವು ಪಡಬಾರದು. ಹೀಗಾಗಿ ಮರು ಪರಿಶೀಲನೆ ಮಾಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.

    ಯತ್ನಾಳ್ ಕಟ್ಟಾ ಹಿಂದುತ್ವವಾದಿ, ಹೀಗಾಗಿ ಹಿಂದುತ್ವ ವಾದಿಗಳಿಗೆ ನೋವಾಗಿರುತ್ತದೆ. ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷದಿಂದ ದೇಶ ದೊಡ್ಡದು. ಲಿಂಗಾಯತ ಸಮುದಾಯಕ್ಕೆ ನೋವಾಗಿದೆ. ನನಗೂ ಅವಕಾಶ ಸಿಕ್ಕಾಗ ನಾಯಕರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತೇನೆ. ಲಿಂಗಾಯತ ಸಮುದಾಯ ದೊಡ್ಡ ಸಮುದಾಯ, ಏನೇ ಆದರೂ ಇದನ್ನು ಸರಿಪಡಿಸಬೇಕು. ಈ ನಿರ್ಧಾರದಿಂದ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗುತ್ತದೆ. ಸಮುದಾಯಗಳನ್ನ ಒಗ್ಗೂಡಿಸಿಕೊಂಡು ಹೋಗಬೇಕು. ಉಚ್ಚಾಟನೆಯನ್ನು ಮರುಪರಿಶೀಲನೆ ಮಾಡಿದರೆ ಪಕ್ಷಕ್ಕೆ ಲಾಭ ಆಗುತ್ತದೆ ಎಂದರು.

    ಯತ್ನಾಳ್ ಉಚ್ಚಾಟನೆಗೆ ಬಿಜೆಪಿಯ ಕೆಲವರು ಸಂಭ್ರಮಿಸಿದ ವಿಚಾರ:
    ಕೆಲವರು ಇದರ ಲಾಭ ಪಡೆಯಲು ಮುಂದಾಗಿದ್ದಾರೆ. ಒಬ್ಬ ಮನುಷ್ಯ ಎಲ್ಲರಿಗೂ ಒಳ್ಳೆಯವರಾಗಿರಲು ಸಾಧ್ಯ ಇಲ್ಲ. ಎರಡು ಗುಂಪುಗಳಾಗಿರುವುದರಿಂದ ಪಾರ್ಟಿಗೆ ಸಮಸ್ಯೆ ಆಗುತ್ತದೆ. ಅವರಿಗಾದರೆ ಇವರಿಗೆ, ಇವರಿಗಾದರೆ ಅವರಿಗೆ ನೋವಾಗುತ್ತದೆ. ಹೀಗಾಗಿ ಈ ರೀತಿ ಆಗಬಾರದು ಎಂದಿದ್ದಾರೆ.ಇದನ್ನೂ ಓದಿ:ಯತ್ನಾಳ್‌ ಉಚ್ಛಾಟನೆ ಬೆನ್ನಲ್ಲೇ ಬಿಜೆಪಿಯ ಮತ್ತೊಬ್ಬ ಮುಖಂಡ ರಾಜೀನಾಮೆ – ಬೆಂಬಲಿಗರಿಂದ ಪ್ರತಿಭಟನೆಗೆ ಸಜ್ಜು!

  • ಶೆಟ್ಟರ್ ಬೆಂಬಲಿಗರಿಗೆ ಬಿಜೆಪಿಯಿಂದ ಗೇಟ್ ಪಾಸ್ – 27 ಜನರ ಉಚ್ಚಾಟನೆ

    ಶೆಟ್ಟರ್ ಬೆಂಬಲಿಗರಿಗೆ ಬಿಜೆಪಿಯಿಂದ ಗೇಟ್ ಪಾಸ್ – 27 ಜನರ ಉಚ್ಚಾಟನೆ

    ಹುಬ್ಬಳ್ಳಿ: ಬಿಜೆಪಿ (BJP) ತೊರೆದು ಕಾಂಗ್ರೆಸ್ (Congress) ಪಕ್ಷವನ್ನು ಸೇರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಅವರಿಗೆ ಮಾಸ್ಟರ್ ಸ್ಟ್ರೋಕ್ ನೀಡಿದೆ. ಶೆಟ್ಟರ್‌ನ 27 ಬೆಂಬಲಿಗರನ್ನು (Jagadish Shettar Supporters) ಬಿಜೆಪಿ 6 ವರ್ಷಗಳ ಕಾಲ ಉಚ್ಚಾಟಿಸಿದೆ.

    ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಆರೋಪದ ಮೇಲೆ ಜಗದೀಶ್ ಶೆಟ್ಟರ್ ಅವರ 27 ಬೆಂಬಲಿಗರಿಗೆ ಬಿಜೆಪಿ ಗೇಟ್ ಪಾಸ್ ನೀಡಿದೆ. ಬಿಜೆಪಿ ಶಿಸ್ತು ಸಮಿತಿ ಆದೇಶದ ಮೇರೆಗೆ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಚೌಹಾಣ್ 27 ಜನರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ (Expel) ಮಾಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಕಲ್ಕತ್ತಾ ಹೈಕೋರ್ಟ್‌ Vs ಸುಪ್ರೀಂ – ಸಂಜೆ ತುರ್ತು ವಿಚಾರಣೆ, ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಆದೇಶಕ್ಕೆ ತಡೆ

    ಹುಡಾ ಮಾಜಿ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಮಲ್ಲಿಕಾರ್ಜುನ್ ಸಾಹುಕಾರ, ವಿರುಪಾಕ್ಷ ರಾಯನಗೌಡರ್, ವಿಜಯಲಕ್ಷ್ಮಿ ತಿಮ್ಮೋಲೆ, ಭಾರತಿ ಟಪಾಲ್, ಇಮ್ತಿಯಾಜ್ ಮುಲ್ಲಾ ಸೇರಿದಂತೆ 27 ಜನರು ಬಿಜೆಪಿಯಿಂದ ಉಚ್ಚಾಟಿತರಾಗಿದ್ದಾರೆ. ಇದನ್ನೂ ಓದಿ: ಸಲಿಂಗಿಗಳಿಗೆ ವೈವಾಹಿಕ ಜೀವನದ ಮುದ್ರೆ ಒತ್ತುವ ತೀರ್ಪು ಸಲ್ಲದು: ಪೇಜಾವರ ಶ್ರೀ

  • ಬೆಳಗಾವಿ ಮೂವರು ನಾಯಕರನ್ನ ಪಕ್ಷದಿಂದ ಉಚ್ಛಾಟಿಸಿದ ಬಿಜೆಪಿ

    ಬೆಳಗಾವಿ ಮೂವರು ನಾಯಕರನ್ನ ಪಕ್ಷದಿಂದ ಉಚ್ಛಾಟಿಸಿದ ಬಿಜೆಪಿ

    ಬೆಳಗಾವಿ: ಬಿಜೆಪಿ ಬೆಳಗಾವಿ ಜಿಲ್ಲೆಯ ಮೂವರು ನಾಯಕರನ್ನು ತಮ್ಮ ಪಕ್ಷದಿಂದ ಉಚ್ಛಾಟನೆ ಮಾಡಿದೆ.

    ಬೆಳಗಾವಿ ಜಿಲ್ಲೆಯ ಮಾಜಿ ಎಂಇಎಸ್ ಲೀಡರ್ ಶಿವಾಜಿ ಸುಂಠಕರ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ. ಎಂಇಎಸ್ ಬಿಟ್ಟು ಬಿಜೆಪಿ ಸೇರಿದ್ದ ಮಾಜಿ ಮೇಯರ್ ಶಿವಾಜಿ ಸುಂಠಕರ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ಮಹಾನಗರ ಅಧ್ಯಕ್ಷ ಶಶಿಕಾಂತ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.

    ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ 47ರಲ್ಲಿ ಬಂಡಾಯ ಅಭ್ಯರ್ಥಿಯಾಗಿ ಶಿವಾಜಿ ಸುಂಠಕರ್ ಅವರ ಪತ್ನಿ ಸುಲೋಚನಾ ಸುಂಠಕರ್ ಸ್ಪರ್ಧೆ ಮಾಡಿರುವ ಹಿನ್ನೆಲೆ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಸೂಚನೆ ಮೇರೆಗೆ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.ಇದನ್ನೂ ಓದಿ:ತಂದಿಟ್ಟು ತಮಾಷೆ ನೋಡೋದಕ್ಕೆ ಹೇಳಿರ್ತಾರೆ – ಉಮಾಪತಿ ಬಳಿ ಕ್ಷಮೆ ಕೇಳಿದ್ದ ಭೂಗತ ಪಾತಕಿ ರವಿ

    nalin kumar kateel

    ಅದೇ ರೀತಿ ವಾರ್ಡ್ 46ರಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಸುರೇಶ್ ಯಾದವ್ ಅವರನ್ನು ಉಚ್ಛಾಟನೆ ಮಾಡಲಾಗಿದೆ. ಮೊದಲು ಏಳು ಜನರನ್ನು ಉಚ್ಛಾಟನೆ ಮಾಡಿದ್ದ ಬಿಜೆಪಿ ಇದೀಗ ಮೂವರನ್ನು ಮಾಡುವ ಮೂಲಕ ಒಟ್ಟು 10 ಮಂದಿಯನ್ನು ಉಚ್ಛಾಟನೆ ಮಾಡಿದಂತೆ ಆಗಿದೆ.ಇದನ್ನೂ ಓದಿ:ವಿಜಯಪುರ ವಿಮಾನ ನಿಲ್ದಾಣಕ್ಕೆ 125 ಕೋಟಿ: ಗೋವಿಂದ ಕಾರಜೋಳ

  • ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ ಮಾಡಿದ್ರೆ ಏನಾಗುತ್ತೆ ತಿಳಿಯಬೇಕು: ಮಲ್ಲಿಕಾರ್ಜುನ್ ಖೂಬಾ

    ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ ಮಾಡಿದ್ರೆ ಏನಾಗುತ್ತೆ ತಿಳಿಯಬೇಕು: ಮಲ್ಲಿಕಾರ್ಜುನ್ ಖೂಬಾ

    – ದುಡ್ಡಿಗಾಗಿ ಬಸಕಲ್ಯಾಣದ ಬಿಜೆಪಿ ಟಿಕೆಟ್ ಸೇಲ್ ಮಾಡಿದ್ದಾರೆ

    ಬೀದರ್: ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ ಮಾಡಿದರೆ ಏನಾಗುತ್ತದೆ ಎಂಬುದನ್ನು ಪಕ್ಷದ ಹಿರಿಯ ನಾಯಕರು ತಿಳಿಯಬೇಕು ಎಂದು ಬಸವಕಲ್ಯಾಣ ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ್ ಖೂಬಾ ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಷ್ಠಾವಂತರಿಗೆ ಪಕ್ಷ ಅನ್ಯಾಯ ಮಾಡಿದೆ. ಉಚ್ಛಾಟನೆ ಮಾಡಿದ್ದನ್ನು ಸ್ವಾಗತಿಸುತ್ತೇನೆ. ಅವರು ಏನೇ ಮಾಡಿದರೂ ಸಂತೋಷದಿಂದ ಸ್ವಾಭಿಮಾನದಿಂದ ಬದುಕುತ್ತೆನೆ. ಪಕ್ಷದಿಂದ ನನಗೆ ಏನು ಅನ್ಯಾಯ ಆಗಿದೆ ಎಂದು ಅದು ಪಕ್ಷದ ಹಿರಿಯರಿಗೆ ಗೋತ್ತಿದೆ. ಕಾರ್ಯಕರ್ತರಿಗೆ ಅನ್ಯಾಯ ಮಾಡಿದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಏನಾಗುತ್ತೆ ಎಂದು ಅವರು ತಿಳಿದುಕೊಳ್ಳಬೇಕು. ನಾನು ತನು, ಮನ, ಧನ ಹಾಗೂ ಶ್ರಮದಿಂದ ಪಕ್ಷಕ್ಕಾಗಿ ಕೆಲಸ ಮಾದ್ದೇನೆ. ಇದರಿಂದ ನನಗೆ ಏನೂ ಆಗುವುದಿಲ್ಲ. ಪಕ್ಷಗಳು ಬರುತ್ತವೆ, ಹೋಗತ್ತವೆ ಆದರೆ ನಮ್ಮ ನಿಷ್ಠೆ ಜನರ ಪರವಾಗಿ ಇರುತ್ತದೆ ಎಂದು ಟಾಂಗ್ ನೀಡಿದರು.

    ಪಕ್ಷದಲ್ಲಿ ಯಾರು ದುಡಿಯುತ್ತಾರೋ ಅವರಿಗೆ ಟಿಕೆಟ್ ನೀಡಬೇಕು. ಐಡಿ ಕ್ರಿಯೇಟ್ ಮಾಡಿ, ದುಡ್ಡಿಗೋಸ್ಕರ ಟಿಕೆಟ್ ಸೇಲ್ ಮಾಡಿದ್ದಾರೆ. ಇಂತಹ ಕೆಲಸದಿಂದ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗುತ್ತದೆ. ಹೀಗಾಗಿ ಬಸವಕಲ್ಯಾಣದ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದೇನೆ, ಯಾವುದೇ ಪಕ್ಷದಲ್ಲಿ ಮುಂದೆ ಈ ರೀತಿ ಆಗಬಾರದು ಎಂದರು.

    ಬಿಜೆಪಿಯವರು ಒಂದು ಕುಟುಂಬಕ್ಕೆ 3 ಸಾವಿರ ರೂ. ಹಣ ನೀಡಿದ್ದಾರೆ. ಈ ಮೂಲಕ ಚುನಾವಣೆ ಪ್ರಚಾರ ಮಾಡಿದ್ದಾರೆ. ಸರ್ಕಾರ ಪಾರದರ್ಶಕವಾಗಿ ಚುನಾವಣೆ ಮಾಡಬೇಕಿತ್ತು. ಆದರೆ ಶರಣರ ನಾಡಿನಲ್ಲಿ ದುಡ್ಡಿನ ಹೊಳೆ ಹರಿಸಿ ಚುನಾವಣೆ ನಡೆಸಿದ್ದಾರೆ. ಒಂದು ಕಾರಿನಲ್ಲಿ ಕೋಟಿಗಟ್ಟಲೇ ಹಣ ಕೊಂಡೊಯ್ದು, ಹಂಚಿದ್ದಾರೆ. ಹಲವು ಕಡೆ ವಾಹನಗಳನ್ನು ಸೀಜ್ ಮಾಡಿದ್ದಾರೆ. ದುಡ್ಡು ಹಂಚಿ ಚುನಾವಣೆ ಮಾಡುವ ಮೂಲಕ ಬಸವಣ್ಣನವರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವಮಾನ ಮಾಡಿದ್ದಾರೆ ಎಂದರು.

    ನಮಗೆ ಜನರ ಬೆಂಬಲವಿದೆ, ಸ್ವಾಭಿಮಾನಿ ಬಸವಕಲ್ಯಾಣ ಜನ ನನ್ನನ್ನು ಕೈ ಬಿಡುವುದಿಲ್ಲ. ನ್ಯಾಯಕ್ಕಾಗಿ ಒಳ್ಳೆಯ ರೀತಿಯಲ್ಲಿ ಸಪೋರ್ಟ್ ಮಾಡುತ್ತಿದ್ದಾರೆ, ಎಲ್ಲ ಕಡೆ ವಾತಾವರಣ ಚೆನ್ನಾಗಿದೆ ಎಂದರು.

  • ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ್ ಖೂಬಾ ಪಕ್ಷದಿಂದ ಉಚ್ಛಾಟನೆ

    ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ್ ಖೂಬಾ ಪಕ್ಷದಿಂದ ಉಚ್ಛಾಟನೆ

    ಬೆಂಗಳೂರು: ಬಸವಕಲ್ಯಾಣ ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.

    ಪಕ್ಷದಿಂದ ಉಚ್ಛಾಟನೆ ಮಾಡಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆ ಮಲ್ಲಿಕಾರ್ಜುನ್ ಖೂಬಾ ಬಂಡಾಯ ಅಭ್ಯರ್ಥಿಯಾಗಿ ಬಸವಕಲ್ಯಾಣ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇಂದು ಮತದಾನ ಅರ್ಧ ಮುಗಿದ ನಂತರ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ.

    ಪಕ್ಷದಿಂದ ಖೂಬಾ ಅವರಿಗೆ ಟಿಕೆಟ್ ನೀಡಲು ನಿರಾಕರಿಸಲಾಗಿತ್ತು. ಇವರ ಬದಲಿಗೆ ಶರಣು ಸಲಗರ್ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗಿತ್ತು. ಇದರಿಂದ ಬೇಸರಗೊಂಡಿದ್ದ ಖೂಬಾ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಇಂದು ಉಪಚುನಾವಣೆಯ ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಬಸವಕಲ್ಯಾಣದಲ್ಲಿ ಸಹ ಅರ್ಧ ಮತದಾನ ನಡೆದ ಬಳಿಕ ಖೂಬಾ ಅವರನ್ನು ಉಚ್ಛಾಟನೆ ಮಾಡಿ ಆದೇಶಿಸಲಾಗಿದೆ.

  • ಭೈರತಿ ಬಸವರಾಜ್ ಬೆಂಬಲಿಸಿದ 4 ಜನ ಕಾಂಗ್ರೆಸ್ ಕಾರ್ಪೊರೇಟರ್​ಗಳ ಉಚ್ಛಾಟನೆ

    ಭೈರತಿ ಬಸವರಾಜ್ ಬೆಂಬಲಿಸಿದ 4 ಜನ ಕಾಂಗ್ರೆಸ್ ಕಾರ್ಪೊರೇಟರ್​ಗಳ ಉಚ್ಛಾಟನೆ

    ಬೆಂಗಳೂರು: ಕೆ.ಆರ್.ಪುರಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್ ಅವರನ್ನು ಬೆಂಬಲಿಸಿದ 4 ಜನ ಕಾಂಗ್ರೆಸ್ ಕಾರ್ಪೊರೇಟರ್​ಗಳನ್ನು ಕೆಪಿಸಿಸಿ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದೆ.

    ಕೆ.ಆರ್.ಪುರಂ ಕ್ಷೇತ್ರ ವ್ಯಾಪ್ತಿಯ ಬಸವನಪುರ ವಾರ್ಡ್‍ನ ಜಯಪ್ರಕಾಶ್, ದೇವಸಂದ್ರ ವಾರ್ಡ್‍ನ ಶ್ರೀಕಾಂತ್, ಎ ನಾರಾಯಣಪುರದ ಸುರೇಶ್ ಹಾಗೂ ವಿಜ್ಞಾನನಗರ ವಾರ್ಡ್‍ನ ಹೆಚ್‍ಜಿ ನಾಗರಾಜ್ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಂಡ ಕಾರ್ಪೊರೇಟರ್ ಗಳು. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ನಾಲ್ಕು ಜನ ಕಾಪೊರೇಟರ್ ಗಳನ್ನು ಉಚ್ಚಾಟನೆ ಮಾಡಿದ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಭೈರತಿಯಿಂದ ಗೌರಿ ಹಬ್ಬಕ್ಕೆ ಸೀರೆ ಗಿಫ್ಟ್

    ಅನರ್ಹ ಶಾಸಕ ಭೈರತಿ ಬಸವರಾಜ್ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅವರು ಭೈರತಿ ಬಸವರಾಜ್ ಸೇರಿದಂತೆ 17 ಜನ ಶಾಸಕರನ್ನು ಅನರ್ಹಗೊಳಿಸಿದ್ದರು. ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಸಿಕ್ಕಿದೆ. ಹೀಗಾಗಿ ಅನರ್ಹ ಶಾಸಕ ಭೈರತಿ ಬಸವರಾಜ್ ಸ್ವಕ್ಷೇತ್ರ ಕೆ.ಆರ್.ಪೇಟೆಯಿಂದ ಸ್ಪರ್ಧೆಗೆ ಇಳಿದಿದ್ದಾರೆ.

    ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ತ್ರಿಕೋನ ಹಣಾಹಣಿ ಏರ್ಪಟ್ಟಿದ್ದು, ಬಿಜೆಪಿಯಿಂದ ಭೈರತಿ ಬಸವರಾಜ್, ಕಾಂಗ್ರೆಸ್‍ನಿಂದ ನಾರಾಯಣಸ್ವಾಮಿ ಹಾಗೂ ಜೆಡಿಎಸ್‍ನಿಂದ ಕೃಷ್ಣಮೂರ್ತಿ ಸ್ಪರ್ಧಿಸುತ್ತಿದ್ದಾರೆ. ಕೆ.ಆರ್.ಪುರಂಯಲ್ಲಿ ಗೆಲುವಿಗೆ ಭರ್ಜರಿ ಪ್ಲ್ಯಾನ್ ರೂಪಿಸಿರುವ ಬಿಜೆಪಿ ಕಂದಾಯ ಸಚಿವ ಆರ್.ಅಶೋಕ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಶಾಸಕ ಸತೀಶ್ ರೆಡ್ಡಿ ಅವರಿಗೆ ಉಸ್ತುವಾರಿ ನೀಡಿದೆ.

  • ಶರತ್ ಬಚ್ಚೇಗೌಡ ಮನವೊಲಿಕೆ ಫೇಲ್- ಬಿಜೆಪಿಯಿಂದ ಉಚ್ಛಾಟಿಸಲು ಮುಂದಾದ ಸಿಎಂ

    ಶರತ್ ಬಚ್ಚೇಗೌಡ ಮನವೊಲಿಕೆ ಫೇಲ್- ಬಿಜೆಪಿಯಿಂದ ಉಚ್ಛಾಟಿಸಲು ಮುಂದಾದ ಸಿಎಂ

    – ಸಂಜೆಯೊಳಗೆ ನಿಗಮ ಮಂಡಳಿ ತ್ಯಜಿಸಲು ಡೆಡ್‍ಲೈನ್

    ಬೆಂಗಳೂರು: ಹೊಸಕೋಟೆಯಲ್ಲಿ ರಾಜಕೀಯ ರಣಕಣ ರಂಗೇರುತ್ತಿದೆ. ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಮನವೊಲಿಕೆಗೆ ಸಿಎಂ ಯಡಿಯೂರಪ್ಪ ಯತ್ನಿಸಿದರೂ ವಿಫಲವಾಗಿದ್ದು, ಬಿಜೆಪಿಯಿಂದ ಶರತ್ ಉಚ್ಛಾಟನೆ ಫಿಕ್ಸ್ ಎನ್ನುವಂತೆ ಸಿಎಂ ಮಾತನಾಡಿದ್ದಾರೆ.

    ಶರತ್ ಬಚ್ಚೇಗೌಡ ಸೋಲುತ್ತಾರೆ, ಎಂಟಿಬಿ ನಾಗರಾಜ್ ಗೆದ್ದೇ ಗೆಲ್ಲುತ್ತಾರೆ ಎನ್ನುವ ವಿಶ್ವಾಸದಲ್ಲಿ ಸಿಎಂ ಇದ್ದು, ಶರತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದು ಸಂಜೆಯೊಳಗೆ ಶರತ್ ನಿಗಮ ಮಂಡಳಿ ತ್ಯಜಿಸಬೇಕು ಎಂದು ಸಿಎಂ ಆದೇಶಿಸಿದ್ದಾರೆ. ಈ ನಡುವೆ ಶರತ್ ಬಚ್ಚೇಗೌಡ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ಪಕ್ಷದಿಂದ ಶರತ್ ಅವರ ಉಚ್ಛಾಟನೆ ಮಾಡಲಾಗುತ್ತದೆ ಎನ್ನುವಂತೆ ಸಿಎಂ ಹೇಳಿಕೆ ಕೊಟ್ಟಿದ್ದಾರೆ.

    ಹೊಸಕೋಟೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿರುವ ಶರತ್ ಬಚ್ಚೇಗೌಡ ಅವರು ಇಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿಕೊಟ್ಟಿದ್ದಾರೆ. ಕಾಲಭೈರವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶರತ್ ಅವರು ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದಿದ್ದಾರೆ. ಹಾಗೆಯೇ ಕೆಲ ಕಾಲ ಸ್ವಾಮೀಜಿಯೊಂದಿಗೆ ಮಾತುಕತೆಯನ್ನು ಕೂಡ ನಡೆಸಿದ್ದಾರೆ.

    ಉಪಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರವನ್ನು ಸೋಮವಾರದಿಂದ ಆರಂಭ ಮಾಡಲಿರುವ ಸಿಎಂ ಬಿಎಸ್‍ವೈ, ಮೊದಲು ಅನರ್ಹ ಶಾಸಕ ಎಂಟಿಬಿ ನಾಗರಾಜ್‍ರ ಹೊಸಕೋಟೆಯಿಂದಲೇ ಚುನಾವಣಾ ಪ್ರಚಾರವನ್ನು ಆರಂಭಿಸಲಿದ್ದಾರೆ. ಅಲ್ಲದೇ ಎಲ್ಲಾ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ 1 ದಿನ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

    ಅನರ್ಹ ಶಾಸಕರಿಗೆ ನೀಡಿರೋ ಭರವಸೆಯಂತೆ ಸಿಎಂ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೇ ಅನರ್ಹರನ್ನು ಮತ್ತೆ ಶಾಸಕರನ್ನು ಮಾಡುತ್ತೇನೆ ಎಂಬ ಶಪಥವನ್ನು ಬಿಎಸ್‍ವೈ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ 14 ಕ್ಷೇತ್ರಗಳಿಗೆ ಸಿಎಂ ಭೇಟಿ ನೀಡಲಿದ್ದು, ಚುನಾವಣಾ ಪ್ರಚಾರಕ್ಕಾಗಿ ಮಾಸ್ಟರ್ ಪ್ಲಾನ್ ಕೂಡ ಸಿದ್ಧವಾಗಿದೆ.

    ಸಿಎಂ ಬಿಎಸ್‍ವೈ ಅವರು ಪ್ರಚಾರ ನಡೆಸುವ ಸಂದರ್ಭದಲ್ಲಿ ಪಕ್ಷದ ಬೂತ್ ಮಟ್ಟದ ನಾಯಕರು, ಕಾರ್ಯಕರ್ತರು, ಮುಖಂಡರು ತಪ್ಪದೇ ಸಭೆಯಲ್ಲಿ ಭಾಗಿಯಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸ್ವತಃ ಸಿಎಂ ಅವರೇ ಪ್ರಚಾರ ಕಾರ್ಯಕ್ಕೆ ಆಗಮಿಸುವುದರಿಂದ ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನ ಶಮನವಾಗುತ್ತದೆ ಎಂಬುವುದು ಇದರ ಹಿಂದಿನ ಉದ್ದೇಶವಾಗಿದೆ ಎನ್ನಲಾಗಿದೆ.

  • ಎಂಬಿಪಿಗೆ ಆಶೀರ್ವಾದ ಮಾಡಿದ್ದಕ್ಕೆ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಉಚ್ಛಾಟನೆ!

    ಎಂಬಿಪಿಗೆ ಆಶೀರ್ವಾದ ಮಾಡಿದ್ದಕ್ಕೆ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಉಚ್ಛಾಟನೆ!

    ಕಲಬುರಗಿ: ಗೃಹ ಸಚಿವ ಎಂಬಿ ಪಾಟೀಲ್‍ಗೆ ರುದ್ರಾಕ್ಷಿ ಕೀರಿಟ ನೀಡಿ ಸಿಎಂ ಆಗಲಿ ಎಂದು ಆಶೀರ್ವಾದ ಮಾಡಿದ್ದಕ್ಕೆ ಕಲಬುರಗಿಯ ಸರಡಗಿ ಮಠದ ಶ್ರೀ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿಯವರನ್ನು ಶಿವಾಚಾರ್ಯ ಸಂಸ್ಥೆಯಿಂದ ಉಚ್ಛಾಟನೆ ಮಾಡಲಾಗಿದೆ.

    ಶ್ರೀ ರೇವಣಸಿದ್ದ ಸ್ವಾಮೀಜಿಗಳು ಕಲಬುರಗಿ ತಾಲೂಕಿನ ಸರಡಗಿ ಮಠದವರು. ಕಳೆದ ಕೆಲವು ದಿನಗಳ ಹಿಂದೆ ಸರಡಗಿ ಮಠಕ್ಕೆ ಎಂ.ಬಿ ಪಾಟೀಲ್ ಭೇಟಿ ನೀಡಿದ್ದರು. ಈ ವೇಳೆ ರೇವಣಸಿದ್ದ ಸ್ವಾಮೀಜಿಗಳು ಸಚಿವರಿಗೆ ಆಶೀರ್ವಾದ ಮಾಡಿದ್ದರು. ಆದರೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೈ ಹಾಕಿದ ಎಂ.ಬಿ.ಪಾಟೀಲ್ ಅವರಿಗೆ ಸಿಎಂ ಆಗಲಿ ಎಂದು ಆಶೀರ್ವಾದ ಮಾಡಿದಕ್ಕೆ ರೇವಣಸಿದ್ದ ಸ್ವಾಮೀಜಿಗಳನ್ನು ಉಚ್ಛಾಟನೆಗೊಳಿಸಿ ಎಂದು ವಿಮಲಮಠದ ವಿರಕ್ತ ಶಿವಾಚಾರ್ಯ ಸ್ವಾಮೀಜಿ ಆದೇಶ ನೀಡಿದ್ದಾರೆ.

    ಈ ಬಗ್ಗೆ ಶ್ರೀ ರೇವಣಸಿದ್ದ ಶಿವಚಾರ್ಯ ಸ್ವಾಮೀಜಿ ಮಾತನಾಡಿ, ಮದ್ಯ ಮುಕ್ತ ಗ್ರಾಮ ಮಾಡಲು ಅಭಿಯಾನ ಹಮ್ಮಿಕೊಂಡಿದ್ದೇವು. ಆ ಒಂದು ಅಭಿಯಾನಕ್ಕೆ ಗೃಹ ಸಚಿವರನ್ನ ಉದ್ಘಾಟನೆಗೆ ಕರೆಸಿದ್ದೇವು. ಈ ವೇಳೆ ಎಂ.ಬಿ ಪಾಟೀಲ್‍ರಿಗೆ ನೀವು ಸಿಎಂ ಆಗುತ್ತೀರಾ ಎಂದು ಆಶೀರ್ವಾದ ಮಾಡಿದ್ದು ನಿಜ. ಮಠಕ್ಕೆ ಬರೋ ಪ್ರತಿಯೊಬ್ಬರನ್ನ ಆಶಿರ್ವಾದ ಮಾಡೋದು ನಮ್ಮ ಕರ್ತವ್ಯ ಎಂದರು.

    ಆದರೆ ಇದೇ ವಿಚಾರದಿಂದ ನನ್ನ ಶಿವಾಚಾರ್ಯ ಸಂಸ್ಥೆಯಿಂದ ಉಚ್ಛಾಟಿಸಲಾಗಿದೆ. ನನ್ನ ಕರ್ತವ್ಯ ನಾನು ಪಾಲನೆ ಮಾಡಿದ್ದೀನಿ, ಉಚ್ಛಾಟನೆ ಮಾಡಿದರೆ ಮಾಡಲಿ ಎಂದು ವಿಮಲ ಮಠದ ವೀರಕ್ತ ಶಿವಾಚಾರ್ಯ ಸ್ವಾಮೀಜಿಗೆ ರೇವಣಸಿದ್ದ ಶಿವಚಾರ್ಯ ಸ್ವಾಮೀಜಿ ತಿರುಗೇಟು ನೀಡಿದರು.