Tag: Exam Schedule

  • ಪರೀಕ್ಷಾ ದಿನವೇ SSLC ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಪರೀಕ್ಷಾ ದಿನವೇ SSLC ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಶಿವಮೊಗ್ಗ: ಪರೀಕ್ಷಾ ದಿನವೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ (SSLC Student) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ (Shivamogga) ಜಿಲ್ಲೆ ಸಾಗರ ತಾಲೂಕಿನ ಯಡೇಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಪರಶುರಾಮ್ ಬಾಬು (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಆನಂದಪುರದ KPSC ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ, ಚೆನ್ನಾಗಿಯೇ ಓದುತ್ತಿದ್ದ. ಪರೀಕ್ಷೆಗೆ ಎಲ್ಲಾ ಸಿದ್ಧತೆಯನ್ನೂ ಮಾಡಿಕೊಂಡಿದ್ದ. ಆದ್ರೆ ಕೊನೇ ಕ್ಷಣದಲ್ಲಿ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ. ಈ ಸಂಬಂಧ ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇಂದಿನಿಂದ ಪರೀಕ್ಷೆ ಆರಂಭ:
    ರಾಜ್ಯಾದ್ಯಂತ ಇಂದಿನ (ಮಾ.25) ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆ (SSLC Public Exams) ಪ್ರಾರಂಭವಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜೊತೆ ಬಾಕಿ ಉಳಿದಿರೋ 5,8,9 ತರಗತಿಗಳಿಗೂ ಪಬ್ಲಿಕ್ ಪರೀಕ್ಷೆ ಶುರುವಾಗಿದೆ.

    ಒಟ್ಟು 8,69,968 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 4,41,910 ಬಾಲಕರು, 4,28,058 ಬಾಲಕಿಯರು ಇದ್ದಾರೆ. 2,750 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಆಯೋಜನೆ ಮಾಡಲಾಗಿದೆ. ಪ್ರತಿ ಕೇಂದ್ರದಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್ ನಿಷೇಧಿಸಲಾಗಿದೆ. ಜೊತೆಗೆ ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ.

    ನಿರ್ದೇಶಕರು ಮತ್ತು ಸಹ ನಿರ್ದೇಶಕರ ವೃಂದದ ಅಧಿಕಾರಿಗಳನ್ನು ಜಿಲ್ಲಾ ಮೇಲುಸ್ತುವಾರಿ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಡಯಟ್ ಪ್ರಾಂಶುಪಾಲರನ್ನು ಆಯಾ ಜಿಲ್ಲೆಗೆ ಜಿಲ್ಲಾ ವೀಕ್ಷಕರಾಗಿ ನೇಮಿಸಲಾಗಿದೆ. ಡಯಟ್ ಉಪನ್ಯಾಸಕರನ್ನು ಪರೀಕ್ಷಾ ಕೇಂದ್ರಗಳಿಗೆ ವಿಚಕ್ಷಣ ಜಾಗೃತ ದಳದ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

    ಎಸ್‌ಎಸ್‌ಎಲ್‌ಸಿ ಪರೀಕ್ಷೆ -1 ವೇಳಾಪಟ್ಟಿ
    ಮಾರ್ಚ್ 25- ಪ್ರಥಮ ಭಾಷೆ.
    ಮಾರ್ಚ್ 27- ಸಮಾಜ ವಿಜ್ಞಾನ
    ಮಾರ್ಚ್ 30- ವಿಜ್ಞಾನ
    ಏಪ್ರಿಲ್ 2- ಗಣಿತ
    ಏಪ್ರಿಲ್ 4- ತೃತೀಯ ಭಾಷೆ
    ಏಪ್ರಿಲ್ 6- ದ್ವೀತಿಯ ಭಾಷೆ

    5ನೇ ತರಗತಿ ವೇಳಾಪಟ್ಟಿ
    ಮಾರ್ಚ್ 25- ಪರಿಸರ ಅಧ್ಯಯನ.
    ಮಾರ್ಚ್ 26- ಗಣಿತ

    8ನೇ ತರಗತಿ ವೇಳಾಪಟ್ಟಿ
    ಮಾರ್ಚ್ 25- ತೃತೀಯ ಭಾಷೆ.
    ಮಾರ್ಚ್ 26- ಗಣಿತ
    ಮಾರ್ಚ್ 27- ವಿಜ್ಞಾನ
    ಮಾರ್ಚ್ 28- ಸಮಾಜ ವಿಜ್ಞಾನ

    9ನೇ ತರಗತಿ ವೇಳಾಪಟ್ಟಿ
    ಮಾರ್ಚ್ 25- ತೃತೀಯ ಭಾಷೆ
    ಮಾರ್ಚ್ 26- ಗಣಿತ
    ಮಾರ್ಚ್ 27- ವಿಜ್ಞಾನ
    ಮಾರ್ಚ್ 28- ಸಮಾಜ ವಿಜ್ಞಾನ.

  • ದ್ವಿತೀಯ ಪಿಯುಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟ

    ದ್ವಿತೀಯ ಪಿಯುಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟ

    ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಮತ್ತೆ ಪರಿಷ್ಕರಣೆಗೊಂಡಿದೆ. ಇದೀಗ ಅಂತಿಮ ವೇಳಾಪಟ್ಟಿಯನ್ನು ಪಿಯುಸಿ ಬೋರ್ಡ್ ಪ್ರಕಟಿಸಿದೆ.

    ಈಗಾಗಲೇ ಪಿಯುಸಿ ಬೋರ್ಡ್ ತಾಂತ್ರಿಕ ಕಾರಣ ನೀಡಿ 3-4 ಬಾರಿ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದೆ. ಇದೀಗ ಪರಿಷ್ಕೃತ ವೇಳಾಪಟ್ಟಿ ಪ್ರಕಟಗೊಂಡಿದ್ದು, ಏಪ್ರಿಲ್ 22 ರಿಂದ ಮೇ 18ರ ವರೆಗೆ ಪರೀಕ್ಷೆಗಳು ನಡೆಯಲಿದೆ. ಇದನ್ನೂ ಓದಿ:  ಆಂಧ್ರಪ್ರದೇಶದ ಎಲ್ಲಾ ಸಚಿವರು ರಾಜೀನಾಮೆ

    ಪರಿಷ್ಕೃತ ವೇಳಾಪಟ್ಟಿ ಹೀಗಿದೆ:
    ಏಪ್ರಿಲ್ 22- ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
    ಏಪ್ರಿಲ್ 23- ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ
    ಏಪ್ರಿಲ್ 25- ಅರ್ಥಶಾಸ್ತ್ರ
    ಏಪ್ರಿಲ್ 26- ರಸಾಯನಶಾಸ್ತ್ರ, ಹಿಂದುಸ್ಥಾನಿ ಸಂಗೀತ, ಮನಃಶಾಸ್ತ್ರ, ಮೂಲ ಗಣಿತ
    ಏಪ್ರಿಲ್ 27- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
    ಏಪ್ರಿಲ್ 28- ಕನ್ನಡ, ಅರೇಬಿಕ್
    ಮೇ 4- ಭೂಗೋಳಶಾಸ್ತ್ರ, ಜೀವಶಾಸ್ತ್ರ
    ಮೇ 5- ಮಾಹಿತಿ ತಂತ್ರಜ್ಞಾನ, ರಿಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್
    ಮೇ 6- ಇಂಗ್ಲಿಷ್
    ಮೇ 10- ಇತಿಹಾಸ, ಭೌತಶಾಸ್ತ್ರ
    ಮೇ 12- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
    ಮೇ 14- ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
    ಮೇ 17- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
    ಮೇ 18- ಹಿಂದಿ ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚಿದ ಅಪೌಷ್ಟಿಕತೆ: 3 ವಾರಗಳಲ್ಲಿ ವರದಿ ಸಲ್ಲಿಸುವಂತೆ `ಹೈ’ ಸೂಚನೆ

     

  • ಮೇ 4ರಿಂದ 10, 12ನೇ ಕ್ಲಾಸ್ ಸಿಬಿಎಸ್‍ಇ ಪರೀಕ್ಷೆ

    ಮೇ 4ರಿಂದ 10, 12ನೇ ಕ್ಲಾಸ್ ಸಿಬಿಎಸ್‍ಇ ಪರೀಕ್ಷೆ

    ನವದೆಹಲಿ: ಮೇ 4 ರಿಂದ ಜೂನ್ 10ವರೆಗೆ 10 ಮತ್ತು 12ನೇ ತರಗತಿಯ ಪರೀಕ್ಷೆಗಳು ನಡೆಯಲಿವೆ. ಜುಲೈ 15ರಂದು ಫಲಿತಾಂಶ ಪ್ರಕಟವಾಗಲಿದೆ.

    ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲಾ ಸುದ್ದಿಗೋಷ್ಠಿಯಲ್ಲಿ ಪರೀಕ್ಷೆಯ ಬಗ್ಗೆ ಮಾಹಿತಿ ನೀಡಿದರು. ಮೇ 4 ರಿಂದ ಜೂನ್ 10ರೊಳಗೆ ಪರೀಕ್ಷೆಗಳು ನಡೆಯಲಿದ್ದು, ಇನ್ನೂ ವಿಷಯಗಳ ವೇಳಾಪಟ್ಟಿ ಸಿದ್ಧಗೊಂಡಿಲ್ಲ. ದಿನಾಂಕ ನಿಗದಿಯಾದ ಬಳಿಕ ಅಧಿಕೃತ ವೆಬ್‍ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.

    ಪರೀಕ್ಷೆಗಳು ಮುಕ್ತಾಯವಾದ ನಂತರ ನಿಗದಿತ ಸಮಯದಲ್ಲಿಯೇ ಮೌಲ್ಯಮಾಪನ ನಡೆಸಲಾಗುವುದು. ಜುಲೈ 15ರಂದು ಫಲಿತಾಂಶವನ್ನ ಪ್ರಕಟಿಸಲಾಗುತ್ತದೆ ಎಂದು ಪೊಖ್ರಿಯಾಲಾ ಮಾಹಿತಿ ನೀಡಿದ್ದಾರೆ. ಪ್ರತಿ ವರ್ಷ ಸಿಬಿಎಸ್‍ಇ ಬೋರ್ಡ್ ನವೆಂಬರ್ ನಲ್ಲಿ ಪರೀಕ್ಷಾ ವೇಳಾಪಟ್ಟಿಯನ್ನ ಪ್ರಕಟಿಸಿ ಮಾರ್ಚ್ ನಲ್ಲಿ ಎಕ್ಸಾಂ ನಡೆಸುತ್ತಿತ್ತು. ಆದ್ರೆ ಈ ವರ್ಷ ಕೊರೊನಾ ಹಿನ್ನೆಲೆ ಸಿಬಿಎಸ್‍ಇ ಬೋರ್ಡ್ ವೇಳಾಪಟ್ಟಿ ಪ್ರಕಟಿಸಲು ತಡಮಾಡಿದೆ.