Tag: Ex-Husband

  • ತನ್ನ ಮನೆಯ ಜೊತೆ ಮಾಜಿ ಪತಿಯನ್ನೂ ಮಾರಾಟಕ್ಕಿಟ್ಟಳು!

    ತನ್ನ ಮನೆಯ ಜೊತೆ ಮಾಜಿ ಪತಿಯನ್ನೂ ಮಾರಾಟಕ್ಕಿಟ್ಟಳು!

    ಫ್ಲೋರಿಡಾ: ಮಹಿಳೆಯೊಬ್ಬಳು ತನ್ನ ಮನೆಯ ಜೊತೆ ಮಾಜಿ ಪತಿಯನ್ನು ಕೂಡ ಮಾರಾಟಕ್ಕಿಟ್ಟ ಅಚ್ಚರಿಯ ಘಟನೆಯೊಂದು ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.

    43 ವರ್ಷದ ಕ್ರಿಸ್ಟಲ್ ಬಾಲ್ ಮಾಜಿ ಪತಿ ಮಾರಾಟಕ್ಕಿಟ್ಟ ಮಹಿಳೆ. ಈಕೆ ಹಾಗೂ 54 ವರ್ಷದ ಪತಿ ರಿಚರ್ಡ್ ಚೈಲೌ ತಮ್ಮ 7 ವರ್ಷಗಳ ದಾಂಪತ್ಯಕ್ಕೆ ಇತ್ತೀಚೆಗಷ್ಟೇ ಇತಿಶ್ರೀ ಹಾಡಿದ್ದರು. ಆದರೆ ಇಬ್ಬರೂ ತಮ್ಮ ಪುತ್ರರಿಗೆ ಸಹ ಪೋಷಕರಾಗಿ ಮುಂದುವರಿಯುತ್ತಿರುವುದಾಗಿ ಮಾತು ಕೊಟ್ಟಿದ್ದರಿಂದ ವಿಚ್ಛೇದನದ ಬಳಿಕವೂ ಹಲವಾರು ವ್ಯವಹಾರಗಳನ್ನು ಒಟ್ಟಿಗೆ ನಡೆಸಿಕೊಂಡು ಬರುತ್ತಿದ್ದಾರೆ. ಇದನ್ನೂ ಓದಿ: ಪ್ರೇಯಸಿಯ ಸಹೋದರನನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ

    ಪನಾಮಾ ಸಿಟಿ ಬೀಚ್‍ನಲ್ಲಿರುವ ತನ್ನ ಆಸ್ತಿಗಳಲ್ಲಿ ಒಂದನ್ನು ಮಾರಾಟ ಮಾಡುತ್ತಿರುವ ಫ್ಲೋರಿಡಾ ಮಹಿಳೆ ಈ ಬಗ್ಗೆ ಜಾಹೀರಾತು ನೀಡಿದ್ದಾಳೆ. ಅದರಲ್ಲಿ ಮೂರು ಮಲಗುವ ಕೋಣೆಗಳು, ಎರಡು ಸ್ನಾನಗೃಹಗಳು, ಒಳಾಂಗಣ, ಪೂಲ್, ಹಾಟ್ ಟಬ್ ಹಾಗೂ ಮಾಜಿ ಪತಿ ರಿಚರ್ಡ್ ಮನೆಯಲ್ಲಿರುವುದಾಗಿ ವಿವರಿಸಿದ್ದಾಳೆ. ಮನೆ ಕೊಳ್ಳುವವರಿಗೆ ರಿಚರ್ಡ್ ಅಡುಗೆ ಮಾಡಲು ಹಾಗೂ ಸ್ವಚ್ಛತೆ ಮಾಡಲು ಸಹಾಯ ಮಾಡುತ್ತಾನೆ ಎಂದು ತಿಳಿಸಿದ್ದಾಳೆ.

    ಹುಲಿ ಗೊಂಬೆ ಜೊತೆ ರಿಚರ್ಡ್ ಪೋಸ್ ನೀಡುತ್ತಿರುವ ಫೋಟೋವನ್ನು ಜಾಹೀರಾತಿನಲ್ಲಿ ನೀಡಲಾಗಿದೆ. ರಿಚರ್ಡ್ ನಿಮಗೆ ಭಾರವಾಗಿ ಇರುವುದಿಲ್ಲ ಅವರು ಲೈವ್ ಇನ್ ಹ್ಯಾಂಡಿಮ್ಯಾನ್ ಪಾತ್ರದ ಭಾಗವಾಗಿ ಅಡುಗೆ ಮಾಡಲು, ಮನೆ ಸ್ವಚ್ಛಗೊಳಿಸಲು ಮತ್ತು ರಿಪೇರಿಗಳನ್ನು ನಿರ್ವಹಿಸಲು ಸಹಾಯ ಮಾಡುತ್ತಾರೆ ಎಂದು ತನ್ನ ಮಾಜಿ ಗಂಡನ ಬಗ್ಗೆ ಕ್ರಿಸ್ಟಲ್ ವಿವರಿಸಿದ್ದಾಳೆ. ಇದನ್ನೂ ಓದಿ: ಸೌತ್‌ ಸಿನಿಮಾದಿಂದ ಬಾಲಿವುಡ್‌ನಲ್ಲಿ ಅಭದ್ರತೆ – ಖಡಕ್‌ ಉತ್ತರ ಕೊಟ್ಟ ನವಾಜುದ್ದೀನ್ ಸಿದ್ದಿಕಿ

    ಅಲ್ಲದೆ ಆತನ ದೊಡ್ಡದಾದ ಮೂಗು ನಿಮ್ಮ ಮನೆಯಲ್ಲಿ ಏನಾದರೂ ದುರ್ವಾಸನೆ ಬರುತ್ತಿದ್ದರೆ ಅದೂ ನಿಮ್ಮ ಗಮನಕ್ಕೆ ಬರುವ ಮೊದಲು ಆತನ ಮೂಗಿಗೆ ಬಡಿಯುತ್ತದೆ. ಹಾಗೂ ಅದನ್ನು ಆತ ಸ್ವಚ್ಛಗೊಳಿಸುತ್ತಾನೆ. ತಮ್ಮ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹಲವು ಬಾರಿ ಈ ಜಾಹೀರಾತನ್ನು ತಿರಸ್ಕರಿಸಲಾಗಿದೆ.

  • ಮಲಮಗನನ್ನು ವಿವಾಹವಾಗಿ ಮಗುವಿಗೆ ಜನ್ಮ ನೀಡಿದ ಮಹಿಳೆ

    ಮಲಮಗನನ್ನು ವಿವಾಹವಾಗಿ ಮಗುವಿಗೆ ಜನ್ಮ ನೀಡಿದ ಮಹಿಳೆ

    ಮಾಸ್ಕೋ: ರಷ್ಯಾದ 35 ವರ್ಷದ ಮಹಿಳೆ ತನ್ನ ಮೊದಲ ಮಗುವಿಗೆ ಮಲಮಗನೊಂದಿಗೆ ಜನ್ಮ ನೀಡಿರುವುದಾಗಿ ಘೋಷಿಸಿದ್ದಾಳೆ. ಗಂಡನನ್ನು ತೊರೆದು ಮಲಮಗನನ್ನೇ ವಿವಾಹವಾಗಿ ಮಗುವಿಗೆ ಜನ್ಮ ನೀಡುತ್ತಿರುವ ಈ ಸುದ್ದಿ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

    ಮರೀನಾ ಮಾಜಿ ಗಂಡನ ಹೆಣ್ಣು ಮಗುವಿಗೆ ಜನ್ಮ ನೀಡುವ ಮುನ್ನವೇ ಆತನ ಪುತ್ರ ವ್ಲಾಡಿಮಿರ್ ನನ್ನು ವಿವಾಹವಾಗಿದ್ದಾಳೆ. ಇದೀಗ ಮಾಜಿ ಗಂಡನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆ ಮಗು 3 ಕೆಜಿ ತೂಕವಿದೆ.

    10 ವರ್ಷದಿಂದ ಜೊತೆಗಿದ್ದ ಮಾಜಿ ಪತಿಗೆ ಇದೀಗ ಮರೀನಾ ವಿಚ್ಛೇದನ ನೀಡಿದ್ದಾಳೆ. ವ್ಲಾಡಿಮಿರ್ ರಜೆಯ ದಿನಗಳಲ್ಲಿ ಮನೆಗೆ ಬರುತ್ತಿದ್ದಾಗ ಆಕೆಗೆ ಆತನ ಮೇಲೆ ಪ್ರೇಮವಾಗಿದ್ದು ಈಗ ಆತನನ್ನೆ ಗಂಡನೆಂದು ಘೋಷಿಸಿದ್ದಾಳೆ.

    7 ವರ್ಷದಿಂದ ಮರೀನಾ ತನ್ನ ತಂದೆ ಅಲೆಕ್ಸಿ ಶಾವಿರಿನ್(45)ನನ್ನು ಮದುವೆಯಾಗಿದ್ದಳು ಮತ್ತು ಅವರಿಬ್ಬರು 5 ದತ್ತು ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು ಎಂಬ ವಿಚಾರ ಮಲಮಗನಾದ ವ್ಲಾಡಿಮಿರ್ ತಿಳಿದಿತ್ತು.

    ಇನ್ ಸ್ಟಾಗ್ರಾಮ್ ನಲ್ಲಿ 5 ಲಕ್ಷ ಫಾಲೋವರ್ ಹೊಂದಿರುವ ಮರೀನಾ ವ್ಲಾಡಿಮಿರ್ ಸೂಚನೆ ಮೇರೆಗೆ ಮಗುವಿನ ಮುಖ ಕಾಣಿಸದಂತೆ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾಳೆ. ತನ್ನ ಹೊಸ ಸಂಗಾತಿಯನ್ನು ಆಕರ್ಷಿಸಲು ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆ ಮಾಡಿಸಿಕೊಂಡಿರುವ ಸತ್ಯವನ್ನು ಬಹಿರಂಗ ಪಡಿಸಿದ್ದಾಳೆ ಮತ್ತು ವಿಶ್ವದಲ್ಲಿಯೇ ತಾನು ಆಕರ್ಷಿತ ನೀಲಿ ಕಣ್ಣುಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾಳೆ.

    ಈ ಹಿಂದೆ ನನಗೆ ಬಹಳಷ್ಟು ಜನರು ಹೊಸ ಸಂಗಾತಿಯನ್ನು ಆಕರ್ಷಿಸಲು ಮೇಕಪ್ ಮಾಡಿಕೊಳ್ಳುವುದಾಗಿ ಸಲಹೆ ನೀಡಿದ್ದರು. ಆದರೆ ಅದರ ಅವಶ್ಯಕತೆ ಇಲ್ಲ. ತನ್ನ ಪ್ಲಾಸ್ಟಿಕ್ ಸರ್ಜರಿ, ಚರ್ಮ ಮತ್ತು ವ್ಯಕ್ತಿತ್ವವನ್ನು ನನ್ನ ಈಗಿನ ಪತಿಯಾಗಿರುವ ವ್ಲಾಡಿಮಿರ್ ಪ್ರೀತಿಸುತ್ತಾನೆ. ನಾನು ಹೀಗೆಯೇ ಇರಲು ಬಯಸುತ್ತೇನೆ ಇದ್ದಕ್ಕಿಂತ ಸುಂದರವಾಗಿ ಕಾಣಲು ಬಯಸುವುದಿಲ್ಲ ಎಂದು ಹೇಳಿಕೊಂಡಿದ್ದಾಳೆ.

  • ಮಾಜಿ ಪತಿ ಸೇರಿ ನಾಲ್ವರಿಂದ ಮಹಿಳೆ ಮೇಲೆ ಗ್ಯಾಂಗ್ ರೇಪ್

    ಮಾಜಿ ಪತಿ ಸೇರಿ ನಾಲ್ವರಿಂದ ಮಹಿಳೆ ಮೇಲೆ ಗ್ಯಾಂಗ್ ರೇಪ್

    – ಸಿಗರೇಟ್‍ನಿಂದ ಗುಪ್ತಾಂಗವನ್ನ ಸುಟ್ಟ ಪಾಪಿಗಳು

    ಭೋಪಾಲ್: ವ್ಯಕ್ತಿಯೊಬ್ಬ ತನ್ನ ಸಂಬಂಧಿಕರೊಂದಿಗೆ ಸೇರಿ ಮಾಜಿ ಪತ್ನಿಯನ್ನು ಅಪಹರಿಸಿ, ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಭೋಪಾಲ್‍ನಿಂದ ಪಶ್ಚಿಮಕ್ಕೆ 293 ಕಿ.ಮೀ ದೂರದಲ್ಲಿರುವ ರತ್ಲಂ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಆರೋಪಿಗಳು ಕೃತ್ಯ ಎಸಗಿದ್ದಾರೆ. ಸಂತ್ರಸ್ತೆಯು ಮಂಗಳವಾರ ಬೆಳಗ್ಗೆ ತಾಲ್ ವ್ಯಾಪ್ತಿಯ ರಸ್ತೆಬದಿಯಲ್ಲಿ ತನ್ನ ಮೂರು ವರ್ಷದ ಮಗುವಿನೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ತಾಲ್ ಪೊಲೀಸ್ ಠಾಣೆ ಅಧಿಕಾರಿ ಸಂಗೀತ ಸೋಲಂಕಿ, ಮಹಿಳೆಯ ಎರಡನೇ ಪತಿಯೊಂದಿಗೆ ಆಕೆಯ ಮೊದಲ ಪತಿ ಜಗಳವಾಡಿಕೊಂಡಿದ್ದ. ಈ ಪ್ರಕರಣದಲ್ಲಿ ಮಹಿಳೆ ಮುಖ್ಯ ಸಾಕ್ಷಿಯಾಗಿದ್ದಳು. ಪ್ರಕರಣದಲ್ಲಿ ಸಾಕ್ಷಿ ಹೇಳದಂತೆ ಮೊದಲ ಪತ್ನಿ ಎಚ್ಚರಿಕೆ ನೀಡಿದ್ದ. ಆದರೆ ಮಹಿಳೆ ಆತನ ಮಾತಿಗೆ ಒಪ್ಪಿರಲಿಲ್ಲ. ಹೀಗಾಗಿ ಆಕೆಯ ಮಾಜಿ ಪತಿ ಮತ್ತು ನಾಲ್ವರು ಸಂಬಂಧಿಕರು ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಸಂತ್ರಸ್ತೆಯ ಗುಪ್ತಾಂಗವನ್ನು ಸಿಗರೇಟ್‍ನಿಂದ ಸುಟ್ಟು ವಿಕೃತಿ ಮೆರೆದಿದ್ದಾರೆ ಎಂದು ಹೇಳಿದ್ದಾರೆ.

    ಅತ್ಯಾಚಾರದ ಬಳಿಕ ಆರೋಪಿಗಳು ಸಂತ್ರಸ್ತೆಗೆ ಕೀಟನಾಶಕ ಕುಡಿಸಿ ಐದು ವರ್ಷದ ಪುಟ್ಟ ಬಾಲಕಿಯೊಂದಿಗೆ ರಸ್ತೆಗೆ ಎಸೆದು ಪರಾರಿಯಾಗಿದ್ದಾರೆ. ಅಲ್ಲೆ ಓಡಾಡುತಿದ್ದ ಸ್ಥಳೀಯರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮಾಜಿ ಪತಿ ಸೇರಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

  • ಬಾಬಾ-ಹನಿಪ್ರೀತ್ ಮಧ್ಯೆ ಅನೈತಿಕ ಸಂಬಂಧವಿತ್ತು, ಬಿಗ್ ಬಾಸ್ ರೀತಿ ಗೇಮ್ ಆಡಿಸ್ತಿದ್ದ: ಮಾಜಿ ಪತಿ ಹೇಳಿಕೆ

    ಬಾಬಾ-ಹನಿಪ್ರೀತ್ ಮಧ್ಯೆ ಅನೈತಿಕ ಸಂಬಂಧವಿತ್ತು, ಬಿಗ್ ಬಾಸ್ ರೀತಿ ಗೇಮ್ ಆಡಿಸ್ತಿದ್ದ: ಮಾಜಿ ಪತಿ ಹೇಳಿಕೆ

    ಚಂಡೀಘಢ: ಅತ್ಯಾಚಾರಿ ಬಾಬಾ ಮತ್ತು ದತ್ತು ಪುತ್ರಿ ಹನಿಪ್ರೀತ್ ನಡುವಿನ ಸಂಬಂಧದ ಹಿಂದಿನ ರಹಸ್ಯವನ್ನ ಹನಿಪ್ರೀತ್‍ನ ಮಾಜಿ ಪತಿ ವಿಶ್ವಾಸ್ ಗುಪ್ತಾ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.

    ಶುಕ್ರವಾರದಂದು ಮಾಧ್ಯಮಗಳೊಂದಿಗೆ ಮಾತನಾಡಿದ ಗುಪ್ತಾ, ಬಾಬಾ ಮತ್ತು ಹನಿಪ್ರೀತ್ ಅನೈತಿಕ ಸಂಬಂಧವನ್ನು ಹೊಂದಿದ್ದರು. ಅನುಯಾಯಿಗಳು ಮತ್ತು ಇತರರನ್ನು ಮರುಳು ಮಾಡಲು ತಂದೆ-ಮಗಳು ಎಂದು ಹೇಳಿಕೊಂಡಿದ್ದರು. ಯಾವ ತಂದೆ ತಾನೇ ಮಗಳನ್ನ ಹಾಸಿಗೆ ಮೇಲೆ ಮಲಗಿಸಿಕೊಳ್ಳುತ್ತಾರೆ? ಅವಳು ಯಾವಾಗ್ಲೂ ಬಾಬಾ ಜೊತೆ ಇರುತ್ತಿದ್ದಳು ಎಂದು ಹೇಳಿದ್ದಾರೆ.

    ರಾಮ್ ರಾಹೀಮ್ ಹಾಗೂ ಹನಿಪ್ರೀತ್ ಇಬ್ಬರೂ ಬಾಬಾನ ಗುಫಾ(ಕೊಠಡಿ)ಯಲ್ಲಿ ಒಟ್ಟಾಗಿ ಇದ್ದಿದ್ದನ್ನು ನಾನು ನೋಡಿದ್ದೆ. ಆಕೆ ನನ್ನ ಜೊತೆ ಯಾವತ್ತೂ ಮಲಗಿಲ್ಲ. ಪ್ರತಿ ರಾತ್ರಿ ರಾಮ್ ರಹೀಮ್ ಜೊತೆ ಇರುತ್ತಿದ್ದಳು. ಬಾಬಾ ನನ್ನನ್ನು ಬಂಧಿಯಾಗಿಸಿದ್ದ. ಆಕೆಗೆ ನನ್ನ ಬಳಿ ಬರಲು ಬಿಡುತ್ತಿರಲಿಲ್ಲ ಅಂತ ಮಾಧ್ಯಮಗಳಿಗೆ ಗುಪ್ತಾ ತಿಳಿಸಿದ್ದಾರೆ.

    ಬಾಬಾ ಹಾಗೂ ನನ್ನ ಮಾಜಿ ಪತ್ನಿ ಹನಿಪ್ರೀತ್ ನಡುವೆ ಅನೈತಿಕ ಸಂಬಂಧ ಇರುವುದು ನನಗೆ ತಿಳಿದ ಮೇಲೆ ಈ ವಿಷಯವನ್ನ ಎಲ್ಲೂ ಬಾಯಿಬಿಡದಂತೆ ಅವನು ನನಗೆ ಮತ್ತು ನನ್ನ ಕುಟುಂಬದವರಿಗೆ ಬೆದರಿಕೆ ಒಡ್ಡಿದ್ದ. ಅಷ್ಟೇ ಅಲ್ಲದೇ ನನ್ನನ್ನು ಕೊಲೆ ಮಾಡಲು ತನ್ನ ಚೇಲಾಗಳಿಗೆ ಹೇಳಿದ್ದ ಎಂದು ತಿಳಿಸಿದ್ದಾರೆ.

    ಇದಾದ ನಂತರ ಡೇರಾ ಬೆಂಬಲಿಗರು ನಮ್ಮನ್ನು ಹಿಂಬಾಲಿಸುತ್ತಿದ್ದರು. ಆದ್ದರಿಂದ ನಾನು ಹನಿಪ್ರೀತ್‍ನಿಂದ ವಿಚ್ಛೇದನ ಪಡೆದು ಡೇರಾವನ್ನು ಬಿಟ್ಟು ಜುಲೈ 2011 ರಲ್ಲಿ ಪಂಚಕುಲಕ್ಕೆ ಹೋದೆ. ನನ್ನ ತಂದೆ ಆಸ್ತಿಯನ್ನೆಲ್ಲಾ ಮಾರಾಟ ಮಾಡಿ ಡೇರಾದಲ್ಲಿ ಹೂಡಿಕೆ ಮಾಡಿದ್ದರು. ಬಾಬಾ ನನಗೆ ಮತ್ತು ನನ್ನ ಕುಟುಂಬದವರಿಗೆ ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಮಾಡಿದ್ದ ಎಂದು ಗುಪ್ತಾ ಹೇಳಿದ್ದಾರೆ.

    ಬಾಬಾ ತನ್ನ ರಹಸ್ಯ ಗುಹೆಯಲ್ಲಿ ಬಿಗ್ ಬಾಸ್ ರೀತಿಯ ಗೇಮ್ ಆಡಿಸುತ್ತಿದ್ದ. 6 ಜೋಡಿಗಳನ್ನು ಬಿಗ್‍ಬಾಸ್ ಮನೆಯಲ್ಲಿ 28 ದಿನಗಳ ಕಾಲ ಇಟ್ಟಿದ್ದ. ಈ ಆಟಕ್ಕೆ ಅವನೇ ಜಡ್ಜ್ ಆಗಿದ್ದ. ಇದರಲ್ಲಿ ನನ್ನ ಮಾಜಿ ಪತ್ನಿ ಕೂಡ ಭಾಗವಹಿದ್ದಳು. ಕೊನೆಯದಾಗಿ ಅವಳೇ ಗೆದ್ದಿದ್ದಳು ಎಂದು ಗುಪ್ತಾ ಹೇಳಿದ್ದಾರೆ.

    ಇಬ್ಬರು ಸಾದ್ವಿಯರ ಮೇಲೆ ಅತ್ಯಾಚಾರ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರಾಮ್ ರಹೀಮ್‍ಗೆ 20 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ಸದ್ಯ ಹನಿಪ್ರೀತ್ ತಲೆಮರೆಸಿಕೊಂಡಿದ್ದು ಹರಿಯಾಣ ಪೊಲೀಸರ 43 ಮೋಸ್ಟ್ ವಾಂಟೆಡ್‍ಗಳ ಪಟ್ಟಿಯಲ್ಲಿ ಮೊದಲಿಗಳಾಗಿದ್ದಾಳೆ.