Tag: ex mla

  • ಸುಮ್ಮನಿರೋಕೆ ನಾವು ಬಳೆ ತೊಟ್ಟಿಲ್ಲ: ಮಂಜುನಾಥ್ ಆಕ್ರೋಶ

    ಸುಮ್ಮನಿರೋಕೆ ನಾವು ಬಳೆ ತೊಟ್ಟಿಲ್ಲ: ಮಂಜುನಾಥ್ ಆಕ್ರೋಶ

    ಬೆಂಗಳೂರು: ಕಾಂಗ್ರೆಸ್‍ನವರು (Congress) ಕುಮಾರಸ್ವಾಮಿ ವಿರುದ್ಧ ಪೋಸ್ಟರ್ ವಾರ್ ಶುರು ಮಾಡಿದ್ದಾರೆ. ಸುಮ್ಮನಿರೋಕೆ ನಾವು ಬಳೆ ತೊಟ್ಟಿಲ್ಲ ನಮ್ಮ ಬಳಿಯು ಕಾರ್ಯಕರ್ತರಿದ್ದಾರೆ, ಹುಡುಗರಿದ್ದಾರೆ ಎಂದು ಮಾಗಡಿ ಮಾಜಿ ಶಾಸಕ ಮಂಜುನಾಥ್ (Ex MLA Manjunath) ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜೆಪಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಪೋಸ್ಟರ್ ಮೂಲಕ ಅಪಪ್ರಚಾರ ನಡೆಯುತ್ತಿದೆ. ಈ ಮೂಲಕ ತೇಜೋವಧೆ ಮಾಡುತ್ತಿದ್ದಾರೆ. ಈ ಹಿಂದೆ ಪೇ ಸಿಎಂ ಪೋಸ್ಟರ್ ಅಂಟಿಸಿ ಅಪಪ್ರಚಾರ ಮಾಡಿದ್ರು. ಈ ಪೋಸ್ಟರ್ ಅಪಪ್ರಚಾರದ ಬಗ್ಗೆ ನಾವೆಲ್ಲಾ ಸಭೆ ನಡೆಸಿದ್ದೇವೆ. ನಾವು ಈ ರೀತಿಯ  ಪೋಸ್ಟರ್ ಮಾಡಿ ಅಂಟಿಸುವುದು ದೊಡ್ಡ ಕೆಲಸ ಅಲ್ಲ. ನಮ್ಮ ಬಳಿಯೂ ಕಾರ್ಯಕರ್ತರ ಪಡೆ ಇದೆ ಎಂದರು.

    ಪೋಸ್ಟರ್ ಎಲ್ಲಿ ಪ್ರಿಂಟ್ ಮಾಡಿಸಬೇಕು?. ಹೇಗೆ ಮಾಡಿಸಬೇಕು ಅನ್ನೋದು ನಮಗೆ ಗೊತ್ತಿದೆ. ನಾವು ಸರ್ಕಾರಕ್ಕೆ, ಗೃಹ ಇಲಾಖೆಗೆ ಎಚ್ಚರಿಕೆ ಕೊಡ್ತಾ ಇದ್ದೀವಿ. ಇದು ಇಲ್ಲಿಗೆ ಮುಗಿಯಬೇಕು. ನಾವು ಮೈ ಕೊಡವಿ ನಿಂತರೆ ಮುಂದೆ ಏನಾಗುತ್ತೆ. ಮುಂದೆ ಯಾವ ಯಾವ ರೀತಿಯ ವೆರೈಟಿ ಪೋಸ್ಟರ್ ಡಿಸೈನ್ ಮಾಡಿಸಿ ಅಂಟಿಸಬೇಕು ನಮಗೆ ಗೊತ್ತಿದೆ. ಇದರ ಹಿಂದೆ ಡಿಸಿಎಂ ಡಿಕೆ. ಶಿವಕುಮಾರ್  (DK Shivakumar) ಮತ್ತು ಅವರ ಬೆಂಬಲಿಗರು ಇದ್ದಾರೆ ಎಂದು ಹೇಳಿದರು.

    ಪೋಸ್ಟರ್ ಗಳ ಬಗ್ಗೆ ನಮ್ಮ ನಾಯಕರು ಮಾತನಾಡಬೇಡಿ ಅಂದಿದ್ರು. ಅದಕ್ಕೆ ನಾವು ಸುಮ್ಮನಿದ್ದೇವೆ. ಈ ಪೋಸ್ಟರ್ ಗಳು (Poster) ಇಲ್ಲಿಗೆ ನಿಲ್ಲಲಿಲ್ಲ ಅಂದ್ರೆ ಮುಂದೆ ಮಾರಾಮಾರಿ ನಡೆಯಬಹುದು. ಅದಕ್ಕೆ ಸರ್ಕಾರವೇ ಹೊಣೆ ಆಗುತ್ತೆ. ನಾವು ಬಳೆತೊಟ್ಟುಕೊಂಡು ಬಂದಿಲ್ಲಾ ನಾವು ರಾಜಕೀಯ ಮಾಡೋದಕ್ಕೆ ಬಂದಿದ್ದೇವೆ. ಬೆಂಗಳೂರಲ್ಲಿ ಭ್ರಷ್ಟಾಚಾರದ ಬಗ್ಗೆ ಕುಮಾರಸ್ವಾಮಿ ಜನರಿಗೆ ತಿಳಿಸ್ತಿದ್ದಾರೆ. ಇವರು ಮಾಡಿದೆಲ್ಲಾ ಸರಿ ಅಂದಿದ್ರೆ ಇದ್ಯಾವುದು ಮಾಡ್ತಿರಲಿಲ್ಲ ಎಂದು ತಿಳಿಸಿದರು.

    ಅಧಿಕಾರ ಇದೆ ಅಂತ ಮಾಡಬೇಡಿ. ರಾಜಕಾರಣದಲ್ಲಿ ಎಲ್ಲರು ಸಾಚಾಗಳಲ್ಲ. ವೈಯಕ್ತಿಕ ಜೀವನವೇ ಬೇರೆನಿಮ್ಮದು ವೈಯಕ್ತಿಕ ಬದುಕಿದೆ ಮುಜುಗರಕ್ಕೀಡಾಗ್ತಿರಾ ಎಂದು ಎಚ್ಚರಿಸಿದ್ದಾರೆ. ಪೇ ಸಿಎಂ ಇರುವ ಕ್ಯೂ ಆರ್ ಇರುವ ಪೋಸ್ಟರ್ ಅಂಟಿಸಿದ್ರು. ಎಲೆಕ್ಷನ್ ನಲ್ಲಿ ಸ್ಮಾರ್ಟ್ ಕಾರ್ಡ್‍ಗಳನ್ನ ನೀಡಿದ್ದ ಏಜೆನ್ಸಿಯೇ ಇವತ್ತು ಕೆಲಸ ಮಾಡುತ್ತಿದೆ. ಆ ತರ ಏಜೆನ್ಸಿಗಳನ್ನ ಇಟ್ಟುಕೊಂಡು ಕೆಟ್ಟಕೆಲಸ ಮಾಡೋದು ಸರಿಯಲ್ಲ ಎಂದು ಹರಿಹಾಯ್ದಿದ್ದಾರೆ.

  • ಮಾಜಿ ಶಾಸಕನ ಕಿಸೆಯಿಂದ ಹಣ ಎಗರಿಸಲು ಮುಂದಾದವನಿಗೆ ಧರ್ಮದೇಟು

    ಮಾಜಿ ಶಾಸಕನ ಕಿಸೆಯಿಂದ ಹಣ ಎಗರಿಸಲು ಮುಂದಾದವನಿಗೆ ಧರ್ಮದೇಟು

    ತುಮಕೂರು: ಮಾಜಿ ಶಾಸಕ ಮಸಾಲೆ ಜಯರಾಮ್ (Masale Jayaram) ಅವರ ಕಿಸೆಯಿಂದ ಪಿಕ್ ಪಾಕೆಟ್ ಮಾಡಲು ಮುಂದಾವನನ್ನು ಹಿಡಿದು ಗೂಸಾ ಕೊಟ್ಟು ಬಳಿಕ ಪೊಲೀಸರಿಗೆ ಒಪ್ಪಿಸಿದ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.

    ಬಿಜೆಪಿ ರಾಜ್ಯಾಧ್ಯಕ್ಷನಾಗಿ ಆಯ್ಕೆಯಾದ ಬಳಿಕ ಬಿ.ವೈ ವಿಜಯೇಂದ್ರ (bY Vijayendra) ಅವರು ಟೆಂಪಲ್ ರನ್ ಮಾಡುತ್ತಿದ್ದಾರೆ. ಅಂತೆಯೇ ಇಂದು ಬೆಳಗ್ಗೆ ಅವರು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು. ವಿಜಯೇಂದ್ರ ಅವರು ಮಠಕ್ಕೆ ಹೋಗುತ್ತಿದ್ದಂತೆಯೇ ನೂಕುನುಗ್ಗಲು ಉಂಟಾಯಿತು. ಈ ವೇಳೆ ಕಳ್ಳನೊಬ್ಬ ಪಿಕ್ ಪಾಕೆಟ್ ಮಾಡಲು ಯತ್ನಿಸಿದ್ದಾರೆ.

    ವಿಜಯೇಂದ್ರ ಅವರನ್ನು ಬರ ಮಾಡಿಕೊಳ್ಳಲು ಮಸಾಲೆ ಜಯರಾಮ್ ಅವರು ಬಂದಿದ್ದರು. ಈ ನೂಕುನುಗ್ಗಲು ನಡುವೆ ಮಸಾಲೆ ಜಯರಾಮ್ ಕಿಸೆಗೆ ಕಳ್ಳರು ಕತ್ತರಿ ಹಾಕಲು ಹೊರಟಿದ್ದ. ಪಿಕ್ ಪಾಕೆಟ್ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ: ಟವರ್ ಏರಿದ ಯುವತಿಯನ್ನು ‘ಮಗಳೇ ಕೆಳಗಿಳಿ’ ಎಂದ ಪ್ರಧಾನಿ ಮೋದಿ!

    ವಿಜಯೇಂದ್ರ ಮಠಕ್ಕೆ ಭೇಟಿ ನೀಡಿ ವಾಪಸ್ ಹೋಗುತ್ತಿರುವಾಗ ಜೇಬಿಗೆ ಕೈ ಹಾಕಿ ಕಂತೆ ಹಣ ಎತ್ತುತ್ತಿರುವುದನ್ನು ಗಮನಿಸಿದ ಹಿಂಬಾಲಕರು ಕಳ್ಳನಿಗೆ ಗೂಸಾ ನೀಡಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

  • ಕಾಂಗ್ರೆಸ್‍ನಿಂದ್ಲೇ 50 ಜನ ಶಾಸಕರು ಬಿಜೆಪಿಗೆ ಬರ್ತಾರೆ: ಮಾಜಿ ಶಾಸಕ ಅಮೃತ ದೇಸಾಯಿ

    ಕಾಂಗ್ರೆಸ್‍ನಿಂದ್ಲೇ 50 ಜನ ಶಾಸಕರು ಬಿಜೆಪಿಗೆ ಬರ್ತಾರೆ: ಮಾಜಿ ಶಾಸಕ ಅಮೃತ ದೇಸಾಯಿ

    ಧಾರವಾಡ: ಆಪರೇಶನ್ ಹಸ್ತದ ಮಧ್ಯೆ ಧಾರವಾಡದ ಮಾಜಿ ಶಾಸಕ ಅಮೃತ ದೇಸಾಯಿ ಹೊಸ ಬಾಂಬ್ ಸಿಡಿಸಿದ್ದಾರೆ.

    ಧಾರವಾಡದಲ್ಲಿ (Dharwad) ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಜಿ ಶಾಸಕ ಅಮೃತ ದೇಸಾಯಿ, ಭಾರತೀಯ ಜನತಾ ಪಾರ್ಟಿ ಚಿನ್ಹೆ ಮೇಲೆ ಆರಿಸಿ ಬಂದ ಯಾವೊಬ್ಬ ಅಭ್ಯರ್ಥಿಯೂ ಕಾಂಗ್ರೆಸ್‍ಗೆ (Congress) ಹೋಗುವುದಿಲ್ಲ. ಅವರು ಪಕ್ಷ ಬಿಡುವುದಿಲ್ಲ, ಕಾಂಗ್ರೆಸ್‍ನಲ್ಲಿ ಸಾಕಾಗಿಯೇ ಅವರು ಬಿಜೆಪಿಗೆ (BJP) ಬಂದಿದ್ದಾರೆ ಎಂದರು. ಇದನ್ನೂ ಓದಿ: ಗೃಹಜ್ಯೋತಿಗಾಗಿ ಹಣ ಬಿಡುಗಡೆ – ಎಸ್ಕಾಂಗಳು ಕೇಳಿದ್ದು ಎಷ್ಟು? ಸಿಕ್ಕಿದ್ದು ಎಷ್ಟು?

    ಮತ್ತೆ ಮರಳಿ ಅವರೇಕೆ ಕಾಂಗ್ರೆಸ್‍ಗೆ ಹೋಗುತ್ತಾರೆ? ಸಿದ್ದರಾಮಯ್ಯನವರ ಆಡಳಿತದಿಂದ ಬೇಸತ್ತು 40-50ಜನ ಕಾಂಗ್ರೆಸ್ ಶಾಸಕರೇ ಬಿಜೆಪಿಗೆ ಬರುತ್ತಾರೆ ಎಂಬ ಮಾಹಿತಿ ಇದೆ ಎಂದು ಹೊಸ ಬಾಂಬ್ ಸಿಡಿಸಿದ ಅವರು, ಈಗ ನಾವು ಇವ್ಯಾವುದನ್ನೂ ಬಹಿರಂಗಪಡಿಸುವುದಿಲ್ಲ. ಈ ಸಮಯ ಸೂಕ್ತವೂ ಅಲ್ಲ. ರೈತರ ಸಮಸ್ಯೆಗಳಿಗೆ ಈ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.

    ಹಲವಾರು ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಅವುಗಳನ್ನು ಬಿಟ್ಟು ಜನರ ಮರೆಮಾಚುವ ಸಲುವಾಗಿ ಕಾಂಗ್ರೆಸ್ ಅವರು ಕಾಂಗ್ರೆಸ್‍ಗೆ ಬರುತ್ತಾರೆ ಇವರು ಕಾಂಗ್ರೆಸ್‍ಗೆ ಬರುತ್ತಾರೆ ಎಂದು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ, ಕಾಂಗ್ರೆಸ್ ಮಾಡುವ ಕೆಲಸ ಬಹಳಷ್ಟಿದೆ ಎಂದ ಅಮೃತ ದೇಸಾಯಿ, ಕಾಂಗ್ರೆಸ್‍ನವರು ಕೊಟ್ಟ ಗ್ಯಾರಂಟಿಗಳೇ ಬೋಗಸ್ ಇವೆ. ಮಹಿಳೆಯರ ಅಕೌಂಟ್‍ಗೆ ಹಣ ಹಾಕುತ್ತೇವೆ ಎಂದಿದ್ದರು. ಇದುವರೆಗೂ ಹಣ ಜಮಾ ಆಗಿಲ್ಲ ಎಂದರು.

    ಬರಗಾಲದ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಬರಬೇಕಿದ್ದ ಸರ್ಕಾರ ಕಾಲಹರಣ ಮಾಡುತ್ತಿದೆ. ಐದು ವರ್ಷ ಕಾಲಹರಣ ಮಾಡಿ ಹೋಗಲು ಈ ಸರ್ಕಾರ ಬಂದಿದೆ. ಬಿಜೆಪಿಯಿಂದ ಯಾರೂ ಕಾಂಗ್ರೆಸ್‍ಗೆ ಹೋಗುವುದಿಲ್ಲ. 40-50 ಜನ ಶಾಸಕರೇ ಬಿಜೆಪಿಗೆ ಬರಲಿದ್ದಾರೆ ಎಂಬ ಮಾಹಿತಿ ಇದೆ ಎಂದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಿಳೆ ಮೇಲೆ ಅತ್ಯಾಚಾರ; ವೀಡಿಯೋ ಲೀಕ್‌ ಮಾಡೋದಾಗಿ ಬೆದರಿಕೆ ಹಾಕಿದ್ದ IAS ಅಧಿಕಾರಿ, ಮಾಜಿ ಶಾಸಕ ವಿರುದ್ಧ ಕೇಸ್‌

    ಮಹಿಳೆ ಮೇಲೆ ಅತ್ಯಾಚಾರ; ವೀಡಿಯೋ ಲೀಕ್‌ ಮಾಡೋದಾಗಿ ಬೆದರಿಕೆ ಹಾಕಿದ್ದ IAS ಅಧಿಕಾರಿ, ಮಾಜಿ ಶಾಸಕ ವಿರುದ್ಧ ಕೇಸ್‌

    ಪಾಟ್ನಾ: ಬಿಹಾರದಲ್ಲಿ (Bihar) ಮಹಿಳೆಯೊಬ್ಬರ ಮೇಲೆ ಅತ್ಯಾಚಾರ (Rape) ಎಸಗಿ ವೀಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಐಎಎಸ್‌ ಅಧಿಕಾರಿ (IAS Officer) ಹಾಗೂ ಮಾಜಿ ಶಾಸಕನ (Ex MLA) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಹಿರಿಯ ಐಎಎಸ್‌ ಅಧಿಕಾರಿ ಸಂಜೀವ್‌ ಹನ್ಸ್‌ ಮತ್ತು ಆರ್‌ಜೆಡಿ ಮಾಜಿ ಶಾಸಕ ಗುಲಾಬ್‌ ಯಾದವ್‌ ವಿರುದ್ಧ ದಾನಾಪುರದ ನ್ಯಾಯಾಲಯ ಆದೇಶದ ಮೇರೆಗೆ ಪಾಟ್ನಾದ ರೂಪಸ್‌ಪುರ ಪೊಲೀಸ್ ಠಾಣೆಯಲ್ಲಿ ಕೇಸ್‌ ಹಾಕಿದ್ದಾರೆ. ಇದನ್ನೂ ಓದಿ: ಹಿಮದಿಂದ ಕೂಡಿದ್ದ ಟ್ರ್ಯಾಕ್‌ನಿಂದ ಜಾರಿ ಕಮರಿಗೆ ಬಿದ್ದ ವಾಹನ – 3 ಯೋಧರು ಹುತಾತ್ಮ

    2021 ರಲ್ಲಿ ದೆಹಲಿಯ ಹೋಟೆಲ್‌ನಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಮಹಿಳೆ ದೂರಿದ್ದರು. ಐಎಎಸ್‌ ಅಧಿಕಾರಿ, ಮಾಜಿ ಶಾಸಕನ ವಿರುದ್ಧ ಆರೋಪ ಹೊರಿಸಲಾಗಿದೆ. ಬಂದೂಕು ತೋರಿಸಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಗಂಭೀರ ಆರೋಪ ಹೊರಿಸಲಾಗಿದೆ.

    ಸಂತ್ರಸ್ತೆ ಮೊದಲು ಸಿವಿಲ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್‌ ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಸಂತ್ರಸ್ತೆ ಪಾಟ್ನಾ ಹೈಕೋರ್ಟ್‌ನ ಬಾಗಿಲು ತಟ್ಟಿದ್ದು, ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸದ ಪಾಟ್ನಾ ಪೊಲೀಸರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಸಿವಿಲ್ ನ್ಯಾಯಾಲಯವು ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸುವಂತೆ ಸೂಚಿಸಿತು. ಈ ವಿಚಾರದಲ್ಲಿ ನಿರಾಸಕ್ತಿ ವಹಿಸಿದ್ದ ಪಾಟ್ನಾ ಪೊಲೀಸರಿಗೆ ಎಚ್ಚರಿಕೆಯನ್ನೂ ನೀಡಿದೆ. ಇದನ್ನೂ ಓದಿ: ಮದುವೆಯಾಗಲು ಹೆಣ್ಣು ಹುಡುಕಿಕೊಡುವಂತೆ ಯುವಕ ಕರೆ- ಡಿಟೇಲ್ಸ್ ಕಳುಹಿಸು ಅಂದ್ರು ಶಾಸಕ

    ಆಗ ಶಾಸಕನಾಗಿದ್ದ ಗುಲಾಬ್‌ ಯಾದವ್‌, ಮಹಿಳಾ ಆಯೋಗದ ಸದಸ್ಯೆ ಮಾಡುವುದಾಗಿ ಭರವಸೆ ನೀಡಿ ಪಾಟ್ನಾದ ತನ್ನ ನಿವಾಸದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ. ಅದನ್ನು ವೀಡಿಯೋ ಮಾಡಿಕೊಂಡು ಆಕೆಗೆ ಬ್ಲ್ಯಾಕ್‌ಮೇಲ್‌ ಮಾಡಿದ್ದ. ಮತ್ತೆ ಆಕೆಯನ್ನು ದೆಹಲಿಗೆ ಕರೆಸಿಕೊಂಡು ತಾನು ಹಾಗೂ ಐಎಎಸ್‌ ಅಧಿಕಾರಿ ಇಬ್ಬರೂ ಅತ್ಯಾಚಾರ ಎಸಗಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪೇದೆಗೆ ಗುಂಡು ಹಾರಿಸಿ, 24 ವರ್ಷ ಪರಾರಿಯಾಗಿದ್ದ ಮಾಜಿ ಶಾಸಕ ಕೊನೆಗೂ ಬಂಧನ

    ಪೇದೆಗೆ ಗುಂಡು ಹಾರಿಸಿ, 24 ವರ್ಷ ಪರಾರಿಯಾಗಿದ್ದ ಮಾಜಿ ಶಾಸಕ ಕೊನೆಗೂ ಬಂಧನ

    ಪಾಟ್ನಾ: ಪೊಲೀಸ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿ, 24 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಬಿಹಾರದ ಮಾಜಿ ಶಾಸಕ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಉತ್ತರ ಪ್ರದೇಶ ಹಾಗೂ ಬಿಹಾರದ ಪೊಲೀಸರು ಜಂಟಿಯಾಗಿ ಆರೋಪಿಯನ್ನು ಭಾರತ-ನೇಪಾಳ ಗಡಿ ಭಾಗದಲ್ಲಿ ಸೆರೆ ಹಿಡಿದಿದ್ದಾರೆ.

    ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಗೋವಿಂದಗಂಜ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರಂಜನ್ ತಿವಾರಿ 1998ರಲ್ಲಿ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದ. ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗೆ 25,000 ರೂ. ಬಹುಮಾನವನ್ನು ಘೋಷಿಸಲಾಗಿತ್ತು. ಆದರೆ 2 ದಶಕಗಳವರೆಗೂ ಆರೋಪಿಯ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ಕೊಡಗು ಎಸ್‍ಪಿಗೆ ಯಾವ ರೋಗ ಬಂದಿತ್ತು: ಸಿದ್ದರಾಮಯ್ಯ ವಾಗ್ದಾಳಿ

    ಆರೋಪಿ ರಕ್ಸಾಲ್ ಮೂಲಕ ಕಠ್ಮಂಡುವಿಗೆ ಪಲಾಯನ ಮಾಡಲು ಯತ್ನಿಸುತ್ತಿದ್ದುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ವಿಚಾರಣೆಗೆ ಆರೋಪಿಯನ್ನು ಉತ್ತರ ಪ್ರದೇಶದ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಆರೋಪಿಯ ವಿರುದ್ಧ ಬಿಹಾರದಲ್ಲಿ ದಾಖಲಾಗಿರುವ ಪ್ರಕರಣಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಪೂರ್ವ ಚಂಪಾರಣ್ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಆಶಿಶ್ ತಿಳಿಸಿದ್ದಾರೆ. ಇದನ್ನೂ ಓದಿ: ಟಿಎಂಸಿ ನಾಯಕನಿಗೆ ಶೂನಲ್ಲಿ ಹೊಡೆಯುತ್ತೇವೆ: ವಿವಾದ ಸೃಷ್ಟಿಸಿದ ದಿಲೀಪ್ ಘೋಷ್ ಹೇಳಿಕೆ

    Live Tv
    [brid partner=56869869 player=32851 video=960834 autoplay=true]

  • ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ಪುತ್ರ ಶಿವಕುಮಾರ್ ನಿಧನ

    ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ಪುತ್ರ ಶಿವಕುಮಾರ್ ನಿಧನ

    ಚಿತ್ರದುರ್ಗ: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನೆರ್ಲಗುಂಟೆ ಎನ್. ತಿಪ್ಪೇಸ್ವಾಮಿ ಪುತ್ರ ಶಿವಕುಮಾರ್ ಅವರು ಅಕಾಲಿಕ ಸಾವಿಗೆ ತುತ್ತಾಗಿದ್ದಾರೆ. 32 ವರ್ಷದ ಶಿವಕುಮಾರ್ ಅವರು ನಿಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

    ಚಿತ್ರದುರ್ಗ, ದಾವಣಗೆರೆ ಹಾಗೂ ಬೆಂಗಳೂರು ಸೇರಿದಂತೆ ಮತ್ತಿತರರ ಕಡೆಗಳಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ; ಕೆನಡಾದಲ್ಲಿ ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ: ಕನ್ನಡಿಗ ಸಂಸದ ಬೇಸರ

    ಮಾಜಿ ಶಾಸಕ ತಿಪ್ಪೇಸ್ವಾಮಿ ಅವರಿಗೆ ಶಿವಕುಮಾರ್ ಹಾಗೂ ಓರ್ವ ಸುಪುತ್ರಿ ಇದ್ದರು. ಇಪ್ಪತ್ತು ವರ್ಷಗಳ ಹಿಂದೆ ಮಗಳು ಸಹ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಇವರ ಬಲಗೈ ಆಗಿದ್ದಂತಹ ಪುತ್ರ ಶಿವಕುಮಾರ್ ತಂದೆಯ ರಾಜಕೀಯ ಭವಿಷ್ಯಕ್ಕಾಗಿ ತಮ್ಮ ಜೀವನವನ್ನು ಮೀಸಲಿಟ್ಟಿದ್ದರು. ಎಲ್ಲಾ ಚುನಾವಣೆಗಳಲ್ಲೂ ತಂದೆಯ ವಾರಿಸುದಾರರಾಗಿ ಕ್ಷೇತ್ರದ ಜನರ ಪ್ರೀತಿಗೆ ಪಾತ್ರರಾಗಿ ಶಿವಣ್ಣ ಅಂತ ಖ್ಯಾತಿಯಾಗಿದ್ದರು.

    ಕಳೆದ ವಿಧಾನಸಭಾ ಚುನಾವಣೆ ವೇಳೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಿ. ಶ್ರೀರಾಮುಲು ಸ್ಪರ್ಧಿಸಿದ ಕಾರಣ ಎನ್. ತಿಪ್ಪೇಸ್ವಾಮಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಶ್ರೀರಾಮುಲು ವಿರುದ್ಧ ಅತ್ಯಧಿಕ ಮತಗಳಿಂದ ಸೋಲು ಅನುಭವಿಸಿದ್ದರು. ಆಗ ತಮ್ಮ ತಂದೆಯ ಪರ ತಮ್ಮ ಜೀವದ ಹಂಗು ತೊರೆದು ಚುನಾವಣೆ ಎದುರಿಸಿದ್ದರು.

    ಇತ್ತೀಚಿನ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ತಮ್ಮ ತಂದೆಯವರಿಗೆ ಬೆನ್ನುಲುಬಾಗಿದ್ದ ಶಿವಕುಮಾರ್ ಅನುಪಸ್ಥಿತಿಯು ಮಾಜಿ ಶಾಸಕ ತಿಪ್ಪೇಸ್ವಾಮಿಯವರಿಗೆ ತುಂಬಲಾರದ ನಷ್ಟ ಎನಿಸಿದೆ.ಮೃತರ ಅಂತ್ಯ ಕ್ರಿಯೆ ನಾಳೆ ಅವರ ಸ್ವಗ್ರಾಮ ನೇರಲುಗುಂಟೆಯಲ್ಲಿ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ತೆಲಂಗಾಣದ ಮಾಜಿ ಶಾಸಕನ ಪುತ್ರಿ ಆತ್ಮಹತ್ಯೆ

    ತೆಲಂಗಾಣದ ಮಾಜಿ ಶಾಸಕನ ಪುತ್ರಿ ಆತ್ಮಹತ್ಯೆ

    ಹೈದರಾಬಾದ್: ತೆಲಂಗಾಣದ ಮಾಜಿ ಶಾಸಕನ ಪುತ್ರಿ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

    ಟಿ. ಮಹಾಲಕ್ಷ್ಮಿ(25) ಮೃತ ಯುವತಿ. ತೆಲಂಗಾಣದ ಅಶ್ವರಾವ್‍ಪೇಟೆ ಮಾಜಿ ಶಾಸಕ ತಾಟಿ ವೆಂಕಟೇಶ್ವರಲು ಅವರ ಪುತ್ರಿ. ಜಿಲ್ಲೆಯ ಸಾರಪಾಕದಲ್ಲಿರುವ ತಮ್ಮ ನಿವಾಸದಲ್ಲಿ ಮಹಾಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಮಹಾಲಕ್ಷ್ಮಿ ಎಂಬಿಬಿಎಸ್‍ನ್ನು ಪೂರ್ಣಗೊಳಿಸಿ ಸ್ನಾತಕೋತ್ತರ ಪದವಿಯ ಪ್ರವೇಶ ಪರೀಕ್ಷೆಗೆ ತಯಾರಿಯನ್ನು ನಡೆಸುತ್ತಿದ್ದರು.

    crime

    ಗುರುವಾರ ಬೆಳಗ್ಗೆ ಕುಟುಂಬದ ಸದಸ್ಯರು ಕೋಣೆಯ ಬಾಗಿಲು ಬಡಿದು ಹೊರಗೆ ಬರುವಂತೆ ಮಹಾಲಕ್ಷ್ಮಿಯನ್ನು ಕೇಳಿದ್ದಾರೆ. ಆದರೆ, ತುಂಬಾ ಹೊತ್ತಾದರೂ ಆಕೆ ಬರದಿದ್ದಾಗ ಅನುಮಾನಗೊಂಡ ಕುಟುಂಬಸ್ಥರು ಕೋಣೆಯ ಬಾಗಿಲನ್ನು ಮುರಿದಿದ್ದಾರೆ. ಆಗ ಮಹಾಲಕ್ಷ್ಮಿ ಅವರ ಮೃತದೇಹ ಗುರುವಾರ ಮುಂಜಾನೆ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ನನ್ನ ಸಿಡಿ ಕೇಸ್, ಸಂತೋಷ್ ಪ್ರಕರಣ ಸಿಬಿಐ ತನಿಖೆಗೆ ವಹಿಸಲಿ: ರಮೇಶ್ ಜಾರಕಿಹೊಳಿ

    ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತದೇಹವನ್ನು ಭದ್ರಾಚಲಂ ಏರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಕುಟುಂಬಕ್ಕೆ ಸಾರಿಗೆ ಸಚಿವ ಪುವ್ವಾಡ ಅಜಯ್ ಕುಮಾರ್ ಮತ್ತಿತರರು ಸಾಂತ್ವನ ಹೇಳಿದರು. ಇದನ್ನೂ ಓದಿ: ಎಣ್ಣೆ ಬಾಟಲ್ ಜೊತೆಗೆ ಸಿಸಿ ಕ್ಯಾಮೆರಾದ ಹಾರ್ಡ್‍ಡಿಸ್ಕ್ ಕದ್ದೊಯ್ದ ಕಳ್ಳರು

  • ಪೊಲೀಸ್‍ಗೆ ಕಪಾಳಮೋಕ್ಷ ಮಾಡಿದ ಮಾಜಿ ಶಾಸಕ ಎ.ಪಾಪಾರೆಡ್ಡಿ

    ಪೊಲೀಸ್‍ಗೆ ಕಪಾಳಮೋಕ್ಷ ಮಾಡಿದ ಮಾಜಿ ಶಾಸಕ ಎ.ಪಾಪಾರೆಡ್ಡಿ

    ರಾಯಚೂರು: ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕೃತಿ ದಹಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿ, ಕೈ ಮಾಡಿರುವ ಘಟನೆ ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದಿದೆ.

    ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಅಂತ ಆರೋಪಿಸಿ ಬಿಜೆಪಿ ಎಸ್.ಸಿ ಮೋರ್ಚಾದಿಂದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾ ಧರಣಿ ನಡೆಸಿದ್ದರು. ಸಿದ್ದರಾಮಯ್ಯ ಪ್ರತಿಕೃತಿ ದಹಿಸಲು ಮುಂದಾಗಿದ್ದಕ್ಕೆ, ಪೊಲೀಸರು ಅವಕಾಶ ನೀಡಲಿಲ್ಲ. ಪ್ರತಿಕೃತಿ ಎತ್ತಿಕೊಂಡು ಹೋದ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪಶ್ಚಿಮ ಠಾಣೆ ಪೊಲೀಸ್ ಕಾನ್‍ಸ್ಟೇಬಲ್ ರಾಘವೇಂದ್ರನಿಗೆ ಕಪಾಳಮೋಕ್ಷ ಮಾಡುವ ಮೂಲಕ ಮಾಜಿ ಶಾಸಕರು ಹಲ್ಲೆ ಮಾಡಿದ್ದಾರೆ. ಇದನ್ನೂ ಓದಿ: ಎತ್ತುಗಳ ಜೊತೆಗೆ ಬಂದ ಅಭಿಮಾನಿಗಳನ್ನು ಭೇಟಿ ಮಾಡಿದ ಶಿವಣ್ಣ, ರಾಘಣ್ಣ

    ಹೋರಾಟ ನಿರತರು ಪೊಲೀಸರೊಂದಿಗೆ ವಾಗ್ವಾದ ನಡೆಸಿ ನೂಕುನುಗ್ಗಲು ಮಾಡಿದ್ದಾರೆ. ಪೊಲೀಸರ ವಿರೋಧದ ನಡುವೆಯೇ ಪ್ರತಿಕೃತಿಗೆ ಬೆಂಕಿ ಹಚ್ಚಿ ಪ್ರತಿಭಟನಕಾರರು ಘೋಷಣೆಗಳನ್ನ ಕೂಗಿದ್ದಾರೆ. ಪೊಲೀಸರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪೊಲೀಸ್ ಕಾನ್ಸ್ ಸ್ಟೇಬಲ್ ಮಫ್ತಿಯಲ್ಲಿದ್ದರಿಂದ ನಾನು ಹಲ್ಲೆ ಮಾಡಿರುವುದರಲ್ಲಿ ತಪ್ಪಿಲ್ಲ, ನಮ್ಮ ಕಾರ್ಯಕರ್ತ ಎಂದುಕೊಂಡು ಹೊಡೆದಿದ್ದೇನೆ. ನನ್ನದೇನೂ ತಪ್ಪಿಲ್ಲ ಅಂತ ಮಾಜಿ ಶಾಸಕ ಎ ಪಾಪಾರೆಡ್ಡಿ ಸಮರ್ಥಿಸಿಕೊಂಡಿದ್ದಾರೆ.

  • ಮನೆಯವರ ವಿರುದ್ಧವೇ ಮಾತಾಡಲಾಗದೆ ಹೆಚ್‍ಡಿಡಿ ಸುಮ್ಮನಾಗಿದ್ದಾರೆ: ಸಿಎಸ್.ಪುಟ್ಟೇಗೌಡ

    ಮನೆಯವರ ವಿರುದ್ಧವೇ ಮಾತಾಡಲಾಗದೆ ಹೆಚ್‍ಡಿಡಿ ಸುಮ್ಮನಾಗಿದ್ದಾರೆ: ಸಿಎಸ್.ಪುಟ್ಟೇಗೌಡ

    ಹಾಸನ: ಜಿಲ್ಲೆಯ ಕೀಲಿಕೈ ಯಾರೋ ಒಬ್ಬರ ಕೈಲಿದ್ದು, ಆ ಕೀಲಿಕೈ ಕಿತ್ತುಕೊಂಡರೆ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಂತೆ ಹಾಸನ ಜಿಲ್ಲೆಗೆ ಸ್ವಾತಂತ್ರ್ಯ ಸಿಗಲಿದೆ ಎಂದು ಮಾಜಿ ಶಾಸಕ ಪುಟ್ಟೇಗೌಡ ಮಾಜಿ ಸಚಿವ ರೇವಣ್ಣ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಶ್ರೀನಿವಾಸಪುರದಲ್ಲಿರುವ ಹೇಮಾವತಿ ಸಕ್ಕರೆ ಕಾರ್ಖಾನೆ ಆರಂಭಿಸುವಂತೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ ಮಾಜಿ ಶಾಸಕ ಪುಟ್ಟೇಗೌಡ, ಮಾಜಿ ಪ್ರಧಾನಿ ದೇವೇಗೌಡರು ಮತ್ತು ಹಾಸನ ಜಿಲ್ಲೆಯ ಈ ಸ್ಥಿತಿಗೆ ಅವರ ಮನೆಯವರೇ ಕಾರಣ ಎಂದು ವಾಗ್ದಾಳಿ ನಡೆಸಿದ್ರು.

    ಈ ಕೀಲಿಕೈ ಅವರಿಗೆ ಕೊಟ್ಟು ಜಿಲ್ಲೆಯ ಜನ ಶಿಕ್ಷೆ ತಗೊಂಡ್ರು. ಎಲ್ಲರಿಗಿಂತ ಮೊದಲು ದೇವೇಗೌಡರೇ ಶಿಕ್ಷೆ ತಗೊಂಡ್ರು. ಈ ವಯಸ್ಸಲ್ಲಿ ಅವರ ಮನೆಯವರ ವಿರುದ್ಧ ಅವರೇ ಮಾತನಾಡಲಾಗದೇ ದೇವೇಗೌಡರು ಸುಮ್ಮನಾಗಿದ್ದಾರೆ. ಕೈ ಮದ್ದು ಹಾಕುವವರು ಬೇರೆಯವರು ಸಿಗದಿದ್ರೆ ತಮ್ಮ ಮನೆಯವರಿಗೇ ಹಾಕುತ್ತಾರೆ. ಅದರಂತೆ ಈ ಜಿಲ್ಲೆಯಲ್ಲಿ ನಿಮ್ಮನ್ನು ಸೋಲಿಸಲು ಯಾರಿದ್ದರು ದೇವೇಗೌಡರೇ. ಈ ಕೀ ಪಿನ್‍ನಿಂದ ಸಣ್ಣಪುಟ್ಟ ಹುಡುಗರಿಗೆಲ್ಲ ಅಧಿಕಾರ ಸಿಕ್ಕಿದೆ. ಆದರೆ ಕೀ ಪಿನ್ ನಿಯಂತ್ರಿಸಲಾಗದೆ ದೇವೇಗೌಡರು ತುಮಕೂರಿಗೆ ಹೋಗುವ ಕೆಟ್ಟ ಪರಿಸ್ಥಿತಿ ನಿರ್ಮಾಣವಾಯ್ತು ಎಂದು ವ್ಯಂಗ್ಯವಾಡಿದ್ರು.

    ಈ ಕೀ ಪಿನ್ನನ್ನು ಸಿಂಹದ ಮರಿಗಳಾದ ಸಿದ್ಧರಾಮಯ್ಯ, ಡಿಕೆ.ಶಿವಕುಮಾರ್, ಖರ್ಗೆಗೆ ಕೊಡಲು ಹಾಸನ ಜಿಲ್ಲೆಯ ಜನ ಸಿದ್ಧರಾಗಿದ್ದಾರೆ. ಅವರುಗಳು ಬಂದು ಹಾಸನ ಜಿಲ್ಲೆಯನ್ನು ಶುದ್ಧಿ ಮಾಡಲಿದ್ದಾರೆ ಎಂದು ಪುಟ್ಟೇಗೌಡ ಆಕ್ರೋಶ ಹೊರಹಾಕಿದ್ದಾರೆ.

  • ಭದ್ರಾವತಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿಗೌಡ ಕೋವಿಡ್ 19ಗೆ ಬಲಿ

    ಭದ್ರಾವತಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿಗೌಡ ಕೋವಿಡ್ 19ಗೆ ಬಲಿ

    ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಜೆ.ಅಪ್ಪಾಜಿಗೌಡ (67) ಕೋವಿಡ್ ನಿಂದಾಗಿ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.

    ಮೂರು ದಿನಗಳ ಹಿಂದೆ ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅಪ್ಪಾಜಿಗೌಡ ಅವರು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

    ಮಾಜಿ ಶಾಸಕರು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಕೊರೊನಾವನ್ನು ಲೆಕ್ಕಿಸದೇ ಆಸ್ಪತ್ರೆ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಅವರ ಅನುಯಾಯಿಗಳು ಜಮಾಯಿಸಿದ್ದರು. ನಂತರ ಮಧ್ಯರಾತ್ರಿ 2 ಗಂಟೆಗೆ ಪಾರ್ಥಿವ ಶರೀರವನ್ನು ಭದ್ರಾವತಿಯ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು. ಮಾಜಿ ಶಾಸಕರ ಪಾರ್ಥಿವ ಶರೀರ ತಮ್ಮ ನಿವಾಸಕ್ಕೆ ತೆರಳುತ್ತಿದ್ದಂತೆ ನಿವಾಸದ ಬಳಿಯಲ್ಲಿಯೂ ಅಂತಿಮ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

    ವಿಐಎಸ್ ಎಲ್ ನೌಕರರಾಗಿ ಜೀವನ ಆರಂಭಿಸಿದ್ದ ಅವರು ಕಾರ್ಮಿಕ ನಾಯಕರಾಗಿ ಬೆಳೆದು ನಂತರ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. 1994 ಹಾಗೂ 1999 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಂತರ ಸತತ ಸೋಲು ಅನುಭವಿಸಿದ ಅವರು 2013ರಲ್ಲಿ ಜೆಡಿಎಸ್ ಸೇರ್ಪಡೆಯಾಗಿ, ಜೆಡಿಎಸ್ ನಿಂದ ಸ್ಪರ್ಧಿಸಿ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದರು. ಹೀಗೆ ಮೃತ ಮಾಜಿ ಶಾಸಕ ಎಂ.ಜೆ.ಅಪ್ಪಾಜಿಗೌಡ ಅವರು ಭದ್ರಾವತಿ ಕ್ಷೇತ್ರದಿಂದ ಒಟ್ಟು 3 ಬಾರಿ ಶಾಸಕರಾಗಿದ್ದರು. ಮಾಜಿ ಶಾಸಕರ ನಿಧನದ ಸುದ್ದಿ ಕೇಳಿ ಇಡೀ ಭದ್ರಾವತಿ ಕ್ಷೇತ್ರದ ಜನತೆ ಶೋಕ ಸಾಗರದಲ್ಲಿ ಮುಳುಗಿದೆ.