Tag: Exemption

  • ಲಾಕ್‍ಡೌನ್‍ನಿಂದ ವಿನಾಯಿತಿ ಕೇಳಬೇಡಿ- ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮನವಿ

    ಲಾಕ್‍ಡೌನ್‍ನಿಂದ ವಿನಾಯಿತಿ ಕೇಳಬೇಡಿ- ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮನವಿ

    ಬೆಂಗಳೂರು: ನಾಳೆ ಇರುವ ಲಾಕ್‍ಡೌನ್‍ನಿಂದ ವಿನಾಯಿತಿ ಕೇಳಬೇಡಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಜನರಲ್ಲಿ ಮನವಿ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಕೊರೊನಾ ದಿನೇ ದಿನೇ ಹೆಚ್ಚುತ್ತಿರುವ ಕಾರಣ, ಸರ್ಕಾರ ಸಂಡೇ ಲಾಕ್‍ಡೌನ್ ನಿಯಮವನ್ನು ಜಾರಿಗೆ ತಂದಿದೆ. ಈ ಮೂಲಕ ಕೊರೊನಾ ನಿಯಂತ್ರಣ ಮಾಡಲು ಪ್ರಯತ್ನಿಸುತ್ತಿದೆ. ಈಗ ನಾಳೆ ಮೊದಲ ಸಂಡೇ ಲಾಕ್‍ಡೌನ್ ಮಾಡುತ್ತಿದ್ದು, ಜನತೆ ಸ್ವಯಂ ಪ್ರೇರಿತವಾಗಿ ಬೆಂಬಲ ಕೊಡುವಂತೆ ಭಾಸ್ಕರ್ ರಾವ್ ಅವರು ಕೇಳಿಕೊಂಡಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಬೆಂಗಳೂರು ಸಿಟಿಯಲ್ಲಿ ಲಾಕ್‍ಡೌನ್ ಇಂದು ರಾತ್ರಿ 8ಗಂಟೆಗೆ ಪ್ರಾರಂಭವಾಗಿ ಸೋಮವಾರ ಬೆಳಿಗ್ಗೆ 5ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಗೌರವಾನ್ವಿತ ನಾಗರಿಕರೇ, ಮನೆಯಲ್ಲಿಯೇ ಇರಿ ಮತ್ತು ಎಲ್ಲರ ಹಿತದೃಷ್ಟಿಯಿಂದ ಲಾಕ್‍ಡೌನ್ ಮಾಡಲಾಗುತ್ತಿರುವುದರಿಂದ ವಿನಾಯಿತಿಗಳನ್ನು ಕೇಳಬೇಡಿ. ನೀವು ಒಂದು ದಿನ ನಿಮ್ಮ ಕೆಲಸ ಮುಂದೂಡಿದರೆ ಯಾವುದೇ ನಷ್ಟವಾಗುವುದಿಲ್ಲ. ದಯವಿಟ್ಟು ನೀವೇ ಸ್ವಯಂ ಪ್ರೇರಿತವಾಗಿ ಸಹಕಾರ ನೀಡಿ. ಹ್ಯಾಪಿ ಸಂಡೇ ಎಂದು ಹೇಳಿದ್ದಾರೆ.

    ನಾಳೆ ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ಲಾಕ್‍ಡೌನ್ ವಿನಾಯಿತಿ ನೀಡಲಾಗಿದೆ. ಈ ಮೂಲಕ ಏರ್ ಟಿಕೆಟ್ ಮತ್ತು ಐಡಿ ಕಾರ್ಡ್ ತೋರಿಸಿ ಸಂಚರಿಸಲು ಅನುಮತಿ ನೀಡಲಾಗಿದೆ. ನಾಳೆ ಅಗತ್ಯ ಸೇವೆ ಹೊರತುಪಡಿಸಿ ಖಾಸಗಿ ವಾಹನಗಳು, ಬಿಎಂಟಿಸಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರಕ್ಕೆ ಅನುಮತಿಯಿಲ್ಲ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

  • ರಿಲೀಫ್ ಸಿಗ್ತಿದ್ದಂತೆ ರಸ್ತೆಯಲ್ಲಿ ಸಾಲು ಸಾಲು ವಾಹನ – ಅರ್ಧ ಕಿ.ಮೀ.ವರೆಗೂ ನಿಂತ ಬೈಕ್, ಕಾರುಗಳು

    ರಿಲೀಫ್ ಸಿಗ್ತಿದ್ದಂತೆ ರಸ್ತೆಯಲ್ಲಿ ಸಾಲು ಸಾಲು ವಾಹನ – ಅರ್ಧ ಕಿ.ಮೀ.ವರೆಗೂ ನಿಂತ ಬೈಕ್, ಕಾರುಗಳು

    ಬೆಂಗಳೂರು: ರಾಜ್ಯ ಸರ್ಕಾರ ಕೊರೊನಾ ಲಾಕ್‍ಡೌನ್ ಸಡಿಲಿಕೆ ಮಾಡುತ್ತಿದ್ದಂತೆ ಸಿಲಿಕಾನ್ ಸಿಟಿಯಲ್ಲಿ ಜನರ ಓಡಾಟ ಹೆಚ್ಚಾಗಿದೆ. ಜೊತೆಗೆ ಓಡಾಡುವ ವಾಹನಗಳ ಸಂಖ್ಯೆ ಹೆಚ್ಚಳವಾಗಿದ್ದು, ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.

    ಸರ್ಕಾರಿ ಕಚೇರಿ, ಐಟಿ-ಬಿಟಿ, ಗೂಡ್ಸ್ ಸರ್ವೀಸ್, ಕೃಷಿ ಚಟುವಟಿಕೆ, ಎಪಿಎಂಸಿ ಮತ್ತು ಇನ್ನಿತರ ತುರ್ತು ಸೇವೆಗಳಿಗೆ ರಾಜ್ಯ ಸರ್ಕಾರ ವಿನಾಯಿತಿ ನೀಡಿದೆ. ಇದರಿಂದ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಜಾಸ್ತಿ ಆಗಿದ್ದು, ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಸುಮಾರು ಅರ್ಧ ಕಿಲೋ ಮೀಟರ್ ವರೆಗೆ ಬೈಕ್ ಮತ್ತು ಕಾರುಗಳು ನಿಂತಿವೆ. ಇದನ್ನೂ ಓದಿ: ಗುರುವಾರದಿಂದ ಕರ್ನಾಟಕದಲ್ಲಿ ಏನಿರುತ್ತೆ? ಏನಿರಲ್ಲ? ಕಡ್ಡಾಯ ಏನು?

    ಹೆಬ್ಬಾಳದ ಕೊಡಿಗೇಹಳ್ಳಿ ಫುಲ್ ಟ್ರಾಫಿಕ್ ಜಾಮ್ ಆಗಿದ್ದು, ಪೊಲೀಸರು ಪ್ರತಿಯೊಂದು ವಾಹನದ ಪಾಸ್ ಚೆಕ್ ಮಾಡಿ ಬಿಡುತ್ತಿದ್ದಾರೆ. ಹೀಗಾಗಿ ಪಾಸ್ ಚೆಕ್ ಮಾಡುವ ಸಂದರ್ಭದಲ್ಲಿ ವಾಹನಗಳು ಸಾಲು ಸಾಲಾಗಿ ನಿಂತುಕೊಳ್ಳುತ್ತಿವೆ. ಈ ಮಧ್ಯೆ ಅನಗತ್ಯವಾಗಿ ಓಡಾಡುವ ವಾಹಗಳನ್ನು ಪೊಲೀಸರು ಸೀಜ್ ಮಾಡುತ್ತಿದ್ದಾರೆ.

    ಇನ್ನೂ ಕೆ.ಆರ್.ಸರ್ಕಲ್‍ನಲ್ಲಿ ಪೊಲೀಸರು ವಾಹನಗಳ ತಪಾಸಣೆ ಮಾಡುತ್ತಿದ್ದು, ಪಾಸ್ ಇಲ್ಲದೆ ಇರುವ ವಾಹನಗಳನ್ನ ಸೀಜ್ ಮಾಡುತ್ತಿದ್ದಾರೆ. ಕೆಲಸಕ್ಕೆ ತೆರಳುತ್ತಿರುವ ಸಿಬ್ಬಂದಿಯ ಐಡಿ ಕಾರ್ಡ್ ಚೆಕ್ ಮಾಡಿ ಬಿಡಲಾಗುತ್ತಿದೆ. ಅಲ್ಲದೇ ಕಾವೇರಿ ಜಂಕ್ಷನ್, ಎಲೆಕ್ಟ್ರಾನಿಕ್ ಸಿಟಿ ಮತ್ತು ಟೌನ್‍ಹಾಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ.