Tag: Ex CM HD Kumaraswamy

  • ಮಿಣಿ ಮಿಣಿ ಪದ ಟ್ರೋಲ್, ಕನ್ನಡ- ಗ್ರಾಮೀಣ ಕರ್ನಾಟಕಕ್ಕೆ ಅಪಮಾನ: ಹೆಚ್‍ಡಿಕೆ

    ಮಿಣಿ ಮಿಣಿ ಪದ ಟ್ರೋಲ್, ಕನ್ನಡ- ಗ್ರಾಮೀಣ ಕರ್ನಾಟಕಕ್ಕೆ ಅಪಮಾನ: ಹೆಚ್‍ಡಿಕೆ

    -ಆದಿತ್ಯ ‘ರಾವ್’ ಉಗ್ರನ ಬೆನ್ನಿಗೆ ಬಿಜೆಪಿ ನಿಂತಿದೆ

    ಬೆಂಗಳೂರು: ಹೊಳೆಯುವ ಪದಾರ್ಥಕ್ಕೆ ಗ್ರಾಮೀಣ ಭಾಗದಲ್ಲಿ ಮಿಣಿ ಮಿಣಿ ಎಂಬ ಪದ ಬಳಕೆ ಮಾಡಲಾಗುತ್ತದೆ. ಆ ಪದವನ್ನು ಟ್ರೋಲ್ ಮಾಡುವ ಮೂಲಕ ಕನ್ನಡ ಮತ್ತು ಗ್ರಾಮೀಣ ಕರ್ನಾಟಕಕ್ಕೆ ಅಪಮಾನ ಮಾಡಿದಂತೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ.

    ದೇಶದಲ್ಲಿ ಇಂದು ನಡೆಯುತ್ತಿರುವುದು ಕುಟಿಲ ರಾಜಕಾರಣ. ಅದರ ಭಾಗವೇ ಕೊಂಕು, ಟ್ರೋಲ್ ಗಳು. ಒಬ್ಬ ನಾಯಕನ ವಿರುದ್ಧ ಎದುರು ನಿಂತು ಹೋರಾಡಲಾಗದ ಹೇಡಿಗಳು ಗೇಲಿ, ಅಪಹಾಸ್ಯದ ತಂತ್ರದ ಮೂಲಕ ನಾಯಕನ ಹನನಕ್ಕೆ ನಿಲ್ಲುತ್ತಾರೆ. ಮಿಣಿ ಮಿಣಿ ಎಂಬ ಶಬ್ಧ ಇಟ್ಟುಕೊಂಡು ಬಿಜೆಪಿ ಮಾಡುತ್ತಿರುವುದು ಅದೇ ಹೇಡಿಗಳ ಕೆಲಸ.

    ನಾನು ಹಿಂದೆಯೇ ಹೇಳಿದಂತೆ, ಪಾಕಿಸ್ತಾನ, ನಾಜಿ ಜೀನ್ ಹೊಂದಿರುವ ಬಿಜೆಪಿಗೆ ಕನ್ನಡದ ಮೂಲ ನಿವಾಸಿ ಸಮುದಾಯದ ನಾಯಕರನ್ನು ಕಂಡರೆ ಉರಿ. ಅದಕ್ಕೇ ಈ ಮಣ್ಣಿನ ಮೂಲ ನಿವಾಸಿ ಸಮುದಾಯದ ಪ್ರತಿನಿಧಿಯಾದ ನನ್ನನ್ನು ಹಣಿಯಲು ಪ್ರಯತ್ನಿಸುತ್ತಿದೆ. ಎದುರಲ್ಲಿ ನಿಂತು ಹೋರಾಡಲಾಗದೇ ಗೇಲಿ ಮೂಲಕ ಹಣಿಯಲು ನಿಂತಿದೆ ಬಿಜೆಪಿ. ಇದನ್ನೂ ಓದಿ: ಮಿಣಿ ಮಿಣಿ ಪೌಡರ್ ಹೇಳಿಕೆ ವೈರಲ್- ಹೆಚ್‍ಡಿಕೆ ಮೊದಲ ಪ್ರತಿಕ್ರಿಯೆ

    ನಾನು ಸುಳ್ಳಾಡಿಲ್ಲ, ನಿಂದನಾತ್ಮಕ ಪದ ಬಳಸಿಲ್ಲ. ಪತ್ರಿಕೆಯೊಂದರ ವರದಿ ಓದಿ ಸತ್ಯ ಮಾತಾಡಿದ್ದೇನೆ. ಆದಿತ್ಯ ‘ರಾವ್’ ಎಂಬ ಉಗ್ರನ ರಕ್ಷಣೆಗೆ ನಿಂತಿರುವ ಬಿಜೆಪಿ ನನ್ನ ಸತ್ಯದ ಮಾತನ್ನೇ ಗೇಲಿ ಮಾಡುತ್ತಿದೆ. ಬಿಜೆಪಿ ಸತ್ಯ, ಧರ್ಮಗಳ ವಿರೋಧಿ. ಗ್ರಾಮೀಣ ಕನ್ನಡದಲ್ಲಿ ಹೊಳೆಯುವ ಪದಾರ್ಥಕ್ಕೆ ಮಿಣಿಮಿಣಿ ಎನ್ನಲಾಗುತ್ತದೆ. ಅದು ಶುದ್ಧ ಕನ್ನಡ, ಗ್ರಾಮೀಣ ಪದ. ಅದನ್ನೇ ಅಪಮಾನಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದರೆ ಅದು ಕನ್ನಡಕ್ಕೆ, ಗ್ರಾಮೀಣ ಕರ್ನಾಟಕಕ್ಕೆ ಮಾಡಿದ ಅಪಮಾನ. ಎಷ್ಟೇ ಆಗಲಿ ಬಿಜೆಪಿಗರ ಜೀನ್ ಪಾಕಿಸ್ತಾನದ್ದಲ್ಲವೇ. ಅದಕ್ಕೇ ಅವರಿಗೆ ಕನ್ನಡದ ಪದಗಳು ತಾತ್ಸಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮಂಗ್ಳೂರು ಕಮಿಷನರ್ ಇವತ್ತು ಎಲ್ಲಾದ್ರೂ ಬಾಂಬ್ ಹಾಕ್ಸಿದ್ರಾ?- ಎಚ್‍ಡಿಕೆ ವಿವಾದಾತ್ಮಕ ಹೇಳಿಕೆ

    ಮಂಗ್ಳೂರು ಕಮಿಷನರ್ ಇವತ್ತು ಎಲ್ಲಾದ್ರೂ ಬಾಂಬ್ ಹಾಕ್ಸಿದ್ರಾ?- ಎಚ್‍ಡಿಕೆ ವಿವಾದಾತ್ಮಕ ಹೇಳಿಕೆ

    ಚಿಕ್ಕಮಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಮಂಗಳೂರು ಕಮಿಷನರ್ ಇವತ್ತು ಎಲ್ಲಾದ್ರೂ ಬಾಂಬ್ ಹಾಕ್ಸಿದ್ರಾ ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ.

    ಜಿಲ್ಲೆಯ ಶೃಂಗೇರಿಗೆ ನಿನ್ನೆಯೇ ಭೇಟಿ ನೀಡಿದ್ದ ಎಚ್‍ಡಿ ಕುಮಾರಸ್ವಾಮಿ ಅವರ ಕುಟುಂಬದಿಂದ ನಡೆಯುತ್ತಿದ್ದ ವಿಶೇಷ ಯಾಗದಲ್ಲಿ ಭಾಗಿಯಾಗಿ ಬಳಿಕ ಮಂಗಳೂರಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರಶ್ನೆ ಮಾಡಿದ ಎಚ್‍ಡಿಕೆ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಸಲಾಗುತ್ತಿದೆ. ನಾನು ಕೂಡ 14 ತಿಂಗಳು ಸಿಎಂ ಆಗಿದ್ದ ಸಂದರ್ಭದಲ್ಲಿ ಮಂಗಳೂರಿನಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ. ಆದರೆ ಬಿಜೆಪಿ ಸರ್ಕಾರ ಬಂದ ಕೂಡಲೇ ಮಂಗಳೂರಿನಲ್ಲೇ ಇಂತಹ ಘಟನೆ ನಡೆಯುತ್ತಿರುವುದು ಅನುಮಾನ ಮೂಡಿದೆ ಎಂದರು.

    ಮಾಧ್ಯಮಗಳು ಪ್ರಶ್ನೆ ಕೇಳುವ ಮೊದಲೇ ಮಾಧ್ಯಮಗಳನ್ನೇ ಪ್ರಶ್ನೆ ಮಾಡಿದ ಎಚ್‍ಡಿ ಕುಮಾರಸ್ವಾಮಿ ಅವರು, ಇವತ್ತು ಎಲ್ಲಾದ್ರೂ ಬಾಂಬ್ ಹಾಕ್ಸಿದ್ರಾ? ಮಂಗಳೂರು ಪೊಲೀಸ್ ಆಯುಕ್ತ ಹರ್ಷ ಹಾಕ್ಸಿದ್ರಾ? ಎಂದು ಅಕ್ಕ ಪಕ್ಕ ನಿಂತಿದ್ದ ಬೆಂಬಲಿಗರೊಂದಿಗೆ ಕೇಳಿ ನಕ್ಕರು.

    ಮಾಜಿ ಸಿಎಂ ಎಚ್‍ಡಿಕೆ ಅವರ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿ ನಾಯಕ ಗೋ.ಮಧುಸೂದನ್ ಅವರು, ಈ ವ್ಯಕ್ತಿಗೆ ದುರಹಂಕಾರ ಜಾಸ್ತಿ ಆಗಿದೆ. ಮಾಜಿ ಮುಖ್ಯಮಂತ್ರಿಯಾಗಿ ಒಬ್ಬ ಐಪಿಎಸ್ ಅಧಿಕಾರಿ ಬಗ್ಗೆ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಎಚ್‍ಡಿಕೆ ಅವರು ಮೈನಿಂಗ್ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ ಅವರು ಇಂತಹದ್ದೇ ಭಾಷೆಯಲ್ಲಿ ಮಾತನಾಡಿದರೇ ಏನಾಗುತ್ತೆ? ಕುಮಾರಸ್ವಾಮಿ ಅವರನ್ನು 420 ಕುಮಾರಸ್ವಾಮಿ ಎಂದು ಕರೆಯಬಹುದು ಅಲ್ವಾ ಎಂದು ಕಿಡಿಕಾರಿದರು.

  • ಐಶ್ವರ್ಯಗೆ ಸಮನ್ಸ್ ನೀಡಿರುವ ಹಿಂದೆ ಕೇಂದ್ರದ ಅಧಿಕಾರಿಗಳಿದ್ದಾರೋ, ಬೇರೆಯವರಿದ್ದಾರೋ ಗೊತ್ತಿಲ್ಲ: ಎಚ್ಡಿಕೆ

    ಐಶ್ವರ್ಯಗೆ ಸಮನ್ಸ್ ನೀಡಿರುವ ಹಿಂದೆ ಕೇಂದ್ರದ ಅಧಿಕಾರಿಗಳಿದ್ದಾರೋ, ಬೇರೆಯವರಿದ್ದಾರೋ ಗೊತ್ತಿಲ್ಲ: ಎಚ್ಡಿಕೆ

    ರಾಮನಗರ: ಇಡಿ ಕಸ್ಟಡಿಯಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಗೆ ಇಡಿ ಸಮನ್ಸ್ ನೀಡಿರುವ ವಿಚಾರದಲ್ಲಿ ಇಷ್ಟೊಂದು ತರಾತುರಿ ಅಗತ್ಯ ಇರಲಿಲ್ಲ. ಹಲವರು ದೊಡ್ಡ ಮಟ್ಟದಲ್ಲಿ ಕಾನೂನುಬಾಹಿರ ಚಟುವಟಿಕೆ ಮಾಡಿರುವ ಬಗ್ಗೆ ಗಮನವಿಲ್ಲ. ಆದರೆ ಇದ್ಯಾವುದೋ ಕೇಸ್ ಇಟ್ಕೊಂಡು ಅವರ ಕುಟುಂಬದ ವಿರುದ್ಧ ಹೊರಟ್ಟಿದ್ದಾರೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

    ಇಂದು ಚನ್ನಪಟ್ಟಣದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡುದ ಎಚ್‍ಡಿಕೆ ಅವರು, ಡಿಕೆಶಿ ಪುತ್ರಿಗೆ ಸಮನ್ಸ್ ನೀಡಿದ್ದರಲ್ಲಿ ಕೇಂದ್ರದ ಅಧಿಕಾರಿಗಳಿದ್ದಾರೋ, ಬೇರೆಯವರಿದ್ದಾರೋ ಗೊತ್ತಿಲ್ಲ ಎಂದರು.

    ಇದೇ ವೇಳೆ ರಾಜ್ಯದಲ್ಲಿ ನೂತನವಾಗಿ ಜಾರಿಯಾಗಿರುವ ಮೋಟಾರ್ ವಾಹನ ಕಾಯ್ದೆ ಅನ್ವಯ ಜನಸಾಮಾನ್ಯರಿಗೆ ಅನುಕೂಲವಾಗುವ ತೀರ್ಮಾನವನ್ನು ಮಾಡಬೇಕು. ಈಗ ನನ್ನ ಕೈಯಲ್ಲಿ ಅಧಿಕಾರವಿಲ್ಲ, ಅಧಿಕಾರದಲ್ಲಿ ಇರುವವರು ಏನು ಮಾಡುತ್ತಾರೆ ನೋಡೋಣ. ಬಿಜೆಪಿಯಲ್ಲಿರುವವರಿಗೆ ಗೊತ್ತು ಗುರಿಯಿಲ್ಲ. ಅವರು ಅಧಿಕಾರ ಮಾಡುತ್ತಿರುವ ವಿಧಾನ ನಿಮಗೆ ಗೊತ್ತಿದೆ. ನಾನು ಈ ಬಗ್ಗೆ ಚರ್ಚೆ ಮಾಡಲ್ಲ, ಜನರಿಗೆ ಈ ಸರ್ಕಾರದ ಪೆಟ್ಟು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ ಎಂದರು.

    ಸಿಪಿವೈಗೆ ಪರೋಕ್ಷ ಟಾಂಗ್ : ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡುತ್ತಾ ಕೆಲವರು ಈಗ ಹಣದ ವಸೂಲಿ ದಂಧೆಗೆ ಇಳಿದಿದ್ದಾರೆ. ಯಾವುದೇ ಕಾರಣಕ್ಕೂ ಅಧಿಕಾರಿಗಳು ಅಂತಹವರಿಗೆ ಮಣೆ ಹಾಕಬೇಡಿ ನನಗೆ ಗೊತ್ತಿದೆ. ಈ ಸರ್ಕಾರದ ಆಯಸ್ಸು ಕೆಲವೇ ತಿಂಗಳು ಮಾತ್ರ. ನಿಮ್ಮ ಜೊತೆಗೆ ನಾನಿದ್ದೇನೆ ಎಂದು ಅಧಿಕಾರಿಗಳಿಗೆ ಹೇಳುವ ಮೂಲಕ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‍ಗೆ ಪರೋಕ್ಷವಾಗಿ ಟಾಂಗ್ ನೀಡಿದರು.

    ಪೊಲೀಸ್ ಇಲಾಖೆ ತಮ್ಮ ವ್ಯಾಪ್ತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಿ. ಅಕ್ರಮ ಮರಳು ಸಾಗಾಣಿಕೆಗೆ ನಾನೆಂದೂ ಪ್ರೋತ್ಸಾಹ ನೀಡಿಲ್ಲ. ಪೊಲೀಸ್ ಇಲಾಖೆಯನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡಿಲ್ಲ. ನಾನು ಜವಾನನಿಂದ ಹಿಡಿದು ಎಲ್ಲರನ್ನೂ ಬಹುವಚನದಿಂದಲೇ ಮಾತನಾಡಿದ್ದೇನೆ. ಅಧಿಕಾರ ಶಾಶ್ವತ ಅಲ್ಲ, ನಾನು ದಬ್ಬಾಳಿಕೆ ನಡೆಸುವುದಿಲ್ಲ. ಕ್ಷೇತ್ರದ ಜನತೆ ಕೆಲಸ ಕಾರ್ಯಗಳಿಗೆ ಯಾವುದೇ ಅಧಿಕಾರಿ ತೊಂದರೆ ಮಾಡಬೇಡಿ ಎಂದು ಎಚ್ಚರಿಸಿದರು.

    ಇದಕ್ಕೂ ಮುನ್ನ ಮಳೂರು ಸಮೀಪದ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಭಾಗಿಯಾಗಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿದರು. ಆ ಬಳಿಕ ಮಾತನಾಡಿ, ಋಣ ಮುಕ್ತ ಕಾಯ್ದೆ ವಿಚಾರದಲ್ಲಿ ಇಂದಿನ ಸರ್ಕಾರ ಕ್ರಮ ಕೈಗೊಳ್ಳಬೇಕು. ಕಾಯ್ದೆ ಜಾರಿಯ ಬಗ್ಗೆ ಜವಾಬ್ದಾರಿಯೂ ಕೂಡ ಇದೆ. ನಾನು ಋಣ ಮುಕ್ತ ಖಾಯ್ದೆ ಜಾರಿಗೆ ತಂದಿದ್ದು, ಯಾರು ಖಾಸಗಿ ವ್ಯಕ್ತಿಗಳಿಂದ ಹಣವನ್ನು ಬಡ್ಡಿಗೆ ಸಾಲ ಪಡೆದು, ಅಸಲಿಗಿಂತ ಬಡ್ಡಿಯನ್ನ ಜಾಸ್ತಿ ಕಟ್ಟಿರುವ ಪ್ರಕರಣಗಳು ನನ್ನ ಗಮನಕ್ಕೆ ಬಂದ ಕಾರಣದಿಂದ ಯೋಜನೆ ಜಾರಿ ಮಾಡಿದೆ. ಬಡವರು ಸಮಸ್ಯೆಯಿಂದ ಬಳಲಬಾರದು ಎಂಬುವುದು ನನ್ನ ಯೋಜನೆಯನ್ನು ಜಾರಿಗೆ ತಂದಿದ್ದೆ ಎಂದು ತಿಳಿಸಿದರು.

  • ಬಡವರ ಪರವಿದ್ರೆ ಋಣಮುಕ್ತ ಕಾಯ್ದೆಯನ್ನ ಅನುಷ್ಠಾನಕ್ಕೆ ತರಲಿ – ಸಿಎಂಗೆ ಎಚ್‍ಡಿಕೆ ಸವಾಲು

    ಬಡವರ ಪರವಿದ್ರೆ ಋಣಮುಕ್ತ ಕಾಯ್ದೆಯನ್ನ ಅನುಷ್ಠಾನಕ್ಕೆ ತರಲಿ – ಸಿಎಂಗೆ ಎಚ್‍ಡಿಕೆ ಸವಾಲು

    ರಾಮನಗರ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬಡವರ ಪರವಿದ್ದರೆ ಋಣಮುಕ್ತ ಕಾಯ್ದೆಯನ್ನ ಅನುಷ್ಠಾನಕ್ಕೆ ತರಲಿ. ಬಡವರ ಪರವಾಗಿ ಆ ಪುಣ್ಯಾತ್ಮ ಕಾಯ್ದೆಯನ್ನ ಜಾರಿ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಯಾಕಂದರೆ ಹಣವಂತರು, ಬಡ್ಡಿಕೋರರು, ಚುನಾವಣೆಗೆ ಹಣ ನೀಡುವವರೇ ಅವರ ಬಳಿ ಇದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರು ಆರೋಪ ಮಾಡಿದ್ದಾರೆ.

    ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ಮಾತನಾಡಿದ ಅವರು, ಕೆಆರ್‍ಎಸ್‍ನಲ್ಲಿ ಸದ್ಯಕ್ಕೆ 7.5 ಟಿಎಂಸಿ ನೀರಿದ್ದು, ರಾಮನಗರ ಜಿಲ್ಲೆಗೆ ಶಾಶ್ವತ ಏತ ನೀರಾವರಿ ಮೂಲಕ ಕೆರೆ ಜಲಾಶಯಗಳನ್ನು ತುಂಬಿಸುವ ಸಲುವಾಗಿ ಸತ್ತೆಗಾಲದಿಂದ ಇಗ್ಗಲೂರು ಜಲಾಶಯಕ್ಕೆ ನೀರು ಹರಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿ ನಡೆಯುತ್ತಿದ್ದು, ಅದಕ್ಕೂ ಕೊಕ್ಕೆ ಹಾಕಲು ಈಗಿನ ಸರ್ಕಾರ ಹೊರಟಿದ್ದು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.

    ಇದೇ ಸಂದರ್ಭದಲ್ಲಿ ಅನರ್ಹ ಶಾಸಕರು ಮತ್ತು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಡವರಿಗಾಗಿ ಲೇವಾದೇವಿಗಾರರಿಂದ ಮುಕ್ತಗೊಳಿಸಲು ಋಣಮುಕ್ತ ಕಾಯ್ದೆ ಜಾರಿಗೊಳಿಸಲಾಗಿದೆ. ಈ ಕಾಯ್ದೆಯ ಅನುಷ್ಠಾನ ಇದೀಗ ಬಿಜೆಪಿ ಸರ್ಕಾರದ ಮೇಲಿದ್ದು, ಬಿಎಸ್‍ವೈ ಅವರು ಬಡವರ ಪರವಿದ್ದರೆ ಈ ಕಾಯ್ದೆಯನ್ನ ಜಾರಿಗೊಳಿಸಲಿ ಎಂದು ಸವಾಲೆಸೆದರು.

    ನನ್ನ ವಿರುದ್ಧ ಆರೋಪ ಮಾಡುವ ಕೆಲವರು ಶಾಂಗ್ರೀಲಾ ಹೋಟೆಲ್ ನಲ್ಲಿ ಬಿಲ್ಡರ್ ಗಳ ಸಭೆ ನಡೆಸುತ್ತಾರೆ. ಆದರೆ ನಾನು ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಕ್ಕೆ ಟೀಕಿಸುತ್ತಾರೆ. ನಾನು ಲೇಔಟ್ ಮಾಡಿ ಹಲವಾರು ಬಡವರ ಕುಟುಂಬಗಳನ್ನು ಬೀದಿ ಪಾಲು ಮಾಡಿ ರಾಜಕೀಯಕ್ಕೆ ಬಂದಿಲ್ಲ. ಬಡ್ಡಿ ವ್ಯಾಪಾರ ಮಾಡಿ ಇಸ್ಪೀಟ್ ಆಡುತ್ತಿದ್ದವರನ್ನು ಬಳಸಿಕೊಂಡು ನನ್ನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದಾರೆ. ಅದಕ್ಕೆಲ್ಲ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.

    ಬಡವರಿಗಾಗಿ ನಾನು ರಾಜಕೀಯದಲ್ಲಿ ಇದ್ದೇನೆ. ಇಲ್ಲದಿದ್ದರೆ ರಾಜಕೀಯ ನಿವೃತ್ತಿ ಘೋಷಿಸುತ್ತಿದ್ದೆ. ಅಲ್ಲದೆ ನಂಬಿಕೆ ಇಟ್ಟವರೇ ಮೋಸ ಮಾಡಿದರು ಎಂದು ಪರೋಪಕ್ಷವಾಗಿ ಅನರ್ಹ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು.