Tag: ex-change

  • ಬೆಂಗ್ಳೂರಿನಲ್ಲಿ 500, 1 ಸಾವಿರ ಮುಖಬೆಲೆಯ 1 ಕೋಟಿ ಹಣ ವಶ

    ಬೆಂಗ್ಳೂರಿನಲ್ಲಿ 500, 1 ಸಾವಿರ ಮುಖಬೆಲೆಯ 1 ಕೋಟಿ ಹಣ ವಶ

    ಬೆಂಗಳೂರು: 500 ರೂ. ಮತ್ತು 100 ಮುಖಬೆಲೆ ಹಳೆ ನೋಟು ಬ್ಯಾನ್ ಆಗಿ ಎರಡು ವರ್ಷ ಕಳೆದರೂ ಸಿಲಿಕಾನ್ ಸಿಟಿಯಲ್ಲಿ ಬ್ಲಾಕ್ ಅಂಡ್ ವೈಟ್ ದಂಧೆ ಇನ್ನೂ ನಿಂತಿಲ್ಲ.

    ನಗರದಲ್ಲಿ ಹಳೆಯ ನೋಟುಗಳನ್ನು ಹೊಸ ನೋಟುಗಳಾಗಿ ಪರಿವರ್ತನೆ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಸದಾಶಿವನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅವರ ಬಳಿಕ ಇದ್ದ ಬರೋಬ್ಬರಿ ಒಂದು ಕೋಟಿ ರೂ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಒಂದು ಕೋಟಿ ಪೂರ್ತಿ ಹಳೆಯ 500 ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳಾಗಿವೆ. ಆರೋಪಿಗಳು ಮತ್ತೆ ಅದೇ ನೋಟುಗಳ ಚಲಾವಣೆಗೆ ಬರುತ್ತೆ ಎಂದು ಜನರಿಗೆ ವಂಚನೆ ಮಾಡುತ್ತಿದ್ದರು.

    ವಂಚನೆ ಹೇಗೆ?
    ಆರೋಪಿಗಳ ಗ್ಯಾಂಗ್ ಮತ್ತೆ 500 ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳು ಚಲಾವಣೆಗೆ ಬರುತ್ತವೆ ಎಂದು ಮೊದಲು ಹೇಳಿ ಸಾರ್ವಜನಿಕರನ್ನು ನಂಬಿಸುತ್ತಿದ್ದರು. ನೀವು ನಮಗೆ 25 ಲಕ್ಷ ರೂ. ಹಣವನ್ನು ಕೊಡಿ. ನಾವು ನಿಮಗೆ 1 ಕೋಟಿ ಹಳೆಯ ನೋಟನ್ನು ಕೊಡುತ್ತೇವೆ. ಮುಂದಿನ ಸರ್ಕಾರದಲ್ಲಿ ಹಳೆಯ ನೋಟು ಚಲಾವಣೆಗೆ ಬಂದಾಗ ನಿಮಗೆ 75 ಲಕ್ಷ ರೂ. ಲಾಭವಾಗುತ್ತದೆ ಎಂದು ಹೇಳುವ ಮೂಲಕ ತಮ್ಮ ಬಳಿ ಇದ್ದ ಹಳೆಯ ನೋಟನ್ನು ಬದಲಾವಣೆ ಮಾಡಲು ಮುಂದಾಗಿದ್ದರು.

    ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಇಂದು ವಿನೋದ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಹಣ ಎಲ್ಲಿಂದ ಬಂದಿದ್ದು, ಯಾರಿಗಾಗಿ ಹಳೆ ನೋಟು ಬದಲಾವಣೆ ಮಾಡುತ್ತಿದ್ದೀರ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.