Tag: Explodes

  • ಪೆಟ್ರೋಲ್ ಟ್ಯಾಂಕರ್ ಪಲ್ಟಿ, ಕ್ಯಾನ್‌ನಲ್ಲಿ ತುಂಬಿಕೊಳ್ಳುತ್ತಿದಾಗ ಸ್ಫೋಟ – 70 ಮಂದಿ ಸಾವು

    ಪೆಟ್ರೋಲ್ ಟ್ಯಾಂಕರ್ ಪಲ್ಟಿ, ಕ್ಯಾನ್‌ನಲ್ಲಿ ತುಂಬಿಕೊಳ್ಳುತ್ತಿದಾಗ ಸ್ಫೋಟ – 70 ಮಂದಿ ಸಾವು

    ಅಬುಜಾ: ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಸ್ಫೋಟಗೊಂಡ ಪರಿಣಾಮ 70 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಉತ್ತರ ನೈಜೀರಿಯಾದ (Nigeria) ಕಡುನಾ (Kaduna) ನಗರದ ಡಿಕ್ಕೊ ಜಂಕ್ಷನ್‌ನಲ್ಲಿ ನಡೆದಿದೆ.

    ಶನಿವಾರ ಈ ಘಟನೆ ಸಂಭವಿಸಿದ್ದು, 60,000 ಲೀಟರ್ ಪೆಟ್ರೋಲ್ ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿ ಸ್ಫೋಟಗೊಂಡಿದೆ. ಟ್ರಕ್ ಪಲ್ಟಿಯಾದಾಗ ಚೆಲ್ಲಿದ್ದ ಪೆಟ್ರೋಲ್‌ನ್ನು ತುಂಬಿಕೊಳ್ಳಲು ಹೋಗಿದ್ದವರ ಪೈಕಿ 70ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 56 ಜನ ಗಾಯಗೊಂಡಿದ್ದಾರೆ. ಜೊತೆಗೆ ಸುತ್ತಮುತ್ತಲಿನ 15ಕ್ಕೂ ಹೆಚ್ಚು ಅಂಗಡಿಗಳು ನಾಶವಾಗಿವೆ ಎಂದು ರಾಷ್ಟ್ರೀಯ ರಸ್ತೆ ಸುರಕ್ಷತಾ ಪ್ರಾಧಿಕಾರ ತಿಳಿಸಿದೆ.ಇದನ್ನೂ ಓದಿ: ಬಣ ಬಡಿದಾಟದ ನಡುವೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೆ ಸುನಿಲ್ ಕುಮಾರ್ ಮನವಿ

    ಈ ಕುರಿತು ನೈಜರ್ ರಾಜ್ಯದ ಫೆಡರಲ್ ರೋಡ್ ಸೇಫ್ಟಿ ಕಾರ್ಪ್ಸ್ ಮುಖ್ಯಸ್ಥ ಕುಮಾರ್ ತ್ಸುಕ್ವಾಮ್ ಮಾತನಾಡಿ, ಶನಿವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ನೈಜೇರಿಯಾ ರಾಜಧಾನಿ ಅಬುಜಾವನ್ನು ಕಡುನಾಗೆ ಸಂಪರ್ಕಿಸುವ ರಸ್ತೆಯ ಡಿಕ್ಕೊ ಜಂಕ್ಷನ್‌ನಲ್ಲಿ ಈ ಅವಘಡ ಸಂಭವಿಸಿದ್ದು, ಇಲ್ಲಿಯವರೆಗೆ ಸಾವಿನ ಸಂಖ್ಯೆ 70ಕ್ಕೆ ಏರಿದೆ ಎಂದು ತಿಳಿಸಿದರು.

    ನೈಜೀರಿಯಾದಲ್ಲಿ ಕಳೆದ 18 ತಿಂಗಳಲ್ಲಿ ಪೆಟ್ರೋಲ್ ಬೆಲೆ ಐದು ಪಟ್ಟು ಹೆಚ್ಚಾಗಿದೆ. ಹೀಗಾಗಿ ಟ್ರಕ್ ಪಲ್ಟಿಯಾದ ಸಮಯದಲ್ಲಿ ಪೆಟ್ರೋಲ್ ತೆಗೆದುಕೊಳ್ಳಲು ಹೋದವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟಿದ್ದಾರೆ ಎಂದು ಹೇಳಿದರು.

    ಕಳೆದ ಅಕ್ಟೋಬರ್ ತಿಂಗಳಲ್ಲಿ ಆಫ್ರಿಕಾದ ಜಿಗಾವಾ ರಾಜ್ಯದಲ್ಲಿ ನಡೆದ ಸ್ಫೋಟದಲ್ಲಿ 170ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.ಇದನ್ನೂ ಓದಿ: ನಾಗು ಸಾಧುಗಳು ಯಾರು? ನೇಮಕಾತಿ ಹೇಗೆ ನಡೆಯುತ್ತೆ? ದೀಕ್ಷೆ ಪೂರ್ಣಗೊಳ್ಳುವುದು ಯಾವಾಗ?

  • ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಫೋಟ, ಹೊತ್ತಿ ಉರಿದ ಆಟೋ – ಚಾಲಕ, ಸವಾರನಿಗೆ ಗಾಯ

    ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಫೋಟ, ಹೊತ್ತಿ ಉರಿದ ಆಟೋ – ಚಾಲಕ, ಸವಾರನಿಗೆ ಗಾಯ

    ಮಂಗಳೂರು: ನಗರದಲ್ಲಿ ಇಂದು ಸಂಜೆ ಚಲಿಸುತ್ತಿದ್ದ ಆಟೋದಲ್ಲಿ (Autorickshaw) ನಿಗೂಢ ರೀತಿಯ ಸ್ಫೋಟ ಸಂಭವಿಸಿ ಆತಂಕ ಸೃಷ್ಟಿಸಿದೆ.

    ಮಂಗಳೂರಿನ (Mangaluru) ಪಂಪ್‍ವೆಲ್‍ನಿಂದ ನಾಗುರಿ ಕಡೆ ಚಲಿಸುತ್ತಿದ್ದ ಆಟೋ ಒಂದರ ಒಳಗಿಂದ ಇದ್ದಕ್ಕಿದ್ದ ಹಾಗೇ ನಿಗೂಢ ಸ್ಫೋಟವಾಗಿದೆ. ದಾರಿ ಮಧ್ಯೆ ಸವಾರನೋರ್ವ ಕೈಯಲ್ಲಿ ಕುಕ್ಕರ್ ಹಿಡಿದುಕೊಂಡು ಆಟೋ ಹತ್ತಿದ್ದು ನಾಗುರಿಗೆ ಹೋಗಲು ಚಾಲಕನಿಗೆ ಸೂಚಿಸಿದ್ದ. ಆದ್ರೆ ಕೆಲವೇ ಕ್ಷಣಗಳಲ್ಲಿ ನಾಗುರಿಯ ಕಂಕನಾಡಿ ಪೊಲೀಸ್ (Police) ಠಾಣೆಯ ಎದುರು ಕ್ಷಣಗಳಲ್ಲಿ ಆಟೋದ ಒಳಗೆ ಸ್ಫೋಟಗೊಂಡಿದ್ದು ಸವಾರನ ಕೈಯಲ್ಲಿದ್ದ ಕುಕ್ಕರ್ ಛಿದ್ರಗೊಂಡಿತ್ತು. ಆತ ಆಟೋ ಹತ್ತಿದ ಕೆಲವೇ ಕ್ಷಣಗಳಲ್ಲಿ ಸ್ಫೋಟ ಸಂಭವಿಸಿದ್ದು ಜೊತೆಗೆ ಆತನ ಕೈಯಲ್ಲಿದ್ದ ಕುಕ್ಕರ್ ಛಿದ್ರಗೊಂಡಿದ್ದು ಅನುಮಾನಕ್ಕೆ ಕಾರಣವಾಗಿದೆ.‌ ಇದನ್ನೂ ಓದಿ: ಒಂದೇ ಸಮುದಾಯದ 7 ಮಂದಿ ಇದ್ದಾರೆ – ದತ್ತಪೀಠದ ವ್ಯವಸ್ಥಾಪನ ಸಮಿತಿ ವಿರುದ್ಧ ಅಪಸ್ವರ

    ಸ್ಫೋಟ ಸಂಭವಿಸಿದ ಸಂದರ್ಭ ದೊಡ್ಡ ಬಾಂಬ್ ಸ್ಫೋಟದಂತೆ ಶಬ್ದವಾಗಿದ್ದು ದೊಡ್ಡ ಮಟ್ಟದ ಹೊಗೆ ಆವರಿಸಿತ್ತು. ಸ್ಥಳಕ್ಕೆ ವಿಧಿ ವಿಜ್ಞಾನ ಇಲಾಖೆಯ ತಜ್ಞರು, ಪೊಲೀಸ್ ಕಮಿಷನರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಕಮಿಷನರ್ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಆಟೋ ಚಾಲಕ ಬೆಂಕಿಕಾಣಿಸಿಕೊಂಡು ಬ್ಲಾಸ್ಟ್ ಆಗಿದೆ ಎಂದಿದ್ದಾನೆ. ಬ್ಲಾಸ್ಟ್ ಬಗ್ಗೆ ಪ್ರತ್ಯಕ್ಷ ಸಾಕ್ಷಿಗಳು ಏನೂ ಹೇಳಿಲ್ಲ. ಸಮಗ್ರ ವಿಚಾರಣೆ ನಡೆಸಲಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಕಾಶಿ-ತಮಿಳು ಸಂಗಮ; ಶರ್ಟ್, ಪಂಚೆ ಧರಿಸಿ ಮಿಂಚಿದ ಮೋದಿ

    Live Tv
    [brid partner=56869869 player=32851 video=960834 autoplay=true]