Tag: exam result

  • ನಾಳೆ ದ್ವಿತೀಯ ಪಿಯುಸಿ ರಿಸಲ್ಟ್

    ನಾಳೆ ದ್ವಿತೀಯ ಪಿಯುಸಿ ರಿಸಲ್ಟ್

    ಬೆಂಗಳೂರು: ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ-1 ಪರೀಕ್ಷೆ ಫಲಿತಾಂಶ (2nd PUC Exam Result) ನಾಳೆ (ಏಪ್ರಿಲ್‌ 8 ರಂದು) ಪ್ರಕಟವಾಗಲಿದೆ.

    ಮಧ್ಯಾಹ್ನ 12.30ಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟ ಮಾಡಲಿದ್ದಾರೆ. ಇದನ್ನೂ ಓದಿ: Breaking | ಎಲ್‌ಪಿಜಿ ಸಿಲಿಂಡರ್‌ ಬೆಲೆ 50 ರೂ. ಹೆಚ್ಚಳ

    ಸುದ್ದಿಗೋಷ್ಠಿ ಬಳಿಕ ಮಧ್ಯಾಹ್ನ 1.30ಕ್ಕೆ ಇಲಾಖೆ ವೆಬ್ ಸೈಟ್ ನಲ್ಲಿ ‌ಫಲಿತಾಂಶ ಲಭ್ಯವಾಗಲಿದೆ. ಮಾರ್ಚ್ 1 ರಿಂದ ಮಾರ್ಚ್ 20ರ ವರೆಗೆ ಈ ಬಾರಿ ಪರೀಕ್ಷೆ ನಡೆದಿತ್ತು. ಸುಮಾರು 7.13 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದನ್ನೂ ಓದಿ: ಮೈಸೂರು ಮಹಾರಾಜರಿಗೆ ಸೇರಿರುವ 4,500 ಎಕ್ರೆ ಭೂಮಿ ವರ್ಗಕ್ಕೆ ಪ್ರಮೋದಾದೇವಿ ಪತ್ರ

    ಫಲಿತಾಂಶ ಲಭ್ಯವಾಗೋ ವೆಬ್ ಸೈಟ್ ಹೀಗಿದೆ. https://kerresults.nic.in

  • UPSC ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟ

    UPSC ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟ

    ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ 2024ನೇ (UPSC 2024) ಸಾಲಿನ ನಾಗರಿಕ ಸೇವೆಗಳ ಪೂರ್ವಭಾವಿ (ಪ್ರಿಲಿಮ್ಸ್​) ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ.

    ನಾಗರಿಕ ಸೇವೆಗಳ (ಪೂರ್ವಭಾವಿ) ಪರೀಕ್ಷೆಗೆ ಹಾಜರಾಗಿರುವ ಆಕಾಂಕ್ಷಿಗಳು UPSC ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು.

    ಜೂನ್ 16 ರಂದು ಭಾರತದಾದ್ಯಂತ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಯಿತು. ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ. ಆದಾಗ್ಯೂ ಅವರು 2024 ರ ನಾಗರಿಕ ಸೇವೆಗಳ (ಮುಖ್ಯ) ಪರೀಕ್ಷೆಗಾಗಿ ವಿವರವಾದ ಅರ್ಜಿ ನಮೂನೆ-I (DAF-I) ಅನ್ನು ಭರ್ತಿ ಮಾಡಬೇಕು. ಇದನ್ನೂ ಓದಿ: ಹರಿಯಾಣದಲ್ಲಿ ಕಾಂಗ್ರೆಸ್ ನಾಯಕನ ಸಹೋದರನ ಗುಂಡಿಕ್ಕಿ ಹತ್ಯೆ

    ಫಲಿತಾಂಶ ಪರಿಶೀಲಿಸುವ ಹಂತಗಳು:
    * ಮೊದಲಿಗೆ, ಯುಪಿಎಸ್ಸಿಯ ಅಧಿಕೃತ ವೆಬ್​ಸೈಟ್ www.upsc.gov.in ಗೆ ಭೇಟಿ ನೀಡಿ.
    * ಮುಖಪುಟದಲ್ಲಿ UPSC ಸಿವಿಲ್ ಸರ್ವೀಸಸ್ (ಪ್ರಿಲಿಮಿನರಿ) ಫಲಿತಾಂಶ 2024 ಲಿಂಕ್ ಅನ್ನು ಕ್ಲಿಕ್ ಮಾಡಿ.
    * ಬಳಿಕ ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿದಾಗ ಹೊಸ ಪುಟ ತೆರೆಯುತ್ತದೆ.
    * ಇಲ್ಲಿ “ಸಲ್ಲಿಸು” ಆಯ್ಕೆಯನ್ನು ಕ್ಲಿಕ್‌ ಮಾಡಿದರೆ ಫಲಿತಾಂಶಗಳು ಕಾಣುತ್ತದೆ
    * ನಂತರ ಡೌನ್ ಲೋಡ್ ಮಾಡಿ. ನಿಮ್ಮ ಭವಿಷ್ಯದ ಅಗತ್ಯಗಳಿಗಾಗಿ ಕಾಪಿಯನ್ನು ಸೇವ್ ಮಾಡಿಟ್ಟುಕೊಳ್ಳಿ.

    2024 ರ ಸಿಎಸ್ (ಪಿ) ಪರೀಕ್ಷೆಯ ಅಂಕಗಳು, ಕಟ್-ಆಫ್ ಅಂಕಗಳು ಮತ್ತು ಉತ್ತರ ಕೀಗಳನ್ನು ನಾಗರಿಕ ಸೇವೆಗಳ ಪರೀಕ್ಷೆ ಪೂರ್ಣಗೊಂಡ ನಂತರ ಮತ್ತು ಅಂತಿಮ ಫಲಿತಾಂಶಗಳ ಪ್ರಕಟಣೆಯ ನಂತರ ವೆಬ್​ಸೈಟ್​ನಲ್ಲಿ ಪೋಸ್ಟ್​​ ಮಾಡಲಾಗುತ್ತದೆ.

  • 2nd PUC Result: ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಅನನ್ಯಾ ರಾಜ್ಯಕ್ಕೆ ಪ್ರಥಮ ಸ್ಥಾನ

    2nd PUC Result: ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಅನನ್ಯಾ ರಾಜ್ಯಕ್ಕೆ ಪ್ರಥಮ ಸ್ಥಾನ

    ಬೆಂಗಳೂರು: ದ್ವಿತೀಯ ಪಿಯುಸಿ (2nd PUC) ಪರೀಕ್ಷೆಯ ಫಲಿತಾಂಶ (Result) ಪ್ರಕಟವಾಗಿದ್ದು, ವಾಣಿಜ್ಯ (Commerce) ವಿಭಾಗದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಅನನ್ಯಾ ಕೆ. ಎ 600 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

    ಕಳೆದ ಮಾರ್ಚ್ 9 ರಿಂದ 29ರವರೆಗೆ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ. ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಸಿಂಗ್ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. ದಕ್ಷಿಣ ಕನ್ನಡ ಮೊದಲ ಸ್ಥಾನ (95.33%) ಉಡುಪಿಗೆ ಎರಡನೇ ಸ್ಥಾನ( 95.24%) ಕೊಡಗಿಗೆ 3ನೇ ಸ್ಥಾನ (90.55%) ಸಿಕ್ಕಿದರೆ ಯಾದಗಿರಿಗೆ (78.97%) ಕೊನೆಯ ಸ್ಥಾನ ಸಿಕ್ಕಿದೆ. ಇನ್ನುಳಿದಂತೆ ವಾಣಿಜ್ಯ ವಿಭಾಗದಲ್ಲಿ ಮೊದಲ 10 ಸ್ಥಾನ ಪಡೆದ ವಿದ್ಯಾರ್ಥಿಗಳ ವಿವರ ಈ ರೀತಿ ಇದೆ. ಇದನ್ನೂ ಓದಿ: ಪಿಯು ಪರೀಕ್ಷಾ ಫಲಿತಾಂಶ – ದಕ್ಷಿಣ ಕನ್ನಡ ಫಸ್ಟ್‌, ಉಡುಪಿ ಸೆಕೆಂಡ್‌

    600 ಅಂಕ ಪಡೆದ ವಿದ್ಯಾರ್ಥಿ:

    ಅನನ್ಯಾ ಕೆ.ಎ 600 ಅಂಕ, ಆಳ್ವಾಸ್ ಕಾಲೇಜು ಮೂಡುಬಿದಿರೆ, ದಕ್ಷಿಣ ಕನ್ನಡ

    596 ಅಂಕ ಪಡೆದ ವಿದ್ಯಾರ್ಥಿಗಳು:

    ಅನ್ವಿತಾ ಡಿ.ಎನ್‌, 596 ಅಂಕ, ವಿಕಾಸ್ ಕಂಪ್ ಪಿಯು ಕಾಲೇಜು ಶಿವಮೊಗ್ಗ

    ಛಾಯಾ ರವಿ ಕುಮಾರ್‌, 596 ಅಂಕ, ಟ್ರಾನ್ಸೆಂಡ್ ಪಿಯು ಕಾಲೇಜು, ಜಯನಗರ ಬೆಂಗಳೂರು

    ಖುಷಿ ಬಾಗಲಕೋಟ್‌, 596 ಅಂಕ, ಎಕ್ಸ್‌ಲೆಂಟ್‌ ಪಿಯು ಕಾಲೇಜು ಮೂಡುಬಿದಿರೆ

    ಸ್ವಾತಿ ಪೈ 596 ಅಂಕ, ವಿಕಾಸ್‌ ಪಿಯು ಕಾಲೇಜು ಮಂಗಳೂರು

    ಧನ್ಯಶ್ರೀ ರಾವ್‌, 596 ಅಂಕ, ಕ್ರೈಸ್ಟ್ ಪಿಯು ಕಾಲೇಜು, ಬೆಂಗಳೂರು

    ವರ್ಷಾ ಸತ್ಯನಾರಾಯಣ್‌, 596 ಅಂಕ, ಟ್ರಾನ್ಸೆಂಡ್ ಪಿಯು ಕಾಲೇಜು ಜಯನಗರ, ಬೆಂಗಳೂರು

    ಕೆ. ದಿಶಾ ರಾವ್‌, 596 ಅಂಕ, ಆಳ್ವಾಸ್ ಕಾಲೇಜ್‌ ಮೂಡುಬಿದಿರೆ

    ಇಂಚರಾ ಎನ್‌, 596 ಅಂಕ, ಎಎಸ್‌ಸಿ ಪಿಯು ಕಾಲೇಜ್‌, ಬೆಂಗಳೂರು

    ಗಾನ ಐ 596 ಅಂಕ ಕ್ರೈಸ್ಟ್ ಪಿಯು ಕಾಲೇಜ್‌, ಬೆಂಗಳೂರು.

  • ಪಿಯು ಪರೀಕ್ಷಾ ಫಲಿತಾಂಶ – ದಕ್ಷಿಣ ಕನ್ನಡ ಫಸ್ಟ್‌, ಉಡುಪಿ ಸೆಕೆಂಡ್‌

    ಪಿಯು ಪರೀಕ್ಷಾ ಫಲಿತಾಂಶ – ದಕ್ಷಿಣ ಕನ್ನಡ ಫಸ್ಟ್‌, ಉಡುಪಿ ಸೆಕೆಂಡ್‌

    ಬೆಂಗಳೂರು: ಕಳೆದ ಮಾರ್ಚ್ 9 ರಿಂದ 29ರ ವರೆಗೆ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ.

    ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಸಿಂಗ್ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. 7,02,067 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು 5,24,209 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಈ ಬಾರಿ 74.67% ಫಲಿತಾಂಶ ದಾಖಲಾಗಿದೆ.

    ದಕ್ಷಿಣ ಕನ್ನಡ ಮೊದಲ ಸ್ಥಾನ (95.33%) ಉಡುಪಿಗೆ ಎರಡನೇ ಸ್ಥಾನ( 95.24%) ಕೊಡಗಿಗೆ 3ನೇ ಸ್ಥಾನ (90.55%) ಸಿಕ್ಕಿದರೆ ಯಾದಗಿರಿಗೆ (78.97%) ಕೊನೆಯ ಸ್ಥಾನ ಸಿಕ್ಕಿದೆ.

    ಎಂದಿನಂತೆ ಬಾಲಕೀಯರೇ ಮೇಲುಗೈ ಸಾಧಿಸಿದ್ದು 80.25% ಪಾಸ್ ಆಗಿದ್ದರೆ ಬಾಲಕರು 69.05% ಪಾಸ್‌ ಆಗಿದ್ದಾರೆ. ಗ್ರಾಮೀಣ ಭಾಗದ 74.79% ಮಕ್ಕಳು ತೇರ್ಗಡೆಯಾಗಿದ್ದರೆ 74.63% ನಗರ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

    ಯಾವ ದರ್ಜೆಯಲ್ಲಿ ಎಷ್ಟು ವಿದ್ಯಾರ್ಥಿಗಳು ಪಾಸ್‌?
    ಡಿಸ್ಟಿಂಕ್ಷನ್‌ – 1,09,509
    ಪ್ರಥಮ ದರ್ಜೆ – 2,47,315
    ದ್ವಿತೀಯ ದರ್ಜೆ – 90,014
    ತೃತೀಯ ದರ್ಜೆ – 77,371

    ಕಲಾ ವಿಭಾಗದಲ್ಲಿ 2,20,305 ವಿದ್ಯಾರ್ಥಿಗಳ ಪೈಕಿ 1,34,876 ವಿದ್ಯಾರ್ಥಿಗಳು ತೇರ್ಗಡೆಯಾಗಿ 61.22% ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ 2,40,146 ವಿದ್ಯಾರ್ಥಿಗಳ ಪೈಕಿ 1,82,246 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು 75.89% ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ 2,41,616 ವಿದ್ಯಾರ್ಥಿಗಳ ಪೈಕಿ 2,07,087 ವಿದ್ಯಾರ್ಥಿಗಳು ಪಾಸ್‌ ಆಗಿ 85.71% ಫಲಿತಾಂಶ ದಾಖಲಾಗಿದೆ.

    ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪಡೆಯಲು ಏಪ್ರಿಲ್ 27 ಕೊನೆ ದಿನವಾಗಿದ್ದು ಮರು ಮೌಲ್ಯ ಮಾಪನ, ಮರು‌ ಎಣಿಕೆಗೆ ಅರ್ಜಿ ಸಲ್ಲಿಕೆಗೆ ಮೇ 8 ಕೊನೆ ದಿನವಾಗಿದೆ.

  • ವಿಜಯನಗರದ ಮೂವರು, ವಿಜಯಪುರದ 6 ವಿದ್ಯಾರ್ಥಿಗಳಿಗೆ ಟಾಪ್ ರ‍್ಯಾಂಕ್ ಗರಿ

    ವಿಜಯನಗರದ ಮೂವರು, ವಿಜಯಪುರದ 6 ವಿದ್ಯಾರ್ಥಿಗಳಿಗೆ ಟಾಪ್ ರ‍್ಯಾಂಕ್ ಗರಿ

    ವಿಜಯಪುರ: ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಜಯಪುರದ ಮೂವರು ಹಾಗೂ ವಿಜಯನಗರ 6 ವಿದ್ಯಾರ್ಥಿಗಳು 625 ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

    ವಿದ್ಯಾಥಿಗಳು ಉತ್ತೀರ್ಣರಾದ ವಿಷಯ ತಿಳಿಯುತ್ತಿದ್ದಂತೆ ಶಾಲಾ ಆವರಣದಲ್ಲೇ ಪೋಷಕರು, ಗ್ರಾಮಸ್ಥರೊಂದಿಗೆ ಕುಣಿದು ಕುಪ್ಪಳಿಸಿದರು. ಇದನ್ನೂ ಓದಿ; ಕಿರಾಣಿ ಅಂಗಡಿ ನಡೆಸುತ್ತಿದ್ದ ಮಹಾಂತೇಶ್ ರಾಯರ್ ಪುತ್ರಿ ಬೆಳಗಾವಿಗೆ ಟಾಪ್

    ವಿಜಯಪುರ ತಾಲೂಕಿನ ಜುಮನಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಅಮಿತ್ ಮಾದರ, ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಐಶ್ವರ್ಯ ಈರಣ್ಣ ಕನಸೆ, ಸಿಂದಗಿ ತಾಲೂಕಿನ ವಿಭೂತಿಹಾಳ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಸ್ವಾತಿ ಗೌಡಪ್ಪ ಮಲ್ಲೇದ, ಇಟ್ಟಂಗಿಹಾಳ ಗ್ರಾಮದ ಪ್ರೌಢ ಶಾಲೆಯ ರಕ್ಷಿತಾ ಸುರೇಶ ಚಿನಿವಾರ, ತಾಳಿಕೋಟೆ ಪಟ್ಟಣದ ಸರ್ವಜ್ಞ ವಿದ್ಯಾಪೀಠ ಪ್ರೌಢ ಶಾಲೆಯ ಶ್ರೇಯಾ ದೇಸಾಯಿ, ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಸಾಸನೂರ ಗ್ರಾಮದ ವಿದ್ಯಾರ್ಥಿನಿ ಶ್ರೇಯಾ ಬಸವಂತ್ರಾಯ ದೇಸಾಯಿ ಹಾಗೂ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ಆಕ್ಸ್‌ಫರ್ಡ್ ಪ್ರೌಢ ಶಾಲೆಯ ಯಲ್ಲಾಲಿಂಗ ಬಸಪ್ಪ ಸುಳಿಭಾವಿ ಶೇ.100 ಪ್ರತಿಶತ ಅಂಕಗಳನ್ನು ಪಡೆದು ಪೋಷಕರು ಹಾಗೂ ಶಿಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಔಟ್‌ ಆಫ್‌ ಔಟ್‌ – ಚಿಕ್ಕಬಳ್ಳಾಪುರದ ಒಂದೇ ಶಾಲೆಯ ಮೂವರು ರಾಜ್ಯಕ್ಕೆ ಪ್ರಥಮ

    ವಿಜಯನಗರದ ಮೂವರಿಗೆ ಔಟ್ ಆಫ್ ಔಟ್: ಜಿಲ್ಲೆಯಲ್ಲಿ ಒಟ್ಟು ಮೂರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮಸ್ಥಾನ ಪಡೆದಿದ್ದಾರೆ. ಜಿಲ್ಲೆಯ ಹೂವಿನ ಹಡಗಲಿಯ, ಎಮ್.ಎಮ್.ಪಾಟೀಲ ಶಾಲೆಯ ವಿದ್ಯಾರ್ಥಿನಿ ಅಮೃತಾ, ಕೊಟ್ಟರು ನಗರದ ಗುರುದೇವ ಇಂಗ್ಲಿಷ್ ಮೀಡಿಯಂ ಶಾಲೆಯ ಕವನಾ ಮತ್ತು ವಿದ್ಯಾಶ್ರೀ 625 ಅಂಕಗಳನ್ನು ಪಡೆದಿದ್ದಾರೆ.

  • ಪಿಯುಸಿಯಲ್ಲಿ 99 ಅಂಕ ಪಡೆದ ವಿದ್ಯಾರ್ಥಿನಿಗೆ 0 ಅಂಕ ನೀಡಿದ್ದ ಶಿಕ್ಷಕಿ ಅಮಾನತು

    ಪಿಯುಸಿಯಲ್ಲಿ 99 ಅಂಕ ಪಡೆದ ವಿದ್ಯಾರ್ಥಿನಿಗೆ 0 ಅಂಕ ನೀಡಿದ್ದ ಶಿಕ್ಷಕಿ ಅಮಾನತು

    ಹೈದರಾಬಾದ್: ತೆಲಂಗಾಣದ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ ಕಳೆದ 10 ದಿನಗಳಲ್ಲಿ 23 ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ, ಮೌಲ್ಯಮಾಪನದಲ್ಲಿ ಶಿಕ್ಷಕಿ ಮಾಡಿದ ಎಡವಟ್ಟೊಂದು ಬೆಳಕಿಗೆ ಬಂದಿದೆ.

    ತೆಲುಗು ಭಾಷೆ ಪರೀಕ್ಷೆಯಲ್ಲಿ 99 ಅಂಕ ಗಳಿಸಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಮೌಲ್ಯಮಾಪಕಿ ಶೂನ್ಯ ಅಂಕ ನೀಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಲೋಪದ ಬಗ್ಗೆ ಮತ್ತೊಬ್ಬ ಮೌಲ್ಯಮಾಪಕ ಪರಿಶೀಲನೆ ನಡೆಸಬೇಕಿತ್ತು. ಆದರೆ ಆತ ಕೂಡ ನಿರ್ಲಕ್ಷ್ಯ ತೋರಿದ್ದಾನೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಮೌಲ್ಯಮಾಪಕರನ್ನು ಅಮಾನತುಗೊಳಿಸಲಾಗಿದೆ.

    12 ನೇ ತರಗತಿ ವಿದ್ಯಾರ್ಥಿಯ ತೆಲುಗು ಪತ್ರಿಕೆಯ ಮೌಲ್ಯಮಾಪನ ಮಾಡುವಾಗ 99 ಅಂಕದ ಬದಲಿಗೆ ಶೂನ್ಯ ಅಂಕಗಳನ್ನು ನೀಡಿದ್ದ ಖಾಸಗಿ ಶಾಲೆಯ ಶಿಕ್ಷಕಿಯ ಮೇಲೆ 5 ಸಾವಿರ ರೂ. ದಂಡ ವಿಧಿಸಲಾಗಿದೆ. ಅಲ್ಲದೆ ಶಿಕ್ಷಕಿಯನ್ನು ಶಾಲೆಯ ಆಡಳಿತ ಮಂಡಳಿ ವಜಾ ಮಾಡಿದೆ.

    ಪಿಯು ಮಂಡಳಿ ಏಪ್ರಿಲ್ 18 ರಂದು ಫಲಿತಾಂಶವನ್ನು ಪ್ರಕಟಗೊಳಿಸಿತ್ತು. ಪರೀಕ್ಷೆಗಳಲ್ಲಿ ಫೇಲ್ ಆದ ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.

    ಪಿಯುಸಿ ಪರೀಕ್ಷೆ ಫಲಿತಾಂಶ ಬಂದ ನಂತರ ರಾಜ್ಯದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಆದ್ದರಿಂದ ಇದನ್ನು ಖಂಡಿಸಿ ಬೃಹತ್ ಪ್ರತಿಭಟನೆಗಳು ಕೂಡ ಎಲ್ಲೆಡೆ ನಡೆದಿತ್ತು. ಅಲ್ಲದೇ ಫೇಲ್ ಆಗಿರುವ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಉಚಿತವಾಗಿ ಮರು-ಮೌಲ್ಯಮಾಪನವನ್ನು ಮಾಡಬೇಕು ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಒತ್ತಾಯಿಸಿದ್ದರು. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.

    ಪೋಷಕರು, ವಿದ್ಯಾರ್ಥಿ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿ, ಪಿಯು ಬೋರ್ಡ್ ಮತ್ತು ಫಲಿತಾಂಶದ ಎಡವಟ್ಟಿಗೆ ಕಾರಣವಾದ ಐಟಿ ಕಂಪನಿ ಗ್ಲೋಬರೆನಾ ಟೆಕ್ನಾಲಜೀಸ್, ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ.

  • ಇಬ್ಬರಿಗೆ 625 ಅಂಕ – 11 ಮಂದಿಗೆ 624 ಅಂಕ

    ಇಬ್ಬರಿಗೆ 625 ಅಂಕ – 11 ಮಂದಿಗೆ 624 ಅಂಕ

    ಬೆಂಗಳೂರು: ಇಂದು ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ಇಬ್ಬರು ವಿದ್ಯಾರ್ಥಿನಿಯರು 625ಕ್ಕೆ 625 ಅಂಕ ಪಡೆಯುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.

    ಬೆಂಗಳೂರು ದಕ್ಷಿಣದ ಅನೇಕಲ್ ತಾಲೂಕಿನ ಸೆಂಟ್ ಫಿಲೋಮಿನಾ ಇಂಗ್ಲಿಷ್ ಹೈ ಸ್ಕೂಲ್ ವಿದ್ಯಾರ್ಥಿನಿ ಸೃಜನಾ. ಡಿ ಹಾಗೂ ಉತ್ತರ ಕನ್ನಡದ ಕುಮಟ ತಾಲೂಕಿನ ಕೊಲಬಾ ವಿತೋಬ್ ಶಾನ್‍ಬಾಗ್ ಕಲ್ಬಕ್ಕರ್ ಹೈ ಸ್ಕೂಲ್‍ನ ನಾಗಾಂಜಲಿ ಪರಮೇಶ್ವರ್ ನಾಯಕ್ ಎಸ್‍ಎಸ್‍ಎಲ್‍ಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

    ಶೇ.89.33 ಫಲಿತಾಂಶ ದಾಖಲಿಸುವ ಮೂಲಕ ಹಾಸನ ಮೊದಲ ಸ್ಥಾನ ಪಡೆದುಕೊಂಡರೆ, ಶೇ.88.49 ಫಲಿತಾಂಶ ದಾಖಲಿಸಿ ರಾಮನಗರ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಶೇ.88.49 ಫಲಿತಾಂಶ ದಾಖಲಿಸುವ ಮೂಲಕ ಬೆಂಗಳೂರು ಗ್ರಾಮಾಂತರ ಮೂರನೇ ಸ್ಥಾನ ಪಡೆದುಕೊಂಡರೆ ಶೇ.53.95 ಫಲಿತಾಂಶದೊಂದಿಗೆ ಯಾದಗಿರಿ ಕೊನೆಯ ಸ್ಥಾನ ಪಡೆದುಕೊಂಡಿದೆ.

    ಶೇ.79 ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದರೆ, ಶೇ.68 ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದ ಒಟ್ಟು 8.41 ಲಕ್ಷ ವಿದ್ಯಾರ್ಥಿಗಳಲ್ಲಿ 6,08,336 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 2,99,587 ಬಾಲಕರು, 3,08,749 ಬಾಲಕಿಯರು ತೇರ್ಗಡೆಯಾಗಿದ್ದಾರೆ.

    ವಿದ್ಯಾರ್ಥಿಗಳ ಪಟ್ಟಿ:
    1. ಹೆಸರು- ಸೃಜನಾ. ಡಿ
    ಶಾಲೆ- ಸೆಂಟ್ ಫಿಲೋಮಿನಾ ಇಂಗ್ಲಿಷ್ ಹೈ ಸ್ಕೂಲ್ , ಅನೇಕಲ್, ಬೆಂಗಳೂರು ದಕ್ಷಿಣ
    ಪಡೆದ ಅಂಕ- 625

    2. ಹೆಸರು- ನಾಗಾಂಜಲಿ ಪರಮೇಶ್ವರ್ ನಾಯಕ್
    ಶಾಲೆ- ಕೊಲಬಾ ವಿತೋಬ್ ಶಾನ್‍ಭಾಗ್ ಕಲ್ಬಕ್ಕರ್ ಹೈ ಸ್ಕೂಲ್, ಕುಮಟ, ಉತ್ತರ ಕನ್ನಡ
    ಪಡೆದ ಅಂಕ-625

    3. ಹೆಸರು- ಭಾವನಾ ಯು.ಎಸ್
    ಶಾಲೆ- ಸೆಂಟ್ ಜಾನ್ ಇಂಗ್ಲಿಷ್ ಹೈ ಸ್ಕೂಲ್, ಬೆಂಗಳೂರು ಉತ್ತರ
    ಪಡೆದ ಅಂಕ- 624

    4. ಹೆಸರು- ಭಾವನಾ .ಆರ್
    ಶಾಲೆ- ಸೌಂದರ್ಯ ಹೈ ಸ್ಕೂಲ್, ಬೆಂಗಳೂರು ಉತ್ತರ
    ಪಡೆದ ಅಂಕ-624

    5. ಹೆಸರು- ಸಾಯಿರಾಂ
    ಶಾಲೆ- ಲಿಟಲ್ ಲಿಲ್ಲಿ ಇಂಗ್ಲಿಷ್ ಹೈ ಸ್ಕೂಲ್, ಬೆಂಗಳೂರು ಉತ್ತರ
    ಪಡೆದ ಅಂಕ- 624

    6. ಹೆಸರು- ಶಾಂಭವಿ ಎಚ್.ವಿ
    ಶಾಲೆ- ಸಮಾಜ ಸೇವಾ ಮಂಡಲಿ ಹೈ ಸ್ಕೂಲ್, ಬೆಂಗಳೂರು ದಕ್ಷಿಣ
    ಪಡೆದ ಅಂಕ- 624

    7. ಹೆಸರು- ಹರ್ಷಿತ್ .ಸಿ
    ಶಾಲೆ- ಶ್ರೀ ಸಿದ್ದಗಂಗಾ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್, ತುಮಕೂರು
    ಪಡೆದ ಅಂಕ- 624

    8. ಹೆಸರು- ಸಿಂಚನಾ ಲಕ್ಷ್ಮೀ
    ಶಾಲೆ- ವಿವೇಕಾನಂದ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್, ಪುತ್ತೂರು, ಮಂಗಳೂರು
    ಪಡೆದ ಅಂಕ-624

    9. ಹೆಸರು- ಕೃಪಾ ಕೆ.ಆರ್
    ಶಾಲೆ- ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್, ಸುಳ್ಯಾ, ಮಂಗಳೂರು
    ಪಡೆದ ಅಂಕ- 624

    10. ಹೆಸರು- ಅನುಪಮಾ ಕಾಮತ್
    ಶಾಲೆ- ಶ್ರೀ ವೆಂಕಟರಮಣ ಸ್ವಾಮಿ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್, ಬಂಟ್ವಾಳ, ಮಂಗಳೂರು
    ಪಡೆದ ಅಂಕ- 624

    11. ಹೆಸರು- ಚಿನ್ಮಯ್
    ಶಾಲೆ- ವಿಠಲ್ ಜೇಸೀಸ್ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್, ಬಂಟ್ವಾಳ, ಮಂಗಳೂರು
    ಪಡೆದ ಅಂಕ-624

    12. ಹೆಸರು- ಪ್ರಗತಿ .ಎಂ. ಗೌಡ
    ಶಾಲೆ- ವಿಜಯ ಹೈ ಸ್ಕೂಲ್, ಹಾಸನ
    ಪಡೆದ ಅಂಕ-624

    13. ಹೆಸರು- ಅಭಿನ್ ಬಿ
    ಶಾಲೆ – ವಿಜಯ್ ಹೈ ಸ್ಕೂಲ್ ಹಾಸನ
    ಪಡೆದ ಅಂಕ – 624