Tag: exam

  • 9ನೇ ತರಗತಿ ವಿದ್ಯಾರ್ಥಿಗಳಿಗೆ ಪುಸ್ತಕ ನೋಡಿ ಪರೀಕ್ಷೆ ಬರೆಯಲು ಅವಕಾಶ – ಹೇಗಿರಲಿದೆ ಎಕ್ಸಾಂ?

    9ನೇ ತರಗತಿ ವಿದ್ಯಾರ್ಥಿಗಳಿಗೆ ಪುಸ್ತಕ ನೋಡಿ ಪರೀಕ್ಷೆ ಬರೆಯಲು ಅವಕಾಶ – ಹೇಗಿರಲಿದೆ ಎಕ್ಸಾಂ?

    ಷ್ಟು ದಿನ ಮನೆಯಲ್ಲಿ ಕಂಠಪಾಠ ಮಾಡಿಕೊಂಡು ಹೋಗಿ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದ ಮಕ್ಕಳಿಗೆ ಸಿಬಿಎಸ್‌ಇ ಗುಡ್‌ನ್ಯೂಸ್‌ ಕೊಟ್ಟಿದೆ. ಇನ್ಮುಂದೆ ಓದಿಕೊಂಡು ಹೋಗಿ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಮಕ್ಕಳ ಟೆನ್ಷನ್‌ ಪರಿಹರಿಸುವ ಸಲುವಾಗಿ 2026-27ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ 9ನೇ ತರಗತಿ ವಿದ್ಯಾರ್ಥಿಗಳಿಗೆ ತೆರೆದ ಪುಸ್ತಕ (ಓಪನ್ ಬುಕ್) ಪರೀಕ್ಷೆ ಜಾರಿಗೊಳಿಸಲು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ ಸಿಬಿಎಸ್ಇ ನಿರ್ಧಾರ ಕೈಗೊಂಡಿದೆ.

    ಈ ಹೊಸ ನೀತಿ ಜಾರಿಯಾದಲ್ಲಿ ವಿದ್ಯಾರ್ಥಿಗಳು ಪಠ್ಯಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯಲು ಅವಕಾಶ ಸಿಗಲಿದೆ. ಹಾಗಿದ್ರೆ ಏನಿದು ತೆರೆದ ಪುಸ್ತಕ ಪರೀಕ್ಷಾ ಪದ್ಧತಿ? ಪರೀಕ್ಷೆಗಳು ಹೇಗೆ ನಡೆಯಲಿದೆ? ಪ್ರಯೋಜನಗಳೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

    ತೆರೆದ ಪುಸ್ತಕ ಪರೀಕ್ಷೆ:
    ಕೇಂದ್ರೀಯ ಮಾಧ್ಯಮ ಶಿಕ್ಷಣ ಮಂಡಳಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ಮಾಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ತೆರೆದ ಪುಸ್ತಕ ಪರೀಕ್ಷಾ ಪದ್ಧತಿ ಜಾರಿ ಮಾಡಲಾಗುತ್ತಿದೆ. ಹೀಗಾಗಿ ಇನ್ಮುಂದೆ ವಿದ್ಯಾರ್ಥಿಗಳು ಪಠ್ಯ ಪುಸ್ತಕ ನೋಡಿ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ. ಹಳೆಯ ಪರೀಕ್ಷಾ ಪದ್ಧತಿ ಕಂಠ ಪಾಠಕ್ಕೆ ಸಮಯ ಕೊಡುತ್ತೆ ಅನ್ನೋ ವಾದ ಇತ್ತು. ಈಗಿನ ಹೊಸ ಪರೀಕ್ಷಾ ಪದ್ಧತಿ ವಿದ್ಯಾರ್ಥಿ ಸಾಮರ್ಥ್ಯವನ್ನ ಗಣನೆಗೆ ತೆಗೆದುಕೊಳ್ಳುತ್ತದೆ. ಇಂತಹ ಕ್ರಮ ಆಯ್ಕೆ ಮಾಡುವ ಅನುಸರಿಸುವ ಹಕ್ಕು ಆಯಾ ಶಾಲೆಗಳಿಗೆ ಬಿಟ್ಟಿರುತ್ತದೆ. ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು -2023 ರಾಷ್ಟ್ರೀಯ ಶಿಕ್ಷಣ ನೀತಿ 2020ರ ಸಮನ್ವಯದೊಂದಿಗೆ ಹೊಸ ಪಠ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ.

    ಹಳೆಯ ಪರೀಕ್ಷಾ ಪದ್ಧತಿ ಕಂಠಪಾಠಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದರೆ ಹೊಸ ನೀತಿಯು ಸಾಮರ್ಥ್ಯ ಆಧಾರಿತ ಕಲಿಕೆಗೆ ಮಹತ್ವ ಕೊಡುತ್ತದೆ. ಮುಖ್ಯ ಕಲಿಕಾ ವಿಷಯಗಳಾದ ಭಾಷೆ, ಗಣಿತ, ವಿಜ್ಞಾನ ಸಮಾಜ ವಿಜ್ಞಾನವನ್ನು ಇದು ಒಳಗೊಳ್ಳಲಿದೆ. ಈ ಕ್ರಮವನ್ನು ಆಯ್ಕೆ ಮಾಡಿಕೊಳ್ಳುವ ಅಥವಾ ಬಿಡುವ ಸ್ವಾತಂತ್ರ್ಯವನ್ನು ಶಾಲೆಗಳಿಗೆ ನೀಡಲಾಗಿದೆ.

    ತೆರೆದ ಪುಸ್ತಕ ಪರೀಕ್ಷೆ ಎಂದರೇನು?
    ತೆರೆದ ಪುಸ್ತಕ ಪರೀಕ್ಷೆಗಳನ್ನು ಜಾರಿಗೆ ತಂದ ನಂತರ 9ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಪ್ರಶ್ನೆಗಳಿಗೆ ಉತ್ತರಿಸುವಾಗ ಪಠ್ಯಪುಸ್ತಕಗಳು, ತರಗತಿ ಟಿಪ್ಪಣಿಗಳು, ಗ್ರಂಥಾಲಯ ಪುಸ್ತಕಗಳನ್ನು ಬಳಸುವ ಅವಕಾಶವಿರುತ್ತದೆ. 9ನೇ ತರಗತಿಯಲ್ಲಿ ತೆರೆದ ಪುಸ್ತಕ ಪುಸ್ತಕ ಪರೀಕ್ಷೆಗಳನ್ನು ಪ್ರತಿ ಅವಧಿಗೆ 3 ಪೆನ್ನು-ಪೇಪರ್ ಮೌಲ್ಯಮಾಪನಗಳ ಭಾಗವಾಗಿ ಸಂಯೋಜಿಸಲಾಗುತ್ತದೆ. ಇದು ಭಾಷೆ, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನಗಳಂತಹ ಪ್ರಮುಖ ವಿಷಯಗಳನ್ನು ಒಳಗೊಂಡಿದೆ. ಶಾಲೆಗಳು ಇದನ್ನು ಶಿಫಾರಸು ಮಾಡುತ್ತವೆ. ಆದರೆ ಅದರ ಅನುಷ್ಠಾನವು ಕಡ್ಡಾಯವಾಗಿರುವುದಿಲ್ಲ.

    ಹೇಗಿರಲಿದೆ ತೆರೆದ ಪುಸ್ತಕ ಪರೀಕ್ಷೆ?
    -ಅಧ್ಯಯನವು ಪೂರ್ಣಗೊಳಿಸಲು ತೆಗೆದುಕೊಂಡ ಸಮಯ ಹಾಗೂ ಪಾಲುದಾರರಿಂದ ಪ್ರತಿಕ್ರಿಯೆಯಂತಹ ಅಂಶಗಳನ್ನು ಮೌಲ್ಯಮಾಪನ ಮಾಡಿದೆ.
    -ಸಿಬಿಎಸ್‌ಇ ( CBSE) ತೆರೆದ ಪುಸ್ತಕ ಮೌಲ್ಯಮಾಪನ ಸ್ವರೂಪವು ಭಾಷೆಗಳು, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನದಂತಹ ಪ್ರಮುಖ ಮುಖ ವಿಷಯಗಳನ್ನು ಒಳಗೊಂಡಿರುತ್ತದೆ.
    -ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳು, ತರಗತಿ ಟಿಪ್ಪಣಿಗಳು ಮತ್ತು ಇತರ ಅನುಮೋದಿತ ಸಂಪನ್ಮೂಲಗಳನ್ನು ಉಲ್ಲೇಖಿಸಬಹುದು.
    -ಈ ಸ್ವರೂಪವನ್ನು ಅಳವಡಿಸಿಕೊಳ್ಳಬೇಕೋ ಅಥವಾ ಬೇಡವೋ ಎಂಬುದು ಶಾಲೆಗಳಿಗೆ ಬಿಟ್ಟದ್ದು, ಅದು ಒಂದು ಆಯ್ಕೆಯಾಗಿರುತ್ತದೆ ಎಂದು CBSE ಹೇಳಿದೆ. ಪ್ರತಿ ಶೈಕ್ಷಣಿಕ ಅವಧಿಯಲ್ಲಿ ನಡೆಸುವ ಮೂರು ಪೆನ್ನು-ಪೇಪರ್ ಪರೀಕ್ಷೆಗಳ ಭಾಗವಾಗಿ ಮೌಲ್ಯಮಾಪನ ಇರುತ್ತದೆ.
    -CBSE ಪರೀಕ್ಷೆಗಳು ವರ್ಷಕ್ಕೆ 2 ಬಾರಿ ನಡೆಯಲಿವೆ ಎಂದು ಕೆಲವು ತಿಂಗಳ ಹಿಂದೆಯೇ ಘೋಷಿಸಲಾಗಿತ್ತು.
    -ಈ ಎರಡನೇ ಹಂತದ ಪರೀಕ್ಷೆಯು ವಿದ್ಯಾರ್ಥಿಗಳಿಗೆ ಐಚ್ಛಿಕವಾಗಿರುತ್ತದೆ ಎಂದು ಸಿಬಿಎಸ್‌ಇ ತಿಳಿಸಿದೆ. ಎರಡನೇ ಹಂತದ ಪರೀಕ್ಷೆ ವಿಶೇಷವಾಗಿ ಸುಧಾರಣೆಗಾಗಿ ಇರುತ್ತದೆ.

    ತೆರೆದ ಪುಸ್ತಕ ಪರೀಕ್ಷೆ ಪ್ರಯೋಜನವೇನು?
    ಈ ಉಪಕ್ರಮವು ಮಕ್ಕಳು ಪರೀಕ್ಷೆಯ ಸಮಯದಲ್ಲಿ ನೀಡಲಾದ ಪುಸ್ತಕಗಳು ಹಾಗೂ ಟಿಪ್ಪಣಿಗಳನ್ನು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಇದು ಅವರ ಸಾಮರ್ಥ್ಯವನ್ನು ನಿರ್ಣಯಿಸುತ್ತದೆ.

    ಈ ಪರೀಕ್ಷೆಯೂ ವಿದ್ಯಾರ್ಥಿಗಳಲ್ಲಿ ಕಂಠಪಾಠ ಮಾಡುವ ಅಭ್ಯಾಸವನ್ನು ತೆಗೆದುಹಾಕುವ ಪ್ರಯತ್ನವಾಗಿದೆ. ಬದಲಾಗಿ, ಅನ್ವಯಿಸುವ ಹಾಗೂ ವಿಶ್ಲೇಷಿಸುವ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ.

    2014ರಲ್ಲೂ ಸಹ ನಡೆದಿತ್ತು ಪರೀಕ್ಷೆ:
    CBSE ಓಪನ್-ಬುಕ್ ಪರೀಕ್ಷೆಯನ್ನು ಬಳಸುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಮಂಡಳಿಯೂ 2014ರಲ್ಲಿ ಓಪನ್-ಬುಕ್ ಪರೀಕ್ಷೆಯನ್ನು ಸಹ ನಡೆಸಿತ್ತು. ನಂತರ ಅದನ್ನು ಓಪನ್ ಟೆಕ್ಸ್ ಬೇಸ್ಟ್ ಅಸೆಸ್ಟೆಂಟ್ (OTBA) ಎಂದು ಹೆಸರಿಸಲಾಯಿತು. ಈ ಅವಧಿಯಲ್ಲಿ, 9ನೇ ತರಗತಿಯಲ್ಲಿ ಹಿಂದಿ, ಇಂಗ್ಲಿಷ್, ಗಣಿತ ಮತ್ತು ಸಮಾಜ ವಿಜ್ಞಾನದ ಅಂತಿಮ ಪರೀಕ್ಷೆಗಳಲ್ಲಿ ಮತ್ತು 11ನೇ ತರಗತಿಯಲ್ಲಿ ಅರ್ಥಶಾಸ್ತ್ರ, ಜೀವಶಾಸ್ತ್ರ ಮತ್ತು ಭೂಗೋಳಶಾಸ್ತ್ರದಲ್ಲಿ OTBA ಅನ್ನು ಪ್ರಯತ್ನಿಸಲಾಯಿತು. ಆದಾಗ್ಯೂ, ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ OTRAಯಶಸ್ವಿಯಾಗಿಲ್ಲ ಎಂದು ಕಾರಣ ನೀಡಿ 2017-18ರಲ್ಲಿ ಅದನ್ನು ನಿಲ್ಲಿಸಲಾಯಿತು.

  • ಪರೀಕ್ಷೆ ಬರೆಯಲು ತಂದೆಯ ಕೈ ಹಿಡಿದು ತುಂಬಿ ಹರಿಯುತ್ತಿರುವ ನದಿ ದಾಟಿದ ವಿದ್ಯಾರ್ಥಿನಿ

    ಪರೀಕ್ಷೆ ಬರೆಯಲು ತಂದೆಯ ಕೈ ಹಿಡಿದು ತುಂಬಿ ಹರಿಯುತ್ತಿರುವ ನದಿ ದಾಟಿದ ವಿದ್ಯಾರ್ಥಿನಿ

    ಕಲಬುರಗಿ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸತತ ಮಳೆ (Rain) ಸುರಿಯುತ್ತಿದ್ದು, ಒಂದಡೆ ಜನಜೀವನ ಅಸ್ತವ್ಯಸ್ತ ಆಗಿದೆ. ಮತ್ತೊಂದಡೆ ವಿದ್ಯಾರ್ಥಿನಿಯೊಬ್ಬಳು (Student) ಪ್ರಾಣದ ಹಂಗು ತೊರೆದು ಪರೀಕ್ಷೆ ಬರೆಯಲು ಉಕ್ಕಿ ಹರಿಯುತಿದ್ದ ನದಿ ದಾಟಿದ ಪ್ರಸಂಗ ನಡೆದಿದೆ.

    ಜಿಲ್ಲೆಯ ಸೇಡಂ (Sedam) ತಾಲೂಕಿನ ಸಂಗಾವಿ (ಟಿ) ಗ್ರಾಮದ ಬಿಎ ಅಂತಿಮ ವರ್ಷದ ವಿಧ್ಯಾರ್ಥಿನಿ ರಾಣಿ ಪರೀಕ್ಷೆ ಬರೆಯಲು ತಂದೆಯ ಕೈ ಹಿಡಿದು ನದಿ ದಾಟಿದ್ದಾಳೆ. ಪರೀಕ್ಷೆ ಬರೆಯಲು ಸೇಡಂ ಪಟ್ಟಣಕ್ಕೆ ಹೋಗುವಾಗ ವಿದ್ಯಾರ್ಥಿನಿಯ ತಂದೆ ಹೆಗಲಿಗೆ ಬ್ಯಾಗ್ ಹಾಕಿಕೊಂಡು ಮಗಳ ಕೈಹಿಡಿದು ಕಾಗಿಣಾ ನದಿ ದಾಟಿಲು ಹರಸಾಹಸಪಟ್ಟಿದ್ದಾರೆ. ಇದನ್ನೂ ಓದಿ: ದರ್ಶನ್‌-ಪವಿತ್ರಾ ಲಿವ್‌ ಇನ್‌ ರಿಲೇಷನ್‌ ಶಿಪ್‌ನಲ್ಲಿದ್ದರು: ಸರ್ಕಾರ ಪರ ವಕೀಲ

    ನಿರಂತರ ಮಳೆಯಿಂದ ವಿವಿಧಡೆ ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಕಾಗಿಣ ನದಿಯು ಮೈದುಂಬಿ ಹರಿಯುತ್ತಿದ್ದು, ವಿದ್ಯಾರ್ಥಿನಿ ಅಪಾಯವನ್ನೂ ಲೆಕ್ಕಿಸದೇ ನದಿ ದಾಟಿ ಪರೀಕ್ಷೆ ಬರೆದಿದ್ದಾಳೆ. ಇದೀಗ ವಿದ್ಯಾರ್ಥಿನಿ ತಂದೆಯ ಕೈಹಿಡಿದು ನದಿ ದಾಟುತ್ತಿರುವ ವಿಡಿಯೋ ವೈರಲ್ ಆಗಿದೆ.

  • ಮದುವೆ ಮಂಟಪದಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಎಕ್ಸಾಂ ಬರೆದ ನವವಧು

    ಮದುವೆ ಮಂಟಪದಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಎಕ್ಸಾಂ ಬರೆದ ನವವಧು

    ಹಾಸನ: ಮದುವೆ ಮಂಟಪದಲ್ಲಿ ತಾಳಿ ಕಟ್ಟಿಸಿಕೊಂಡ ಕೂಡಲೇ ನವವಧು (Bride) ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ (Exam) ಬರೆದ ಘಟನೆ ಹಾಸನ (Hassan) ನಗರದಲ್ಲಿ ನಡೆದಿದೆ.

    ಹಾಸನ ನಗರದ ಚನ್ನಪಟ್ಟಣ ಬಡಾವಣೆಯ ಕುಮಾರ್ ಅನಸೂಯ ದಂಪತಿ ಪುತ್ರಿ ಕವನ ಪರೀಕ್ಷೆ ಬರೆದ ನವವಧು. ಹಾಸನದ ಪ್ರೈಡ್ ಪದವಿ ಕಾಲೇಜಿನಲ್ಲಿ ಅಂತಿಮ ಬಿಕಾಂ ಓದುತ್ತಿರುವ ಕವನ ಅಂತಿಮ ವರ್ಷದ ಕೊನೆಯ ಸಬ್ಜೆಕ್ಟ್ ಪರೀಕ್ಷೆಗೆ ಹಾಜರಾಗಿದ್ದಾರೆ. ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಡಿಜಿಪಿ ಪ್ರಮೋಷನ್‌ಗೆ ತಡೆ – ಅಲೋಕ್ ಕುಮಾರ್‌ಗೆ ಇಲಾಖೆಯಲ್ಲೇ ಪಿತೂರಿ?

    ಹಾಸನದ ಗುಡ್ಡೆನಹಳ್ಳಿಯ ದಿನೇಶ್ ಜೊತೆ ಕವನ ಮದುವೆ ನಿಶ್ಚಯವಾಗಿದ್ದು, ಇಂದು ಬೆಳಗ್ಗೆ 9 ಗಂಟೆಗೆ ಮುಹೂರ್ತವಿತ್ತು. ಮಾಂಗಲ್ಯ ಧಾರಣೆ ಆಗುತ್ತಲೇ ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿ ಬಂದ ನವವಧು ಅಂತಿಮ ವರ್ಷದ ಬಿಕಾಂ ಆದಾಯ ತೆರಿಗೆ ಎರಡು ವಿಷಯಗಳ ಪರೀಕ್ಷೆ ಬರೆದಿದ್ದಾರೆ. ಇದನ್ನೂ ಓದಿ: Exclusive: ಕಾಮಿಡಿ ಕಿಲಾಡಿ ಸ್ಟಾರ್‌, ನಟ ಮಡೆನೂರು ಮನು ವಿರುದ್ಧ ರೇಪ್‌ ಕೇಸ್‌

    ಪರೀಕ್ಷೆ ಬರೆಯಲೇಬೇಕೆಂಬ ಯುವತಿ ಆಸೆಗೆ ಆಕೆಯ ಪೋಷಕರು ಸಾಥ್ ನೀಡಿದ್ದು, ಮುಹೂರ್ತ ಮುಗಿಯುತ್ತಲೇ ಸಹೋದರಿಯನ್ನು ಅಣ್ಣ ಕಾರ್ತಿಕ್ ಪರೀಕ್ಷಾ ಕೇಂದ್ರಕ್ಕೆ ಕರೆ ತಂದಿದ್ದಾರೆ. ಪರೀಕ್ಷೆ ಬರೆದ ಬಳಿಕ ಯುವತಿ ಆರತಕ್ಷತೆಗೆ ಕಲ್ಯಾಣಮಂಟಪಕ್ಕೆ ವಾಪಸ್ ಆಗಿದ್ದಾರೆ. ಇದನ್ನೂ ಓದಿ: ಜ್ಯೋತಿಗೆ ಒಡಿಶಾ ಲಿಂಕ್ – ‘ಪಾಕ್‌ನಲ್ಲಿ ಒಡಿಶಾ ಹುಡುಗಿ’ ವೀಡಿಯೋ ಮಾಡಿದ್ದ ಯೂಟ್ಯೂಬರ್ ವಿಚಾರಣೆ

  • ದ್ವಿತೀಯ ಪಿಯುಸಿ ಪರೀಕ್ಷೆ- 2 ಫಲಿತಾಂಶ ಪ್ರಕಟ

    ದ್ವಿತೀಯ ಪಿಯುಸಿ ಪರೀಕ್ಷೆ- 2 ಫಲಿತಾಂಶ ಪ್ರಕಟ

    ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ- 2ರ ಫಲಿತಾಂಶ ( 2nd PUC Exam 2 Result)ಪ್ರಕಟವಾಗಿದ್ದು 31.27% ಫಲಿತಾಂಶ ದಾಖಲಾಗಿದೆ.

    ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ ಏ.24 ರಿಂದ ಮೇ 8 ರವರೆಗೆ ಪರೀಕ್ಷೆ ನಡೆಸಿತ್ತು.

     

    1,94,077 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರೆ 60,692 ವಿದ್ಯಾರ್ಥಿಗಳು (Students) ಪಾಸ್‌ ಆಗಿದ್ದಾರೆ. ಫಲಿತಾಂಶ ಸುಧಾರಣೆಗೆ 71,964 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಈ ಪೈಕಿ 41,719 ವಿದ್ಯಾರ್ಥಿಗಳು ಅಂಕ ಹೆಚ್ಚಿಸಿದ್ದಾರೆ.

    ವಿದ್ಯಾರ್ಥಿಗಳು www. karresults.nic.in ವೆಬ್‌ಸೈಟ್‌ಗೆ ಭೇಟಿ ನೀಡಿ ಫಲಿತಾಂಶವನ್ನು ವೀಕ್ಷಿಸಬಹುದು.

  • SSLC ಫಲಿತಾಂಶ| 6 ವಿಷಯಗಳಲ್ಲಿ ಫೇಲ್‌ ಆದ ಪುತ್ರನಿಗೆ ಕೇಕ್‌ ತಿನ್ನಿಸಿದ ಪೋಷಕರು!

    SSLC ಫಲಿತಾಂಶ| 6 ವಿಷಯಗಳಲ್ಲಿ ಫೇಲ್‌ ಆದ ಪುತ್ರನಿಗೆ ಕೇಕ್‌ ತಿನ್ನಿಸಿದ ಪೋಷಕರು!

    ಬಾಗಲಕೋಟೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ (SSLC) ಆರು ವಿಷಯದಲ್ಲಿ ಫೇಲ್‌ ಆದ ಪುತ್ರನಿಗೆ (Son) ಪೋಷಕರು ಕೇಕ್‌ (Cake) ತಿನ್ನಿಸಿ ಆತ್ಮಸ್ಥೈರ್ಯ ತುಂಬಿದ್ದಾರೆ.

    ಪರೀಕ್ಷೆಯಲ್ಲಿ ಫೇಲ್‌ ಆದರೂ ಆತ್ಮಸ್ಥೈರ್ಯ ಕುಗ್ಗಬಾರದು ಎಂಬ ಎಂಬ ಕಾರಣಕ್ಕೆ ತಂದೆ, ತಾಯಿ ಸಹೋದರ, ಸಹೋದರಿ, ಅಜ್ಜಿ ಹಾಗೂ ಕುಟುಂಬವರು ಕೇಕ್‌ ತಿನ್ನಿಸಿದ್ದಾರೆ.

    ಬಸವೇಶ್ವರ ಹೈಸ್ಕೂಲ್‌ನಲ್ಲಿ ಆಂಗ್ಲ ಮಾಧ್ಯಮದಲ್ಲಿ 10ನೇ ತರಗತಿ ಓದಿದ್ದ ಅಭಿಷೇಕ್‌ ಯಲ್ಲಪ್ಪ ಚೊಳಚಗುಡ್ಡ 625ಕ್ಕೆ 200 ಅಂಕ ಪಡೆದು ಫೇಲ್‌ ಆಗಿದ್ದ. ಇದನ್ನೂ ಓದಿ: SSLC Results – ದಕ್ಷಿಣ ಕನ್ನಡ ಫಸ್ಟ್‌, ಕಲಬುರಗಿ ಲಾಸ್ಟ್‌ : ನಿಮ್ಮ ಜಿಲ್ಲೆಗೆ ಎಷ್ಟನೇ ಸ್ಥಾನ?

    6ಕ್ಕೆ 6 ವಿಷಯಗಳಲ್ಲಿ ಫೇಲ್‌ ಆದ ಹಿನ್ನೆಲೆಯಲ್ಲಿ ನವನಗರದಲ್ಲಿರುವ ನಿವಾಸದಲ್ಲಿ ಅಭಿಷೇಕ್‌ ಬೇಸರದಲ್ಲಿದ್ದ. ಬೇಸರದಲ್ಲಿದ್ದ ಅಭಿಷೇಕ್‌ಗೆ ಆತ್ಮಸ್ಥೈರ್ಯ ತುಂಬಲು ಅಚ್ಚರಿ ಎಂಬಂತೆ ಪೋಷಕರು (Parents) ಕೇಕ್‌ ತಿನ್ನಿಸಿ ಸಿಹಿ ಮುತ್ತು ನೀಡಿ ಸಮಾಧಾನ ಮಾಡಿದ್ದಾರೆ. ಪರೀಕ್ಷೆ ಒಂದೇ ಜೀವನವಲ್ಲ ಮರಳಿ ಪ್ರಯತ್ನ ಮಾಡು ಎಂದು ಹೆಗಲ ಮೇಲೆ ಕೈ ಇಟ್ಟು ತಂದೆ ಧೈರ್ಯ ತುಂಬಿದ್ದಾರೆ. ಇದನ್ನೂ ಓದಿ: SSLC ಫಲಿತಾಂಶ ಪ್ರಕಟ; ಶೇ.62.34 ರಿಸಲ್ಟ್‌ – ಈ ಬಾರಿಯೂ ಬಾಲಕಿಯರೇ ಮೇಲುಗೈ

    15 ತಿಂಗಳ ಮಗುವಾಗಿದ್ದಾಗ ಎರಡು ಪಾದ ಸುಟ್ಟು ಹೋಗಿದ್ದರಿಂದ ಅಭಿಷೇಕ್‌ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದಾನೆ. ಇದರಿಂದಾಗಿ ಉತ್ತರ ನೆನಪಿಟ್ಟುಕೊಂಡು ಬರೆಯಲು ಅಭಿಷೇಕ್‌ಗೆ ಸಾಧ್ಯವಾಗಿಲ್ಲ.

    ಫೇಲ್ ಆಗಿದ್ದರಿಂದ ಬಹಳ ಬೇಸರವಾಗಿತ್ತು. ತಂದೆ, ತಾಯಿ ಎಲ್ಲರೂ ಈಗ ಧೈರ್ಯ ತುಂಬಿದ್ದಾರೆ. ಫೇಲ್ ಆದರೂ ಧೈರ್ಯ ತುಂಬಿ ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ. ನಾನು ಪರೀಕ್ಷೆಯಲ್ಲಿ ಫೇಲ್‌ ಆಗಿರಬಹುದು, ಜೀವನದಲ್ಲಿ ಫೇಲ್ ಆಗಲ್ಲ. ಮತ್ತೆ ಪ್ರಯತ್ನ ಮಾಡಿ ಪಾಸ್ ಆಗುತ್ತೇನೆ. ಪರೀಕ್ಷೆಯಲ್ಲಿ ಫೇಲ್ ಆದರೂ ಜೀವನದಲ್ಲಿ ಸಾಧಿಸಿ ತೋರಿಸುತ್ತೇನೆ ಎಂದು ಅಭಿಷೇಕ್‌ ಹೇಳಿದ್ದಾನೆ.

  • ಜನಿವಾರ ತೆಗೆದು ಒಂದು ಸಮುದಾಯಕ್ಕೆ ಅವಮಾನ ಮಾಡಿದ್ದು ಸರಿಯಲ್ಲ : ನಿಖಿಲ್ ಖಂಡನೆ

    ಜನಿವಾರ ತೆಗೆದು ಒಂದು ಸಮುದಾಯಕ್ಕೆ ಅವಮಾನ ಮಾಡಿದ್ದು ಸರಿಯಲ್ಲ : ನಿಖಿಲ್ ಖಂಡನೆ

    ಬೆಂಗಳೂರು: ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ (CET Exam) ಅವಕಾಶ ಕೊಡದ ಪ್ರಕರಣವನ್ನ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಖಂಡಿಸಿದ್ದಾರೆ.

    ಘಟನೆ ಬಗ್ಗೆ ಜೆಪಿ ಭವನದಲ್ಲಿ ಮಾತನಾಡಿದ ಅವರು, ಜನಿವಾರ ಹಾಕಿದ್ದಕ್ಕೆ ಪರೀಕ್ಷೆಗೆ ಕೂರಿಸದೇ ಇರುವುದು ಸರಿಯಲ್ಲ.ಈ ಘಟನೆಯನ್ನ ನಾನು ಖಂಡಿಸುತ್ತೇನೆ. ಜನಿವಾರ ಹಾಕಿಕೊಂಡು ಕಾಪಿ ಹೊಡೆಯೋಕೆ ಆಗುತ್ತಾ?ಜನಿವಾರದಲ್ಲಿ ಕಾಪಿ ಚೀಟಿ ಇಟ್ಟುಕೊಂಡು ಹೋಗೋಕೆ ಆಗುತ್ತಾ?ಜನಿವಾರ ಇದ್ದರೆ ಏನು ಸಮಸ್ಯೆ ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಜಾತಿಗಣತಿ ವರದಿ ಚರ್ಚೆಗೆ ಕೂಡಲೇ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆಯಬೇಕು: ನಿಖಿಲ್ ಕುಮಾರಸ್ವಾಮಿ

     

    ಸ್ಮಾರ್ಟ್ ವಾಚ್, ಎಲೆಕ್ಟ್ರಿಕ್ ವಸ್ತು ಅಂತಹದ್ದನ್ನ ಬೇಕಿದ್ರೆ ನೀವು ತೆಗೆಸಬೇಕು ಸರಿ. ಆದರೆ ಜನಿವಾರ ತೆಗೆದು ಒಂದು ಸಮುದಾಯಕ್ಕೆ ಅವಮಾನ ಮಾಡೋದು ಸರಿಯಲ್ಲ. ಈ ಘಟನೆಗೆ ಕಾರಣವಾಗಿರೋರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಅವರಿಗೆ ಬುದ್ದಿವಾದ ಹೇಳಬೇಕು. ಮುಂದೆ ಇಂತಹ ಘಟನೆ ಆಗದಂತೆ ಕ್ರಮವಹಿಸಬೇಕು ಅಂತ ಆಗ್ರಹ ಮಾಡಿದರು. ಇದನ್ನೂ ಓದಿ: ಮಾಜಿ ಡಾನ್ ಮುತ್ತಪ್ಪ ರೈ ಆಸ್ತಿ ಎಷ್ಟಿದೆ? – ವಿವಾದ ಹುಟ್ಟಿಕೊಂಡಿದ್ದು ಯಾವಾಗ?

  • ಸಿಇಟಿ ಕೀ ಉತ್ತರ ಪ್ರಕಟ: ಕೆಇಎ

    ಸಿಇಟಿ ಕೀ ಉತ್ತರ ಪ್ರಕಟ: ಕೆಇಎ

    ಬೆಂಗಳೂರು: ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (CET) ಗುರುವಾರ ಮುಗಿದಿದ್ದು, ಶುಕ್ರವಾರವೇ ಎಲ್ಲ ನಾಲ್ಕು ವಿಷಯಗಳ 16 ವರ್ಷನ್‌ಗಳ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

    ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ ಮತ್ತು ಜೀವ ವಿಜ್ಞಾನ ವಿಷಯಗಳ ಕೀ ಉತ್ತರಗಳನ್ನು ಪ್ರಕಟಿಸಿದ್ದು, ಆಕ್ಷೇಪಣೆಗಳು ಇದ್ದಲ್ಲಿ ಏ.22ರ ಸಂಜೆ 5 ಗಂಟೆ ಒಳಗೆ ಆನ್‌ಲೈನ್‌ ಮೂಲಕ ಸಲ್ಲಿಸಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಆಕ್ಷೇಪಣೆ ಸಲ್ಲಿಸುವ ಸಂದರ್ಭದಲ್ಲಿ ಪತ್ರಿಕೆಯ ವಿವರ, ಪರೀಕ್ಷಾ ದಿನಾಂಕ, ವರ್ಷನ್‌ ಕೋಡ್‌, ಪ್ರಶ್ನೆ ಸಂಖ್ಯೆ ಹಾಗೂ ಪೂರಕ ದಾಖಲೆಗಳನ್ನು ಪಿಡಿಎಫ್‌ ರೂಪದಲ್ಲಿ ಸಲ್ಲಿಸಬೇಕು. ಈ ಮಾಹಿತಿ ಸರಿ ಇಲ್ಲದಿದ್ದಲ್ಲಿ ಅಂತಹ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.  ಇದನ್ನೂ ಓದಿ: ದೆಹಲಿಯಲ್ಲಿ ಯುವಕನ ಬರ್ಬರ ಕೊಲೆ – ಲೇಡಿ ಡಾನ್‌ ಜಿಕ್ರಾ ತಂಡದಿಂದ ಕೃತ್ಯ

     

    ತಿದ್ದುಪಡಿಗೆ ಅವಕಾಶ
    ತಮ್ಮ ಸಿಇಟಿ ಅರ್ಜಿಯಲ್ಲಿ ಇನ್ನೂ ಏನಾದರೂ ತಪ್ಪುಗಳಿದ್ದು, ಅವುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಇಚ್ಛಿಸುವವರಿಗೆ ಮೇ 2ರವರೆಗೂ ಅವಕಾಶ ನೀಡಲಾಗಿದೆ. ಮೀಸಲಾತಿ, ವಿಶೇಷ ಪ್ರವರ್ಗ, ಶೈಕ್ಷಣಿಕ ವಿವರಗಳು, ಕ್ಲಾಸ್‌ ಕೋಡ್‌ (ಎ, ಬಿ, ಸಿ, ಡಿ, ಇ, ಎಫ್‌, ಜಿ, ಎಚ್‌, ಐ, ಜೆ, ಕೆ, ಎಲ್‌, ಎಂ, ಎನ್‌, ಓ, ಝೆಡ್‌) ಇತ್ಯಾದಿ ತಪ್ಪಾಗಿದ್ದರೆ ಅವುಗಳನ್ನು ಸರಿ ಮಾಡಿಕೊಳ್ಳಬಹುದು ಎಂದು ಪ್ರಸನ್ನ ತಿಳಿಸಿದ್ದಾರೆ.

    ಅಭ್ಯರ್ಥಿಗಳ ಹೆಸರು, ತಂದೆ/ತಾಯಿ ಹೆಸರು, ಜನ್ಮ ದಿನಾಂಕ, 10ನೇ ತರಗತಿ ಹಾಗೂ 12ನೇ ತರಗತಿಯ ನೋಂದಣಿ ಸಂಖ್ಯೆ ಇತ್ಯಾದಿ ಮಾಹಿತಿಗಳು ತಪ್ಪಾಗಿ ನಮೂದು ಮಾಡಿದ್ದಲ್ಲಿ ದಾಖಲೆ ಸಮೇತ ಪ್ರಾಧಿಕಾರಕ್ಕೆ ಬಂದು ಮನವಿ ಸಲ್ಲಿಸಬೇಕು ಎಂದು ಅವರು ಸೂಚಿಸಿದ್ದಾರೆ. ಇದನ್ನೂ ಓದಿ: ಇಬ್ಬರು ಗಂಡು ಮಕ್ಕಳನ್ನು ಕೊಂದು ಐದನೇ ಮಹಡಿಯಿಂದ ಜಿಗಿದ ಮಹಿಳೆ

    ಕೃಷಿಕರ ಕೋಟಾದಡಿ ಪ್ರಾಯೋಗಿಕ ಪರೀಕ್ಷೆ ಬರೆಯಲು ಸಿಇಟಿ ಅರ್ಜಿಯಲ್ಲಿ ನಮೂದಿಸದೇ ಇದ್ದಲ್ಲಿ ಏ.20ರೊಳಗೆ ತಿದ್ದುಪಡಿ ಮಾಡಿಕೊಳ್ಳಬೇಕು. ಹೊಸದಾಗಿ ಕೃಷಿಕರ ಕೋಟಾ ನಮೂದಿಸಿದವರು ಏ.21ರಂದು ತಮ್ಮ ದಾಖಲೆಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

  • ಪಿರಿಯಡ್ಸ್ ಆಗಿದ್ದಕ್ಕೆ 8ನೇ ತರಗತಿ ವಿದ್ಯಾರ್ಥಿನಿಗೆ ಕ್ಲಾಸ್ ರೂಂ ಹೊರಗೆ ಪರೀಕ್ಷೆ

    ಪಿರಿಯಡ್ಸ್ ಆಗಿದ್ದಕ್ಕೆ 8ನೇ ತರಗತಿ ವಿದ್ಯಾರ್ಥಿನಿಗೆ ಕ್ಲಾಸ್ ರೂಂ ಹೊರಗೆ ಪರೀಕ್ಷೆ

    ಚೆನ್ನೈ: ಪಿರಿಯಡ್ಸ್ ಆಗಿದ್ದಕ್ಕೆ 8ನೇ ತರಗತಿಯ ದಲಿತ ವಿದ್ಯಾರ್ಥಿನಿಯನ್ನು ಕ್ಲಾಸ್ ರೂಂ ಹೊರಗೆ ಪರೀಕ್ಷೆಗೆ ಕೂರಿಸಿರುವ ಅಮಾನವೀಯ ಘಟನೆ ತಮಿಳುನಾಡಿನ ʼ(Tamlinadu) ಕೊಯಮತ್ತೂರು (Coimbatore) ಜಿಲ್ಲೆಯ ಕಿನಾಥುಕಡವು ಬಳಿಯ ಖಾಸಗಿ ಶಾಲೆಯಲ್ಲಿ ನಡೆದಿದೆ.

    ಕಿನಾಥುಕಡವು ತಾಲೂಕಿನ ಸೆಂಗುಟ್ಟೈಪಾಳ್ಯಂ ಗ್ರಾಮದಲ್ಲಿರುವ ಸ್ವಾಮಿ ಚಿದ್ಭವಂದ ಮೆಟ್ರಿಕ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾರ್ಥಿನಿ 8ನೇ ತರಗತಿ ಓದುತ್ತಿದ್ದಳು. ಏ.5 ರಂದು ವಿದ್ಯಾರ್ಥಿನಿಗೆ ಪಿರಿಯಡ್ಸ್ ಆಗಿತ್ತು. ಹೀಗಾಗಿ ಪಿರಿಯಡ್ಸ್ ನಂತರ, ಶಾಲಾ ಆಡಳಿತ ಮಂಡಳಿಯು ಏ.7 ರಂದು ವಿಜ್ಞಾನ ಪರೀಕ್ಷೆ ಮತ್ತು ಏ.9 ರಂದು ಬುಧವಾರ ಸಮಾಜ ವಿಜ್ಞಾನ ಪರೀಕ್ಷೆ ಬರೆಯಲು ಅವಕಾಶ ನೀಡಿತ್ತು.ಇದನ್ನೂ ಓದಿ: 64 ವಯಸ್ಸಿನ ಉಗ್ರ ರಾಣಾ ಫೋಟೊ ರಿಲೀಸ್‌

    ಏ.7 ರಂದು ವಿಜ್ಞಾನ ಪರೀಕ್ಷೆಯಲ್ಲಿ ತರಗತಿಯ ಹೊರಗೆ ಕೂರಿಸಿರುವುದಾಗಿ ವಿದ್ಯಾರ್ಥಿನಿ ತನ್ನ ತಾಯಿಗೆ ತಿಳಿಸಿದ್ದಳು. ಮುಂದಿನ ಪರೀಕ್ಷೆಗೆ ವಿದ್ಯಾರ್ಥಿನಿಯ ತಾಯಿ ಶಾಲೆಗೆ ತೆರಳಿದ್ದು, ತರಗತಿಯ ಹೊರಗೆ ಕೂರಿಸಿರುವುದನ್ನು ಗಮನಿಸಿದರು. ಬಳಿಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಶಾಲಾ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ಈ ಕುರಿತು ಕೊಯಮತ್ತೂರು ಜಿಲ್ಲಾಧಿಕಾರಿ ಪವನಕುಮಾರ್.ಜಿ.ಗಿರಿಯಪ್ಪನವರ್ ಮಾತನಾಡಿ, ಕೊಯಮತ್ತೂರು ಗ್ರಾಮೀಣ ಪೊಲೀಸರು ಈ ವಿಷಯದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಘಟನೆ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: ಸ್ಟಾರ್ಕ್‌ಗೆ ಒಂದೇ ಓವರ್‌ನಲ್ಲಿ 30 ರನ್‌ ಚಚ್ಚಿದ ಸಾಲ್ಟ್‌ – ಹುಚ್ಚೆದ್ದು ಕುಣಿದ RCB ಫ್ಯಾನ್ಸ್‌

  • ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – ಉಡುಪಿ ಫಸ್ಟ್‌,  ದಕ್ಷಿಣ ಕನ್ನಡ ಸೆಕೆಂಡ್‌

    ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – ಉಡುಪಿ ಫಸ್ಟ್‌, ದಕ್ಷಿಣ ಕನ್ನಡ ಸೆಕೆಂಡ್‌

    ಬೆಂಗಳೂರು: 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ (Second PUC) ಇಂದು ಪ್ರಕಟವಾಗಿದೆ. ರಾಜ್ಯದಲ್ಲಿ ಒಟ್ಟು 73.45%  ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

    6,37,805 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 4,68,439 ಮಂದಿ ತೇರ್ಗಡೆಯಾಗಿದ್ದಾರೆ. ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ 93.90% ಸಾಧನೆ ಮಾಡುವ ಮೂಲಕ  ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ.  ಎರಡನೇ ಸ್ಥಾನ ದಕ್ಷಿಣ ಕನ್ನಡ (93.57%),  ಮೂರನೇ ಸ್ಥಾನವನ್ನು ಬೆಂಗಳೂರು ದಕ್ಷಿಣ(85.36%) ಪಡೆದುಕೊಂಡಿದೆ. ಕೊನೆ ಸ್ಥಾನ ಯಾದಗಿರಿ (73.45%)  ಪಡೆದುಕೊಂಡಿದೆ.

    ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್‌ ಕಾಲೇಜಿನ ಅಮೂಲ್ಯ ಕಾಮತ್‌ 599 ಅಂಕ ಪಡೆದು ಮೊದಲ ಸ್ಥಾನ ಪಡೆದರೆ ಕಲಾ ವಿಭಾಗದಲ್ಲಿ ಬಳ್ಳಾರಿಯ ಇಂದೂ ಪಿಯು ಕಾಲೇಜಿನ ಸಂಜನಾ ಬಾಯಿ 597 ಮೊದಲ ಸ್ಥಾನ ಪಡೆದಿದ್ದಾರೆ.  ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ಕೆನರಾ ಕಾಲೇಜಿನ ದೀಪಾಶ್ರೀ 599 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.

    ಯಾವ ಶ್ರೇಣಿಯಲ್ಲಿ ಎಷ್ಟು ಮಂದಿ ಪಾಸ್‌?
    ಉನ್ನತ ಶ್ರೇಣಿ- 1,00,571
    ಪ್ರಥಮ ದರ್ಜೆ- 2,78,054
    ದ್ವೀತಿಯ ದರ್ಜೆ-70969
    ತೃತೀಯ ದರ್ಜೆ-18845

    ವಿಭಾಗವರು ಸಾಧನೆ
    ಕಲಾ
    ಹಾಜರಾದವರು :1,53,043
    ಉತ್ತೀರ್ಣ- 81,533 (53.79%)

    ವಾಣಿಜ್ಯ
    ಹಾಜರಾದವರು -2,04,329
    ಉತ್ತೀರ್ಣ -1,55,425 (76.07%)

    ವಿಜ್ಞಾನ
    ಹಾಜರಾದವರು – 2,80,433
    ಉತ್ತೀರ್ಣ – 2,31,461 (82.54%)

    ಮಾಧ್ಯಮವಾರು ಫಲಿತಾಂಶ
    ಕನ್ನಡ
    ಹಾಜರಾದವರು -2,08,794
    ತೇರ್ಗಡೆಯಾದವರು – 1,17,703 (56.37%)

    ಇಂಗ್ಲೀಷ್‌
    ಹಾಜರಾದವರು -4,29,011
    ತೇರ್ಗಡೆಯಾದವರು -3,50,736(81.75%)

    ಇಂದು ಮಧ್ಯಾಹ್ನ 12:45ಕ್ಕೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಮಲ್ಲೇಶ್ವರದಲ್ಲಿರುವ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. ಮಧ್ಯಾಹ್ನ 1:30 ಗಂಟೆಗೆ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.

    ದ್ವಿತೀಯ ಪಿಯುಸಿ ಪರಿಕ್ಷೆ ಕಳೆದ ಮಾರ್ಚ್ 1 ರಿಂದ ಆರಂಭಗೊಂಡು ಮಾರ್ಚ್ 20 ರಂದು ಮುಕ್ತಾಯಗೊಂಡಿತ್ತು. ಈ ಬಾರಿ ಸುಮಾರು 7.13 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ತ್ವರಿತಗತಿಯಲ್ಲಿ ನಡೆಸಿ ಇಂದು ಫಲಿತಾಂಶ ಘೋಷಣೆ ಮಾಡಲಾಯಿತು.

    ಪಿಯು ಫಲಿತಾಂಶ ಲಭ್ಯವಾಗುವ ವೆಬ್‌ಸೈಟ್‌ : www.karresultsnic.in

  • ಇಂದು ಪಿಯುಸಿ ಫಲಿತಾಂಶ ಪ್ರಕಟ – ಯಾವ ವೆಬ್‌ಸೈಟ್‌ನಲ್ಲಿ ನೋಡಬಹುದು? ಚೆಕ್‌ ಮಾಡೋದು ಹೇಗೆ?

    ಇಂದು ಪಿಯುಸಿ ಫಲಿತಾಂಶ ಪ್ರಕಟ – ಯಾವ ವೆಬ್‌ಸೈಟ್‌ನಲ್ಲಿ ನೋಡಬಹುದು? ಚೆಕ್‌ ಮಾಡೋದು ಹೇಗೆ?

    ಬೆಂಗಳೂರು: 2025 ನೇ ಸಾಲಿನ ದ್ವಿತೀಯ ಪಿಯುಸಿ (PUC Exam) ಪರೀಕ್ಷೆಯ ಫಲಿತಾಂಶ ಇಂದು ಮಧ್ಯಾಹ್ನ ಪ್ರಕಟವಾಗಲಿದೆ.

    ಇಂದು ಮಧ್ಯಾಹ್ನ 12:30ಕ್ಕೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಮಲ್ಲೇಶ್ವರದಲ್ಲಿರುವ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಸ ಪ್ರಕಟಿಸಲಿದ್ದಾರೆ. ಸುದ್ಧಿಗೋಷ್ಠಿಯ ಬಳಿಕ  ಮಧ್ಯಾಹ್ನ 1:30 ಗಂಟೆಗೆ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು.

    ದ್ವಿತೀಯ ಪಿಯುಸಿ ಪರಿಕ್ಷೆ ಕಳೆದ ಮಾರ್ಚ್ 1 ರಿಂದ ಆರಂಭಗೊಂಡು ಮಾರ್ಚ್ 20 ರಂದು ಮುಕ್ತಾಯಗೊಂಡಿತ್ತು. ಈ ಬಾರಿ ಸುಮಾರು 7.13 ಲಕ್ವ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ತ್ವರಿತಗತಿಯಲ್ಲಿ ನಡೆಸಿ ಏಪ್ರಿಲ್​ 8ರಂದು ಫಲಿತಾಂಶ ಘೋಷಣೆ ಮಾಡಲಾಗುತ್ತಿದೆ. ಇದನ್ನೂ ಓದಿ: UGCET ಪ್ರವೇಶ ಪತ್ರ ಬಿಡುಗಡೆ – ಮೊದಲ ಬಾರಿಗೆ ಕ್ಯೂಆರ್ ಕೋಡ್ ಮಾದರಿ OMR Sheet

    ಸಾಂದರ್ಭಿಕ ಚಿತ್ರ
    ಸಾಂದರ್ಭಿಕ ಚಿತ್ರ

    ಪಿಯು ಫಲಿತಾಂಶ ಲಭ್ಯವಾಗುವ ವೆಬ್‌ಸೈಟ್‌ :www.karresults.nic.in   

    ಫಲಿತಾಂಶ ಚೆಕ್‌ ಮಾಡೋದು ಹೇಗೆ?
    ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಹೋಗಿ: karresults.nic.in
    ಹಂತ 2: ಮುಖಪುಟದಲ್ಲಿ ಲಭ್ಯವಿರುವ ಕರ್ನಾಟಕ 2ನೇ ಪಿಯುಸಿ ಫಲಿತಾಂಶ 2025 ಲಿಂಕ್ ಅನ್ನು ಕ್ಲಿಕ್ ಮಾಡಿ
    ಹಂತ 3: ಸ್ಟ್ರೀಮ್ ಆಯ್ಕೆಮಾಡಿ ಮತ್ತು ನೋಂದಣಿ ಸಂಖ್ಯೆಯನ್ನು ಟೈಪ್‌ ಮಾಡಿ
    ಹಂತ 4: ಕರ್ನಾಟಕ 2 ನೇ ಪಿಯುಸಿ ಫಲಿತಾಂಶ 2025 ಪರದೆಯ ಮೇಲೆ ಕಾಣಿಸುತ್ತದೆ
    ಹಂತ 5: ಸ್ಕೋರ್‌ಕಾರ್ಡ್ ಪಿಡಿಎಫ್ ವೀಕ್ಷಿಸಿ ಮತ್ತು ಡೌನ್‌ಲೋಡ್ ಮಾಡಿ
    ಹಂತ 6: ಭವಿಷ್ಯದ ದಾಖಲೆಗಳಿಗಾಗಿ ಅದನ್ನು ಸುರಕ್ಷಿತವಾಗಿರಿಸಿಕೊಳ್ಳಿ ಇದನ್ನೂ ಓದಿ: ಶಾಲೆಯಲ್ಲಿ ಮಕ್ಕಳು ಟಾಯ್ಲೆಟ್‌ ಸ್ವಚ್ಛ ಮಾಡಿದ್ರೆ ಶಿಕ್ಷಕರ ಮೇಲೆ ಕೇಸ್‌