Tag: express train

  • ಹಳಿಯಲ್ಲಿದ್ದ ಕಸ ತೆರವುಗೊಳಿಸುತ್ತಿದ್ದ ವೇಳೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ – ನಾಲ್ವರು ಗುತ್ತಿಗೆ ಕಾರ್ಮಿಕರ ದುರ್ಮರಣ

    ಹಳಿಯಲ್ಲಿದ್ದ ಕಸ ತೆರವುಗೊಳಿಸುತ್ತಿದ್ದ ವೇಳೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ – ನಾಲ್ವರು ಗುತ್ತಿಗೆ ಕಾರ್ಮಿಕರ ದುರ್ಮರಣ

    ತಿರುವನಂತಪುರ: ಹಳಿಯಲ್ಲಿದ್ದ ಕಸ ತೆರವುಗೊಳಿಸುತ್ತಿದ್ದ ವೇಳೆ ಎಕ್ಸ್‌ಪ್ರೆಸ್ ರೈಲು (Express Train) ಡಿಕ್ಕಿ ಹೊಡೆದು ರೈಲ್ವೆ ಇಲಾಖೆಯ ನಾಲ್ವರು ಗುತ್ತಿಗೆ ಕಾರ್ಮಿಕರು (Contract Workers) ಸ್ಥಳದಲ್ಲೇ ಮೃತಪಟ್ಟ ಘಟನೆ ಕೇರಳದ (Kerala) ಪಾಲಕ್ಕಾಡ್ (Palakkad) ಜಿಲ್ಲೆಯ ಶೋರ್ನೂರ್ ಬಳಿ ನಡೆದಿದೆ.

    ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ತಿರುವನಂತಪುರಂ ಕಡೆಗೆ ಹೊರಟಿದ್ದ ಕೇರಳ ಎಕ್ಸ್‌ಪ್ರೆಸ್ ರೈಲು ಕಾರ್ಮಿಕರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರೈಲು ಬರುತ್ತಿರುವುದನ್ನು ಗಮನಿಸದೇ ಅಪಘಾತ ಸಂಭವಿಸಿರಬಹುದು. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಶೋರ್ನೂರ್ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: 10,000 ಹೆಕ್ಟೇರ್ ಬೆಳೆ ಹಾನಿ – ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ, ರೈತರ ಕಣ್ಣಲ್ಲಿ ನೀರು

    ಘಟನಾ ಸ್ಥಳದಿಂದ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೊಂದು ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಹಳಿ ಸಮೀಪದ ಭಾರತಪುಳ ನದಿಗೆ ಮೃತದೇಹ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.‌ ಇದನ್ನೂ ಓದಿ: ಬೆಂಗಳೂರು ಹೊರವಲಯದ ಹೆಮ್ಮಿಗೆಪುರದಲ್ಲಿ ಸ್ಕೈಡೆಕ್ ನಿರ್ಮಾಣಕ್ಕೆ ಜಾಗ ಅಂತಿಮ

  • ಒಡಿಶಾ ರೈಲು ದುರಂತಕ್ಕೆ ಸಿಗ್ನಲ್ ಕಾರಣ- ಪ್ರಾಥಮಿಕ ವರದಿ

    ಒಡಿಶಾ ರೈಲು ದುರಂತಕ್ಕೆ ಸಿಗ್ನಲ್ ಕಾರಣ- ಪ್ರಾಥಮಿಕ ವರದಿ

    ಭುವನೇಶ್ವರ್: ಒಡಿಶಾ ರೈಲು ದುರಂತ (Train Tragedy in Odisha) ಕ್ಕೆ ಸಿಗ್ನಲ್ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

    ಘಟನಾ ಸ್ಥಳಕ್ಕೆ ಇಂದು ಭೇಟಿ ನೀಡಿ ಅಧಿಕಾರಿಗಳು ಪರಿಶೀಲನೆ ಬಳಿಕ ಪ್ರಾಥಮಿಕ ವರದಿ ಸಲ್ಲಿಸಿದರು. ಇದನ್ನೂ ಓದಿ: ಒಡಿಶಾದಲ್ಲಿ ಭೀಕರ ರೈಲು ದುರಂತ: ಯಶ್, ಸುಮಲತಾ ಸೇರಿದಂತೆ ಹಲವರ ಸಂತಾಪ

    ಏನಾಯಿತು..?: ಕೋರಮಂಡಲ್ ಎಕ್ಸ್ ಪ್ರೆಸ್‍ (Coromandel Express) ಗೆ ಗೊತ್ತುಪಡಿಸಿದ ಮುಖ್ಯ ಮಾರ್ಗದಲ್ಲಿ ಚಲಿಸಲು ಹಸಿರು ನಿಶಾನೆ ತೋರಲಾಗಿತ್ತು. ಆ ಬಳಿಕ ಹಸಿರು ನಿಶಾನೆ ಹಿಂದೆ ಪಡೆಯಲಾಗಿದೆ. ಈ ವೇಳೆಗೆ ರೈಲು ಲೂಪ್ ಲೈನ್ ಅನ್ನು ಪ್ರವೇಶಿಸಿ, ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಹಳಿತಪ್ಪಿತು. ಅಷ್ಟರಲ್ಲಿ ಡೌನ್ ಲೈನ್ ನಲ್ಲಿ ಯಶವಂತಪುರ (Yeshwanthpura) ದಿಂದ ಬಂದ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನ ಎರಡು ಬೋಗಿಗಳು ಹಳಿತಪ್ಪಿದವು. ಇದನ್ನೂ ಓದಿ: ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬ, ಗಾಯಾಳುಗಳಿಗೆ ಪರಿಹಾರ ಘೋಷಣೆ

    ಒಡಿಶಾದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏರುತ್ತಲೇ ಇದೆ. ದುರಂತಕ್ಕೆ ಇದುವರೆಗೆ ಬಲಿಯಾದವರ ಸಂಖ್ಯೆ 233 ಕ್ಕೆ ಏರಿದೆ. ಅಲ್ಲದೇ 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಚೆನ್ನೈ-ಕೊರಮಂಡಲ್ ಎಕ್ಸ್‍ಪ್ರೆಸ್ ರೈಲು, ಯಶವಂತಪುರ-ಹೌರ ರೈಲು ಹಾಗೂ ಗೂಡ್ಸ್ ರೈಲು ಮುಖಾಮುಖಿ ಡಿಕ್ಕಿಯಾಗಿದ್ದವು. ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಗ ರೈಲು ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿತು. 12841 ಎಕ್ಸ್ ಪ್ರೆಸ್ ರೈಲು ಡಿಕ್ಕಿಯಾದ ರಭಸಕ್ಕೆ ಪ್ರಯಾಣಿಕರಿದ್ದ ರೈಲಿನ ಹಲವು ಬೋಗಿಗಳು ಹಳಿ ತಪ್ಪಿ, ಭೀಕರ ಅಪಘಾತದಲ್ಲಿ ಹಲವರು ಮೃತಪಟ್ಟಿದ್ದಾರೆ.

  • ನವೆಂಬರ್‌ನಲ್ಲಿ ಕರ್ನಾಟಕಕ್ಕೂ ಬರಲಿದೆ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲು

    ನವೆಂಬರ್‌ನಲ್ಲಿ ಕರ್ನಾಟಕಕ್ಕೂ ಬರಲಿದೆ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲು

    ನವದೆಹಲಿ: ಕರ್ನಾಟಕಕ್ಕೂ ವಂದೇ ಭಾರತ್ ರೈಲು (Vande Bharat Express) ಬರಲಿದ್ದು, ಮುಂದಿನ ನವೆಂಬರ್ ತಿಂಗಳಿನಿಂದ ಚೆನ್ನೈ-ಬೆಂಗಳೂರು-ಮೈಸೂರು (Bengaluru-Mysuru) ಮಾರ್ಗವಾಗಿ ಸಂಚರಿಸಲಿದೆ.

    ದೆಹಲಿ – ಉನಾ ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ಸರಣಿಯ 4ನೇ ರೈಲಿಗೆ ಪ್ರಧಾನಿ ಮೋದಿ (Narendra Modi) ಹಿಮಾಚಲ ಪ್ರದೇಶದಲ್ಲಿ ಗುರುವಾರ ಚಾಲನೆ ನೀಡಿದ್ದಾರೆ. ಇದರೊಂದಿಗೆ ನವೆಂಬರ್ 10 ರಂದು ವಂದೇ ಭಾರತ್ ಎಕ್ಸ್‌ಪ್ರೆಸ್‌ (Express Train) 5ನೇ ರೈಲು ಚಾಲನೆಗೊಳ್ಳಲಿದೆ. ಇದನ್ನೂ ಓದಿ: ದೊಡ್ಮನೆಯಲ್ಲಿ ಮಕ್ಕಳ ದರ್ಬಾರ್: ಮಗುವನ್ನು ತಬ್ಬಿ ಗಳಗಳನೆ ಅತ್ತ ಮಯೂರಿ

    ಪ್ರಧಾನಿ ನರೇಂದ್ರ ಮೋದಿ ಅವರು 4ನೇ ವಂದೇ ಭಾರತ್ ಸೆಮಿ ಹೈಸ್ಪೀಡ್ (Semi HighSpeed Train) ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ. ಇದು ಬುಧವಾರ ಹೊರತುಪಡಿಸಿ ವಾರದ ಉಳಿದೆಲ್ಲ ದಿನಗಳಲ್ಲೂ ಸಂಚರಿಸಲಿದೆ. ಮೊದಲ ಮೂರು ರೈಲಿಗಿಂತಲೂ ಗುಣಮಟ್ಟದ್ದಾಗಿದ್ದು, ಉನಾದಿಂದ ದೆಹಲಿಯ ನಡುವೆ 2 ಗಂಟೆ ಪ್ರಯಾಣದ ಸಮಯವನ್ನು ಕಡಿಮೆಗೊಳಿಸಲಿದೆ.

    ಫೆಬ್ರುವರಿ 15, 2019ರಂದು ದೇಶದ ಮೊಟ್ಟ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ನವದೆಹಲಿ – ಕಾನ್ಪುರ – ಅಲಹಾಬಾದ್ – ವಾರಣಾಸಿ ಮಾರ್ಗದಲ್ಲಿ ಈ ರೈಲು ಸಂಚರಿಸುತ್ತಿದೆ. 2ನೇ ರೈಲು ದೆಹಲಿಯಿಂದ ವಾರಣಾಸಿಗೆ ಸಂಚರಿಸುತ್ತಿದೆ. ಇದನ್ನೂ ಓದಿ: ಸ್ವಂತ ಉದ್ಯಮದ ಕನಸು ನನಸು – B ಟೆಕ್ ವಿದ್ಯಾರ್ಥಿನಿ ಈಗ `ಚಾಯ್‌ವಾಲಿ’

    ಏನಿದರ ವಿಶೇಷತೆ?
    ಎಲ್ಲಾ ಕೋಚ್‌ಗಳಲ್ಲೂ ಆಟೋ ಮ್ಯಾಟಿಕ್ ಡೋರ್‌ಗಳು ಇರುತ್ತವೆ. ಜಿಪಿಎಸ್ (GPS) ಆಧಾರಿತ ಆಡಿಯೋ ವಿಶ್ಯುಯಲ್ಸ್ ಪ್ರಯಾಣಿಕ ಮಾಹಿತಿ ವ್ಯವಸ್ಥೆ ಇರುತ್ತದೆ. ಉಚಿತ ವೈಫೈ ವ್ಯವಸ್ಥೆ ಇರುತ್ತದೆ. ಸೀಟ್‌ಗಳು ಆರಾಮದಾಯವಾಗಿ ಇರುತ್ತವೆ. ಟಾಯ್ಲೆಟ್‌ಗಳು ಬಯೋ ವ್ಯಾಕ್ಯೂಮ್ ತಂತ್ರಜ್ಞಾನ ಆಧಾರಿತವಾಗಿರುತ್ತವೆ. ಪ್ರತಿ ಸೀಟ್‌ಗೂ ಪ್ರತ್ಯೇಕ ಲೈಟ್ ವ್ಯವಸ್ಥೆ ಇರುತ್ತದೆ. ಇದನ್ನೂ ಓದಿ: ರಾಯಚೂರಿನಲ್ಲಿ ರಸ್ತೆ ಮಾರ್ಗವಿಲ್ಲದೆ ತುಂಬು ಗರ್ಭಿಣಿ ಪರದಾಟ

    ಪ್ರಯಾಣಿಕರಿಗೆ ಬಿಸಿ-ಬಿಸಿ ಆಹಾರ (Food) ವಿತರಣೆ ಮಾಡಲಾಗುತ್ತದೆ. ಬಿಸಿ ಹಾಗೂ ತಂಪು ಪಾನೀಯಗಳು ಲಭ್ಯವಾಗುತ್ತವೆ. ರೈಲು ಸಾಗುವಾಗ ಪ್ರಯಾಣಿಕರಿಗೆ ಹೆಚ್ಚಿನ ಶಬ್ಧ ಕೇಳಿ ಬರೋದಿಲ್ಲ. ಪ್ರತಿಯೊಂದು ವಂದೇ ಭಾರತ್ ರೈಲಿನಲ್ಲಿ 1,128 ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ವಂದೇ ಭಾರತ್ ರೈಲಿನಲ್ಲಿ ಅಪಘಾತ ತಡೆ ವ್ಯವಸ್ಥೆಗೆ ತುಂಬಾನೇ ಸುಧಾರಿತ ತಂತ್ರಜ್ಞಾನ ಬಳಸಲಾಗಿದೆ.

    ಪ್ರತಿ ಕೋಚ್‌ನಲ್ಲೂ ತುರ್ತು ನಿರ್ಗಮನ ಕಿಟಕಿ, ಸಿಸಿಟಿವಿ (CCTV) ಕ್ಯಾಮರಾ ಇರುತ್ತದೆ. ಅಗ್ನಿ ಅನಾಹುತ ತಡೆಯುವ ವ್ಯವಸ್ಥೆ ಕೂಡಾ ಇದೆ.

    Live Tv
    [brid partner=56869869 player=32851 video=960834 autoplay=true]

  • ವಿಶಾಖಪಟ್ಟಣಂ-ದೆಹಲಿ, ಆಂಧ್ರಪ್ರದೇಶ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊಗೆ – ಪ್ರಯಾಣಿಕರಲ್ಲಿ ಆತಂಕ

    ವಿಶಾಖಪಟ್ಟಣಂ-ದೆಹಲಿ, ಆಂಧ್ರಪ್ರದೇಶ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊಗೆ – ಪ್ರಯಾಣಿಕರಲ್ಲಿ ಆತಂಕ

    ಹೈದರಾಬಾದ್: ವಿಶಾಖಪಟ್ಟಣಂ-ದೆಹಲಿ ಆಂಧ್ರಪ್ರದೇಶ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‍ನಲ್ಲಿ ಇಂದು ಬೆಳಗ್ಗೆ ಹೊಗೆ ಕಾಣಿಸಿಕೊಂಡಿದ್ದು ಪ್ರಯಾಣಿಕರು ಭಯಭೀತರಾಗಿದ್ದರು.

    ವಿಶಾಖಪಟ್ಟಣಂ-ದೆಹಲಿ ಆಂಧ್ರಪ್ರದೇಶ ಎಕ್ಸ್‌ಪ್ರೆಸ್‍ನ ಎಸ್6 ಕೋಚ್‍ನಡಿಯಲ್ಲಿ ಹೊಗೆ ಆವರಿಸಿತ್ತು. ಘಟನೆಯ ಬಗ್ಗೆ ಮಾಹಿತಿ ನೀಡಿದ ನಂತರ ಲೋಕೋ ಚಾಲಕನು ವಾರಂಗಲ್‍ನ ನೆಕ್ಕೊಂಡಾ ರೈಲು ನಿಲ್ದಾಣದ ಬಳಿ ರೈಲನ್ನು ನಿಲ್ಲಿಸಿದರು. ಇದನ್ನೂ ಓದಿ: ಪ್ರಿಯತಮೆ ತಾಯಿಗಾಗಿ ಕಿಡ್ನಿ ಕೊಟ್ಟ- ಒಂದೇ ಕಿಡ್ನಿಯವ ಬೇಡವೆಂದು ಬೇರೆಯವ್ರ ಕೈ ಹಿಡಿದ್ಳು!

    train

    ಹೊಗೆ ನೋಡಿ ಎಚ್ಚೆತ್ತ ಲೋಕೋ ಚಾಲಕರು ರೈಲನ್ನು ನಿಲ್ಲಿಸಿ ನೋಡಿದಾಗ ಬ್ರೇಕ್‍ಗಳ ಜಾಮ್‍ನಿಂದಾಗಿ ಘಟನೆ ಸಂಭವಿಸಿದೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದರಿಂದಾಗಿ ಸುಮಾರು ಒಂದು ಗಂಟೆ ಕಾಲ ರೈಲನ್ನು ನಿಲ್ಲಿಸಲಾಯಿತು ಎನ್ನಲಾಗಿದೆ. ಇದನ್ನೂ ಓದಿ:  ಉದ್ದೇಶಪೂರ್ವಕವಾಗಿಯೇ ಕೋವಿಡ್ ಸೋಂಕು ತಗುಲಿಸಿಕೊಂಡು ಗಾಯಕಿ ನಿಧನ

  • ಕೊರೊನಾ ಭೀತಿ – 14 ಮಾರ್ಗಗಳಲ್ಲಿ ರೈಲು ಸಂಚಾರವಿಲ್ಲ

    ಕೊರೊನಾ ಭೀತಿ – 14 ಮಾರ್ಗಗಳಲ್ಲಿ ರೈಲು ಸಂಚಾರವಿಲ್ಲ

    ಮೈಸೂರು: ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ರೈಲು ಸೇವೆಗಳನ್ನು ಸ್ಥಗಿತ ಮಾಡಲಾಗಿದೆ.

    ರದ್ದಾದ ರೈಲುಗಳು?
    1. ಮೈಸೂರು-ಯಲಹಂಕ-ಮೈಸೂರು, ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲು
    2. ಮೈಸೂರು-ಕೆ.ಎಸ್.ಆರ್, ಬೆಂಗಳೂರು- ಮೈಸೂರು, ರಾಜ್ಯರಾಣಿ ಎಕ್ಸ್‌ಪ್ರೆಸ್ ರೈಲು
    3. ಬೆಳಗಾವಿಯಿಂದ ಮೈಸೂರು ವಿಶ್ವಮಾನವ ಎಕ್ಸ್‌ಪ್ರೆಸ್ ರೈಲು
    4. ಮೈಸೂರಿನಿಂದ ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲು
    5. ಮೈಸೂರಿನಿಂದ ರೇಣಿಗುಂಟ ವಾರದ ಎಕ್ಸ್‌ಪ್ರೆಸ್ ರೈಲು, (ಮಾರ್ಚ್ 20 ಮತ್ತು ಮಾರ್ಚ್ 27 ರ ಪ್ರಯಾಣ ಸೇವೆ ರದ್ದು)
    6. ರೇಣಿಗುಂಟದಿಂದ ಮೈಸೂರು ವಾರದ ಎಕ್ಸ್‌ಪ್ರೆಸ್ ರೈಲು (ಮಾರ್ಚ್ 21 ಮತ್ತು ಮಾರ್ಚ್ 28 ರ ರೈಲು ಸೇವೆ ರದ್ದು)
    7. ಮೈಸೂರಿನಿಂದ ಸಾಯಿನಗರ ಶಿರಡಿ ವಾರದ ಎಕ್ಸ್‌ಪ್ರೆಸ್ ರೈಲು (ಮಾರ್ಚ್ 23 ಮತ್ತು ಮಾರ್ಚ್ 30 ರ ರೈಲು ಸೇವೆ ರದ್ದು)


    8. ಸಾಯಿನಗರ ಶಿರಡಿಯಿಂದ ಮೈಸೂರು ವಾರದ ಎಕ್ಸ್‌ಪ್ರೆಸ್ (ರೈಲು ಮಾರ್ಚ್ 24 ಮತ್ತು ಮಾರ್ಚ್ 31 ರ ರೈಲು ಸೇವೆ ರದ್ದು)
    9. ಹುಬ್ಬಳ್ಳಿ-ಕೆ.ಎಸ್.ಆರ್, ಬೆಂಗಳೂರು- ಹುಬ್ಬಳ್ಳಿ, ಜನಶತಾಬ್ದಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸೇವೆ ರದ್ದು
    10. ಯಶವಂತಪುರ-ಶಿವಮೊಗ್ಗ, ಟೌನ್-ಯಶವಂತಪುರ ವಿಷೇಶ ಎಕ್ಸ್‌ಪ್ರೆಸ್ ರೈಲು ಸೇವೆ ರದ್ದು
    11. ಯಶವಂತಪುರದಿಂದ ಪಂಡರಾಪುರ ವಾರದ ಎಕ್ಸ್‌ಪ್ರೆಸ್ ರೈಲು (ಮಾರ್ಚ್ 19 ಮತ್ತು ಮಾರ್ಚ್ 26 ರ ರದ್ದು)
    12. ಪಂಡರಾಪುರದಿಂದ ಯಶವಂತಪುರ ವಾರದ ಎಕ್ಸ್‌ಪ್ರೆಸ್ ರೈಲು (ಮಾರ್ಚ್ 20 ಮತ್ತು ಮಾರ್ಚ್ 27 ರ ಸೇವೆ ರದ್ದು)
    13. ಉದಯಪುರದಿಂದ ಮೈಸೂರು ವಾರದ ಹಮ್ ಸಫರ್ ರೈಲು (ಮಾರ್ಚ್ 23 ಮತ್ತು ಮಾರ್ಚ್ 30 ರ ಸೇವೆ ರದ್ದು)
    14. ಮೈಸೂರಿನಿಂದ ಉದಯಪುರ ವಾರದ ಹಮ್ ಸಫರ್ ರೈಲು (ಮಾರ್ಚ್ 26 ಮತ್ತು ಏಪ್ರಿಲ್ 02 ರ ಸೇವೆ ರದ್ದು)

  • ಶೀಘ್ರದಲ್ಲೇ ಮಂಗ್ಳೂರು-ಬೆಂಗ್ಳೂರು ನಡುವೆ ಮತ್ತೊಂದು ರೈಲು ಓಡಾಟ

    ಶೀಘ್ರದಲ್ಲೇ ಮಂಗ್ಳೂರು-ಬೆಂಗ್ಳೂರು ನಡುವೆ ಮತ್ತೊಂದು ರೈಲು ಓಡಾಟ

    ಹಾಸನ: ಬಹುದಿನಗಳ ಬೇಡಿಕೆಯಾದ ಮಂಗಳೂರು-ಬೆಂಗಳೂರು ನಡುವೆ ಮತ್ತೊಂದು ರೈಲು ಓಡಾಟ ಶೀಘ್ರವಾಗಿ ಆರಂಭವಾಗಲಿದೆ. ಇದು ಬೆಂಗಳೂರು-ಮಂಗಳೂರು ನಡುವೆ ಹೊಸ ಎಕ್ಸ್ ಪ್ರೆಸ್ ರೈಲಾಗಿದ್ದು, ಕೇಂದ್ರ ಇದಕ್ಕೆ ಹಸಿರು ನಿಶಾನೆ ನೀಡಿದೆ.

    ನೈಋತ್ಯ ರೈಲ್ವೆ ವಲಯ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಇಲಾಖೆ ಒಪ್ಪಿಗೆ ನೀಡಿದ್ದು, ಇದೀಗ ಓಡಾಟ ಆರಂಭಿಸಲು ಕ್ಷಣಗಣನೆ ಆರಂಭವಾಗಿದೆ. ಬೆಂಗಳೂರು-ಶ್ರವಣಬೆಳಗೊಳ-ಹಾಸನ-ಮಂಗಳೂರು ಸೆಂಟ್ರಲ್ ನಡುವೆ ಈ ಹೊಸ ಎಕ್ಸ್ ಪ್ರೆಸ್ ರೈಲು ಸಂಚಾರ ನಡೆಸಲಿದೆ. ವಾರದಲ್ಲಿ ಮೂರು ದಿನಗಳ ರೈಲು ಸಂಚರಿಸಲಿದ್ದು. ಈ ರೈಲು 22 ಬೋಗಿಗಳನ್ನು ಹೊಂದಿರಲಿದೆ. ಇದನ್ನು ಓದಿ: 21 ವರ್ಷಗಳ ಕನಸು ಇಂದು ನನಸು – ಹಾಸನ-ಬೆಂಗಳೂರು ರೈಲು ಮಾರ್ಗ ಉದ್ಘಾಟನೆ

    ವೇಳಾಪಟ್ಟಿ ಇಂತಿದೆ:
    ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಈ ರೈಲು ಹೊರಡುತ್ತದೆ. ನೂತನ ರೈಲಿನ ವೇಳಾಪಟ್ಟಿ ಪ್ರಕಾರ ಮಂಗಳವಾರ, ಶುಕ್ರವಾರ, ಭಾನುವಾರ ಮಧ್ಯಾಹ್ನ 4.30ಕ್ಕೆ ಬೆಂಗಳೂರಿನಿಂದ ಹೊರಡುವ ರೈಲು 8 ಗಂಟೆಗೆ ಹಾಸನಕ್ಕೆ ತಲುಪಲಿದೆ. ಮುಂಜಾನೆ 4.30ಕ್ಕೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ತಲುಪುತ್ತದೆ.

    ಮಂಗಳೂರಿನಿಂದ ಸೋಮವಾರ, ಬುಧವಾರ, ಶನಿವಾರ ಸಂಜೆ 7 ಗಂಟೆಗೆ ಹೊರಡಲಿರುವ ರೈಲು ತಡರಾತ್ರಿ 1.30ಕ್ಕೆ ಹಾಸನಕ್ಕೆ ತಲುಪಲಿದೆ. ಮುಂಜಾನೆ 4.30ಕ್ಕೆ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದು ಸೇರಲಿದೆ. ಮಾರ್ಗದಲ್ಲಿರುವ ನಿಲ್ದಾಣಗಳಾದ ನೆಲಮಂಗಲ, ಕುಣಿಗಲ್, ಯಡಿಯೂರು, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ, ಪುತ್ತೂರು ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗ್ಳೂರು-ಮಂಗ್ಳೂರು ರಾತ್ರಿ ರೈಲು ಇಂದಿನಿಂದ ಆರಂಭ

    ಬೆಂಗ್ಳೂರು-ಮಂಗ್ಳೂರು ರಾತ್ರಿ ರೈಲು ಇಂದಿನಿಂದ ಆರಂಭ

    ಮಂಗಳೂರು: ಪದೇ ಪದೇ ಭೂಕುಸಿತದಿಂದ ರದ್ದಾಗಿದ್ದ ಬೆಂಗಳೂರು-ಮಂಗಳೂರು ಮಧ್ಯೆ ರಾತ್ರಿ ಸಂಚರಿಸುವ ರೈಲು ಸಂಚಾರ ಇಂದಿನಿಂದ ಆರಂಭವಾಗಲಿದೆ.

    ಬೆಂಗಳೂರು-ಕಾರವಾರ/ಕಣ್ಣೂರು – ಬೆಂಗಳೂರು ರಾತ್ರಿ ಎಕ್ಸ್ ಪ್ರೆಸ್ ರೈಲು ಬುಧವಾರ ಆರಂಭವಾಗಲಿದೆ. ಹಗಲು ಸಂಚರಿಸುವ ರೈಲುಗಳು ಗುರುವಾರದಿಂದ ಆರಂಭವಾಗಲಿದೆ.

    ಸಕಲೇಶಪುರ- ಸುಬ್ರಹ್ಮಣ್ಯ ಘಾಟಿ ಪ್ರದೇಶದಲ್ಲಿ ಭಾರೀ ಮಳೆ ಹಾಗೂ ಭೂಕುಸಿತದ ಹಿನ್ನೆಲೆಯಲ್ಲಿ ಮಂಗಳೂರು – ಬೆಂಗಳೂರು ರೈಲು ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಸುಬ್ರಹ್ಮಣ್ಯ ಮತ್ತು ಎಡಕುಮೇರಿ ನಡುವೆ ಸುಮಾರು 55 ಕಿಮೀ. ಉದ್ದದ ರೈಲ್ವೆ ಹಳಿಯ ಮೇಲೆ 65ಕ್ಕೂ ಹೆಚ್ಚು ಕಡೆಗಳಲ್ಲಿ ಭೂಕುಸಿತವಾದ ಕಾರಣ ಈ ಮಾರ್ಗದಲ್ಲಿ ರೈಲು ಸಂಚಾರ ನಿಷೇಧಿಸಲಾಗಿತ್ತು.

    ಆಗಸ್ಟ್ 14ರಂದು ಭೂಕುಸಿತದಿಂದಾಗಿ ಬೆಂಗಳೂರು – ಮಂಗಳೂರು ಸಂಚಾರ ರದ್ದಾಗಿತ್ತು. ಹೀಗಾಗಿ ಯಶವಂತಪುರ-ಕಣ್ಣೂರು-ಕಾರವಾರ ಮಧ್ಯೆ ಸಂಚರಿಸುವ ರೈಲು ಇಂದಿನಿಂದ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv