Tag: express

  • ಚಲಿಸುತ್ತಿದ್ದಂತೆ ಹೊತ್ತಿ ಉರಿದ ರೈಲು

    ಚಲಿಸುತ್ತಿದ್ದಂತೆ ಹೊತ್ತಿ ಉರಿದ ರೈಲು

    ನವದೆಹಲಿ: ರೈಲು ಚಲಿಸುತ್ತಿದ್ದಂತೆ ಹೊತ್ತಿ ಉರಿದಿರುವ ಘಟನೆ ನಡೆದಿದೆ. ದೆಹಲಿಯಿಂದ ಛತ್ತೀಸ್‍ಗೆ ಹೋಗುತ್ತಿದ್ದ ರೈಲು ಬೆಂಕಿಗೆ ಅಹುತಿಯಾಗಿದೆ.

    ದುರ್ಗ್-ಉಧಂಪುರ್  ರೈಲಿಗೆ ಬೆಂಕಿ ತಗುಲಿದ ದುರ್ಘಟನೆ ಇಂದು ಸಂಭವಿಸಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದ ಗಡಿಭಾಗದ ರೈಲುಮಾರ್ಗದಲ್ಲಿ ಈ ಅವಘಡ ಆಗಿದೆ. ರಾಜಸ್ಥಾನದ ಧೌಲಪುರ್ ಮತ್ತು ಮಧ್ಯಪ್ರದೇಶದ ಮೋರೇನಾ ನಡುವೆ ಹೇತಂಪುರ್ ರೈಲ್ವೆ ನಿಲ್ದಾಣದ ಸಮೀಪ ನಡೆದಿದೆ. ಇದನ್ನೂ ಓದಿ:  ರೈತರ ಹೋರಾಟಕ್ಕೆ ವರ್ಷ, ದುರಹಂಕಾರ, ದೌರ್ಜನ್ಯಕ್ಕೆ ಬಿಜೆಪಿ ಹೆಸರುವಾಸಿ: ಪ್ರಿಯಾಂಕಾ ವಾದ್ರಾ

    20848 ಜಮ್ಮು ತಾವಿ ದುರ್ಗ್ ಎಕ್ಸ್ ಪ್ರೆಸ್ ಎಂದೂ ಕರೆಯಲಾಗುವ ಈ ರೈಲಿನ ನಾಲ್ಕು ಎಸಿ ಕೋಚ್ಗಳಿಗೆ ಬೆಂಕಿ ತಗುಲಿದೆ. ಎರಡು ಕೋಚ್‍ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಇನ್ನೆರಡು ಕೋಚ್‍ಗಳಿಗೆ ವ್ಯಾಪಿಸಿದ್ದ ಬೆಂಕಿಯನ್ನ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಪ್ರಯತ್ನಿಸಿದ್ದಾರೆ. ಇದನ್ನೂ ಓದಿ:   ರೈತರ ಹೋರಾಟಕ್ಕೆ ಇಂದಿಗೆ ಒಂದು ವರ್ಷ – ಸಿಂಘು, ಟಿಕ್ರಿ ಗಡಿಯಲ್ಲಿ ಅನ್ನದಾತರ ಮಹಾಪಂಚಾಯತ್

    ಮಧ್ಯಪ್ರದೇಶದ ಮೊರೇನಾ ಮತ್ತು ರಾಜಸ್ಥಾನದ ಧೋಲಪುರ್‍ನಿಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಕ್ಕೆ ತಕ್ಷಣವೇ ಆಗಮಿಸಿ ಕಾರ್ಯಾಚರಣೆಗೆ ಇಳಿದಿದ್ದರೆನ್ನಲಾಗಿದೆ. ಮೋರೇನಾದ ತಹಶೀಲ್ದಾರ್ ಅಜಯ್ ಶರ್ಮಾ ಪ್ರತಿಕ್ರಿಯಿಸಿದ್ದು, ಈ ಬೆಂಕಿ ಅವಘಡದಲ್ಲಿ ಯಾರಿಗೂ ಪ್ರಾಣಾಪಾಯ ಮತ್ತು ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

  • ಶಿವಮೊಗ್ಗ ಟು ಬೆಂಗಳೂರು ರೈಲು ಓಡಾಟ ಸ್ಥಗಿತ – ಡಬ್ಲಿಂಗ್ ಕಾಮಗಾರಿ ಆರಂಭ

    ಶಿವಮೊಗ್ಗ ಟು ಬೆಂಗಳೂರು ರೈಲು ಓಡಾಟ ಸ್ಥಗಿತ – ಡಬ್ಲಿಂಗ್ ಕಾಮಗಾರಿ ಆರಂಭ

    ಶಿವಮೊಗ್ಗ: ತುಮಕೂರಿನಲ್ಲಿ ರೈಲ್ವೇ ಹಳಿ ಡಬ್ಲಿಂಗ್ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆ ಶಿವಮೊಗ್ಗ-ಬೆಂಗಳೂರು ಮಧ್ಯೆ ಒಂದು ವಾರ ರೈಲು ಓಡಾಟ ಸ್ಥಗಿತಗೊಳಿಸುತ್ತಿರುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

    ಇದೇ ತಿಂಗಳ ಮೇ 22ರಿಂದ 29ರವರೆಗೆ ತುಮಕೂರು-ಗುಬ್ಬಿ ಮಾರ್ಗದಲ್ಲಿ ಡಬ್ಲಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈಲು ಓಡಾಟ ಸ್ಥಗಿತಗೊಳಿಸುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಹಳಿ ಡಬ್ಲಿಂಗ್ ಕಾರ್ಯ ಕೈಗೊಳ್ಳುತ್ತಿರುವ ಹಿನ್ನೆಲೆ ಶಿವಮೊಗ್ಗದಿಂದ ಬೆಂಗಳೂರಿಗೆ ಸಂಚರಿಸುವ ರೈಲುಗಳು ಮತ್ತು ತಾಳಗುಪ್ಪಾದಿಂದ ಬೆಂಗಳೂರಿಗೆ ಪ್ರಯಾಣಿಸುವ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಿರುವುದಾಗಿ ತಿಳಿಸಿದ್ದಾರೆ. ಬೆಂಗಳೂರು-ಶಿವಮೊಗ್ಗ ರೈಲು ಮಾರ್ಗ ಅಭಿವೃದ್ಧಿ ಹಿನ್ನೆಲೆಯಲ್ಲಿ ತಾಳಗುಪ್ಪ ಬೆಂಗಳೂರು ಇಂಟರ್ ಸಿಟಿ ರೈಲಿನ ಸಮಯವನ್ನು ಬದಲಾಯಿಸಿ ಬೆಳಗ್ಗೆ 7.40 ಕ್ಕೆ ಹೊರಡುವಂತೆ ಆದೇಶ ನೀಡಲಾಗಿತ್ತು. ಆದರೆ ಈ ಆದೇಶ ಇದೀಗ ಹಿಂಪಡೆಯಲಾಗಿದ್ದು ಎಂದಿನಂತೆ ಈ ರೈಲು ಬೆಳಗ್ಗೆ 6.40ಕ್ಕೆ ಹೊರಡಲಿದ್ದು ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ.

    ಸ್ಥಗಿತಗೊಳಿಸಿರುವ ರೈಲುಗಳ ವಿವರ

    1. ಗಾಡಿ ನಂ. 56227 – ಬೆಂಗಳೂರು, ಶಿವಮೊಗ್ಗ ಟೌನ್ ಪ್ಯಾಸೇಂಜರ್- ರೈಲು, ಮೇ 23 ರಿಂದ 29 ರವರೆಗೆ ರದ್ದುಗೊಳಿಸಲಾಗಿದೆ.
    2. ಗಾಡಿ ನಂ. 56228 – ಶಿವಮೊಗ್ಗ, ಬೆಂಗಳೂರು ಪ್ಯಾಸೆಂಜರ್ ರೈಲು- ಮೇ 23 ರಿಂದ 29 ರವರೆಗೆ ರದ್ದುಗೊಳಿಸಲಾಗಿದೆ.
    3. ಗಾಡಿ ನಂ. 20651 – ಬೆಂಗಳೂರು, ತಾಳಗುಪ್ಪ ಎಕ್ಸ್ ಪ್ರೆಸ್ ರೈಲು- ಮೇ 23 ರಿಂದ 29 ರವರೆಗೆ ರದ್ದುಗೊಳಿಸಲಾಗಿದೆ.
    4. ಗಾಡಿ ನಂ. 20652 – ತಾಳಗುಪ್ಪ, ಬೆಂಗಳೂರು ಎಕ್ಸ್ ಪ್ರೆಸ್ ರೈಲು- ಮೇ 23 ರಿಂದ 29 ರವರೆಗೆ ರದ್ದುಗೊಳಿಸಲಾಗಿದೆ.
    5. ಗಾಡಿ ನಂ. 16579 – ಯಶವಂತಪುರ, ಶಿವಮೊಗ್ಗ ಟೌನ್ ರೈಲು- ಮೇ 25 ರಿಂದ 27 ರವರೆಗೆ ರದ್ದುಗೊಳಿಸಲಾಗಿದೆ.
    6. ಗಾಡಿ ನಂ. 16580 – ಶಿವಮೊಗ್ಗ ಟೌನ್, ಯಶವಂತಪುರ ರೈಲು- ಮೇ 25 ರಿಂದ 27 ರವರೆಗೆ ರದ್ದುಗೊಳಿಸಲಾಗಿದೆ.

  • ಬಿಹಾರದಲ್ಲಿ ಹಳಿ ತಪ್ಪಿದ ಸೀಮಾಂಚಲ ಎಕ್ಸ್‌ಪ್ರೆಸ್ – 6 ಸಾವು, 13 ಮಂದಿಗೆ ಗಂಭೀರ ಗಾಯ

    ಬಿಹಾರದಲ್ಲಿ ಹಳಿ ತಪ್ಪಿದ ಸೀಮಾಂಚಲ ಎಕ್ಸ್‌ಪ್ರೆಸ್ – 6 ಸಾವು, 13 ಮಂದಿಗೆ ಗಂಭೀರ ಗಾಯ

    ನವದೆಹಲಿ: ಬಿಹಾರ ರಾಜ್ಯದ ವೈಶಾಲಿಯಲ್ಲಿ ಸೀಮಾಂಚಲ ಎಕ್ಸ್‌ಪ್ರೆಸ್ ರೈಲಿನ 9 ಬೋಗಿಗಳು ಹಳಿ ತಪ್ಪಿ ಆರು ಮಂದಿ ಸಾವನ್ನಪ್ಪಿದ್ದಾರೆ. 13 ಪ್ರಯಾಣಿಕರು ಗಾಯಗೊಂಡಿದ್ದಾರೆ.

    ಬಿಹಾರದ ರಾಜಧಾನಿ ಪಾಟ್ನಾದಿಂದ 30 ಕಿ.ಮೀ ದೂರದಲ್ಲಿರುವ ಶಾಹದೈ ಬುಜ್‍ರಂಗ್ ಎಂಬಲ್ಲಿ ಬೆಳಗಿನ ಜಾವ 3.52ಕ್ಕೆ ಈ ದುರ್ಘಟನೆ ಸಂಭವಿಸಿದೆ.

    ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಬಿಹಾರದ ಜೋಗ್‍ಬನಿಯಿಂದ ದೆಹಲಿಗೆ ಹೊರಟಿತ್ತು. ಬಹಳ ವೇಗದಲ್ಲಿ ಚಲಿಸುತ್ತಿದ್ದಾಗ ಹಳಿ ತಪ್ಪಿದ್ದು, 9ರ ಪೈಕಿ 3 ಕೋಚ್ ಗಳು ಸಂಪೂರ್ಣವಾಗಿ ತಿರುಗಿ ಬಿದ್ದಿದ್ದು ಭಾರೀ ಜಖಂಗೊಂಡಿದೆ. 3 ಸ್ಲೀಪರ್ ಕೋಚ್, ಒಂದು ಜನರಲ್ ಕೋಚ್, ಒಂದು ಎಸಿ ಕೋಚ್ ನಲ್ಲಿದ್ದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ.

    ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

    https://twitter.com/24x7Politics/status/1091884147851677696

  • ಬೆಂಗ್ಳೂರಿಂದ ಪಾಟ್ನಾಗೆ ತೆರಳ್ತಿದ್ದ ಎಕ್ಸ್ ಪ್ರೆಸ್ ರೈಲಿನಲ್ಲಿ ಗಂಡು ಮಗು ಜನನ

    ಬೆಂಗ್ಳೂರಿಂದ ಪಾಟ್ನಾಗೆ ತೆರಳ್ತಿದ್ದ ಎಕ್ಸ್ ಪ್ರೆಸ್ ರೈಲಿನಲ್ಲಿ ಗಂಡು ಮಗು ಜನನ

    ಕೋಲಾರ: ಸಂಘಮಿತ್ರ ಎಕ್ಸ್ ಪ್ರೆಸ್ ರೈಲಿನಲ್ಲೇ ತಾಯಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಬಳಿ ನಡೆದಿದೆ.

    ಬೆಂಗಳೂರಿನಿಂದ-ಪಾಟ್ನಾಗೆ ತೆರಳುತ್ತಿದ್ದ ಸಂಘಮಿತ್ರ ಎಕ್ಸ್ ಪ್ರೆಸ್ ರೈಲಿನಲ್ಲಿ ಮಹಿಳೆಗೆ ಮಾಲೂರು ಬಳಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಟೇಕಲ್ ಬಳಿ ಪ್ರಸವ ಆಗಿದೆ. ತಮಿಳುನಾಡು ಕಾಟ್ ಪಡಿ ಮೂಲದ 25 ವರ್ಷದ ಮಾಲತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಮಾಲತಿ ಹಾಗೂ ಮುನಿಸ್ವಾಮಿ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಹೆರಿಗೆಗಾಗಿ ಬೆಂಗಳೂರಿನಿಂದ ಕಾಟ್ ಪಡಿಗೆ ತೆರಳುತ್ತಿದ್ದ ವೇಳೆ ಟೇಕಲ್ ಬಳಿ ರೈಲಿನಲ್ಲೇ ಹೆರಿಗೆಯಾಗಿದೆ. ತಾಯಿ ಮಗು ಆರೋಗ್ಯವಾಗಿದ್ದು, ಕೂಡಲೇ ಸಹ ಪ್ರಯಾಣಿಕರು 108 ಗೆ ಕರೆ ಮಾಡಿ ತಾಯಿ ಮಗು ಇಬ್ಬರನ್ನು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews