Tag: Ex Prime Minister

  • ಆಫ್ಘನ್ ಮಾಜಿ ಪ್ರಧಾನಿ ಕಟ್ಟಡದ ಮೇಲೆ ದಾಳಿ – ಗುಲ್ಬುದ್ದೀನ್‌ ಗ್ರೇಟ್‌ ಎಸ್ಕೇಪ್, ಒಬ್ಬ ಸಾವು

    ಆಫ್ಘನ್ ಮಾಜಿ ಪ್ರಧಾನಿ ಕಟ್ಟಡದ ಮೇಲೆ ದಾಳಿ – ಗುಲ್ಬುದ್ದೀನ್‌ ಗ್ರೇಟ್‌ ಎಸ್ಕೇಪ್, ಒಬ್ಬ ಸಾವು

    ಕಾಬೂಲ್‌: ಅಫ್ಘಾನಿಸ್ತಾನದ (Afghanistan) ಮಾಜಿ ಪ್ರಧಾನಿ ಗುಲ್ಬುದ್ದೀನ್ ಹೆಕ್ಮತ್ಯಾರ್ (Gulbuddin Hekmatyar) ಕಟ್ಟಡದ ಮೇಲೆ ದಾಳಿ ನಡೆಸಲಾಗಿದ್ದು, ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

    ಹೆಕ್ಮತ್ಯಾರ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಶುಕ್ರವಾರದ ಪ್ರಾರ್ಥನೆಗಾಗಿ ಹೆಕ್ಮತ್ಯಾರ್ ಮತ್ತು ಅವರ ಬೆಂಬಲಿಗರು ಹೋಗಿದ್ದ ಮಸೀದಿಯೊಂದಕ್ಕೆ ಪ್ರವೇಶಿಸಲು ಯತ್ನಿಸಿದ ಇಬ್ಬರು ದಾಳಿಕೋರರನ್ನು ಭದ್ರತಾ ಸಿಬ್ಬಂದಿ ಕೊಂದಿದ್ದಾರೆ ಎಂದು ಅಲ್ ಜಜೀರಾ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ವಿವಾಹಪೂರ್ವ ಸೆಕ್ಸ್ ಮಾಡಿದ್ರೆ 1 ವರ್ಷ ಜೈಲು – ಹೊಸ ಕಾನೂನು ಜಾರಿಗೆ ಇಂಡೋನೇಷ್ಯಾ ಸಜ್ಜು

    ಕಾಬೂಲ್‌ನ ದಾರುಲಾಮನ್ ಪ್ರದೇಶದಲ್ಲಿ ಹಿಜ್ಬ್-ಎ-ಇಸ್ಲಾಮಿ ಪಕ್ಷದ ಹೆಕ್ಮತ್ಯಾರ್ ಕಟ್ಟಡದ ಮೇಲೆ ದಾಳಿ ನಡೆದಿದೆ. ದಾಳಿಕೋರರು ಮಹಿಳಾ ಬುರ್ಕಾಗಳನ್ನು ಧರಿಸಿ ಬಂದ ಆತ್ಮಹತ್ಯಾ ಬಾಂಬರ್‌ಗಳಾಗಿದ್ದರು. ಮಾಜಿ ಪ್ರಧಾನಿಯನ್ನು ಹತ್ಯೆ ಮಾಡುವ ಉದ್ದೇಶ ಹೊಂದಿದ್ದರು ಎಂದು ಅಲ್ ಜಜೀರಾ ವರದಿ ಮಾಡಿದೆ.

    “ನನ್ನ ದೇಶವಾಸಿಗಳಿಗೆ ನಾನು ಭರವಸೆ ನೀಡುತ್ತೇನೆ. ನನಗೆ ಏನೂ ಆಗಿಲ್ಲ. ಅವರು ವಿಫಲ ಪ್ರಯತ್ನ ಮಾಡಿದ್ದಾರೆ” ಎಂದು ಹೆಕ್ಮತ್ಯಾರ್ ತಮ್ಮ ಹತ್ಯೆ ಸಂಚು ಕುರಿತು ಪ್ರತಿಕ್ರಿಯಿಸಿದ್ದಾರೆ. ಕಾಬೂಲ್‌ನಲ್ಲಿ ನಡೆದ ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಇದನ್ನೂ ಓದಿ: ವಿದ್ಯಾರ್ಥಿನಿ ಶೂಟ್‌ ಮಾಡಿ ಅತ್ಯಾಚಾರವೆಸಗಿ ಕೊಂದ – ಮೃತದೇಹ ಪೀಸ್‌ ಮಾಡಿ ತಿಂದಿದ್ದ ವ್ಯಕ್ತಿ ನಿಧನ

    ಕಳೆದ ವರ್ಷ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರ ವಹಿಸಿಕೊಂಡ ನಂತರ ಅಶ್ರಫ್‌ ಘನಿ ಮತ್ತು ಇತರ ಮಾಜಿ ನಾಯಕರು ಪಲಾಯನವಾಗಿದ್ದರು. ಆದರೆ ಹೆಕ್ಮತ್ಯಾರ್ ಮಾತ್ರ ಕಾಬೂಲ್‌ನಲ್ಲಿಯೇ ಇದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್​ನ್ನು ಹೊಸ ಧರ್ಮ ಸಂಕಟದಲ್ಲಿ ಸಿಲುಕಿಸ್ತು ಎಚ್‍ಡಿಡಿ ಮಾತು

    ಕಾಂಗ್ರೆಸ್​ನ್ನು ಹೊಸ ಧರ್ಮ ಸಂಕಟದಲ್ಲಿ ಸಿಲುಕಿಸ್ತು ಎಚ್‍ಡಿಡಿ ಮಾತು

    ಬೆಂಗಳೂರು: ಲೋಕಸಭೆ ಸೀಟು ಹಂಚಿಕೆಯಲ್ಲಿ ರಾಜ್ಯದ 28 ಸ್ಥಾನಗಳಲ್ಲಿ ಜೆಡಿಎಸ್ ಪಕ್ಷಕ್ಕೆ 12 ಸ್ಥಾನ ಸಿಗಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.

    ನಗರದ ಜೆಪಿ ಭವನದಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಯಾವುದೇ ಸಮಸ್ಯೆ ಇಲ್ಲದಂತೆ ಈ ಸ್ಥಾನ ಹಂಚಿಕೆ ಮಾಡಿಕೊಳ್ಳುತ್ತೇವೆ. ಜನವರಿ 8 ರಂದು ಲೋಕಸಭೆ ಅಧಿವೇಶನ ಮುಗಿಯಲಿದೆ. ಜನವರಿ 15ರ ಒಳಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜತೆ ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಸಿ ಅಂತಿಮ ಮಾಡುತ್ತೇವೆ ಎಂದು ತಿಳಿಸಿದರು.

    ಇದುವರೆಗೆ 8 ರಿಂದ 10 ಸ್ಥಾನಗಳಿಗೆ ಜೆಡಿಎಸ್ ಬೇಡಿಕೆ ಇಟ್ಟಿದೆ ಎನ್ನಲಾಗುತ್ತಿತ್ತು. ಆದರೆ ಈಗ ಜೆಡಿಎಸ್ ವರಿಷ್ಠರೆ 12 ಸ್ಥಾನ ಬೇಕು ಎಂಬ ನೇರ ಬೇಡಿಕೆ ಇಟ್ಟಿದ್ದು. ಇದರೊಂದಿಗೆ ದೋಸ್ತಿ ಪಕ್ಷ ಕಾಂಗ್ರೆಸ್‍ಗೆ ಹೊಸ ಧರ್ಮ ಸಂಕಟ ಎದುರಾಗಿದೆ.

    ಈ ನಡುವೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಕೈತಪ್ಪಿದ್ದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿರೋ ಶಾಸಕ ಡಾ. ಸುಧಾಕರ್ ಗೆ ಮಾಜಿ ಪ್ರಧಾನಿ ದೇವೇಗೌಡರು ತಿಳಿ ಹೇಳಿದ್ದು, ಯಾರೂ ಕೂಡ ಇಲ್ಲಸಲ್ಲದ ಹೇಳಿಕೆ ನೀಡುವುದು ತರವಲ್ಲ ಎಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv