Tag: expo

  • ಮೆಗಾ ಸ್ನಾತಕೋತ್ತರ ಶೈಕ್ಷಣಿಕ ಉತ್ಸವದ ಮೊದಲ ದಿನ ಭರ್ಜರಿ ರೆಸ್ಪಾನ್ಸ್- ಬನ್ನಿ ಭಾಗವಹಿಸಿ, ಬಹುಮಾನ ಗೆಲ್ಲಿ

    ಮೆಗಾ ಸ್ನಾತಕೋತ್ತರ ಶೈಕ್ಷಣಿಕ ಉತ್ಸವದ ಮೊದಲ ದಿನ ಭರ್ಜರಿ ರೆಸ್ಪಾನ್ಸ್- ಬನ್ನಿ ಭಾಗವಹಿಸಿ, ಬಹುಮಾನ ಗೆಲ್ಲಿ

    ಬೆಂಗಳೂರು: ಪಬ್ಲಿಕ್ ಟಿವಿ (PUBLiC TV) ಪ್ರಸ್ತುತಪಡಿಸುವ ವಿದ್ಯಾಮಂದಿರ 2022 ಮೆಗಾ ಪಿಜಿ ಎಜುಕೇಶನ್ ಎಕ್ಸ್ ಪೋ (Mega Education Expo0 ಗೆ ಶನಿವಾರ ಬೆಂಗಳೂರಿನ ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಚಾಲನೆ ಸಿಕ್ಕಿದೆ. ಮೊದಲ ದಿನವೇ ಅದ್ಭುತ ರೆಸ್ಪಾನ್ಸ್ ಸಿಕ್ಕಿದ್ದು, ಮಳೆಯ ನಡುವೆಯೂ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗಿಯಾದ್ರು.

    ಮೊದಲ ದಿನದ ಪಬ್ಲಿಕ್ ಶಿಕ್ಷಣ ಮೇಳದಲ್ಲಿ 36ಕ್ಕೂ ಹೆಚ್ಚು ಶೈಕ್ಷಣಿಕ ವಿದ್ಯಾಸಂಸ್ಥೆಗಳು ಭಾಗಿಯಾಗಿದ್ದವು. ಒಂದೂವರೆ ಸಾವಿರದಿಂದ 2 ಸಾವಿರದಷ್ಟು ವಿದ್ಯಾರ್ಥಿಗಳು ಭಾಗಿಯಾಗಿ ನೋಂದಣಿ ಮಾಡಿಸಿದ್ದಾರೆ. ಪ್ರತಿ ಅರ್ಧ ಗಂಟೆಗೊಮ್ಮೆ ಜೀನಿ ಹೆಲ್ತ್ ಮಿಲೆಟ್ ಕಂಪನಿಯಿಂದ ಲಕ್ಕಿ ಡಿಪ್ ಕೂಡ ಇತ್ತು. ಇದನ್ನೂ ಓದಿ: ನಂಗೂ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪಿಜಿ ಮಾಡಬೇಕು ಅನಿಸಿದೆ: ಹೆಚ್. ಆರ್ ರಂಗನಾಥ್

    ಎಜುಕೇಶನ್ ಎಕ್ಸ್ ಪೋಗೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ (Ashwath Narayan0 ಚಾಲನೆ ನೀಡಿದ್ರು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ (H R Ranganath), ಬಿಜಿಎಸ್ ಸಂಸ್ಥೆ ಎಂಡಿ ಪ್ರಕಾಶನಾಥ ಸ್ವಾಮೀಜಿ, ರೇವಾ ವಿವಿ ಪ್ರೋ-ಚಾನ್ಸಲರ್ ಉಮೇಶ್ ಎಸ್.ರಾಜು, ಪ್ರೊ. ವಿಸಿ ವಿದ್ಯಾಶಂಕರ ಶೆಟ್ಟಿ, ಕೇಂಬ್ರಿಡ್ಜ್ ಶಿಕ್ಷಣ ಸಂಸ್ಥೆ ಚೇರ್ಮನ್ ಡಿಕೆ ಮೋಹನ್ ಸೇರಿ ಹಲವು ಗಣ್ಯರು ಭಾಗಿಯದ್ರು. ಇದನ್ನೂ ಓದಿ: ಡಿಗ್ರಿ ಬಳಿಕ ಡಾಕ್ಟರೇಟ್ ಕೋರ್ಸ್‍ಗಳ ಕಡೆ ಯುವಕರು ಹೆಚ್ಚು ಗಮನ ಹರಿಸಬೇಕು: ಅಶ್ವಥ್ ನಾರಾಯಣ್

    ಇನ್ನೂ ಇಂದೂ ಕೂಡ ಶಿಕ್ಷಣ ಮೇಳ ನಡೆಯಲಿದ್ದು, ಶೈಕ್ಷಣಿಕ ವಿದ್ಯಾಸಂಸ್ಥೆಗಳ ಸ್ಟಾಲ್‍ಗಳಲ್ಲಿ, ಕೋರ್ಸ್‍ಗಳ ವಿಶೇಷತೆ, ಹಾಗೂ ಯಾವ್ಯಾವ ಕೋರ್ಸ್‍ಗಳು ಭವಿಷ್ಯಕ್ಕೆ ನೆರವಾಗಲಿವೆ ಎಂಬ ಶೈಕ್ಷಣಿಕ ಮಾಹಿತಿ ನೀಡಲಾಗುತ್ತೆ. ನೀವು ಕೂಡ ಮಿಸ್ ಮಾಡ್ಕೊಂಡಿದ್ರೆ ಉನ್ನತ ಮಟ್ಟದ ವಿದ್ಯಾಭ್ಯಾಸ, ಮುಂದಿನ ಉಜ್ವಲ ಭವಿಷ್ಯಕ್ಕಾಗಿ ವಿದ್ಯಾಮಂದಿರಕ್ಕೆ ಬನ್ನಿ.. ಭಾಗವಹಿಸಿ.

    Live Tv
    [brid partner=56869869 player=32851 video=960834 autoplay=true]

  • ‘ನಮ್ಮ ಮನೆ’ ಎಕ್ಸ್‌ಪೋ 4 ನೇ ಆವೃತ್ತಿಗೆ ತೆರೆ

    ‘ನಮ್ಮ ಮನೆ’ ಎಕ್ಸ್‌ಪೋ 4 ನೇ ಆವೃತ್ತಿಗೆ ತೆರೆ

    ಬೆಂಗಳೂರು: ‘ಪಬ್ಲಿಕ್ ಟಿವಿ’ ಪ್ರಸ್ತುತಪಡಿಸಿರುವ ‘ನಮ್ಮ ಮನೆ’ ರಿಯಲ್ ಎಸ್ಟೇಟ್ ಎಕ್ಸ್‌ಪೋ 4 ನೇ ಆವೃತ್ತಿಗೆ ಭಾನುವಾರ ತೆರೆಬಿದ್ದಿದೆ. ಎಕ್ಸ್‌ಪೋಗೆ ಎರಡು ದಿನವೂ ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿತು. ಕೊನೆಯ ದಿನವಾದ ಭಾನುವಾರ ಬೆಳಗ್ಗೆಯಿಂದಲೇ ಗ್ರಾಹಕರು ಎಕ್ಸ್‌ಪೋಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು.

    30 ಕ್ಕೂ ಹೆಚ್ಚು ಪ್ರತಿಷ್ಠಿತ ಡೆವಲಪರ್ಸ್ ಎಕ್ಸ್‌ಪೋದಲ್ಲಿ ಭಾಗವಹಿಸಿದ್ದರು. ಗ್ರಾಹಕರಿಗಾಗಿ ಹಲವು ಬಂಪರ್ ಆಫರ್‍ಗಳನ್ನು ಸಹ ನೀಡಲಾಗಿತ್ತು. ಕೊನೆಯ ದಿನವಾದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭಾಗವಹಿಸಿದ್ದರು. ಇದನ್ನೂ ಓದಿ: ಕೊಡಗಿನಲ್ಲಿ ಮಕ್ಕಳ ದತ್ತು ಸ್ವೀಕಾರಕ್ಕೆ ತುಡಿತ – 5 ವರ್ಷಗಳಲ್ಲಿ 48 ಪೋಷಕರ ಅರ್ಜಿ 

    ಎಕ್ಸ್‌ಪೋ ಬೆಳಗ್ಗೆ 10 ರಿಂದ ಸಂಜೆ 6 ವರೆಗೆ ಮಲ್ಲೇಶ್ವರ ಕೆ.ಸಿ.ಜನರಲ್ ಆಸ್ಪತ್ರೆ ಮುಂಭಾಗದ ಸರ್ಕಾರಿ ಶಾಲೆ ಮೈದಾನದಲ್ಲಿ ನಡೆಯಿತು. ಈ ಎಕ್ಸ್‌ಪೋದಲ್ಲಿ ದೇಶದ ಪ್ರತಿಷ್ಠಿತ ಡೆವಲಪರ್ಸ್ ಭಾಗಿಯಾಗಿದ್ದರು. ಮನೆ, ಸೈಟ್, ವಿಲ್ಲಾ, ಫ್ಲ್ಯಾಟ್‍ಗಳ ಬಗ್ಗೆ ಎಕ್ಸ್‌ಪೋದಲ್ಲಿ ಮಾಹಿತಿ ನೀಡಲಾಯಿತು. ಕಾರ್ಯಕ್ರಮಕ್ಕೆ ಮೊದಲ ದಿನ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಮೊದಲ ದಿನ ಎಕ್ಸ್‌ಪೋದಲ್ಲಿ ಭಾಗಿಯಾಗಿದ್ದ ಗ್ರಾಹಕರು ಭರ್ಜರಿ ಗಿಫ್ಟ್‌ಗಳನ್ನ ಪಡೆದಿದ್ದರು.

    ಇಂದು ಸಹ ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಭಾಗಿಯಾಗಿ ಹಲವು ಗಿಫ್ಟ್‌ಗಳನ್ನು ಬಾಚಿಕೊಂಡರು. ಎಕ್ಸ್‌ಪೋದಲ್ಲಿ ಭಾಗಿಯಾಗುವ ಗ್ರಾಹಕರಿಗೆ ಪ್ರತಿ ಅರ್ಧಗಂಟೆಗೊಮ್ಮೆ ಲಕ್ಕಿ ಡ್ರಾ ಮೂಲಕ ಚಿನ್ನದ ನಾಣ್ಯ ಗೆಲ್ಲುವ ಅವಕಾಶವಿತ್ತು.

    ಎಕ್ಸ್‌ಪೋ ಸಮಾರೋಪ ಸಮಾರಂಭದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರು ಭಾಗಿಯಾಗಿದ್ದರು. ಈ ವೇಳೆ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಎಕ್ಸ್‌ಪೋದಲ್ಲಿ ಭಾಗಿಯಾದವರು ನಿಮ್ಮನ್ನ ವಿಮರ್ಶೆ ಮಾಡಿಕೊಳ್ಳಿ. ಯಾವ ಕಾರಣಕ್ಕೆ ನಾವು ಉತ್ತಮವಾಗಿ ಜನರನ್ನ ತಲುಪಿದ್ದೇವೆ, ಏಕೆ ತಲುಪಲಾಗಲಿಲ್ಲ ಎನ್ನುವುದನ್ನ ವಿಮರ್ಶೆ ಮಾಡಿಕೊಳ್ಳಿ. ಭೂಮಿ ಯಾವತ್ತು ಯಾರನ್ನೂ ಕೈ ಬಿಡಲ್ಲ ಎಂದರು. ಇದನ್ನೂ ಓದಿ:  ಮದರ್‌ವುಡ್‌ ಜರ್ನಿಯಲ್ಲಿ ತನ್ನ ತಾಯಿಯನ್ನ ನೆನೆದ ಪ್ರಣಿತಾ 

    ಜನರಿಗೆ ಆಸೆ, ನಿರೀಕ್ಷೆ ಹೆಚ್ಚಿದೆ. ಎಲ್ಲರಿಗೂ ಒಳ್ಳೆಯದಾಗಲಿ. ಎಲ್ಲರಿಗೂ ಧತ್ರಿ ಹೆಸರಿನಂತೆ ಒಳ್ಳೆಯದಾಗಲಿ ಎಂದು ಶುಭಕೋರಿದರು. ನಂತರ ರಂಗನಾಥ್ ಅವರು ಎಕ್ಸ್‌ಪೋದಲ್ಲಿ ಭಾಗಿಯಾದ ಎಲ್ಲ ಡೆವಲಪರ್ಸ್‍ಗೂ ಕಾಣಿಕೆ ನೀಡಿ ಗೌರವಿಸಿದರು.

  • ಪಬ್ಲಿಕ್ ಟಿವಿಯ ನಮ್ಮ ಮನೆ ಎಕ್ಸ್‌ಪೋಗೆ ಸಖತ್ ಸ್ಪಂದನೆ – ಇಂದೇ ಕಡೇ ದಿನ, ತಪ್ಪದೇ ಬನ್ನಿ

    ಪಬ್ಲಿಕ್ ಟಿವಿಯ ನಮ್ಮ ಮನೆ ಎಕ್ಸ್‌ಪೋಗೆ ಸಖತ್ ಸ್ಪಂದನೆ – ಇಂದೇ ಕಡೇ ದಿನ, ತಪ್ಪದೇ ಬನ್ನಿ

    ಬೆಂಗಳೂರು: ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುತ್ತಿರುವ ನಮ್ಮ ಮನೆ ರಿಯಲ್ ಎಸ್ಟೇಟ್ ಎಕ್ಸ್ ಪೋ 4ನೇ ಆವೃತ್ತಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

    ಮೊದಲವೇ ದಿನವೇ ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಎಕ್ಸ್ ಪೋಗೆ ಭೇಟಿ ನೀಡಿ ತಮ್ಮ ನೆಚ್ಚಿನ ಸೂರನ್ನು ಹೊಂದುವ ಕನಸನ್ನು ನನಸು ಮಾಡಿಕೊಳ್ಳ ಹೊರಟಿದ್ದಾರೆ. ಮಲ್ಲೇಶ್ವರಂ ಸರ್ಕಾರಿ ಶಾಲೆ ಮೈದಾನದಲ್ಲಿ ನಡೆಯುತ್ತಿರುವ ಎಕ್ಸ್ ಪೋಗೆ ಇಂದು ತೆರೆ ಬೀಳಲಿದೆ.

    ಸುಮಾರು 30ಕ್ಕೂ ಹೆಚ್ಚು ಪ್ರತಿಷ್ಠಿತ ಡೆವಲಪರ್ಸ್ ಎಕ್ಸ್ ಪೋದಲ್ಲಿ ಭಾಗಿ ಆಗಿದ್ದು, ಜನರ ನಿರೀಕ್ಷೆಗಳಿಗೆ ತಕ್ಕಂತೆ ನಿವೇಶನ, ಫ್ಲಾಟ್‍ಗಳ ಮಾಹಿತಿ ನೀಡ್ತಿದೆ. ಪ್ರತಿ ಅರ್ಧಗಂಟೆಗೊಮ್ಮೆ ಚಿನ್ನದ ನಾಣ್ಯ ಗೆಲ್ಲುವ ಸದಾವಕಾಶ ಇದ್ದು ಇದು ಇಂದು ಸಹ ಇರಲಿದೆ. ಎಕ್ಸ್ ಪೋಗೆ ಇಂದು ಕೊನೆ ದಿನವಾಗಿದ್ದು.. ಬನ್ನಿ ಭಾಗವಹಿಸಿ ನಿಮ್ಮ ನೆಚ್ಚಿನ ನಿವೇಶನದ ಕನಸನ್ನು ನನಸಾಗಿಸಿಕೊಳ್ಳಿ.

    ಎಕ್ಸ್ ಪೋ ವಿಶೇಷತೆ ಏನು?
    ಎಲ್ಲ ಆರ್ಥಿಕ ಸಮುದಾಯವನ್ನು ನೋಡಿಕೊಂಡು ಆಯೋಜಿಸಲಾಗಿದೆ. ಯಾರು ಬೇಕಾದರೂ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

    ಯಾರೆಲ್ಲ ಭಾಗವಹಿಸುತ್ತಾರೆ?
    – ಕನ್‍ಸ್ಟ್ರಕ್ಷನ್ ಕಂಪನಿಗಳು
    – ಲ್ಯಾಂಡ್ ಡೆವಲಪರ್ಸ್
    – ಪ್ರೀಮಿಯಂ ವಿಲ್ಲಾ ಮತ್ತು ಅಪಾರ್ಟ್‍ಮೆಂಟ್ ಕಂಪನಿಗಳು
    – ಹಣಕಾಸು ಸಂಸ್ಥೆಗಳು
    – ಸಿಮೆಂಟ್ ಮತ್ತು ಸ್ಟೀಲ್ ಕಂಪನಿಗಳು
    – ಸ್ಯಾನಿಟರಿ ಫಿಟ್ಟಿಂಗ್
    – ಒಳಾಂಗಣ ವಿನ್ಯಾಸ ಕಂಪನಿಗಳು
    – ಸ್ಮಾರ್ಟ್ ಹೋಮ್ ಡಿವೈಸ್ ಕಂಪನಿಗಳು

    ಟೈಟಲ್ ಸ್ಪಾನ್ಸರ್ – ಶ್ರೀ ಧತ್ರಿ ಡೆವಲಪರ್ಸ್ & ಪ್ರಮೋಟರ್ಸ್, ಪ್ಲಾಟಿನಂ ಸ್ಪಾನ್ಸರ್- ಸ್ಯಾನ್ ಸಿಟಿ. ಕೋ ಸ್ಪಾನ್ಸರ್– ಶೆಟ್ಟಿ & ಶೆಟ್ಟಿ ಕನಸ್ಟ್ರಕ್ಷನ್ಸ್ ಆ್ಯಂಡ್ ಹೌಸಿಂಗ್, ಶ್ರೀ ಭೂಮಿ ಪ್ರಮೋಟರ್ಸ್ ಆ್ಯಂಡ್ ಡೆವಲಪರ್ಸ್, ಬಿಎಸ್‍ಎನ್‍ಎಲ್ ಬ್ಯಾಂಕ್ ಎಂಪ್ಲಾಯಿಸ್ & ವೆಲ್‍ಫೇರ್ ಸೊಸೈಟಿ, ರಾಜರ್ಶಿ ಡೆವೆಲಪರ್ಸ್ ಪ್ರೈ. ಲಿಮಿಟೆಡ್.

    ಪವರ್ಡ್ ಬೈ– ಶ್ರೀ ಸಾಯಿ ಡೆವಲಪರ್ಸ್ ಆ್ಯಂಡ್ ಪ್ರಮೋಟರ್ಸ್, ರಾಯಲ್ ಪ್ರಾಪರ್ಟಿಸ್, ಕೋ ಪವರ್ಡ್ ಬೈ– ಟ್ರಿಂಕೋ ಇನ್‍ಫ್ರಾ ಪ್ರಾಜೆಕ್ಟ್ಸ್ ಪ್ರೈ. ಲಿಮಿಟೆಡ್, ಯೂನಿಕ್ ರಿಯಾಲಿಟಿಸ್, ಅಸೋಸಿಯೇಟ್ ಸ್ಪಾನ್ಸರ್ಸ್– ಡಿಎಸ್ ಮ್ಯಾಕ್ಸ್ ಪ್ರಾಪರ್ಟಿಸ್, ಕಂಪಾಸ್, ಮದರ್ ಅರ್ಥ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್. ಬ್ಯಾಂಕ್ ಪಾರ್ಟ್‍ನರ್– ಕೆನರಾ ಬ್ಯಾಂಕ್, ಸ್ಟೀಲ್ ಪಾರ್ಟ್‍ನರ್– ಟರ್ಬೋ ಸ್ಟೀಲ್, ಗಿಫ್ಟ್ ಪಾರ್ಟ್‍ನರ್- ಜೀನಿ ಮಿಲೆಟ್ ಹೆಲ್ತ್ ಮಿಕ್ಸ್.

  • ಎರಡು ದಿನ ನಡೆದ ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋಗೆ ಭರ್ಜರಿ ರೆಸ್ಪಾನ್ಸ್

    ಎರಡು ದಿನ ನಡೆದ ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋಗೆ ಭರ್ಜರಿ ರೆಸ್ಪಾನ್ಸ್

    ಬೆಂಗಳೂರು: ಪಬ್ಲಿಕ್ ಟಿವಿ ಆಯೋಜನೆ ಮಾಡಿದ್ದ ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋಗೆ ಇಂದು ತೆರೆಬಿದ್ದಿದೆ. ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಪೋಷಕರು ಅನೇಕ ಕನಸುಗಳನ್ನ ಕಟ್ಟಿಕೊಂಡಿರುತ್ತಾರೆ. ಆ ಕನಸನ್ನು ಹಿಡಿರಿಸೋ ದೃಷ್ಟಿಯಿಂದ ಪಬ್ಲಿಕ್ ಟಿವಿ ಈ ಎಜುಕೇಶನ್ ಎಕ್ಸ್‌ಪೋವನ್ನು ಆಯೋಜನೆ ಮಾಡಿತ್ತು.

    ಪಬ್ಲಿಕ್ ಟಿವಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸಾಮಾಜಿಕ ಕಳಕಳಿಯಿಂದ ಡ್ರೀಮ್ಸ್ ಸ್ಕೂಲ್ ಎಜುಕೇಶನ್ ಎಕ್ಸ್‌ಪೋ ಕಳೆದೆರೆಡು ದಿನದಿಂದ ಆಯೋಜಿಸತ್ತು. ಬೆಂಗಳೂರಿನ ವಿಜಯನಗರದ ಎಂಸಿ ಲೇಔಟ್‍ನಲ್ಲಿರೋ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ನಡೆದ ಎಜುಕೇಶನ್ ಎಕ್ಸ್‌ಪೋ ಗೆ ಮೊದಲ ದಿನವೇ 1500 ಕ್ಕೂ ಹೆಚ್ಚು ಪೋಷಕರು ಎಕ್ಸ್‌ಪೋ ಆಗಮಿಸಿ ತಮ್ಮ ಮಕ್ಕಳಿಗೆ ಸೂಕ್ತವಾದ ಶಾಲೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

    ಇಂದು ಸಹ ಎಕ್ಸ್‌ಪೋ ಗೆ ಪೋಷಕರಿಂದ ಭರ್ಜರಿ ರೆಸ್ಪಾನ್ಸ್ ಬಂದಿದೆ. ಬೆಳಗ್ಗೆಯಿಂದಲೇ ಪೋಷಕರು ತಮ್ಮ ಮಕ್ಕಳೊಂದಿಗೆ ಎಕ್ಸ್‌ಪೋ ಗೆ ಆಗಮಿಸಿ ತಮಗೆ ಬೇಕಾದ ಶಾಲೆಯ ಮಾಹಿತಿಗಳನ್ನ ಪಡೆದುಕೊಂಡರು. ಒಟ್ಟಾರೆಯಾಗಿ 5 ಸಾವಿರಕ್ಕೂ ಹೆಚ್ಚು ಪೋಷಕರು ಎಕ್ಸ್‌ಪೋಗೆ ಆಗಮಿಸಿದ್ರು. ಒಂದೇ ಸೂರಿನಡಿಯಲ್ಲಿ ಇಷ್ಟೊಂದು ಶಾಲೆಗಳನ್ನು ನೋಡಿ ಫುಲ್ ಖುಷಿಯಾಗಿದ್ರು ಕೆಲ ಪೋಷಕರು ತಮ್ಮಗೆ ಅನುಕೂಲವಾಗೋ ಶಾಲೆಗೆ ಮಕ್ಕಳನ್ನು ಇಲ್ಲೇ ಆಡ್ಮಿಷನ್ ಮಾಡಿಸೋ ನಿರ್ಧಾರವನ್ನು ಸಹ ಮಾಡಿದರು.

    ಎಕ್ಸ್‌ಪೋನ ಕೊನೆಯ ದಿನವಾದ ಇಂದು ಮಕ್ಕಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನ ಆಯೋಜಿಸಿತ್ತು. ಹ್ಯಾಂಡ್ ರೈಟಿಂಗ್ ಎಕ್ಸ್ ಪರ್ಟ್ ಆಗಿರುವ ಡಾ. ರಫೀವುಲ್ಲ ಬೇಗ್ ಅವರು ಮೆಮೊರಿ ಅಂಡ್ ಹ್ಯಾಂಡ್ ರೈಟಿಂಗ್ ಬಗ್ಗೆ ಉಪನ್ಯಾಸ ಮಾಡಿದರು. ಜೊತೆಗ ಮಕ್ಕಳಲ್ಲಿ ಮೆಮೊರಿ ಪವರ್ ಹೇಗೆ ಹೆಚ್ಚಿಸಬೇಕು ಅನ್ನೋದನ್ನ ಪ್ರದರ್ಶನ ಮಾಡಿದರು.

    ಮಕ್ಕಳ ಮೇಲೆ ಪೋಷಕರು ಒತ್ತಡ ಹಾಕುವ ಬದಲು ಮಕ್ಕಳಿಗೆ ಸುಲಭವಾಗಿ ಮೆಮೊರಿ ಪವರ್ ಹೇಗೆ ಹೆಚ್ವಿಸಿಕೊಳ್ಳೊದು ಅನ್ನೋದನ್ನು ತಿಳಿಸಿಕೊಟ್ಟರು. ಜೊತೆಗೆ ಮಕ್ಕಳಿಗಾಗಿ ಡ್ರಾಯಿಂಗ್ ಅಂಡ್ ಕ್ವೀಜ್ ಕಾಂಪಿಟೇಷನ್ ಕೂಡ ನಡೆಯಿತು. ನೂರಾರು ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದರು. ಡ್ರಾಯಿಂಗ್ ಅಂಡ್ ಕ್ವೀಜ್ ನಲ್ಲಿ ವೀಜೆತರಾದ ಮಕ್ಕಳಿಗೆ ರೇವಾ ಯುನಿವರ್ಸಿಟಿ ವತಿಯಿಂದ ನಗದು ಬಹುಮಾನದ ಜೊತೆಗೆ ಗಿಫ್ಟ್ ಕೂಡ ನೀಡಲಾಯಿತು.

    ಎರಡು ದಿನ ನಡೆದ ಎಕ್ಸ್‌ಪೋ ಗೆ ಪೋಷಕರ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಅಭೂತ ಪೂರ್ವ ಯಶಸ್ಸು ಗಳಿಸುವಂತೆ ಮಾಡಿದ್ದಾರೆ. ಎಕ್ಸ್‌ಪೋ ನಲ್ಲಿ ಭಾಗಿಯಾಗಿದ್ದ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಎಕ್ಸ್‌ಪೋ ಕಾರಣಕರ್ತರಾದ ವ್ಯಕ್ತಿಗಳಿಗೆ ಪಬ್ಲಿಕ್ ಟಿವಿಯ ಸಿಇಓ ಅರುಣ್ ಕುಮಾರ್ ಮತ್ತು ಸಿಓಓ ಸಿ.ಕೆ.ಹರೀಶ್ ಕುಮಾರ್ ನೆನಪಿನ ಕಾಣಿಕೆ ನೀಡಿ ಗೌರವ ಅರ್ಪಿಸಿದರು.

    ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಬೆಸ್ಟ್ ಎಜುಕೇಶನ್ ಕೊಡಬೇಕು ಎಂದು ಕನಸು ಕಾಣುತ್ತಾರೆ. ಆ ಕನಸನ್ನ ನನಸು ಮಾಡೋ ನಿಟ್ಟಿನಲ್ಲಿ ನಿಮ್ಮ ಪಬ್ಲಿಕ್ ಟಿವಿ ಸಣ್ಣ ಪ್ರಯತ್ನವನ್ನ ಮಾಡಿದೆ. ಡ್ರೀಮ್ಸ್ ಎಕ್ಸ್‌ಪೋ ಯಶಸ್ವಿಯಾಗಲು ಕಾರಣರಾದ 20ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರಿಗೆ ಪಬ್ಲಿಕ್ ಟಿವಿ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತದೆ.

  • ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋಗೆ ನಿರ್ಮಲಾನಂದ ಶ್ರೀ ಚಾಲನೆ

    ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋಗೆ ನಿರ್ಮಲಾನಂದ ಶ್ರೀ ಚಾಲನೆ

    ಬೆಂಗಳೂರು: ಎರಡು ದಿನಗಳ ಕಾಲ ವಿಜಯನಗರದ ಎಂಸಿ ಲೇಔಟ್ ನಲ್ಲಿರೋ ಬಾಲಗಂಗಾಧರನಾಥ ಕ್ರೀಡಾಂಗಣದಲ್ಲಿ ಪಬ್ಲಿಕ್ ಟಿವಿ ಆಯೋಜಿಸಿರುವ ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋಗೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಶ್ರೀಗಳು ಇಂದು ಚಾಲನೆ ನೀಡಿದ್ದಾರೆ.

    ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಒಂದು ದೇಶಕ್ಕೆ ಮಾನವ ಸಂಪನ್ಮೂಲವೇ ಬಹುದೊಡ್ಡ ಸಂಪನ್ಮೂಲವಾಗಿರುತ್ತದೆ. ಜ್ಞಾನವಂತರು ಇರುವಂತಹ ದೇಶ, ಮನೆ ಅಥವಾ ಸಮಾಜ ಇದ್ದು, ಜನಸಂಖ್ಯೆ ಸ್ವಲ್ಪ ಹೆಚ್ಚು ಕಡಿಮೆ ಇದ್ದರೂ ಆ ದೇಶದಲ್ಲಿರುವಂತಹ ಜ್ಞಾನವಂತ ಮಕ್ಕಳು ಪ್ರಜೆಗಳು ಆ ದೇಶಕ್ಕೆ ಆಸ್ತಿಯಾಗುತ್ತಾರೆ. ಇಂತಹ ಜ್ಞಾನವನ್ನು ಹೊರಗೆ ತರುವಂತಹ ಮತ್ತು ಅವರವರಿಗೆ ಅವರವರ ಶಕ್ತಿಯ ದರ್ಶನವನ್ನು ಮಾಡಿಕೊಡುವಂತಹ ವ್ಯವಸ್ಥೆ ಅಂದರೆ ಅದು ಎಜುಕೇಶನ್ ಸಿಸ್ಟಮ್ ಆಗಿರುತ್ತದೆ ಎಂದು ಹೇಳಿದರು.

    ಮಕ್ಕಳಿಗೆ ಅತ್ಯತ್ತಮ ಶಿಕ್ಷಣ ಕೊಡಿಸುವ ಹಲವಾರು ಶಾಲೆಗಳು ನಮ್ಮ ಪಟ್ಟಣದಲ್ಲಿ ಬರುತ್ತಿರುತ್ತದೆ. ಇಂತಹ ಶಾಲೆಗಳನ್ನು ಗುರುತಿಸಿ, ಪೋಷಕರು ತಮ್ಮ ಮಕ್ಕಳನ್ನು ಆ ಶಾಲೆಗೆ ಸೇರಿಸುವುದರಿಂದ ಅವರು ವಿಶ್ವದ ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

    ಶಾಲೆಗಳಲ್ಲಿ ಆಧುನಿಕ ವಿದ್ಯೆ ಖಂಡಿತಾ ಬೇಕು. ಹೀಗಾಗಿ ಉತ್ತಮ ಶಾಲೆಗಳನ್ನು ಇಲ್ಲಿಗೆ ಕರೆಸಿ, ಅವರ ಪರಿಚಯವನ್ನು ನಾಗರಿಕರಿಗೆ ಮಾಡಿಸಿ, ನಿಮ್ಮ ಆಯ್ಕೆ ಯಾವ ಶಾಲೆ ಎಂಬುದನ್ನು ತಿಳಿದುಕೊಳ್ಳಿ ಎಂದು ಪಬ್ಲಿಕ್ ಟಿವಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಒಳ್ಳೆಯ ಪ್ರಯತ್ನವಾಗಿದೆ ಎಂದು ಅವರು ಹಾರೈಸಿದರು.

    ಕಾರ್ಯಕ್ರಮದಲ್ಲಿ ಸಚಿವರಾದ ವಿ ಸೋಮಣ್ಣ, ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್ ಆರ್ ರಂಗನಾಥ್, ಬಿಬಿಎಂಪಿ ಸದಸ್ಯರಾದ ಉಮೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

    ಶಾಲೆಗಳ ಬಗ್ಗೆ ಸಂಪೂರ್ಣ ಮಾಹಿತಿಗಳು ಪೋಷಕರಿಗೆ ಒಂದೇ ಸೂರಿನಲ್ಲಿ ಸುಲಭವಾಗಿ ಸಿಗಲೆಂದು ಇಂದು ಮತ್ತು ನಾಳೆ ಎಕ್ಸ್ ಪೋವನ್ನು ಆಯೋಜಿಸಲಾಗಿದೆ. ಪ್ರಿಸ್ಕೂಲ್, ಇಂಟರ್ ನ್ಯಾಷನಲ್ ಮತ್ತು ರೆಸಿಡೆನ್ಶಿಯಲ್ ಸ್ಕೂಲ್ ಬಗ್ಗೆ ಸ್ಪಷ್ಟವಾದ ಮಾಹಿತಿ ಡ್ರೀಮ್ಸ್ ಸ್ಕೂಲ್‍ನಲ್ಲಿ ಸಿಗಲಿದೆ.

    ವಿದ್ಯಾರ್ಥಿಗಳಿಗೆ ನೀಡುತ್ತಿರುವ ಗುಣಾತ್ಮಕ ಶಿಕ್ಷಣ, ಪಾಠ ಮತ್ತು ಪಠ್ಯೇತರ ಚಟುವಟಿಕೆಯ ಆಧಾರದ ಮೇಲೆ ಶಾಲೆಗಳನ್ನು ವಿಂಗಡಿಸಿದ್ದು ಮಗುವನ್ನು ಎಲ್ಲಿ ಸೇರಿಸಿದರೆ ಭವಿಷ್ಯ ಉಜ್ವಲವಾಗಬಹುದು ಎಂಬ ಪೋಷಕರ ಪ್ರಶ್ನೆಗೆ ಎಕ್ಸ್ ಪೋದಲ್ಲಿ ಸುಲಭವಾಗಿ ಉತ್ತರ ಸಿಗಲಿದೆ. ಉಚಿತ ಪ್ರವೇಶದ ಕಾರ್ಯಕ್ರಮ ಇದಾಗಿದ್ದು ಪೋಷಕರು ಆಗಮಿಸಿ ಶಾಲೆಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು.

    ಏನು ಇರುತ್ತೆ?
    – ಒಂದೇ ಮಳಿಗೆಯಲ್ಲಿ 20ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು
    – ಮಾಹಿತಿಪೂರ್ಣ ಸಂವಾದಗಳು
    – ಡ್ರಾಯಿಂಗ್ ಸ್ಪರ್ಧೆ
    – ಕ್ವಿಜ್ ಸ್ಪರ್ಧೆ
    – ಮ್ಯಾಜಿಕ್ ಶೋ
    – ಸ್ಪರ್ಧಿಗಳಿಗೆ ಉಚಿತ ಗಿಫ್ಟ್
    – ಸ್ಥಳದಲ್ಲೇ ಅಡ್ಮಿಶನ್ ವ್ಯವಸ್ಥೆ

     

  • 2ನೇ ದಿನಕ್ಕೆ ಪಬ್ಲಿಕ್ ಟಿವಿ ‘ನಮ್ಮ ಮನೆ ಎಕ್ಸ್ ಪೋ’- ಇಂದೇ ಕೊನೆಯ ದಿನ, ತಪ್ಪದೇ ಬನ್ನಿ

    2ನೇ ದಿನಕ್ಕೆ ಪಬ್ಲಿಕ್ ಟಿವಿ ‘ನಮ್ಮ ಮನೆ ಎಕ್ಸ್ ಪೋ’- ಇಂದೇ ಕೊನೆಯ ದಿನ, ತಪ್ಪದೇ ಬನ್ನಿ

    – ಮೊದಲ ದಿನ ಎಕ್ಸ್ ಪೋಗೆ ಭರ್ಜರಿ ರೆಸ್ಪಾನ್ಸ್

    ಬೆಂಗಳೂರು: ಪಬ್ಲಿಕ್ ಟಿವಿ ಆಯೋಜನೆಯ ನಮ್ಮ ಮನೆ ಎಕ್ಸ್ ಪೋಗೆ ಈಗಾಗಲೇ ಚಾಲನೆ ಸಿಕ್ಕಿದ್ದು, ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸಾವಿರಾರು ಮಂದಿ ಗ್ರಾಹಕರು ಕನಸಿನ ಮನೆ ನಿರ್ಮಾಣದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇಂದು ಎಕ್ಸ್ ಪೋಗೆ ಕಡೆಯ ದಿನ. ನಿಮ್ಮ ಕನಸಿನ ಮನೆ ನನಸು ಮಾಡಿಕೊಳ್ಳಲು ಮಿಸ್ ಮಾಡದೇ ಎಕ್ಸ್ ಪೋಗೆ ಬನ್ನಿ.

    ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುವ ಎಂಕೆಬಿ ಡೆವಲಪರ್ಸ್ ಮತ್ತು ಪ್ರಮೋಟರ್ಸ್ ನ ನಮ್ಮ ಮನೆ ಎಕ್ಸ್ ಪೋಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಮೊದಲ ದಿನವಾದ ಶನಿವಾರ ಸಾವಿರಾರು ಮಂದಿ ಮಲ್ಲೇಶ್ವರಂನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿರುವ ನಮ್ಮ ಮನೆ ಎಕ್ಸ್ ಪೋಗೆ ಬಂದಿದ್ದರು. ಸೈಟ್, ಮನೆ ಕೊಳ್ಳುವ ಸದಾವಕಾಶವನ್ನು ಮಿಸ್ ಮಾಡಿಕೊಳ್ಳಲಿಲ್ಲ. ಕೆಲವರಂತೂ ಮನೆ ಮಂದಿ ಸಮೇತವಾಗಿ ಎಕ್ಸ್ ಪೋಗೆ ಬಂದು ನಮ್ಮ ಮನೆ ಕನಸನ್ನು ನನಸು ಮಾಡಿಕೊಳ್ಳಲು ನೋಡಿದರು.

    ಪ್ರಸಿದ್ಧ ರಿಯಲ್ ಎಸ್ಟೇಟ್ ಕಂಪನಿಗಳಿಂದ ಎಲ್ಲಿ ಸೈಟ್ ಕೊಂಡರೆ ಒಳ್ಳೆಯದು, ಮನೆ ಬೆಸ್ಟಾ ಅಥವಾ ಸೈಟ್ ಖರೀದಿ ಬೆಸ್ಟಾ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡರು. ಬ್ಯಾಂಕ್‍ ಗಳ ಸ್ಟಾಲ್‍ ಗಳ ಬಳಿಯೂ ಗೃಹ ಸಾಲ ಬಡ್ಡಿ ಎಷ್ಟು, ಸೈಟ್‍ ಗೆ ಸಾಲದ ಬಡ್ಡಿ ದರ ಏನು, ಏನೆಲ್ಲ ಸವಲತ್ತುಗಳಿವೆ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡರು.

    ನಿನ್ನೆ ಬೆಳಗ್ಗೆ ಜ್ಯೋತಿ ಬೆಳಗಿಸುವ ಮೂಲಕ ಎಕ್ಸ್ ಪೋಗೆ ನಟಿ ತಾನ್ಯ ಹೋಪ್ ಚಾಲನೆ ನೀಡಿದರು. ಉದ್ಘಾಟನೆ ವೇಳೆ ಪಬ್ಲಿಕ್ ಟಿವಿ ನಿರ್ದೇಶಕರಾದ ಜಿ.ಮನೋಹರ್ ನಾಯ್ಡು, ಎಂಕೆಬಿ ಡೆವಲಪರ್ಸ್ ನ ಸಿಇಓ ನಾಗರತ್ನ, ಪಬ್ಲಿಕ್ ಟಿವಿ ಸಿಇಓ ಅರುಣ್ ಕುಮಾರ್ ಮತ್ತು ಸಿಓಓ ಸಿಕೆ ಹರೀಶ್ ಉಪಸ್ಥಿತರಿದ್ದರು. ಬಳಿಕ ನಟಿ ತಾನ್ಯ ಹೋಪ್ ಮಾತನಾಡಿ, ಮನೆ ಕನಸು ನನಸಾಗಿಸಿಕೊಳ್ಳಲು ಪಬ್ಲಿಕ್ ಟಿವಿ ಒಂದು ಉತ್ತಮ ಅವಕಾಶ ಕಲ್ಪಿಸಿದೆ. ಎಲ್ಲರೂ ಭಾಗವಹಿಸಿ ಎಂದು ಶುಭ ಹಾರೈಸಿದರು.

    ನಮ್ಮ ಮನೆ ಎಕ್ಸ್ ಪೋಗೆ ಇಂದೇ ಕೊನೆಯ ದಿನವಾಗಿದೆ. ನಿಮ್ಮ ಕನಸು ನನಸು ಮಾಡಲು 40ಕ್ಕೂ ಹೆಚ್ಚು ಡೆವಲಪರ್ಸ್ ಮತ್ತು ಪ್ರಮೋಟರ್ಸ್ ಇದ್ದಾರೆ. ಹೀಗಾಗಿ ವೀಕೆಂಡ್‍ ನಲ್ಲಿ ಮನೆಯಲ್ಲಿ ಕುಳಿತುಕೊಳ್ಳದೇ ಮಲ್ಲೇಶ್ವರಂ ಶಾಲಾ ಮೈದಾನದ ಕಡೆ ಬನ್ನಿ. ನಮ್ಮ ಮನೆ ಎಕ್ಸ್ ಪೋದಲ್ಲಿ ಪಾಲ್ಗೊಂಡು, ನಮ್ಮ ಮನೆ ಕನಸನ್ನು ನನಸು ಮಾಡಿಕೊಳ್ಳಿ. ಪ್ರವೇಶ ಉಚಿತವಿದೆ. ಜೊತೆಗೆ ಎಂಕೆಬಿ ಡೆವಲಪರ್ಸ್ ಮತ್ತು ಪ್ರಮೋಟರ್ಸ್ ವತಿಯಿಂದ ಪ್ರತಿ ಅರ್ಧಗಂಟೆಗೊಮ್ಮೆ ಲಕ್ಕಿ ಡಿಪ್ ಮೂಲಕ ಗ್ರಾಹಕರನ್ನು ಆಯ್ಕೆ ಮಾಡಿ ಬೆಳ್ಳಿ ನಾಣ್ಯ ವಿತರಣೆ ಮಾಡಲಾಗುತ್ತಿದೆ.

    ಬೆಳಗ್ಗೆ 10 ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ನಮ್ಮ ಮನೆ ಎಕ್ಸ್ ಪೋ ನಡೆಯಲಿದೆ. ಮತ್ತೆ ಇನ್ಯಾಕೆ ತಡ.. ಬನ್ನಿ ನಮ್ಮ ಮನೆ ಎಕ್ಸ್ ಪೋದಲ್ಲಿ ಪಾಲ್ಗೊಳ್ಳಿ. ನಿಮ್ಮ ಕನಸು ನನಸು ಮಾಡಿಕೊಳ್ಳಿ.

  • ಎಕ್ಸ್ ಪೋಗೆ ಬಂದು ‘ನಮ್ಮ ಮನೆ’ ಕನಸು ನನಸು ಮಾಡಿಕೊಳ್ಳಿ

    ಎಕ್ಸ್ ಪೋಗೆ ಬಂದು ‘ನಮ್ಮ ಮನೆ’ ಕನಸು ನನಸು ಮಾಡಿಕೊಳ್ಳಿ

    – ಇಂದು ಲಾಸ್ಟ್ ಚಾನ್ಸ್, ಮಿಸ್ ಮಾಡದೇ ಭೇಟಿ ಕೊಡಿ

    ಬೆಂಗಳೂರು: ನಿಮ್ಮ ಮನೆ ಕನಸು ನನಸಾಗಬೇಕೆಂದರೆ ನಮ್ಮ ಮನೆ ರಿಯಲ್ ಎಸ್ಟೇಟ್ ಎಕ್ಸ್ ಪೋಗೆ ಬಂದು ಬಿಡಿ ಎಂದು ಹೇಳಿದ್ದೇ ತಡ ಸಾವಿರಾರು ಜನ ಬಂದು ತಮ್ಮ ಡ್ರೀಮ್ ಹೌಸ್ ಖರೀದಿ ಮಾಡಿದ್ದಾರೆ. ಈ ಅವಕಾಶಕ್ಕೆ ಇಂದು ಲಾಸ್ಟ್ ಚಾನ್ಸ್, ಮಿಸ್ ಮಾಡದೇ ಭೇಟಿ ಕೊಡಿ.

    ಮನೆಕಟ್ಟಿ ನೋಡು ಮದುವೆ ಮಾಡಿ ನೋಡು ಅಂತಾರೆ. ಎಷ್ಟೇ ಕಷ್ಟ ಆದರೂ ಪರವಾಗಿಲ್ಲ ಸಿಲಿಕಾನ್ ಸಿಟಿಯಲ್ಲೊಂದು ಮನೆ, ಸೈಟ್ ಮಾಡಿಕೊಳ್ಳಬೇಕು ಎನ್ನುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಈ ಕನಸನ್ನು ನನಸಾಗಿಸಲು ನಿಮ್ಮ ಪಬ್ಲಿಕ್ ಟಿವಿ ಹಮ್ಮಿಕೊಂಡ ನಮ್ಮ ಮನೆ ರಿಯಲ್ ಎಸ್ಟೇಟ್ ಎಕ್ಸ್ ಪೋಗೆ ಶನಿವಾರ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನಗರದ ಮಲ್ಲೇಶ್ವರಂ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎಂಕೆಬಿ ಡೆವಲಪರರ್ಸ್ ಅಂಡ್ ಪ್ರೋಮೋಟರ್ಸ್ ಸಹ ಭಾಗಿತ್ವದಲ್ಲಿ ಇಂದ ಕೂಡ ಎಕ್ಸ್ ಪೋ ನಡೆಯುತ್ತಿದೆ.

    ಎಕ್ಸ್ ಪೋಗೆ ಶನಿವಾರ 9 ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡಿದ್ದು, ಇಂದು ಸಾಗರೋಪಾದಿಯಲ್ಲಿ ಜನ ಸೇರುವ ನಿರೀಕ್ಷೆಯಿದೆ. ಒಂದೇ ಸೂರಿನಡಿ ರಾಜ್ಯ ಹಾಗೂ ದೇಶದ ಪ್ರತಿಷ್ಟಿತ 32ಕ್ಕೂ ಹೆಚ್ಚು ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಇರುತ್ತಾರೆ. ಇದರ ಸದುಪಯೋಗ ಪಡಿಸಿಕೊಳ್ಳಬಹುದು. ಆಫರ್ ಇದ್ದಾಗ ಮನೆ ಖರೀದಿ ಮಾಡಿ, ದುಡ್ಡಿನ ಟೆನ್ಷನ್ ನಮಗೆ ಬಿಟ್ಟು ಬಿಡಿ ಎಂದು ಕೆನರಾ ಬ್ಯಾಂಕ್ ನವರು ಲೋನ್ ಸಹ ಕೊಡತ್ತಿದ್ದಾರೆ. ಇದೆಲ್ಲದರ ಜೊತೆಗೆ ಪ್ರತಿ ಅರ್ಧ ಗಂಟೆಗೊಮ್ಮೆ ಗ್ರಾಹಕರಿಗೆ ಲಕ್ಕಿ ಡೀಪ್ ಮೂಲಕ ಬಹುಮಾನ ಸಹ ನೀಡಲಾಗುತ್ತಿದೆ. ಗ್ರಾಹಕರನ್ನು ರಂಜಿಸಲು ಇಂದು ಅನೇಕ ಎಂಟರ್ಟೈನ್ಮೆಂಟ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಇಂದಿನಿಂದ ಪಬ್ಲಿಕ್ ಟಿವಿ ನಮ್ಮ ಮನೆ ಎಕ್ಸ್ ಪೋ – ಸ್ಥಳದಲ್ಲೇ ಅರ್ಧಗಂಟೆಗೊಮ್ಮೆ ವಿಶೇಷ ಗಿಫ್ಟ್

    ಇಂದಿನಿಂದ ಪಬ್ಲಿಕ್ ಟಿವಿ ನಮ್ಮ ಮನೆ ಎಕ್ಸ್ ಪೋ – ಸ್ಥಳದಲ್ಲೇ ಅರ್ಧಗಂಟೆಗೊಮ್ಮೆ ವಿಶೇಷ ಗಿಫ್ಟ್

    ಬೆಂಗಳೂರು: ಸಾಕು ಈ ಬಾಡಿಗೆ ಮನೆ ಸಹವಾಸ. ಈ ಸಲ ಸಾಲಸೋಲನಾದ್ರೂ ಮಾಡಿ ನಮ್ಮದೇ ಸ್ವಂತ ಮನೆ ಮಾಡ್ಕೊಬೇಕು ಅನ್ನೋವ್ರಿಗೆ ನಿಮ್ಮ ಪಬ್ಲಿಕ್‍ಟಿವಿ ಸುಂದರ ವೇದಿಕೆ ನಿರ್ಮಿಸಿದೆ.

    ಪಬ್ಲಿಕ್ ಟಿವಿ ಇದೇ ಮೊದಲ ಬಾರಿಗೆ `ರಿಯಲ್ ಎಸ್ಟೇಟ್ ಎಕ್ಸ್ ಪೋ -ನಮ್ಮ ಮನೆ’ ಆಯೋಜಿಸಿದೆ. ಕೆ.ಸಿ ಜನರಲ್ ಆಸ್ಪತ್ರೆ ಮುಂಭಾಗದ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಇಂದು ಮತ್ತು ನಾಳೆ ನಡೆಯಲಿದೆ.

    ಬೆಳಗ್ಗೆ 10 ರಿಂದ ಸಂಜೆ 7 ಗಂಟೆವರೆಗೆ ನಡೆಯಲಿದ್ದು ಪ್ರತಿ ಅರ್ಧಗಂಟೆಗೆ ನೋಂದಾಯಿಸಲ್ಪಟ್ಟ ಗ್ರಾಹಕರಿಗೆ ಲಕ್ಕಿ ಡಿಪ್ ಮೂಲಕ ಆಕರ್ಷಕ ಬಹುಮಾನ ಉಡುಗೊರೆ ರೂಪದಲ್ಲಿ ದೊರೆಯಲಿದೆ. ಸೈಟ್ ರೇಟ್, ಫ್ಲಾಟ್, ಮನೆ, ಹಾಗೂ ವಿಲ್ಲಾಗಳ ಬಗ್ಗೆ ಗ್ರಾಹಕರು ಮಾಹಿತಿ ಪಡೀಬೋದು. ಏಕ್ಸ್ ಪೋದಲ್ಲಿ ಕೆನರಾ ಬ್ಯಾಂಕ್ ಗೃಹ ಸಾಲದ ಬಗ್ಗೆ ಕೊಡಲಿದೆ.

    ಎಂಕೆಬಿ ಡೆವಲಪರ್ಸ್ & ಪ್ರೋಮೊಟರ್ಸ್ ಸಹಭಾಗಿತ್ವದಲ್ಲಿ ಸುಸಜ್ಜಿತ ಒಂದೇ ಸೂರಿನಡಿನಲ್ಲಿ ರಾಜ್ಯ ಹಾಗೂ ದೇಶದ ಪ್ರತಿಷ್ಟಿತ 32ಕ್ಕೂ ಹೆಚ್ಚು ಬಿಲ್ಡರ್ಸ್ ಕಂಪನಿಗಳು ಏಕ್ಸ್ ಪೋನಲ್ಲಿ ಭಾಗವಹಿಸುತ್ತಿವೆ.

    ಎಕ್ಸ್ ಪೋ ವಿಶೇಷತೆ ಏನು?
    ಎಲ್ಲ ಆರ್ಥಿಕ ಸಮುದಾಯವನ್ನು ನೋಡಿಕೊಂಡು ಆಯೋಜಿಸಲಾಗಿದೆ. ಯಾರು ಬೇಕಾದರೂ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

    ಯಾರೆಲ್ಲ ಭಾಗವಹಿಸುತ್ತಾರೆ?
    – ಕನ್‍ಸ್ಟ್ರಕ್ಷನ್ ಕಂಪನಿಗಳು
    – ಲ್ಯಾಂಡ್ ಡೆವಲಪರ್ಸ್
    – ಪ್ರೀಮಿಯಂ ವಿಲ್ಲಾ ಮತ್ತು ಅಪಾರ್ಟ್‍ಮೆಂಟ್ ಕಂಪನಿಗಳು
    – ಹಣಕಾಸು ಸಂಸ್ಥೆಗಳು
    – ಸಿಮೆಂಟ್ ಮತ್ತು ಸ್ಟೀಲ್ ಕಂಪನಿಗಳು
    – ಸ್ಯಾನಿಟರಿ ಫಿಟ್ಟಿಂಗ್
    – ಒಳಾಂಗಣ ವಿನ್ಯಾಸ ಕಂಪನಿಗಳು
    – ಸ್ಮಾರ್ಟ್ ಹೋಮ್ ಡಿವೈಸ್ ಕಂಪನಿಗಳು

    ಯಾರೆಲ್ಲ ಭಾಗವಹಿಸುತ್ತಾರೆ?
    ಟೈಟಲ್ ಸ್ಪಾನ್ಸರ್ – ಎಂಕೆಬಿ ಡೆವಲಪರ್ಸ್ & ಪ್ರಮೋಟರ್ಸ್, ಸ್ಟ್ರೆಂಥನಿಂಗ್ ಪಾರ್ಟನರ್ -ಎ.ಆರ್.ಎಸ್ ಸ್ಟೀಲ್ಸ್ & ಅಲಾಯ್ಸ್, ಪವರ್ಡ್ ಬೈ ? ಡಿಎಸ್ ಮ್ಯಾಕ್ಸ್, ಗೋಲ್ಡ್ ಸ್ಪಾನ್ಸರ್- ಎಂ.ಎಸ್. ರಾಮಯ್ಯ ಡೆವಲಪರ್ & ಬಿಲ್ಡರ್ಸ್, ಎ.ಬಿ.ಪ್ರಾಪರ್ಟೀಸ್, ಶ್ರೀಧಾತ್ರಿ ಡೆವಲಪರ್ಸ್ & ಪ್ರೊಮೊಟರ್ಸ್, ಆಧ್ಯ ಪ್ರಾಪರ್ಟೀಸ್, ಬ್ಯಾಂಕಿಂಗ್ ಪಾರ್ಟನರ್ ? ಕೆನರಾ ಬ್ಯಾಂಕ್, ಗಿಫ್ಟಿಂಗ್ ಪಾರ್ಟನರ್ ಪಾಮಡಿ ಜ್ಯುವೆಲ್ಲರ್ಸ್ & ಸಿಲ್ವರ್ ಪ್ಯಾಲೇಸ್, ಸ್ಟಾಲ್ ಪಾರ್ಟನರ್ ಗಳಾಗಿ ವೈಭವ ಪ್ರಾಜೆಕ್ಟ್ಸ್, ಅನುಗ್ರಹ ಪ್ರಾಪರ್ಟಿ, ಬಿಜಿಎಸ್ ಪ್ರಾಪರ್ಟಿ, ಸಿಟ್ರಸ್ ಪ್ರಾಜೆಕ್ಟ್, ಬೃಂದಾವನ್ ಪ್ರಾಪರ್ಟೀಸ್, ಗುರು ಪ್ರಾಪರ್ಟೀಸ್, ಶುಭೋದಯ ಪ್ರಾಪರ್ಟೀಸ್, ಎ.ಬಿ.ಪ್ರಾಪರ್ಟೀಸ್, ಸ್ವಾಮಿತ್ರ ಪ್ರಾಪರ್ಟೀಸ್, ಎಂಎಸ್‍ಐಎಲ್, ಬಿಡಿಎ, ಫೈವ್ ಎಲಿಮೆಂಟ್ಸ್ ಕಂಪನಿಗಳು ಭಾಗಿಯಾಗಲಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv