Tag: ex home minister

  • ಕೇಂದ್ರ ಗೃಹ ಸಚಿವನಾಗಿ ಜಮ್ಮು-ಕಾಶ್ಮೀರ ಭೇಟಿ ಸಮಯದಲ್ಲಿ ಭಯವಾಗುತ್ತಿತ್ತು: ಸುಶೀಲ್ ಕುಮಾರ್ ಶಿಂಧೆ

    ಕೇಂದ್ರ ಗೃಹ ಸಚಿವನಾಗಿ ಜಮ್ಮು-ಕಾಶ್ಮೀರ ಭೇಟಿ ಸಮಯದಲ್ಲಿ ಭಯವಾಗುತ್ತಿತ್ತು: ಸುಶೀಲ್ ಕುಮಾರ್ ಶಿಂಧೆ

    ನವದೆಹಲಿ: ನಾನು ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ಭೇಟಿ ನೀಡಿದಾಗ ಭಯಭೀತನಾಗಿದ್ದೆ ಎಂದು ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ (Former Home Minister Sushilkumar Shinde) ತಮ್ಮ ಅನುಭವವನ್ನು ಬಚ್ಚಿಟ್ಟಿದ್ದಾರೆ.

    ಮಂಗಳವಾರ ನಡೆದ ‘ರಾಜಕೀಯದಲ್ಲಿ ಐದು ದಶಕಗಳು’ (Five Decades in Politics) ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, 2012ರಲ್ಲಿ ಮನಮೋಹನ್ ಸಿಂಗ್ (Manmohan Singh) ಅವರು ಪ್ರಧಾನಿಯಾಗಿದ್ದಾಗ ನಾನು ಗೃಹ ಸಚಿವನಾಗಿದ್ದೆ. ಆ ಸಮಯದಲ್ಲಿ ನಾನು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಸಂಗೀತ ನಿರ್ದೇಶಕ ಗುರುಕಿರಣ್, ಸಮಾಜ ಸೇವಕ ರಾಜಣ್ಣಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್

    ನಾನು ಗೃಹ ಸಚಿವ ಸ್ಥಾನಕ್ಕೇರುವ ಮೊದಲು ಶಿಕ್ಷಣ ತಜ್ಞ ವಿಜಯಧರ್ ಎಂಬುವವರನ್ನು ಭೇಟಿಯಾಗಿದ್ದೆ. ನನಗೆ ಅವರು ಶ್ರೀನಗರದ ಲಾಲ್ ಚೌಕ್‌ಗೆ ಹೋಗಿ, ಅಲ್ಲಿನ ಜನರನ್ನು ಭೇಟಿ ಮಾಡಿ, ದಾಲ್ ಸರೋವರವನ್ನು ಸುತ್ತಾಡಿ ಬರುವಂತೆ ಸಲಹೆ ನೀಡಿದ್ದರು.ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಣ ಬಳ್ಳಾರಿ ಚುನಾಣೆಗೆ ಖರ್ಚು – ಸಂಸದ ಸ್ಥಾನದಿಂದ ತುಕಾರಾಂ ವಜಾಕ್ಕೆ ಬಿಜೆಪಿ ಆಗ್ರಹ

    ಆಗ ನನಗೆ ಭಯವಿತ್ತು, ಆದರೆ ಯಾರಿಗೆ ಹೇಳುವುದು? ಈಗ ನಾನಿದನ್ನು ನಿಮಗೆ ನಗಿಸಲು ಹೇಳುತ್ತಿದ್ದೇನೆ. ಆದ್ರೆ ಆ ಸಮಯದಲ್ಲಿ ನನಗೆ ಭಯವಿತ್ತು. ನಾನು ಲಾಲ್ ಚೌಕ್‌ನಲ್ಲಿ ಶಾಪಿಂಗ್ ಮಾಡಿದೆ. 1978ರಲ್ಲಿ ನಿರ್ಮಾಣವಾದ ಗಡಿಯಾರ ಗೋಪುರಕ್ಕೂ ಭೇಟಿ ನೀಡಿದೆ. 2008 ಮತ್ತು 2010ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನೆಗಳು ಭುಗಿಲೆದ್ದಾಗ ಪಾಕಿಸ್ತಾನದ ಧ್ವಜಗಳು ಹಾರಿದ ಸಂದರ್ಭವನ್ನು ನಾನು ನೋಡಿದ್ದೇನೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

  • ಫೋನ್ ಕದ್ದಾಲಿಕೆ ಪ್ರಕರಣವನ್ನ ಸಿಬಿಐಗೆ ಕೊಡೋ ಅವಶ್ಯಕತೆ ಇರಲಿಲ್ಲ- ಎಂಬಿ ಪಾಟೀಲ್

    ಫೋನ್ ಕದ್ದಾಲಿಕೆ ಪ್ರಕರಣವನ್ನ ಸಿಬಿಐಗೆ ಕೊಡೋ ಅವಶ್ಯಕತೆ ಇರಲಿಲ್ಲ- ಎಂಬಿ ಪಾಟೀಲ್

    – ನನ್ನ ಪಿಎ ಫೋನೂ ಕದ್ದಾಲಿಕೆಯಾದ ಗುಮಾನಿಯಿದೆ

    ವಿಜಯಪುರ: ಈಗಲೂ ನಾನು ನನ್ನ ನಿಲುವಿಗೆ ಬದ್ಧನಿದ್ದೇನೆ. ಫೋನ್ ಕದ್ದಾಲಿಕೆ ಪ್ರಕರಣವನ್ನ ಸಿಬಿಐಗೆ ಕೊಡುವಂತಹ ಅವಶ್ಯಕತೆ ಇರಲಿಲ್ಲ ಎಂದು ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್ ಹೇಳಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪೊಲೀಸ್ ಇಲಾಖೆಯಲ್ಲೇ ಅನೇಕರು ದಕ್ಷ, ಪ್ರಾಮಾಣಿಕ ಅಧಿಕಾರಿಗಳಿದ್ದಾರೆ. ಎಂ ಎಂ ಕಲಬುರ್ಗಿ ಅವರ ಕೇಸನ್ನ ಸಿಬಿಐಗೆ 5 ವರ್ಷಗಳ ಕಾಲ ಬೇಧಿಸಲು ಅಗಲಿಲ್ಲ. ನಮ್ಮವರು ಗೌರಿ ಲಂಕೇಶ್ ಕೇಸ್ ಬೇಧಿಸಿದರು.ಇಷ್ಟೆಲ್ಲ ನಮ್ಮ ಪೊಲಿಸ್ ಇಲಾಖೆಯಲ್ಲೇ ದಕ್ಷತೆ ಇದ್ದರೂ ಸಿಬಿಐಗೆ ಕೊಟ್ಟಿದ್ದಾರೆ. ಇದರ ಜೊತೆಗೆ ಕೇಂದ್ರ ಸರ್ಕಾರ ಆಪರೇಷನ್ ಕಮಲದ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಫೋನ್ ಕದ್ದಾಲಿಕೆ ಆರೋಪ ಏನಿದೆ. ಅದು ಕೂಡ ಸಿಬಿಐ ತನಿಖೆ ಆಗಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: 34 ಜಿಬಿ ಆಡಿಯೋ ರೆಕಾರ್ಡ್, 6 ಸಾವಿರ ಕರೆ ಕದ್ದಾಲಿಕೆ – ಫೋನ್ ಟ್ಯಾಪಿಂಗ್ ಹೇಗೆ ಮಾಡಲಾಗುತ್ತೆ?

    ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಇದ್ದಾರೆ. ಅವರು ಕೆಪೇಬಲ್ ಇದ್ದಾರೆ. ಒಳ್ಳೇಯವರೂ ಆಗಿದ್ದಾರೆ. ಇಂಥವರು ಇದ್ದರೂ ಸಿಬಿಐಗೆ ಕೊಟ್ಟಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

    ನನ್ನ ಪಿಎ ಫೋನ್ ಕೂಡ ಟ್ಯಾಪ್ ಆಗಿದೆ ಎಂಬ ಗುಮಾನಿ ಇದೆ. ಎಲ್ಲವೂ ತನಿಖೆ ಆಗಲಿ. ಯಾರನ್ನೂ ರಕ್ಷಿಸಲು ಇಲ್ಲಿ ನಾವು ಹೊರಟಿಲ್ಲ. ಐಎಂಎ ಪ್ರಕರಣವನ್ನು ಸಿಬಿಐಗೆ ಕೊಡಲಿ ತಪ್ಪಿಲ್ಲ. ನಮ್ಮವರು ಒಳ್ಳೆಯ ರೀತಿಯಲ್ಲಿ ತನಿಖೆ ಮಾಡುತ್ತಿದ್ದಾರೆ ಎಂದರು.