Tag: ex-soldier

  • ಮಾಜಿ ಸೈನಿಕನಿಗೆ ಗುಂಡಿಕ್ಕಿ ಹತ್ಯೆ – ಆರೋಪಿಗಳನ್ನು ಬಡಿದು ಕೊಂದ ಗ್ರಾಮಸ್ಥರು

    ಮಾಜಿ ಸೈನಿಕನಿಗೆ ಗುಂಡಿಕ್ಕಿ ಹತ್ಯೆ – ಆರೋಪಿಗಳನ್ನು ಬಡಿದು ಕೊಂದ ಗ್ರಾಮಸ್ಥರು

    ಪಟ್ನಾ: ಮಾಜಿ ಸೈನಿಕನನ್ನು (Ex Soldier) ಗುಂಡಿಕ್ಕಿ ಹತ್ಯೆಗೈದು ಪರಾರಿಯಾಗಲು ಯತ್ನಿಸಿದ ಇಬ್ಬರನ್ನು ಗ್ರಾಮಸ್ಥರು ಬಡಿದು ಹತ್ಯೆಗೈದ ಘಟನೆ ಬಿಹಾರದ (Bihar) ರೋಹ್ತಾಸ್ ಜಿಲ್ಲೆಯಲ್ಲಿ ನಡೆದಿದೆ. ಮತ್ತೋರ್ವ ದಾಳಿಕೋರನ ಮೇಲೂ ಗ್ರಾಮಸ್ಥರು ಹಲ್ಲೆ ನಡೆಸಿದ್ದು ಆತ ತೀವ್ರ ಅಸ್ವಸ್ಥಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮೃತ ಮಾಜಿ ಸೈನಿಕನನ್ನು ಬಿಜೇಂದ್ರ ಸಿಂಗ್ (55) ಎಂದು ಗುರುತಿಸಲಾಗಿದೆ. ಗುಂಪಿನಿಂದ ಹತ್ಯೆಗೀಡಾದ ಇಬ್ಬರು ದಾಳಿಕೋರರನ್ನು ಮಿಥಿಲೇಶ್ ಕುಮಾರ್ (23) ಮತ್ತು ಆದಿತ್ಯ ಕುಮಾರ್ (25) ಎಂದು ಗುರುತಿಸಲಾಗಿದೆ. ಗಾಯಗೊಂಡವನನ್ನು ಅಜೀತ್ ಕುಮಾರ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 30ಕ್ಕೂ ಹೆಚ್ಚು ಕಾರ್‌ಗಳ ಗ್ಲಾಸ್ ಪುಡಿಗೈದಿದ್ದ ಪುಂಡರು ಅರೆಸ್ಟ್

    ಬೈಕ್‍ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ನಿವೃತ್ತ ಸೇನಾ ಯೋಧನ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಗ್ರಾಮಸ್ಥರು ಮೂವರು ದಾಳಿಕೋರರನ್ನು ಹಿಂಬಾಲಿಸಿ ಹಿಡಿದಿದ್ದಾರೆ. ಬಳಿಕ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಗ್ರಾಮಸ್ಥರು ದಾಳಿಕೋರರನ್ನು ಹಿಡಿದಾಗ ಗುಂಡು ಹಾರಿಸಲಾಗಿದ್ದು, ಅಂಕಿತ್ ಕುಮಾರ್ ಎಂಬಾತ ಗಾಯಗೊಂಡಿದ್ದಾನೆ.

    ಮಾಜಿ ಸೈನಿಕನ ಹತ್ಯೆಯ ಹಿಂದಿನ ಕಾರಣ ಇನ್ನೂ ತಿಳಿದು ಬಂದಿಲ್ಲ. ಪ್ರಕರಣದ ತನಿಖೆಗೆ ಪೊಲೀಸರ (Police) ತಂಡ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 10 ಕೋಟಿ ಆಸ್ತಿ ಆಸೆಗೆ ಪತ್ನಿಯನ್ನೇ ಕೊಂದು ಸಹಜ ಸಾವೆಂದು ನಾಟಕವಾಡಿ ಸಿಕ್ಕಿಬಿದ್ದ ಪತಿ

  • ಟಿಬೆಟಿಯನ್ ಕಾಲೋನಿಯಲ್ಲಿ ಮಾಜಿ ಸೈನಿಕನಿಂದ ಯುವಕನ ಹತ್ಯೆ

    ಟಿಬೆಟಿಯನ್ ಕಾಲೋನಿಯಲ್ಲಿ ಮಾಜಿ ಸೈನಿಕನಿಂದ ಯುವಕನ ಹತ್ಯೆ

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಮುಂಡಗೋಡ ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಂ.4ರಲ್ಲಿ ಇಬ್ಬರು ಗೆಳೆಯರ ನಡುವೆ ಕಲಹ ಏರ್ಪಟ್ಟು ಕೊಲೆಯಲ್ಲಿ ಅಂತ್ಯವಾಗಿದೆ.

    ಜಮಯಾಂಗ್ ಡಾಕ್ಪಾ ಯಾನೆ ಲೋಬ್ಸಂಗ್ (35) ಕೊಲೆಯಾದ ಯುವಕ. ಗೊನಪೊ ತಿನ್ಲೆ ಚೊಡೆಕ್(50) ಕೊಲೆಮಾಡಿದ ವ್ಯಕ್ತಿಯಾಗಿದ್ದು, ಈತ ಭಾರತೀಯ ಸೈನ್ಯದಲ್ಲಿ ಸೈನಿಕನಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತನಾದವನಾಗಿದ್ದಾನೆ.

    ಘಟನೆ ನಡೆದಿದ್ದು ಹೇಗೆ?: ಮಂಗಳವಾರ ತಡರಾತ್ರಿ ಇಬ್ಬರ ನಡುವೆ ಜಗಳ ನಡೆದಿದ್ದು, ಚಾಕುವಿನಿಂದ ಇಬ್ಬರೂ ಒಬ್ಬರಿಗೊಬ್ಬರು ಹಲ್ಲೆ ಮಾಡಿಕೊಂಡಿದ್ದಾರೆ. ಈ ವೇಳೆ ಜಮಯಾಂಗ್ ಡಾಕ್ಪಾ ಯಾನೆ ಲೋಬ್ಸಂಗ್ ಚಾಕು ಇರಿತಕ್ಕೆ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಕೊಲೆ ಮಾಡಿದ ಗೊನಪೊ ತಿನ್ಲೆ ಚೊಡೆಕ್ ಗಂಭೀರ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ: ಸೂರ್ಯ, ಚಂದ್ರ, ಭೂಮಿ ಯಾವಾಗ ಹುಟ್ಟಿದೆ ಅಂತ ಕೇಳೋಕೆ ಆಗುತ್ತಾ? – ಪರಂ ವಿರುದ್ಧ ಮುತಾಲಿಕ್ ಕಿಡಿ

    ಹತ್ಯೆ ಮಾಡಿರುವ ಆರೋಪಿ ಮಾಜಿ ಸೈನಿಕನಾಗಿದ್ದಾನೆ (Ex Soldier). ಹತ್ಯೆಗೆ ಕಾರಣ ಸ್ಪಷ್ಟವಾಗಿಲ್ಲ. ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಮಾಹಿತಿ ನೀಡಿದ್ದು, ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾಜಿ ಸೈನಿಕನ ಬಳಿ 5 ಲಕ್ಷ ಲಂಚಕ್ಕೆ ಬೇಡಿಕೆ- ಮೂವರು ಭ್ರಷ್ಟ ಅಧಿಕಾರಿಗಳು ಜೈಲುಪಾಲು

    ಮಾಜಿ ಸೈನಿಕನ ಬಳಿ 5 ಲಕ್ಷ ಲಂಚಕ್ಕೆ ಬೇಡಿಕೆ- ಮೂವರು ಭ್ರಷ್ಟ ಅಧಿಕಾರಿಗಳು ಜೈಲುಪಾಲು

    ಚಿಕ್ಕಬಳ್ಳಾಪುರ: ಮಾಜಿ ಸೈನಿಕರೊಬ್ಬರ ಬಳಿಯೇ ಲಂಚಕ್ಕೆ ಬೇಡಿಕೆಯಿಟ್ಟು ಮೂವರು ಲೋಕಾಯುಕ್ತ (Lokayukta) ಬಲೆಗೆ ಬಿದ್ದಿರೋ ಪ್ರಸಂಗ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ವೈಜಕೂರು ಕಂದಾಯ ವೃತ್ತದ ಗ್ರಾಮ ಸಹಾಯಕ ಎನ್.ಪ್ರಕಾಶ್ ಹಾಗೂ ಚಿಂತಾಮಣಿ ತಾಲೂಕು ಕಚೇರಿಯಲ್ಲಿ ಕೆಲಸ ಮಾಡೋ ಸರ್ಕಾರಿ ಭೂಮಾಪಕ ಪಿ.ಎನ್ ನಾಗರಾಜ್ ಹಾಗೂ ರೈತ ಮುಖಂಡ ಕದಿರೇಗೌಡ ಎಂಬವರೇ ಲೋಕಾಯಕ್ತ ಪೊಲೀಸರ ಟ್ರ್ಯಾಪ್‍ಗೆ ಸಿಕ್ಕಿಬಿದ್ದ ಭ್ರಷ್ಟರು. ಇದನ್ನೂ ಓದಿ: ಕಲಬುರಗಿಯಲ್ಲಿ ಜಂಪಿಂಗ್ ಪಾಲಿಟಿಕ್ಸ್ ಶುರು- ತೆನೆ ಇಳಿಸಿ ಕೈ ಹಿಡಿದ ರೇವು ನಾಯಕ್ ಬೆಳಮಗಿ

    ಚಿಂತಾಮಣಿ ನಗರದ ವೆಂಕಟಗಿರಿಕೋಟೆಯ ವಿನಾಯಕ ಬಡಾವಣೆಯ ನಿವಾಸಿ ಶಿವಾನಂದ ರೆಡ್ಡಿ ಮಾಜಿ ಸೈನಿಕನಾಗಿದ್ದು, ಮಾಜಿ ಸೈನಿಕ ಖೋಟಾದಡಿ ರಾಜ್ಯ ಸರ್ಕಾರಕ್ಕೆ ಜಮೀನು ಮಂಜೂರು ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ರು. ಹಲವು ವರ್ಷಗಳಿಂದ ಮನವಿ ಸಲ್ಲಿಸಿದ್ದರೂ ಸರ್ಕಾರದಿಂದ ಇದುವರೆಗೂ ಜಮೀನು ಮಂಜೂರಾಗಿಲ್ಲ. ಇದರಿಂದ ಬೇಸತ್ತ ರೈತ ಮುಖಂಡ ಕದಿರೇಗೌಡ ಬಳಿ ಹೋಗಿ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದು, ಆದರೆ ಈ ಕದಿರೇಗೌಡ (Kadire Gowda) ಗ್ರಾಮ ಸಹಾಯಕ ಪ್ರಕಾಶ್ ಹಾಗೂ ಭೂಮಾಪಕ ನಾಗರಾಜ್ ಜೊತೆ ಡೀಲ್ ಮಾತನಾಡಿ 10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. ಇದರಿಂದ ನೊಂದ ಮಾಜಿ ಸೈನಿಕ ಶಿವಾನಂದರೆಡ್ಡಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿ, ಲೋಕಾಯಕ್ತ ಪೊಲೀಸರು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಶಿವಾನಂದರೆಡ್ಡಿ 1987ರಲ್ಲಿ ಭಾರತೀಯ ಸೈನ್ಯಕ್ಕೆ ಸೇರಿದ್ದು, 1999ರಲ್ಲಿ ಜಮ್ಮು-ಕಾಶ್ಮೀರದ ಪೂಂಚ್ ಸೆಕ್ಟರ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಾತ್ರಿ ಗಸ್ತಿನಲ್ಲಿರುವಾಗ ಅಪಘಾತವಾಗಿ ಬಲಗಾಲಿಗೆ ಗಂಭೀರ ಗಾಯವಾದ ಕಾರಣ ಸೇವೆಯಿಂದ ನಿವೃತ್ತಿಯಾಗಿದ್ರು. ಸ್ವಂತ ಊರಲ್ಲಿ ಕೃಷಿ ಮಾಡ್ಕೊಂಡು ಬದುಕು ಸಾಗಿಸೋಣ ಅಂತ ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ. ಜಮೀನು ಪಡೆಯಲು ಪ್ರತಿಭಟನೆ, ಪಾದಯಾತ್ರೆ, ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ಮಾಡಿದ್ರೂ ಸರ್ಕಾರ ಹಾಗೂ ಆಧಿಕಾರಿಗಳು ಮಾತ್ರ ಜಮೀನು ಮಂಜೂರು ಮಾಡಿಕೊಡಲಿಲ್ಲ, ಬದಲಾಗಿ ಈಗ 10 ಲಕ್ಷಕ್ಕೆ ಲಂಚಕ್ಕೆ ಪೀಡಿಸಿ, 5 ಲಕ್ಷಕ್ಕೆ ಡೀಲ್ ಕುದುರಿಸಿಕೊಂಡಿದ್ದ ಭ್ರಷ್ಟರು ಲೋಕಾ ಬಲೆಗೆ ಬಿದ್ದಿದ್ದು, ಮಾಡಿದ್ದುಣ್ಣೋ ಮಹರಾಯ ಅಂತ ತಕ್ಕಶಾಸ್ತಿ ಆಗಿದೆ.

    ಒಟ್ಟಾರೆ ಮಾಜಿ ಸೈನಿಕ (Ex-soldier) ಅನ್ನೋ ಕನಿಷ್ಟ ಗೌರವ ಕೊಡದೆ ಲಂಚದ ಹಣಕ್ಕಾಗಿ ಹಾತೊರೆದ ಭ್ರಷ್ಟ ಅಧಿಕಾರಿಗಳು ಇದೀಗ ಜೈಲು ಪಾಲಾಗಿದ್ದಾರೆ. ಹೀಗೆ ಲಂಚ ಬಾಕ ಅಧಿಕಾರಿಗಳಿಗೆ ತಕ್ಕ ಶಾಸ್ತಿ ಆಗಿರುವ ಬಗ್ಗೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಲಿಸುತ್ತಿದ್ದ ಬಸ್ಸಿನಿಂದ ಜಿಗಿದು ಮಾಜಿ ಸೈನಿಕ ಆತ್ಮಹತ್ಯೆ

    ಚಲಿಸುತ್ತಿದ್ದ ಬಸ್ಸಿನಿಂದ ಜಿಗಿದು ಮಾಜಿ ಸೈನಿಕ ಆತ್ಮಹತ್ಯೆ

    ಚಿಕ್ಕೋಡಿ(ಬೆಳಗಾವಿ): ಮಾಜಿ ಸೈನಿಕರೊಬ್ಬರು ಚಲಿಸುತ್ತಿದ್ದ ಸಾರಿಗೆ ಬಸ್ಸಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಟುರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ನಡೆದಿದೆ.

    ಮೃತ ವ್ಯಕ್ತಿ ಗೋಪಿನಾಥ್ ಜೋತಿರಾಮ ಜಾನವಾಡೆ (27) ಆಗಿದ್ದು, ಇವರು ನಿಪ್ಪಾಣಿ ತಾಲೂಕಿನ ಹಂಚಿನಾಳ (ಕೆಎಸ್ )ನಿವಾಸಿ. ಬೆಳಗಾವಿಯಿಂದ ಸಂಕೇಶ್ವರ ಮಾರ್ಗವಾಗಿ ನಿಪ್ಪಾಣಿ ಕಡೆ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗೋಟುರ ಗ್ರಾಮ ಸಮೀಪಿಸುತ್ತಿದ್ದಂತೆ ಏಕಾಏಕಿ ಬಸ್ಸಿನ ಹಿಂಬದಿಯ ಬಾಗಿಲು ತೆರೆದು ಜಿಗಿದಿದ್ದಾರೆ. ಇದೇ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಇನ್ನೊಂದು ಸಾರಿಗೆ ಬಸ್ಸಿನ ಟೈಯರ್ ಅಡಿ ಸಿಲುಕಿ ತಲೆಗೆ ತೀವ್ರವಾದ ಏಟು ಬಿದ್ದಿದೆ. ಇದರಿಂದ ಗಂಭೀರ ಗಾಯಗೊಂಡ ಗೋಪಿನಾಥ್ ಜಾನವಾಡೆ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಮೃತ ಗೋಪಿನಾಥ್ ಜಾನವಾಡೆ ಮಾನಸಿಕವಾಗಿ ಅಸ್ವಸ್ಥವಾಗಿದ್ದರು ಎಂದು ತಿಳಿದುಬಂದಿದೆ. ತಂದೆ ಇವರನ್ನು ಬೆಳಗಾವಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿ ಹಿಂದುರುಗಿ ಬರುವಾಗ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ಜಿಗಿದಿದ್ದಾರೆ. ಮೃತ ಗೋಪಿನಾಥ್ ಜಾನವಾಡ ಮೂರು ವರ್ಷದ ಹಿಂದೆ ಭಾರತೀಯ ಸೇನೆಯಲ್ಲಿ ಸೇವೆಯಲ್ಲಿದ್ದು, ಮಾನಸಿಕ ಅಸ್ವಸ್ಥಗೊಂಡ ಬಳಿಕ ಸೇನೆಯಿಂದ ವಜಾ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.

    ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಫೇಸ್‍ಬುಕ್‍ನಲ್ಲಿ ವಾಗ್ವಾದ – ಯುವಕನನ್ನು ಗುಂಡಿಕ್ಕಿ ಕೊಂದ ಮಾಜಿ ಸೈನಿಕ

    ಫೇಸ್‍ಬುಕ್‍ನಲ್ಲಿ ವಾಗ್ವಾದ – ಯುವಕನನ್ನು ಗುಂಡಿಕ್ಕಿ ಕೊಂದ ಮಾಜಿ ಸೈನಿಕ

    -ಕೊಲೆಯ ದೃಶ್ಯ ಮೊಬೈಲ್‍ನಲ್ಲಿ ಸೆರೆ

    ಚಂಡೀಗಢ: ಫೇಸ್‍ಬುಕ್‍ನಲ್ಲಿ ವಾಗ್ವಾದ ನಡೆದು ಮಾಜಿ ಸೈನಿಕನೋರ್ವ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

    ಕೊಲೆಯಾದ ಯುವಕನನ್ನು 26 ವರ್ಷದ ಸುಖ್‍ಚೈನ್ ಸಿಂಗ್ ಎಂದು ಗುರುತಿಸಲಾಗಿದೆ. ಆರೋಪಿ ಜಸ್ಬೀರ್ ಸಿಂಗ್ ಯುವಕನನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಸುಖ್‍ಚೈನ್ ಸಿಂಗ್ ತಂದೆ ಪರಮ್‍ಜಿತ್ ಸಿಂಗ್ ಅವರು ತಾರ್ನ್ ತರಣ್ ಜಿಲ್ಲೆಯ ಕಿಲ್ಲಾ ಕವಿ ಸಂತೋಖ್ ಸಿಂಗ್ ಗ್ರಾಮದಲ್ಲಿ ಮೆಡಿಕಲ್ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ.

    ಈ ಅಂಗಡಿಯಲ್ಲಿ ಸುಖ್‍ಚೈನ್ ಕೂಡ ಕೆಲಸ ಮಾಡುತ್ತಿದ್ದು, ಇದರ ಜೊತೆಗೆ ಅಂಗಡಿ ಹೆಸರಿನಲ್ಲಿ ಒಂದು ಫೇಸ್‍ಬುಕ್ ಪೇಜ್ ನಡೆಸುತ್ತಿದ್ದ. ಈ ಫೇಸ್‍ಬುಕ್ ಪೇಜ್‍ನಲ್ಲಿ ಆರೋಪಿ ಜಸ್ಬೀರ್ ಸಿಂಗ್ ನೀವು ಅಂಗಡಿಯಲ್ಲಿ ಡ್ರಗ್ಸ್ ಮಾತ್ರೆಗಳನ್ನು ಮಾರಾಟ ಮಾಡುತ್ತೀರಾ ಎಂದು ಕಮೆಂಟ್ ಮಾಡಿದ್ದ. ಜೊತೆಗೆ ಕುಟುಂಬದ ಬಗ್ಗೆಯೂ ಕೆಟ್ಟದಾಗ ಮಾತನಾಡಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ.

    ಇದಾದ ನಂತರ ಸುಖ್‍ಚೈನ್ ಈ ರೀತಿ ಕಮೆಂಟ್ ಮಾಡಬೇಡ ಎಂದು ಜಸ್ಬೀರ್ ಸಿಂಗ್ ಹೇಳಿದ್ದಾನೆ. ಆದರೂ ಆತ ಮಾತನ್ನು ಕೇಳಿಲ್ಲ. ನಂತರ ಸುಖ್‍ಚೈನ್ ತನ್ನ ಮೊಬೈಲಿನಲ್ಲಿ ವಿಡಿಯೋ ಮಾಡುತ್ತಾ, ಜಸ್ಬೀರ್ ಜೊತೆ ಜಗಳ ಮಾಡಲು ಹೋಗಿದ್ದಾನೆ. ಈ ವೇಳೆ ಮನೆಯ ಚಾವಣಿ ಮೇಲೆ ಬಂದೂಕು ಹಿಡಿದು ನಿಂತ ಆರೋಪಿ ಶೂಟ್ ಮಾಡುತ್ತೇನೆ ಎಂದು ಹೇಳಿದ್ದಾನೆ. ಆಗ ಗುಂಡಿಕ್ಕು ಎಂದು ಮುಂದೆ ಹೋದಾಗ, ಆರೋಪಿ ಶೂಟ್ ಮಾಡಿದ್ದಾನೆ.

    ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಸುಖ್‍ಚೈನ್ ಮಾಡಿರುವ ಮೊಬೈಲ್ ವಿಡಿಯೋದಲ್ಲಿ ಜಸ್ಬೀರ್ ಗನ್ ಅನ್ನು ಲೋಡ್ ಮಾಡಿ ಶೂಟ್ ಮಾಡಿರುವುದು ಸೆರೆಯಾಗಿದೆ. ಜಸ್ಬೀರ್ ಶೂಟ್ ಮಾಡಿದ ನಂತರ ಸುಖ್‍ಚೈನ್‍ನನ್ನು ಆಸ್ಪತ್ರೆಗೆ ಕರೆತಂದಿದ್ದು, ಆತ ಅಲ್ಲಿ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಘಟನೆಯ ನಂತರ ಆರೋಪಿ ಜಸ್ಬೀರ್ ಸಿಂಗ್ ಎಸ್ಕೇಪ್ ಆಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ಬೆಂಕಿಯಲ್ಲಿದ್ದ ಮಗುವಿನ ಜೀವ ಉಳಿಸಲು ತನ್ನ ಜೀವವನ್ನೇ ತ್ಯಾಗ ಮಾಡಿದ ಮಹಾ ತಾಯಿ

    ಬೆಂಕಿಯಲ್ಲಿದ್ದ ಮಗುವಿನ ಜೀವ ಉಳಿಸಲು ತನ್ನ ಜೀವವನ್ನೇ ತ್ಯಾಗ ಮಾಡಿದ ಮಹಾ ತಾಯಿ

    – ಮಗುವನ್ನು ಕ್ಯಾಚ್ ಹಿಡಿದ ಹೀರೋ ಆದ ಮಾಜಿ ಸೈನಿಕ

    ವಾಷಿಂಗ್ಟನ್: ಬೆಂಕಿ ಹೊತ್ತಿ ಉರಿಯುತ್ತಿದ್ದ ತನ್ನ ಮನೆಯಿಂದ ತನ್ನ ಮೂರು ವರ್ಷದ ಮಗುವನ್ನು ಎಸೆದು ತಾಯಿಯೊಬ್ಬಳು ಬೆಂಕಿಗಾಹುತಿಯಾಗಿರುವ ಘಟನೆ ಅಮೆರಿಕದ ಅರಿಜೋನಾ ಪ್ರದೇಶದಲ್ಲಿ ನಡೆದಿದೆ.

    ಅರಿಜೋನಾ ಪ್ರದೇಶದಲ್ಲಿರುವ ಅಪಾರ್ಟ್‍ಮೆಂಟ್‍ನ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಆ ಮನೆಯಲ್ಲಿ ಇದ್ದ 30 ವರ್ಷದ ಮಹಿಳೆ ರಾಚೆಲ್ ಲಾಂಗ್ ಮತ್ತು ಅವರ ಎಂಟು ಮತ್ತು ಮೂರು ವರ್ಷದ ಮಕ್ಕಳು ಬೆಂಕಿಯಲ್ಲಿ ಸಿಲುಕಿಕೊಂಡಿದ್ದಾರೆ. ಆಗ ತಾಯಿ ತನ್ನ ಮೂರು ವರ್ಷದ ಮಗುವನ್ನು ಸಹಾಯ ಮಾಡಿ ಎಂದು ಕಿರುಚುತ್ತಾ ಬಾಲ್ಕನಿಯಿಂದ ಕೆಳಗೆ ಎಸೆಸಿದ್ದಾಳೆ. ಆಗ ಸರಿಯಾದ ಸಮಯಕ್ಕೆ ಬಂದ ಮಾಜಿ ಸೈನಿಕ ಫಿಲಿಪ್ ಬ್ಲಾಕ್ಸ್ ಮಗುವನ್ನು ಕ್ಯಾಚ್ ಹಿಡಿದು ಬದುಕಿಸಿದ್ದಾರೆ.

    https://twitter.com/Doranimated/status/1280957888111038464

    ಸರಿಯಾದ ಸಮಯಕ್ಕೆ ಮಗುವನ್ನು ಓಡಿ ಹೋಗಿ ಫಿಲಿಪ್ಸ್ ಕ್ಯಾಚ್ ಹಿಡಿದಿರುವುದನ್ನು ಅಲ್ಲೇ ಇದ್ದ ಓರ್ವ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದ್ದಾನೆ. ಈ ಘಟನೆಯಲ್ಲಿ ಮಗುವನ್ನು ಕೆಳಗೆ ಎಸೆದ ತಾಯಿ ಸಾವನ್ನಪ್ಪಿದ್ದು, ಆದರೆ ಅವರ ಮಕ್ಕಳನ್ನು ರಕ್ಷಿಸಲಾಗಿದೆ. ಇಬ್ಬರು ಮಕ್ಕಳಿಗೂ ಸಣ್ಣ-ಪುಟ್ಟ ಸುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಫಿಲಿಪ್, ಈ ಘಟನೆಯ ನಿಜವಾದ ಹೀರೋ ನಾನಲ್ಲ, ಸುಡುವ ಬೆಂಕಿಯ ಮಧ್ಯದಲ್ಲೂ ತನ್ನ ಮಗುವನ್ನು ಕೆಳಗೆ ಎಸೆದ ತಾಯಿ ನಿಜವಾದ ಹೀರೋ. ತನ್ನ ಮಗುವಿನ ಜೀವ ಉಳಿಸಲು ಆಕೆ ತನ್ನ ಜೀವವನ್ನೇ ತ್ಯಾಗ ಮಾಡಿದ್ದಾಳೆ. ನಾನು ಇಲ್ಲಿ ಏನನನ್ನು ಮಾಡಿಲ್ಲ. ಆಕೆ ಸಹಾಯ ಮಾಡಿ ಎಂದು ಕಿರುಚಿದ್ದು ನನಗೆ ಕೇಳಿತು. ನಾನು ಓಡಿಬಂದೆ ಅಷ್ಟರಲ್ಲಿ ಮಗುವನ್ನು ಎಸೆದರು ನಾನು ಹೋಗಿ ಕ್ಯಾಚ್ ಹಿಡಿದೆ ಅಷ್ಟೇ ಎಂದು ಹೇಳಿದ್ದಾರೆ.

    ಸ್ಥಳದಲ್ಲಿ ಇದ್ದ ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, ಲಾಂಗ್ ಮಗುವನ್ನು ಕೆಳಗೆ ಎಸೆದ ಸಮಯದಲ್ಲಿ ಆಕೆಯನ್ನು ಬೆಂಕಿ ಸುಡುತ್ತಿತ್ತು. ಆದರೆ ಆಕೆ ಅವಳ ಹಿತಕ್ಕಾಗಿ ಕೆಳಗೆ ಜಿಗಿಯದೆ. ಆಕೆ ಅಲ್ಲೇ ಉಳಿದು ತನ್ನ ಮಗುವನ್ನು ಕೆಳಗೆ ಎಸೆದಳು. ಆಕೆ ಅಲ್ಲೇ ತನ್ನ ಪ್ರಾಣವನ್ನು ಬಿಟ್ಟಳು ಎಂದು ಹೇಳಿದ್ದಾರೆ. ಸದ್ಯ ಮನೆಗೆ ಯಾವ ಕಾರಣಕ್ಕೆ ಬೆಂಕಿ ಹೊತ್ತಿಕೊಂಡಿತು ಎಂಬುದು ತಿಳಿದು ಬಂದಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ಮಾಡುತ್ತಿದ್ದಾರೆ.