Tag: ex-soldiers

  • ಯುದ್ಧದ ವೇಳೆ 36 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ – ಮಾಜಿ ಯೋಧರಿಗೆ 30 ವರ್ಷ ಜೈಲು ಶಿಕ್ಷೆ

    ಯುದ್ಧದ ವೇಳೆ 36 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ – ಮಾಜಿ ಯೋಧರಿಗೆ 30 ವರ್ಷ ಜೈಲು ಶಿಕ್ಷೆ

    ಗ್ವಾಟೆಮಾಲಾ ನಗರ: ದೇಶದ ಅಂತರ್ಯುದ್ಧದ ಸಂದರ್ಭದಲ್ಲಿ 36 ಸ್ಥಳೀಯ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಐವರು ಮಾಜಿ ಸೈನಿಕರಿಗೆ 30 ವರ್ಷಗಳ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

    ಲೈಂಗಿಕ ದೌರ್ಜನ್ಯ ಆಗಿರುವ ಬಗ್ಗೆ ಸಂತ್ರಸ್ತೆಯರು ನೀಡಿರುವ ಸಾಕ್ಷ್ಯಗಳನ್ನು ನಾವು ದೃಢವಾಗಿ ನಂಬುತ್ತೇವೆ ಎಂದು ನ್ಯಾಯಾಧೀಶ ಗೆರ್ವಿ ಸಿಕಲ್‌ ತಿಳಿಸಿದ್ದಾರೆ. ಇದನ್ನೂ ಓದಿ: ಆಫ್ರಿಕಾ ಕ್ರೀಡಾಂಗಣದಲ್ಲಿ ಫುಟ್‌ಬಾಲ್‌ ವೀಕ್ಷಣೆಗಾಗಿ ನೂಕಾಟ, ಕಾಲ್ತುಳಿತ – 8 ಬಲಿ

    1981 ಮತ್ತು 1985ರ ಅವಧಿಯಲ್ಲಿ ಈ ಘಟನೆ ನಡೆದಿತ್ತು. ಅಪರಾಧಿಗಳಾದ ಬೆನ್ವೆನುಟೊ, ಬರ್ನಾರ್ಡೊ ರೂಯಿಜ್‌, ಡಾಮಿಯನ್‌, ಗೇಬ್ರಿಯಲ್‌ ಮತ್ತು ಫ್ರಾನ್ಸಿಸ್ಕೊ ಕುಕ್ಸಮ್‌ ಶಿಕ್ಷೆಗೆ ಗುರಿಯಾದ ಮಾಜಿ ಸೈನಿಕರು. ರಾಜಧಾನಿಯ ಜೈಲಿನಲ್ಲಿರುವ ಇವರು ವೀಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಧೀಶರ ತೀರ್ಪನ್ನು ಆಲಿಸಿದ್ದಾರೆ.

    ಯುದ್ಧದಿಂದಾಗಿ ರಬಿನಾಲ್‌ ಜನರಿಗೆ ಅಪಾರ ನಷ್ಟವುಂಟಾಗಿದೆ. ರಬಿನಾಲ್‌ ಪ್ರದೇಶದಲ್ಲಿ ಸುಮಾರು 3,000ಕ್ಕೂ ಹೆಚ್ಚು ನಾಗರಿಕರು ಹತ್ಯೆಯಾಗಿದ್ದಾರೆ. ಆಗ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಪರಾಧಿಗಳು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಸಂತ್ರಸ್ತೆಯರು ದೂರು ನೀಡಿದ್ದರು. ದಶಕಗಳ ನಂತರ (ಜ.5) ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭಾರೀ ಹಿಮಪಾತ – 42 ಮಂದಿ ಸಾವು

    ನಾನು 19 ವಯಸ್ಸಿನ ಹುಡುಗಿಯಾಗಿದ್ದಾಗ ಸೇನೆಯಲ್ಲಿದ್ದ ಯೋಧರು ನನ್ನನ್ನು ಹೊತ್ತೊಯ್ದು ಅತ್ಯಾಚಾರ ಎಸಗಿದ್ದರು. ನಮ್ಮ ಗ್ರಾಮವನ್ನು ಕಾಯುತ್ತಿದ್ದ ಸೈನಿಕರೇ ಈ ಕೃತ್ಯ ಎಸಗಿದ್ದರು ಎಂದು ಈಗ 59ರ ವೃದ್ಧೆಯಾಗಿರುವ ಸಂತ್ರಸ್ತೆ ಮಾರ್ಗರಿಟಾ ಸಿಯಾನಾ ದೂರಿನಲ್ಲಿ ತಿಳಿಸಿದ್ದಾರೆ.

    3 ತಿಂಗಳು ಅವರಿಂದ ಚಿತ್ರಹಿಂಸೆ ಅನುಭವಿಸಿದ್ದೇವೆ. ಆ ಘಟನೆ ಈಗಲೂ ನಮ್ಮನ್ನು ಕಂಗೆಡಿಸಿದೆ. ನಾವು ಸುಳ್ಳು ಹೇಳುತ್ತಿಲ್ಲ ಎಂದು ಮತ್ತೊಬ್ಬ ಸಂತ್ರಸ್ತೆ ಹೇಳಿದ್ದಾರೆ. ಇದನ್ನೂ ಓದಿ: ವರ್ಕೌಟ್ ವೇಳೆ ವೃದ್ಧ ದಂಪತಿ ಕಿಸ್ಸಿಂಗ್ ವೀಡಿಯೋ ವೈರಲ್

    ಆದರೆ ಅಪರಾಧಿಗಳಾದ ಮಾಜಿ ಸೈನಿಕರ ಸಂಬಂಧಿಕರು ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಸಂತ್ರಸ್ತೆಯರ ವಿರುದ್ಧ ನ್ಯಾಯಾಲಯದ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.

  • ಮಾಜಿ ಸೈನಿಕರನ್ನು ಹತ್ಯೆಗೈದ ತಾಲಿಬಾನಿಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ

    ಮಾಜಿ ಸೈನಿಕರನ್ನು ಹತ್ಯೆಗೈದ ತಾಲಿಬಾನಿಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ

    ಕಾಬೂಲ್: ಯುಎಸ್ ಬೆಂಬಲಿತ ಆಡಳಿತದಲ್ಲಿ ಸೇವೆ ಸಲ್ಲಿಸಿದ ಸೈನಿಕರನ್ನು ತಾಲಿಬಾನಿಗಳು ರಹಸ್ಯವಾಗಿ ಕೊಂದಿದ್ದಾರೆ ಎಂದು ಆರೋಪಿಸಿ ಮಹಿಳೆಯರ ಗುಂಪೊಂದು ಮಂಗಳವಾರ ಅಫ್ಘಾನ್ ರಾಜಧಾನಿ ಕಾಬೂಲ್ ನಲ್ಲಿ ಪ್ರತಿಭಟನೆ ನಡೆಸಿದೆ.

    ಕಾಬೂಲ್‍ನ ಮಧ್ಯಭಾಗದಲ್ಲಿರುವ ಮಸೀದಿಯೊಂದರ ಬಳಿ ಸುಮಾರು 30 ಮಹಿಳೆಯರು ಜಮಾಯಿಸಿದ್ದು, ತಾಲಿಬಾನ್ ಪಡೆಗಳ ವಿರುದ್ಧ ‘ನ್ಯಾಯಬೇಕು’ ಎಂದು ಘೋಷಣೆಗಳನ್ನು ಕೂಗುತ್ತಾ ನೂರು ಮೀಟರ್ ಮೆರವಣಿಗೆ ನಡೆಸಿದ್ದಾರೆ.

    ತಾಲಿಬಾನಿಗಳು ಯುವಕರನ್ನು ನಿಗೂಢವಾಗಿ ಹತ್ಯೆ ಮಾಡಿದ್ದಾರೆ. ಅಲ್ಲದೇ ದೇಶದ ಮಾಜಿ ಸೈನಿಕರನ್ನು ಹತ್ಯೆ ಮಾಡಿದ್ದಾರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವಿಚಾರವನ್ನು ಮಾಧ್ಯಮಗಳು ಪ್ರಕಟಿಸಬಾರದು ಎಂದು ತಾಲಿಬಾನ್ ಪ್ರಯತ್ನಿಸಿತ್ತು. ಇದಕ್ಕೆ ತಾಲಿಬಾನಿಗಳು ವರದಿಗಾರರನ್ನು ಮತ್ತು ಛಾಯಾಗ್ರಾಹಕರ ಉಪಕರಣಗಳನ್ನು ವಶಪಡಿಸಿಕೊಂಡಿದ್ದರು. ಕ್ಯಾಮರಾವನ್ನು ಹಿಂದಿರುಗಿಸುವ ಮೊದಲು ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿ ಅವರಿಗೆ ಕೊಟ್ಟಿದ್ದರು. ಇದನ್ನೂ ಓದಿ: ಪುರುಷ ಸಂಬಂಧಿಗಳು ಜೊತೆಯಲ್ಲಿ ಇಲ್ಲದಿದ್ರೆ ಮಹಿಳೆಯರು ದೂರ ಪ್ರಯಾಣಿಸುವಂತಿಲ್ಲ: ತಾಲಿಬಾನ್‌

    ಅಮ್ನೆಸ್ಟಿ ಇಂಟರ್‍ನ್ಯಾಶನಲ್ ಮತ್ತು ಹ್ಯೂಮನ್ ರೈಟ್ಸ್ ವಾಚ್, ತಾಲಿಬಾನ್ ಅಧಿಕಾರವನ್ನು ಸ್ವಾಧೀನಪಡಿಸಿಕೊಂಡ ನಂತರ 100 ಕ್ಕೂ ಹೆಚ್ಚು ಕಾನೂನುಬಾಹಿರ ಹತ್ಯೆಗಳು ಅಫ್ಘಾನ್ ನಲ್ಲಿ ನಡೆದಿದೆ ಎಂಬ ಆರೋಪಗಳಿವೆ ಎಂದು ವಿಶ್ವಸಂಸ್ಥೆ ವರದಿ ಮಾಡಿತ್ತು. ಈ ಹಿನ್ನೆಲೆ ಮಂಗಳವಾರ ತಾಲಿಬಾನ್ ವಿರುದ್ಧ ಪ್ರತಿಭಟನೆ ಮಾಡಲಾಗಿದೆ.

    ಪ್ರತಿಭಟನಾಕಾರರಾದ ನಯೆರಾ ಕೊಹಿಸ್ತಾನಿ, ತಾಲಿಬಾನಿಗಳು ತಮ್ಮ ದೌರ್ಜನ್ಯವನ್ನು ನಿಲ್ಲಿಸಬೇಕು. ನಮಗೆ ಸ್ವಾತಂತ್ರ್ಯ ಬೇಕು, ನಮಗೆ ನ್ಯಾಯ ಬೇಕು. ನಮಗೆ ಮಾನವ ಹಕ್ಕುಗಳು ಬೇಕು ಎಂದು ಆಗ್ರಹಿಸಿದ್ದಾರೆ.

    ಆಗಸ್ಟ್‍ನಲ್ಲಿ ತಾಲಿಬಾನ್ ಘೋಷಿಸಿದ ಸಾಮಾನ್ಯ ಕ್ಷಮಾದಾನವನ್ನು ಉಲ್ಲಂಘಿಸಿ, ಮಾಜಿ ಸೈನಿಕರು ಮತ್ತು ಸರ್ಕಾರಿ ನೌಕರರನ್ನು ತಾಲಿಬಾನಿಗಳು ಹತ್ಯೆ ಮಾಡಲಾಗಿದೆ. ಅಲ್ಲದೇ ತಾಲಿಬಾನ್ ಆಳ್ವಿಕೆಯ ಅಡಿಯಲ್ಲಿ ಮಹಿಳೆಯರಿಗೆ ಹಲವು ನಿರ್ಬಂಧಗಳಿವೆ. ಇದರಿಂದ ಅವರು ಜೀವಿಸಲು ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಂದು ಬಂದ್‌ ಬದಲಿಗೆ ಬೃಹತ್‌ ರ‍್ಯಾಲಿ – MES ನಿಷೇಧಕ್ಕೆ ಸರ್ಕಾರಕ್ಕೆ ಗಡುವು

    ವಾರಾಂತ್ಯದಲ್ಲಿ ತಾಲಿಬಾನ್ ಸರ್ಕಾರವು, ಮಹಿಳೆಯರು ಪುರುಷ ಸಂಬಂಧಿ ಬೆಂಗಾವಲು ಹೊರತು ದೂರದ ಪ್ರಯಾಣವನ್ನು ನಿಷೇಧಿಸಲಾಗಿದೆ ಎಂದು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಇದರಿಂದ ಆಕ್ರೋಶಗೊಂಡ ಮಹಿಳೆಯರು, ನಮ್ಮ ಹಕ್ಕುಗಳು ಮಾನವ ಹಕ್ಕುಗಳಾಗಿವೆ. ನಾವು ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ.