Tag: ex-girlfriend

  • 15 ಸೆಕೆಂಡ್‍ನಲ್ಲಿ ಹೋಯ್ತು ಮೂವರ ಪ್ರಾಣ-ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    15 ಸೆಕೆಂಡ್‍ನಲ್ಲಿ ಹೋಯ್ತು ಮೂವರ ಪ್ರಾಣ-ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    -ಪ್ರೇಯಸಿ, ಗಾರ್ಡ್‍ಗೆ ಗುಂಡು ಹೊಡೆದು ಕೊನೆಗೆ ತಾನು ಹೆಣವಾದ ಭಗ್ನ ಪ್ರೇಮಿ

    ಬ್ಯಾಂಕಾಕ್: ಕೇವಲ 15 ಸೆಕೆಂಡ್‍ನಲ್ಲಿ ಭಗ್ನ ಪ್ರೇಮಿಯೊಬ್ಬನ ಕೈಯಿಂದ ಮೂರು ಮಂದಿ ಹೆಣವಾದ ದಾರುಣ ಘಟನೆ ತೈಲ್ಯಾಂಡ್‍ನ ಲ್ಯಾಂಪಂಗ್ ಪ್ರಾಂತ್ಯದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

    ಮೃತಪಟ್ಟವರನ್ನು ಡಾಮ್ರೊಂಗ್ಚಾಯ್ ಮೊನೊಥಾಮ್(39), ಆತನ ಮಾಜಿ ಪ್ರೇಯಸಿ ಬೂನಿಪೋರ್ನ್ ಕಂತಲಾಹ್(21) ಹಾಗೂ ಸೆಕ್ಯುರಿಟಿ ಗಾರ್ಡ್ ಮೆರಪೊಂಗ್ ಮೋರ್ಪಾ(28) ಎಂದು ಗುರುತಿಸಲಾಗಿದೆ. ಡಾಮ್ರೊಂಗ್ಚಾಯ್ ಹಾಗೂ ಬೂನಿಪೋರ್ನ್ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತಿದ್ದರು. ಆದರೆ ಕೆಲವು ದಿನಗಳ ಹಿಂದೆ ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿ ಇಬ್ಬರು ದೂರವಾಗಿದ್ದರು. ಇದರಿಂದ ಡಾಮ್ರೊಂಗ್ಚಾಯ್ ಮನನೊಂದಿದ್ದನು. ಆದ್ರೆ ಬೂನಿಪೋರ್ನ್ ಮಾತ್ರ ಎಲ್ಲವನ್ನು ಮರೆತು ಸ್ನೇಹಿತರೊಡನೆ ಪಾರ್ಟಿ ಮಾಡಿಕೊಂಡು ಚೆನ್ನಾಗಿದ್ದಳು.

    ತನ್ನ ಮಾಜಿ ಪ್ರೇಯಸಿ ತನ್ನನ್ನು ಕಡೆಗಣಿಸಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿಕೊಂಡು ಸುಖವಾಗಿದ್ದಾಳೆ ಎಂಬ ಕಾರಣಕ್ಕೆ ಡಾಮ್ರೊಂಗ್ಚಾಯ್ ಕೋಪಗೊಂಡಿದ್ದನು. ಅಲ್ಲದೆ ಮಂಗಳವಾರ ರಾತ್ರಿ ಬೂನಿಪೋರ್ನ್ ಸ್ನೇಹಿತರೊಡನೆ ಪಾರ್ಟಿಗೆಂದು ತೆರಳಿದ್ದ ವೇಳೆ ಏಕಾಏಕಿ ಆಕೆಯ ಮೇಲೆ ಡಾಮ್ರೊಂಗ್ಚಾಯ್ ಹಲ್ಲೆ ಮಾಡಿದ್ದಾನೆ. ಮೊದಲು ಆಕೆಯ ಸ್ನೇಹಿತರಿಗೆ ಗನ್ ತೋರಿಸಿ ಹೆದರಿಸಿ ಬೂನಿಪೋರ್ನ್‍ನನ್ನು ಎಳೆದುಕೊಂಡು ಹೋಗಿದ್ದಾನೆ. ಆ ನಂತರ ಕೆಲ ಕಾಲ ಅವರಿಬ್ಬರ ನಡುವೆ ವಾಗ್ವಾದ ನಡೆದಿದೆ.

    ಮೊದಲೇ ಕೋಪದಲ್ಲಿದ್ದ ಡಾಮ್ರೊಂಗ್ಚಾಯ್‍ಗೆ ಬೂನಿಪೋರ್ನ್ ತನ್ನ ಬಳಿ ವರ್ತಿಸಿದ್ದು ಇಷ್ಟವಾಗಲಿಲ್ಲ. ಆದರಿಂದ ಆಕೆಗೆ ಶೂಟ್ ಮಾಡಿ ಕೊಲೆ ಮಾಡಿದ್ದಾನೆ. ಬಳಿಕ ಆಕೆಯನ್ನು ರಕ್ಷಿಸಲು ಬಂದ ಸೆಕ್ಯುರಿಟಿ ಗಾರ್ಡ್‍ಗೆ ಕೂಡ ಗುಂಡು ಹೊಡೆದು ಕೊಂದಿದ್ದಾನೆ. ತದನಂತರ ತಾನು ಕೂಡ ಶೂಟ್ ಮಾಡಿಕೊಂಡು ಮೃತಪಟ್ಟಿದ್ದಾನೆ. ಹೀಗೆ ಕೇವಲ 15 ಸೆಕೆಂಡ್‍ಗಳಲ್ಲಿ ಮೂವರ ಪ್ರಾಣ ಹೋಗಿದೆ. ಡಾಮ್ರೊಂಗ್ಚಾಯ್ ಕೋಪಕ್ಕೆ ಅವನ ಜೊತೆಗೆ ಇಬ್ಬರು ಅನ್ಯಾಯವಾಗಿ ಜೀವ ಕಳೆದುಕೊಂಡಿದ್ದಾರೆ.

    https://www.youtube.com/watch?v=8cb-MF8G3eE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 5 ವರ್ಷ ರಿಲೇಶನ್‍ಶಿಪ್‍ನಲ್ಲಿದ್ದು ಬ್ರೇಕಪ್ ಮಾಡಿದ ಪ್ರೇಯಸಿಗೆ ವಿಷ ಕುಡಿಸಿದ ಪ್ರಿಯಕರ!

    5 ವರ್ಷ ರಿಲೇಶನ್‍ಶಿಪ್‍ನಲ್ಲಿದ್ದು ಬ್ರೇಕಪ್ ಮಾಡಿದ ಪ್ರೇಯಸಿಗೆ ವಿಷ ಕುಡಿಸಿದ ಪ್ರಿಯಕರ!

    ಮುಂಬೈ: ಪ್ರಿಯಕರನೊಬ್ಬ ತನ್ನ ಮಾಜಿ ಪ್ರೇಯಸಿಯ ಕುತ್ತಿಗೆಗೆ ಚಾಕು ಹಿಡಿದು ವಿಷ ಕುಡಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

    ಕಿಶನ್ ಸೋನವಾನೇ(24) ತನ್ನ 22 ವರ್ಷದ ಮಾಜಿ ಪ್ರೇಯಸಿ ಜೊತೆ 5 ವರ್ಷದಿಂದ ರಿಲೇಶನ್‍ಶಿಪ್‍ನಲ್ಲಿದ್ದನು. ನಂತರ ಯುವತಿ ಕಳೆದ ತಿಂಗಳು ಕಿಶನ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದಳು. ನಂತರ ಆಕೆಗೆ ಬುದ್ಧಿ ಕಲಿಸಲು ಕಿಶನ್ ತನ್ನ ಮಾಜಿ ಪ್ರೇಯಸಿಯನ್ನು ವಿಕ್ರೋಲಿಯಲ್ಲಿರುವ ಪಾರ್ಕ್‍ಗೆ ಕರೆಸಿಕೊಂಡಿದ್ದ.

    ತನ್ನ ಮಾಜಿ ಪ್ರಿಯಕರನ ಮಾತು ಕೇಳಿ ಯುವತಿ ಭಾನುವಾರ ಬೆಳಗ್ಗೆ 10 ಗಂಟೆಗೆ ಪಾರ್ಕಿಗೆ ಹೋಗಿದ್ದಳು. ನಂತರ ಇಬ್ಬರು ಮಾತನಾಡುತ್ತಿದ್ದರು, ಸ್ವಲ್ಪ ಸಮಯದ ನಂತರ ಇಬ್ಬರ ನಡುವೆ ವಾದ-ವಿವಾದ ನಡೆಯಿತು ಎಂದು ಪ್ರತಿಕೆಯೊಂದರಲ್ಲಿ ವರದಿಯಾಗಿದೆ.

    ಜಗಳವಾಡುತ್ತಿದ್ದಾಗ ಕಿಶನ್ ನನ್ನನ್ನು ಶಾಂತವಾಗಿರಲು ಹೇಳಿ, ಒಂದು ಮಾತ್ರೆಯನ್ನು ಕೊಟ್ಟಿದ್ದ. ಆದರೆ ಅದು ಇಲಿ ಪಾಷಾಣ ರೀತಿ ಇತ್ತು. ನಾನು ಅದನ್ನು ತಿನ್ನಲು ನಿರಾಕರಿಸಿದೆ. ಆಗ ಅವನು ನನ್ನ ಕುತ್ತಿಗೆ ಹತ್ತಿರ ಚಾಕು ಇಟ್ಟು ಪ್ರಾಣ ಬೆದರಿಕೆ ಹಾಕಿದ್ದ. ಅದಕ್ಕೆ ನಾನು ಹೆದರಿ ಆ ಮಾತ್ರೆಯನ್ನು ನುಂಗಿದೆ. ನಂತರ ನಾನು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದೆ ಎಂದು ಯುವತಿ ಪೊಲೀಸರ ಹತ್ತಿರ ತಿಳಿಸಿದ್ದಾಳೆ.

    ಈ ಘಟನೆ ನಡೆದ ನಂತರ ಕಿಶನ್ ಆ ಜಾಗದಿಂದ ಪರಾರಿಯಾಗಿದ್ದು, ಪಾರ್ಕ್‍ನಲ್ಲಿದ್ದ ಸ್ಥಳೀಯರು ಯುವತಿಯನ್ನು ಮಹಾತ್ಮ ಪುಲೇ ಮುನಿಸಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಸದ್ಯ ಯುವತಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಕಿಶನ್‍ನನ್ನು ಆತನ ಮನೆಗೆ ಹೋಗಿ ಬಂಧಿಸಿದ್ದೇವೆ ಎಂದು ವಿಕ್ರೋಲಿ ಪೊಲೀಸ್ ಠಾಣೆಯ ಅಧಿಕಾರಿಯಾದ ಎಸ್‍ಪಿಐ ಸಂಜಯ್ ಮೋರ್ ತಿಳಿಸಿದ್ದಾರೆ.

  • ಮಾಜಿ ಗೆಳತಿಗೆ ಬಲವಂತವಾಗಿ ಚುಂಬಿಸಿ ಪೊಲೀಸರ ಅತಿಥಿಯಾದ

    ಮಾಜಿ ಗೆಳತಿಗೆ ಬಲವಂತವಾಗಿ ಚುಂಬಿಸಿ ಪೊಲೀಸರ ಅತಿಥಿಯಾದ

    ಮುಂಬೈ: 23 ವರ್ಷದ ಯುವಕನೊಬ್ಬ ತನ್ನ ಮಾಜಿ ಗೆಳತಿಗೆ ಬಲವಂತವಾಗಿ ಚುಂಬಿಸಿದ್ದಕ್ಕೆ ಈಗ ಆತ ಪೊಲೀಸರ ಅತಿಥಿಯಾಗಿದ್ದಾನೆ.

    ಈ ಘಟನೆ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ಯುವತಿ ತನ್ನ ಸ್ನೇಹಿತರ ಜೊತೆ ಮಂಗಳವಾರ ರಾತ್ರಿ ಇದ್ದ ಸಂದರ್ಭದಲ್ಲಿ ನಡೆದಿದೆ. ಯುವತಿ ತನ್ನ ಸ್ನೇಹಿತರ ಜೊತೆ ಇದ್ದ ಸಂದರ್ಭದಲ್ಲಿ ಆರೋಪಿ ಏಕಾಏಕಿ ಯುವತಿಯ ಬಳಿಗೆ ಹೋಗಿ ಬಲವಂತಾಗಿ ಆಕೆಯನ್ನು ಚುಂಬಿಸಲು ಮುಂದಾಗಿದ್ದಾನೆ. ಅಲ್ಲೇ ಇದ್ದ ಯುತಿಯ ಸ್ನೇಹಿತರು ತಾತ್ಕಾಲಿಕವಾಗಿ ಆತನನ್ನು ತಡೆಯಲು ಪ್ರಯತ್ನ ಮಾಡಿದ್ದಾರೆ.

    ಆರೋಪಿ ಬಿಡದೇ ಬಲವಂತವಾಗಿ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಬಳಿಕ ಕಾರ್ಟರ್ ರಸ್ತೆ ಚೌಕದಲ್ಲಿದ್ದ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಬಗ್ಗೆ ತನಿಖೆ ನಡೆಸಿದಾಗ ಈತನ ಮೇಲೆ ಯಾವುದೇ ಯಾವ ಕ್ರಿಮಿನಲ್ ಆರೋಪ ಇಲ್ಲ ಎಂದು ಖಾರ್ ಪೊಲೀಸರು ತಿಳಿಸಿದ್ದಾರೆ.

    ನ್ಯಾಯಾಲಯವು ಆರೋಪಿಯನ್ನು ಎರಡು ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಈತ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾನೆ. ಆದರೆ ಪ್ರಸ್ತುತ ಈತ ನಿರುದ್ಯೋಗಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಆರೋಪಿ ಮತ್ತು ಯುವತಿ ಕಳೆದ ವರ್ಷದಿಂದ ದೂರ ಆಗಿದ್ದು, ಇಬ್ಬರು ಪ್ರತ್ಯೇಕವಾಗಿದ್ದಾರೆ. ಆರೋಪಿ ಮತ್ತೆ ಆಕೆಯ ಜೊತೆ ಮಾತನಾಡಲು ಆಕೆಯ ಫೋನ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪದೇ ಪದೇ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದನು.

    ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354, 354 ಡಿ, 506 ಮತ್ತು 509 ರ ಅಡಿಯಲ್ಲಿ ಏಫ್‍ಐಆರ್ ದಾಖಲಿಸಲಾಗಿದೆ.