Tag: ex dcm

  • ಒಂದೇ ಗಂಟೆಯಲ್ಲಿ ಪರಂ ಐಟಿ ವಿಚಾರಣೆ ಅಂತ್ಯ

    ಒಂದೇ ಗಂಟೆಯಲ್ಲಿ ಪರಂ ಐಟಿ ವಿಚಾರಣೆ ಅಂತ್ಯ

    ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ಮೊದಲ ದಿನದ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳ ವಿಚಾರಣೆ ಕೇವಲ ಒಂದು ಗಂಟೆಯಲ್ಲಿಯೇ ಅಂತ್ಯವಾಗಿದೆ.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ವಶಕ್ಕೆ ಪಡೆದಿದ್ದ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ಅವರಿಗೂ ಸ್ವಲ್ಪ ಕಾಲಾವಕಾಶ ಬೇಕು. ಅದಕ್ಕಾಗಿ ನಾನು ಕೂಡ ಮೂರು ದಿನ ಸಮಯ ಕೇಳಿದ್ದೇನೆ. ಮೂರು ದಿನದ ಬಳಿಕ ಸಮನ್ಸ್ ನೀಡಿದರೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದರು.

    ಇದೇ ವೇಳೆ ತಮ್ಮ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಣಬಂಧಿಸಿದಂತೆ ಪ್ರತಿಕ್ರಿಯಿಸಿದ ಪರಂ, ಈ ಪ್ರಕರಣದ ಬಗ್ಗೆ ವಿಶೇಷ ತನಿಖೆಯ ಅವಶ್ಯಕತೆ ಇದೆ. ಕೆಲವೊಬ್ಬರು ನಾನೇ ಕೊಲೆ ಮಾಡಿಸಿದ್ದೇನೆ ಎಂದು ಹೇಳುತ್ತಾರೆ. ನಾನು ಅವನ ಹೆಸರಲ್ಲಿ ಬೇನಾಮಿ ಮಾಡಿದ್ದೇನೆ ಅಂತಾನೂ ಹೇಳುತ್ತಾರೆ. ಅದಕ್ಕೆ ಭಯ ಪಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸುದ್ದಿ ಬರುತ್ತಿದೆ. ಈ ಸಂಬಂಧ ನನ್ನ ಮೇಲೆ ಈ ಆರೋಪಗಳು ಬೇಡ. ಸತ್ಯಾಸತ್ಯತೆ ತಿಳಿದುಕೊಳ್ಳಲು ತನಿಖೆಯ ಅಗತ್ಯತೆ ಇದೆ. ಅವನು ಯಾವ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡ ಅನ್ನೋದನ್ನ ನಾನು ತಿಳಿದುಕೊಳ್ಳಬೇಕು ಎಂದು ಅವರು ತಿಳಿಸಿದರು.

    ಇಂದು ಹನ್ನೊಂದು ಗಂಟೆ ಸುಮಾರಿಗೆ ಪರಮೇಶ್ವರ್ ಬೆಂಗಳೂರಿನ ಐಟಿ ಕಚೇರಿಗೆ ಹಾಜರಾಗುವಂತೆ ಐಟಿ ಇಲಾಖೆ ಸಮನ್ಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಐಡಿ ಕಾರ್ಡ್, ಆಧಾರ್ ಕಾರ್ಡ್ ಮೊದಲಾದ ಪಂಚನಾಮೆಯ ದಾಖಲಾತಿಯೊಂದಿಗೆ ಪರಮೇಶ್ವರ್ ಇಂದು ಬೆಳಗ್ಗೆ 10 ಗಂಟೆಗೆ ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದರು. 11 ಗಂಟೆಗೆ ವಿಚಾರಣೆ ಅಂತ್ಯವಾಗಿದೆ.

  • ಮಾಜಿ ಡಿಸಿಎಂ ಪರಮೇಶ್ವರ್​ಗೆ ಇಡಿ ಸಂಕಷ್ಟ?

    ಮಾಜಿ ಡಿಸಿಎಂ ಪರಮೇಶ್ವರ್​ಗೆ ಇಡಿ ಸಂಕಷ್ಟ?

    ಬೆಂಗಳೂರು: ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳ ಇಕ್ಕಳದಲ್ಲಿರುವ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರಿಗೆ ಇದೀಗ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ಸಂಕಷ್ಟ ಎದುರಾಗಿದೆ.

    ಮೂರು ದಿನಗಳಿಂದ ಪರಮೇಶ್ವರ್ ಒಡೆತನದ ವಿದ್ಯಾಸಂಸ್ಥೆಗಳಿಂದ ಐಟಿ ದಾಳಿ ನಡೆಯುತ್ತಿದೆ. ಶುಕ್ರವಾರ ಐಟಿ ಇಲಾಖೆ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಹವಾಲಾ ಹಣದ ಬಗ್ಗೆ ಉಲ್ಲೇಖ ಮಾಡಿದೆ. ಹೀಗಾಗಿ ಹವಾಲಾ ವ್ಯವಹಾರ ಕಂಡು ಬಂದ ಹಿನ್ನೆಲೆಯಲ್ಲಿ ಇ.ಡಿ ಪ್ರಕರಣವನ್ನ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಪಿಎಂಎಲ್ ಎ ಕಾಯ್ದೆಯ ಅಡಿಯಲ್ಲಿ ಹವಾಲಾ ಹಣದ ತನಿಖೆಯನ್ನ ಇಡಿ ಮಾಡುತ್ತದೆ. ಹೀಗಾಗಿ ಪರಮೇಶ್ವರ್ ಗೆ ಇಡಿ ಸಂಕಷ್ಟ ಖಚಿತವಾಗಿದೆ. ಪರಮೇಶ್ವರ್ ಪ್ರಕರಣ ಇಡಿಗೆ ಹೋಗಬಹುದಾ ಎಂಬ ಚರ್ಚೆಗಳು ನಡೆದಿದ್ದವು. ಈ ಮಧ್ಯೆಯೇ ಐಟಿ ಅಧಿಕಾರಿಗಳು ತಮ್ಮ ಪ್ರಾಥಮಿಕ ತನಿಖಾ ವರದಿಗಳನ್ನು ಇಡಿ ಅಧಿಕಾರಿಗಳಿಗೆ ಸಲ್ಲಿಕೆ ಮಾಡಿದ್ದಾರೆ.

    ಮೆಡಿಕಲ್ ಕಾಲೇಜಿನ ಸೀಟ್ ಬ್ಲಾಕ್ ಮಾಡಿ ಅಕ್ರಮ ವಸೂಲಿ, ಹಣ ವರ್ಗಾವಣೆ ಮಾಡಿರುವುದು, ಜೊತೆಗೆ ಭೂಮಿ ಖರೀದಿ ಮಾಡುವಲ್ಲಿ ಮುನಿರಾಮಯ್ಯ ಅವರಿಗೆ 2 ಕೋಟಿ ರೂ. ಹಣ ನೀಡಿರುವ ಎಲ್ಲಾ ಅಂಶಗಳನ್ನು ಐಟಿಯವರು ಇಡಿ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮೆಡಿಕಲ್ ಕಾಲೇಜಿಗೆ 500 ಕೋಟಿ ರೂ. ಸುರಿದು ತಗ್ಲಾಕ್ಕೊಂಡ ಮಾಜಿ ಡಿಸಿಎಂ

    ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಕೂಡ ಪ್ರಾಥಮಿಕ ತನಿಖೆಯನ್ನು ಮಾಡುತ್ತಾರೆ. ಜಾರಿ ಪ್ರಕರಣ ಮಾಹಿತಿ ವರದಿ(ಇಸಿಐಆರ್) ನ್ನು ದಾಖಲಿಸಿಕೊಂಡು ಪರಮೇಶ್ವರ್ ಅವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆಗಳಿವೆ. ಇದಕ್ಕೂ ಮೊದಲೇ ಇಡಿ ಅಧಿಕಾರಿಗಳು ಕೂಡ ದಾಳಿ ನಡೆಸಿದರೆ ಅಚ್ಚರಿಯಿಲ್ಲ.

  • ಮೆಡಿಕಲ್ ಕಾಲೇಜಿಗೆ 500 ಕೋಟಿ ರೂ. ಸುರಿದು ತಗ್ಲಾಕ್ಕೊಂಡ ಮಾಜಿ ಡಿಸಿಎಂ

    ಮೆಡಿಕಲ್ ಕಾಲೇಜಿಗೆ 500 ಕೋಟಿ ರೂ. ಸುರಿದು ತಗ್ಲಾಕ್ಕೊಂಡ ಮಾಜಿ ಡಿಸಿಎಂ

    ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಸದಾಶಿವನಗರದಲ್ಲಿರುವ ಮನೆಯಲ್ಲಿ ಐಟಿ ಶೋಧ ಅಂತ್ಯವಾಗಿದ್ದು, ತುಮಕೂರಿನಲ್ಲಿ ಮುಂದುವರಿದಿದೆ. ಈ ಮಧ್ಯೆ ಪರಂ ಅವರಿಗೆ ‘ಆರ್ಡರ್’ ಒಂದು ಕಾಟ ಕೊಡುತ್ತಿದೆ.

    ಹೌದು. ಪರಮೇಶ್ವರ್ ಅವರು ನೆಲಮಂಗಲ ಮೆಡಿಕಲ್ ಕಾಲೇಜಿಗೆ ಬರೋಬ್ಬರಿ 500 ಕೋಟಿ ರೂ. ಕೊಟ್ಟಿದ್ದಾರೆ. ಇದೀಗ ಈ 500 ಕೋಟಿಯ ಲೆಕ್ಕಕ್ಕಾಗಿ ಐಟಿ ಅಧಿಕಾರಿಗಳು ದುಂಬಾಲು ಬಿದ್ದಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಎಂಜಿನಿಯರಿಂಗ್ ಕಾಲೇಜುಗಳು ನಷ್ಟದಲ್ಲಿ ಇದೆ ಎಂದಿದ್ದೀರಿ. ಬೇರೊಂದು ಕಾಲೇಜಿನಿಂದ ಬಂದ ಹಣವನ್ನು ಇಲ್ಲಿ ಹಾಕಿಲ್ಲ. ಹಾಗಾದ್ರೆ ಹವಾಲಾ ಹಣದ ಮೂಲಕ ವ್ಯವಹಾರ ಮಾಡಿದ್ರಾ, 500 ಕೋಟಿ ಹಣ ಹೂಡಿಕೆಯ ಮೂಲ ಯಾವುದು ಎಂದು ಐಟಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ವಿದೇಶಿ ಕಂಪನಿಗಳಿಂದ ಸಾಮಾಗ್ರಿಗಳನ್ನು ಪಡೆಯಲು ಪರಮೇಶ್ವರ್ ಈಗಾಗಲೇ ಮುಂಗಡ ಹಣ ಪಾವತಿ ಮಾಡಿದ್ದಾರೆ. ಈಗ ಇದೇ ಅವರಿಗೆ ಕಂಟಕವಾಗಿ ಉಳಿದು ಬಿಟ್ಟಿದೆ.

    ಎರಡು ದಿನಗಳ ಕಾಲ ಐಟಿ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದು, ಸಿಕ್ಕ ಸಂಪತ್ತು ನೋಡಿ ಶಾಕ್ ಗೆ ಒಳಗಾಗಿದ್ದಾರೆ. ಪರಮೇಶ್ವರ್ ಬರೋಬ್ಬರಿ 103 ಕೋಟಿ ಆಸ್ತಿಯನ್ನು ಬಹಿರಂಗಪಡಿಸಿಲ್ಲ. 100 ಕೋಟಿ ದಾಖಲೆ ಪತ್ರಗಳಿಗೆ ಉತ್ತರ ನೀಡಿಲ್ಲ. ಕಾಲೇಜಿನಲ್ಲಿ ದುಡಿದ ಹಣ ಪಂಚತಾರಾ ಹೋಟೆಲ್ ಮೇಲೆ ಹಾಗೂ ಕಾಲೇಜಿನ ಸಿಬ್ಬಂದಿಗೆ ಗೊತ್ತಾಗದ ರೀತಿಯಲ್ಲಿ ಅವರ ಹೆಸರಲ್ಲಿ 4.6 ಕೋಟಿ ಹೂಡಿಕೆ ಮಾಡಿದ್ದಾರೆ.

    ಸದಾಶಿವನಗರದ ನಿವಾಸದಲ್ಲಿ 89 ಲಕ್ಷ ರೂ., ನೆಲಮಂಗಲದ ಮನೆಯಲ್ಲಿ 1.8 ಕೋಟಿ ರೂ. ಹೀಗೆ ಪರಮೇಶ್ವರ್ ಗೆ ಸಂಬಂಧಿಸಿದ್ದ ಒಟ್ಟು 4.5 ಕೋಟಿ ರೂ. ನಗದು ದೊರಕಿದೆ. ಸಿದ್ದಾರ್ಥ ಶಿಕ್ಷಣ ಸಂಸ್ಥೆಯಿಂದ ಕೋಟಿ ಕೋಟಿ ತೆರಿಗೆ ವಂಚನೆ ಮಾಡಲಾಗಿದೆ. 2002 ರಿಂದಲೂ ಎಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ ತೆರಿಗೆ ಕಟ್ಟಿಲ್ಲ. ಈ ಮೂಲಕ ಶಿಕ್ಷಣ ಸಂಸ್ಥೆ ಪಾಲಿಕೆಗೆ ಸುಮಾರು 2 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಪರಮೇಶ್ವರ್ ಅಣ್ಣನ ಮಗ ಆನಂದ್ ಸಿದ್ದಾರ್ಥ್ ಬಳಿ ಡೈರಿ ಪತ್ತೆಯಾಗಿದ್ದು, ಡೈರಿಯಲ್ಲಿ ಮೆಡಿಕಲ್ ಸೀಟು ಹಂಚಿಕೆ ಬಗ್ಗೆ ಉಲ್ಲೇಖ ಮಾಡಿರುವುದನ್ನು ಮಾಡಿದನ್ನು ಆದಾಯ ತೆರಿಗೆ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

  • ಆಸ್ಪತ್ರೆಯ ಬೆಡ್‍ನಲ್ಲಿದ್ದಾಗ ಡಿಕೆಶಿಯಿಂದ ‘ನವೆಂಬರ್’ ಶಪಥ

    ಆಸ್ಪತ್ರೆಯ ಬೆಡ್‍ನಲ್ಲಿದ್ದಾಗ ಡಿಕೆಶಿಯಿಂದ ‘ನವೆಂಬರ್’ ಶಪಥ

    ಬೆಂಗಳೂರು: ದೆಹಲಿಯಲ್ಲಿ ಇಡಿ ಬಲೆಗೆ ಬಿದ್ದಿರುವ ಡಿ.ಕೆ.ಶಿವಕುಮಾರ್ ಅಲ್ಲಿಂದಲೇ ರಾಜಕೀಯ ಶಪಥವೊಂದನ್ನು ಮಾಡಿದ್ದಾರೆ. ತಮ್ಮನ್ನ ನೋಡಲು ಆಸ್ಪತ್ರೆಗೆ ಬಂದಿದ್ದ ರಾಜ್ಯ ಕೈ ನಾಯಕನ ಮುಂದೆ ಗದ್ಗದಿತರಾದ ಡಿಕೆಶಿ ‘ನವೆಂಬರ್’ ಮಾಡಿದ ಶಪಥ ಮಾಡಿದ್ದಾರೆ.

    ಹೌದು. ಎರಡು ದಿನದ ಹಿಂದೆ ದೆಹಲಿಯ ರಾಮ ಮನೋಹರ್ ಲೋಹಿಯ ಆಸ್ಪತ್ರೆಯಲ್ಲಿ ಮಾಜಿ ಡಿಸಿಎಂ ಜಿ ಪರಮೇಶ್ವರ್ ಅವರು ಭೇಟಿ ಮಾಡಿದ್ದ ಸಂದರ್ಭದಲ್ಲಿ ಟ್ರಬಲ್ ಶೂಟರ್ ಈ ಶಪಥ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ತಮ್ಮನ್ನ ಕಂಡು ದುಃಖಿತರಾದ ಪರಮೇಶ್ವರ್ ಗೆ ಡಿಕೆಶಿ ಧೈರ್ಯ ತುಂಬಿದ್ದಾರೆ. ಈ ಸಂಕಷ್ಟ ಜಾಸ್ತಿ ದಿನ ಇರಲ್ಲ. ಕಾನೂನು ಪ್ರಕಾರ ಅವರು ನನ್ನನ್ನ ಏನೂ ಮಾಡಲು ಆಗಲ್ಲ. ನಾನೇನು ತಪ್ಪು ಮಾಡಿಲ್ಲ. ಅಕೌಂಟ್ಸ್ ನಲ್ಲಿ ಸಣ್ಣ ಪುಟ್ಟ ತಪ್ಪಾಗಿದೆ. ಅದನ್ನೇ ಕಾರಣ ಮಾಡಿಕೊಂಡು ರಾಜಕೀಯ ಜಿದ್ದಿಗೆ ಬಿದ್ದಿದ್ದಾರೆ. ಇವರ ಆಟ ತುಂಬಾ ದಿನ ನಡೆಯಲ್ಲ ಶೀಘ್ರವಾಗಿ ಬಂಧನದಿಂದ ಬಿಡುಗಡೆ ಆಗುತ್ತೇನೆ. ನೋಡುತ್ತಾ ಇರಿ ಎಂದಿದ್ದಾರೆ.

    ಹೆಚ್ಚೆಂದರೆ ಈ ಸಂಕಷ್ಟ ನನಗೆ ನವೆಂಬರ್ ವರೆಗೆ ಮಾತ್ರ. ನವೆಂಬರ್ ನಿಂದ ನನ್ನ ಹಾದಿಯೇ ಬೇರೆ ಎಂದು ಡಿಕೆಶಿ ಖಡಕ್ ಆಗಿ ಮಾತನಾಡಿದ್ದಾರೆ. ಮುಂದಿನ ನವೆಂಬರ್ ವರೆಗೆ ನನ್ನ ಸಮಯ ಸರಿ ಇಲ್ಲ. ನವೆಂಬರ್ ನಂತರ ನನ್ನನ್ನು ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ. ಅಲ್ಲದೆ ಮುಂದಿನ 10 ವರ್ಷ ನನ್ನ ಜಾತಕದ ಪ್ರಕಾರ ಒಳ್ಳೆಯ ರಾಜಕೀಯ ಯೋಗ, ಅಧಿಕಾರ ಯೋಗವಿದೆ. 10 ವರ್ಷದಲ್ಲಿ ರಾಜಕೀಯ ಜೀವನದಲ್ಲಿ ನನ್ನ ಕನಸಾದ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಿಯೇ ರಾಜಕೀಯದಿಂದ ನಿರ್ಗಮಿಸುತ್ತೇನೆ ಎಂದು ಡಿಕೆಶಿ ಅವರು ಪರಮೇಶ್ವರ್ ಅವರ ಬಳಿ ಹೇಳಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಸಂಕಷ್ಟದ ಈ ಸಂದರ್ಭದಲ್ಲೂ ಡಿಕೆಶಿಯ ಆತ್ಮ ವಿಶ್ವಾಸದ ಈ ಶಪಥವನ್ನ ಕಂಡು ಸ್ವತಃ ಪರಮೇಶ್ವರ್ ಅಚ್ಚರಿಗೊಂಡಿದ್ದಾರೆ. ನವೆಂಬರ್ ಒಳಗೆ ಡಿಕೆಶಿ ಈ ಎಲ್ಲಾ ಸಂಕಷ್ಟದಿಂದ ಪಾರಾಗಿ ತಮ್ಮ ಮಾತಿನಂತೆ ರಾಜಕೀಯ ಪುನರ್ಜನ್ಮ ಪಡೆಯುತ್ತಾರೆಯಾ, ರಾಜ್ಯ ಆಳುವ ಕನಸು ನನಸಾಗುತ್ತಾ ಎಂಬುದೇ ಸದ್ಯದ ಕುತೂಹಲವಾಗಿದೆ.