Tag: expense

  • G20 ಶೃಂಗಸಭೆಗೆ ನಿಗದಿಗಿಂತ 300 ಪಟ್ಟು ಅಧಿಕ ಹಣ ಖರ್ಚು- ಆರೋಪ ತಳ್ಳಿ ಹಾಕಿದ ಕೇಂದ್ರ ಸರ್ಕಾರ

    G20 ಶೃಂಗಸಭೆಗೆ ನಿಗದಿಗಿಂತ 300 ಪಟ್ಟು ಅಧಿಕ ಹಣ ಖರ್ಚು- ಆರೋಪ ತಳ್ಳಿ ಹಾಕಿದ ಕೇಂದ್ರ ಸರ್ಕಾರ

    ನವದೆಹಲಿ: ಜಿ20 ಶೃಂಗಸಭೆಗೆ (G20 Summit) ನಿಗಧಿಗಿಂತ 300 ಪಟ್ಟು ಅಧಿಕ ಹಣ ಖರ್ಚು ಮಾಡಿರುವ ಆರೋಪವನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ. ಪಿಐಬಿ ಮೂಲಕ ಸ್ಪಷ್ಟನೆ ನೀಡಿರುವ ಸರ್ಕಾರ ಜಿ20 ಶೃಂಗಸಭೆಯನ್ನು ಆಯೋಜಿಸುವುದಕ್ಕೆ ಖರ್ಚು ಸೀಮಿತವಾಗಿರದೇ ಮುಖ್ಯವಾಗಿ ಶಾಶ್ವತ ಆಸ್ತಿ ನಿರ್ಮಾಣಕ್ಕೆ ಖರ್ಚು ಮಾಡಲಾಗಿದೆ ಎಂದು ಹೇಳಿದೆ.

    ಜಿ20 ಸಭೆಗೆ ಬಜೆಟ್‌ನಲ್ಲಿ (Budget) 990 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ ಸರ್ಕಾರ 300% ಅಧಿಕ ಅಂದರೆ 4,100 ಕೋಟಿ ರೂ.ವರೆಗೆ ಖರ್ಚು ಮಾಡಿದೆ ಎಂದು ಮಮತಾ ಬ್ಯಾನರ್ಜಿ (Mamata Banerjee) ಪಕ್ಷದ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ (Saket Gokhale) ಪ್ರತಿಪಾದಿಸಿದ್ದರು. 2024ರ ಚುನಾವಣೆಗೂ ಮುನ್ನ ಮೋದಿಯವರ (Narendra Modi) ಸ್ವಯಂ ಜಾಹೀರಾತಿಗಾಗಿ 3,110 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಇದನ್ನು ಬಿಜೆಪಿ ಯಾಕೆ ಭರಿಸಬಾರದು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸನಾತನ ಧರ್ಮದ ತತ್ವಗಳ ವಿರುದ್ಧ ಹೋರಾಡಲು INDIA ಒಕ್ಕೂಟ ರಚಿಸಿದೆ: ಡಿಎಂಕೆ ನಾಯಕ ಪೊನ್ಮುಡಿ ವಿವಾದಾತ್ಮಕ ಹೇಳಿಕೆ

    ಇದಕ್ಕೆ ಸ್ಪಷ್ಟನೆ ನೀಡಿದ ಸರ್ಕಾರ, ಇಂತಹ ಹೇಳಿಕೆಗಳು ತಪ್ಪುದಾರಿಗೆಳೆಯುವಂತಿವೆ ಎಂದು ಹೇಳಿದೆ. ಪ್ರಗತಿ ಮೈದಾನದಲ್ಲಿ ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್ (ITPO) ಮತ್ತು ಇತರ ಮೂಲಸೌಕರ್ಯ ಅಭಿವೃದ್ಧಿಯಿಂದ ಶಾಶ್ವತ ಆಸ್ತಿ ಸೃಷ್ಟಿಗೆ ಈ ಮೊತ್ತವನ್ನು ಖರ್ಚು ಮಾಡಲಾಗಿದೆ. ಇದು ಕೇವಲ ಜಿ20 ಶೃಂಗಸಭೆಯನ್ನು ಆಯೋಜಿಸಲು ಸೀಮಿತವಾಗಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಹೊಸ ಸಂಸತ್ ಭವನದಲ್ಲಿ ಸಿಬ್ಬಂದಿಗೆ ನೂತನ ಡ್ರೆಸ್ ಕೋಡ್

    ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗಸಭೆಯು ನವದೆಹಲಿಯ ಭಾರತ್ ಮಂಟಪದಲ್ಲಿ ಅಂತಾರಾಷ್ಟ್ರೀಯ ಪ್ರದರ್ಶನ-ಕನ್ವೆನ್ಷನ್ ಸೆಂಟರ್ (IECC) ಪ್ರಗತಿ ಮೈದಾನದಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ನಡೆಯಿತು. 20 ಸದಸ್ಯ ರಾಷ್ಟ್ರಗಳು, ಒಂಭತ್ತು ಅತಿಥಿ ದೇಶಗಳು ಮತ್ತು ಹಲವು ಅಂತರಾಷ್ಟ್ರೀಯ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವು. ಇದನ್ನೂ ಓದಿ: ಔತಣಕೂಟಕ್ಕೆ ದೀದಿ ಹೋಗಿದ್ದಕ್ಕೆ ಕಾಂಗ್ರೆಸ್ ತಗಾದೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗುರುಗ್ರಾಮ ರೆಸಾರ್ಟ್ ವಾಸ್ತವ್ಯಕ್ಕೆ ನಮ್ಮ ಜೇಬಿನಿಂದ ಹಣ ಹಾಕಿಲ್ಲ: ಈಶ್ವರಪ್ಪ

    ಗುರುಗ್ರಾಮ ರೆಸಾರ್ಟ್ ವಾಸ್ತವ್ಯಕ್ಕೆ ನಮ್ಮ ಜೇಬಿನಿಂದ ಹಣ ಹಾಕಿಲ್ಲ: ಈಶ್ವರಪ್ಪ

    ಬೆಂಗಳೂರು: ಹರಿಯಾಣದ ರೆಸಾರ್ಟ್ ನಲ್ಲಿ ಕೋಟಿಗಟ್ಟಲೆ ಹಣ ಖರ್ಚು ಮಾಡಿಲ್ಲ. ಅಷ್ಟೇ ಅಲ್ಲದೆ ನಮ್ಮ ಜೇಬಿನಿಂದ ಹಣ ಹಾಕಿಲ್ಲ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹರಿಯಾಣದಲ್ಲಿ ನಮ್ಮ ಹಿತೈಶಿಗಳಿದ್ದಾರೆ. ಅವರೇ ರೆಸಾರ್ಟ್ ಖರ್ಚು ನೋಡಿಕೊಂಡಿದ್ದಾರೆ ಎಂದ ಅವರು, ಗುರುಗ್ರಾಮದ ರೆಸಾರ್ಟ್ ನಲ್ಲಿರುವ ಶಾಸಕರಿಗೆ ಶುಕ್ರವಾರ ರಾತ್ರಿ 11 ಗಂಟೆಗೆ ಫೋನ್ ಮಾಡಿ ವಾಪಸ್ ಬನ್ನಿ ಅಂತ ಹೇಳಿದ್ದರು. ಹೀಗಾಗಿ ಎಲ್ಲ ಶಾಸಕರೂ ಅವರವರ ಕ್ಷೇತ್ರಕ್ಕೆ ಹೋಗಿದ್ದಾರೆ ಎಂದು ಹೇಳಿದರು. ಇದನ್ನು ಓದಿ: ಬಿಜೆಪಿ ಶಾಸಕರ 5 ದಿನ ವಾಸ್ತವ್ಯಕ್ಕೆ 3.16 ಕೋಟಿ ರೂ. ಖರ್ಚು

    ನಾವೇನೂ ಪ್ರಯತ್ನ ಮಾಡದಿದ್ದರೂ ಕಾಂಗ್ರೆಸ್ ಕುಸಿದು ಬೀಳುತ್ತದೆ. ಅವರು ಆಂತರಿಕ ಗೊಂದಲಗಳಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ. ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ದೂರುತ್ತಿದ್ದಾರೆ. ಅವರಿಗೆ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇಲ್ಲ ಅಂತ ಅವರು ಒಪ್ಪಿಕೊಳ್ಳಲಿ. ಸಿದ್ದರಾಮಯ್ಯ ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಕುಡುಕರು ಕೂಡ ಅವರಂತೆ ಮಾತನಾಡುವುದಿಲ್ಲ ಎಂದು ವ್ಯಂಗ್ಯವಾಡಿದರು.

    ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆದಷ್ಟು ಬೇಗ ಅಧಿಕಾರಕ್ಕೆ ಬರುತ್ತದೆ. ಬಿ.ಎಸ್.ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನು ಓದಿ: ಕೈ ಶಾಸಕರು ಉಳಿದುಕೊಂಡಿರುವ ಈಗಲ್‍ಟನ್ ರೆಸಾರ್ಟಿನಿಂದ ಸರ್ಕಾರಕ್ಕೆ ಬರಬೇಕಿದೆ 982 ಕೋಟಿ ರೂ.

    ಸಿದ್ದರಾಮಯ್ಯ ಅವರಿಗೆ ದುಬಾರಿ ಕಾರು ಉಡುಗೊರೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕೆ.ಎಸ್.ಈಶ್ವರಪ್ಪ, ಅವರು ಮಾನ ಮರ್ಯಾದೆ ಇರೋರಲ್ವಾ? ಅಷ್ಟು ದುಬಾರಿ ಕಾರು ಉಡುಗೊರೆ ಕೊಟ್ಟಿದ್ಯಾರು? ಯಾಕೆ ದುಬಾರಿ ಕಾರು ಕೊಟ್ಟಿದ್ದಾರೆ ಅಂತ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಂ ಮನೆ ಹೊರಗಿನ ಅಲಂಕಾರಕ್ಕೆ ವರ್ಷಕ್ಕೆ ಕೋಟಿ ರೂ. ಖರ್ಚು

    ಸಿಎಂ ಮನೆ ಹೊರಗಿನ ಅಲಂಕಾರಕ್ಕೆ ವರ್ಷಕ್ಕೆ ಕೋಟಿ ರೂ. ಖರ್ಚು

    ಬೆಂಗಳೂರು: ಮಾತಲ್ಲಿ ಮಾತ್ರ ನಾನು ಸರಳ ಅನ್ನೋ ಸಿಎಂ ಸಿದ್ದರಾಮಯ್ಯ ಸಿಕ್ಕಾಪಟ್ಟೆ ಕಾಸ್ಟ್ಲಿ ಅನ್ನೋದು ಮತ್ತೆ ಸಾಬೀತಾಗಿದೆ. ಬೆಳ್ಳಿ ತಟ್ಟೆ ಊಟ, ಜಿಮ್ ವಸ್ತು ಖರೀದಿ ಆಯ್ತು. ಈಗ ಮನೆಯ ಹೊರಗಿನ ಅಲಂಕಾರಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡಿರೋದು ಆರ್‍ಟಿಐ ಮಾಹಿತಿಯಡಿ ಬಯಲಾಗಿದೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಒಂದು ರಾತ್ರಿಯ ಭೋಜನ ಕೂಟಕ್ಕೆ ಬೆಳ್ಳಿ ತಟ್ಟೆ ಬಳಕೆ, 10 ಲಕ್ಷ ರೂ. ಖರ್ಚು!

    ಸಿಎಂ ನಿವಾಸಗಳಾದ ಕಾವೇರಿ, ಕೃಷ್ಣ ನಿವಾಸಗಳ ಹೋರಗಿನ ಚಿಕ್ಕ ಚಿಕ್ಕ ಕೆಲಸಕ್ಕೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದುಬಾರಿ ಜೀವನ ನಡೆಸ್ತಿದ್ದಾರೆ. ಕಾವೇರಿ, ಕೃಷ್ಣದ ಕೌಂಪೌಂಡ್‍ಗೆ ಬಣ್ಣ ಬಳಿಯಲು, ಮೇಲ್ಛಾವಣಿ ಸರಿ ಮಾಡಲು, ಕಾರ್ ಗ್ಯಾರೇಜ್ ಸರಿ ಮಾಡಲು, ಮಳೆ ನೀರು ಕೋಯ್ಲು ಅಳವಡಿಸಿಕೊಳ್ಳಲು ಬರೋಬ್ಬರಿ ಒಂದು ಕೋಟಿ ರೂ. ಈ ವರ್ಷಕ್ಕೆ ಖರ್ಚು ಮಾಡಿ ಬಿಂದಾಸ್ ಲೈಫ್ ಲೀಡ್ ಮಾಡ್ತಿದ್ದಾರೆ. ಇದನ್ನೂ ಓದಿ:ಬೆಳ್ಳಿ ತಟ್ಟೆಯಲ್ಲಿ ಸಿಎಂ ಸಿದ್ದರಾಮಯ್ಯ ಉಪಹಾರ ಸೇವನೆ- ಶಾಸಕ ಕೆ.ಎನ್ ರಾಜಣ್ಣರಿಂದ ರಾಜಾತಿಥ್ಯ

    ಒಂದೇ ಕಾಮಗಾರಿಗೆ 2 ಬಾರಿ ಬಿಲ್: ಸಿದ್ದರಾಮಯ್ಯ ಅವ್ರು ಮನೆಯ ಹೊರಗಿನ ಅಲಂಕಾರಕ್ಕೆ ಇಷ್ಟು ಖರ್ಚು ಮಾಡಿ ರಾಯಲ್ ಲೈಫ್ ಲೀಡ್ ಮಾಡ್ತಿದ್ರೆ, ಇದ್ರಲ್ಲೂ ಲೋಕೋಪಯೋಗಿ ಇಲಖೆ ಅಧಿಕಾರಗಳು ಗೋಲ್‍ಮಾಲ್ ಮಾಡಿದ್ದಾರೆ. ಸಿಎಂ ಮನೆ ಮುಂದೆ ಎಷ್ಟೋ ಕೆಲಸಗಳು ಆಗದೆ ಬಿಲ್ ಮಾಡಿಕೊಂಡಿದ್ದಾರೆ. ಪೊಲೀಸ್ ಚೌಕಿ ನಿರ್ಮಾಣದ ಹೆಸರಲ್ಲಿ, ಇನ್ನಿತರ ಕೆಲಸಗಳಿಗೆ ಎರೆಡರೆಡು ಬಾರಿ ಬಿಲ್ ಮಾಡಿ ಹಣ ಲೂಟಿ ಮಾಡಿದ್ದಾರೆ. 5 ಲಕ್ಷ ಮೇಲ್ಪಟ್ಟ ಕಾಮಗಾರಿಗೆ ಟೆಂಡರ್ ಕರೆಯಬೇಕು. ಹೀಗೆ ಮಾಡಿದ್ರೆ ದುಡ್ಡು ಸಿಕ್ಕೊಲ್ಲ ಅಂತ 5 ಲಕ್ಷದ ಒಳಗೆ ಎಲ್ಲಾ ಕಾಮಗಾರಿ ಮುಗಿಸಿ ಜಾಣ್ಮೆಯಿಂದ ಹಣ ಲೂಟಿ ಮಾಡಿದ್ದಾರೆ. ಇದನ್ನೂ ಓದಿ: ಸಿಎಂ ಮನೆ ಕಾಫಿ-ಟೀ, ಬಿಸ್ಕೆಟ್‍ಗೆ ಖರ್ಚಾಗಿದ್ದು ಅರ್ಧ ಕೋಟಿ!

    ಈ ಕಾಮಗಾರಿಗಳನ್ನ ಪ್ರತಿ ವರ್ಷ ಮಾಡಬೇಕಾಗಿಲ್ಲ. ಹೀಗಿದ್ರೂ ವರ್ಷ ವರ್ಷ ಲೋಕೋಪಯೋಗಿ ಇಲಾಖೆ ಕೋಟಿ ಖರ್ಚು ಮಾಡ್ತಿದೆ. ಇದೆಲ್ಲ ಸಿಎಂಗೆ ಗೊತ್ತಿದ್ರೂ ಸುಮ್ಮನಿರೋದು ಮಾತ್ರ ವಿಪರ್ಯಾಸ.

    https://www.youtube.com/watch?v=cJcjoQcMpe0