Tag: ex minisrter

  • ಬಿಜೆಪಿಯವರು ಟಾಯ್ಲೆಟ್‍ನಲ್ಲಿ ಕೂಡ ತಿಂತಿದ್ದಾರೆ – ಟೀಕಿಸೋ ಭರದಲ್ಲಿ ರಾಯರೆಡ್ಡಿ ಬೇಕಾಬಿಟ್ಟಿ ಮಾತು

    ಬಿಜೆಪಿಯವರು ಟಾಯ್ಲೆಟ್‍ನಲ್ಲಿ ಕೂಡ ತಿಂತಿದ್ದಾರೆ – ಟೀಕಿಸೋ ಭರದಲ್ಲಿ ರಾಯರೆಡ್ಡಿ ಬೇಕಾಬಿಟ್ಟಿ ಮಾತು

    – ಬಿಜೆಪಿ ಅಂದ್ರೆ ಗಲೀಜು ಪಾರ್ಟಿ

    ಕೊಪ್ಪಳ: ಬಿಜೆಪಿ ಟೀಕಿಸುವ ಭರದಲ್ಲಿ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ  ‘ಮಿತಿ’ ಮರೆತಿದ್ದಾರೆ.

    ಬಿಜೆಪಿಯವರಷ್ಟು ಭಂಡತನ ಯಾರೂ ಮಾಡುವುದಿಲ್ಲ. ಬಿಜೆಪಿಯವರು ಡಕಾಯಾತರಾಗಿದ್ದಾರೆ. ಎಲ್ಲಾ ಕಡೆಯೂ ಲೂಟಿ ಹೊಡೆಯುತ್ತಿದ್ದಾರೆ. ಡೈನಿಂಗ್ ಹಾಲ್‍ನಲ್ಲಿ ಊಟ ಮಾಡಿದ್ರೆ ಓಕೆ. ಇರ್ಲಿ ಬೆಡ್ ರೂಮ್‍ಲ್ಲಿ ತಿಂದ್ರೂ ಪರವಾಗಿಲ್ಲ. ಆದರೆ ಬಿಜೆಪಿಯಲ್ಲಿ ಬಾತ್ ರೂಮ್ ಟಾಯ್ಲೆಟ್‍ನಲ್ಲಿ ಬಿಡದೆ ತಿನ್ನುತ್ತಿದ್ದಾರೆ ಎಂದು ವಾಗ್ದಾಳಿ ನಡೆಸುತ್ತಾ ಬಿಜೆಪಿ ವಿರುದ್ಧ ಕೀಳು ಮಟ್ಟದ ಭಾಷೆ ಬಳಸಿದ್ದಾರೆ.

    ಕೊಪ್ಪಳದ ಯಲಬುರ್ಗದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಇಡೀ ರಾಜಕೀಯ ನೈತಿಕತೆ ವ್ಯವಸ್ಥೆ ಕುಸಿದು ಬಿದ್ದಿದೆ. ಅಲ್ಲಿ 50 ಸಾವಿರ ಕೊಡ್ತಾರೆ, 25 ಸಾವಿರ ಕೊಡ್ತಾರೆ ಅಂತ ಹೋಗ್ಬೇಡಿ. ತೆಗೆದುಕೊಂಡಿದ್ರೆ ಮಾರಾಟವಾಗಿದ್ರೆ ಕಾಣಲಾರದಂತೆ ಹೋಗ್ಬೇಡಿ. ನಮಗೇನು ವೋಟ್ ಲಾಸ್ ಆಗುವುದಿಲ್ಲ, ನಾಳೆ ಜನರು ತೀರ್ಮಾನ ಮಾಡ್ತಾರೆ. ಜನರು ನಿಮ್ಮನ್ನು ನಂಬಿ ಆಯ್ಕೆ ಮಾಡಿದ್ದಾರೆ ಮಾರಾಟವಾಗಬೇಡಿ ಅಂತ ಗ್ರಾ.ಪಂ ಸದಸ್ಯರಿಗೆ ಮಾಜಿ ಸಚಿವ ಕಿವಿಮಾತು ಹೇಳಿದ್ದಾರೆ.

    ಬಿಜೆಪಿ ಗಲೀಜು ಪಾರ್ಟಿ ಇದರಲ್ಲಿ ಮಾನ ಮರ್ಯಾದೆ ಇದೇನಾ? ಸಚಿವ ಸ್ಥಾನಕ್ಕೆ ಈಗಾಗಲೇ ಗುದ್ದಾಟ ಆರಂಭವಾಗಿದೆ. ಸರ್ಕಾರ ಯಾವಾಗ ಬೀಳ್ತೋ ಗೊತ್ತಿಲ್ಲ. ಇನ್ನೂ ಆರು ತಿಂಗಳಲ್ಲಿ ಶಾಸಕರ ಚುನಾವಣೆ ಬಂದ್ರೆ ಆಶ್ಚರ್ಯವಿಲ್ಲ. ಎಲ್ಲಾ ಕಾರ್ಯಕರ್ತರು ನೈತಿಕವಾಗಿ ನನಗೆ ಬೆಂಬಲ ನೀಡಿ. ಮತ್ತೆ ತಾಲೂಕು ಅಭಿವೃದ್ಧಿಗಾಗಿ ದುಡಿಯೋಣ ಎಂದು ಕರೆ ನೀಡಿದರು.