Tag: ex-mp

  • ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ಎಫ್‍ಐಆರ್

    ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ಎಫ್‍ಐಆರ್

    ಬೆಂಗಳೂರು: ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ (L.R Shivarame Gowda) ವಿರುದ್ಧ ಕೇಂದ್ರೀಯ ತನಿಖಾ ದಳ (CBI) ಎಫ್‍ಐಆರ್ ದಾಖಲಿಸಿದೆ.

    ನಕಲಿ ದಾಖಲೆ ಸೃಷ್ಟಿಸಿ 12.48 ಕೋಟಿ ಲೋನ್ (Loan Cheating) ಪಡೆದು ವಂಚನೆ ಮಾಡಿರುವ ಆರೋಪದ ಎಲ್ ಆರ್ ಶಿವರಾಮೇಗೌಡ ಸೇರಿ ಏಳು ಮಂದಿ ವಿರುದ್ಧ ಕೇಸ್ ಹಾಕಲಾಗಿದೆ. ಇದನ್ನೂ ಓದಿ: ಬಿಗ್‍ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್‍ಗೆ ಸಂಕಷ್ಟ..!

    ಎಂಜಿ ರಸ್ತೆಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಶಿವರಾಮೇ ಗೌಡರು ಲೋನ್ ಪಡೆದಿದ್ದರು. ಇದೀಗ ಈ ಸಾಲದ ಹಣ ಬೇರೆಡೆ ವರ್ಗಾಯಿಸಿ ಅನ್ಯ ಉದ್ದೇಶಕ್ಕೆ ಬಳಕೆ ಮಾಡಿರುವ ಕುರಿತು ಬ್ಯಾಂಕ್ ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ದೂರು ಸಲ್ಲಿಸಿದ್ದರು. ಈ ದೂರಿನ ಮೇರೆಗೆ ಶಿವರಾಮೇಗೌಡ, ಪತ್ನಿ ಸುಧಾ, ಮಗ ಚೇತನ್ ಗೌಡ, ಶಿವರಾಮೇಗೌಡ ಸೊಸೆ ಹಾಗೂ ರಾಯಲ್ ಕಂಕರ್ಡ್ ಎಜುಕೇಷನಲ್ ಟ್ರಸ್ಟ್ ವಿರುದ್ಧ ಸಿಬಿಐ ಎಫ್‍ಐಆರ್ ದಾಖಲಿಸಿದೆ.

    ಐಪಿಸಿ ಸೆಕ್ಷನ್ 120b (ಕ್ರಿಮಿನಲ್‌ ಪಿತೂರಿ), 420 (ವಂಚನೆ), 468 (ಮೋಸ ಮಾಡುವ ಉದ್ದೇಶದಿಂದ ಫೋರ್ಜರಿ) ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಸಿಬಿಐ ಇನ್ಸ್ ಪೆಕ್ಟರ್ ಸಿದ್ದಪ್ಪ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

  • ಮಾಜಿ ಸಂಸದ, ಕಾವೇರಿ ಹೋರಾಟಗಾರ ಮಾದೇಗೌಡ ವಿಧಿವಶ

    ಮಾಜಿ ಸಂಸದ, ಕಾವೇರಿ ಹೋರಾಟಗಾರ ಮಾದೇಗೌಡ ವಿಧಿವಶ

    ಮಂಡ್ಯ: ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸಂಸದ ಜಿ.ಮಾದೇಗೌಡ (92) ವಿಧಿವಶರಾಗಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಮಾದೇಗೌಡರು ಇಂದು ನಿಧನರಾಗಿದ್ದಾರೆ.

    ಮಂಡ್ಯ ಜಿಲ್ಲೆಯ ಹಿರಿಯ ರಾಜಕೀಯ ನಾಯಕರು, ಕಾವೇರಿ ಹೋರಾಟಗಾರರು, ಮಾಜಿ ಲೋಕಸಭಾ ಸದಸ್ಯರು ಹಾಗು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡರವರು ತೀವ್ರ ಅನಾರೋಗ್ಯದಿಂದ ಕಳೆದ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

    ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಶಾಸನಸಭೆ, ಲೋಕಸಭಾ ಸದಸ್ಯರಾಗಿ, ರೈತ ಪರ ಹೋರಾಟಗಾರರಾಗಿ ಜಿಲ್ಲೆಯ ಅಭಿವೃದ್ಧಿಗೆ ಎಸ್.ಎಂ.ಕೃಷ್ಣ ರವರ ಜೊತೆ ಶ್ರಮಿಸಿದವರು. ಮಂಡ್ಯದಲ್ಲಿ ಗಾಂಧಿ ಭವನ ನಿರ್ಮಿಸಿದ್ದರು. ಈ ಹಿಂದೆ ಮಾದೇಗೌಡರೊಂದಿಗೆ ಪ್ರಥಮ ಬಾರಿಗೆ ಶಾಸನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದ ಎಸ್.ಎಂ.ಕೃಷ್ಣ ರವರು ತಮ್ಮ ಬಹುಕಾಲದ ಒಡನಾಡಿಯ ಆರೋಗ್ಯ ವಿಚಾರಿಸಿ ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದ್ದರು.

  • ಮಾಜಿ ಸಂಸದ ರಾಜಾರಂಗಪ್ಪ ನಾಯಕ ಇನ್ನಿಲ್ಲ

    ಮಾಜಿ ಸಂಸದ ರಾಜಾರಂಗಪ್ಪ ನಾಯಕ ಇನ್ನಿಲ್ಲ

    ರಾಯಚೂರು: ಜಿಲ್ಲೆಯ ಮಾಜಿ ಸಂಸದ ರಾಜಾರಂಗಪ್ಪ ನಾಯಕ(61)ನಿಧನರಾಗಿದ್ದಾರೆ.

    ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಂಸದರು ಯಾದಗಿರಿ ಜಿಲ್ಲೆಯ ಸುರಪುರದ ವಸಂತಮಹಲ್ ನಲ್ಲಿ ಭಾನುವಾರ ರಾತ್ರಿ ವಿಧಿವಶರಾಗಿದ್ದಾರೆ.

    1996 ರಲ್ಲಿ ಜೆಡಿಎಸ್ ಪಕ್ಷದಿಂದ ರಾಯಚೂರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ಇವರು ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

    ಸ್ವಗ್ರಾಮ ಸುರಪುರ ತಾಲೂಕಿನ ಮುಷ್ಠಳ್ಳಿ ಗ್ರಾಮದಲ್ಲಿ ಇಂದು ಮಧ್ಯಾಹ್ನ 1 ಗಂಟೆಗೆ ಮೃತರ ಅಂತ್ಯಕ್ರಿಯೆ ನೆರವೇರಲಿದೆ.

  • ಕಾಂಗ್ರೆಸ್, ಜೆಡಿಎಸ್ ಶಾಸಕರು ನಿರ್ವಿರ್ಯರಾಗಿದ್ದಾರೆ: ಬಿಜೆಪಿ ಮಾಜಿ ಸಂಸದ

    ಕಾಂಗ್ರೆಸ್, ಜೆಡಿಎಸ್ ಶಾಸಕರು ನಿರ್ವಿರ್ಯರಾಗಿದ್ದಾರೆ: ಬಿಜೆಪಿ ಮಾಜಿ ಸಂಸದ

    ತುಮಕೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ನಿರ್ವಿರ್ಯರಾಗಿದ್ದಾರೆ ಎಂದು ಬಿಜೆಪಿಯ ಮಾಜಿ ಸಂಸದ ಜಿ.ಎಸ್.ಬಸವರಾಜು ಹೇಳಿದ್ದಾರೆ.

    ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯ ಮೂವರು ಮಂತ್ರಿಗಳು ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ನಿರ್ವಿರ್ಯರಾಗಿದ್ದಾರೆ. ತುಮಕೂರು ಜಿಲ್ಲೆ ನಾಶ ಮಾಡಲು ಇವರು ಮುಂದಾಗಿದ್ದಾರೆ. ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಸೇರಿದಂತೆ ಎಲ್ಲರೂ ನಿರ್ವಿಯರು. ಪರಮೇಶ್ವರ್ ಝಿರೋ ಟ್ರಾಫಿಕ್‍ಗೋಸ್ಕರ ಹೋರಾಟ ಮಾಡುತ್ತಿದ್ದಾರೆ ಎನ್ನುವ ಮೂಲಕ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

    ಡಿ.ಕೆ. ಸಹೋರದರರ ದಬ್ಬಾಳಿಕೆ ಜಿಲ್ಲೆಯ ಮೇಲೆ ಹೆಚ್ಚಾಗಿದೆ. ಅಲ್ಲದೇ ಜಿಲ್ಲೆಗೆ ಬರುತ್ತಿರುವ ಹೇಮಾವತಿ ನೀರನ್ನು ಮಾಗಡಿ ಹಾಗೂ ಕನಕಪುರಕ್ಕೆ ಕೊಂಡೊಯ್ಯಲು ಸಂಚು ರೂಪಿಸುತ್ತಿದ್ದಾರೆ. ಲಿಂಕಿಂಗ್ ಕೆನಾಲ್ ಮೂಲಕ ನೀರು ಸಾಗಿಲು ಪ್ಲಾನ್ ಮಾಡಿದ್ದಾರೆ. ಇಷ್ಟಾದರೂ ಜಿಲ್ಲೆಯ ಯಾವೊಬ್ಬ ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ಚಕಾರ ಎತ್ತುತ್ತಿಲ್ಲ. ಡಿ.ಕೆ.ಶಿವಕುಮಾರ್ ವಿರುದ್ಧ ಯಾರು ಮಾತನಾಡುತ್ತಿಲ್ಲ. ಡಿಕೆಶಿಯ ಗೂಂಡಾ ಪ್ರವೃತ್ತಿ ಹೆಚ್ಚಾಗಿದೆ. ಹೀಗೆ ಮುಂದುವರಿದರೆ ಅವರನ್ನು ನಗರದ ಒಳಗೂ ಸಹ ಸೇರಿಸಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಸ್ತೆ ಅಪಘಾತದಲ್ಲಿ ಮಾಜಿ ಸಂಸದರ ಪುತ್ರ ಪಾರು

    ರಸ್ತೆ ಅಪಘಾತದಲ್ಲಿ ಮಾಜಿ ಸಂಸದರ ಪುತ್ರ ಪಾರು

    ಮೈಸೂರು: ರಸ್ತೆ ಅಪಘಾತದಲ್ಲಿ ಮಾಜಿ ಸಂಸದ ಅಡಗೂರು ಎಚ್.ವಿಶ್ವನಾಥ್ ಪುತ್ರ ಅಪಾಯದಿಂದ ಪಾರಾಗಿದ್ದಾರೆ.

    ಮಂಗಳವಾರ ತಡರಾತ್ರಿ ಕಾರ್ ಕಾಗೂ ಆಟೋ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಮಾಜಿ ಸಂಸದರ ಪುತ್ರ ಪೂರ್ವಜ್ ವಿಶ್ವನಾಥ್ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಕೆ.ಆರ್.ನಗರ ಪಟ್ಟಣ ಹೊರವಲಯದ ಬಸವೇಶ್ವರ ದೇವಾಲಯ ಬಳಿ ಸಂಭವಿಸಿದೆ.

    ಕಾರ್ಯನಿಮಿತ್ತ ಚಾಂದಗಾಲು ಗ್ರಾಮಕ್ಕೆ ಪೂರ್ವಜ್ ತಮ್ಮ ಕಾರಿನಲ್ಲಿ ಹೊರಟಿದ್ದ ವೇಳೆ ಆಲೂಗಡ್ಡೆ ತುಂಬಿದ್ದ ಗೂಡ್ಸ್ ಆಟೋಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಎರಡೂ ವಾಹನಗಳು ಸಂಪೂರ್ಣ ಜಖಂ ಆಗಿದೆ. ಅರಕಲಗೂಡು ಮಂಜುನಾಥ್ ಎಂಬವರಿಗೆ ಸೇರಿದ ಆಟೋ ಇದಾಗಿದೆ. ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿದ್ದು, ಸದ್ಯ ಗಾಯಾಳುಗಳು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಬಗ್ಗೆ ಕೆಆರ್ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=LH0pNdW7o3U