Tag: ex-wife

  • ಮಾಜಿ ಪತ್ನಿಯೊಂದಿಗೆ 88ನೇ ಮದುವೆಗೆ ಸಿದ್ಧನಾದ 61ರ ವೃದ್ಧ

    ಮಾಜಿ ಪತ್ನಿಯೊಂದಿಗೆ 88ನೇ ಮದುವೆಗೆ ಸಿದ್ಧನಾದ 61ರ ವೃದ್ಧ

    ಜಕಾರ್ತ: ಇಂಡೋನೇಷ್ಯಾದ (Indonesia) ಪಶ್ಚಿಮ ಜಾವಾದ ಮಜಲೆಂಗ್ಕಾದ ವ್ಯಕ್ತಿಯೊಬ್ಬ (man) 88ನೇ ಬಾರಿಗೆ ಮಾಜಿ ಪತ್ನಿಯನ್ನು (Ex-Wife) ಮದುವೆಯಾಗಲು (Wedding) ಸಿದ್ಧನಾಗಿರುವ ವಿಚಿತ್ರ ಘಟನೆ ನಡೆದಿದೆ.

    ಕಾನ್ (61) ಎಂದು ಎಂಬಾತ 88ನೇ ಬಾರಿಗೆ ತನ್ನ ಮಾಜಿ ಪತ್ನಿಯನ್ನು ಮದುವೆಯಾಗಲು ಸಿದ್ಧನಾಗಿದ್ದಾನೆ. ಅನೇಕ ಬಾರಿ  ಈತ ಬೇರೆ ಬೇರೆ ಮಹಿಳೆಯನ್ನು ಈತ ಮದುವೆಯಾಗಿದ್ದಕ್ಕಾಗಿ ಪ್ಲೇಬಾಯ್ ಕಿಂಗ್ ಎಂದು ಅಡ್ಡಹೆಸರು ನೀಡಲಾಗಿದೆ. ಈಗ ಮದುವೆಯಾಗುತ್ತಿರುವ ಮಹಿಳೆ ಕಾನ್‌ನ 86ನೇ ಪತ್ನಿಯಾಗಿದ್ದಳು. ಕಾನ್ ಆಕೆಯೊಂದಿಗೆ ಮದುವೆಯಾದಾಗ ಅವಳ ಜೊತೆ ಹೆಚ್ಚು ದಿನಗಳ ಕಾಲ ವಾಸಿಸಿರಲಿಲ್ಲ. ಕೇವಲ ಒಂದು ತಿಂಗಳಷ್ಟೇ ಜೊತೆಯಲ್ಲಿದ್ದರೂ ಅವರ ಪ್ರೀತಿ ಹಾಗೇ ಗಟ್ಟಿ ಆಗಿತ್ತು. ಅಷ್ಟೇ ಅಲ್ಲದೇ 86ನೇ ಪತ್ನಿ ಕಾನ್‍ನನ್ನು ಇನ್ನು ಪ್ರೀತಿಸುತ್ತಿದ್ದಳು. ಇದರಿಂದಾಗಿ ಆಕೆ ಕಾನ್‍ನನ್ನು ಮತ್ತೆ ಮದುವೆಯಾಗುವುದಾಗಿ ಕೇಳಿದ್ದಾಳೆ. ಇದಕ್ಕೆ ಕಾನ್ ಕೂಡಾ ಸಮ್ಮತಿಯನ್ನು ನೀಡಿದ್ದಾನೆ.

    ಕಾನ್ ಕೇವಲ 14 ವರ್ಷವಿದ್ದಾಗ ಮೊದಲ ಬಾರಿಗೆ ವಿವಾಹವಾಗಿದ್ದನು. ಆ ಮೊದಲ ಪತ್ನಿ ಕಾನ್‍ಗಿಂತ 2 ವರ್ಷ ಹಿರಿಯವಳಾಗಿದ್ದಳು. ಆದರೆ ಆತನ ವರ್ತನೆಯಿಂದಾಗಿ ಮದುವೆಯಾದ 2 ವರ್ಷಗಳ ನಮತರ ವಿಚ್ಛೇದನವನ್ನು ಪಡೆದುಕೊಂಡಿದ್ದಳು. ಇದನ್ನೂ ಓದಿ: ಅಧಿಕಾರಿಗಳ ವಿರುದ್ಧ ಸಚಿವ ಶ್ರೀರಾಮುಲು ಪ್ರತಿಭಟನೆ

    ಈ ಬಗ್ಗೆ ಮಾತನಾಡಿದ ಅವರು, ಮಹಿಳೆಯರಿಗೆ ಒಳ್ಳೆಯದಲ್ಲದ ಕೆಲಸಗಳನ್ನು ಮಾಡಲು ನಾನು ಬಯಸುವುದಿಲ್ಲ, ಅವರ ಭಾವನೆಗಳೊಂದಿಗೆ ಆಟವಾಡಲು ನಾನು ನಿರಾಕರಿಸುತ್ತೇನೆ. ಅನೈತಿಕತೆ ಮಾಡುವ ಬದಲು ನಾನು ಮದುವೆಯಾಗುವುದು ಒಳ್ಳೆಯದು. ಮಹಿಳೆಯರು ಯಾರೇ ವಾಪಸ್ ಬಂದರೂ ನಾನು ನಿರಾಕರಿಸುವುದಿಲ್ಲ ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಶಾಸಕ ಸುರೇಶ್ ಕುಮಾರ್ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ- ಹಣ ಕೇಳಿದ ಕಿಡಿಗೇಡಿಗಳು

    Live Tv
    [brid partner=56869869 player=32851 video=960834 autoplay=true]

  • ಆನ್‌ಸ್ಕ್ರೀನ್‌ ಮೇಲೆ ಸಮಂತಾ, ನನ್ನ ಜೋಡಿ ಚೆನ್ನಾಗಿತ್ತು: ನಾಗ ಚೈತನ್ಯ

    ಆನ್‌ಸ್ಕ್ರೀನ್‌ ಮೇಲೆ ಸಮಂತಾ, ನನ್ನ ಜೋಡಿ ಚೆನ್ನಾಗಿತ್ತು: ನಾಗ ಚೈತನ್ಯ

    ಹೈದರಾಬಾದ್: ತೆರೆ ಮೇಲೆ ಸಮಂತಾ ಜೊತೆಗೆ ಉತ್ತಮ ಕೆಮಿಸ್ಟ್ರಿ ಇತ್ತು ಎಂದು ನಾಗಚೈತನ್ಯ ಮಾಜಿ ಪತ್ನಿಯ ಕುರಿತಾಗಿ ಹೇಳಿದ್ದಾರೆ.

    ಬಂಗಾರ ರಾಜು ಚಿತ್ರದ ವೇಳೆ ಸಂದರ್ಶನವೊಂದರಲ್ಲಿ ಮಾತನಾಡುವಾಗ ನೀವು ಆನ್‍ಸ್ಕ್ರೀನ್ ಮೇಲೆ ಯಾವ ನಟಿಯು ಜೊತೆ ಉತ್ತಮ ಕೆಮಿಸ್ಟ್ರಿ ಹೊಂದಿದ್ದೀರಿ ಎಂಬ ಪ್ರಶ್ನೆಯನ್ನು ಕೇಳಲಾಯ್ತು. ಪ್ರಶ್ನೆಗೆ ಉತ್ತರಿಸಿದ ನಾಗಚೈತನ್ಯ ಸಮಂತಾ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ನಾಗ ಚೈತನ್ಯ ನೀಡಿದ ಉತ್ತರ ನಿಜಕ್ಕೂ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ:ಮಲಯಾಳಂ ನಟ ಮಮ್ಮುಟ್ಟಿಗೆ ಕೋವಿಡ್-19 ಪಾಸಿಟಿವ್

    ನಾಗಚೈತನ್ಯ ಡಿವೋರ್ಸ್ ವಿಚಾರ ಬಗ್ಗೆ ಮೌನ ಮುರಿದಿದ್ದಾರೆ. ಆನ್‍ಸ್ಕ್ರೀನ್ ಮೇಲೆ ನಾನು ಸಮಂತಾ ಜೊತೆ ಒಳ್ಳೆಯ ಕೆಮಿಸ್ಟ್ರೀ ಹೊಂದಿದ್ದೇನೆ ಎಂದು ಹೇಳಿದ್ದಾರೆ. ವಿಚ್ಛೇದನ ಪಡೆದ ನಂತರ ಸಮಂತಾ ಹಾಗೂ ನಾಗಚೈತನ್ಯ ತಮ್ಮ ಸಿನಿಮಾ ಕರಿಯರ್ ಮೇಲೆ ಹೆಚ್ಚು ಪೋಕಸ್ ನೀಡಿದ್ದಾರೆ. ಡಿವೋರ್ಸ್ ಬಳಿಕ ಸಮಂತಾ ಸಾಕಷ್ಟು ಬಾರಿ ತಮ್ಮ ವಿಚ್ಛೇಧನದ ಬಗ್ಗೆ ಮಾತನಾಡಿದ್ದಾರೆ. ಆದರೆ ನಾಗ ಚೈತನ್ಯ ಮಾತ್ರ ಯಾವುದೇ ಪ್ರತಿಕ್ರಿಯೇ ನೀಡಿಲ್ಲ. ಇದನ್ನೂ ಓದಿ: ಆತ್ಮಹತ್ಯೆ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ ಭಾಮ

    ಸಮಂತಾ ನಾಗಚೈತನ್ಯ ಜೋಡಿ ನಾಲ್ಕು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜೋಡಿಯನ್ನು ಪ್ರೇಕ್ಷಕರು ಕೂಡ ಮೆಚ್ಚುಕೊಂಡಿದ್ದಾರೆ. ನಾಗ ಚೈತನ್ಯ ಕೂಡಾ ಅವರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

  • ಸ್ವಂತ ಮಗಳನ್ನೇ ಗುರು ಮಧ್ಯರಾತ್ರಿ ಮನೆಯಿಂದ ಹೊರ ಹಾಕಿದ್ರು- ಮಾಜಿ ಪತ್ನಿ ಆರತಿ

    ಸ್ವಂತ ಮಗಳನ್ನೇ ಗುರು ಮಧ್ಯರಾತ್ರಿ ಮನೆಯಿಂದ ಹೊರ ಹಾಕಿದ್ರು- ಮಾಜಿ ಪತ್ನಿ ಆರತಿ

    ಬೆಂಗಳೂರು: ಮೀಟೂ ಆರೋಪ ಮಾಡಿದ್ದ ನಟಿಯರ ವಿರುದ್ಧ ರೇಗಾಡಿದ ಮಠ ಚಿತ್ರದ ನಿರ್ದೇಶಕ ಗುರುಪ್ರಸಾದ್ ಅವರು ತನ್ನ 14 ವರ್ಷದ ಸ್ವಂತ ಮಗಳು ಹಾಗೂ ಪತ್ನಿಯನ್ನೇ ಮಧ್ಯರಾತ್ರಿ ಮನೆಯಿಂದ ಹೊರಹಾಕಿದ್ದಾರೆ ಎಂಬ ಸ್ಫೋಟಕ ವಿಚಾರವೊಂದು ಬಯಲಾಗಿದೆ.

    ಮೀಟೂ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡವರ ವಿರುದ್ಧ ತಮ್ಮ ಆಕ್ರೋಶವನ್ನು ಗುರುಪ್ರಸಾದ್ ಮಂಗಳವಾರ ಹೊರಹಾಕಿದ್ದರು. ಈ ವಿಚಾರವಾಗಿ ಇಂದು ಗುರು ಮೊದಲ ಪತ್ನಿ ಆರತಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಅಚ್ಚರಿಯ ಸಂಗತಿಯೊಂದನ್ನು ಹೊರಹಾಕಿದ್ದಾರೆ.

    ಯಾವುದೇ ವ್ಯಕ್ತಿ ಯಾರ ಬಗ್ಗೆಯೂ ಮಾತನಾಡಿದರೂ ಅದು ಒಪ್ಪುವಂತಹ ವಿಷಯವಲ್ಲ ಅನ್ನೋದು ನನ್ನ ಅಭಿಪ್ರಾಯವಾಗಿದೆ. ನಾನು ಟಿವಿ, ನ್ಯೂಸ್ ಪೇಪರ್ ಓದದೇ ಇರುವುದರಿಂದ ಯಾರಾದ್ರೂ ಹೇಳಿದ್ರೆ ಅಷ್ಟು ಮಾತ್ರ ನನಗೆ ಗೊತ್ತಿರುತ್ತದೆ. ಆದ್ರೆ ನನ್ನ ಮಗಳು ಯೂಟ್ಯೂಬ್ ನಲ್ಲಿ ಬಂದಂತಹ ಲಿಂಕ್ ತೋರಿಸಿದಳು. ಅದನ್ನು ನೋಡಿದಾಗ ಯಾವುದೇ ಒಬ್ಬ ವ್ಯಕ್ತಿಗೆ ಇನ್ನೊಬ್ಬ ಹೆಣ್ಣು ಅಥವಾ ಮಹಿಳೆ ಹಾಗೂ ಟ್ರಾನ್ಸ್ ಜೆಂಟರ್ ಬಗ್ಗೆಯೂ ಈ ತರ ಮಾತನಾಡುವ ಹಕ್ಕು ಇರಲ್ಲ ಅಂತ ಹೇಳಿದ್ರು.

    ಗುರುಗೆ ಸ್ವಂತ ಮಗಳಿದ್ದಾಳೆ. ಹೀಗಾಗಿ ಎಲ್ಲರೂ ಹೆಣ್ಣು ಮಕ್ಕಳು ಸರಿಯಿಲ್ಲ ಅಂತ ಒಬ್ಬ ಅಪ್ಪನಾಗಿ ಹೇಳೋದಕ್ಕೂ ಮುಂಚೆ ಯೋಚನೆ ಮಾಡಬೇಕು. ಆತ ಯೋಚನೆ ಮಾಡುತ್ತಿಲ್ಲ ಅಂದ್ರೆ ಆತ ಅಪ್ಪನಾಗಿ ಬಿಹೇವ್ ಮಾಡ್ತಿಲ್ಲ ಅಂತ ಅರ್ಥ ಎಂದು ಪತಿ ಹೇಳಿಕೆಯ ವಿರುದ್ಧ ಗರಂ ಆದ್ರು.

    ಯಾರ ಬಾಯಿಂದ ಹೆಣ್ಣು ಮಗು ಅಂತ ಪದ ಬರುತ್ತಾ ಇದೆ ಅಲ್ವಾ, ಆತ ತನ್ನ ಸ್ವಂತ 14 ವರ್ಷದ ಮಗಳನ್ನು ಹೆಂಡ್ತಿ ಸಮೇತ ಮಧ್ಯರಾತ್ರಿ ಆಚೆ ಹಾಕಿದ್ದರು. ಇದು ನಡೆದಿರುವ ಘಟನೆಯಾಗಿದೆ. ಆದ್ರೆ ನಾನು ಯಾವುದೇ ರಗಳೆ ರಂಪ ಮಾಡದೇ ಹೊರ ಬಂದಿದ್ದೇನೆ. ಒಬ್ಬ ವ್ಯಕ್ತಿಗೆ ನಾವು ಬೇಡ ಅಂತ ಹೇಳಿದ ಬಳಿಕ ಯಾವುದೇ ಗಲಾಟೆ ಮಾಡುವುದು ಬೇಕಿರಲಿಲ್ಲ. ಯಾಕಂದ್ರೆ ಆ ವ್ಯಕ್ತಿ ಬೇಡ ಅಂದ ಬಳಿಕ ರಗಳೆ ಮಾಡಿ ಪ್ರಯೋಜನವೇನು ಅಂತ ಎಲ್ಲೂ ಬರಲಿಲ್ಲ ಅಂತ ಹೇಳಿದ ಅವರು ಇದಾಗಿ 3 ವರ್ಷ ಆಯ್ತು ಅಂದ್ರು.

    ಒಬ್ಬ ಅಪ್ಪನಾಗಿಯೂ ಗುರು ಅವರ ಜವಾಬ್ದಾರಿಯನ್ನು ನಿಭಾಯಿಸುತ್ತಿಲ್ಲ. ಅವರ ಮಗಳನ್ನು ಬಂದು ನೋಡುವುದಿಲ್ಲ. ನಮಗೂ ಅವರಿಗೂ ಯಾವುದೇ ರೀತಿಯ ಸಂಪರ್ಕವೇ ಇಲ್ಲ. ಇಬ್ಬರೂ ಒಪ್ಪಿಕೊಂಡು ವಿಚ್ಛೇದನಕ್ಕೆ ಅಂತ ಹೋಗಿದ್ದೆವು. ಆಗ ಅವರು 2 ಸಲ ಬಂದ್ರು ಆ ನಂತರ ಕೋರ್ಟ್ ಗೂ ಬರುತ್ತಿಲ್ಲ. ಹೀಗಾಗಿ ಅವರ ಯಾವುದೇ ರೀತಿಯ ಸಂಪರ್ಕಕ್ಕೂ ನಾನು ಸಿಗುತ್ತಿಲ್ಲ. ಅವರ ಮನೆ ಹತ್ರ ಹೋದರೂ ಸಿಗುತ್ತಿಲ್ಲ. ಡಿವೋರ್ಸ್ ಪೇಪರ್ ಗೆ ಸಹಿ ಹಾಕಿ ಕೊಡಿ ಅಂದ್ರೂ ಅವರು ಸಿಗ್ತಿಲ್ಲ ಅಂತ ಹೇಳಿದ್ರು.

    ಎರಡನೇ ಸಲ ಚಿತ್ರದ ಶೂಟಿಂಗ್ ನಡೆದಿದ್ದು 3 ವರ್ಷಗಳ ಹಿಂದೆ. ಆವಾಗ ಎಲ್ಲಾ ಶೂಟಿಂಗ್ ಸಂದರ್ಭದಲ್ಲಿ ನಾನು ಅವರ ಜೊತೆ ಹೋಗುತ್ತಿದ್ದೆ. ಚಿತ್ರದ ಶೂಟಿಂಗ್ ವೇಳೆ ಮಾತ್ರ ನಾನು ನನ್ನ ಮಗಳು ಇದ್ವಿ ಅಂತ ಅಲ್ಲ. ನಿನ್ನೆ ಬೆನ್ನು ತೋರಿಸಿದ ಸೀನ್ ಬಗ್ಗೆ ಮಾತನಾಡಿದ್ರಲ್ಲ ಅಂದು ಕೂಡ ನಾನಿದ್ದೆ. ಹೀಗಾಗಿ ಅವರು ಅದನ್ನು ಸ್ಪೆಷಲ್ ಆಗಿ ಹೇಳುವುದು ಬೇಕಾಗಿಲ್ಲ ಅಂತ ಆರತಿ ಹೇಳಿದ್ರು.

    ಪತ್ನಿ ಜೊತೆ ನನ್ನ ಜೊತೆ ಇದ್ದರು ಅಂತ ಗುರು ಹೇಳಿದ್ದರು. ಮಗಳಿಗೆ ರಜಾ ಇದ್ದಾಗಲೆಲ್ಲ ನಾನು ಹಾಗೂ ನನ್ನ ಮಗಳು ಅವರ ಜೊತೆ ಹೋಗುತ್ತಿದ್ದೆವು. ಹೀಗಾಗಿ ಈ ಸೀನ್ ಶೂಟಿಂಗ್ ವೇಳೆಯೂ ನಾವಿದ್ವಿ. ಇಡೀ ಸೀನ್ ಗೆ ನಾನು ನನ್ನ ಮಗಳು ಹಾಗೂ ಸಂಗೀತ್ ಭಟ್ ಕಾಸ್ಟ್ಯುಮ್ ಡಿಸೈನ್ ಮಾಡಿದ್ವಿ, ಕಥೆಗೆ ಬೇಕಾದಂತೆ ನಾವು ಮಾಡಿದ್ವಿ ಅಂತ ಅವರು ಅಂದು ಏನಾಯ್ತು ಎಂಬುದರ ಬಗ್ಗೆ ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=u4enQ9slDcc

  • ವಿಚ್ಛೇದಿತ ಪತ್ನಿಗೆ ಜೀವನಾಂಶ 7 ಲಕ್ಷ ರೂ.ಯನ್ನು ನಾಣ್ಯಗಳಲ್ಲಿ ನೀಡಿದ ಪತಿ

    ವಿಚ್ಛೇದಿತ ಪತ್ನಿಗೆ ಜೀವನಾಂಶ 7 ಲಕ್ಷ ರೂ.ಯನ್ನು ನಾಣ್ಯಗಳಲ್ಲಿ ನೀಡಿದ ಪತಿ

    -12 ಮೂಟೆ, 860 ಕೆ.ಜಿ. ತೂಕ

    ಜಕಾರ್ತ: ವ್ಯಕ್ತಿಯೊಬ್ಬ ತನ್ನ ವಿಚ್ಛೇದಿತ ಪತ್ನಿಗೆ ನೀಡಬೇಕಾಗಿದ್ದ ಜೀವನಾಂಶದ ಹಣವನ್ನು ನಾಣ್ಯಗಳ ರೂಪದಲ್ಲಿ ನೀಡಿದ್ದಾನೆ. ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು, ಬರೋಬ್ಬರಿ 860 ಕೆ.ಜಿ. ತೂಕವುಳ್ಳ 12 ಮೂಟೆಗಳನ್ನು ನೀಡಿದ್ದಾನೆ.

    ಗುರುವಾರ ಸ್ಥಳೀಯ ಸಿವಿಲ್ ನ್ಯಾಯಾಲಯಕ್ಕೆ ಹಾಜರಾದ ಡ್ವಿ ಸ್ಸುಲಾರ್ಟೊ ಎಂಬವರು 12 ಮೂಟೆಗಳಲ್ಲಿ ಒಟ್ಟು 10,000 ಡಾಲರ್ (6.97 ಲಕ್ಷ ರೂ.) ತಂದು ವಿಚ್ಛೇದಿತ ಪತ್ನಿಗೆ ಪರಿಹಾರವಾಗಿ ನೀಡಿದ್ದಾರೆ. ಆ ಮೂಟೆಗಳ ತೂಕ ಬರೋಬ್ಬರಿ 890 ಕಿಲೋ ಗ್ರಾಂ ಇತ್ತು ಎಂದು ವರದಿಯಾಗಿದೆ.

    ಒಂಬತ್ತು ವರ್ಷಗಳಿಂದ ಡ್ವಿ ಸ್ಸುಲಾರ್ಟೊ ತನ್ನ ವಿಚ್ಛೇದಿತ ಪತ್ನಿಗೆ ಜೀವನಾಂಶವನ್ನು ನೀಡಿರಲಿಲ್ಲ. ಹೀಗಾಗಿ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದರು. ಗುರುವಾರ ನ್ಯಾಯಾಲಯಕ್ಕೆ ಹಾಜರಾದ ಡ್ವಿ ಸ್ಸುಲಾರ್ಟೊ ವಿಚ್ಛೇದಿತ ಪತ್ನಿಗೆ ನಾಣ್ಯರೂಪದಲ್ಲಿ ಜೀವನಾಂಶ ನೀಡಿದ್ದಾನೆ. ಇದನ್ನು ಓದಿ: ವಿಚ್ಛೇದಿತ ಪತ್ನಿಗೆ ಜೀವನಾಂಶದ ಹಣವನ್ನ ಚಿಲ್ಲರೆ ರೂಪದಲ್ಲಿ ನೀಡಿದ ಪತಿ!

    ‘ನನ್ನ ಕಕ್ಷಿದಾರರನ್ನು ಅವಮಾನಿಸಲು ಡ್ವಿ ಸ್ಸುಲಾರ್ಟೊ ಚಿಲ್ಲರೆ ಹಣವನ್ನು ನೀಡುತ್ತಿದ್ದಾರೆ’ ಎಂದು ವಿಚ್ಛೇದಿತ ಮಹಿಳೆಯ ಪರ ವಕೀಲ ವಾದ ಮಂಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡ್ವಿ ಸ್ಸುಲಾರ್ಟೊ ಪರ ವಕೀಲ, ನನ್ನ ಕಕ್ಷಿದಾರ ಕೆಳ ದರ್ಜೆಯ ನಾಗರಿಕ ಸೇವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ತನ್ನ ಸಂಬಂಧಿಕರು ಹಾಗೂ ಸ್ನೇಹಿತರಿಂದ ಹಣ ಸಂಗ್ರಹಿಸಿದ್ದು, ಅವರೆಲ್ಲರೂ ಚಿಲ್ಲರೆ ಹಣ ನೀಡಿದ್ದರಿಂದ ಅದನ್ನು ಕೋರ್ಟ್ ಗೆ ಒಪ್ಪಿಸಿದ್ದಾರೆ ಎಂದರು.

    ನಾನು ಬಡತನದಲ್ಲಿ ಇದ್ದೇನೆ ಎನ್ನುವಂತೆ ಅವಮಾನ ಮಾಡಲು ಡ್ವಿ ಸ್ಸುಲಾರ್ಟೊ ಚಿಲ್ಲರೆ ಹಣವನ್ನು ನೀಡುತ್ತಿದ್ದಾರೆ ಎಂದು ವಿಚ್ಛೇದಿತ ಮಹಿಳೆ ಆರೋಪಿಸಿದ್ದಾರೆ. ಕೊನೆಗೆ ಚಿಲ್ಲರೆ ಹಣವನ್ನು ಏಣಿಕೆ ಮಾಡುವಂತೆ ನ್ಯಾಯಾಲಯವು ತನ್ನ ಸಿಬ್ಬಂದಿಗೆ ಸೂಚನೆ ನೀಡಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv