Tag: Excise

  • ಬಡವರಿಗೆ ಸಬ್ಸಿಡಿ ದರದಲ್ಲಿ ಮದ್ಯ ಕೊಡ್ತೀವಿ – ಅಬಕಾರಿ ಸಚಿವ

    ಬಡವರಿಗೆ ಸಬ್ಸಿಡಿ ದರದಲ್ಲಿ ಮದ್ಯ ಕೊಡ್ತೀವಿ – ಅಬಕಾರಿ ಸಚಿವ

    ಬೆಂಗಳೂರು: ಮನೆ ಬಾಗಿಲಿಗೆ ಮದ್ಯ ಡೆಲಿವರಿ ಮಾಡ್ತೀನಿ ಎಂದು ವಿವಾದಕ್ಕೆ ಗುರಿಯಾಗಿದ್ದ ರಾಜ್ಯದ ಅಬಕಾರಿ ಸಚಿವ ಈಗ ಮತ್ತೊಂದು ವಿವಾದಕ್ಕೆ ಗುರಿಯಾಗ್ತಿದ್ದಾರೆ. ಯಡಿಯೂರಪ್ಪ ಸರ್ಕಾರದಲ್ಲಿರುವ ಅಬಕಾರಿ ಸಚಿವ ನಾಗೇಶ್ ವರ್ಷದ ಕಡೆ ದಿನ ಮತ್ತೊಂದು ವಿವಾದಾತ್ಮಕ ಹೆಜ್ಜೆ ಇಟ್ಟಿದ್ದಾರೆ. ಬಡವರಿಗೆ ಮದ್ಯವನ್ನು ಸಬ್ಸಿಡಿ ದರದಲ್ಲಿ ಸರ್ಕಾರ ಕೊಡಲು ಚಿಂತಿಸಿದೆ ಎಂದು ಹೇಳಿದ್ದಾರೆ.

    ವಿಕಾಸಸೌಧದಲ್ಲಿ ಮಾತನಾಡಿದ ಅವರು, ಬಡ ಜನರು ಹೆಚ್ಚು ಬಳಕೆ ಮಾಡುವ ಕಡಿಮೆ ದರದ ಮದ್ಯವನ್ನು ಸಬ್ಸಿಡಿ ದರದಲ್ಲಿ ಕೊಡಬೇಕಂದು ಸರ್ಕಾರದ ಚಿಂತನೆ ಇದೆ. ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮದ್ಯ ಸರಬರಾಜು ಮಾಡುವ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

    ಅಂದಹಾಗೆ ನಾಗೇಶ್ ಹೇಳಿಕೆ ವೈಯಕ್ತಿಕವಾಗಿ ಕೊಟ್ಟಿರೋದಾ? ಸರ್ಕಾರ ಮಟ್ಟದಲ್ಲಿ ನಡೆದಿರುವ ಬೆಳವಣಿಗೆನಾ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ. ಏಕೆಂದರೆ ಈ ಹಿಂದೆ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡುತ್ತೇವೆ, ಹೋಮ್ ಡೆಲಿವರಿ ಇದೆ ಎಂದಿದ್ದರು.

    ನಾಗೇಶ್ ಹೋಮ್ ಡೆಲಿವರಿ ಹೇಳಿಕೆ ರಾಜ್ಯಾದ್ಯಂತ ವಿವಾದಕ್ಕೆ ಕಾರಣವಾಗಿತ್ತು. ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯಪ್ರವೇಶ ಮಾಡಿ ಹೋಮ್ ಡೆಲಿವರಿ ಚಿಂತನೆ ಇಲ್ಲ ಎಂದು ಹೇಳಿ ವಿವಾದ ತಿಳಿಗೊಳಿಸಿದ್ದರು. ಈಗ ಮತ್ತೆ ಸಬ್ಸಿಡಿ ದರದಲ್ಲಿ ಮದ್ಯ ನೀಡುತ್ತೇವೆ ಎನ್ನುವ ಹೇಳಿಕೆ ವಿವಾದಕ್ಕೆ ತಿರುಗಿದ್ದು, ಯಡಿಯೂರಪ್ಪ ಅಬಕಾರಿ ಸಚಿವರ ಚಿಂತನೆಗೆ ಓಕೆ ಅಂತಾರಾ? ತಿರಸ್ಕರಿಸುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.

  • ಕೊರಿಯರ್ ಆಫೀಸ್‍ನಲ್ಲಿ ಸಿಕ್ತು 200 ಕೋಟಿ ಮೌಲ್ಯದ ಡ್ರಗ್ಸ್!

    ಕೊರಿಯರ್ ಆಫೀಸ್‍ನಲ್ಲಿ ಸಿಕ್ತು 200 ಕೋಟಿ ಮೌಲ್ಯದ ಡ್ರಗ್ಸ್!

    ತಿರುವನಂತಪುರಂ: ಡ್ರಗ್ಸ್ ನಿಗ್ರಹ ದಳ ಹಾಗೂ ಅಬಕಾರಿ ಇಲಾಖೆಯ ಜಂಟಿ ಕಾರ್ಯಾಚರಣೆ ನಡೆಸಿ ಸುಮಾರು 200 ಕೋಟಿ ರೂಪಾಯಿ ಮೌಲ್ಯದ 32 ಕೆ.ಜಿ. ಡ್ರಗ್ಸ್ ಅನ್ನು ಕೊಚ್ಚಿಯ ಕೊರಿಯರ್ ಸೆಂಟರ್ ನಲ್ಲಿ ವಶಪಡಿಸಿಕೊಂಡಿದೆ.

    ಖಚಿತ ಮಾಹಿತಿ ಆಧರಿಸಿ ಕೇರಳದ ಮಾದಕ ದ್ರವ್ಯ ನಿಗ್ರಹ ಪಡೆ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ಶನಿವಾರ ಕೊಚ್ಚಿಯ ಖಾಸಗಿ ಕೊರಿಯರ್ ಸೆಂಟರ್ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಸುಮಾರು 200 ಕೋಟಿ ರೂಪಾಯಿ ಮೌಲ್ಯದ 32 ಕೆಜಿ ಮಾದಕ ದ್ರವ್ಯದ 64 ಪ್ಯಾಕೆಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

    ಡ್ರಗ್ಸ್ ದಂಧೆಕೋರರು ಪ್ಯಾಕೆಟ್‍ಗಳನ್ನು ಬಟ್ಟೆಯಲ್ಲಿ ಸುತ್ತಿ ಬಾಕ್ಸ್‍ಗಳಲ್ಲಿ ಬಚ್ಚಿಟ್ಟಿದ್ದರು. ಅಲ್ಲದೇ ಸಾಗಾಣಿಕೆಯ ಹಿಂದೆ ಕೊರಿಯರ್ ಸೆಂಟರ್‍ನ ಸಿಬ್ಬಂದಿಗಳು ಭಾಗಿಯಾಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ ಎಂದು ಎರ್ನಾಕುಲಂನ ವಿಭಾಗೀಯ ಉಪ ಅಬಕಾರಿ ಆಯುಕ್ತ ಎ.ಎಸ್.ರಂಜಿತ್ ಹೇಳಿದ್ದಾರೆ.

    ಅಬಕಾರಿ ಆಯುಕ್ತ ರಿಶಿ ರಾಜ್ ಸಿಂಗ್ ಮಾತನಾಡಿ, ಡ್ರಗ್ಸ್ ದಂಧೆಕೋರರು ಅಕ್ರಮವಾಗಿ ಮಾದಕ ವಸ್ತುಗಳನ್ನು ವಿದೇಶಕ್ಕೆ ರಫ್ತು ಮಾಡುವ ಯೋಜನೆಯನ್ನು ಹೊಂದಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ಭಾರೀ ಪ್ರಮಾಣದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದೇವೆ. ಅಲ್ಲದೇ ದಂಧೆಕೋರರು ಯಾವ ರೀತಿ ಇವುಗಳನ್ನು ರಫ್ತು ಮಾಡುತ್ತಿದ್ದರು ಎನ್ನುವುದು ವಿಚಾರಣೆ ವೇಳೆ ತಿಳಿಯಲಿದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • MRPಯಲ್ಲಿ ಮದ್ಯ ಮಾರಾಟ ಮಾಡದ್ದಕ್ಕೆ ಕೊಪ್ಪಳದಲ್ಲಿ ಬಾರ್ ಮಾಲೀಕರು, ಗ್ರಾಹಕರ ನಡ್ವೆ ಜಗಳ

    MRPಯಲ್ಲಿ ಮದ್ಯ ಮಾರಾಟ ಮಾಡದ್ದಕ್ಕೆ ಕೊಪ್ಪಳದಲ್ಲಿ ಬಾರ್ ಮಾಲೀಕರು, ಗ್ರಾಹಕರ ನಡ್ವೆ ಜಗಳ

    ಕೊಪ್ಪಳ: ಮದ್ಯವನ್ನ ಎಂಆರ್ ಪಿ ಬೆಲೆಯಲ್ಲಿ ಮಾರಾಟ ಮಾಡೋದಕ್ಕೆ ಬಾರ್ ಮಾಲೀಕರು ಹಾಗೂ ಗ್ರಾಹಕರ ನಡುವೆ ವಾಗ್ವಾದ ನಡೆದಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳದ ಗಂಗಾವತಿಯಲ್ಲಿ ಸಿಎಲ್ 2 ಬಾರ್ ನಲ್ಲೇ ಪ್ರತಿ ಮದ್ಯದ ಪೌಚ್ ಮೇಲೆ 20 ರಿಂದ 30 ರೂಪಾಯಿ ಹೆಚ್ಚುವರಿ ಹಣ ಪಡೆಯುತ್ತಿರೋ ಬಾರ್‍ಗಳ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ಕೂಡಾ ಸಾಕಷ್ಟು ವರದಿ ಮಾಡಿದರೂ ಅಬಕಾರಿ ಇಲಾಖೆ ಮಾತ್ರ ಕ್ರಮಕ್ಕೆ ಮುಂದಾಗಿಲ್ಲ.

    ಗಂಗಾವತಿ ತಾಲೂಕಿನಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಅವರ ಸಿಎಲ್ 2 ಅಂಗಡಿಗಳಿವೆ. ಹಗಲುದರೋಡೆ ಮಾಡುತ್ತಿರೋ ಬಾರ್ ಗಳ ವಿರುದ್ಧ ಯಾವೊಬ್ಬ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಮದ್ಯಪ್ರಿಯರು ಈ ವಿಚಾರವನ್ನು ಸಾಕಷ್ಟು ಬಾರಿ ಹೇಳಿದರೂ ಯಾರು ತಲೆಯೇ ಕೆಡಿಸಿಕೊಂಡಿಲ್ಲ ಗ್ರಾಹಕ ರಮೇಶ್ ತಿಳಿಸಿದ್ದಾರೆ.

    ಲಿಗಲ್ ಮೆಟ್ರೋಲಜಿ ಕಾಯ್ದೆ ಏನು ಹೇಳುತ್ತೆ?
    ಪ್ಯಾಕೇಜ್ಡ್ ಉತ್ಪನ್ನಗಳನ್ನ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಲೀಗಲ್ ಮೆಟ್ರೋಲಜಿ ಕಾಯ್ದೆ ಪ್ರಕಾರ ಅಪರಾಧ. ಯಾವುದೇ ವಸ್ತುವನ್ನು ಪೇಪರ್ ನಲ್ಲಿ ಪ್ಯಾಕ್ ಮಾಡಿದ್ದರೂ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತದೆ. ಕಡ್ಡಾಯವಾಗಿ ಪೊಟ್ಟಣ ಸಾಮಗ್ರಿ ನಿಯಮಾವಳಿಗಳನ್ನು ಪಾಲಿಸಿರಬೇಕು. ವಸ್ತುಗಳ ದರ ಹಾಗೂ ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. ಇದನ್ನು ಉಲ್ಲಂಘಿಸಿದರೆ ಮಾರಾಟಗಾರರ ಮೇಲೆ ಸ್ಥಳದಲ್ಲೇ ದಂಡ ವಿಧಿಸಲು ಅವಕಾಶವಿದೆ. ಕಾನೂನು ಮಾಪನಶಾಸ್ತ್ರ ಇಲಾಖೆ ವ್ಯಾಪ್ತಿಗೆ ಎಲ್ಲ ಅಂಗಡಿಗಳು, ಪೆಟ್ರೋಲ್ ಬಂಕ್, ಸೀಮೆಎಣ್ಣೆ ಮಾರಾಟಗಾರರು, ಬಟ್ಟೆ ಅಂಗಡಿಗಳು, ಪೊಟ್ಟಣ ತಯಾರಿಕಾ ಉದ್ಯಮಗಳು ಒಳಪಡುತ್ತದೆ.

    ದಂಡ ಎಷ್ಟು?
    ಯಾವುದೇ ಪ್ರೀ ಪ್ಯಾಕೇಜ್ಡ್ ಉತ್ಪನ್ನದ ಮೇಲೆ ನಮೂದಿಸಿರುವುದಕ್ಕೆ ಬದ್ಧವಾಗಿರದೆ ಅದನ್ನ ಮಾರಾಟ, ವಿತರಣೆ ಅಥವಾ ಡೆಲಿವರಿ ಮಾಡುವಾಗ ಸಿಕ್ಕಿಬಿದ್ದರೆ ಮೊದಲನೇ ಅಪರಾಧಕ್ಕಾಗಿ 25 ಸಾವಿರ ರೂ. ದಂಡ ಹಾಕುವ ಮೂಲಕ ಶಿಕ್ಷಿಸಲಾಗುತ್ತದೆ ಎಂದು ಲೀಗಲ್ ಮೆಟ್ರೊಲಜಿ ಕಾಯ್ದೆಯ ಸೆಕ್ಷನ್ 36 ಹೇಳುತ್ತದೆ. ಎರಡನೇ ಅಪರಾಧಕ್ಕೆ 50 ಸಾವಿರ ರೂ. ಹಾಗೂ ನಂತರದ ಅಪರಾಧಗಳಿಗೆ 1 ಲಕ್ಷ ರೂ ದಂಡ ಅಥವಾ 1 ವರ್ಷ ಜೈಲು ಶಿಕ್ಷೆ ಅಥವಾ ಎರಡೂ ಶಿಕ್ಷೆ ವಿಧಿಸಲಾಗುತ್ತದೆ. ಇದನ್ನೂ ಓದಿ: ಕೊಪ್ಪಳದಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಮದ್ಯಕೋಟೆ?- ಇಲ್ಲಿ ಎಂಆರ್‍ಪಿಗಿಂತ ದುಪ್ಪಟ್ಟು ವಸೂಲಿ