Tag: Excise Minister

  • ಶೀಘ್ರದಲ್ಲಿ ಬಾರ್, ಕ್ಲಬ್, ಪಬ್ ಓಪನ್ ಸಾಧ್ಯತೆ: ಎಚ್.ನಾಗೇಶ್

    ಶೀಘ್ರದಲ್ಲಿ ಬಾರ್, ಕ್ಲಬ್, ಪಬ್ ಓಪನ್ ಸಾಧ್ಯತೆ: ಎಚ್.ನಾಗೇಶ್

    ಬೆಂಗಳೂರು: ಶೀಘ್ರದಲ್ಲಿ ಬಾರ್, ಕ್ಲಬ್ ಮತ್ತು ಪಬ್ ಓಪನ್ ಆಗುವ ಸಾಧ್ಯತೆ ಇದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.

    ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಮಾತನಾಡಿದ ಎಚ್.ನಾಗೇಶ್, ಶೀಘ್ರದಲ್ಲಿ ಬಾರ್, ಕ್ಲಬ್ ಮತ್ತು ಪಬ್ ಓಪನ್ ಆಗುವ ಸಾಧ್ಯತೆ ಇದೆ. ಈ ವಿಚಾರದಲ್ಲಿ ಸಿಎಂ ಜೊತೆಗೆ ನಾನು ಚರ್ಚೆ ನಡೆಸುವೆ. ಬಾರ್ ಮತ್ತು ಪಬ್ ಕಾರ್ಮಿಕರಿಗೆ ತೊಂದರೆಯಾಗಿದೆ. ಕ್ಲಬ್‍ಗಳಲ್ಲಿ ಸ್ಪೋರ್ಟ್ಸ್ ಚಟುವಟಿಕೆಯನ್ನು ಇಂದಿನಿಂದ ಆರಂಭವಾಗಿದೆ. ಅಲ್ಲಿ ಪಾರ್ಸಲ್‍ಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದರು.

    ಅಬಕಾರಿ ಇಲಾಖೆಗೆ ಲಾಕ್‍ಡೌನ್‍ನಿಂದ 3,000 ಕೋಟಿ ನಷ್ಟವಾಗಿತ್ತು. ಈಗ ಅದು 2,000 ಕೋಟಿಗೆ ಬಂದು ನಿಂತಿದೆ. ಮುಂದಿನ 8 ತಿಂಗಳಲ್ಲಿ ನಷ್ಟವನ್ನ ಸರಿದೂಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಬಾರ್, ಕ್ಲಬ್ ಓಪನ್ ಆದರೆ ವ್ಯಾಪಾರ ಆಗಬಹುದು. ಆಗ ಲಾಕ್‍ಡೌನ್‍ನಲ್ಲಿ ಉಂಟಾದ ನಷ್ಟವನ್ನು ಭರಿಸಬಹುದು. ಹೀಗಾಗಿ ನಮ್ಮ ಇಲಾಖೆಯ ಅಧಿಕಾರಿಗಳು ಚರ್ಚೆ ಮಾಡುತ್ತಿದ್ದೇವೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.

    ಮನೆ ಮನೆಗೆ ಮಧ್ಯ ಸರಬರಾಜು ವಿಚಾರವಾಗಿ ಮಾತನಾಡಿದ ಅವರು, ಬೇರೆ ರಾಜ್ಯದ ಅನಿಸಿಕೆ, ಅಭಿಪ್ರಾಯ ಪಡೆದು ಮುಂದಿನ ಕ್ರಮದ ಚಿಂತನೆ ಮಾಡುತ್ತೀವೆ ಎಂದರು.

    ಅಕ್ರಮವಾಗಿ ಮನೆ, ಅಂಗಡಿಗಳಲ್ಲಿ ಮಧ್ಯ ಮಾರಾಟ ಮಾಡುತ್ತಿರುವವವ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಈ ಕುರಿತು ತನಿಖೆ ನಡೆಯುತ್ತಿದೆ. ಒಂದು ವೇಳೆ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದರೆ ನಿರ್ದಾಕ್ಷಿಣ್ಯವಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು

  • ಮದ್ಯಪ್ರಿಯರಿಗೆ ಮತ್ತೊಂದು ಗುಡ್‍ನ್ಯೂಸ್- ನಾಳೆಯಿಂದ ಬಾರ್, ಕ್ಲಬ್‍ಗಳಲ್ಲೂ ಸಿಗುತ್ತೆ ಎಣ್ಣೆ

    ಮದ್ಯಪ್ರಿಯರಿಗೆ ಮತ್ತೊಂದು ಗುಡ್‍ನ್ಯೂಸ್- ನಾಳೆಯಿಂದ ಬಾರ್, ಕ್ಲಬ್‍ಗಳಲ್ಲೂ ಸಿಗುತ್ತೆ ಎಣ್ಣೆ

    – ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಖರೀದಿಗೆ ಅವಕಾಶ
    – ಎಂಆರ್‌ಪಿ ಬೆಲೆಗಿಂತ ಹೆಚ್ಚಿಗೆ ಮಾರಾಟ ಮಾಡಿದ್ರೆ ಲೈಸನ್ಸ್ ರದ್ದು

    ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ಸುಮಾರು ಒಂದೂವರೆ ತಿಂಗಳ ನಂತರ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಮೂಲಕ ಸರ್ಕಾರ ಮದ್ಯಪ್ರಿಯರಿಗೆ ಸಿಹಿ ಸುದ್ದಿ ನೀಡಿತ್ತು. ಇದೀಗ ಬಾರ್, ಕ್ಲಬ್‍ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಮೂಲಕ ಮತ್ತೆ ಎಣ್ಣೆಪ್ರಿಯರಿಗೆ ಸರ್ಕಾರ ಗುಡ್‍ನ್ಯೂಸ್ ನೀಡಿದೆ.

    ಈ ಕುರಿತು ಅಬಕಾರಿ ಸಚಿವ ನಾಗೇಶ್ ಸುದ್ದಿಗೋಷ್ಠಿ ನಡೆಸಿದ್ದು, ಐದನೇ ದಿನಕ್ಕೆ 122.16 ಕೋಟಿ ತೆರಿಗೆ ಸಂಗ್ರಹ ಆಗಿದೆ. ಯಾಕೆಂದರೆ ಇಂದಿನಿಂದ ತೆರಿಗೆ ಅಧಿಕವಾಗಿದ್ದರಿಂದ ಆದಾಯವೂ ಹೆಚ್ಚಾಗಿದೆ. ಈ ಮೂಲಕ ಸರ್ಕಾರಕ್ಕೆ ಒಟ್ಟು 767 ಕೋಟಿ ಆದಾಯ ಬಂದಿದೆ. ಗಡಿಭಾಗದಲ್ಲಿ ಆಧಾರ್ ಪರೀಕ್ಷಿಸಿ ಮದ್ಯ ನೀಡಲು ಸೂಚನೆ ನೀಡಿದ್ದೆ. ಲಾಕ್‍ಡೌನ್ ಬಳಿಕ ಮದ್ಯದ ಅಂಗಡಿ ಓಪನ್ ಆದ ಬಳಿಕ ಮೊದಲು ನೂಕುನುಗ್ಗಲು ಉಂಟಾಗಿತ್ತು ಎಂದರು.

    ನಾಳೆಯಿಂದ ಲಾಡ್ಜ್, ಬಾರ್, ಕ್ಲಬ್‍ಗಳಲ್ಲಿ ಮದ್ಯ ಮಾರಾಟ ಮಾಡಬಹುದು. ಬಾರ್ ಆ್ಯಂಡ್ ರೆಸ್ಟೋರೆಂಟ್, ಕ್ಲಬ್, ಮಾಲೀಕರು ನಮ್ಮಲ್ಲಿರುವ ಸ್ಟಾಕನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಸಿಎಂ ಜೊತೆ ಮಾತನಾಡಿದ್ದೆ. ಹೀಗಾಗಿ ಇಂದು ಸಂಜೆಯಿಂದ ಅಥವಾ ನಾಳೆಯಿಂದ ಅವುಗಳು ಓಪನ್ ಆಗುತ್ತವೆ. ಬಾರ್, ಕ್ಲಬ್ ಮತ್ತು ಲಾಡ್ಜ್ ಗಳಲ್ಲೂ ಪಾರ್ಸಲ್‍ಗೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಿಎಂ ಯಡಿಯೂರಪ್ಪ ಅನುಮತಿ ನೀಡಿದ್ದಾರೆ ಎಂದು ಹೇಳಿದರು.

    ಬಾರ್ ಆ್ಯಂಡ್ ರೆಸ್ಟೋರೆಂಟ್, ಕ್ಲಬ್, ಸಿಎಲ್7, ಸಿಎಲ್4, ಸಿಎಲ್‍ವೈನ್ ಈ ಲೈಸನ್ಸ್ ಇರುವವರು ಓಪನ್ ಮಾಡಬಹುದು. ಎಂಆರ್‌ಪಿ ಬೆಲೆಗೆ ಮಾತ್ರ ಮಾರಾಟ ಮಾಡಬೇಕು. ಎಂಆರ್‌ಪಿ ಬೆಲೆಗಿಂತ ಹೆಚ್ಚಿಗೆ ಮಾರಾಟ ಮಾಡಿದರೆ ಲೈಸನ್ಸ್ ರದ್ದು ಮಾಡಲಾಗುತ್ತಿದೆ. ಇದರ ಜವಾಬ್ದಾರಿ ಮಾಲೀಕರ ಮೇಲಿರುತ್ತದೆ. ಖರೀದಿ ಸಮಯ ಬೆಳಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ ಮಾತ್ರ ಇರುತ್ತದೆ.

    ಸುಪ್ರೀಂಕೋರ್ಟ್ ನೀಡಿದ ಆದೇಶ ನೋಡಿಲ್ಲ. ಆನ್‍ಲೈನ್ ಮಾರಾಟಕ್ಕೆ ಅವಕಾಶ ನೀಡಿದರೆ ತಪ್ಪಿಲ್ಲ. ಮೊದಲಿಂದಲೂ ಆ ಬಗ್ಗೆ ಚರ್ಚೆ ಇತ್ತು. ಪ್ರತಿವರ್ಷ ಅಬಕಾರಿ ಆದಾಯ ಸರ್ಕಾರಕ್ಕೆ 25 ಸಾವಿರ ಕೋಟಿ ಬರಲಿದೆ. ಈ ವರ್ಷ 2,500 ಕೋಟಿ ಹೆಚ್ಚಾಗಲಿದೆ ಎಂದರು.

  • ಅಬಕಾರಿ ಸಚಿವರ ಜಿಲ್ಲೆಯಲ್ಲೇ ಅಕ್ರಮ ಮದ್ಯ ಮಾರಾಟ

    ಅಬಕಾರಿ ಸಚಿವರ ಜಿಲ್ಲೆಯಲ್ಲೇ ಅಕ್ರಮ ಮದ್ಯ ಮಾರಾಟ

    – ಓಟಿ ಕ್ವಾಟರ್ ಗೆ 800 ರೂ, ಬಿಯರ್ 1 ಸಾವಿರ ರೂ.

    ಕೋಲಾರ: ಅಬಕಾರಿ ಸಚಿವ ಎಚ್.ನಾಗೇಶ್ ಜಿಲ್ಲೆಯಲ್ಲೇ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಸಾಮಾನ್ಯ ದರಕ್ಕಿಂತ ಹತ್ತು ಪಟ್ಟು ಹೆಚ್ಚಳ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

    ಕೋಲಾರ ಹೊರವಲಯದ ಟಮಕದ ಕಾಲೋನಿಯಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಜಿಲ್ಲೆಯ ಬಹುತೇಕ ಬಾರ್‍ಗಳಲ್ಲಿ ಮದ್ಯ ಖಾಲಿಯಾಗಿದ್ದು, ಕೆಲವೇ ಬಾರ್‍ಗಳಲ್ಲಿ ಸ್ಟಾಕ್ ಇದೆ. ಬಾಗಿಲು ಕ್ಲೋಸ್ ಮಾಡಿ ಹಿಂದೆ ಬಾಗಿಲು ತೆರೆದು ಬಾರ್ ಮಾಲೀಕರು ಮಾರಾಟ ಮಾಡಲಾಗುತ್ತಿದೆ. ಹತ್ತು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು, ಜಿಲ್ಲೆಯಾದ್ಯಂತ ಅಕ್ರಮವಾಗಿ ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.

    ಐ ವೋಲ್ಟ್ಸ್ ಕ್ವಾಟರ್ ಗೆ 70 ರೂ. ಬೆಲೆಯ ಇದೆ. ಆದರೆ 650 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಓಟಿ ಕ್ವಾಟರ್ ಗೆ 85 ರೂ., ಇದೀಗ 800 ರೂ.ಗೆ ಮಾರಾಟ. ಬಿಯರ್ 130 ರೂಪಾಯಿ ಇದ್ದಿದ್ದನ್ನು 1000 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಕುಡುಕರು ವಿಧಿ ಇಲ್ಲದೆ ಅಧಿಕ ಬೆಲೆಕೊಟ್ಟು ಕುಡಿಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಲಾಕ್‍ಡೌನ್ ವೇಳೆ ಎಂಎಸ್ ಐಎಲ್ ಬಾರ್ ಗಳನ್ನು ತೆರೆಯುವಂತೆ ಕುಡುಕರ ಪಟ್ಟು ಹಿಡಿದಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

  • ದೂರದಿಂದ್ಲೇ ಎಣ್ಣೆ ಖರೀದಿಸ್ತೀವಿ ಅಂಗಡಿ ಓಪನ್ ಮಾಡಿ ಪ್ಲೀಸ್ – ಸಿಎಂಗೆ ಕುಡುಕನ ಪತ್ರ

    ದೂರದಿಂದ್ಲೇ ಎಣ್ಣೆ ಖರೀದಿಸ್ತೀವಿ ಅಂಗಡಿ ಓಪನ್ ಮಾಡಿ ಪ್ಲೀಸ್ – ಸಿಎಂಗೆ ಕುಡುಕನ ಪತ್ರ

    ಬೆಂಗಳೂರು: ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ದೇಶವೇ ಲಾಕ್‍ಡೌನ್ ಆಗಿದೆ. ಒಂದೆಡೆ ಜನ ಸಾಮಾನ್ಯರು ದಿನ ಬಳಕೆಯ ಅಗತ್ಯ ವಸ್ತುಗಳ ಖರೀದಿಗೆ ಪರದಾಡುತ್ತಿದ್ದರೆ, ಇನ್ನೊಂದೆಡೆ ಮದ್ಯ ಸಿಗದೇ ಕುಡುಕರ ಕಷ್ಟ ತಾರಕ್ಕಕ್ಕೇರಿದೆ.

    ಲಾಕ್‍ಡೌನ್‍ನಿಂದ ಮದ್ಯ ಮಾರಾಟ ಸ್ಥಗಿತಗೊಂಡಿರುವ ಕಾರಣಕ್ಕೆ ಸದ್ಯ ರಾಜ್ಯದಲ್ಲಿ ಕುಡುಕರಿಗೆ ಎಣ್ಣೆ ಸಿಗದೆ ಹುಚ್ಚರಂತಾಗಿದ್ದಾರಂತೆ. ಈ ಹಿನ್ನೆಲೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹಾಗೂ ಅಬಕಾರಿ ಸಚಿವರಿಗೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ ವಿ. ಮಂಜುನಾಥ್ ಎಂಬಾತ ಪತ್ರ ಬರೆದಿದ್ದಾನೆ. ಸದ್ಯ ಸರ್ಕಾರದ ತೀರ್ಮಾನದಿಂದ ಮದ್ಯ ಪ್ರಿಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಯವಿಟ್ಟು ಮದ್ಯದಂಗಡಿ ತೆರೆಯಿರಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ಮದ್ಯ ಖರೀದಿ ಮಾಡ್ತೇವೆ ಎಂದು ಕುಡುಕ ಗೋಗರೆದಿದ್ದಾನೆ.

    ರಾಜ್ಯದಲ್ಲಿ ಆರೂವರೆ ಕೋಟಿ ಜನಸಂಖ್ಯೆ ಇದೆ. ಅದರಲ್ಲಿ ಮೂರು ಮುಕ್ಕಾಲು ಕೋಟಿ ಜನರು ಮದ್ಯ ಪ್ರಿಯರಿದ್ದಾರೆ. ಬೆಳಗ್ಗೆ 9ರಿಂದ 12ರವರೆಗೆ ಎಂಎಸ್‍ಐಎಲ್ ಹೋಲ್‍ಸೇಲ್ ಮದ್ಯದ ಅಂಗಡಿ ಓಪನ್ ಮಾಡಿ ಖರೀದಿಗೆ ಅವಕಾಶ ಕೊಡಬೇಕು. ನಾವು 6 ಅಡಿ ದೂರದಲ್ಲಿ ನಿಂತು ಎಣ್ಣೆ ಖರೀದಿ ಮಾಡ್ತೀವಿ. ಮುಖ್ಯಮಂತ್ರಿ ಹಾಗೂ ಅಬಕಾರಿ ಸಚಿವರಿಗೆ ದಯವಿಟ್ಟು ನಮ್ಮ ಮನವಿಗೆ ಸಹಕರಿಸಬೇಕು ಎಂದು ವಾಟ್ಸಪ್ ನಲ್ಲಿ ಪತ್ರ ಬರೆದು ಕುಡುಕ ಕೋರಿಕೊಂಡಿದ್ದಾನೆ.

  • ಬೆಂಗ್ಳೂರಿನಲ್ಲಿ ನೀರಾ ಮಾರಾಟದ ಮಾಹಿತಿಯೇ ನನಗಿಲ್ಲ- ಎಚ್.ನಾಗೇಶ್

    ಬೆಂಗ್ಳೂರಿನಲ್ಲಿ ನೀರಾ ಮಾರಾಟದ ಮಾಹಿತಿಯೇ ನನಗಿಲ್ಲ- ಎಚ್.ನಾಗೇಶ್

    ಉಡುಪಿ: ಬೆಂಗಳೂರಿನಲ್ಲಿ ಹತ್ತಕ್ಕೂ ಹಚ್ಚು ಪ್ರದೇಶಗಳಲ್ಲಿ ನೀರಾ ಬಾರ್‌ಗಳಿಗೆ ಅಬಕಾರಿ ಇಲಾಖೆ ಅಧಿಕಾರಿಗಳು ಅನುಮತಿ ನೀಡಿದ್ದು ಅಬಕಾರಿ ಸಚಿವ ಎಚ್.ನಾಗೇಶ್ ಅವರಿಗೆ ಈ ಮಾಹಿತಿಯೇ ಗೊತ್ತಿಲ್ವಂತೆ.

    ರಾಜಧಾನಿಯ ನೀರಾ ಬಾರ್ ಬಗ್ಗೆ ಶನಿವಾರ ಉಡುಪಿಯಲ್ಲಿ ಪ್ರಶ್ನಿಸುತ್ತಿದ್ದಂತೆ ಅಬಕಾರಿ ಸಚಿವ ನಾಗೇಶ್ ಅವರು ಅಚ್ಚರಿಗೊಂಡರು. ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಅಧಿಕಾರಿಗಳು ಅನುಮತಿ ನೀಡಿರಬೇಕು. ಬೆಂಗಳೂರು ತಲುಪಿದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸುತ್ತೇನೆ ಎಂದರು.

    ತೆಂಗು ಬೆಳೆಗಾರರಿಗೆ ಉತ್ತೇಜನ ನೀಡಬೇಕು ಎಂಬ ನಿಟ್ಟಿನಲ್ಲಿ ರಾಜಧಾನಿಯ ಹತ್ತಕ್ಕೂ ಅಧಿಕ ಕಡೆಗಳಲ್ಲಿ ನೀರಾ ಬಾರ್ ತೆರೆಯಲು ಇಲಾಖೆ ಅನುಮತಿ ನೀಡಿದ್ದಾರೆ. ಆದರೆ ಇಲಾಖೆಯ ಈ ಬಗ್ಗೆ ಬೆಂಗಳೂರಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ಪಡೆದು ಮಾಧ್ಯಮಗಳಿಗೆ ಬೆಂಗಳೂರಿನಲ್ಲೇ ನನ್ನ ಅಭಿಪ್ರಾಯ ತಿಳಿಸುತ್ತೇನೆ ಎಂದರು.

    ಸಚಿವರಿಗೆ ಮಾಹಿತಿಯೇ ನೀಡದೆ ಅಧಿಕಾರಿಗಳು ಪರವಾನಿಗೆ ಕೊಟ್ರಾ? ರೈತರನ್ನು ಮುಂದಿಟ್ಟು ರಾಜಧಾನಿಯ ನಾಗರೀಕರಿಗೆ ನನೀರಾ ಕುಡಿಸಲು ಹೊರಟ್ರಾ ಎಂಬೂದು ಸದ್ಯ ಇರುವ ಪ್ರಶ್ನೆ.