Tag: Excise Policy

  • ಜೈಲಿನಲ್ಲಿರಲಿ, ಹೊರಗಿರಲಿ ನನ್ನ ಜೀವನ ದೇಶಕ್ಕೆ ಸಮರ್ಪಿತ: ಕೇಜ್ರಿವಾಲ್‌

    ಜೈಲಿನಲ್ಲಿರಲಿ, ಹೊರಗಿರಲಿ ನನ್ನ ಜೀವನ ದೇಶಕ್ಕೆ ಸಮರ್ಪಿತ: ಕೇಜ್ರಿವಾಲ್‌

    ನವದೆಹಲಿ: ಜೈಲಿನ ಒಳಗಿರಲಿ ಅಥವಾ ಹೊರಗಿರಲಿ, ನನ್ನ ಜೀವನವು ದೇಶಕ್ಕಾಗಿ ಸಮರ್ಪಿತವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಹೇಳಿದ್ದಾರೆ.

    ಮದ್ಯ ಹರಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿಯನ್ನು ಇಂದು ರೋಸ್ ಅವೆನ್ಯೂ ನ್ಯಾಯಾಲಯಕ್ಕೆ (Rouse Avenue Court) ಹಾಜರುಪಡಿಸುವ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಈ ರೀತಿಯಾಗಿ ಪ್ರತಿಕ್ರಿಯಿಸಿದರು. ಜೈಲಿನಲ್ಲಿದ್ದರೂ ಹೊರಗಿದ್ದರೂ ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವುದಾಗಿ ತಿಳಿಸಿದ್ದಾರೆ.

    ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಲ್ಲಿ ಪಾತ್ರ ವಹಿಸಿದ್ದಕ್ಕಾಗಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಗುರುವಾರ ಕೇಜ್ರಿವಾಲ್ ಅವರನ್ನು ಬಂಧಿಸಿದ್ದಾರೆ. ಬಳಿಕ ಇಂದು 10 ದಿನಗಳ ಕಸ್ಟಡಿಗೆ ಕೋರಿದೆ. ಇದನ್ನೂ ಓದಿ: ಕೇಜ್ರಿವಾಲ್‌ ಅಕ್ರಮದ ಬಗ್ಗೆ ಸಾಕ್ಷ್ಯಗಳೊಂದಿಗೆ ಕಾಂಗ್ರೆಸ್‌ ದೂರು ನೀಡಿತ್ತು: ಬಿಜೆಪಿ ತಿರುಗೇಟು

    ಇತ್ತ ಕೇಜ್ರಿವಾಲ್ ಬಂಧನ ಪ್ರತಿಭಟನೆಗೆ ಕಾರಣವಾಯಿತು. ‌ಪ್ರತಿಭಟನೆಯ ವೇಳೆ ದೆಹಲಿ ಸಚಿವ ಸೌರಭ್ ಭಾರದ್ವಾಜ್ ಅವರು ಕೇಜ್ರಿವಾಲ್ ಅವರ ಕುಟುಂಬವನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಕೇಜ್ರಿವಾಲ್ ಅವರ ತಾಯಿ ಆರೋಗ್ಯವಾಗಿಲ್ಲ ಮತ್ತು ಇತ್ತೀಚೆಗಷ್ಟೇ ಅವರು ಆಸ್ಪತ್ರೆಯಿಂದ ವಾಪಸ್ಸಾಗಿದ್ದಾರೆ. ಕುಟುಂಬದ ಸದಸ್ಯರಿಗೆ ಯಾರನ್ನೂ ಭೇಟಿಯಾಗಲು ಅವಕಾಶವಿಲ್ಲ ಎಂದು ಕಿಡಿಕಾರಿದ್ದಾರೆ.

    ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡುತ್ತಿಲ್ಲ. ಪಕ್ಷದ ಕಾರ್ಯಕರ್ತರಿಗೆ ಪ್ರತಿಭಟನೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ. ಇದು ಸಂಪೂರ್ಣ ಸರ್ವಾಧಿಕಾರ. ಲೋಕಸಭಾ ಚುನಾವಣೆ ಗೆಲ್ಲಲು ಹೀಗೆ ಮಾಡಲಾಗುತ್ತಿದೆ. ಜನರು ಎಲ್ಲೇ ಇದ್ದರೂ ಪ್ರತಿಭಟನೆ ಮಾಡುತ್ತಾರೆ, ಇದು ನಿಲ್ಲುವುದಿಲ್ಲ. ಕ್ರಾಂತಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಅವರು ಆಕ್ರೋಶದ ಮಾತುಗಳನ್ನಾಡಿದ್ದಾರೆ.

  • ಆರನೇ ಸಮನ್ಸ್‌ಗೂ ಗೈರಾದ ಸಿಎಂ ಅರವಿಂದ್ ಕೇಜ್ರಿವಾಲ್

    ಆರನೇ ಸಮನ್ಸ್‌ಗೂ ಗೈರಾದ ಸಿಎಂ ಅರವಿಂದ್ ಕೇಜ್ರಿವಾಲ್

    ನವದೆಹಲಿ: ಹೊಸ ಅಬಕಾರಿ ನೀತಿಯಲ್ಲಿ (Excise Policy) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ (ED) ನೀಡಿದ ಆರನೇ ಸಮನ್ಸ್‌ಗೂ (Summons) ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ವಿಚಾರಣೆಗೆ ಹಾಜರಾಗಿಲ್ಲ. ಪ್ರಕರಣ ಕೋರ್ಟ್‌ನಲ್ಲಿರುವಾಗ ಸಮನ್ಸ್ ನೀಡುವುದು ಕಾನೂನು ಬಾಹಿರ ಎಂದು ಆಪ್ ಸಮರ್ಥಿಸಿಕೊಂಡಿದೆ.

    ಜಾರಿ ನಿರ್ದೇಶನಾಲಯವೇ ನ್ಯಾಯಾಲಯದ ಮೊರೆ ಹೋಗಿದ್ದು, ಮತ್ತೆ ಮತ್ತೆ ಸಮನ್ಸ್ ಕಳುಹಿಸುವ ಬದಲು ಇಡಿ ನ್ಯಾಯಾಲಯದ ತೀರ್ಪಿಗಾಗಿ ಕಾಯಬೇಕು ಎಂದು ಪಕ್ಷ ಹೇಳಿದೆ. ಫೆಬ್ರವರಿ 14 ರಂದು, ತನಿಖಾ ಸಂಸ್ಥೆಯು ಕೇಜ್ರಿವಾಲ್‌ಗೆ ತನ್ನ ಆರನೇ ಸಮನ್ಸ್ ಜಾರಿ ಮಾಡಿತು. ಫೆಬ್ರವರಿ 19 ರಂದು ತನ್ನ ಮುಂದೆ ಹಾಜರಾಗುವಂತೆ ಕೇಳಿಕೊಂಡಿತು. ಇದನ್ನೂ ಓದಿ: ಕೇಂದ್ರ ಸರ್ಕಾರದ ಜೊತೆ ಚರ್ಚೆ, ಐದು ಬೆಳೆಗೆ ಬೆಂಬಲ ಬೆಲೆ ಖಾತರಿ ಕಾನೂನು ಪ್ರಸ್ತಾವನೆ

    ಕೇಜ್ರಿವಾಲ್ ಅವರಿಗೆ ನೀಡಲಾದ ಮೊದಲ ಮೂರು ಸಮನ್ಸ್‌ಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 174 ರ ಅಡಿಯಲ್ಲಿ ತನಿಖಾ ಸಂಸ್ಥೆ ದೂರು ದಾಖಲಿಸಿದೆ. ಕೇಜ್ರಿವಾಲ್ ಸಮನ್ಸ್‌ಗಳನ್ನು ತಪ್ಪಿಸಿರುವುದನ್ನು ನ್ಯಾಯಾಲಯವು ಗಮನಿಸಿದೆ. ಅರವಿಂದ್ ಕೇಜ್ರಿವಾಲ್ ಅವರು ಅಪರಾಧ ಎಸಗಿದ್ದಾರೆ ಎಂದು ನ್ಯಾಯಾಲಯ ಒಪ್ಪಿಕೊಂಡಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ; ಬುಡಕಟ್ಟು ಮುಖಂಡ ಮಹೇಂದ್ರ ಜೀತ್ ಬಿಜೆಪಿ ಸೇರ್ಪಡೆ

    ನ್ಯಾಯಾಲಯದ ಮುಂದಿರುವ ಪ್ರಶ್ನೆಯು ಸಮನ್ಸ್‌ಗಳ ಸಿಂಧುತ್ವದ ಬಗ್ಗೆ ಅಲ್ಲ. ಬದಲಿಗೆ ಕೇಜ್ರಿವಾಲ್ ಅವರು ಹೇಳಿದ ಮೂರು ಸಮನ್ಸ್‌ಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಕಾನೂನುಬಾಹಿರ ಕೃತ್ಯ ಎಂದು ಇಡಿ ಅಧಿಕಾರಿಗಳು ಆರೋಪಿಸಿದರು. ಕೇಜ್ರಿವಾಲ್ ಇದುವರೆಗಿನ ಎಲ್ಲಾ ತನಿಖಾ ಸಂಸ್ಥೆಯ ಸಮನ್ಸ್‌ಗಳನ್ನು ‘ಕಾನೂನುಬಾಹಿರ’ ಮತ್ತು ‘ರಾಜಕೀಯ ಪ್ರೇರಿತ’ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಆಫರ್‌ ಒಪ್ಪಿಕೊಂಡರೆ ಮಾತ್ರ INDIA ದಲ್ಲಿ ಮುಂದುವರಿಕೆ- ಕಾಂಗ್ರೆಸ್‌ಗೆ ಎಸ್‌ಪಿ ಷರತ್ತು

    ಇತ್ತೀಚಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಹಾಜರಾದ ಅರವಿಂದ್ ಕೇಜ್ರಿವಾಲ್, ದೆಹಲಿ ವಿಧಾನಸಭೆಯಲ್ಲಿ ವಿಶ್ವಾಸ ನಿರ್ಣಯದ ಚರ್ಚೆ ನಡೆಯುತ್ತಿದೆ. ಅಧಿವೇಶನದಿಂದಾಗಿ ಅವರು ನ್ಯಾಯಾಲಯದ ಮುಂದೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಕೇಜ್ರಿವಾಲ್ ಮನವಿ ಆಲಿಸಿದ ನ್ಯಾಯಾಲಯವು ಮಾರ್ಚ್ 16 ರಂದು ಬೆಳಿಗ್ಗೆ 10 ಗಂಟೆಗೆ ದೈಹಿಕವಾಗಿ ಹಾಜರಾಗಲು ಮುಂದಿನ ದಿನಾಂಕವನ್ನು ನಿಗದಿಪಡಿಸಿದೆ. ಇದನ್ನೂ ಓದಿ: NDA ಸೇರುತ್ತಾರಾ ನವನಿರ್ಮಾಣ ಸೇನೆಯ ರಾಜ್‌ ಠಾಕ್ರೆ?

  • ಮನೀಶ್ ಸಿಸೋಡಿಯಾಗೆ ಮಧ್ಯಂತರ ಜಾಮೀನು ನೀಡದ ಸುಪ್ರೀಂ

    ಮನೀಶ್ ಸಿಸೋಡಿಯಾಗೆ ಮಧ್ಯಂತರ ಜಾಮೀನು ನೀಡದ ಸುಪ್ರೀಂ

    ನವದೆಹಲಿ: ಹೊಸ ಮದ್ಯ ನೀತಿ ಪ್ರಕರಣದಲ್ಲಿ (Excise Policy) ಜಾರಿ ನಿರ್ದೇಶನಾಲಯದಿಂದ (ED) ಬಂಧನಕ್ಕೊಳಪಟ್ಟಿರುವ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರಿಗೆ ಮಧ್ಯಂತರ ಜಾಮೀನು ನೀಡಲು ಸುಪ್ರೀಂಕೋರ್ಟ್ (Supreme Court) ನಿರಾಕರಿಸಿದೆ. ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಖನ್ನಾ ನೇತೃತ್ವದ ಪೀಠ ಜಾಮೀನು ನಿರಾಕರಿಸಿದೆ.

    ಮನೀಶ್ ಸಿಸೋಡಿಯಾ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, ಸಿಸೋಡಿಯಾ ಪತ್ನಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಏಪ್ರಿಲ್‌ನಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೃದ್ಧ ತಾಯಿಯೊಂದಿಗೆ ಅವರು ವಾಸಿಸುತ್ತಿದ್ದು, ಮಗ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪತ್ನಿಯ ಆರೋಗ್ಯ ನೋಡಿಕೊಳ್ಳುವ ಅಗತ್ಯವಿರುವ ಹಿನ್ನೆಲೆ ಒಂದೆರಡು ವಾರಗಳ ಕಾಲ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.

    ಇದೇ ವೇಳೆ ಅವರು ಕೋರ್ಟ್‌ಗೆ ಪೂರಕ ದಾಖಲೆಗಳನ್ನು ಸಲ್ಲಿಸಿದರು. ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಧೀಶರು ಸಿಸೋಡಿಯಾ ಪತ್ನಿಯ ಆರೋಗ್ಯದಲ್ಲಿ ಸ್ಥಿರತೆ ಕಂಡು ಬಂದಿದ್ದು ಜಾಮೀನು ಅರ್ಜಿಯನ್ನು ಮುಂದಿನ ದಿನಗಳಲ್ಲಿ ವಿಚಾರಣೆ ನಡೆಸುವುದಾಗಿ ಹೇಳಿದರು. ಅರ್ಜಿಯನ್ನು ಸೆಪ್ಟೆಂಬರ್ 4 ಕ್ಕೆ ಮುಂದೂಡಲಾಯಿತು. ಇದನ್ನೂ ಓದಿ: ಉಡುಪಿಯಲ್ಲಿ ಪ್ರಚೋದನಕಾರಿ ಭಾಷಣ – ಶರಣ್ ಪಂಪ್‍ವೆಲ್ ವಿರುದ್ಧ ಕೇಸ್

    ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಸಿಬಿಐ ಕೂಡಾ ಇದೇ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಸಿಸೋಡಿಯಾ ಪ್ರಭಾವಿ ವ್ಯಕ್ತಿಯಾಗಿರುವ ಹಿನ್ನೆಲೆ ಅವರಿಗೆ ಜಾಮೀನು ನೀಡುವುದು ಅಪಾಯಕಾರಿ ಎಂದು ಈ ಹಿಂದೆ ಇಡಿ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿತ್ತು. ಇದನ್ನೂ ಓದಿ: ಕೇದಾರನಾಥ ಮಾರ್ಗದಲ್ಲಿ ಭಾರಿ ಭೂಕುಸಿತ – ಹಲವರ ಸಮಾಧಿ ಶಂಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • CBI ದಾಳಿ: ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಆಪ್ತ ಅರೆಸ್ಟ್

    CBI ದಾಳಿ: ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಆಪ್ತ ಅರೆಸ್ಟ್

    ನವದೆಹಲಿ: ಅಬಕಾರಿ ನೀತಿ (Excise Policy) ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರ ಆಪ್ತ ವಿಜಯ್ ನಾಯರ್‌ (Vijay Nair) ನನ್ನು ಸಿಬಿಐ ಬಂಧಿಸಿದೆ.

    ಅಬಕಾರಿ ನೀತಿ ಪ್ರಕರಣದಲ್ಲಿ ಇದೇ ಮೊದಲ ಬಂಧನವಾಗಿದೆ. ಓನ್ಲಿ ಮಚ್ ಲೌಡರ್ ಎಂಟರ್‌ಟೈನ್‌ಮೆಂಟ್ ಮತ್ತು ಈವೆಂಟ್ ಮೀಡಿಯಾ ಕಂಪನಿಯ ಮಾಜಿ ಸಿಇಒ ಆಗಿದ್ದ ವಿಜಯ್ ನಾಯರ್ (Vijay Nair) ಪ್ರಮುಖ ಸಂಚುಕೋರರಲ್ಲಿ ಒಬ್ಬರಾಗಿದ್ದಾರೆ ಎಂದು ಸಿಬಿಐ (CBI) ಮೂಲಗಳು ತಿಳಿಸಿವೆ. ಇದನ್ನೂ ಓದಿ: ಆಪ್ ಸರ್ಕಾರದ ವಿರುದ್ಧ ಎಲ್‍ಜಿ ವಾರ್ – ಮನೀಷ್ ಸಿಸೋಡಿಯಾ ವಿರುದ್ಧ ತನಿಖೆಗೆ ಸೂಚನೆ

    ಕಳೆದ ಆಗಸ್ಟ್ 19 ರಂದು ಸಿಬಿಐ ನಡೆಸಿದ ದಾಳಿಯಲ್ಲಿ ವಿಜಯ್ ನಾಯರ್ ನಾಪತ್ತೆಯಾಗಿದ್ದರು. ನಂತರ 8 ಆರೋಪಿಗಳಿಗೆ ಆಗಸ್ಟ್ 21ರಂದು ಲುಕ್‌ಔಟ್ ನೋಟಿಸ್ (LOC) ನೀಡಲಾಗಿತ್ತು. ಇದರಲ್ಲಿ ಉದ್ಯಮಿ ವಿಜಯ್ ನಾಯರ್ ಸಹ ಸೇರಿದ್ದರು ಎಂದು ತನಿಖಾ ಸಂಸ್ಥೆ ಹೇಳಿದೆ. ಇದನ್ನೂ ಓದಿ: ನನ್ನನ್ನು ಬಂಧಿಸುವಂತೆ ಒತ್ತಡ ಹಾಕಿದ್ದಕ್ಕೆ ಸಿಬಿಐ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ: ಮನೀಶ್ ಸಿಸೋಡಿಯಾ

    ಇದೀಗ ಬಂಧಿತನಾಗಿರುವ ವಿಜಯ್ ನಾಯರ್ ದೇಶದಿಂದ ಪಲಾಯನ ಮಾಡಿರಲಿಲ್ಲ. ವೈಯಕ್ತಿಕ ಕೆಲಸದ ಕಾರಣಗಳಿಂದ ವಿಶ್ರಾಂತಿಯಲ್ಲಿದ್ದೆ ಎಂದು ಸ್ಪಷ್ಟಪಡಿಸಿದ್ದಾರಲ್ಲದೇ, ಸಿಬಿಐನೊಂದಿಗೆ ಸಂಪರ್ಕದಲ್ಲಿದ್ದು ಎಲ್ಲ ರೀತಿಯಲ್ಲೂ ತನಿಖೆಗೆ ಸಹಕರಿಸುವುದಾಗಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೆಹಲಿ ಸರ್ಕಾರದಿಂದ ಹೊಸ ಅಬಕಾರಿ ನೀತಿ – ಬೆಳಗಿನ ಜಾವ 3ರವರೆಗೆ ಬಾರ್ ಓಪನ್

    ದೆಹಲಿ ಸರ್ಕಾರದಿಂದ ಹೊಸ ಅಬಕಾರಿ ನೀತಿ – ಬೆಳಗಿನ ಜಾವ 3ರವರೆಗೆ ಬಾರ್ ಓಪನ್

    ನವದೆಹಲಿ: ನಗರದಲ್ಲಿ ಆದಾಯ ಹೆಚ್ಚಿಸಲು ಹಾಗೂ ಮದ್ಯ ಮಾಫಿಯಾವನ್ನು ತಡೆಗಟ್ಟುವ ಉದ್ದೇಶದಿಂದಾಗಿ ದೆಹಲಿ ಸರ್ಕಾರ 2021-20221ರ ಹೊಸ ಅಬಕಾರಿ ನೀತಿಯನ್ನು ಪ್ರಕಟಿಸಿದೆ.

    ರಾಷ್ಟ್ರ ರಾಜಧಾನಿಯಲ್ಲಿ ಮದ್ಯದಂಗಡಿ ಪರವಾನಗಿ ಪಡೆದ ಪರವಾನಗಿದಾರರು ಹೋಟೆಲ್, ಕ್ಲಬ್ ಮತ್ತು ರೆಸ್ಟೋರೆಂಟ್, ಬಾರ್‌ಗಳಲ್ಲಿ ಬೆಳಗಿನ ಜಾವ 3ಗಂಟೆವರೆಗೆ ಕಾರ್ಯನಿರ್ವಹಿಸಲು ಅನುಮತಿ ನೀಡಿದೆ.

    ದೆಹಲಿ ಸರ್ಕಾರವು ನಗರದಲ್ಲಿ ವಿಂಗಡಿಸಿರುವ 32 ವಲಯಗಳಲ್ಲಿ ಎಲ್-7ವಿ(ಭಾರತೀಯ ಮತ್ತು ವಿದೇಶಿ ಮದ್ಯ)ಪರವಾನಗಿಗಳಿಗೆ ಟೆಂಡರ್ ನೀಡಿದೆ. ಜೊತೆಗೆ ಮದ್ಯವನ್ನು ಡೋರ್ ಡೆಲಿವರಿ ಕೂಡ ಒದಗಿಸಲಾಗುತ್ತಿದ್ದು, ಈ ಕುರಿತ ಮಾಹಿತಿ ವೆಬ್‍ಸೈಟ್‍ಗಳಲ್ಲಿ ಸಿಗಲಿದೆ.

    ಅಬಕಾರಿಯ ಈ ಹೊಸ ನೀತಿಯನ್ನು ಜನರಿಗಾಗಿ ಜಾರಿಗೊಳಿಸಲಾಗಿದ್ದು, ಎಲ್-7ವಿ(ಭಾರತೀಯ ಮತ್ತು ವಿದೇಶಿ ಮದ್ಯ) ರೂಪದಲ್ಲಿ ಚಿಲ್ಲರೆ ಮಾರಾಟವನ್ನು ಯಾವುದೇ ಮಾರುಕಟ್ಟೆ, ಮಾಲ್, ಕಮರ್ಷಿಯಲ್ ರೋಡ್ ಮತ್ತು ಏರಿಯಾ, ಸ್ಥಳೀಯ ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಇನ್ನಿತರ ರಸ್ತೆಗಳಲ್ಲಿ ತೆರೆಯಬಹುದಾಗಿದೆ. ಇದನ್ನೂ ಓದಿ: ಐಸಿಯುನಲ್ಲಿ ಐಸ್‍ಕ್ರೀಂ ತಿಂದ ಮಹಿಳೆ ಸಾವು