Tag: exhibition

  • Breaking-ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾಗೆ ಚುನಾವಣೆ ಕಿರಿಕ್: ಜಗ್ಗೇಶ್ ಮುಖಕ್ಕೆ ಬಿಳಿಪಟ್ಟೆ

    Breaking-ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾಗೆ ಚುನಾವಣೆ ಕಿರಿಕ್: ಜಗ್ಗೇಶ್ ಮುಖಕ್ಕೆ ಬಿಳಿಪಟ್ಟೆ

    ಟ, ರಾಜ್ಯಸಭಾ ಸದಸ್ಯ ಜಗ್ಗೇಶ್ (Jaggesh) ನಟನೆಯ ‘ರಾಘವೇಂದ್ರ ಸ್ಟೋರ್ಸ್’ (Raghavendra Stores) ಸಿನಿಮಾ ರಾಜ್ಯದ ಬಹುತೇಕ ಕಡೆ ತುಂಬಿದ ಪ್ರದರ್ಶನ (Exhibition) ಕಾಣುತ್ತಿದೆ. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಟ ಜಗ್ಗೇಶ್ ಪ್ರಚಾರ ಮಾಡುತ್ತಿರುವುದರಿಂದ ಚುನಾವಣೆ (Election) ಅಧಿಕಾರಿ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಮಾಡಿದ ಆರೋಪ ಕೇಳಿ ಬಂದಿದೆ.

    ದಾವಣಗೆರೆ ಗೀತಾಂಜಲಿ ಚಿತ್ರಮಂದಿರದಲ್ಲಿ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇಂದು ಬೆಳ್ಳಗೆ ಚಿತ್ರಮಂದಿರಕ್ಕೆ ಆಗಮಿಸಿದ್ದ ಚುನಾವಣೆ ಅಧಿಕಾರಿ ಚಿತ್ರ ಪ್ರದರ್ಶನ ಮಾಡದಂತೆ ತಿಳಿಸಿದ್ದಾರೆ. ಜಗ್ಗೇಶ್ ನೇರವಾಗಿ ಚುನಾವಣೆ ಪ್ರಚಾರಕ್ಕೆ ಇಳಿದಿರುವುದರಿಂದ ಮತ್ತು ಅವರು ರಾಜ್ಯಸಭಾ ಸದಸ್ಯರು ಆಗಿರುವುದರಿಂದ ಸಿನಿಮಾ ಪ್ರದರ್ಶನ ಮಾಡದಂತೆ ಸೂಚಿಸಿದ್ದರು. ಇದನ್ನೂ ಓದಿ:ನಟಿ ಮೇಘನಾ ರಾಜ್ ಹುಟ್ಟು ಹಬ್ಬಕ್ಕೆ ತತ್ಸಮ ತದ್ಭವ ಪೋಸ್ಟರ್ ರಿಲೀಸ್

    ಜಗ್ಗೇಶ್ ಕೇವಲ ಸ್ಟಾರ್ ಪ್ರಚಾರಕರು. ಅವರು ಚುನಾವಣೆಗೆ ಸ್ಪರ್ಧಿಸಿಲ್ಲ. ಅಲ್ಲದೇ, ಅನೇಕ ನಟರು ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಸುದೀಪ್ ಅವರ ವಿಷಯದಲ್ಲಿ ಚುನಾವಣೆ ಆಯೋಗ ಯಾವುದೇ ಕ್ರಮ ತಗೆದುಕೊಂಡಿಲ್ಲ. ಹಾಗಾಗಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಚಿತ್ರಮಂದಿರ ಮಾಲೀಕರು ಮನವರಿಕೆ ಮಾಡಿಕೊಟ್ಟಿದ್ದಾರೆ. ಹಾಗಾಗಿ ಚಿತ್ರ ಪ್ರದರ್ಶನಕ್ಕೆ ನಂತರ ಅನುವು ಮಾಡಿಕೊಡಲಾಗಿದೆ.

    ಚಿತ್ರಪ್ರದರ್ಶನಕ್ಕೆ ಅನುವು ಮಾಡಿಕೊಟ್ಟರೂ, ಜಗ್ಗೇಶ್ ಅವರ ಪೋಸ್ಟರ್ ಮುಚ್ಚುವಂತೆ ಚುನಾವಣೆ ಅಧಿಕಾರಿ ತಿಳಿಸಿದ್ದಾರೆ. ಹಾಗಾಗಿ ಜಗ್ಗೇಶ್ ಮುಖಕ್ಕೆ ಬಿಳಿ ಹಾಳೆ ಅಂಟಿಸಲಾಗಿದೆ. ಚಿತ್ರಮಂದಿರ ಮುಂದೆ ಹಾಕಲಾದ ಪೋಸ್ಟರ್ ಗೆ ಬಿಳಿ ಹಾಳೆಯಿಂದ ಜಗ್ಗೇಶ್ ಮುಖಮುಚ್ಚಿ, ಥಿಯೇಟರ್ ಒಳಗಡೆ ಚಿತ್ರ ಪ್ರದರ್ಶನ ಮಾಡಲಾಗುತ್ತಿದೆ.

  • ನೆಲಮಂಗಲಕ್ಕೆ ಬಂದ ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ

    ನೆಲಮಂಗಲಕ್ಕೆ ಬಂದ ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ

    ನೆಲಮಂಗಲ: ದಕ್ಷಿಣ ಏಷ್ಯಾ ಹಾಗೂ ದಕ್ಷಿಣ ಭಾರತದ ಅತೀ ದೊಡ್ಡ ಕಟ್ಟಡ ನಿರ್ಮಾಣ ಹಾಗೂ ಯಂತ್ರೋಪಕರಣಗಳ ವಸ್ತು ಪ್ರದರ್ಶನಕ್ಕೆ ಭಾರತ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಇಂದು ಭೇಟಿ ನೀಡಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದಾವಾರ ಬಳಿಯ ಬಿಐಇಸಿಯಲ್ಲಿ ಕ್ರಿಕೆಟಿಗ ಎಂ.ಎಸ್ ಧೋನಿ ಇಂದು ಉದ್ಯಮಶೀಲತೆ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದಾರೆ. ಎಕ್ಸಾನ್ 10 ನೇ ಆವೃತ್ತಿಯ ವಸ್ತು ಪ್ರದರ್ಶನ ಇದ್ದಾಗಿದ್ದು, ಐದು ದಿನಗಳ ಕಾಲ ನಡೆದ ವಸ್ತು ಪ್ರದರ್ಶನಕ್ಕೆ ನಾಳೆ ತೆರೆಬೀಳಲಿದೆ.

    ಈ ಹಿನ್ನೆಲೆಯಲ್ಲಿ ಇಂದು ಆಗಮಿಸಿದ್ದ ಮಹೇಂದ್ರ ಸಿಂಗ್ ಧೋನಿ ಹಲವಾರು ಮಾಹಿತಿ ಪಡೆದರು. ವಸ್ತು ಪ್ರದರ್ಶನದಲ್ಲಿ ಉದ್ಯಮಿಗಳ ಹಾಗೂ ಗ್ರಾಹಕರ ಜೊತೆ ಭಾಗಿಯಾಗಿದ್ದ ಧೋನಿ, ಗಲ್ಫ್ ಕಂಪನಿಯಲ್ಲಿ ಕೆಲಹೊತ್ತು ಕಾಲ ಕಳೆದಿದ್ದಾರೆ. ತನ್ನ ನೆಚ್ಚಿನ ಕ್ರಿಕೆಟಿಗ ಧೋನಿಯನ್ನು ನೋಡಲು ಅಭಿಮಾನಿಗಳ ಮುಗಿಬಿದ್ದ ಪ್ರಸಂಗ ನಡೆಯಿತು.

  • ದರ್ಶನ್ ಸೆರೆ ಹಿಡಿದ ಫೋಟೋಗಳಿಂದ ಬಂತು ಬರೋಬ್ಬರಿ 3.75 ಲಕ್ಷ ರೂ.!

    ದರ್ಶನ್ ಸೆರೆ ಹಿಡಿದ ಫೋಟೋಗಳಿಂದ ಬಂತು ಬರೋಬ್ಬರಿ 3.75 ಲಕ್ಷ ರೂ.!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸೆರೆ ಹಿಡಿದ ಫೋಟೋಗಳ ಮಾರಾಟದಿಂದ 3 ಲಕ್ಷಕ್ಕೂ ಅಧಿಕ ರೂ. ಸಂಗ್ರಹವಾಗಿದೆ.

    ಮಾರ್ಚ್ 3ರಂದು ವಿಶ್ವ ವನ್ಯಜೀವಿ ದಿನದ ಹಿನ್ನೆಲೆಯಲ್ಲಿ ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್‍ನಲ್ಲಿ ದರ್ಶನ್ ಅವರು ಸೆರೆ ಹಿಡಿದ 75 ಆಯ್ದ ಛಾಯಾಚಿತ್ರಗಳನ್ನು ಮೂರು ದಿನಗಳ ಕಾಲ ಪ್ರದರ್ಶನಕ್ಕೆ ಇಡಲಾಗಿತ್ತು. ಮೂರು ದಿನಗಳಲ್ಲಿ ಒಟ್ಟು 3.75 ಲಕ್ಷ ರೂ. ಹಣ ಸಂಗ್ರಹವಾಗಿದೆ.

    ತಮ್ಮ ಚಿತ್ರಗಳ ಪ್ರದರ್ಶನದ ಜೊತೆಗೆ ಮಾರಾಟದ ಆಯೋಜನೆ ಕೂಡ ನಡೆದಿತ್ತು. ಪ್ರತಿ ಚಿತ್ರಕ್ಕೆ 2 ಸಾವಿರ ರೂ. ಬೆಲೆ ನಿಗದಿ ಆಗಿತ್ತು. ಅಲ್ಲದೇ ಫೋಟೋ ಜೊತೆಗೆ ದರ್ಶನ್ ಆಟೋಗ್ರಾಫ್ ಪಡೆಯಲು 500 ಹೆಚ್ಚುವರಿ ಹಣ ನೀಡಬೇಕಾಗಿತ್ತು. ಮೂರು ದಿನಗಳು ಪ್ರದರ್ಶನ ನಡೆದ ಜಾಗದಲ್ಲಿ ದರ್ಶನ್ ಆಟೋಗ್ರಾಫ್ ನೀಡಿದ್ದಾರೆ.

    ಮಾರ್ಚ್ 1ರಂದು ದರ್ಶನ್ ಹಾಗೂ ಸಂದೇಶ್ ನಾಗರಾಜ್ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಇದಾದ ಬಳಿಕ ಛಾಯಾಚಿತ್ರದ ಪ್ರದರ್ಶನದ ಬಗ್ಗೆ ಮಾತನಾಡಿದ ದರ್ಶನ್, ಒಂದು ಒಳ್ಳೆಯ ಉದ್ದೇಶದಿಂದ ಈ ಪ್ರದರ್ಶನವನ್ನು ಆಯೋಜಿಸಿದ್ದೇವೆ. ಇದರಲ್ಲಿ ಬಂದ ಹಣವನ್ನು ಅರಣ್ಯ ಸಂರಕ್ಷಣೆಗೆ ಖರ್ಚು ಮಾಡುತ್ತೇನೆ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಟ ದರ್ಶನ್ ಸೆರೆ ಹಿಡಿದ ಛಾಯಾಚಿತ್ರಗಳ ಪ್ರದರ್ಶನ, ಮಾರಾಟ

    ನಟ ದರ್ಶನ್ ಸೆರೆ ಹಿಡಿದ ಛಾಯಾಚಿತ್ರಗಳ ಪ್ರದರ್ಶನ, ಮಾರಾಟ

    ಮೈಸೂರು: ಚಾಲೆಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅರಣ್ಯದಲ್ಲಿ ಸೆರೆ ಹಿಡಿದಿರುವ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್‍ನಲ್ಲಿ ಮಾರ್ಚ್ 1 ರಿಂದ 3 ರವರೆಗೆ ನಡೆಯಲಿದೆ.

    ‘ಲೈಫ್ ಆನ್ ದಿ ವೈಲ್ಡ್ ಸೈಡ್’ ಹೆಸರಿನಲ್ಲಿ ನಟ ದರ್ಶನ್ ಅರಣ್ಯದಲ್ಲಿ ಸೆರೆ ಹಿಡಿದಿರುವ ಛಾಯಾಚಿತ್ರಗಳ ಪ್ರದರ್ಶನ ಆಯೋಜನೆಗೊಳ್ಳುತ್ತಿದೆ. ದರ್ಶನ್ ಸೆರೆ ಹಿಡಿದ ಛಾಯಚಿತ್ರಗಳ ಮಾರಾಟ ಕೂಡ ಇದ್ದು, ಮಾರಾಟದಿಂದ ಬಂದ ಹಣ ವನ್ಯಜೀವಿ ಸಂರಕ್ಷಣಾ ನಿಧಿಗೆ ಬಳಕೆಯಾಗಲಿದೆ.

    ಒಂದು ಛಾಯಾಚಿತ್ರಕ್ಕೆ ಎರಡರಿಂದ ಎರಡೂವರೆ ಸಾವಿರ ನಿಗದಿ ಮಾಡಲಾಗಿದ್ದು, ಎರಡೂವರೆ ಸಾವಿರ ಕೊಟ್ಟರೆ ದರ್ಶನ್ ಆಟೋಗ್ರಾಫ್ ಇರುವ ಚಿತ್ರ ಲಭ್ಯವಾಗಲಿದೆ. ಅರಣ್ಯ ಇಲಾಖೆ ಸಹಯೋಗದಲ್ಲಿ ಛಾಯಾಚಿತ್ರ ಪ್ರದರ್ಶನ ಆಯೋಜನೆಗೊಳ್ಳುತ್ತಿದೆ.

    ಈ ಬಗ್ಗೆ ದರ್ಶನ್ ಅವರು ಟ್ವಿಟ್ಟರಿನಲ್ಲಿ ತಾವು ಸಫಾರಿಗೆ ತೆರಳಿದ್ದಾಗ ಪ್ರಾಣಿಗಳ ಫೋಟೋ ಕ್ಲಿಕ್ಕಿಸುತ್ತಿರುವ ವಿಡಿಯೋವನ್ನು ಹಾಕುವುದರ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 5 ಬೆರಳಿಗೆ ಕುಂಚ ಕಟ್ಟಿಕೊಂಡು ಸಲೀಸಾಗಿ ಚಿತ್ರ ಬಿಡಿಸ್ತಾರೆ ಕಲಾವಿದ

    5 ಬೆರಳಿಗೆ ಕುಂಚ ಕಟ್ಟಿಕೊಂಡು ಸಲೀಸಾಗಿ ಚಿತ್ರ ಬಿಡಿಸ್ತಾರೆ ಕಲಾವಿದ

    ಹಾವೇರಿ: ಕುಂಚ ಹಿಡಿದುಕೊಂಡು ಒಂದು ಕೈಯಲ್ಲಿ ಚಿತ್ರ ಬಿಡಿಸುವ ಕಲಾವಿದರನ್ನು ನೀವು ನೋಡಿರಬಹುದು. ಆದರೆ ಜಿಲ್ಲೆಯ ಕಲಾವಿದರೊಬ್ಬರು ಕೈಯಲ್ಲಿನ ಐದೂ ಬೆರಳಿಗೆ ಕುಂಚ ಕಟ್ಟಿಕೊಂಡು ಸಲೀಸಾಗಿ ಚಿತ್ರ ಬಿಡಿಸುತ್ತಾರೆ.

    ಬ್ಯಾಡಗಿ ಪಟ್ಟಣದ ಹೂಗಾರ ನಿವಾಸಿ ಸುಭಾಶ್ ಅವರು 5 ಬೆರಳಿನಲ್ಲಿ ಕುಂಚವನ್ನು ಕಟ್ಟಿಕೊಂಡು ಚಿತ್ರ ಬಿಡಿಸಿ ಫೇಮಸ್ ಆಗಿದ್ದಾರೆ. ವೃತ್ತಿಯಲ್ಲಿ ಚಿತ್ರಕಲಾ ಶಿಕ್ಷಕರಾಗಿರುವ ಸುಭಾಶ್ ಸದಾ ಹೊಸ ಹೊಸ ಪ್ರಯತ್ನ ಮಾಡುತ್ತಿರುತ್ತಾರೆ. ಬಾಲ್ಯದಿಂದಲೂ ಚಿತ್ರ ಬಿಡಿಸುವುದನ್ನು ಕರಗತ ಮಾಡಿಕೊಂಡಿರುವ ಸುಭಾಶ್ ಈಗಾಗಲೇ ಸಾವಿರಾರು ಚಿತ್ರಗಳನ್ನು ಬಿಡಿಸಿದ್ದಾರೆ.

    ಆರಂಭದಲ್ಲಿ ಸುಭಾಶ್ ಸಹ ಕೈಯಲ್ಲಿ ಕುಂಚ ಹಿಡಿದುಕೊಂಡು ಚಿತ್ರ ಬಿಡಿಸುತ್ತಿದ್ದರು. ಆಗ ಒಂದು ಚಿತ್ರ ಬಿಡಿಸಲು ಹೆಚ್ಚಿನ ಸಮಯ ಬೇಕಾಗುತ್ತಿತ್ತು. ಹೀಗಾಗಿ ಕೈಯಲ್ಲಿನ ಐದೂ ಬೆರಳಿಗೆ ಕುಂಚ ಕಟ್ಟಿಕೊಂಡು ಚಿತ್ರ ಬಿಡಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಏಕಕಾಲಕ್ಕೆ ಐದೂ ಬೆರಳಿಗೆ ಕುಂಚ ಕಟ್ಟಿಕೊಂಡು ಚಿತ್ರ ಬಿಡಿಸುವುದರಿಂದ ಕಡಿಮೆ ಅವಧಿಯಲ್ಲಿ ಚಿತ್ರವನ್ನು ಸುಲಭವಾಗಿ ಬಿಡಿಸಬಹುದು ಎಂದು ಹೇಳುತ್ತಾರೆ.

    ಬೆರಳಿಗೆ ಕುಂಚ ಕಟ್ಟಿಕೊಂಡು ಗೀಚಾಟ ಶುರು ಮಾಡಿದರೆ ಸಾಕು ನೋಡ ನೋಡುತ್ತಿದ್ದಂತೆ ಚಿತ್ರಗಳು ನಮ್ಮೆದುರಿಗೆ ನಿಲ್ಲುತ್ತವೆ. ನಿಸರ್ಗ, ಜಾನಪದ ಕಲೆ, ಮಹಾಪುರುಷರ ಚಿತ್ರಗಳು, ವಿಭಿನ್ನವಾದ ಕಲೆಗಳು ಜೀಗೆ ತರಹೇವಾರಿ ಚಿತ್ರಗಳನ್ನು ಕಲಾವಿದ ಸುಭಾಶ್ ಪಟಾಪಟ್ ಅಂತಾ ಬಿಡಿಸ್ತಾರೆ. ಬೆರಳಿಗೆ ಕುಂಚ ಕಟ್ಟಿಕೊಂಡು ಬಣ್ಣಗಳನ್ನು ರೆಡಿ ಮಾಡಿಕೊಂಡು ಚಿತ್ರಗಳನ್ನು ಸೊಗಸಾಗಿ ಬಿಡಿಸುತ್ತಾರೆ.

    ಸುಭಾಶ್ ಕೈಯಲ್ಲಿ ಅರಳಿದ ಚಿತ್ರಗಳು ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಈಗಾಗಲೇ ಪ್ರದರ್ಶನ ಕಂಡಿವೆ. ಕನಿಷ್ಟ 10 ಸಾವಿರ ರೂ. ಹಾಗೂ ಲಕ್ಷ ಲಕ್ಷಕ್ಕೂ ಮಾರಾಟ ಆಗಿದೆ. ಅನೇಕ ಬಾರಿ ಚಿತ್ರ ಸಂತೆಗಳಲ್ಲಿ ಸುಭಾಶ್‍ರ ಕೈಯಲ್ಲಿ ಅರಳಿದ ಸಾಕಷ್ಟು ಚಿತ್ರಗಳು ಮಾರಾಟ ಆಗಿದೆ. ಶಿಕ್ಷಕ ಸುಭಾಶ್‍ರ ಚಿತ್ರಕಲೆಗೆ ಮನಸೋಲದವರೆ ಇಲ್ಲ. ಇವರ ಚಿತ್ರಗಳನ್ನು ನೋಡುತ್ತಾ ನಿಂತರೆ ಮನಸ್ಸಿಗೆ ಮುದ, ಕಣ್ಣಿಗೆ ಹಬ್ಬ ಉಂಟು ಮಾಡುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 282 ರೈತರು ಬೆಳೆದ ವಿವಿಧ ಬಗೆಯ ಫಲಪುಷ್ಪಗಳ ಪ್ರದರ್ಶನಕ್ಕೆ ಸಾಕ್ಷಿಯಾದ ವಾಣಿಜ್ಯ ನಗರಿ

    282 ರೈತರು ಬೆಳೆದ ವಿವಿಧ ಬಗೆಯ ಫಲಪುಷ್ಪಗಳ ಪ್ರದರ್ಶನಕ್ಕೆ ಸಾಕ್ಷಿಯಾದ ವಾಣಿಜ್ಯ ನಗರಿ

    ಹುಬ್ಬಳ್ಳಿ: 282 ರೈತರು ಬೆಳೆದ ವಿವಿಧ ಬಗೆಯ ಫಲಪುಷ್ಪಗಳ ಪ್ರದರ್ಶನಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಸಾಕ್ಷಿಯಾಗಿದೆ.

    ಇಂದಿರಾ ಗಾಜಿನ ಮನೆಯಲ್ಲಿ ಒಂದು ಕಡೆ ಗುಲಾಬಿ, ಸೇವಂತಿಗೆ, ಕಾರ್ನೇಶನ್, ಅಂಥೋರಿಯಂ, ಗ್ಲ್ಯಾಡಿಯೋಲಸ್, ಲಿಲ್ಲಿ, ಜರ್ಬೆರಾ ಹೂಗಳಿತ್ತು. ಇನ್ನೋಂದೆಡೆ ನೂರಾರು ಬಗೆಯ ಹೂವುಗಳ ರಾಶಿ ನಡುವೆ ವಿಘ್ನ ನಿವಾರಕನ ಮೂರ್ತಿ ಕಂಗೊಳಿಸುತ್ತಿತ್ತು. ಮತ್ತೊಂದೆಡೆ ರಾಜು ಸೋನಾವನೆ ಎಂಬ ಕಲಾವಿದ ಕೈ ಚಳಕದಲ್ಲಿ ತಯಾರಾಗಿದ್ದ ವಿಮಾನ ನೋಡುಗರಿಗೆ ಆಕರ್ಷಿಸಿತ್ತು.

    ಧಾರವಾಡ ತೋಟಗಾರಿಕೆ ಇಲಾಖೆ ಹು-ಧಾ ಮಹಾನಗರ ಪಾಲಿಕೆ ಸಹಯೋಗದಲ್ಲಿ ಮೂರು ದಿನಗಳ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಫಲ ಪುಷ್ಪ ಪ್ರದರ್ಶನಕ್ಕೆ ಕುಂದಗೋಳ ಶಾಸಕ ಸಿ.ಎಸ್ ಶಿವಳ್ಳಿ ಚಾಲನೆ ನೀಡಿ ವೀಕ್ಷಣೆ ಮಾಡಿದರು.

    ಈ ಬಾರಿ ಪ್ರದರ್ಶನದ ಪ್ರಮುಖ ಆಕರ್ಷಣೆ ಎಂದರೆ ಹೂವಿನಲ್ಲಿಯೇ ವಿಮಾನ ತಯಾರು ಮಾಡಿರುವುದು. ಉಡಾನ್ ಯೋಜನೆಯಲ್ಲಿ ನಿತ್ಯ ಹತ್ತಾರು ವಿಮಾನಗಳು ಹುಬ್ಬಳ್ಳಿ ನೆತ್ತಿಯ ಮೇಲೆ ಹಾರಾಡುತ್ತಿದ್ದು, ಈ ವರ್ಷದ ಫಲಪುಷ್ಪ ಪ್ರದರ್ಶನದ ಥೀಮ್ ಆಗಿದೆ. ತೋಟಗಾರಿಕೆಗೆ ಉತ್ತೇಜನ ನೀಡಬೇಕು ಎಂಬ ಉದ್ದೇಶದಿಂದ ಈ ಬಾರಿ ಫ್ಲವರ್ ಶೋನಲ್ಲಿ, ಫಾಲಿ ಹೌಸ್, ತಾರಸಿ ತೋಟಗಾರಿಕೆ, ಹಾಗೂ ಅಣಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಅವುಗಳ ಕುರಿತು ಮಾಹಿತಿ ನೀಡಲಾಗುತ್ತದೆ.

    ಕಲಾವಿದ ಇಸ್ಮಾಯಿಲ್ ತಲವಾಯಿ ಎಂಬವರು ಕಲ್ಲಂಗಡಿ ಹಣ್ಣಿನಲ್ಲಿ ಸಂಗೊಳ್ಳಿ ರಾಯಣ್ಣ, ಡಾ. ದ.ರಾ ಬೇಂದ್ರೆ, ಗಿರೀಶ್ ಕಾರ್ನಾಡ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಮಹನೀಯರ ಮೂರ್ತಿಗಳು ಅರಳಿದ್ದು ಜನರನ್ನು ಆಕರ್ಷಿಸುತ್ತಿವೆ. ಫಲಪುಷ್ಪ ಪ್ರದರ್ಶನದಲ್ಲಿ ಹೂಗಳು ತಮ್ಮ ಸೌಂದರ್ಯವನ್ನು ಜಗತ್ತಿಗೆ ತೋರಿಸುತ್ತಿದ್ದರೆ ಅವುಗಳನ್ನು ನೋಡಲು ಬರುವ ಯುವತಿಯರು ಅವುಗಳ ಅಂದ, ಬಣ್ಣ ನೋಡಿ ಜಗತ್ತನ್ನೇ ಮರೆಯುವ ಖುಷಿಯಲ್ಲಿದ್ದರು. ಅದರೊಂದಿಗೆ ಪ್ರತಿಯೊಂದು ಹೂವಿನ ಮುಂದೆ ನಿಂತುಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಪಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರಿನಲ್ಲಿ ಮತ್ಯ್ಸಲೋಕ- ದೇಶ ವಿದೇಶಿ ತಳಿಗಳ ಕಲರ್ ಕಲರ್ ಮೀನುಗಳು

    ಮೈಸೂರಿನಲ್ಲಿ ಮತ್ಯ್ಸಲೋಕ- ದೇಶ ವಿದೇಶಿ ತಳಿಗಳ ಕಲರ್ ಕಲರ್ ಮೀನುಗಳು

    ಮೈಸೂರು: ಸಾಂಸ್ಕೃತಿಕ ನಗರಿಯ ದಸರಾದಲ್ಲಿ ಮೊದಲ ಬಾರಿಗೆ ಮತ್ಯ್ಸ ಲೋಕವೇ ಅನಾವರಣಗೊಂಡಿದೆ. ದೇಶ ವಿದೇಶ ಕಲರ್ ಕಲರ್ ಮೀನಗಳು ನೋಡುಗರ ಕಣ್ಮನ ಸೆಳೆಯುತ್ತಿದೆ.

    ರೈತರಿಗೆ ಮೀನುಗಾರಿಗೆ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಮತ್ಯ್ಸ ಮೇಳವನ್ನು ಮೀನುಗಾರಿಗೆ ಇಲಾಖೆ ಆಯೋಜನೆ ಮಾಡಿದೆ. ದೇಶ ವಿದೇಶಗಳಿಂದ 100ಕ್ಕೂ ಹೆಚ್ಚು ಬಗೆಯ ಮೀನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಉನ್ನತ ಶಿಕ್ಷಣ ಸಚಿವ ಜಿಟಿ ದೇವೆಗೌಡ ಅವರು ಮತ್ಯ್ಸ ಮೇಳವನ್ನು ಉದ್ಘಾಟನೆ ಮಾಡಿದರು.

    ದೇಶಿಯ ಮೀನುಗಳಾದ ಸಾಮಾನ್ಯ ಗೆಂಡೆ, ಹುಲ್ಲುಗೆಂಡೆ, ಬೆಳ್ಳಿ ಗೆಂಡೆ, ಕಾಟ್ಲಾ, ರೋಹು, ಮೃಗಾಲ್ ಮೀನುಗಳ ಎಲ್ಲರ ಗಮನ ಸೆಳೆದವು. ಅಕ್ವೇರಿಯಂನಲ್ಲಿ ವಿವಿಧ ಬಗೆಯ ಕಲರ್ ಕಲರ್ ಸಾಕು ಮೀನುಗಳನ್ನು ಇಡಲಾಗಿದೆ.

    ಪ್ರಮುಖವಾಗಿ ಅಮೆಜಾನಿನ ಸ್ಟಿಂಗ್ ರೇ, ಏಶಿಯಾದ ಅರೋವಾನ, ಆಫ್ರಿಕಾದ ಚಿಚಿಲಿಡ್ಸ್, ಈಲ್ಸ್, ಬ್ಲೂ ಚನ್ನ, ತೈರೆ ಈಲ್ಸ್, ಹೈಳಿನ್ ಶಾರ್ಕ್, ಜಾಯಿಂಟ್ ಗೌರಮಿ, ಸ್ನೇಕ್‍ಹೆಡ್ಸ್ ಮೀನುಗಳನ್ನು ಇಡಲಾಗಿದೆ. ಮತ್ಯ್ಸ ಮೇಳದಲ್ಲಿ ಮೀನಗಳ ಪ್ರದರ್ಶನ ಅಲ್ಲದೇ ಕೊಡವೆ, ಹರಿಗೋಲು ಹಾಗೂ ವಿವಿಧ ಬಗೆಯ ಬಲೆಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗ್ಳೂರಲ್ಲಿ 72 ಕೆ.ಜಿಯ ಚಾಕಲೇಟ್ ಬಾರ್ ತಯಾರಿ!

    ಬೆಂಗ್ಳೂರಲ್ಲಿ 72 ಕೆ.ಜಿಯ ಚಾಕಲೇಟ್ ಬಾರ್ ತಯಾರಿ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 72 ಪದಾರ್ಥಗಳನ್ನು ಬಳಸಿ ಬರೋಬ್ಬರಿ 72 ಕೆ.ಜಿಯ ಚಾಕಲೇಟ್ ಬಾರ್ ತಯಾರಿಸಿ ಪ್ರದರ್ಶನಕ್ಕೆ ಇಡಲಾಗಿದೆ.

    ಭಾರತದ ಅತ್ಯಂತ ಜನಪ್ರಿಯ ಚಾಕಲೇಟ್ ಬ್ರಾಂಡ್ ಫೆಬೆಲ್ಲೆ(Fabelle), ಇದೇ ಮೊದಲ ಬಾರಿಗೆ ವಿಶಿಷ್ಟ ಹಾಗೂ 72 ಪದಾರ್ಥಗಳನ್ನು ಬಳಸಿ 72 ಕಿಲೋ ಚಾಕಲೇಟ್ ಬಾರ್ ತಯಾರಿಸಿದೆ. ಬೆಂಗಳೂರು ಮಾತ್ರವಲ್ಲದೇ ಎಲ್ಲ 6 ಮೆಟ್ರೋ ನಗರಗಳಲ್ಲಿ ಒಂದೊಂದು 72 ಕಿಲೋ ಚಾಕೊಲೇಟ್ ಬಾರ್ ತಯಾರಿಸಿದೆ.

    ಈ ಚಾಕಲೇಟ್ ಬಾರ್ ಗಳನ್ನು ಮುಂಬೈ, ದೆಹಲಿ, ಕೋಲ್ಕತ್ತಾ, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಉನ್ನತ ಗುಣಮಟ್ಟದ ಹಾಲು, ನಟ್ಸ್, ಒಣ ಹಣ್ಣುಗಳು, ಕುಕೀಸ್, ಸೀಡ್‍ಗಳು, ಜೆಲ್ಲಿ, ಬಿಸ್ಕಿಟ್ ಹಾಗೂ ಇತರ ಪದಾರ್ಥಗಳ ಮಿಶ್ರಣದಿಂದ ಫೆಬೆಲ್ಲೆ ಮಾಸ್ಟರ್ ಚಾಕಲೇಟಿಯರ್ ಗಳು ಮಿಲ್ಕ್ ಚಾಕಲೇಟ್ ಬಾರ್ ಗಳನ್ನು ತಯಾರಿಸಿದ್ದಾರೆ. ಚಾಕಲೇಟ್ ರುಚಿಯನ್ನು ವಿಶಿಷ್ಟವಾಗಿಸಲು ಹಲವು ಸುತ್ತಿನ ಟೆಸ್ಟಿಂಗ್ ಟ್ರಯಲ್‍ಗಳನ್ನೂ ಮಾಡಲಾಗಿದೆಯಂತೆ. ಅಂತಿಮವಾಗಿ 7 ರಿಂದ 8 ದಿನಗಳವರೆಗೆ ಕೆಲಸ ಮಾಡಿ ಚಾಕಲೇಟ್ ಬಾರ್ ತಯಾರಿಸಲಾಗಿದೆ. ಇದನ್ನೂ ಓದಿ: ಈ ಪುಟಾಣಿ ಚಾಕ್ಲೇಟ್ ಬೆಲೆ 6 ಲಕ್ಷ ರೂ.

    ಈ ತಯಾರಿಕೆಯ ಪಯಣ ಅತ್ಯಂತ ಸವಾಲಿನದಾಗಿದ್ದು, ಬರಿ ದೊಡ್ಡ ಚಾಕಲೇಟ್ ಬಾರ್ ತಯಾರಿಸುವುದಷ್ಟೇ ನಮ್ಮ ಗುರಿಯಾಗಿರಲಿಲ್ಲ. ಬದಲಿಗೆ ಸಾಮಾನ್ಯ ಫೆಬೆಲ್ಲೆ ಚಾಕಲೇಟ್‍ಗಿಂತ ವಿಶಿಷ್ಟ ರುಚಿಯನ್ನು ಇದು ಹೊಂದಿರಬೇಕು ಎಂದು ನಾವು ಬಯಸಿದ್ದೆವು. ಇದೇ ಕಾರಣಕ್ಕೆ ಚಾಕಲೇಟ್ ತಯಾರಕರು ತಮ್ಮ ಎಲ್ಲ ಅನುಭವವನ್ನೂ ಬಳಸಿ ತಯಾರಿಸಿದ್ದಾರೆ.

    ಈ ಚಾಕಲೇಟ್ ಮಾರಾಟ ಮಾಡಿ ಮೇಕ್ ಎ ವಿಶ್ ಫೌಂಡೇಶನ್ ಮೂಲಕ ಮಕ್ಕಳಿಗೆ ಆ ಹಣ ನೀಡುವುದು ಈ ಚಾಕಲೇಟ್ ತಯಾರಿಕೆಯ ಹಿಂದಿನ ಉದ್ದೇಶವಾಗಿದೆ. ಜೊತೆಗೆ 72 ನೇ ಸ್ವಾತಂತ್ರೋತ್ಸವ ಹಿನ್ನೆಲೆಯಲ್ಲಿ 72 ಕೆಜಿಯ ಚಾಕಲೇಟ್ ತಯಾರು ಮಾಡಿ ಒಂದೊಳ್ಳೆ ಕೆಲಸ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಣ್ಮನವನ್ನ ಸೆಳೆಯುತ್ತಿವೆ ಹೂಗಳಿಂದ ಅರಳಿದ ರಂಗೋಲಿ!

    ಕಣ್ಮನವನ್ನ ಸೆಳೆಯುತ್ತಿವೆ ಹೂಗಳಿಂದ ಅರಳಿದ ರಂಗೋಲಿ!

    ಭುವನೇಶ್ವರ: ಸಾಮಾನ್ಯವಾಗಿ ಎಲ್ಲರೂ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಮನೆಗಳಲ್ಲಿ ಬಣ್ಣ-ಬಣ್ಣದ ರಂಗೋಲಿಯನ್ನು ಹಾಕುತ್ತಾರೆ. ಆದರೆ ಒಡಿಶಾದಲ್ಲಿ ಪುಷ್ಪಾಲಂಕರಗಳ ಮೂಲಕ ವಿವಿಧ ರೀತಿಯ ವಿನ್ಯಾಸಗಳಲ್ಲಿ ರಂಗೋಲಿಯನ್ನು ಬಿಡಿಸಲಾಗಿದೆ. ಅವು ನೋಡುಗರ ಗಮನವನ್ನು ಸೆಳೆಯುತ್ತಿದೆ.

    ಲಲಿತ್ ಕಲಾ ಅಕಾಡೆಮಿ (ಆರ್ಟ್ ಗ್ಯಾಲರಿ) ಕಳೆದ ವಾರ ನಗರದ ಪ್ರಸಿದ್ಧ ಒಡಿಸ್ಸಿ ನರ್ತಕಿ ಜನ್ಹಾಬಿ ಬೆಹೆರಾರಿಂದ ಹೂವುಗಳಿಂದ ಮಾಡಿದ ರಂಗೋಲಿಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅಲ್ಲಿ ಪ್ರದರ್ಶನ ಕಂಡ ಹೂ ರಂಗೋಲಿಗಳು ತುಂಬಾ ಆಕರ್ಷಕವಾಗಿದ್ದವು.

    ಲಿಲ್ಲಿಗಳು, ಜಾಸ್ಮಿನ್, ಗುಲಾಬಿ ದಳಗಳು, ಚೆಂಡು ಹೂ (ಮಾರಿಗೋಲ್ಡ್) ಸುಗಂಧರಾಜ ಮತ್ತು ಒಣಗಿದ ಎಲೆಗಳನ್ನು ಈ ಚಿತ್ತಾರವಾದ ರಂಗೋಲಿಗಳಿಗಾಗಿ ಬಳಸಿಕೊಳ್ಳಲಾಗಿದೆ. ಇವುಗಳೆಲ್ಲವನ್ನು ಬಳಸಿಕೊಂಡು ವರ್ಣರಂಜಿತವಾದ ಮಾದರಿಗಳಲ್ಲಿ ರಂಗೋಲಿ ಬಿಡಿಸಲಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಕಲಾವಿದೆ, “ನಾನು ಯಾವಾಗಲೂ ಹೂವುಗಳಿಗೆ ಆಕರ್ಷಿತನಾಗಿದ್ದೇನೆ. ಅವು ಪ್ರಕೃತಿಯ ಸೌಂದರ್ಯದ ಅಭಿವ್ಯಕ್ತಿಗಳು. ನಾನು ಗಿಡದಿಂದ ಹೂವುಗಳನ್ನು ಕೀಳುವುದನ್ನು ಇಷ್ಟ ಪಡುವುದಿಲ್ಲ. ಆದರೂ ನಮಗೆ ಯಾವಾಗಲೂ ಪ್ರದರ್ಶನದ ನಂತರ ಹೂವುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ನಾನು ಈ ಹೂವುಗಳನ್ನು ಮನೆಗೆ ತರುತ್ತೇನೆ. ಬಳಿಕ ಆ ಹೂವುಗಳಿಂದಲೇ ರಂಗೋಲಿ ಬಿಡಿಸುತ್ತೇನೆ. ಆದ್ದರಿಂದ ಹೂ ವ್ಯರ್ಥವಾಗಲ್ಲ ಎಂದು ಹೇಳಿದ್ದಾರೆ.

    ಈ ರೀತಿ ಉಡುಗೊರೆಯಾಗಿ ಬಂದಂತ ಹೂಗಳಿಂದ ರಂಗೋಲಿ ಬಿಡಿಸುತ್ತಿದ್ದರು. ಬಳಿಕ ಜನರು ಕೂಡ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದು, ಕಾಲಕ್ರಮೇಣ ಸಾಮಾಜಿಕ ಜಾಲತಾಣಗಲ್ಲಿ ಸರಳವಾದ ಹೂವಿನ ರಂಗೋಲಿ ವಿಡಿಯೋಗಳನ್ನು ಅಪ್ಲೋಡ್ ಮಾಡಲು ಆರಂಭಿಸಿದರು. ನಂತರ ವಿಡಿಯೋ ನೋಡಿ ಅವರ ಸ್ನೇಹಿತರು ಮತ್ತು ಹಲವಾರು ಪ್ರೋತ್ಸಾಹಿಸಿದರು. ಜನರ ಪ್ರೋತ್ಸಾಹದಿಂದ  ಜನ್ಹಾಬಿ ಬೆಹೆರಾ ಅವರು ” Phula Re Phula Re: A Story in Flowers”ಎಂಬ ಶೀರ್ಷಿಕೆಯಡಿಯಲ್ಲಿ ಹೂ ರಂಗೋಲಿ ಪ್ರದರ್ಶನಗಳನ್ನು ಪ್ರದರ್ಶಿಸಲು ನಿರ್ಧರಿಸಿದ್ದರು.

    ಹೀಗೆ ಅಭಿವೃದ್ಧಿ ಪಡೆದ ಹೂ ರಂಗೋಲಿ ಒಡಿಶಾದ ಕೆಲವು ಶ್ರೇಷ್ಠ ಕೈಮಗ್ಗದಿಂದ ಸ್ಫೂರ್ತಿ ಪಡೆದ ಪ್ರಸಿದ್ಧ ಪಸಾಪಾಲಿ ಮಾದರಿಯನ್ನು ಬಿಡಿಸುತ್ತಿದ್ದರು. ಸಾಮಾನ್ಯವಾಗಿ ಒಂದು ವಿನ್ಯಾಸವನ್ನು ಪೂರ್ಣಗೊಳಿಸಲು ಸುಮಾರು ಎರಡು ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ. ನಾನು ಪ್ರಮುಖವಾಗಿ ಮಾರಿಗೋಲ್ಡ್ ಹೂವುಗಳ ಮೂಲಕ ಅಧಿಕವಾಗಿ ರಂಗೋಲಿಯನ್ನು ಬಿಡಿಸುತ್ತಿದ್ದೇನೆ ಎಂದು ಜನ್ಹಾಬಿ ಬೆಹೆರಾ ಹೇಳಿದ್ದಾರೆ.