Tag: Excise

  • ಗ್ಯಾರಂಟಿಗಾಗಿ ಸಂಪನ್ಮೂಲ ಕ್ರೋಢೀಕರಣ – ಜುಲೈ 1ರಿಂದ ಅಗ್ಗದ ಮದ್ಯ ದುಬಾರಿ

    ಗ್ಯಾರಂಟಿಗಾಗಿ ಸಂಪನ್ಮೂಲ ಕ್ರೋಢೀಕರಣ – ಜುಲೈ 1ರಿಂದ ಅಗ್ಗದ ಮದ್ಯ ದುಬಾರಿ

    ಬೆಂಗಳೂರು: ಮದ್ಯ ಪ್ರಿಯರಿಗೆ ಸರ್ಕಾರದಿಂದ ಶಾಕ್ ಸಿಗಲಿದೆ. ಬಜೆಟ್‌ನಲ್ಲಿ (Karnataka Budget) ಪ್ರಕಟಿಸಿದಂತೆ ಜುಲೈ ಒಂದರಿಂದ ರಾಜ್ಯದಲ್ಲಿ ಮದ್ಯದ ಬೆಲೆಗಳಲ್ಲಿ (Liquor Price) ಏರಿಳಿತ ಆಗಲಿದೆ.

    ಅಗ್ಗದ ಬೆಲೆಯ ಮದ್ಯಗಳು ದುಬಾರಿಯಾದರೆ ದುಬಾರಿ ಮದ್ಯಗಳ ದರದಲ್ಲಿ ಸ್ವಲ್ಪ ಪ್ರಮಾಣದ ಇಳಿಕೆ ಆಗಲಿದೆ. ಅಗ್ಗದ ಮದ್ಯದ ಬೆಲೆ ಹೆಚ್ಚಿಸುವ ಈ ಮೂಲಕ ಬಡ ಎಣ್ಣೆ ಪ್ರಿಯರ ಮೇಲೆ ಮತ್ತಷ್ಟು ಭಾರ ಹಾಕಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದನ್ನೂ ಓದಿ: 31 ತಿಂಗಳ ನಂತರ ಈಡೇರಿತು ಪ್ರತಿಜ್ಞೆ- ಮುಖ್ಯಮಂತ್ರಿಯಾಗಿ ವಿಧಾನಸಭೆಗೆ ಕಾಲಿಟ್ಟ ಚಂದ್ರಬಾಬು ನಾಯ್ಡು

    ಹೆಚ್‌ಡಿಕೆ ವ್ಯಂಗ್ಯ:
    ಮದ್ಯದ ದರ ಇಳಿಕೆಗೆ ಕೇಂದ್ರ ಮಂತ್ರಿ ಕುಮಾರಸ್ವಾಮಿ (HD Kumaraswamy) ವ್ಯಂಗ್ಯವಾಡಿದ್ದಾರೆ. ಈಗ ಎಣ್ಣೆ ದರ ಇಳಿಸ್ತಾರ? ಜ್ಞಾನೋದಯ ಆಗಿದ್ಯಾ ಅಂತಾ ಕಾಲೆಳೆದಿದ್ದಾರೆ. ಮದ್ಯದ ದರ ಹೆಚ್ಚಳವನ್ನು ಗ್ಯಾರಂಟಿಗಳಿಗೆ ಲಿಂಕ್ ಮಾಡಿದ್ದಾರೆ.

    ಈ ಬಗ್ಗೆ ಮಾತನಾಡಲು ವಿಪಕ್ಷಗಳಿಗೆ ನೈತಿಕತೆ ಇಲ್ಲ ಎಂದು ಅಬಕಾರಿ ಸಚಿವ (Excise Minister) ಆರ್‌ಬಿ ತಿಮ್ಮಾಪುರ (RB Thimmapur) ಕಿಡಿಕಾರಿದ್ದಾರೆ. ಯಾವ್ಯಾವ ದರ ಎಷ್ಟು ಆಗುತ್ತದೆ ಎಂಬುದನ್ನು ತಿಳಿಯಲು ಜುಲೈ 1ರವರೆಗೆ ಕಾದು ನೋಡಿ ಎಂದಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆಗೆ ಸಂಚು ರೂಪಿಸಿದ್ದೇ ಪವಿತ್ರಾಗೌಡ – ಹೊಸ ರಿಮ್ಯಾಂಡ್‌ ಕಾಪಿಯಲ್ಲಿ ಏನಿದೆ?

  • ಮೈಸೂರಿನಲ್ಲಿ 98.52 ಕೋಟಿ ರೂ. ಮೊತ್ತದ ಬಿಯರ್ ಜಪ್ತಿ

    ಮೈಸೂರಿನಲ್ಲಿ 98.52 ಕೋಟಿ ರೂ. ಮೊತ್ತದ ಬಿಯರ್ ಜಪ್ತಿ

    ಮೈಸೂರು: ಇಲ್ಲಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಯುನೈಟೆಡ್ ಬ್ರಿವರೀಸ್ ಲಿಮಿಟೆಡ್ ಘಟಕದ ಮೇಲೆ ಅಬಕಾರಿ (Excise) ಜಂಟಿ ಆಯುಕ್ತರು ದಾಳಿ ನಡೆಸಿದ್ದು, ಒಟ್ಟು 98.52 ಕೋಟಿ ರೂ. ಮೊತ್ತದ ಬಿಯರ್ ದಾಸ್ತಾನು ಜಪ್ತಿ ಮಾಡಿದ್ದಾರೆ.

    ಮೈಸೂರು (Mysuru) ಜಿಲ್ಲೆಯ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಬಿಯರ್ (Beer) ತಯಾರಿಕಾ ಘಟಕದಲ್ಲಿ ಸರ್ಕಾರಕ್ಕೆ ತೋರಿಸಿರುವ ದಾಸ್ತಾನು ಲೆಕ್ಕಕ್ಕಿಂತ ಅಧಿಕ ದಾಸ್ತಾನು ಸಂಗ್ರಹ ಪತ್ತೆಯಾಗಿದೆ. 7000 ಸಾವಿರ ವಿವಿಧ ಬ್ರಾಂಡಿನ ಪೆಟ್ಟಿಗೆಗಲ್ಲಿ ಬಿಯರ್ ಬಾಟಲಿಗಳು ಪತ್ತೆಯಾಗಿದೆ. ಯುಟಿ ಟ್ಯಾಂಕ್, ಸೈಲೋಸ್ ಟ್ಯಾಂಕ್‌ಗಳಲ್ಲಿರುವ ಕಚ್ಚಾ ವಸ್ತು ಸಮೇತ ಜಪ್ತಿ ಮಾಡಿದ್ದು, ಈ ಸಂಬಂಧ 17 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಮೂರು ವರ್ಷಗಳ ನಂತರ ಬೆಂಗಳೂರಿನಲ್ಲಿ ಶೂನ್ಯ ಮಳೆ ದಾಖಲು

    ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಬಂದ ಅನಾಮಧೇಯ ಕರೆಯ ಮೇರೆಗೆ ಚುನಾವಣಾಧಿಕಾರಿಗಳು ಹಾಗೂ ಅಬಕಾರಿ ಜಂಟಿ ಆಯುಕ್ತರು ಘಟಕಕ್ಕೆ ಭೇಟಿ ನೀಡಿ ದಾಖಲೆ ಪರಿಶೀಲಿಸಿದಾಗ ಲೆಕ್ಕಪುಸ್ತಕದ ದಾಸ್ತಾನಿಗಿಂತ ಹೆಚ್ಚಿನ ಬಿಯರ್ ದಾಸ್ತಾನು ಕಂಡುಬಂದಿದೆ. ಈ ಹಿನ್ನೆಲೆ ಅವುಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ – ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆ

  • 2 ತಿಂಗಳು ನಾವು ಬಾರ್‌ಗೆ ಹೋಗದಿದ್ರೆ ಸರ್ಕಾರವೇ ಬಿದ್ದು ಹೋಗುತ್ತೆ – ಮದ್ಯಪಾನಪ್ರಿಯರ ಸಂಘದ ರಾಜ್ಯಾಧ್ಯಕ್ಷ

    2 ತಿಂಗಳು ನಾವು ಬಾರ್‌ಗೆ ಹೋಗದಿದ್ರೆ ಸರ್ಕಾರವೇ ಬಿದ್ದು ಹೋಗುತ್ತೆ – ಮದ್ಯಪಾನಪ್ರಿಯರ ಸಂಘದ ರಾಜ್ಯಾಧ್ಯಕ್ಷ

    – ಅಬಕಾರಿ ಸುಂಕ ಇಳಿಸದಿದ್ದರೆ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ

    ಹಾಸನ: 2 ತಿಂಗಳು ಮದ್ಯಪ್ರಿಯರು ಬಾರ್‌ಗಳ ಬಳಿ ಹೋಗದಿದ್ದರೆ ಸರ್ಕಾರವೇ ಬಿದ್ದು ಹೋಗುತ್ತದೆ. ಸರ್ಕಾರ ನಡೆಯುತ್ತಿರುವುದೇ ಮದ್ಯಪ್ರಿಯರಿಂದ  (Alcohol) ಎಂದು ಕರ್ನಾಟಕ ಮದ್ಯಪಾನಪ್ರಿಯರ ಹೋರಾಟ ಸಂಘದ ರಾಜ್ಯಾಧ್ಯಕ್ಷ ವೆಂಕಟೇಶ್‍ಗೌಡ ಹೇಳಿದ್ದಾರೆ.

    ಹಾಸನದಲ್ಲಿ (Hassan) `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, 20% ಅಬಕಾರಿ ಸುಂಕ (Excise) ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ. ರಾಜ್ಯ ಸರ್ಕಾರ ಮದ್ಯಪ್ರಿಯರಿಂದ ಸುಲಿಗೆ ಮಾಡುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ ಬೆಳಗಾವಿ ಅಧಿವೇಶನದ ನಂತರ 30% ಅಬಕಾರಿ ಸುಂಕ ಹೆಚ್ಚಳ ಮಾಡಿತ್ತು. ಇದೇ ಕಾಣರಕ್ಕೆ 90% ರಷ್ಟು ಮದ್ಯಪ್ರಿಯರು ಕಾಂಗ್ರೆಸ್‍ಗೆ ಮತ ಹಾಕಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಐದು ಗ್ಯಾರಂಟಿಗಳನ್ನು ಈಡೇರಿಸಲು 20% ಅಬಕಾರಿ ಸುಂಕ ಹೆಚ್ಚಳ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 108 ಅಂಬುಲೆನ್ಸ್‌ ಸಿಬ್ಬಂದಿ ಬಾಕಿ ವೇತನ ಪಾವತಿಗೆ ಕ್ರಮ – ಮುಷ್ಕರ ನಡೆಸದಂತೆ ಸಚಿವ ದಿನೇಶ್ ಗುಂಡೂರಾವ್ ಕರೆ

    ಗಂಡನಿಂದ ತಿಂಗಳಿಗೆ 10,000 ರೂ. ಸುಂಕದ ರೂಪದಲ್ಲಿ ಹಣ ವಸೂಲಿ ಮಾಡಿ ಪತ್ನಿಗೆ 2,000 ರೂ. ನೀಡಲು ಮುಂದಾಗಿದ್ದಾರೆ. ಕೂಡಲೇ ಹೆಚ್ಚಳ ಮಾಡಿರುವ ಅಬಕಾರಿ ಸುಂಕವನ್ನು ಹಿಂಪಡೆಯಬೇಕು. ಹಿಂದಿನ ಬಿಜೆಪಿ ಸರ್ಕಾರ ಹೆಚ್ಚಳ ಮಾಡಿದ್ದ 30% ಅಬಕಾರಿ ಸುಂಕವನ್ನು ರದ್ದು ಮಾಡಿ 10% ಸುಂಕ ಇಳಿಕೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡುವುದಾಗಿ ಎಚ್ಚರಿಸಿದ್ದಾರೆ.

    ವಿರೋಧ ಪಕ್ಷದ ಶಾಸಕರು ಕೂಡ ನಮ್ಮ ಪರ ಧ್ವನಿ ಎತ್ತುತ್ತಿಲ್ಲ. ಅವರನ್ನು ಎಚ್ಚರಿಸುವ ಕೆಲಸವನ್ನೂ ಮಾಡಬೇಕಾಗಿದೆ. ಈಗಾಗಲೇ ಮದ್ಯಪ್ರಿಯರ 20 ಬೇಡಿಕೆಗಳ ಮನವಿಯನ್ನು ಹಿಂದೆ ಅಬಕಾರಿ ಸಚಿವರಾಗಿದ್ದ ಕೆ.ಗೋಪಾಲಯ್ಯ ಅವರಿಗೆ ಮನವಿ ಸಲ್ಲಿಸಿದ್ದೇನೆ. ಆ ಬೇಡಿಕೆಗಳಲ್ಲಿ ಒಂದನ್ನು ಕೂಡ ಈಡೇರಿಸಿಲ್ಲ. ನಾವು ಯಾರಿಗೂ ಮದ್ಯ ಕುಡಿಯುವಂತೆ ಪ್ರಚೋದನೆ ನೀಡುತ್ತಿಲ್ಲ. ‘ನಿತ್ಯ ದುಡಿ ಸತ್ಯ ನುಡಿ ಸ್ವಲ್ಪ ಕುಡಿ ಮನೆಗೆ ನಡಿ’ ಎಂಬ ಧ್ಯೇಯವಾಕ್ಯ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.

    ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡಿದರೆ ಡ್ರಂಕ್ ಅಂಡ್ ಡ್ರೈವ್ ಕೇಸ್ ಹಾಕಿ 10,000 ರೂ. ದಂಡ ಹಾಕುತ್ತಾರೆ. ಎಲ್ಲಾ ರೀತಿಯಿಂದಲೂ ಮದ್ಯಪ್ರಿಯರನ್ನು ಶೋಷಣೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ರಾಜ್ಯಾದ್ಯಂತ ಇರುವ ನಮ್ಮ ಸಂಘದ ಎಲ್ಲಾ ಸದಸ್ಯರ ಸಭೆ ಕರೆದು ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಅಬಕಾರಿ ಸುಂಕ ಇಳಿಸದಿದ್ದರೆ ಫ್ರೀಡಂಪಾರ್ಕ್‍ನಲ್ಲಿ ಅನಿರ್ಧಿಷ್ಠಾವಧಿ ಧರಣಿ ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಡಿವೋರ್ಸ್‍ಗಾಗಿ ಕೋರ್ಟ್ ಮೆಟ್ಟಿಲೇರಿದ್ದ 15 ಜೋಡಿ ಒಂದಾಗಿಸಿದ ನ್ಯಾಯಾಧೀಶರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಐದು ಗ್ಯಾರಂಟಿ ಜಾರಿಗೆ ಅಬಕಾರಿ ಇಲಾಖೆಗೆ ಬಿಗ್‌ ಟಾರ್ಗೆಟ್‌!

    ಐದು ಗ್ಯಾರಂಟಿ ಜಾರಿಗೆ ಅಬಕಾರಿ ಇಲಾಖೆಗೆ ಬಿಗ್‌ ಟಾರ್ಗೆಟ್‌!

    ಬೆಂಗಳೂರು: ಐದು ಗ್ಯಾರಂಟಿಗಳನ್ನು (Congress Guarantee) ಜಾರಿ ಮಾಡುವುದಾಗಿ ಘೋಷಿರುವ ಸಿದ್ದರಾಮಯ್ಯ (Siddaramaiah) ಸರ್ಕಾರ ಈಗ ಆರ್ಥಿಕ ಸಂಪನ್ಮೂಲಗಳನ್ನು ಹೊಂದಿಸಲು ಪ್ರಯತ್ನ ಮಾಡುತ್ತಿದ್ದು, ಅಬಕಾರಿ ಇಲಾಖೆಗೆ (Excise Department) ಈ ಬಾರಿ ಬಿಗ್ ಟಾರ್ಗೆಟ್ ನೀಡಲು ಸರ್ಕಾರ ಮುಂದಾಗಿದೆ.

    ಈ ಹಣಕಾಸು ವರ್ಷದಲ್ಲಿ 40 ಸಾವಿರ ಕೋಟಿ ರೂ.ಆದಾಯ ಸಂಗ್ರಹದ ಟಾರ್ಗೆಟ್ ನೀಡಲು ಸಿದ್ದತೆ ನಡೆಸಿದೆ. ಬಿಜೆಪಿ (BJP) ಸರ್ಕಾರ ಮಂಡಿಸಿದ ಬಜೆಟ್‍ನಲ್ಲಿ ಅಬಕಾರಿ ಇಲಾಖೆಯಿಂದ 35 ಸಾವಿರ ಕೋಟಿ ಗುರಿ ನೀಡಲಾಗಿತ್ತು.

     

    ಇದೇ ವೇಳೆ ಆಸ್ತಿಗಳ ಮಾರ್ಗಸೂಚಿ ದರ ಹೆಚ್ಚಳ ಮಾಡುವ ಸುಳಿವನ್ನು ಕಂದಾಯ ಮಂತ್ರಿ ಕೃಷ್ಣ ಬೈರೇಗೌಡ (Krishna Byre Gowda)ನೀಡಿದ್ದಾರೆ. ಶೀಘ್ರವೇ ಆಸ್ತಿ ಮಾರ್ಗಸೂಚಿ ದರ ಹೆಚ್ಚಳ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಏರ್‌ಬಸ್‌ ಜೊತೆ ಬರೋಬ್ಬರಿ 500 ವಿಮಾನ ಖರೀದಿಗೆ ಡೀಲ್‌ – ವಿಶ್ವದಾಖಲೆ ಬರೆದ ಇಂಡಿಗೋ

    2018 ರಿಂದ ಕರ್ನಾಟಕದಲ್ಲಿ ಆಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಆಗಿಲ್ಲ. ಇದರಿಂದ ರೈತರಿಗೂ, ಮಾರಾಟಗಾರರಿಗೂ ಅನ್ಯಾಯ ಆಗುತ್ತಿದೆ. ಶೀಘ್ರವೇ ಮಾರುಕಟ್ಟೆ ದರಕ್ಕೆ ತಕ್ಕಂತೆ ಮಾರ್ಗಸೂಚಿ ದರ ಬದಲಾವಣೆ ಮಾಡುತ್ತೇವೆ ಎಂದಿದ್ದಾರೆ.

    ಆದಾಯ ಸಂಗ್ರಹದ ಟಾರ್ಗೆಟ್‌ ಯಾವ ಇಲಾಖೆಗೆ ಎಷ್ಟು ಎನ್ನುವುದು ಜುಲೈನಲ್ಲಿ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್‌ನಲ್ಲಿ ತಿಳಿಯಲಿದೆ.

    ಚುನಾವಣಾ ಪ್ರಚಾರದಲ್ಲಿ ಈ ಯೋಜನೆಗಳಿಗೆ ಹಣವನ್ನು ಹೇಗೆ ಹೊಂದಿಸಲಾಗುತ್ತದೆ ಎಂದು ಕೇಳಿದ್ದಕ್ಕೆ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ 40% ಕಮಿಷನ್ ಹಣವನ್ನು ಇದಕ್ಕೆ ವಿನಿಯೋಗಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು.

  • Karnataka Budget – ಟಾರ್ಗೆಟ್‌ ಮೀರಿ ಅಬಕಾರಿ ಆದಾಯ ಭರ್ಜರಿ ಸಂಗ್ರಹ

    Karnataka Budget – ಟಾರ್ಗೆಟ್‌ ಮೀರಿ ಅಬಕಾರಿ ಆದಾಯ ಭರ್ಜರಿ ಸಂಗ್ರಹ

    ಬೆಂಗಳೂರು: ರಾಜ್ಯ ಸರ್ಕಾರದ ಅಬಕಾರಿ ಆದಾಯ (Excise Revenue) ಭರ್ಜರಿ ಏರಿಕೆ ಕಂಡಿದೆ.

    2022-23ರಲ್ಲಿ ಅಬಕಾರಿ ಇಲಾಖೆಗೆ 29 ಸಾವಿರ ಕೋಟಿ ರೂ. ಆದಾಯ ಸಂಗ್ರಹದ ಗುರಿ ನೀಡಲಾಗಿತ್ತು. ಆದರೆ ವರ್ಷಾಂತ್ಯಕ್ಕೆ ಆದಾಯ 32 ಸಾವಿರ ಕೋಟಿ ರೂ. ಗೆ ಏರಿಕೆಯಾಗಲಿದೆ. ಇದು ಬಜೆಟ್‌ (Karnataka Budget) ಅಂದಾಜಿಗಿಂತ ಶೇ.10 ರಷ್ಟು ಹೆಚ್ಚು ಎನ್ನುವುದು ವಿಶೇಷ.

    2023-24 ಹಣಕಾಸು ವರ್ಷದಲ್ಲಿ ಅಬಕಾರಿ ಇಲಾಖೆಗೆ 35 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹದ ಗುರಿಯನ್ನು ನೀಡಲಾಗಿದೆ.

    ಈ ಸಂದರ್ಭದಲ್ಲಿ ಸಾರಾಯಿ/ ಸೇಂದಿಗೆ ಸಂಬಂಧಿಸಿದಂತೆ ಅಬಕಾರಿ ಬಾಕಿಗಳನ್ನು ವಸೂಲು ಮಾಡುವುದಕ್ಕೆ ನೂತನ ಕರಸಮಾಧಾನ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಈ ಯೋಜನೆ ಅಡಿ ಸಾರಾಯಿ/ ಸೇಂದಿಗೆ ಬಾಡಿಗೆ ಸಂಬಂಧದಲ್ಲಿ ಮೂಲ ಧನವನ್ನ 2023ರ ಜೂನ್‌ 30 ರಂದು ಅಥವಾ ಅದಕ್ಕೂ ಮುಂಚಿತವಾಗಿ ಪಾವತಿಸುವವರಿಗೆ ಬಡ್ಡಿ ಮತ್ತು ದಂಡಬಟ್ಟಿ ಪಾವತಿಯಲ್ಲಿ ಪರಿಹಾರ ನೀಡಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೊಸ ಮದ್ಯ ನೀತಿಯಲ್ಲಿ ಭ್ರಷ್ಟಾಚಾರ – ಮಾಜಿ ಲೆಫ್ಟಿನೆಂಟ್ ಗವರ್ನರ್ ಮೇಲೆ ಎಎಪಿ ಆರೋಪ

    ಹೊಸ ಮದ್ಯ ನೀತಿಯಲ್ಲಿ ಭ್ರಷ್ಟಾಚಾರ – ಮಾಜಿ ಲೆಫ್ಟಿನೆಂಟ್ ಗವರ್ನರ್ ಮೇಲೆ ಎಎಪಿ ಆರೋಪ

    ನವದೆಹಲಿ: ರಾಷ್ಟ್ರ ರಾಜಧಾನಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಹೊಸ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ದೆಹಲಿ ಸರ್ಕಾರ ಶನಿವಾರ ಆರೋಪಿಸಿದೆ.

    ಹೊಸ ಅಬಕಾರಿ ನೀತಿಯಿಂದ ರಾಜ್ಯಕ್ಕೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ. ಅದರ ಅನುಷ್ಠಾನದ ಬಗ್ಗೆ ಸಿಬಿಐ ತನಿಖೆ ನಡೆಸಿದ ಬಳಿಕ ಅದನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಅನಿಲ್ ಬೈಜಾಲ್ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಜ್ಯದ ಮುಖ್ಯಮಂತ್ರಿ ಸುಳ್ಳು ಹೇಳಲ್ಲ ಎಂದು ಅಂದುಕೊಂಡಿದ್ದೇವೆ: ಯು.ಟಿ ಖಾದರ್

    ಹೊಸ ಅಬಕಾರಿ ನೀತಿಯಿಂದಾಗಿ ಕೆಲವು ಬಾರ್ ಮಾಲೀಕರು ಸಾವಿರಾರು ಕೋಟಿ ರೂ. ಲಾಭ ಪಡೆದಿದ್ದಾರೆ. ಇದರಿಂದ ಸರ್ಕಾರ ಸಾವಿರಾರು ಕೋಟಿ ರೂ. ಕಳೆದುಕೊಂಡಿದೆ. ದೆಹಲಿ ಸರ್ಕಾರ 2021-22 ರ ಹೊಸ ಅಬಕಾರಿ ನೀತಿಯನ್ನು ಅನುಮತಿಸದ ಕಾರಣ ಕೆಲವು ಜನರಿಗೆ ಪ್ರಯೋಜನವಾಗಿದೆ ಎಂದರು. ಇದನ್ನೂ ಓದಿ: ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್‌ ಶಾ ಬಳಿ ನೆರೆ ಪರಿಹಾರ ಕೇಳಲಿಲ್ಲವೇಕೆ – BJP ಸರ್ಕಾರಕ್ಕೆ ಕಾಂಗ್ರೆಸ್‌ ಪ್ರಶ್ನೆ

    ಅನಿಲ್ ಬೈಜಾಲ್ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿದ್ದಾಗ ಅರವಿಂದ್ ಕೇಜ್ರಿವಾಲ್ ಸರ್ಕಾರ 2021ರ ನವೆಂಬರ್ 17 ರಂದು ಹೊಸ ಅಬಕಾರಿ ನೀತಿಯನ್ನು ಸಿದ್ಧಪಡಿಸಿತ್ತು. 2021ರಲ್ಲಿ ಅಂಗೀಕರಿಸಿದ ಹೊಸ ಅಬಕಾರಿ ನೀತಿಯಲ್ಲಿ ಪ್ರತೀ ಪ್ರದೇಶಗಳಲ್ಲೂ ಸಮಾನ ಸಂಖ್ಯೆಯ ಮದ್ಯದ ಅಂಗಡಿಗಳು ಇರಬೇಕೆಂದು ನಿರ್ಧರಿಸಲಾಗಿದೆ. ಆದರೆ ಈ ಹಿಂದೆ ಒಂದೇ ಸ್ಥಳದಲ್ಲಿ 20 ಬಾರ್‌ಗಳಿದ್ದರೆ, ಇನ್ನೂ ಕೆಲವೆಡೆ ಒಂದೂ ಇರುತ್ತಿರಲಿಲ್ಲ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಗುಡ್‌ನ್ಯೂಸ್‌ – ಪೆಟ್ರೋಲ್‌, ಡೀಸೆಲ್‌ ಅಬಕಾರಿ ಸುಂಕ ಇಳಿಕೆ

    ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಗುಡ್‌ನ್ಯೂಸ್‌ – ಪೆಟ್ರೋಲ್‌, ಡೀಸೆಲ್‌ ಅಬಕಾರಿ ಸುಂಕ ಇಳಿಕೆ

    ನವದೆಹಲಿ: ವಾಹನ ಸವಾರರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್‌ ನೀಡಿದೆ. ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿದೆ.

    ಕೇಂದ್ರ ಅಬಕಾರಿ ಸುಂಕವನ್ನು ಲೀಟರ್‌ ಪೆಟ್ರೋಲ್‌ಗೆ 9.50 ರೂಪಾಯಿ ಮತ್ತು ಪ್ರತಿ ಲೀಟರ್‌ ಡೀಸೆಲ್‌ಗೆ 6 ರೂಪಾಯಿ ಕಡಿತಗೊಳಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಟ್ವೀಟ್‌ ಮಾಡಿ ತಿಳಿಸಿದ್ದಾರೆ. ಇದನ್ನೂ ಓದಿ: 12 ಜ್ಯೋತಿರ್ಲಿಂಗಗಳಲ್ಲಿ ಜ್ಞಾನವಾಪಿಯಲ್ಲಿ ಸಿಕ್ಕ ಶಿವಲಿಂಗವೂ ಒಂದು: ವಿಹೆಚ್‌ಪಿ

    ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ. ಅಲ್ಲದೇ ಅಡುಗೆ ಸಿಲಿಂಡರ್‌ ದರ 200 ರೂ. ಕಡಿತ ಮಾಡಲಾಗಿದೆ.

    ಕೇಂದ್ರ ಸರ್ಕಾರ ಕಳೆದ ವರ್ಷ ನವೆಂಬರ್ 5 ರಂದು ಪೆಟ್ರೋಲ್ ಮೇಲೆ 5 ರೂ. ಡಿಸೇಲ್ ಮೇಲೆ 10 ರೂಪಾಯಿ ಇಳಿಕೆ ಮಾಡಿತ್ತು. ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಬೆಲೆ ಇಳಿಕೆ ಮಾಡಿತ್ತು. ಈಗ ಹಿಮಾಚಲ ಪ್ರದೇಶ ಮತ್ತು ಗುಜರಾತ್ ಚುನಾವಣೆ ಮುನ್ನ ಬೆಲೆ ಇಳಿಕೆ ಮಾಡಿದೆ. ಈ ಬಾರಿ ಎಲ್‌ಪಿಜಿಗೂ ಸಬ್ಸಿಡಿ ನೀಡಿದೆ. ಇದನ್ನೂ ಓದಿ: ರಾಷ್ಟ್ರಧ್ವಜದ ಮೇಲೆ ನಿಂತು ನಮಾಜ್- ವ್ಯಕ್ತಿಯ ಬಂಧನ

    LPG

    ಪ್ಲಾಸ್ಟಿಕ್ ಉತ್ಪನ್ನಗಳಿಗೆ ಬೇಕಾಗುವ ಕಚ್ಚಾ ವಸ್ತುಗಳು ಮತ್ತು ಮಧ್ಯವರ್ತಿಗಳ ಮೇಲಿನ ಕಸ್ಟಮ್ಸ್ ಸುಂಕವನ್ನೂ ಇಳಿಕೆ ಮಾಡಲಾಗಿದೆ. ಉಕ್ಕಿನ ಕೆಲವು ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದೆ. ಕೆಲವು ಉಕ್ಕಿನ ಉತ್ಪನ್ನಗಳ ಮೇಲೆ ರಫ್ತು ಸುಂಕವನ್ನು ವಿಧಿಸಲು ಸರ್ಕಾರ ನಿರ್ಧರಿಸಿದೆ.

    ರಾಜ್ಯ ಸರ್ಕಾರ ಕೂಡ ಅಬಕಾರಿ ಸುಂಕ ಕಡಿಮೆ ಮಾಡಿದರೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಮತ್ತಷ್ಟು ಕಡಿಮೆ ಆಗುತ್ತೆ. ಆದರೆ ರಾಜ್ಯ ಸರ್ಕಾರ ಯಾವಾಗ ಕಡಿಮೆ ಮಾಡುವ ನಿರ್ಧಾರ ಮಾಡುತ್ತೋ ಕಾದು ನೋಡಬೇಕಿದೆ.

    ಇವತ್ತು ಬೆಂಗಳೂರಿನಲ್ಲಿ ಎಷ್ಟು ಲೀಟರ್ ಬೆಲೆ ಎಷ್ಟಿದೆ?: ಪೆಟ್ರೋಲ್ ಬೆಲೆ – 111.09 ಪೈಸೆ ಹಾಗೂ ಡಿಸೇಲ್ ಬೆಲೆ – 94.79 ಪೈಸೆ ಇದೆ. ಅಬಕಾರಿ ಸುಂಕ ಕಡಿಮೆ ಮಾಡಿದರೆ ಪೆಟ್ರೋಲ್ ಬೆಲೆ – 102.09 ಪೈಸೆ ಹಾಗೂ ಡಿಸೇಲ್ ಬೆಲೆ – 87.79 ಪೈಸೆ ಆಗಬಹುದು.

  • ದಡೇಸುಗೂರು ಪ್ರಶ್ನೆಗೆ ಉತ್ತರಿಸಲು ಅಬಕಾರಿ ಡಿಸಿ ತಬ್ಬಿಬ್ಬು

    ದಡೇಸುಗೂರು ಪ್ರಶ್ನೆಗೆ ಉತ್ತರಿಸಲು ಅಬಕಾರಿ ಡಿಸಿ ತಬ್ಬಿಬ್ಬು

    ಕೊಪ್ಪಳ: ಜಿಲ್ಲಾದ್ಯಂತ ನಡೆಯುತ್ತಿರುವ ಮದ್ಯ ಅಕ್ರಮ ಮಾರಾಟ ದಂಧೆ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲೂ ಸದ್ದು ಮಾಡಿದೆ. ಸಚಿವ ಆನಂದ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ, ಅಬಕಾರಿ ಡಿಸಿ ಸೆಲೀನಾಗೆ ಶಾಸಕ ಬಸವರಾಜ್ ದಡೇಸುಗೂರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

    ಗ್ರಾಮೀಣ ಭಾಗದಲ್ಲಿ ಹೋಟೆಲ್, ಪಾನ್ ಶಾಪ್‌ನಲ್ಲೂ ಮದ್ಯ ಮಾರಾಟವಾಗುತ್ತಿದೆ. ಯಾವ ಬಾರ್ ಮಾಲೀಕರ ಮೇಲೆ ಎಷ್ಟು ಕೇಸ್ ಮಾಡಿದ್ದೀರಿ? ನೀವು, ನಿಮ್ಮ ಇಲಾಖೆ ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ ಎಂಬುದು ನನಗೆ ಗೊತ್ತು. ನೀವು ಕಾನೂನು ಪ್ರಕಾರ ಕೆಲಸ ಮಾಡಿದ್ರೆ ನಾನು ಈ ಸಭೆಯಲ್ಲಿ ಮಾತಾನಾಡುವ ಅಗತ್ಯ ಇರಲಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಡಿಕೆಶಿ ಜೊತೆ ದಿವ್ಯಾ ಹಾಗರಗಿ ಫೋಟೋ ತೆಗೆಸಿಕೊಂಡ ರಹಸ್ಯ ಬಯಲು

    ಬಿಟ್ಟು ಬಿಡದೇ ತರಾಟೆ ತೆಗೆದುಕೊಂಡ ಶಾಸಕ ದಡೇಸುಗೂರು, ನಿಮಗೆ ತಿಂಗಳ ಸೆಟ್ಲ್ಮೆಂಟ್ ಇದೆ ಎನ್ನುವುದು ನನಗೆ ತಿಳಿದಿದೆ ಎಂದು ಗಂಭೀರ ಆರೋಪ ಮಾಡಿದರು. ದಡೇಸುಗೂರು ಪ್ರಶ್ನೆಗೆ ಉತ್ತರಿಸಲು ಅಬಕಾರಿ ಡಿಸಿ ತಬ್ಬಿಬ್ಬಾಗಿದ್ದು ಕಂಡು ಬಂತು. ಇದನ್ನೂ ಓದಿ: 2,500 ಕೋಟಿ ರೂ. ತನಿಖೆಗೆ ಭಾಸ್ಕರ್ ರಾವ್ ಆಗ್ರಹ

    ಈ ವೇಳೆ ಧ್ವನಿಗೂಡಿಸಿದ ಕೆಡಿಪಿ ನಾಮಿನೇಟ್ ಸದಸ್ಯ ಗುರುಗೌಡ, ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟದಿಂದ ಯುವಕರು ಹಾಳಾಗುತ್ತಿದ್ದಾರೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

  • ರಾಯಚೂರಿನಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ- ಕಲಬೆರಕೆ ಸೇಂದಿ ಜಪ್ತಿ

    ರಾಯಚೂರಿನಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ- ಕಲಬೆರಕೆ ಸೇಂದಿ ಜಪ್ತಿ

    ರಾಯಚೂರು: ನಗರದ ಸಿಯತಲಾಬ್ ಮೇದಾರ್ ಓಣಿಯಲ್ಲಿ ಅಬಕಾರಿ ಪೊಲೀಸರು ದಾಳಿ ನಡೆಸಿ ದೊಡ್ಡ ಪ್ರಮಾಣದ ಸಿ.ಎಚ್ ಪೌಡರ್ ಹಾಗೂ ಸೇಂದಿ ತಯಾರಿಕೆಗೆ ಬಳಸುವ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

    ರಾಯಚೂರು ಅಬಕಾರಿ ಡಿಸಿ ಲಕ್ಷ್ಮಿ ನಾಯಕ, ಡಿಎಸ್‍ಪಿ ಹನುಮಂತ ಗುತ್ತೆದಾರ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಳಿ ವೇಳೆ ಕಲಬೆರಕೆ ಸೇಂದಿ ಸಮೇತ ಆರೋಪಿ ಕಿಶೋಲ್ ಲಾಲ್‍ನನ್ನು ಬಂಧಿಸಲಾಗಿದೆ.

    ಬಂಧಿತ ಆರೋಪಿ ಬಳಿ ಇದ್ದ 32 ಕೆಜಿ ಸಿಎಚ್ ಪೌಡರ್, 4 ಕೆಜಿ ವೈಟ್ ಫೆಸ್ಟ್, 10ಲೀ ಸೇಂದಿ ಸೇರಿ ಕಲಬೆರಿಕೆ ಸೇಂದಿ ತಯಾರಿಕೆಗೆ ಬಳಸುತ್ತಿದ್ದ ವಸ್ತುಗಳನ್ನು ಹಾಗೂ ಸಿಎಚ್ ಪೌಡರ್ ಸಾಗಾಟಕ್ಕೆ ಬಳಕೆ ಮಾಡಿದ ಎರಡು ಮೊಪೆಡ್ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ರಾಯಚೂರು ಅಬಕಾರಿ ಉಪ ವಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 3 ದಿನ ಟ್ರಾಫಿಕ್ ಸಮಸ್ಯೆ ತಡ್ಕೊಳ್ಳಿ, 50 ವರ್ಷ ಕುಡಿಯುವ ನೀರಿನ ಸಮಸ್ಯೆ ಇರಲ್ಲ: ಡಿಕೆಶಿ

  • ಅಬಕಾರಿ ಪೊಲೀಸರ ದಾಳಿ – ಲಕ್ಷಾಂತರ ರೂ.ಮೌಲ್ಯದ ಮಾದಕ ವಸ್ತುಗಳು ಜಪ್ತಿ

    ಅಬಕಾರಿ ಪೊಲೀಸರ ದಾಳಿ – ಲಕ್ಷಾಂತರ ರೂ.ಮೌಲ್ಯದ ಮಾದಕ ವಸ್ತುಗಳು ಜಪ್ತಿ

    ರಾಯಚೂರು: ಜಿಲ್ಲೆಯ ವಿವಿಧೆಡೆ ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಮಾದಕ ವಸ್ತು ಜಪ್ತಿಮಾಡಿ, ಇಬ್ಬರು ಆರೋಪಿಗಳನ್ನ ಬಂಧಿಸಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

    ಮೂರು ಪ್ರತ್ಯೇಕ ಪ್ರಕರಣದಲ್ಲಿ ಕಳ್ಳಭಟ್ಟಿ ಸಾರಾಯಿ, ಅಕ್ರಮ ಮದ್ಯ ಹಾಗು ಗಾಂಜಾ ಜಪ್ತಿ ಮಾಡಲಾಗಿದೆ. ದೇವದುರ್ಗ ತಾಲೂಕಿನ ನಾರಬಂಡಿ ತಾಂಡಾದಲ್ಲಿ ಕಳ್ಳಭಟ್ಟಿ ತಯಾರಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಅಬಕಾರಿ ಪೊಲೀಸರು 15 ಲೀಟರ್ ಕಳ್ಳಭಟ್ಟಿ ಸಾರಾಯಿ ಹಾಗೂ ಮೂರು ಬೈಕ್ ಜಪ್ತಿ ಮಾಡಲಾಗಿದೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

    ರಾಯಚೂರು ನಗರದ ಅಶೋಕ ನಗರದಲ್ಲಿ ಚಿಕ್ಕ ಪ್ಯಾಕೇಟ್‍ಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನ ಗಾಂಜಾ ಸಹಿತ ಬಂಧಿಸಲಾಗಿದೆ. 150 ಪ್ಯಾಕೇಟ್ ನಲ್ಲಿದ್ದ 1 ಕೆಜಿ ಗಾಂಜಾ ಜಪ್ತಿ ಮಾಡಲಾಗಿದ್ದು, ಆರೋಪಿ ಅಹ್ಮದ್ ಹುಸೇನ್‍ನನ್ನು ಬಂಧಿಸಲಾಗಿದೆ.

    ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣದಲ್ಲಿ ಬೈಕ್‍ನಲ್ಲಿ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿ ಗುಂಜಳ್ಳಿ ಕ್ಯಾಂಪ್‍ನ ಹನುಮಂತನನ್ನ ಬಂಧಿಸಲಾಗಿದ್ದು, 13.590 ಲೀಟರ್ ಮದ್ಯ ಜಪ್ತಿಮಾಡಲಾಗಿದೆ. ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.